ನನ್ನ ಪುಟಗಳು

ತಂತ್ರಾಂಶಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತಂತ್ರಾಂಶಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

23 ಮೇ 2024

SSLC_result_analysis_Software

 ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ವಿಶ್ಲೇಷಣೆ ತಂತ್ರಾಂಶ 
(Version: 20250508)
[ಎಷ್ಟು ಅಂಕಗಳಿಗೆ ಬೇಕಾದರೂ ಇದೇ ತಂತ್ರಾಂಶದಲ್ಲಿ ವಿಶ್ಲೇಷಣೆ ಮಾಡಬಹುದು.
ಈ ಒಂದೇ ತಂತ್ರಾಂಶದಲ್ಲಿ 750 ವಿದ್ಯಾರ್ಥಿಗಳು, 4 ಮಾಧ್ಯಮಗಳು (ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು) ಹಾಗೂ 10 ವಿಭಾಗಗಳ (A - J) ಮಾಹಿತಿ ವಿಶ್ಲೇಷಣೆ ಮಾಡಬಹುದು.]
ಕೊನೆಯದಾಗಿ ನವೀಕರಿಸಿದ ದಿನಾಂಕ : 08-05-2025
ಈ ಕೆಳಗಿನ ವೀಡಿಯೋದಲ್ಲಿ ಈ ತಂತ್ರಾಂಶವನ್ನು ಬಳಸುವ ಕ್ರಮವನ್ನು ನೋಡಿರಿ.
**************
ಈ ಕೆಳಗಿನ ಸೂಚನೆಗಳನ್ನು ಓದಿ
HOME / ಮುಖಪುಟದಲ್ಲಿ ಈ ಕೆಳಗಿನ ಮಾಹಿತಿ ನಮೂದಿಸಿ.
* ಶಾಲೆಯ ಹೆಸರು &  ಮುಖ್ಯಶಿಕ್ಷಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಪರೀಕ್ಷೆಯ ವರ್ಷ &  ಭಾಷಾ ವಿಷಯಗಳನ್ನು ನಮೂದಿಸಿ.
* ಆಂತರಿಕ ಅಂಕ ಇದೆಯೇ? (YES ಅಥವಾ NO ನಮೂದಿಸಿ) (ಖಾಲಿ ಬಿಡಬಾರದು)
* ಕಡ್ಡಾಯವಾಗಿ ಪ್ರತಿ ವಿಷಯದ ಗರಿಷ್ಠ ಅಂಕ ನಮೂದಿಸಿ.
HOME / ಮುಖಪುಟದಲ್ಲಿ ಈ ಕೆಳಗಿನ ಬಟನ್ ಕ್ಲಿಕ್ ಮಾಡಿ ಮಾಹಿತಿ ನಮೂದಿಸಿ.
1. ವಿದ್ಯಾರ್ಥಿಗಳ ಹೆಸರು ಹಾಗೂ ಲಿಂಗ & ಜಾತಿ ಸಂಕೇತಗಳನ್ನು ನಮೂದಿಸಿ.
(ಮುಖಪುಟದಲ್ಲಿರುವ "ವಿದ್ಯಾರ್ಥಿಗಳ ಹೆಸರು/ಲಿಂಗ/ಜಾತಿ ನಮೂದಿಸಲು ಇಲ್ಲಿ ಕ್ಲಿಕ್‌ಮಾಡಿ" ಎಂಬ ಬಟನ್ ಮೂಲಕ)
       ಸೂಚನೆ : ಇನ್ನು ಯಾವುದೇ ಪುಟದಲ್ಲಿ ವಿದ್ಯಾರ್ಥಿಗಳ ಮಾಹಿತಿ ನಮೂದಿಸಲು ಅವಕಾಶವಿಲ್ಲ)
2. ಎಲ್ಲಾ ವಿಷಯಗಳ ಲಿಖಿತ ಮತ್ತು ಆಂತರಿಕ ಅಂಕಗಳನ್ನು ನಮೂದಿಸಿ.
(ಮುಖಪುಟದಲ್ಲಿರುವ "ಪ್ರತಿ ವಿಷಯದ ಅಂಕಗಳನ್ನು ನಮೂದಿಸಿ/ತಿದ್ದುಪಡಿಮಾಡಿ" ಎಂಬ ಬಟನ್ ಮೂಲಕ)
    ಸೂಚನೆ:  ಅಂಕಗಳಲ್ಲಿ ಯಾವುದೇ ತಿದ್ದುಪಡಿ ಮಾಡಲು ಅದೇ ಬಟನ್ ಬಳಸಿ . ಅಲ್ಲಿ ನಮೂದಿಸಿದ ಅಂಕಗಳು ಸ್ವಯಂಚಾಲಿತವಾಗಿ ವಿಶ್ಲೇಷಣೆಗೆ ಬಳಕೆಯಾಗುತ್ತವೆ.(ಇನ್ನೆಲ್ಲೂ ಅಂಕಗಳನ್ನು ನಮೂದಿಸಲು ಅಥವಾ ತಿದ್ದುಪಡಿಮಾಡಲು ಅವಕಾಶವಿರುವುದಿಲ್ಲ)
3. ನಿಮಗೆ ಬೇಕಾದ ಮಾಧ್ಯಮ ಮತ್ತು ವಿಭಾಗದ ಮಾಹಿತಿ ನಮೂದು. (ಮೇಲಿನ ಎರಡು ಹಂತದ ಮಾಹಿತಿಗಳನ್ನು ನಮೂದಿಸಿದ ನಂತರ)
           ಮುಖಪುಟದಲ್ಲಿರುವ "(Print/Output Section)" ನಲ್ಲಿ  ನಿಮಗೆ ಬೇಕಾದ ಮಾಧ್ಯಮ ಮತ್ತು ವಿಭಾಗದ Code ನಮೂದಿಸಿದಾಗ ವಿಭಾಗ  ಹಾಗೂ ಮಾಧ್ಯಮದ ಮಾಹಿತಿ ಸಿದ್ಧವಾಗುತ್ತದೆ.
        ಸೂಚನೆ:  ಬೇರೆ ವಿಭಾಗ ಹಾಗೂ ಮಾಧ್ಯಮದ ಮಾಹಿತಿಯನ್ನು ಪಡೆಯಬೇಕಾದಲ್ಲಿ HOME ನಲ್ಲಿ Code ಬದಲಾಯಿಸಿ ಪಡೆಯಿರಿ.
ಇತರೆ ಸೂಚನೆಗಳು
* ಯಾವುದೇ ವಿಷಯದ ಪುಟದಿಂದ ಮುಖಪುಟಕ್ಕೆ ಹಿಂದಿರುಗಲು HOME, ವಿಷಯದ ಪುಟಕ್ಕೆ ಹಿಂದಿರುಗಲು BACK ಬಟನ್ ಕ್ಲಿಕ್‌ಮಾಡಿ.
* ಈ ತಂತ್ರಾಂಶವನ್ನು ಗರಿಷ್ಟ 750 ವಿದ್ಯಾರ್ಥಿಗಳಿಗೆ ಸಿದ್ಧಪಡಿಸಲಾಗಿದೆ.
* ಈಗಾಗಲೇ ಉದಾಹರಣೆಗಾಗಿ ನಮೂದಿಸಿರುವ ಮಾಹಿತಿಯನ್ನು ಅಳಿಸಿ ನಂತರ ಮಾಹಿತಿ ನಮೂದಿಸಿ
* ನಿಮ್ಮ ಶಾಲೆಯ ವಿದ್ಯಾರ್ಥಿಗಳ ಹೆಸರು ಮತ್ತಿತರೆ ಮಾಹಿತಿ ನಮೂದಿಸುವ ಮೊದಲು ಎಷ್ಟು ವಿದ್ಯಾರ್ಥಿಗಳಿರುವರೋ ಅಷ್ಟು ಕ್ರಮಸಂಖ್ಯೆಯನ್ನು ನಮೂದಿಸಿ. (ಪ್ರತಿ ಕ್ರಮ ಸಂಖ್ಯೆ ನಮೂದಿಸಿದ ನಂತರ ಒಂದು ಹೊಸ ಸಾಲು ಸೃಷ್ಟಿಯಾಗುತ್ತದೆ.)
* ಯಾವುದೇ ನಮೂದನ್ನು ಯಾವುದೇ ಕಾರಣಕ್ಕೂ CUT-Paste ಮಾಡಬೇಡಿ.
* ಯಾವುದೇ ಪುಟಕ್ಕೆ ಭೇಟಿನೀಟಿದ ಕೂಡಲೇ ಪ್ರತಿ ಸಲ Refresh ಅನ್ನು ಕ್ಲಿಕ್ ಮಾಡಿ.
* ಮಾಹಿತಿ ನಮೂದಿಸುವಾಗ ಅಲ್ಲಿ ನೀಡಲಾಗಿರುವ ಸೂಚನೆಗಳನ್ನು ಗಮನವಿಟ್ಟು ಓದಿದ ನಂತರ ಮಾಹಿತಿ ನಮೂದಿಸಿ.
******ಮಹೇಶ ಎಸ್, ಕನ್ನಡ ದೀವಿಗೆ******

06 ಅಕ್ಟೋಬರ್ 2016

10ನೇ ತರಗತಿ ಸಿ.ಸಿ.ಇ ಅಂಕವಹಿ ತಂತ್ರಾಂಶ(Excel)

10ನೇ ತರಗತಿ CCE ಅಂಕವಹಿ ನಿರ್ವಹಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ Excel ನಲ್ಲಿ ತಂತ್ರಾಂಶ ಸಿದ್ಧಪಡಿಸಲಾಗಿದ್ದು ಈ ಕೆಳಗಿನ ಅನುಕೂಲತೆಗಳನ್ನು ಹೊಂದಿದೆ.
ಅನುಕೂಲತೆಗಳು:
1) ಎಲ್ಲಾ ವಿಷಯಗಳನ್ನು ಒಂದೇ ವಹಿಯಲ್ಲಿ ನಮೂದಿಸಬಹುದು.
2) ಭಾಗ ಮತ್ತು ಬಿ ಭಾಗದ ವಿಷಯಗಳನ್ನು ಒಳಗೊಂಡಿದೆ.
3) ಶಾಲೆಯ ಹೆಸರು, ವಿದ್ಯಾರ್ಥಿಗಳ ಹೆಸರನ್ನು ಒಮ್ಮೆ ನಮೂದಿಸಿದರೆ ಸಾಕು.
3) ಪ್ರತಿ ವಿಷಯದ ರೂಪಣಾತ್ಮಕ, ಸಂಕಲನಾತ್ಮಕ, ಪೂರ್ವಸಿದ್ಧತಾ ಪರೀಕ್ಷೆಗಳ ಅಂಕಗಳನ್ನು ನಮೂದಿಸಿದರೆ ಸ್ವಯಂಚಾಲಿತವಾಗಿ ಶಾಲಾ ಕ್ರೋಡೀಕರಣ, QPI (Quality Performance Index) ಮತ್ತು GQPI (Gross Quality Performance Index) ವಿಶ್ಲೇಷಣೆ, ಸ್ಥಂಭಾಲೇಖ ವಿಶ್ಲೇಷಣೆ ಪಡೆಯಬಹುದು.
4) ಕೂಡುವ, ಗುಣಿಸುವ, ಗ್ರೇಡ್ ಕಂಡುಹಿಡಿಯಲು ಹೆಣಗಾಡುವ ಅವಶ್ಯಕತೆ ಇಲ್ಲದಿರುವುದರಿಂದ ಸಮಯದ ಉಳಿತಾಯವಾಗುತ್ತದೆ.
ಸಿ.ಸಿ.ಇ 10ನೇ ತರಗತಿ ಅಂಕವಹಿ ತಂತ್ರಾಂಶ(Excel)
(ಕೆಳಗಿನ ಆಯ್ಕೆಗಳಿಂದ ಆರಿಸಿ)


****************************************************


ತಂತ್ರಾಂಶದ ಕುರಿತ ಚಿತ್ರಗಳು







****************

17 ಜುಲೈ 2015

ಮೋಬೈಲ್ ನಲ್ಲಿ ಕನ್ನಡ ದೀವಿಗೆ app (Android kannada deevige App)

 ಕನ್ನಡ ದೀವಿಗೆ App
               ಆತ್ಮೀಯ ಕನ್ನಡ ಬಾಂಧವರೇ, ನಿಮ್ಮ ಆಂಡ್ರಾಯ್ಡ್  ಮೊಬೈಲ್ ನಲ್ಲಿ 'ಕನ್ನಡ ದೀವಿಗೆ' App install ಮಾಡಿಕೊಳ್ಳುವ ಮೂಲಕ ಒಂದೇ click ನಲ್ಲಿ ಬ್ಲಾಗ್ ವೀಕ್ಷಿಸಬಹುದು. 
               ಇದು updated ಆವೃತ್ತಿ ಲಭ್ಯವಿದೆ. ಬಳಕೆದಾರರ ಸ್ನೇಹಿಯಾಗಿರುವ ಈ app ಬಗ್ಗೆ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ಅಥವಾ ಹಿಮ್ಮಾಹಿತಿ ನೀಡಲು ಮರೆಯದಿರಿ.
 
https://drive.google.com/uc?export=download&id=0B2ur8kBJaegXTjRWbkd2Q3ZSOHM