ನನ್ನ ಪುಟಗಳು

13 ಸೆಪ್ಟೆಂಬರ್ 2019

ಓ ಹೆಣ್ಣೆ


ಹೆಣ್ಣೆ    ಹೆಣ್ಣೆ  ನೀನೇಕೆ  ಈ ರೀತಿ ಸೊನ್ನೆ
ನೀನಾದೇ ಸಂಸಾರದ ಕಣ್ಣೇ
ಆದರೂ ನಿನಗೇಕಿಲ್ಲ ಮನ್ನಣೆ.

ನೀ ಹುಟ್ಟಿದ್ದೆ ಒಂದು ಪುಣ್ಯೇ
ನೀ ಬೆಳದಿದ್ದು ಹೆದರಿಕೆಯಲ್ಲಿಲ್ಲವೇನೆ.?
ನೀ ಬೆಳೆಯುತ್ತಿದ್ದಂತೆ
ಸಮಾಜದ ವಕ್ರ್ ದೃಷ್ಠಿಗೆ ಗುರಿಯಾಗಲಿಲ್ಲವೇನೆ.?

ನಿನಗೇಕಿಲ್ಲ ಸ್ವಾತಂತ್ರ್ಯದ  ಬಾಳು
ನಿನ್ನ ಜೀವನ ಬರಿ ಗೋಳು
ಸಂಸಾರದ ಹಾದಿಯಲ್ಲೇ ನಡೆದೆ ನೀನು
ಕಳೆದೆ ಇದರಲ್ಲಿಯೇ ಜೀವನದ ಅರ್ಧ ಪಾಲು.

ಸಮಾಜದ ಸಂಪ್ರದಾಯಗಳಿಗೆ ಬಲಿಯಾಗಿ ನೀನು
ಬೆಂದು ಬಸವಳಿಯುತ್ತಿರುವೆಯಲ್ಲ ಹಗಲಿರುಳು
ಕೊನೆಗೆ ಬರುವದು ನಿನಗೆ ಮುಪ್ಪು
ನೀನಾಗುವೆ ಆಗ ವೃದ್ಧಾಶ್ರಮದ ತೊತ್ತು..
                     
- ಮುಸ್ತಾಕಅಹ್ಮದ. ಬಸರೀಕಟ್ಟಿ
Mob No:- 9008978684

******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ