ನನ್ನ ಪುಟಗಳು

13 ಸೆಪ್ಟೆಂಬರ್ 2019

*🙏* ಅಕ್ಕರೆಯ ತಾಯಿ ಆದವಳು *🙏*


ಜನ್ಮವ ನೀಡಿದವಳು
ನಾಮವನ್ನು ಇಟ್ಟವಳು
ಲಾಲನೆ ಪಾಲನೆ ಮಾಡಿದವಳು
ಅಕ್ಕರೆಯ ತಾಯಿ ಆದವಳು

ಕಷ್ಟವ ನುಂಗಿದವಳು
ಇಷ್ಟವ ತೊರೆದವಳು
ಕಂದನಿಗಾಗಿ ಬದುಕಿದವಳು
ಅಕ್ಕರೆಯ ತಾಯಿ ಆದವಳು

ಮನೋಮನ ಶುದ್ಧಇದ್ದವಳು
ಮನೋರಥ ಬಯಸದವಳು
ಮಧುರಸ ಮನಸ್ಸುಳ್ಳವಳು
ಅಕ್ಕರೆಯ ತಾಯಿ ಆದವಳು

ಅಧ್ವಾನ ದೂರ ಮಾಡುವವಳು
ಭೂವಿಗೆ ಅಧಿಷ್ಠೀತವಾದವಳು
ತ್ರಿಮೂರ್ತಿಗೆ ಸಮನಾದವಳು
ಅಕ್ಕರೆಯ ತಾಯಿ ಆದವಳು

ಸ್ತನಪಾನ ಕುಡಿಸಿದವಳು
ತೊಟ್ಟಿಲು ತೂಗಿದವಳು
ಮಮತೆಯ ಮೂರ್ತಿವಳು
ಅಕ್ಕರೆಯ ತಾಯಿ ಆದವಳು
        -  ವೈ ಎಸ್ ನಾಯಕ ಮಂಗಿಹಾಳ
        ಸಾ//ಮಂಗಿಹಾಳ ತಾ//ಸುರಪುರ  ಜೀ//ಯಾದಗಿರಿ

*********


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ