ನನ್ನ ಪುಟಗಳು

ಕನ್ನಡ ವ್ಯಾಕರಣ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ವ್ಯಾಕರಣ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

23 ಜೂನ್ 2024

Grammar-Quizzes

****
ವ್ಯಾಕರಣಾಂಶಗಳ ರಸಪ್ರಶ್ನೆ ಅಭ್ಯಾಸದ ಲಿಂಕ್‌ಗಳು
****
ರಸಪ್ರಶ್ನೆಯಲ್ಲಿ ಭಾಗವಹಿಸಲು ವಿಷಯದ ಮೇಲೆ ಕ್ಲಿಕ್ ಮಾಡಿ.
(ಇಲ್ಲಿ ಅಭ್ಯಾಸಕ್ಕಾಗಿ ಲಿಂಕ್‌ಗಳನ್ನು ನೀಡಲಾಗಿದ್ದು ಇವುಗಳಿಗೆ ಫಲಿತಾಂಶವನ್ನು ಕಳುಹಿಸುವುದಿಲ್ಲ)
********

ಕ್ರ. ಸಂ.

ವ್ಯಾಕರಣಾಂಶಗಳು

1

ಕನ್ನಡ ವರ್ಣಮಾಲೆಕನ್ನಡ ಮತ್ತು ಸಂಸ್ಕೃತ ಸಂಧಿಗಳು

2

ಸಮಾಸಗಳು

3

ನಾಮಪದಸರ್ವನಾಮಗ್ರಾಮ್ಯ-ಗ್ರಾಂಥಿಕಅನ್ಯದೇಶ್ಯ

4

ತತ್ಸಮ-ತದ್ಭವವಿಭಕ್ತಿ ಪ್ರತ್ಯಯ

5

ದ್ವಿರುಕ್ತಿ-ಜೋಡುನುಡಿವಾಕ್ಯಪ್ರಭೇದಕ್ರಿಯಾಪದ

6

ಹೊಸಗನ್ನಡ ರೂಪಅವ್ಯಯಕೃದಂತತದ್ಧಿತಾಂತಲೇಖನ ಚಿಹ್ನೆಗಳು-೧

7

ಹೊಸಗನ್ನಡ ರೂಪಅವ್ಯಯಕೃದಂತತದ್ಧಿತಾಂತಲೇಖನ ಚಿಹ್ನೆಗಳು-೨

8

ಹೊಸಗನ್ನಡ ರೂಪಕೃದಂತತದ್ಧಿತಾಂತಛಂದಸ್ಸುಅಲಂಕಾರ

9

ಸಮಾನಾರ್ಥಕ ಪದಗಳು ಭಾಗ-1

10

ಸಮಾನಾರ್ಥಕ ಪದಗಳು ಭಾಗ-2

11

ಸಮಾನಾರ್ಥಕ ಪದಗಳು ಭಾಗ-3



********

26 ಸೆಪ್ಟೆಂಬರ್ 2023

10ನೇ ತರಗತಿ ಪದ್ಯಪಾಠ-7 ವೀರಲವ-ವ್ಯಾಕರಣ/ಛಂದಸ್ಸು (10th-Veeralava-Grammar)

ಭಾಷಾ ಚಟುವಟಿಕೆ
೧. ವಿಗ್ರಹಿಸಿ ಸಮಾಸವನ್ನು ಹೆಸರಿಸಿ.
    ೧. ಸೊಲ್ಗೇಳಿ - ಸೊಲ್ಲನ್ನು + ಕೇಳಿ = ಕ್ರಿಯಾಸಮಾಸ
    ೨. ನಲ್ಗುದುರೆ - ನಲ್ಲಿತು + ಕುದುರೆ = ಕರ್ಮಧಾರಯಸಮಾಸ
    ೩. ಬಿಲ್ಗೊಂಡು - ಬಿಲ್ಲನ್ನು + ಕೊಂಡು = ಕ್ರಿಯಾಸಮಾಸ.
    ೪. ಬಿಲ್ದಿರುವನೇರಿಸಿ - ಬಿಲ್ಲಿನತಿರುವನ್ನು + ಏರಿಸಿ = ಕ್ರಿಯಾಸಮಾಸ.
    ೫. ಪೂದೋಟ - ಪೂವಿನ + ತೋಟ = ತತ್ಪುರುಷಸಮಾಸ.
    ೬. ಲಿಖಿತವನೋದಿ - ಲಿಖಿತವನ್ನು + ಓದಿ = ಕ್ರಿಯಾಸಮಾಸ
    ೭. ಯಜ್ಞತುರುಗ - ಯಜ್ಞದ + ತುರುಗ = ತತ್ಪುರುಷಸಮಾಸ.
    ೮. ಕದಳಿದ್ರುಮ - ಕದಳಿಯ + ದ್ರುಮ = ತತ್ಪುರುಷಸಮಾಸ.
    ೯. ಅಬ್ಧಿಪ - ಅಬ್ಧಿಗೆ (ಸಮುದ್ರಕ್ಕೆ) ಪತಿ (ಒಡೆಯ) ಯಾರೋ ಆತ (ವರುಣ) = ಬಹುವ್ರೀಹಿಸಮಾಸ.

೨. ತತ್ಸಮ-ತದ್ಭವ ಬರೆಯಿರಿ.
    ೧. ವೀರ - ಬೀರ
    ೨. ಯಜ್ಞ - ಜನ್ನ 
    ೩. ಬಂಜೆ - ವಂದ್ಯಾ 
    ೪. ಕುವರ - ಕುಮಾರ 
    ೫. ಲೋಕ - ಲೋಗ

೩. ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.
    ೧. ಚರಿಸುತಧ್ವರದ - ಚರಿಸುತ + ಅಧ್ವರದ = ಲೋಪಸಂಧಿ.
    ೨. ನಿಜಾಶ್ರಮ - ನಿಜ + ಆಶ್ರಮ = ಸವರ್ಣಧೀರ್ಘಸಂಧಿ.
    ೩. ಲೇಖನವನೋದಿ - ಲೇಖನವನು + ಓದಿ = ಲೋಪಸಂಧಿ.
    ೪. ತೆಗೆದುತ್ತರೀಯಮಂ - ತೆಗೆದು + ಉತ್ತರೀಯಮಂ = ಲೋಪಸಂಧಿ.
    ೫. ಬೇಡಬೇಡರಸುಗಳ - ಬೇಡಬೇಡ + ಅರಸುಗಳ = ಲೋಪಸಂಧಿ.
    ೬. ನಿಂತಿರ್ದನ್ - ನಿಂತು + ಇರ್ದನ್ = ಲೋಪಸಂಧಿ.
    ೭. ಪೂದೋಟ - ಪೂ + ತೋಟ = ಆದೇಶಸಂಧಿ.
    ೮. ಸೊಲ್ಗೇಳಿ - ಸೊಲ್ಲು + ಕೇಳಿ = ಆದೇಶಸಂಧಿ.

೪. ಪ್ರಸ್ತಾರಹಾಕಿ ಗಣ ವಿಭಾಗ ಮಾಡಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ.
    5            5          5        5
_  u   _     _  _ u  uuuuu  _  _ u
ಉರ್ವಿಯೊಳ್ | ಕೌಸಲ್ಯೆ | ಪಡೆದಕುವ | ರಂರಾಮ|
    5            5          5        5
_  u   _   _ u _   uu_u   uuuuu
ನೊರ್ವನೇ | ವೀರನಾ | ತನಯಜ್ಞ | ತುರಗಮಿದು|
    5            5          5        5          5         5        2
_  uuu   _ u _   _  uu_    uuu _    _ u _   uuu _    _
ನಿರ್ವಹಿಸ | ಲಾರ್ಪರಾ | ರಾದೊಡಂ | ತಡೆಯಲೆಂ | ದಿರ್ದಲೇ | ಖನವನೋ |ದಿ
                                                    ಛಂದಸ್ಸು : ವಾರ್ಧಕ ಷಟ್ಪದಿ

ವಾರ್ಧಕ ಷಟ್ಪದಿಯ ಲಕ್ಷಣಗಳು:
* ಆರು ಸಾಲುಗಳಿರುತ್ತವೆ.
* ೧, ೩, ೪ ಮತ್ತು ೫ ನೆಯ ಸಾಲುಗಳು ತಲಾ ೨೦ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೪ ಗಣಗಳಿರುತ್ತವೆ.
* ೩ ಮತ್ತು ೬ ನೆಯ ಸಾಲುಗಳು ತಲಾ ೩೨ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೬ ಗಣಗಳೊಂದಿಗೆ ಒಂದು ಗುರು ಇರುತ್ತದೆ.
* ಮೊದಲನೆಯ ಸಾಲಿನನ ಗಣವಿನ್ಯಾಸ : 5/5/5/5/


ಬಹು ಆಯ್ಕೆ ಪ್ರಶ್ನೆಗಳು:
೧. ’ರಗಳೆ’ ಪದದ ತದ್ಭವ ರೂಪವಿದೆ.
    ಎ) ರಘಟಾ     ಬಿ) ರಗಳಾ     ಸಿ) ರಾಗಟ     ಡಿ) ರಂಗಗೀತೆ
೨. ಇವುಗಳಲ್ಲಿ ಬಹುಪಾದಗಳುಳ್ಳ ಪದ್ಯ :
    ಎ) ಕಂದ         ಬಿ) ಷಟ್ಟದಿ     ಸಿ) ವೃತ್ತ         ಡಿ) ರಗಳೆ
೩. ವಾರ್ಧಕ ಷಟ್ಪದಿಯ ಒಂದು ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ :
    ಎ) ೧೦೨         ಬಿ) ೧೪೦     ಸಿ) ೧೪೪         ಡಿ) ೬೪
೪. ಇವುಗಳಲ್ಲಿ ಯಾವುದು ರಗಳೆಯ ವಿಧವಾಗಿಲ್ಲ :
    ಎ) ಉತ್ಸಾಹ     ಬಿ) ಲಲಿತ     ಸಿ) ಸರಸಿ     ಡಿ) ಮಂದಾನಿಲ
೫. ವಾರ್ಧಕ ಷಟ್ಪದಿಯಲ್ಲಿ ಪ್ರತಿ ಗಣವು ಎಷ್ಟು ಮಾತ್ರೆಗಳಿಂದ ಕೂಡಿರುತ್ತದೆ?
    ಎ) ೩         ಬಿ) ೬         ಸಿ) ೫         ಡಿ) ೪
೬. ‘ನೆತ್ತಿಯೊಳ್’ ಇದು ಈ ವಿಭಕ್ತಿಗೆ ಉದಾಹರಣೆಯಾಗಿದೆ.
    ಎ) ಪ್ರಥಮ     ಬಿ) ದ್ವಿತೀಯ     ಸಿ) ತೃತೀಯ     ಡಿ) ಸಪ್ತಮಿ
೭. ‘ಲಿಖಿತಮಂ’ ಇಲ್ಲಿರುವ ವಿಭಕ್ತಿ :
    ಎ) ಪ್ರಥಮ     ಬಿ) ದ್ವಿತೀಯ     ಸಿ) ತೃತೀಯ     ಡಿ) ಚತುರ್ಧಿ
೮. ‘ಕುವರಂ’ ಇಲ್ಲಿರುವ ಅಕ್ಷರಗಣ :
    ಎ) ಭ-ಗಣ     ಬಿ) ಸ-ಗಣ     ಸಿ) ಮ-ಗಣ     ಡಿ) ತ-ಗಣ
೯. ’ಉರ್ವಿಯೊಳ್’ ಪದದಲ್ಲಿರುವ ಕಾರಕಾರ್ಥ :
    ಎ) ಕರ್ಮಾರ್ಥ     ಬಿ) ಸಂಪ್ರದಾನ     ಸಿ) ಅಪಾದಾನ     ಡಿ) ಅಧಿಕರಣ
೧೦. ‘ಅಗಡು’ ಪದದ ಹೊಸಗನ್ನಡ ರೂಪ ಇದಾಗಿದೆ :
    ಎ) ಅಡಗಿಕೋ      ಬಿ) ಶೌರ್ಯ      ಸಿ) ಕುದುರೆ      ಡಿ) ಹಡಗು

[ಉತ್ತರಗಳು: ೧. ಎ) ರಘಟಾ ೨. ಡಿ) ರಗಳೆ ೩. ಸಿ) ೧೪೪ ೪. ಸಿ) ಸರಸಿ ೫. ಸಿ) ೫ ೬. ಡಿ) ಸಪ್ತಮಿ ೭. ಬಿ) ದ್ವಿತೀಯ
೮. ಬಿ) ಸ-ಗಣ ೯. ಡಿ) ಅಧಿಕರಣ ೧೦. ಬಿ. ಶೌರ್ಯ]

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ:
೧. ಭಾಮಿನಿ : ೧೦೨ : : ವಾರ್ಧಕ : ___________
೨. ವೃತ್ತಗಳು : ಅಕ್ಷರಗಣ : : ರಗಳೆ : ___________
೩. ಸೊಲ್ಗೇಳಿ : ಕ್ರಿಯಾ ಸಮಾಸ : : ಪೂದೋಟ : ___________
೪. ಬಿಲ್ದಿರುವನೇರಿಸಿ : ಕ್ರಿಯಾ ಸಮಾಸ : : ನಲ್ಗುದುರೆ : ___________
೫. ನೃ : ರಾಜ : : ಅಬ್ಧಿಪ : ___________
೬. ಸೊಲ್ಗೇಳಿ : ಸೊಲ್ಲನ್ನು+ಕೇಳಿ : : ನಲ್ಗುದುರೆ : ___________
೭. ವೀರ : ಬೀರ : : ಬಂಜೆ : ___________
೮. ಗಳ : ಕೊರಳು : : ವಾಜಿ : ___________

[ಉತ್ತರಗಳು: ೧) ೧೪೪ ೨) ಮಾತ್ರಾಗಣ ೩) ತತ್ಪುರುಷ ಸಮಾಸ ೪) ಕರ್ಮಧಾರಯ ೫) ವರುಣ ೬) ನಲ್ಲಿತು+ ಕುದುರೆ
೭) ವಂಧ್ಯಾ ೮) ಕುದುರೆ]






******** ಕನ್ನಡ ದೀವಿಗೆ ******

05 ಮೇ 2020

10th- Lesson-Quizzes

****
10ನೆಯ ತರಗತಿಯ ಎಲ್ಲಾ ಗದ್ಯ, ಪದ್ಯ ಹಾಗೂ ವ್ಯಾಕರಣಾಂಶಗಳ ರಸಪ್ರಶ್ನೆ ಅಭ್ಯಾಸದ ಲಿಂಕ್‌ಗಳು
****
(ಇಲ್ಲಿ ಅಭ್ಯಾಸ ಲಿಂಕ್‌ಗಳನ್ನು ನೀಡಲಾಗಿದ್ದು ಇವುಗಳಿಗೆ ಫಲಿತಾಂಶವನ್ನು ನೀಡುವುದಿಲ್ಲ.)



****admin****

07 ಫೆಬ್ರವರಿ 2019

ಕನ್ನಡ ದೀವಿಗೆ Online ರಸಪ್ರಶ್ನೆ ಕಾರ್ಯಕ್ರಮ(Kannada deevige Online Quizes)

       ಈ ಕೆಳಗಿನ ಪಟ್ಟಿಯಲ್ಲಿ ರಸಪ್ರಶ್ನೆ ವಿಷಯವನ್ನು ಆರಿಸಿ. (1,2,3 ಮತ್ತು 4 ನೇ ರಸಪ್ರಶ್ನೆಗಳಿಗೆ `ಇಮೇಲ್' ಕಾಲಂನಲ್ಲಿ ನಿಮ್ಮ Email Id ನಮೂದಿಸಿ. ನಂತರ ನಿಮ್ಮ ಪೂರ್ಣ ಹೆಸರನ್ನು ಇಂಗ್ಲೀಷ್‌ ನಲ್ಲಿ ನಮೂದಿಸಿ.
        ಪ್ರತಿ ಪ್ರಶ್ನೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದ್ದು ಸರಿಯಾದ ಉತ್ತರದ ಮೇಲೆ ಒತ್ತಿ. ಕೊನೆಯ ಪ್ರಶ್ನೆಗೆ ಉತ್ತರಿಸಿದ ನಂತರ  SUBMIT MY ANSWERS ಒತ್ತಿರಿ.
         
1) ಕನ್ನಡ ವರ್ಣಮಾಲೆ - ರಸಪ್ರಶ್ನೆ(10)
       (ನಾಮವಾಚಕಗಳು, ಸರ್ವನಾಮ, ಗ್ರಾಮ್ಯ-ಗ್ರಾಂಥಿಕ, ಅನ್ಯದೇಶ್ಯ)
.
.
ಈ ಕೆಳಗಿನ ರಸಪ್ರಶ್ನೆಗಳಲ್ಲಿ ಶೇ 60 ಕ್ಕಿಂತ ಹೆಚ್ಚು ಅಂಕಗಳಿಸಿ ಮತ್ತು Email ನಲ್ಲಿ ಕೂಡಲೇ ಪ್ರಮಾಣ ಪತ್ರ ಪಡೆಯಿರಿ......
(ತತ್ಸಮ-ತದ್ಭವ, ವಿಭಕ್ತಿ ಪ್ರತ್ಯಯ, ದ್ವಿರುಕ್ತಿ-ಜೋಡುನುಡಿ, ವಾಕ್ಯಪ್ರಭೇದ, ಕ್ರಿಯಾಪದ)
(ತತ್ಸಮ-ತದ್ಭವ, ವಿಭಕ್ತಿ ಪ್ರತ್ಯಯ, ದ್ವಿರುಕ್ತಿ-ಜೋಡುನುಡಿ, ವಾಕ್ಯಪ್ರಭೇದ, ಕ್ರಿಯಾಪದ)

  (ಅವ್ಯಯ, ಹಳಗನ್ನಡ-ಹೊಸಗನ್ನಡ ರೂಪ, ಕೃದಂತ, ತದ್ಧಿತಾಂತ, ಲೇಖನ ಚಿಹ್ನೆಗಳು)
  (ಅವ್ಯಯ, ಹಳಗನ್ನಡ-ಹೊಸಗನ್ನಡ ರೂಪ, ಕೃದಂತ, ತದ್ಧಿತಾಂತ, ಲೇಖನ ಚಿಹ್ನೆಗಳು)
  (ಅವ್ಯಯ, ಹಳಗನ್ನಡ-ಹೊಸಗನ್ನಡ ರೂಪ, ಕೃದಂತ, ತದ್ಧಿತಾಂತ, ಲೇಖನ ಚಿಹ್ನೆಗಳು)

***********
      

**************************** 
     
     
     
     
     
     
     

09 ನವೆಂಬರ್ 2013

ಕನ್ನಡ ವ್ಯಾಕರಣ-ಮೊದಲ ಮಾತು

 ಪೀಠಿಕೆ
    ನ್ನಡ ಭಾಷೆಯು ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. ಅಂತೆಯೇ ಅದಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನವೂ ದೊರೆತಿದೆ. ಸಂಸ್ಕೃತದಿಂದ ಆಧುನಿಕ ಯುಗದ ಆಂಗ್ಲ ಭಾಷೆಯ ವರೆಗೂ ಹಲವಾರು ಭಾಷೆಗಳ ಪ್ರಭಾವ ಪ್ರೇರಣೆಗೆ ಒಳಗಾಗಿ ಪುಟಕ್ಕಿಟ್ಟ ಚಿನ್ನದಂತೆ ಹೊಳಪನ್ನೂ ಘನತೆಯನ್ನೂ ಪಡೆದುಕೊಂಡಿದೆ. ಕವಿರಾಜ ಮಾರ್ಗಕಾರನಿಂದ ಪ್ರಸ್ತುತ ಆಧುನಿಕ ಸಾಹಿತ್ಯದವರೆಗೂ ಸಾವಿರಾರು ಕವಿ-ಸಾಹಿತಿ-ವಿದ್ವಾಂಸರಿಂದ ಸಮೃದ್ಧವಾಗಿ ಬೆಳೆದು ನಿಂತಿದೆ. ಇದನ್ನು ಬಳಸಿ-ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
     ಒಂದು ಚಿತ್ರ ಪಟವು ಚೌಕಟ್ಟಿನಿಂದ ಹೇಗೆ ಸುರಕ್ಷಿತವೂ ಸುಂದರವೂ ಆಗಿರುತ್ತದೋ ಹಾಗೆಯೇ ಒಂದು ಭಾಷೆಯು  ಶುದ್ಧವೂ ಸುರಕ್ಷಿತವೂ ಆಗಿರಬೇಕಾದರೆ ವ್ಯಾಕರಣ ಬಹಳ ಪ್ರಮುಖವಾದುದು.
        ಕನ್ನಡ ಭಾಷೆಯು ಮೂಲದಲ್ಲಿ ದ್ರಾವಿಡ ಭಾಷೆಯಿಂದ ಕವಲೊಡೆದು ಬೆಳೆದು ಬಂದಿದ್ದರೂ ಅದು ಬೆಳೆದು ಸಮೃದ್ಧವಾಗಿ ನಿಲ್ಲಲು ಸಂಸ್ಕೃತ ಭಾಷೆಯ ಪ್ರಭಾವ ಹೆಚ್ಚು ದಟ್ಟವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಲೆಕ್ಕವಿಲ್ಲದಷ್ಟು ಪದಗಳು ಸಂಸ್ಕೃತ ಭಾಷೆಯಿಂದ ಯಥೇಚ್ಛವಾಗಿ ಹರಿದುಬಂದು ಕನ್ನಡ ನುಡಿ ಬೊಕ್ಕಸವನ್ನು ಶ್ರೀಮಂತಗೊಳಿಸಿವೆ. ಈ ಕಾರಣದಿಂದಲೇ ಕನ್ನಡ ವ್ಯಾಕರಣವು ಸಂಸ್ಕೃತ ವ್ಯಾಕರಣವನ್ನು ಅನುಸರಿಸಿಯೇ ಬೆಳೆದುಬರಬೇಕಾಯಿತು. ಇದು ಸಂಸ್ಕೃತ ವ್ಯಾಕರಣದ ಪಡಿಯಚ್ಚಾಗಿದ್ದರೂ ತನ್ನ ಜಾಯಮಾನಕ್ಕನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ತನ್ನ ತನವನ್ನು ಕಾಪಾಡಿಕೊಂಡಿದೆ ಎನ್ನುವುದನ್ನು ಮರೆಯುವಂತಿಲ್ಲ.
     ಸು.ಕ್ರಿ.ಶ.1260 ರಲ್ಲಿ ಜೀವಿಸಿದ್ದ ಕೇಶಿರಾಜನು ಬರೆದಿರುವ 'ಶಬ್ದಮಣಿ ದರ್ಪಣ`ವು ಕನ್ನಡದಲ್ಲಿ ರಚಿತವಾದ ಮೊಟ್ಟ ಮೊದಲ ವ್ಯಾಕರಣ ಗ್ರಂಥವಾಗಿದೆ. ಈ ಗ್ರಂಥದಲ್ಲಿ ಅವನು ಸಂಧಿ, ನಾಮ, ಸಮಾಸ, ತದ್ಧಿತ, ಧಾತು, ಆಖ್ಯಾತ, ಅಪಭ್ರಂಶ, ಅವ್ಯಯ ಎಂದು ಒಟ್ಟು 8 ಪ್ರಕರಣಗಳಲ್ಲಿ ಕನ್ನಡ ವ್ಯಾಕರಣವನ್ನು ಪ್ರಸ್ತುತಪಡಿಸಿದ್ದಾನೆ.

ಕೃಪೆ - 1) ಪುಸ್ತಕ: ಕನ್ನಡ ವ್ಯಾಕರಣ ದರ್ಪಣ (ಸಂಪಾದಿತ)  ಲೇಖಕರು: ಸಂಪಾದಿತ (ಶಿ. ಚ. ನಂದಿಮಠ)
         2) ವಿಕಿಪೀಡಿಯಾ
         3) ಕಣಜ

08 ನವೆಂಬರ್ 2013

ಲೇಖನ ಚಿಹ್ನೆಗಳು

                                                         ಲೇಖನ ಚಿಹ್ನೆಗಳು                         ಕೃಪೆ-ಬರಹ ಅಂತರ್ಜಾಲ
ಕನ್ನಡದಲ್ಲಿ ಗದ್ಯವನ್ನಾಗಲಿ, ಪದ್ಯವನ್ನಾಗಲಿ ಬರೆಯುವಾಗ ಹಿಂದಿನ ಕಾಲದಲ್ಲಿ ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತ ಇರಲಿಲ್ಲ. ತಾಳೆಗರಿಗಳಲ್ಲಿ ಒಂದು ಪದ್ಯವನ್ನು ಪೂರ್ತಿ ಸಾಲಾಗಿ ಬರೆದ ಮೇಲೆ ಕೊನೆಯಲ್ಲಿ ಒಂದು (|) ಗೂಟವನ್ನು ಹಾಕಿ ಗುರುತಿಸಿದರೆ ಆಗಿಹೋಯಿತು. ಕೆಲವರು ಅದನ್ನೂ ಹಾಕುತ್ತಿರಲಿಲ್ಲ. ಇಂಗ್ಲಿಷ್ ಭಾಷೆಯ ಅಭ್ಯಾಸವು ಹೆಚ್ಚಾದ ಹಾಗೆಲ್ಲ, ಆ ಭಾಷೆಯಲ್ಲಿ ಉಪಯೋಗಿಸುತ್ತಿದ್ದ ವಿರಾಮ ಚಿಹ್ನೆಗಳ ಪ್ರಯೋಜನದ ಪರಿಚಯವಾಯಿತು, ನಮ್ಮವರಿಗೂ. ಹೀಗಾಗಿ ಈಗ ಕನ್ನಡದಲ್ಲಿ ಬರಹ ಮಾಡುವರು ಕೆಲವು ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತಿದ್ದಾರೆ. ಆದರೂ ಈ ಚಿಹ್ನೆಗಳ ಉಪಯೋಗವು ಒಂದೇ ಬಗೆಯಾಗಿ ಆಗುತ್ತಿಲ್ಲ. ಆದುದರಿಂದ, ಈ ಚಿಹ್ನೆಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆಯನ್ನು ಪಡೆದಿರುವುದು ಒಳ್ಳೆಯದು.
ವಿರಾಮ ಚಿಹ್ನೆಗಳು ಓದುಗನಿಗೆಂದು ಲೇಖಕನು ನೀಡುವ ಮಾರ್ಗದರ್ಶನ ಎಂದು ತಿಳಿಯಬೇಕು. ಓದುಗನು ಒಂದು ಲೇಖನವನ್ನು ಓದುವಾಗ ಕೆಲವು ಕಡೆ ಸ್ವಲ್ಪ ತಡೆದು ಓದುತ್ತಾನೆ. ಆಗ ಓದಿದ ವಾಕ್ಯದ ಅರ್ಥ ಹೆಚ್ಚು ಸ್ಪಷ್ಟವಾಗುತ್ತದೆ. ಒಂದೊಂದು ವಿರಾಮ ಚಿಹ್ನೆಗೂ ಒಂದು ಅರ್ಥವಿದೆ. ಅದನ್ನು ಉಪಯೋಗಿಸುವಾಗ ಲೇಖಕನು ಒಂದು ಉದ್ದೇಶವನ್ನು ಇಟ್ಟುಕೊಂಡಿರುತ್ತಾನೆ. ಆದುದರಿಂದ ಈ ಚಿಹ್ನೆಗಳ ಬಗ್ಗೆ ವಿವರವಾಗಿ ತಿಳಿವಳಿಕೆ ಹೊಂದಿರುವುದು, ಲೇಖಕನ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಈ ದೃಷ್ಟಿಯಿಂದ ವಿರಾಮ ಚಿಹ್ನೆಗಳನ್ನೂ ಅವುಗಳನ್ನೂ ಉಪಯೋಗಿಸುವ ಬಗೆಯನ್ನೂ ಕುರಿತು ವಿವರಣೆಯನ್ನು ನೀಡಲಾಗಿದೆ.
ಲೇಖನ ಚಿಹ್ನೆಗಳು ಹೀಗಿವೆ:

ಚಿಹ್ನೆಯ ಹೆಸರುಚಿಹ್ನೆ
೧.ಪೂರ್ಣವಿರಾಮ.
೨.ಅರ್ಧವಿರಾಮ;
೩.ಅಲ್ಪ ವಿರಾಮ,
೪.ವಿವರಣಸೂಚಿ:
೫.ಕಂಸ ಅಥವಾ ಆವರಣ( ) ಅಥವಾ - --
೬.ಪ್ರಶ್ನಾರ್ಥಕ ಚಿಹ್ನೆ?
೭.ಆಶ್ಚರ್ಯ ಸೂಚಕ ಚಿಹ್ನೆ!
೮.ಉದ್ಧಾರ ಸೂಚಕ ಚಿಹ್ನೆ“ ” ಅಥವಾ ‘ ’
ಇವುಗಳ ಬಗ್ಗೆ, ಇವುಗಳನ್ನು ಏಕೆ ಉಪಯೋಗಿಸುತ್ತಾರೆ ಎಂಬ ಬಗ್ಗೆ ವಿವರಗಳನ್ನು ತಿಳಿದುಕೊಳ್ಳೋಣ.
ಪೂರ್ಣವಿರಾಮ ಇದು- .
ಒಂದು ವಾಕ್ಯವು ಪೂರೈಸಿದಾಗ ಆ ವಾಕ್ಯದ ಕೊನೆಯಲ್ಲಿ ಈ ಚಿಹ್ನೆಯನ್ನು ಉಪಯೋಗಿಸುತ್ತಾರೆ. ಪ್ರತಿಯೊಂದು ವಾಕ್ಯವಾದ ಮೇಲೆಯೂ ಇದನ್ನು ಉಪಯೋಗಿಸುತ್ತಾರೆ. ಅಂದರೆ ಒಂದು ಅಭಿಪ್ರಾಯ ಆ ವಾಕ್ಯದಲ್ಲಿ ಪೂರ್ತಿಯಾಗಿ ಹೇಳಲಾಗಿದೆ ಎಂದು ಅರ್ಥ. ಆ ವಾಕ್ಯಗಳು ಹೇಳಿಕೆ ಆಗಿರಬಹುದು; ವಿನಂತಿ, ಪ್ರಾರ್ಥನೆ ಆಗಿರಬಹುದು.

ಉದಾ:
೧. ಕನ್ನಡಭಾಷೆಯು ತುಂಬ ಪ್ರಾಚೀನವಾದ ಭಾಷೆ.
೨. ನಾನು ನಿಮಗೆ ಒಂದು ಪತ್ರವನ್ನು ಬರೆಯಬಹುದೆ.
೩. ನನ್ನಿಂದ ನಿಮಗೆ ತೊಂದರೆಯಾಗಿಲ್ಲ, ತಾನೆ.
ಈ ವಾಕ್ಯಗಳಲ್ಲಿ ಮೊದಲನೆಯದು ಒಂದು ಹೇಳಿಕೆ. ಎರಡನೆಯ ಮತ್ತು ಮೂರನೆಯ ವಾಕ್ಯಗಳು ಪ್ರಶ್ನೆಯಂತೆ ಇವೆ. ಆದರೂ, ಆ ವಾಕ್ಯಗಳು ಒಂದು ರೀತಿಯಾಗಿ ವಿನಂತಿ ಮಾಡುತ್ತಿರುವುದು ಕಂಡುಬರುತ್ತದೆ. ಅಂಥ ವಾಕ್ಯಗಳೂ ಹೇಳಿಕೆಗೆ ಸಮಾನವೆಂದು ಗಣಿಸಬಹುದು.
ಎಲ್ಲ ಸಂಕ್ಷಿಪ್ತಗಳ (abbreviations) ಮುಂದೆ ಪೂರ್ಣ ವಿರಾಮವನ್ನು ಹಾಕಬೇಕು.

ಉದಾ: ಡಾ. ಯು.ಎಸ್.ಎ., ಕ.ಸಾ.ಪ.
ಕುವೆಂಪು, ಪು.ತಿ.ನ. ವ್ಯಕ್ತಿಗಳ ಸಂಕ್ಷಿಪ್ತ ನಾಮವನ್ನು ಉಪಯೋಗಿಸುವಾಗ ಅವರು ಹೇಗೆ ಬರೆಯುತ್ತಿದ್ದರೋ ಹಾಗೆಯೇ ಬರೆಯಬೇಕು.
ಬರಹದಲ್ಲಿ ಯಾವುದಾದರೂ ಭಾಗವನ್ನು ಬಿಟ್ಟಿದ್ದರೆ ಅದನ್ನು ಮೂರು ಪೂರ್ಣವಿರಾಮಗಳನ್ನು ಹಾಕಿ ತೋರಿಸಬೇಕು (...)
ಬೇರೊಬ್ಬರ ವಾಕ್ಯಗಳನ್ನು ಉದ್ಧಾರ ಮಾಡಿ ಕೊನೆಯಲ್ಲಿ ಸ್ವಲ್ಪ ಭಾಗವನ್ನು ಬಿಟ್ಟಿದ್ದರೆ ಅದನ್ನು ನಾಲ್ಕು ಪೂರ್ಣವಿರಾಮಗಳನ್ನು ಹಾಕಿ ತೋರಿಸಬೇಕು (....)
* * * * *
ಅರ್ಧ ವಿರಾಮ ಇದು- ;
ಎರಡು ಸಂಪೂರ್ಣ ವಾಕ್ಯಗಳು ಬೇರೆಬೇರೆಯವೇ ಆಗಿದ್ದರೂ ಅವುಗಳಿಗೆ ಸಂಬಂಧ ಇದ್ದರೆ ಅವುಗಳ ನಡುವೆ ಅರ್ಧವಿರಾಮವನ್ನು ಉಪಯೋಗಿಸಬೇಕು.

ಉದಾ:
೧) ಧರ್ಮದ ಸ್ವರೂಪ ಬಹು ಸೂಕ್ಷ ವಾದದ್ದು; ಅದನ್ನು ಮಹಾತ್ಮರೂ ತಿಳಿಯುವುದು ಕಷ್ಟ.
೨) ಒಂದು ಸಂಗತಿಯೇನೋ ನಿಶ್ಚಯ; ಈ ಕಾಲಕ್ಕೆ ಕೊನೆಗಾಲ ಒದಗಿದೆ; ಅದಕ್ಕೇ ಈ ಕೌರವರು ಲೋಭ ಮೋಹಗಳಿಗೆ ವಶರಾಗಿದ್ದಾರೆ.
ಎರಡನೆಯ ವಾಕ್ಯದಲ್ಲಿ ಮೂರು ಉಪವಾಕ್ಯಗಳಿದ್ದರೂ ಎಲ್ಲಕ್ಕೂ ಸಂಬಂಧವಿರುವುದು ಸ್ಪಷ್ಟ.
ಎರಡು ವಾಕ್ಯಗಳಿಗೆ ಸಂಬಂಧವಿದ್ದು ಎರಡನೆಯ ವಾಕ್ಯವು ಹೀಗೆ, ಆಮೇಲೆ, ಅಲ್ಲದೆ, ಪರಿಣಾಮವಾಗಿ, ಕೊನೆಗೆ, ಇನ್ನು ಮುಂದೆ, ಬಳಿಕ, ಆದರೆ, ಈ ರೀತಿಯಲ್ಲಿ ಎಂಬಂಥ ಶಬ್ದಗಳಿಂದ ಮೊದಲಾದರೆ ಅಂಥ ಕಡೆಗಳಲ್ಲಿ ಮೊದಲ ವಾಕ್ಯದ ಕೊನೆಯಲ್ಲಿ ಅರ್ಧವಿರಾಮ ಚಿಹ್ನೆಯನ್ನು ಹಾಕಬೇಕು.
ಉದಾ: ನನ್ನ ರಕ್ಷಣೆಯಲ್ಲಿ ದನದ ಮಂದೆ ಬೆಳೆಯುತ್ತಿದೆ; ರೋಗರಹಿತವಾಗಿರುತ್ತದೆ; ಅಲ್ಲದೆ ನಾನು ಒಳ್ಳೆಯ ಜಾತಿಯ ಹೋರಿಗಳ ಲಕ್ಷಣವನ್ನು ಬಲ್ಲೆ.
ಈ ಉದಾಹರಣೆಯಲ್ಲಿ ಎರಡೂ ಬಗೆಯ ವಾಕ್ಯಗಳಿರುವುದನ್ನು ಕಾಣಬಹುದು.
ಈ ವಿರಾಮ ಚಿಹ್ನೆಯ ಬಗ್ಗೆ ಒಂದು ಎಚ್ಚರಿಕೆಯನ್ನು ನೀಡಬೇಕು. ಇದನ್ನು ಅತಿಯಾಗಿ ಉಪಯೋಗಿಸುವದರಿಂದ ಶೈಲಿಯಲ್ಲಿ ಕೊಂಚ ಬೇಸರ ತರುವ ಗುಣ ಕೂಡಿಬಿಡುತ್ತವೆ.
* * * * *
ಅಲ್ಪ ವಿರಾಮ ಇದು- ,
ವಿರಾಮ ಚಿಹ್ನೆಗಳಲ್ಲೆಲ್ಲ ಅತ್ಯಂತವಾಗಿ ಉಪಯೋಗವಾಗುವ ಚಿಹ್ನೆ ಇದು --, . ಇದನ್ನು ಎಲ್ಲೆಲ್ಲಿ ಉಪಯೋಗಿಸಬೇಕು ಎಂಬುದನ್ನು ವಿವರವಾಗಿ ತಿಳಿದಿದ್ದರೆ ಒಳ್ಳೆಯದು.
ಒಂದು ವಾಕ್ಯವು ದೀರ್ಘವಾಗಿದ್ದು ಅಧೀನವಾಕ್ಯವು ಪ್ರಾರಂಭದಲ್ಲಿ ಬಂದರೆ ಆ ಅಧೀನವಾಕ್ಯವಾದ ಕೂಡಲೆ ಒಂದು ಅಲ್ಪ ವಿರಾಮವನ್ನು ಉಪಯೋಗಿಸಬೇಕು.

ಉದಾ: ಶಂಕರನು ಕ್ಷಮಿಸಿ, ಅರ್ಜುನನಿಂದ ಕಿತ್ತುಕೊಂಡಿದ್ದ ಅಕ್ಷಯ ಬಾಣಗಳನ್ನೂ ಗಾಂಡೀವವನ್ನೂ ಹಿಂತಿರುಗಿಕೊಟ್ಟು, ಅವನ ಅಪೇಕ್ಷೆಯಂತೆ ತನ್ನಲ್ಲಿದ್ದ ಪಾಶು ಪತಾಸ್ತ್ರವನ್ನು ಕೊಟ್ಟನು. (ವಚನ ಭಾರತ - ೧೨೭).
ಅಧೀನವಾಕ್ಯವು ಹೃದಯದಿಂದ ಕೊನೆಯಾಗಿ ವಾಕ್ಯವು ಮುಂದುವರಿದರೆ, ಹೃದಯದ ಬಳಿಕ ಅಲ್ಪ ವಿರಾಮವನ್ನು ಉಪಯೋಗಿಸಬೇಕು.

ಉದಾ: ಆ ಬೀದಿಯಲ್ಲಿ ಮನೆಯ ಸಂಖ್ಯೆಯನ್ನು ಗುರುತಿಸಿ, ಆ ಮನೆಯ ಬಳಿಗೆ ಬಂದನು.
ವಾಕ್ಯವು ಆದರೆ, ಮತ್ತೆ, ಆದ್ದರಿಂದ, ಹೀಗೆ, ಮುಂತಾದ ಶಬ್ದಗಳಿಂದ ಮೊದಲಾದರೆ ಆ ಶಬ್ದಗಳಿಂದ ಬಳಿಕ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ಅವನೇನೋ ಬುದ್ಧಿವಂತನೆ; ಆದರೆ, ಸೋಮಾರಿ.
ವಾಕ್ಯವು ವಿವರಣಾತ್ಮಕ ನುಡಿಗಟ್ಟುಗಳಿಂದ ಪ್ರಾರಂಭವಾದರೆ, ಆಗ ಅಲ್ಪವಿರಾಮವಿರಬೇಕು, ಆ ನುಡಿಗಟ್ಟುಗಳು ಮುಂದೆ. (ನ್ಯಾಯಾಲಯವು ಹೇಳಿರುವಂತೆ, ಮನುಸೂಚಿಸುವರಂತೆ ರಾಮಾಯಣದಲ್ಲಿರುವಂತೆ, ಪುರಾಣಗಳು ತಿಳಿಸುವಂತೆ - ಇತ್ಯಾದಿ ನುಡಿಗಟ್ಟುಗಳನ್ನು ನೆನೆಯಬಹುದು)

ಉದಾ: ವಕೀಲರು ವಿವರಿಸಿರುವಂತೆ, ಆತನು ಕಣ್ಣಾರೆ ನೋಡಿರಲಾರ; ಏಕೆಂದರೆ, ಅವನು ಕುರುಡ.
ವಾಕ್ಯದ ಯಾವುದಾದರೂ ಮುಖ್ಯವಾಕ್ಯಕ್ಕೆ ಸಂಬಂಧ ಹೊಂದಿರದಿದ್ದರೆ ಆಗ ಆ ಸಂಬಂಧ ಹೊಂದಿರದ ನುಡಿಗಟ್ಟಿನ ಹಿಂದೆ ಮುಂದೆ ಅಲ್ಪ ವಿರಾಮವಿರಬೇಕು.

ಉದಾ: ಶ್ರೀರಾಮರಾಯರು, ನನ್ನ ಸೋದರಮಾವ ಮಹಾ ಶ್ರೀಮಂತರು; ಊರಿನ ದೇವಸ್ಥಾನಕ್ಕೆ ಅವರೇ ಧರ್ಮದರ್ಶಿ.
ಅನೇಕ ಶಬ್ದಗಳು, ನುಡಿಗಟ್ಟುಗಳು ಒಂದೇ ವಾಕ್ಯದಲ್ಲಿ ಬಂದರೆ ಅವುಗಳಲ್ಲಿ ಕೊನೆಯದನ್ನು ಬಿಟ್ಟು ಮಿಕ್ಕವುಗಳಾದ ಮೇಲೆ ಅಲ್ಪ ವಿರಾಮವಿರಬೇಕು.

ಉದಾ: ದಯಾನಂದರು ಉದಾರಿ, ಧರ್ಮಿಷ್ಠ, ವಿದ್ಯಾವಂತ, ಅಭಿಮಾನಿ, ಸಮರ್ಥ ಮತ್ತು ವಿವೇಕಿ.
ಈ ದಿನ ಸ್ನೇಹಿತರು ಬರುತ್ತಾರೆ; ಊಟಕ್ಕೆ ಅನ್ನ, ಸಾರು, ಹಪ್ಪಳ, ಸಂಡಿಗೆ, ಒಬ್ಬಟ್ಟು ಮತ್ತು ಕಾಯ್ಗಡುಬು-- ಇಷ್ಟನ್ನೂ ತಯಾರಿಸಿರಬೇಕು. ಹೀಗೆಯೇ ದ್ವಂದ್ವ ಶಬ್ದಗಳು ಜೊತೆಯಾಗಿ ಬಂದರೂ ವಾಕ್ಯದಲ್ಲಿ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ವಿದ್ಯಾಭ್ಯಾಸದಲ್ಲಿ ಅಕ್ಷರ ಮತ್ತೆ ಕಾಗುಣಿತ, ವ್ಯಾಕರಣ ಮತ್ತು ಛಂದಸ್ಸು, ಪದ್ಯ ಮತ್ತು ಗದ್ಯ ಇವುಗಳನ್ನು ಯಾವಾಗಲೂ ಜೊತೆಯಾಗಿಯೇ ಕಲಿಯಬೇಕು.
ತಾರೀಕು, ತಿಂಗಳು, ವರ್ಷ ಇವುಗಳನ್ನು ಬರೆಯುವಾಗ ಪ್ರತಿಯೊಂದರ ಮುಂದೆ ಅಲ್ಪ ವಿರಾಮವಿರಬೇಕು.

ಉದಾ: ೧೫, ಏಪ್ರಿಲ್, ೨೦೦೫, ಶುಕ್ರವಾರ, ಈ ನನ್ನ ಮನೆಯ ಗೃಹಪ್ರವೇಶವಾಯಿತು.
ಉದ್ಧಾರಮಾಡಿದ ವಾಕ್ಯಗಳ ಹೀಗೆ ಅಲ್ಪವಿರಾಮವಿರಬೇಕು.

ಉದಾ: ವಿದ್ಯಾರ್ಥಿಗೆ ಉಪಾಧ್ಯಾಯರು ಹೇಳಿದರು, “ನೀನು ಮೂರ್ಖ; ಆದರೆ, ಸಿರಿವಂತ; ಆದ್ದರಿಂದ, ನಿನ್ನನ್ನು ಕ್ಷಮಿಸಿದ್ದೇನೆ.”
ಆಶ್ಚರ್ಯಸೂಚಕ ಉದ್ಗಾರಗಳ ಮುಂದೆ ಅಲ್ಪವಿರಾಮವಿರಬೇಕು.

ಉದಾ: ಆಹಾ, ಏನು ನೋಟ! ಏನು ಊಟ! ಅಬ್ಬಾ, ಎಂಥ ದೊಡ್ಡ ಸಭೆ!
ವ್ಯಕ್ತಿಯ ಸದರಿಗಳನ್ನು ತಿಳಿಸುವಾಗ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ಶ್ರೀ ಗೋಪಾಲರಾಯರು ಎಂ.ಎ., ಬಿ.ಎಲ್.
ಅಂಕಿಗಳನ್ನು ಬರೆಯುವಾಗ ಸಾವಿರವನ್ನು ಸೂಚಿಸುವ ಅಂಕಿಯ ಮುಂದೆ
1,117 20,636 1,81,000
ವಿಳಾಸಗಳನ್ನು ಬರೆಯುವಾಗ ಯಾವ ವಿರಾಮ ಚಿಹ್ನೆಗಳನ್ನೂ ಉಪಯೋಗಿಸಬೇಕಾಗಿಲ್ಲ.
ಶ್ರೀ ಸಂತಾನ ಗೋಪಾಲಕೃಷ್ಣರಾಯರು
೩೭, ಪಾತಾಳಮ್ಮ ಬೀದಿ
ಜಯನಗರ ೫೬೦ ೦೭೦
ಭಾಷೆಯಲ್ಲಿ ಎಲ್ಲ ಬಗೆಯ ವಾಕ್ಯಗಳನ್ನೂ ಉದಾಹರಣೆಗಳ ಮೂಲಕ ತೋರಿಸಲಾಗುವುದಿಲ್ಲ. ಈ ಮಾದರಿಗಳಿಂದ ವಾಕ್ಯಗಳಲ್ಲಿ ಓದುಗರು ಎಲ್ಲಿ ಸ್ವಲ್ಪ ನಿಲ್ಲಿಸಿ ಓದಬೇಕು ಎನ್ನಿಸುತ್ತದೆಯೋ ಅದನ್ನು ಗಮನಿಸಿ ಅಲ್ಪ ವಿರಾಮವನ್ನು ಉಪಯೋಗಿಸಬೇಕು.
* * * * *
ವಿವರಣ ಸೂಚಿ ಇದು- : (ಕೆಲವು ವೇಳೆ ಇದನ್ನು :- ಎಂದೂ ಬರೆಯುವುದುಂಟು) ಒಂದು ವಾಕ್ಯದಲ್ಲಿ : ಈ ಚಿಹ್ನೆಯು ಬರಬೇಕಾದರೆ ವಾಕ್ಯದ ವಾಚನಕ್ಕೆ ಹೆಚ್ಚಾದ ತಡೆ ಬಂದಿದೆ ಎಂದು ಅರ್ಥ. ಈ ಕಡೆಗೆ ಕಾರಣಗಳನ್ನು ವಿವರವಾಗಿ ತಿಳಿಯೋಣ.
ಒಂದು ವಾಕ್ಯದಲ್ಲಿ ವಸ್ತುಗಳ ಪಟ್ಟಿ ಅರ್ಥ ವಿವರಗಳ ಪಟ್ಟಿ ಬಂದರೆ ಆಗ : ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನನಗೆ ಈ ಮುಂದೆ ತಿಳಿಸಿರುವವುಗಳನ್ನು ಕಳುಹಿಸಿ: ನಾಲ್ಕು ಗಡಿಯಾರಗಳು, ಹದಿನೈದು ಕತ್ತರಿಗಳು, ಮೂವತ್ತು, ಚಾಕುಗಳು ಮತ್ತು ಒಂದು ಡಜನ್ ಉಳಿಗಳು.
ಇನ್ನೊಂದು ವಾಕ್ಯ.
ನೀನು ಈ ದಿನ ಮಾಡಬೇಕಾದ ಕೆಲಸಗಳು: ಬ್ಯಾಂಕಿಗೆ ಹೋಗಿ ಹಣ ತರುವುದು, ಅಂಗಡಿಯಿಂದ ಸಾಮಾನು ತರುವುದು, ಔಷಧಗಳನ್ನು ಕೊಳ್ಳುವುದು ಮತ್ತು ಅಂಚೆಯ ಪತ್ರಗಳನ್ನು ಅಂಚೆಯ ಪೆಟ್ಟಿಗೆಗೆ ಹಾಕುವುದು.
ವ್ಯವಹಾರದ ಪತ್ರಗಳಲ್ಲಿ ವ್ಯಕ್ತಿಯ, ಸಂಸ್ಥೆಯ ಹೆಸರನ್ನೂ ಬರೆದ ಬಳಿಕ
ಮಾನ್ಯ ಪ್ರಿನ್ಸಿಪಾಲರೇ:
ಸ್ನೇಹದ, ಸಾಂಸಾರಿಕವಾದ ಪತ್ರಗಳಲ್ಲಿ ಅಲ್ಪವಿರಾಮವನ್ನು ಉಪಯೋಗಿಸಬೇಕು.
ಪ್ರಿಯ ಗೆಳೆಯ,
ಪ್ರಿಯ ಗೆಳತಿ,
ಕಾಲ, ಅಂಕೆ, ಸಂದರ್ಭಗಳನ್ನು ತಿಳಿಸುವಾಗ ಭಾಗಗಳನ್ನು ಬೇರ್ಪಡಿಸಬೇಕಾದರೆ

ಉದಾ: ಗಂಟೆ ೧೦:೩೦, ಅಧ್ಯಾಯ X : ಭಾಗ ೬, ಅಲಂಕಾರ ೧೫ : ಉದಾ ೬
* * * * *
ಕಂಸ ಅಥವಾ ಆವರಣ ಚಿಹ್ನೆ ಇದು- ( )
ಕೆಲವು ವೇಳೆ ( ) ಕಂಸಗಳ ಬದಲು ಹೀಗೆ ಕಿರು ಅಡ್ಡ ಗೀಟುಗಳನ್ನು ಉಪಯೋಗಿಸುತ್ತಾರೆ. ಇಂಗ್ಲಿಷಿನಲ್ಲೂ parentheses ಎಂದು ಕರೆಯುವ ಇದನ್ನು ವಾಕ್ಯಗಳಲ್ಲಿ ವ್ಯಾಕರಣದ ಬಾಂಧವ್ಯವಿಲ್ಲದ ಭಾಗಗಳನ್ನು ಗುರುತಿಸಲು ಉಪಯೋಗಿಸುತ್ತಾರೆ.

ಉದಾ: ಶಾಂತಿ (ನನ್ನ ತಂಗಿಯ ಮಗಳು) ಈಗ ಅಮೇರಿಕದಲ್ಲಿ ನೆಲೆಸಿದ್ದಾಳೆ.
ಮನೆಯ ಮುಂದೆ ಹೀಗೆ ಬರೆದಿದೆ: ಸರ್ವೇಜನಾಃ ಸುಖಿನೋಭವಂತು (ಎಲ್ಲರೂ ಸುಖಿಗಳಾಗಿರಲಿ).
ಮಾನವರು ಗರ್ವಿಷ್ಠರಾದರೆ - ನಾವೆಲ್ಲರೂ ಗರ್ವಿಷ್ಠರೆ - ಸ್ನೇಹವು ವರ್ಧಿಸಲಾರದು.
ಇಂಥ ಸಂದರ್ಭಗಳಲ್ಲಿ ಬೇರೆಯ ವಾಕ್ಯಗಳನ್ನು ಬರೆಯುವುದೇ ಲೇಸು. ಅರ್ಥ ಸರಳವಾಗಿ ತಿಳಿಯಬರುತ್ತದೆ.
* * * * *
ಪ್ರಶ್ನಾರ್ಥಕ ಚಿಹ್ನೆ ಇದು- ?
ಎಲ್ಲ ಪ್ರಶ್ನೆಗಳ ಕೊನೆಯಲ್ಲಿ ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನಿನ್ನ ಹೆಸರೇನು?
ಆ ಪೆಟ್ಟಿಗೆಯಲ್ಲಿ ಏನಿದೆ?
ನಿಮ್ಮ ತಂದೆ ಊರಿನಲ್ಲಿದ್ದಾರೆಯೆ?
ಇಂದು ಶಾಲೆಯನ್ನು ಏಕೆ ಮುಚ್ಚಿದ್ದಾರೆ?
ವಾಕ್ಯದಲ್ಲಿ ಅನೇಕ ಪ್ರಶ್ನೆಗಳಿದ್ದರೆ ಎಲ್ಲ ಪ್ರಶ್ನೆಗಳಿಗೂ ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನಿನ್ನ ಗೆಳೆಯ ಆರೋಗ್ಯವೆ? ಊರಿನಲ್ಲಿ ಹಾಗೆಯೇ ಶಾಲೆಗೆ ಹೋಗುತ್ತಿದ್ದಾನೆಯೇ?
* * * * *
ಆಶ್ಚರ್ಯಸೂಚಕ ಚಿಹ್ನೆ ಇದು- !
ಇದನ್ನು ಆಶ್ಚರ್ಯ, ಭಾವುಕತೆ, ಅನುಕಂಪ, ಆಜ್ಞೆ, ಉದ್ವೇಗ ಮುಂತಾದ ಭಾವನೆಗಳನ್ನು ತಿಳಿಸುವ ಉದ್ಗಾರಗಳ ಮುಂದೆ ಉಪಯೋಗಿಸಬೇಕು.

ಉದಾ:
ಆ ಹಳದಿ ಹೂಗಳ ಮರವನ್ನು ನೋಡು!
ನಿನ್ನ ವೇಷವನ್ನು ನೋಡುವುದು ಕಷ್ಟ!
ಓ! ಮರ ಉರುಳಿಹೋಯಿತು.
ರಸೀತಿಯನ್ನು ಇಂದೇ ಹಿಂದಿರುಗಿಸು!
ಅವನ ಮಾತನ್ನು ನಂಬಬಹುದೇ!
ಆ ಮಾತಿನ ಅರ್ಥ ತಿಳಿಯಿತೆ!
* * * * *
ಉದ್ಧಾರ ಸೂಚಕ ಚಿಹ್ನೆ ಇದು- “ ” ಅಥವಾ ‘ ’.
ಮತ್ತೊಬ್ಬರು ಆಡಿದ ಮಾತುಗಳೆಂದು ತಿಳಿಸಬೇಕಾದಾಗ ಆ ಮಾತುಗಳನ್ನು ಉದ್ಧಾರ ಚಿಹ್ನೆಗಳ ಒಳಗೆ ಬರೆಯಬೇಕು. (ಈ ಚಿಹ್ನೆಯನ್ನು 'ಬಕಗ್ರೀವ' ಎಂದು ಕೆಲವರು ಕರೆಯುತ್ತಾರೆ.)

ಉದಾ: ಸಚಿವರು ಹೇಳಿದರು: “ಆಗಲಿ, ನಿಮ್ಮ ಶಾಲೆಯ ಕಟ್ಟಡಕ್ಕೆ ತಗಲುವ ವೆಚ್ಚದಲ್ಲಿ ಅರ್ಧವನ್ನು ಊರಿನವರು ಕೂಡಿಸುವುದಾದರೆ ನಾನು ಸರಕಾರದಿಂದ ಮಿಕ್ಕ ಅರ್ಧವನ್ನು ಕೊಡಿಸುತ್ತೇನೆ.”
ಈ ವಾಕ್ಯದ ಮೊದಲ ಭಾಗವನ್ನು ಕೊನೆಯಲ್ಲಿ --ಎಂದು ಸಚಿವರು ಹೇಳಿದರು, ಎಂದು ಬೇಕಾದರೆ ಬರೆಯಬಹುದು.
ಗ್ರಂಥಗಳ ಹೆಸರು, ಕವನಗಳ ಹೆಸರು, ಅಧ್ಯಾಯಗಳ ಹೆಸರು ಮುಂತಾದುವನ್ನು ಈ ಬಿಟ್ಟವುಗಳಲ್ಲಿ ಸೂಚಿಸಬಹುದು. “ಮಂದ್ರ” ಎಂಬ ಕಾದಂಬರಿ. “ಕಲ್ಕಿ” ಎಂಬ ಕವನ. “ವಿಗಡವಿಕ್ರಮರಾಯ” ಎಂಬ ನಾಟಕ.
ಗ್ರಾಮ್ಯ ಶಬ್ದಗಳನ್ನು ಈ ಚಿಹ್ನೆಯಿಂದ ತೋರಿಸಬಹುದು.

ಉದಾ: ‘ಸೂಳೆಮಗನೆ’, ಎಂದು ಬೈದವನನ್ನು ‘ಸಂಭಾವ್ಯ’, ಎಂದು ಕರೆಯಬಹುದೆ?
ದೀರ್ಘವಾದ ವಾಕ್ಯಗಳನ್ನು ತಿಳಿಸಬೇಕಾದಾಗ ಅವುಗಳನ್ನು ; ಚಿಹ್ನೆಯಿಂದ ಗುರುತಿಸುವುದು ಒಳ್ಳೆಯದು.
ಈ ಉದಾರಸೂಚಕಗಳ ನಡುವೆ ಒಂದು ಸಂಪೂರ್ಣ ವಾಕ್ಯ ಬಂದರೆ ಆ ವಾಕ್ಯಕ್ಕೆ ಸಂಬಂಧಿಸಿದಂತೆ ಅದರ ಅಂತ್ಯದಲ್ಲಿ ಬರುವ ವಿರಾಮ ಚಿಹ್ನೆಗಳನ್ನು ಬರೆದ ಮೇಲೆ ಉದ್ಧಾರಕ ಚಿಹ್ನೆಯನ್ನು ಹಾಕಬೇಕು.
ಉದಾ:
“ಈ ಶಬ್ದವು ಆ ಗ್ರಂಥದಲ್ಲಿ ಪ್ರಯೋಗವಾಗಿಲ್ಲ.”
“ನೀನೇನು ಮಹಾಪುರುಷನೋ!”
“ನಿನ್ನ ಮದುವೆ ಯಾವಾಗ?”
ಮೇಲೆ ತಿಳಿಸಿದ ಚಿಹ್ನೆಗಳು ತುಂಬ ಪ್ರಚಾರದಲ್ಲಿ ಇರುವ ಚಿಹ್ನೆಗಳು. ಆದರೆ, ಇವಲ್ಲದೆ ಗಣಿತಶಾಸ್ತ್ರದ ಕೆಲವು ಚಿಹ್ನೆಗಳನ್ನು ಭಾಷೆಯ ಸಂಬಂಧದಲ್ಲಿಯೇ ಉಪಯೋಗಿಸುತ್ತಾರೆ. ಅವು ವಿರಾಮ ಚಿಹ್ನೆಗಳಲ್ಲ. ಅವುಗಳಿಗೆ ಬೇರೆ ಅರ್ಥಗಳಿವೆ. ಅವುಗಳ ವಿವರಗಳು ಮುಂದೆ ಇವೆ:
* * * * *
+ ಇದು plus ಚಿಹ್ನೆ.
ಕನ್ನಡದಲ್ಲಿ ವ್ಯಾಕರಣದ ಪಾಠಮಾಡುವಾಗ ರಾಮ + ಅನ್ನು = ರಾಮನನ್ನು ಎಂದು ಹೇಳುತ್ತಾರೆ. ಈ ವಾಕ್ಯದಲ್ಲಿ ಒಂದು plus ಚಿಹ್ನೆ, ಇನ್ನೊಂದು equals ಚಿಹ್ನೆ. ಅದಕ್ಕೆ ಕನ್ನಡದಲ್ಲಿ ಸಾಮಾನ್ಯವಾಗಿ ಅಧ್ಯಾಪಕರು plus ಮತ್ತು equals ಎಂದೇ ಉಪಯೋಗಿಸುತ್ತಾರೆ. + ಇದು ಸಂಕಲನ ಚಿಹ್ನೆ. ವ್ಯಾಕರಣ ಪಾಠ ಮಾಡುವಾಗ ‘ಜೊತೆಗೆ’ ಎಂಬುದಾಗಿ ಉಪಯೋಗಿಸಬಹುದು.
ರಾಮ ‘ಜೊತೆಗೆ’ ಅನ್ನು ಎಂಬುದು ರಾಮನನ್ನು ಎಂದಾಗುತ್ತದೆ. ಈ ವಾಕ್ಯ ದೊಡ್ಡದಾಗುವುದರಿಂದ ಅಧ್ಯಾಪಕರು ರಾಮ plus ಅದು equals ರಾಮನನ್ನು ಎಂದೇ ಹೇಳುತ್ತಾರೆ. ಆದ್ದರಿಂದ +, = ಈ ಚಿಹ್ನೆಗಳನ್ನು ನಾವು ಉಪಯೋಗಿಸಬೇಕು.
* * * * *
<, > ಎಂಬ ಎರಡು ಬೇರೆ ಚಿಹ್ನೆಗಳಿವೆ. ಇವುಗಳನ್ನು ಉಪಯೋಗಿಸುವ ಸಂದರ್ಭವನ್ನು ನೋಡಿ:
ಪರ್ವ > ಹಬ್ಬ
ಸ್ವರ್ಗ > ಸಗ್ಗ
ಬೇಹಾರ < ವ್ಯಾಪಾರ
ಬೇಸಾಯ < ವ್ಯವಸಾಯ
ಹೀಗೆ ಬರೆದರೆ ಹಬ್ಬ ಎಂಬ ಶಬ್ದ ಪರ್ವ ಶಬ್ದದಿಂದ ಬಂದಿದೆ ಎಂದು ಅರ್ಥ. ಮೊದಲನೆಯ ಶಬ್ದ ಪರ್ವ-ಸಂಸ್ಕೃತ. ಅದರಿಂದ ಬಂದ ಹಬ್ಬ ತದ್ಭವ. ವ್ಯಾಪಾರ ಎನ್ನುವ ಶಬ್ದ ಬೇಹಾರ ಎಂದು ಪಡೆಯುತ್ತದೆ. ಆಗ ನಾವು ಬೇಹಾರ < ವ್ಯಾಪಾರ ಎಂದು ತಿಳಿಸಬಹುದು. ಬೇಸಾಯ < ವ್ಯವಸಾಯ ಎಂದು ಬರೆಯಬಹುದು. ಈ ಚಿಹ್ನೆ > ಇದು ಯಾವ ಶಬ್ದದಿಂದ ಬಂದಿದೆ ಎಂದೂ; ಈ ಚಿಹ್ನೆ < ಯಾವ ಶಬ್ದ ಮೂಲ ಎಂದು ಅರ್ಥ ಮಾಡಿಕೊಳ್ಳಬೇಕು.
ನಿಘಂಟುಗಳಿಂದ ಶಬ್ದದ ವ್ಯುತ್ಪತ್ತಿಯನ್ನು ತಿಳಿಸುವಾಗ ಈ ಚಿಹ್ನೆಗಳನ್ನು ಉಪಯೋಗಿಸುತ್ತಾರೆ ಎಂದು ತಿಳಿದಿದ್ದಾರೆ ಒಳ್ಳೆಯದು.

ಕೃದಂತ-ತದ್ಧಿತಾಂತ

ಕೃದಂತ-ತದ್ಧಿತಾಂತ

ಕೃದಂತ (ಕೃನ್ನಾಮ)


ನಾಮಪ್ರಕೃತಿಗಳು ನಾಲ್ಕು ಪ್ರಕಾರಗಳೆಂದು ತಿಳಿದಿರುವಿರಿ.
(೧) ಸಹಜನಾಮಪ್ರಕೃತಿಗಳು
(೨) ಕೃದಂತಗಳು
(೩) ತದ್ಧಿತಾಂತಗಳು
(೪) ಸಮಾಸಗಳು – ಎಂದೇ ಆ ನಾಲ್ಕುವಿಧವಾದ ನಾಮಪ್ರಕೃತಿಗಳು.
ಸಹಜನಾಮಪ್ರಕೃತಿಗಳೆಂದರೇನು? ಅವು ನಾಮವಿಭಕ್ತಿಪ್ರತ್ಯಯ ಸೇರಿ, ನಾಮಪದಗಳಾಗು ವಿಕೆ, ಅವುಗಳ ಲಿಂಗ, ವಚನಾದಿಗಳ ಬಗೆಗೂ, ಸಮಾಸವೆಂದರೇನು? ಅವುಗಳ ಪ್ರಕಾರಗಳ ಬಗೆಗೂ ಹಿಂದಿನ ಪ್ರಕರಣಗಳಲ್ಲಿ ತಿಳಿದಿದ್ದೀರಿ.  ಈಗ ಕೃದಂತ, ತದ್ಧಿತಾಂತಗಳೆಂದರೇನೆಂಬ ಬಗೆಗೆ ತಿಳಿಯಿರಿ.
ಮೊದಲು ಕೃದಂತಪ್ರಕರಣದಲ್ಲಿ ಕೃದಂತಗಳ ಬಗೆಗೂ, ಅನಂತರ ತದ್ಧಿತಾಂತ ಪ್ರಕರಣದಲ್ಲಿ ತದ್ಧಿತಾಂತಗಳ ಬಗೆಗೂ ವಿವರಗಳನ್ನು ನೋಡಿರಿ.
ಧಾತು - ಕ್ರಿಯಾಪದ - ಕೃದಂತ ನಾಮಪ್ರಕೃತಿ - ಕೃದಂತ ನಾಮಪದ
(೧) ಮಾಡು - ಮಾಡಿದನು - ಮಾಡಿದ - ಮಾಡಿದವನು, ಮಾಡಿದವನನ್ನು, ಮಾಡಿದವನಿಂದ -ಇತ್ಯಾದಿ
(೨) ಹೋಗು - ಹೋಗುವನು - ಹೋಗುವ - ಹೋಗುವವನು, ಹೋಗುವವನನ್ನು, ಹೋಗುವವನಿಂದ -ಇತ್ಯಾದಿ
(೩) ತಿನ್ನು - ತಿನ್ನುತ್ತಾನೆ - ತಿನ್ನುವ - ತಿನ್ನುವವನು, ತಿನ್ನುವವನನ್ನು, ತಿನ್ನುವವನಿಗೆ, ತಿನ್ನುವವನಲ್ಲಿ -ಇತ್ಯಾದಿ
(೪) ಬರೆ - ಬರೆಯುವನು - ಬರೆಯುವ - ಬರೆಯುವವನು, ಬರೆಯುವವನನ್ನು -ಇತ್ಯಾದಿ

ಮೇಲಿನ ನಾಲ್ಕು ಉದಾಹರಣೆಗಳಲ್ಲಿ-ಮಾಡು, ಹೋಗು, ತಿನ್ನು, ಬರೆ-ಈ ನಾಲ್ಕು ಧಾತುಗಳು-ಮಾಡಿದನು, ಹೋಗುವನು, ತಿನ್ನುತ್ತಾನೆ, ಬರೆಯುವನು ಈ ನಾಲ್ಕು ರೀತಿಯ ಕ್ರಿಯಾಪದಗಳಾಗಿವೆ.  ಇವು ಕ್ರಿಯಾಪದಗಳಾಗುವ ರೀತಿಯನ್ನು ಹಿಂದಿನ ಕ್ರಿಯಾಪದ ಪ್ರಕರಣದಲ್ಲಿ ತಿಳಿದಿದ್ದೀರಿ.  ಅವುಗಳ ಮುಂದಿರುವ ಮಾಡಿದ, ಹೋಗುವ, ತಿನ್ನುವ, ಬರೆಯುವ- ಇವು ಕ್ರಮವಾಗಿ – ಮಾಡು+ದ+ಅ=ಮಾಡಿದ, ಹೋಗು+ವ+ಅ=ಹೋಗುವ, ತಿನ್ನು+ವ+ಅ=ತಿನ್ನುವ, ಬರೆ+ಉವ+ಅ=ಬರೆಯುವ – ಹೀಗಾಗಿವೆ.  ಇವು ಎಲ್ಲಾ ಕಡೆಗೂ ಕೊನೆಯಲ್ಲಿ ಅ ಎಂಬ ಪ್ರತ್ಯಯವನ್ನೂ ಮಧ್ಯದಲ್ಲಿ ದ, ವ, ಉವ ಇತ್ಯಾದಿ ಪ್ರತ್ಯಯಗಳನ್ನೂ ಹೊಂದಿವೆ.  ಧಾತುಗಳು ಹೀಗೆ – ಮಾಡಿದ, ಹೋಗುವ, ತಿನ್ನುವ, ಬರೆಯುವ – ಇತ್ಯಾದಿ ರೂಪ ಪಡೆದ ಮೇಲೆ ಧಾತುವಿನಿಂದ ಹುಟ್ಟಿದ ನಾಮಪ್ರಕೃತಿಗಳೆನಿಸಿದವು.  ಅಥವಾ ಕೃದಂತನಾಮ ಪ್ರಕೃತಿಗಳೆನಿಸಿದವು.  ಇನ್ನು ಇವುಗಳ ಮೇಲೆ-ಉ, ಅನ್ನು, ಇಂದ, ಗೆ, ಇಗೆ, ಕ್ಕೆ, ಅಕ್ಕೆ, ದೆಸೆಯಿಂದ, ಅ, ಅಲ್ಲಿ – ಇತ್ಯಾದಿ ಸಪ್ತ ವಿಧವಾದ ನಾಮವಿಭಕ್ತಿಪ್ರತ್ಯಯಗಳೂ ಸೇರಿ ಕೃದಂತನಾಮಪದಗಳೆನಿಸುತ್ತವೆ.  ಇಂಥವನ್ನೇ ನಾವು ಸಾಧಿತ ನಾಮಗಳು ಎನ್ನುತ್ತೇವೆ.  ಮೇಲಿನ ಉದಾಹರಣೆಗಳಲ್ಲಿ ಕೊನೆಯಲ್ಲಿ ಬಂದಿರುವ ಅ ಎಂಬುದೇ ಕೃತ್‌ಪ್ರತ್ಯಯ.  ಇಂಥ ಕೃತ್‌ಪ್ರತ್ಯಯವನ್ನು ಅಂತದಲ್ಲಿ ಉಳ್ಳದ್ದೇ ಕೃದಂತ.  ಮಧ್ಯದಲ್ಲಿ ಬಂದಿರುವ ದ, ವ, ಉವಗಳು ಕಾಲವನ್ನು ಸೂಚಿಸುವ ಪ್ರತ್ಯಯಗಳು.  ಇವಕ್ಕೆ ಕಾಲಸೂಚಕ ಪ್ರತ್ಯಯಗಳೆನ್ನುವರು.  ಹಾಗಾದರೆ ಕೃದಂತವೆಂದರೇನು? ಎಂಬ ಬಗೆಗೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

(೮೬) ಕೃದಂತ:- ಧಾತುಗಳಿಗೆ ಕೃತ್ಪ್ರತ್ಯಯಗಳು ಸೇರಿ ಕೃದಂತಗಳೆನಿಸುವುವು. ಇವಕ್ಕೆ ಕೃನ್ನಾಮಗಳೆಂದೂ ಹೆಸರು.
ಕೃದಂತಗಳು - ಕೃದಂತನಾಮ (ಕೃನ್ನಾಮ), ಕೃದಂತ ಭಾವನಾಮ, ಕೃದಂತಾವ್ಯಯ ಗಳೆಂದು ಮೂರು ವಿಧ.
ಉದಾಹರಣೆಗೆ:-
ಕೃದಂತನಾಮ ಕೃದಂತಭಾವನಾಮ ಕೃದಂತಾವ್ಯಯ
ಮಾಡಿದ ಮಾಟ ಮಾಡಿ
ತಿನ್ನುವ ತಿನ್ನುವಿಕೆ ತಿಂದು
ನಡೆಯುವ ನಡೆತ ನಡೆಯುತ್ತ
ಹೋಗದ ಹೋಗುವಿಕೆ ಹೋಗಲು

() ಕೃದಂತ ನಾಮಗಳು
(೮೭) ಕೃದಂತನಾಮಗಳು:- ಧಾತುಗಳಿಗೆ ಕರ್ತೃ ಮೊದಲಾದ ಅರ್ಥಗಳಲ್ಲಿ ಸಾಮಾನ್ಯವಾಗಿ ಎಂಬ ಕೃತ್ಪ್ರತ್ಯಯವು ಬರುವುದು. ಆಗ ಧಾತುವಿಗೂ ಕೃತ್ಪ್ರತ್ಯಯಕ್ಕೂ ಮಧ್ಯದಲ್ಲಿ ವರ್ತಮಾನ, ಭವಿಷ್ಯತ್ಕಾಲಗಳಲ್ಲಿ ಉವ ಎಂಬ ಕಾಲಸೂಚಕ ಪ್ರತ್ಯಯಗಳೂ, ಭೂತಕಾಲದಲ್ಲಿ ಎಂಬ ಕಾಲಸೂಚಕ ಪ್ರತ್ಯಯವೂ, ನಿಷೇಧಾರ್ಥದಲ್ಲಿ ಅದ ಎಂಬುದೂ ಆಗಮಗಳಾಗುತ್ತವೆ. ಇವನ್ನೇ ಕೃದಂತನಾಮಗಳೆ ನ್ನುವರು.
ಇವು ನಾಮಪ್ರಕೃತಿಗಳೆನಿಸಿದ್ದರಿಂದ ಇವುಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರಿ ನಾಮಪದಗಳಾಗುವುವು.
ಉದಾಹರಣೆಗೆ:-
(i) ವರ್ತಮಾನ ಕೃದಂತಕ್ಕೆ-
ಮಾಡು + + = ಮಾಡುವ
ತಿನ್ನು + + = ತಿನ್ನುವ
ಬರೆ + ಉವ + = ಬರೆಯುವ

ಇದರಂತೆ-ಹೋಗುವ, ಬರುವ, ತಿನ್ನುವ, ನೋಡುವ, ಓಡುವ, ನಡೆಯುವ, ಕಾಣುವ, ಕೊಡುವ[1].
(ii) ಭೂತ ಕೃದಂತಕ್ಕೆ-
ಮಾಡು + + = ಮಾಡಿದ
ತಿನ್ನು + + = ತಿಂದ
ಹೋಗು + + = ಹೋದ

ಇದರಂತೆ ಬರೆದ, ನೋಡಿದ, ನಡೆದ, ಕಂಡ, ಕರೆದ-ಇತ್ಯಾದಿ.
(iii) ನಿಷೇಧ ಕೃದಂತಕ್ಕೆ-
ಮಾಡು + ಅದ + = ಮಾಡದ
ತಿನ್ನು + ಅದ + = ತಿನ್ನದ

ಇದರಂತೆ ಹೋಗದ, ಬರದ, ನೋಡದ, ನುಡಿಯದ, ಬರೆಯದ-ಇತ್ಯಾದಿ.
ಮೇಲೆ ಹೇಳಿದ ವರ್ತಮಾನ, ಭವಿಷ್ಯತ್, ಭೂತ, ನಿಷೇಧಾರ್ಥ ಕೃದಂತನಾಮಗಳೆಲ್ಲ ಈಗ ನಾಮವಿಭಕ್ತಿಪ್ರತ್ಯಯ ಹತ್ತಲು ಸಿದ್ಧವಾದವು. ಇವುಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರುವಾಗ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲಿ ಆಗುವ ವ್ಯಾಕರಣ ವಿಶೇಷಗಳನ್ನು ಈ ಕೆಳಗೆ ನೋಡಿರಿ.
(i) ಪುಲ್ಲಿಂಗದಲ್ಲಿ-
ಕೃದಂತ ನಾಮಪದಗಳು
ಮಾಡುವ ಮಾಡುವ + ಅವನು + = ಮಾಡುವವನು

ಮಾಡುವ + ಅವರು + = ಮಾಡುವವರು

ಮಾಡುವ + ಅವನು + ಅನ್ನು = ಮಾಡುವವನನ್ನು

ಮಾಡಿದ + ಅವನು + = ಮಾಡಿದವನು (ಏ.ವ.)

ಮಾಡಿದ + ಅವರು + = ಮಾಡಿದವರು (ಬ.ವ.)

ಮಾಡಿದ + ಅವರು + ಇಂದ = ಮಾಡಿದವರಿಂದ (ಬ.ವ.)

ಮಾಡದ + ಅವನು + = ಮಾಡದವನು (ಏ.ವ.)

ಮಾಡದ + ಅವನು + ಅಲ್ಲಿ = ಮಾಡದವನಲ್ಲಿ (ಏ.ವ.)

ಮಾಡದ + ಅವರು + ಅಲ್ಲಿ = ಮಾಡದವರಲ್ಲಿ (ಬ.ವ.)









(ii) ಸ್ತ್ರೀಲಿಂಗದಲ್ಲಿ-
ಕೃದಂತ ನಾಮಪದಗಳು
ಬರೆದ ಬರೆದ + ಅವಳು + = ಬರೆದವಳು (ಏ.ವ.)

ಬರೆದ + ಅವಳು + ಅನ್ನು = ಬರೆದವಳನ್ನು (ಏ.ವ.)

ಬರೆದ + ಅವರು + ಇಂದ = ಬರೆದವರಿಂದ (ಬ.ವ.)

ಬರೆದ + ಅವಳು + ಇಗೆ = ಬರೆದವಳಿಗೆ (ಏ.ವ.)

ಬರೆದ + ಅವರು + ಇಗೆ = ಬರೆದವರಿಗೆ (ಬ.ವ.)

ಬರೆದ + ಅವಳು + ಅಲ್ಲಿ = ಬರೆದವಳಲ್ಲಿ (ಏ.ವ.)

ಬರೆದ + ಅವಳು + = ಬರೆದವಳೇ (ಏ.ವ.)

ತಿನ್ನದ + ಅವಳು + = ತಿನ್ನದವಳು

ತಿನ್ನದ + ಅವರು + ಅನ್ನು = ತಿನ್ನದವರನ್ನು

ತಿನ್ನದ + ಅವಳು + ಇಂದ = ತಿನ್ನದವಳಿಂದ

(iii) ನಪುಂಸಕಲಿಂಗದಲ್ಲಿ-
ಕೃದಂತ ನಾಮಪದಗಳು
ಹೋಗುವ ಹೋಗುವ + ಉದು + = ಹೋಗುವುದು


ಹೋಗುವ + ಉದು + ಅನ್ನು = ಹೋಗುವುದನ್ನು


ಹೋಗುವ + ಉವು + ಅನ್ನು = ಹೋಗುವುವನ್ನು


ಹೋಗುವ + ಉದು + ಅರು + ಇಂದ = ಹೋಗುವುದರಿಂದ

ಹೋಗುವ + ಉದು + ಅಕ್ಕೆ = ಹೋಗುವುದಕ್ಕೆ


ಹೋಗುವ + ಉದು + ಅರು + ಅಲ್ಲಿ = ಹೋಗುವುದರಲ್ಲಿ

ಹೋಗುವ + ಉವು + ಗಳು + ಅಲ್ಲಿ = ಹೋಗುವುವುಗಳಲ್ಲಿ
(ಅವು)

ಹೋಗುವವುಗಳಲ್ಲಿ

ಹೋದ + ಉದು + ಅನ್ನು = ಹೋದುದನ್ನು


ಹೋದ + ಉವು + ಗಳು + ಇಂದ = ಹೋದುವುಗಳಿಂದ
- ಇತ್ಯಾದಿ
ಮೇಲೆ ಹೇಳಿದ ಉದಾಹರಣೆಗಳನ್ನೆಲ್ಲ ನೋಡಿದರೆ ಕೃದಂತಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರುವಾಗ ಕೃದಂತಕ್ಕೂ, ನಾಮವಿಭಕ್ತಿಪ್ರತ್ಯಯಕ್ಕೂ ಮಧ್ಯದಲ್ಲಿ ಪುಲ್ಲಿಂಗ ಏಕವಚನದಲ್ಲಿ ಅವನು ಎಂಬುದೂ, ಬಹುವಚನದಲ್ಲಿ ಅವರು ಎಂಬ ಸರ್ವನಾಮಗಳೂ ಆಗಮಗಳಾಗಿ ಬರುತ್ತವೆ.
ಸ್ತ್ರೀಲಿಂಗದ ಏಕವಚನದಲ್ಲಿ ಅವಳು ಬಹುವಚನದಲ್ಲಿ ಅವರು ಎಂಬ ಸರ್ವನಾಮ ಬರುತ್ತವೆ.
ನಪುಂಸಕಲಿಂಗದ ಏಕವಚನದಲ್ಲಿ ಉದು (ಅದು) ಮತ್ತು ಬಹುವಚನದಲ್ಲಿ ಉವು (ಅವು) ಎಂಬ ಸರ್ವನಾಮಗಳು ಬರುತ್ತವೆ[2].
() ಇದುವರೆಗೆ ತಿಳಿಸಿದ ಕೃದಂತನಾಮಗಳು ನಾಮಪದಗಳನ್ನು ವಿಶೇಷಿಸುತ್ತವೆ.
(i) ವರ್ತಮಾನಭವಿಷ್ಯತ್ ಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ-
ಮಾಡುವ ಕೆಲಸ
ಹಾಡುವ ಪದ
ನೋಡುವ ಕಾರ‍್ಯ
ತಿನ್ನುವ ಪದಾರ್ಥ – ಇತ್ಯಾದಿ.

(ii) ಭೂತಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ-
ಮಾಡಿದ ಕೆಲಸ
ಹಾಡಿದ ಪದ
ನೋಡಿದ ಕಾರ‍್ಯ
ತಿಂದ ಪದಾರ್ಥ – ಇತ್ಯಾದಿ.

(iii) ನಿಷೇಧಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ-
ಮಾಡದ ಕೆಲಸ
ಹಾಡದ ಪದ
ನೋಡದ ಕಾರ‍್ಯ
ತಿನ್ನದ ಪದಾರ್ಥ – ಇತ್ಯಾದಿ.

() ಕೃದಂತಭಾವನಾಮಗಳು (ಭಾವಕೃದಂತ)
(i) ಆತನ ಓಟ ಚೆನ್ನಾಗಿತ್ತು
(ii) ಅದರ ನೆನಪು ಇಲ್ಲ
(iii) ಗಡಿಗೆಯ ಮಾಟ ಸೊಗಸು
(iv) ಇದರ ಕೊರೆತ ಹಸನಾಗಿದೆ
ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಓಟ, ಮಾಟ, ನೆನಪು, ಕೊರೆತ-ಈ ಶಬ್ದಗಳನ್ನು ಗಮನಿಸಿರಿ.
ಓಡುವ ರೀತಿಯೇ ಓಟ – ಓಡು + .
ಮಾಡಿರುವ ರೀತಿಯೇ ಮಾಟ – ಮಾಡು + .
ನೆನೆಯುವ ರೀತಿಯೇ ನೆನಪು – ನೆನೆ + ಅಪು.
ಕೊರೆದಿರುವಿಕೆಯೇ ಕೊರೆತ – ಕೊರೆ +.
ಇವೆಲ್ಲ ಕ್ರಿಯೆಯ ಭಾವವನ್ನು ತಿಳಿಸುತ್ತದೆ.  ಆದುದರಿಂದ ಇವನ್ನು ಕೃದಂತ ಭಾವನಾಮಗಳು ಅಥವಾ ಭಾವಕೃದಂತಗಳು ಎನ್ನುತ್ತಾರೆ.

(೮೮) ಕೃದಂತಭಾವನಾಮಗಳು-ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿ ಕೃದಂತಭಾವನಾಮಗಳೆನಿಸುವುವು.
ಉದಾಹರಣೆಗೆ:
ಧಾತು + ಭಾವಾರ್ಥದಲ್ಲಿ ಕೃತ್ಪ್ರತ್ಯಯ = ಕೃದಂತ ಭಾವನಾಮ - ಇದರಂತೆ ಇರುವ  ಇತರ ರೂಪಗಳು
ಮಾಡು + ವುದು[3] = ಮಾಡುವುದು - ನೋಡುವುದು, ತಿನ್ನುವುದು
ತಿನ್ನು + ಇಕೆ = ತಿನ್ನುವಿಕೆ - ನೋಡುವಿಕೆ, ಬರೆಯುವಿಕೆ, ಕೊರೆಯುವಿಕೆ
ಅಂಜು + ಇಕೆ = ಅಂಜಿಕೆ - ನಂಬಿಕೆ, ಹೊಗಳಿಕೆ,  ತೆಗಳಿಕೆ, ಆಳಿಕೆ,  ನಾಚಿಕೆ, ಬಳಲಿಕೆ, ಕಲಿಕೆ
ಉಡು + ಇಗೆ = ಉಡಿಗೆ - ತೊಡಿಗೆ, ಅಡಿಗೆ,  ಮುತ್ತಿಗೆ, ಹಾಸಿಗೆ, ಏಳಿಗೆ
ಉಡು + ಗೆ = ಉಡುಗೆ - ತೊಡುಗೆ, ನಂಬುಗೆ, ಹೊಲಿಗೆ, ಏಳ್ಗೆ
ಬರು + ಅವು = ಬರವು - ಸೆಳವು, ಮರವು, ಒಲವು, ಕಳವು, ತೆರವು
ಸಾ + ವು = ಸಾವು - ನೋವು, ಮೇವು,  ದಣಿವು, ಅರಿವು
ಕೊರೆ + = ಕೊರೆತ - ಸೆಳೆತ, ಕಟೆತ, ಇರಿತ,  ತಿವಿತ, ಕುಣಿತ, ಒಗೆತ
ಓಡು + = ಓಟ - ಮಾಟ, ಕೂಟ, ನೋಟ, ಆಟ, ಕಾಟ
ನಡೆ + ವಳಿ = ನಡೆವಳಿ - ನುಡಿವಳಿ, ಸಲುವಳಿ, ಹಿಡಿವಳಿ, ಕೂಡುವಳಿ, ಮುಗಿವಳಿ
ಕಾ + ಪು = ಕಾಪು - ಮೇಪು, ತೀರ್ಪು, ತಿಳಿಪು, ಹೊಳೆಪು, ನೆನೆಪು,
ಹೊಳೆ + ಅಪು = ಹೊಳಪು - ನೆನಪು
ಮುಗ್ಗು + ಅಲು = ಮುಗ್ಗಲು - ಒಣಗಲು, ಜಾರಲು,






ಬಿಕ್ಕಲು, ಒಕ್ಕಲು
ನಗು + = ನಗೆ - ಹೊರೆ
ಬೆರೆ + ಅಕೆ = ಬೆರಕೆ - ಮೊಳಕೆ
ಬೆಳೆ + ವಳಿಕೆ = ಬೆಳೆವಳಿಕೆ - ತಿಳಿವಳಿಕೆ, ನಡೆವಳಿಕೆ
ಮೆರೆ + ವಣಿಗೆ = ಮೆರೆವಣಿಗೆ - ಬೆಳವಣಿಗೆ, ಬರೆವಣಿಗೆ
ಅಳೆ + ಅತೆ = ಅಳತೆ - ನಡತೆ
ಮುಳಿ + ಸು = ಮುಳಿಸು - ತೊಳೆಸು, ಮುನಿಸು
ಮುರಿ + ಅಕು = ಮುರಕು - ಹರಕು
ನಡುಗು + ಉಕ = ನಡುಕ - ಮುರುಕ
ಒಪ್ಪು + ಇತ = ಒಪ್ಪಿತ - ತಪ್ಪಿತ

(೧) ಕೆಲವು ಧಾತುಗಳು ಅಲ್ಪಸ್ವಲ್ಪ ವ್ಯತ್ಯಾಸದಿಂದ ಭಾವಕೃದಂತ (ಭಾವನಾಮ)ಗಳಾಗುವುವು.
ಧಾತು ಭಾವಕೃದಂತ ನಾಮಪದ
ಕಿಡು ಕೇಡು ಕೇಡನ್ನು, ಕೇಡಿನಿಂದ.
ಬಿಡು ಬೀಡು ಬೀಡನ್ನು, ಬೀಡಿನಿಂದ, ಬೀಡಿಗೆ.
ಪಡು ಪಾಡು ಪಾಡನ್ನು, ಪಾಡಿನಿಂದ, ಪಾಡಿಗೆ.

(೨) ಕೆಲವು ಧಾತುಗಳು ಇದ್ದ ರೂಪದಲ್ಲಿಯೇ ಭಾವಕೃದಂತ (ಕೃದಂತ ಭಾವನಾಮ) ಗಳಾಗುವುವು.
ಧಾತು ಭಾವಕೃದಂತ ನಾಮಪದ
ನಡೆ ನಡೆ ನಡೆಯನ್ನು, ನಡೆಯಿಂದ
ನುಡಿ ನುಡಿ ನುಡಿಯು, ನುಡಿಯನ್ನು, ನುಡಿಯಿಂದ, ನುಡಿಗೆ-ಇತ್ಯಾದಿ
ಓದು ಓದು ಓದು, ಓದನ್ನು, ಓದಿನಿಂದ, ಓದಿನಲ್ಲಿ-ಇತ್ಯಾದಿ
ಕಟ್ಟು ಕಟ್ಟು ಕಟ್ಟು, ಕಟ್ಟನ್ನು, ಕಟ್ಟಿನಿಂದ, ಕಟ್ಟಿಗೆ, ಕಟ್ಟಿನಲ್ಲಿ
ಅಂಟು ಅಂಟು ಅಂಟನ್ನು, ಅಂಟಿನ ದೆಸೆಯಿಂದ, ಅಂಟಿನಲ್ಲಿ
ಹಿಡಿ ಹಿಡಿ ಹಿಡಿಯನ್ನು, ಹಿಡಿಯಿಂದ
ಉರಿ ಉರಿ ಉರಿಯನ್ನು, ಉರಿಯಿಂದ
ಹೇರು ಹೇರು ಹೇರನ್ನು, ಹೇರಿನಿಂದ, ಹೇರಿನಲ್ಲಿ
ಉಗುಳು ಉಗುಳು ಉಗುಳನ್ನು, ಉಗುಳಿನ, ಉಗುಳಿನಲ್ಲಿ
ಹುಟ್ಟು ಹುಟ್ಟು ಹುಟ್ಟನ್ನು, ಹುಟ್ಟಿನ, ಹುಟ್ಟಿನಲ್ಲಿ
ಚಿಗುರು ಚಿಗುರು ಚಿಗುರನ್ನು, ಚಿಗುರಿನಲ್ಲಿ
ಬೆಳೆ ಬೆಳೆ ಬೆಳೆಯನ್ನು, ಬೆಳೆಯಲ್ಲಿ
ಸವಿ ಸವಿ ಸವಿಯನ್ನು, ಸವಿಯಲ್ಲಿ
ಗುದ್ದು ಗುದ್ದು ಗುದ್ದನ್ನು, ಗುದ್ದಿನಲ್ಲಿ
ಬದುಕು ಬದುಕು ಬದುಕನ್ನು, ಬದುಕಿನಲ್ಲಿ

(೩) ಹಳಗನ್ನಡದ ಕೆಲವು ಕೃದಂತ ಭಾವನಾಮಗಳು ಹೊಸಗನ್ನಡದಲ್ಲಿ ರೂಪಾಂತರ ಹೊಂದುತ್ತವೆ.
ಏಳ್ಗೆ-ಏಳಿಗೆ, ಸಲ್ಗೆ-ಸಲಿಗೆ, ಕಾಣ್ಕೆ-ಕಾಣಿಕೆ, ಒಲ್ಮೆ-ಒಲುಮೆ, ಪೂಣ್ಕೆ-ಪೂಣಿಕೆ – ಇತ್ಯಾದಿ.
() ಕೃದಾಂತಾವ್ಯಯಗಳು (ಅವ್ಯಯಕೃದಂತ)
ಧಾತುವಿನಿಂದ ಹುಟ್ಟಿ ಅವ್ಯಯದ ಗುಣವನ್ನು ಪಡೆದಂಥ ಶಬ್ದ ರೂಪಗಳೇ ಕೃದಂತಾವ್ಯಯಗಳು ಅಥವಾ ಅವ್ಯಯಕೃದಂತಗಳು. ಈ ಕೆಳಗಿನ ಕೆಲವು ಉದಾಹರಣೆ ನೋಡಿರಿ.
(೧) ರಾಮನು ಉಣ್ಣದೆ ಮಲಗಿದನು.
(೨) ಮಳೆ ಬರಲು ಕರೆ ತುಂಬಿತು.
(೩) ಅವನು ಬರುತ್ತ ತಿಂದನು.
(೪) ಅದನ್ನು ಬರೆದು ಕಳುಹಿಸಿದನು.
(೫) ಅಲ್ಲಿಗೆ ಹೋಗಲಿಕ್ಕೆ ತಡವಾಯಿತು.
ಮೇಲಿನ ವಾಕ್ಯಗಳಲ್ಲಿ ದಪ್ಪಕ್ಷರ ಶಬ್ದಗಳಾದ ಉಣ್ಣದೆ, ಬರಲು, ಬರುತ್ತ, ಬರೆದು, ಹೋಗಲಿಕ್ಕೆ-ಮುಂತಾದವುಗಳು ಉಣ್ಣು+ಅದೆ, ಬರು+ಅಲು, ಬರು+ಉತ್ತ, ಬರೆ+ದು, ಹೋಗು+ಅಲಿಕ್ಕೆ-ಹೀಗೆ ಧಾತುಗಳ ಮೇಲೆ-ಅದೆ, ಅಲು, ಉತ್ತ, ದು, ಅಲಿಕ್ಕೆ-ಇತ್ಯಾದಿ ಪ್ರತ್ಯಯಗಳು ಬಂದು ಆದ ಶಬ್ದರೂಪಗಳು.  ಇವು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಗಳಲ್ಲೂ, ಏಕವಚನ ಬಹುವಚನಗಳಲ್ಲೂ ಒಂದೇ ರೂಪವಾಗಿರುತ್ತವೆ.  ಅಲ್ಲದೆ ಇವುಗಳ ಮೇಲೆ ಇನ್ನಾವ ವಿಭಕ್ತಿಪ್ರತ್ಯಯಗಳೂ ಬರುವುದಿಲ್ಲ.  ಆದ್ದರಿಂದ-ಇಂಥ ಶಬ್ದಗಳು ಅವ್ಯಯದ[4] ಗುಣವನ್ನು ಪಡೆದವು.  ಆದ್ದರಿಂದಲೇ ಇವುಗಳನ್ನು ಅವ್ಯಯಕೃದಂತಗಳು ಅಥವಾ ಕೃದಂತಾವ್ಯಯಗಳು ಎನ್ನುವರು.  ಕೆಳಗಿನ ಸೂತ್ರವನ್ನು ಗಮನಿಸಿರಿ.
(೮೯) ಧಾತುಗಳ ಮೇಲೆ ಉತ, ಉತ್ತ, ಅದೆ, ದರೆ, ಅಲು, ಅಲಿಕ್ಕೆ, , , ದು-ಇತ್ಯಾದಿ ಪ್ರತ್ಯಯಗಳು ಸೇರಿ ಕೃದಂತಾವ್ಯಯಗಳೆನಿಸುವುವು.
ಇವು ಪೂರ್ಣಕ್ರಿಯಾರ್ಥವನ್ನು ಕೊಡದೆ, ಇನ್ನೊಂದು ಕ್ರಿಯೆಯನ್ನಪೇಕ್ಷಿಸುವುದರಿಂದ ಇವನ್ನು ಅಪೂರ್ಣಕ್ರಿಯೆ ಅಥವಾ ನ್ಯೂನಕ್ರಿಯೆಗಳೆಂದು ಕರೆಯುವರು.
() ರಾಮನು ಉಣ್ಣುತ್ತಾ ಮಾತಾಡಿದನು.
ಎಂಬ ಈ ವಾಕ್ಯದಲ್ಲಿ ರಾಮನೆಂಬ ಕರ್ತೃವು ಉಣ್ಣುವ ಮತ್ತು ಮಾತನಾಡುವ ಕ್ರಿಯೆಗಳೆರಡನ್ನೂ ಮಾಡಿದನಾದ್ದರಿಂದ ಇಂಥವು ಏಕಕರ್ತೃಕ ಕ್ರಿಯೆಗಳು.
() ಮಳೆ ಬರಲು ಕೆರೆ ತುಂಬಿತು.
ಎಂಬ ಈ ವಾಕ್ಯದಲ್ಲಿ ಬರಲು ಎಂಬ ಕ್ರಿಯೆಗೆ ಮಳೆಯೂ, ತುಂಬುವ ಕ್ರಿಯೆಗೆ ಕೆರೆಯೂ ಕರ್ತೃಗಳಾದ್ದರಿಂದ ಇವೆರಡೂ ಕ್ರಿಯೆಗೆ ಬೇರೆ ಬೇರೆ ಕರ್ತೃಗಳು ಇದ್ದಹಾಗಾಯಿತು.  ಇಂಥವನ್ನು ಭಿನ್ನಕರ್ತೃಗಳು ಎನ್ನುತ್ತಾರೆ.
ಉದಾಹರಣೆಗೆ:
ಪ್ರತ್ಯಯಗಳು - ಧಾತು + ಪ್ರತ್ಯಯ = ಅವ್ಯಯಕೃದಂತ
ಉತ - ಮಾಡು + ಉತ = ಮಾಡುತ, ಇದರಂತೆ ನೋಡುತ, ಮಾರುತ, ಬರುತ
ಉತ್ತ[5] - ತಿನ್ನು + ಉತ್ತ = ತಿನ್ನುತ್ತ, ಇದರಂತೆ ನೋಡುತ್ತ, ನಡೆಯುತ್ತ, ಬರುತ್ತ
ಅದೆ - ಮಾಡು + ಅದೆ = ಮಾಡದೆ, ಇದರಂತೆ ನೋಡದೆ, ತಿನ್ನದೆ, ಬರೆಯದೆ
ಅಲು - ಬರು + ಅಲು = ಬರಲು, ಇದರಂತೆ ತಿನ್ನಲು, ಉಣ್ಣಲು, ನೋಡಲು, ನುಡಿಯಲು, ಬರೆಯಲು
ಅಲಿಕ್ಕೆ - ತಿನ್ನು + ಅಲಿಕ್ಕೆ = ತಿನ್ನಲಿಕ್ಕೆ, ಇದರಂತೆ ಮಾಡಲಿಕ್ಕೆ, ತಿಳಿಯಲಿಕ್ಕೆ, ಬರಲಿಕ್ಕೆ, ನಡೆಯಲಿಕ್ಕೆ
- ಹೇಳು + = ಹೇಳ[6], ಇದರಂತೆ ಮಾಡ, ನೋಡ, ನುಡಿಯ
- ಮಾಡು + = ಮಾಡಿ, ಇದರಂತೆ ಹೇಳಿ, ಕೇಳಿ, ನೋಡಿ
ದು - ತಿನ್ನು + ದು = ತಿಂದು, ಇದರಂತೆ ನುಡಿದು, ನಡೆದು, ಕರೆದು, ಬರೆದು
ಈಗ ಏಕಕರ್ತೃಕ ಕೃದಂತಾವ್ಯಯಗಳು ಮತ್ತು ಭಿನ್ನಕರ್ತೃಕ ಕೃದಂತಾವ್ಯಯಗಳಲ್ಲಿ ಯಾವ ಯಾವ ಪ್ರತ್ಯಯಗಳು ಬರುತ್ತವೆಂಬುದರ ವ್ಯವಸ್ಥೆಯನ್ನು ನೋಡಿರಿ.
() ಏಕಕರ್ತೃಕ ಕೃದಂತಾವ್ಯಯಗಳು.
(i) ಒಂದು ಕರ್ತೃವಿನಿಂದ ಎರಡು ಕ್ರಿಯೆಗಳು ನಡೆದಾಗ ಮೊದಲು ಹೇಳುವ ಕ್ರಿಯೆಯಲ್ಲಿ ಭೂತಕಾಲ ತೋರಿದರೆ ದು ಅಥವಾ ಇ ಪ್ರತ್ಯಯಗಳು ಬರುತ್ತವೆ.
[7](ಅ) ಅದನ್ನು ತಿಂದು ಹೋದನು (ತಿನ್ನು+ದು=ತಿಂದು)
83(ಆ) ಆ ಕೆಲಸವನ್ನು ಮಾಡಿ ಬಂದೆನು (ಮಾಡು+ಇ=ಮಾಡಿ)
-ಇಲ್ಲಿ ತಿಂದು, ಮಾಡಿ ಎಂಬುವೆರಡೂ ಮೊದಲ ಕ್ರಿಯೆಗಳು ಮುಗಿದು ಹೋದ (ಭೂತ) ಕಾಲವನ್ನು ತೋರಿಸುತ್ತವಾದ್ದರಿಂದ, ದು, ಇ ಪ್ರತ್ಯಯಗಳು ಬಂದಿವೆ.

(ii) ಒಂದೇ ಕರ್ತೃವಿನಿಂದ ಏಕಕಾಲದಲ್ಲಿ ಎರಡು ಕ್ರಿಯೆಗಳುಂಟಾದಾಗ ಮೊದಲನೆಯ ಕ್ರಿಯೆಯ ಮೇಲೆ ಉತ್ತ (ಉತ್ತಾ) ಪ್ರತ್ಯಯವೂ, ನಿಷೇಧ ತೋರಿದರೆ ಅದೇ ಪ್ರತ್ಯಯವೂ ಬರುವುವು.
(ಅ) ಅವನು ಉಣ್ಣುತ್ತ ಮಾತನಾಡಿದನು (ಏಕಕಾಲದಲ್ಲಿ ನಡೆದ ಕ್ರಿಯೆಗಳು)
(ಆ) ಅವನು ಉಣ್ಣದೆ ಹೋದನು (ನಿಷೇಧ)
-ಇಲ್ಲಿ ಮೊದಲ ವಾಕ್ಯದಲ್ಲಿ ಮಾತನಾಡುವ ಕ್ರಿಯೆ, ಉಣ್ಣುವ ಕ್ರಿಯೆಗಳು ಒಬ್ಬನಿಂದಲೇ ಏಕಕಾಲದಲ್ಲಿ ಆಗಿವೆ.  ಆದ್ದರಿಂದ ಉತ್ತ ಎಂಬುದೂ, ಎರಡನೆಯ ವಾಕ್ಯದಲ್ಲಿ ನಿಷೇಧ ಕ್ರಿಯೆ, ಹೋಗುವ ಕ್ರಿಯೆಗಳೆರಡೂ ಒಬ್ಬ ಕರ್ತೃವಿನಿಂದ ನಡೆದಿವೆ.  ಆದ್ದರಿಂದ ಅದೆ ಎಂಬುದು ಮೊದಲ ಕ್ರಿಯೆಯ ಮೇಲೆ ಬಂದಿದೆ.
(iii) ಒಂದು ಕರ್ತೃವಿನಿಂದ ಏಕಕಾಲದಲ್ಲಿ ಎರಡು ಕ್ರಿಯೆಗಳುಂಟಾದಾಗ ಪ್ರಯೋಜನ ತೋರಿದರೆ ಅಲು ಅಲಿಕ್ಕೆ ಪ್ರತ್ಯಯಗಳು ಮೊದಲನೆಯ ಕ್ರಿಯೆಯ ಮೇಲೆ ಬರುತ್ತವೆ.
(ಅ) ಅವನು ತಿನ್ನಲು ಹೋದನು (ಪ್ರಯೋಜನ)
(ಆ) ಅವನು ತಿನ್ನಲಿಕ್ಕೆ ಹೋದನು (    “    )
-ಮೇಲಿನ ಎರಡೂ ವಾಕ್ಯಗಳಲ್ಲಿ ಹೋಗುವ ಕ್ರಿಯೆಯು ತಿನ್ನುವ ಪ್ರಯೋಜನಕ್ಕಾಗಿ.  ಆದ್ದರಿಂದ ಮೊದಲ ಕ್ರಿಯೆಯ ಮೇಲೆ ಅಲು, ಅಲಿಕ್ಕೆ ಪ್ರತ್ಯಯಗಳು ಬಂದಿವೆ.

() ಭಿನ್ನಕರ್ತೃಕ ಕೃದಂತಾವ್ಯಯಗಳು
(i) ಬೇರೆ ಬೇರೆ ಕರ್ತೃಗಳಿಂದ ಎರಡು ಕ್ರಿಯೆಗಳುಂಟಾದಾಗ ಕಾರಣ ತೋರುವಾಗ ಅಲು ಮತ್ತು ದು ಪ್ರತ್ಯಯಗಳು ಮೊದಲ ಕ್ರಿಯೆಯ ಮೇಲೆ ಬರುತ್ತವೆ.
ಉದಾಹರಣೆಗೆ:
(ಅ) ಹೊಲ ಬೆಳೆಯಲು ರೈತನು ಸುಖ ಹೊಂದಿದನು.
(ಆ) ಹೊಲ ಬೆಳೆದು ರೈತನಿಗೆ ಸುಖ ಬಂದಿತು.
(ii) ಬೇರೆ ಬೇರೆ ಕರ್ತೃಗಳಿಂದ ಎರಡು ಕ್ರಿಯೆಗಳು ಏಕ ಕಾಲದಲ್ಲಿ ತೋರಿದರೆ ಉತ್ತ, ದು, ಅದೆ ಪ್ರತ್ಯಯಗಳು ಬಂದಾಗ ಅವುಗಳ ಮುಂದೆ ಇರಲು ಇರಲಾಗಿ ಎಂಬುವು ಸೇರುವುವು.
ಉದಾಹರಣೆಗೆ:
(ಅ) ಅವನು ಬರುತ್ತಿರಲು ಎಲ್ಲರೂ ಓಡಿದರು.
(ಆ) ಅವನು ಬರುತ್ತಿರಲಾಗಿ ಎಲ್ಲರೂ ಓಡಿದರು.
(ಇ) ಅವನು ಬರದಿರಲು ನಾವು ಮನೆಗೆ ಹೋದೆವು.
(ಈ) ಅವನು ಬರದಿರಲಾಗಿ ನಾವು ಮನೆಗೆ ಹೋದೆವು.
(ಉ) ಅವನು ಬಂದಿರಲು ನಾವೇಕೆ ಬರಬಾರದು.
(ಊ) ಅವನು ಬಂದಿರಲಾಗಿ ನಾವೇಕೆ ಬರಬಾರದು.
(iii) ಎರಡು ಕ್ರಿಯೆಗಳು ಬೇರೆ ಬೇರೆ ಕರ್ತೃಗಳಿಂದ ನಡೆದಾಗ ಪಕ್ಷಾರ್ಥ ತೋರಿದರೆ ದರೆ ಎಂಬುದೂ, ಭಾವಾರ್ಥ ತೋರಿದರೆ ಅ ಎಂಬುದೂ ಬರುವುವು.
ಉದಾಹರಣೆಗೆ:
(೧) ಪಕ್ಷಾರ್ಥಕ್ಕೆ
(ಅ) ಮಳೆ ಬಂದರೆ, ಕರೆ ತುಂಬುವುದು.
(ಆ) ನೀವು ಬಂದರೆ ನಾವು ಬರುತ್ತೇವೆ.
(೨) ಭಾವಾರ್ಥಕ್ಕೆ
(ಅ) ಅವನು ನನ್ನನ್ನು ಹೋಗ ಹೇಳಿದನು. (ಹೋಗು+ಅ=ಹೋಗ)
(ಆ) ಅವನಿಗೆ ಅಲ್ಲಿ ಮಾಡ ಕೆಲಸವಿಲ್ಲ.  (ಮಾಡು+ಅ=ಮಾಡ)
ಮೇಲಿನ ವಾಕ್ಯಗಳಲ್ಲಿನ ‘ಮಾಡ’ ‘ಹೋಗ’ ಇವು ಭಾವಾರ್ಥಕ ಕ್ರಿಯೆಗಳೆಂದು ತಿಳಿಯಬೇಕು.

[1] ವರ್ತಮಾನ ಮತ್ತು ಭವಿಷ್ಯತ್ ಕೃದಂತಗಳು ಒಂದೇ ರೂಪವಾಗಿರುತ್ತವೆ.  ಇವೆರಡು ಕೃದಂತಗಳಲ್ಲೂ ಕಾಲಸೂಚಕ ಪ್ರತ್ಯಯ ಒಂದೇ ತೆರನಾಗಿರುತ್ತದೆ.  ಕೆಲವರು ವರ್ತಮಾನ ಕೃದಂತಗಳೇ ಇರುವುದಿಲ್ಲ ಎಂದೂ ಹೇಳುವುದುಂಟು.
[2] ನಪುಂಸಕಲಿಂಗದಲ್ಲಿ-ಹೋಗುವುದರಿಂದ-ಇತ್ಯಾದಿಗಳಿಗೆ ಪ್ರತಿಯಾಗಿ ಹೋಗುವಂತಹುದರಿಂದ, ನಡೆಯುವಂಥಾದ್ದರಿಂದ, ತಿನ್ನುವವುಗಳಿಂದ ಎಂಬುದಕ್ಕೆ ತಿನ್ನುವಂತಹವುಗಳಿಂದ, ತಿನ್ನುವಂಥವುಗಳಿಂದ-ಇತ್ಯಾದಿಯಾಗಿ ಹೊಸಗನ್ನಡದಲ್ಲಿ ಉಪಯೋಗಿಸುವುದುಂಟು.  ನಡೆಯುವುದನ್ನು, ನಡೆಯುವದನ್ನು-ಹೀಗೆ ಎರಡು ರೂಪಗಳ ಪ್ರಯೋಗವೂ ರೂಢಿಯಲ್ಲುಂಟು.  ಏಕವಚನದಲ್ಲಿ ಅವನು ಎಂಬುದೂ, ಬಹುವಚನದಲ್ಲಿ ಅವರು ಎಂಬ ಸರ್ವನಾಮಗಳೂ ಆಗಮಗಳಾಗಿ ಬರುತ್ತವೆ.
[3] ಸಾಮಾನ್ಯವಾಗಿ ಎಲ್ಲ ಧಾತುಗಳ ಮೇಲೂ ಭಾವಾರ್ಥದಲ್ಲಿ ವುದು, ವಿಕೆ – ಎಂಬ ಪ್ರತ್ಯಯಗಳು ಬರುತ್ತವೆ.  ವಿಕೆ ಪ್ರತ್ಯಯಕ್ಕೆ ಪ್ರತಿಯಾಗಿ ಕೆಲವರು ಇಕೆ ಬರುತ್ತದೆಂದು ಹೇಳಿ ನೋಡುವಿಕೆ (ನೋಡು+ವ್+ಇಕೆ=ನೋಡುವಿಕೆ) ಇತ್ಯಾದಿ ರೂಪಗಳು ಆಗುತ್ತವೆನ್ನುತ್ತಾರೆ.  ಆದರೆ ಇವೆರಡೂ ಪ್ರತ್ಯಯಗಳು ಬೇರೆಬೇರೆಯೇ ಆಗಿವೆ.
[4] ಅವ್ಯಯ ಎಂದರೆ ಲಿಂಗ, ವಚನ, ವಿಭಕ್ತಿಗಳಿಂದ ವ್ಯತ್ಯಾಸವಾಗದ ಶಬ್ದರೂಪ.  ಇವುಗಳ ವಿಷಯವನ್ನು ಮುಂದೆ ತಿಳಿಯುತ್ತೀರಿ.
[5] ಉತ್ತ ಪ್ರತ್ಯಯವನ್ನು ಹೊಸಗನ್ನಡದಲ್ಲಿ ಕೆಲವರು ಉತ್ತಾ ಎಂದು ಹೇಳಿ ಹೋಗುತ್ತಾ, ಬರುತ್ತಾ, ತಿನ್ನುತ್ತಾ ಇತ್ಯಾದಿಯಾಗಿ ಕೃದಂತಾವ್ಯಯಗಳನ್ನು ಬಳಸುವುದುಂಟು.
[6] ಹೇಳ ಬಂದನು, ಹೇಳ ಬಂದಳು, ಮಾಡ ಬಂದಳು, ನುಡಿಯ ಬಂದನು, ನುಡಿಯ ಬಂದಿತು-ಇತ್ಯಾದಿಗಳು ಈ ಶಬ್ದಗಳು ಬಂದ ವಾಕ್ಯಗಳು.
[7] ಮಾಡಿ, ತಿಂದು, ನೋಡಿ, ನೀಡಿ, ಉಂಡು, ಕೊಟ್ಟು ಇವೆಲ್ಲ ಭೂತನ್ಯೂನಗಳು.
------------------------------------------------------------------------------------

 ತದ್ಧಿತಾಂತಗಳು (ತದ್ಧಿತ+ಅಂತ)
‘ತದ್ಧಿತ ಎಂಬ ಹೆಸರಿನ ಪ್ರತ್ಯಯವನ್ನು ಅಂತದಲ್ಲಿ ಉಳ್ಳುದೇ ತದ್ಧಿತಾಂತವೆನಿಸುವುದು.  ಈ ಕೆಳಗಿನ ವಾಕ್ಯಗಳನ್ನು ನೋಡಿರಿ.
(೧) ಮೋಸವನ್ನು ಮಾಡುವವನು ಇದ್ದಾನೆ.
(೨) ಅಲ್ಲಿ ಕನ್ನಡವನ್ನು ಬಲ್ಲವರು ಬಹಳ ಜನರಿದ್ದರು.
(೩) ಹಾವನ್ನು ಆಡಿಸುವವನು ಬಂದನು.
(೪) ಮಡಿಯನ್ನು ಮಾಡುವವನು ಇನ್ನೂ ಬಂದಿಲ್ಲ.
ಮೇಲಿನ ನಾಲ್ಕು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಎರಡೆರಡು ನಾಮಪದಗಳನ್ನು ಸೇರಿಸಿ ಅದೇ ಅರ್ಥಬರುವಂತೆ ಒಂದು ಪದವನ್ನಾಗಿ ಸಮಾಸದ ಹಾಗೆ ಮಾಡಬಹುದು.  ಹೀಗೆ ನಾವು ಸಂಕ್ಷೇಪಗೊಳಿಸಿ ಹೇಳಿದಾಗ ಕಾಲ, ಶ್ರಮ, ಧ್ವನಿ ಮೊದಲಾದವುಗಳ ಉಳಿತಾಯವಾಗುವುದು.  ಹಾಗಾದರೆ ಆ ಪದಗಳನ್ನು ಯಾವ ಕ್ರಮದಿಂದ ಕೂಡಿಸುತ್ತೇವೆ?  ಇತ್ಯಾದಿಗಳ ಬಗೆಗೆ ಕೆಳಗೆ ನೋಡಿರಿ.
(೧) ಮೋಸವನ್ನು ಮಾಡುವವನು-ಎಂಬಲ್ಲಿ ಮೋಸವನ್ನು ಎಂಬ ಪದದ ಮುಂದೆ ಮಾಡುವವನು ಎಂಬರ್ಥದಲ್ಲಿ ‘ಗಾರ ಪ್ರತ್ಯಯ ಸೇರಿಸಿ ಮೋಸವನ್ನು+ಗಾರ ಮಾಡುತ್ತೇವೆ.  ಒಂದೇ ಪ್ರಕೃತಿಯ ಮೇಲೆ ಎರಡು ಪ್ರತ್ಯಯ ಸೇರುವುದಿಲ್ಲ.  ಅನ್ನು ಎಂಬ ಪ್ರತ್ಯಯ ತೆಗೆದು-ಮೋಸ+ಗಾರ=ಮೋಸಗಾರ ಹೀಗೆ ಒಂದು ಹೊಸ ರೂಪ ಸಿದ್ಧವಾಯಿತು.  ಇಲ್ಲಿ ‘ಗಾರ’ ಎಂಬುದೇ ತದ್ಧಿತಪ್ರತ್ಯಯ.
(೨) ಕನ್ನಡವನ್ನು ಬಲ್ಲವನು-ಎಂಬಲ್ಲಿ ಕನ್ನಡವನ್ನು ಎಂಬುದರ ಮೇಲೆ ಬಲ್ಲವನು ಎಂಬರ್ಥದಲ್ಲಿ ‘ಇಗ’ ಪ್ರತ್ಯಯ ಸೇರಿದಾಗ ಕನ್ನಡವನ್ನು+ಇಗ=ಕನ್ನಡ+ಇಗ=ಕನ್ನಡಿಗ ಎಂಬ ರೂಪ ಸಿದ್ಧವಾಯಿತು.  ಇಲ್ಲಿ ‘ಇಗ’ ಎಂಬುದೇ ‘ತದ್ಧಿತ ಪ್ರತ್ಯಯ’.
(೩) ಹಾವನ್ನು ಆಡಿಸುವವನು-ಎಂಬಲ್ಲಿ ಹಾವನ್ನು ಎಂಬ ಪದದ ಮೇಲೆ ‘ಆಡಿಸುವವನು’ ಎಂಬರ್ಥದಲ್ಲಿ ‘ಆಡಿಗ’ ಎಂಬ ತದ್ಧಿತ ಪ್ರತ್ಯಯ ಬಂದು ಹಾವನ್ನು+ಆಡಿಗ=ಹಾವು+ಆಡಿಗ= ಹಾವಾಡಿಗ ಎಂಬ ರೂಪ ಸಿದ್ಧವಾಯಿತು.
(೪) ಮಡಿಯನ್ನು ಮಾಡುವವನು-ಎಂಬಲ್ಲಿ ಮಾಡುವವನು’ ಎಂಬರ್ಥದಲ್ಲಿ ವಳ (ವಾಳ) ಎಂಬ ಪ್ರತ್ಯಯವು ಬಂದು ಮಡಿಯನ್ನು+ವಳ=ಮಡಿ+ವಳ=ಮಡಿವಳ ಎಂಬ ರೂಪವಾಯಿತು.
ಮೋಸವನ್ನು-ಮಾಡುವವನೆಂಬರ್ಥದಲ್ಲಿ-ಗಾರ.
ಕನ್ನಡವನ್ನು-ಬಲ್ಲವನು ಎಂಬರ್ಥದಲ್ಲಿ-ಇಗ.
ಹಾವನ್ನು-ಆಡಿಸುವವನು ಎಂಬರ್ಥದಲ್ಲಿ-ಆಡಿಗ.
ಮಡಿಯನ್ನು-ಮಾಡುವವನು ಎಂಬರ್ಥದಲ್ಲಿ-ವಳ.
ಹೀಗೆ ಹಲವಾರು ಅರ್ಥಗಳಲ್ಲಿ-ಗಾರ, ಇಗ, ಆಡಿಗ, ವಳ-ಎಂಬ ಪ್ರತ್ಯಯಗಳು ನಾಮಪದಗಳ ಮೇಲೆ ಬಂದು ಹೋಸ ಬಗೆಯ ಪ್ರಕೃತಿಗಳಾಗುವುವು. ಇಲ್ಲಿ ಬಂದಿರುವ ಇಂಥ ಪ್ರತ್ಯಯಗಳನ್ನು ತದ್ಧಿತ ಪ್ರತ್ಯಯಗಳೆನ್ನುವರು. ಇಂಥ ತದ್ಧಿತ ಪ್ರತ್ಯಯಗಳನ್ನು ಅಂತದಲ್ಲಿ ಉಳ್ಳ ಶಬ್ದರೂಪವೇ ತದ್ಧಿತಾಂತ’ವೆನಿಸುವುದು.  ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

(೯೦) ತದ್ಧಿತಾಂತ-ನಾಮಪದಗಳ ಮೇಲೆ ಹಲವಾರು ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗ, ವಂತ, ವಳ, ಇಕ, ಆಳಿ-ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳೆನಿಸುವುವು.
ಈ ತದ್ಧಿತ ಪ್ರತ್ಯಯಗಳು ಸೇರುವಾಗ ಪ್ರಾಯಶಃ ಮಧ್ಯದ ವಿಭಕ್ತಿ ಪ್ರತ್ಯಯವು ಲೋಪವಾಗುವುದು.  ಇವುಗಳಲ್ಲಿ – () ತದ್ಧಿತಾಂತ ನಾಮ () ತದ್ಧಿತಾಂತ ಭಾವನಾಮ () ತದ್ಧಿತಾಂತಾವ್ಯಯಗಳೆಂದು ಮೂರು ಬಗೆ.
() ತದ್ಧಿತಾಂತ ನಾಮಗಳು
ನಾಮಪದಗಳ ಮೇಲೆ ಗಾರ, ಕಾರ, ಇಗ, ವಂತ ಇತ್ಯಾದಿ ಪ್ರತ್ಯಯಗಳು ಬಂದು ತದ್ಧಿತಾಂತ ನಾಮಗಳಾಗುವ ಬಗೆಯನ್ನು ಗಮನಿಸಿರಿ.
ಉದಾಹರಣೆಗೆ:
ತದ್ಧಿತ ಪ್ರತ್ಯಯ - ನಾಮಪದ + ಅರ್ಥ = ತದ್ಧಿತ ಪ್ರತ್ಯಯ - ತದ್ಧಿತಾಂತ ನಾಮ
ಗಾರ - ಮಾಲೆಯನ್ನು + ಕಟ್ಟುವವನು = ಗಾರ - ಮಾಲೆಗಾರ
ಬಳೆಯನ್ನು + ಮಾರುವವನು = ಗಾರ - ಬಳೆಗಾರ
ಮೋಸವನ್ನು + ಮಾಡುವವನು = ಗಾರ - ಮೋಸಗಾರ
ಪಾಲನ್ನು + ಹೊಂದುವವನು = ಗಾರ - ಪಾಲುಗಾರ
ಛಲವನ್ನು + ಹೊಂದಿದವನು = ಗಾರ - ಛಲಗಾರ
ಕಾರ - ಓಲೆಯನ್ನು + ತರುವವನು = ಕಾರ - ಓಲೆಕಾರ
ಕೋಲನ್ನು + ಹಿಡಿಯುವವನು = ಕಾರ - ಕೋಲುಕಾರ
ಕೈದನ್ನು + ಹಿಡಿದಿರುವವನು = ಕಾರ - ಕೈದುಕಾರ
ಇಗ - ಕನ್ನಡವನ್ನು + ಬಲ್ಲವನು = ಇಗ - ಕನ್ನಡಿಗ
ಲೆಕ್ಕವನ್ನು + ಬಲ್ಲವನು = ಇಗ - ಲೆಕ್ಕಿಗ
ಚೆನ್ನನ್ನು + ಉಳ್ಳುವ = ಇಗ - ಚೆನ್ನಿಗ
ಗಂದವನ್ನು + ಮಾರುವವನು = ಇಗ - ಗಂದಿಗ
ಗಾಣವನ್ನು + ಆಡಿಸುವವನು = ಇಗ - ಗಾಣಿಗ
ವಂತ - ಹಣವನ್ನು + ಉಳ್ಳವನು = ವಂತ - ಹಣವಂತ
ಸಿರಿಯನ್ನು + ಉಳ್ಳವನು = ವಂತ - ಸಿರಿವಂತ
ವಳ - ಮಡಿಯನ್ನು + ಮಾಡುವವನು = ವಳ - ಮಡಿವಳ
= (ವಾಳ) - ಮಡಿವಾಳ

ಹಡಪವನ್ನು + ಆಚರಿಸುವವನು = ವಳ - ಹಡಪವಳ
ಆಡಿಗ - ಹಾವನ್ನು + ಆಡಿಸುವವನು = ಆಡಿಗ - ಹಾವಾಡಿಗ

ಹೂವನ್ನು + ಕಟ್ಟುವವನು = ಆಡಿಗ - ಹೂವಾಡಿಗ
ಇಕ - ಕರಿಯದನ್ನು (ಬಣ್ಣವನ್ನು) + ಉಳ್ಳವನು = ಇಕ - ಕರಿಕ

ಬಿಳಿಯದನ್ನು(ಬಣ್ಣವನ್ನು) + ಉಳ್ಳವನು = ಇಕ - ಬಿಳಿಕ
ಆಳಿ - ಮಾತನ್ನು + ಹೆಚ್ಚು ಆಡುವ ಸ್ವಭಾವವುಳ್ಳವನು = ಆಳಿ - ಮಾತಾಳಿ

ಓದನ್ನು + ಹೆಚ್ಚು ಆಚರಿಸುವವನು = ಆಳಿ - ಓದಾಳಿ
ಆಳಿ - ಜೂದನ್ನು + ಆಡುವವನು = ಆಳಿ - ಜೂದಾಳಿ
ಗುಳಿ - ಲಂಚವನ್ನು + ತೆಗೆದುಕೊಳ್ಳುವವನು = ಗುಳಿ - ಲಂಚಗುಳಿ
ಅನೆಯ - ಹತ್ತು + ಸಂಖ್ಯೆಯನ್ನುಳ್ಳುದು = ಅನೆಯ - ಹತ್ತನೆಯ

ಒಂದು + ಸಂಖ್ಯೆಯನ್ನುಳ್ಳುದು = ಅನೆಯ - ಒಂದನೆಯ
ಆರ - ಕುಂಬವನ್ನು + ಮಾಡುವವನು = ಆರ - ಕುಂಬಾರ[1]

ಕಮ್ಮವನ್ನು + ಆಚರಿಸುವವನು = ಆರ - ಕಮ್ಮಾರ[1]
ಇದರ ಹಾಗೆಯೆ ಉಳಿದ ಕಡೆಗೆ ಬೇರೆ ಬೇರೆ ಪ್ರತ್ಯಯಗಳು ಬಂದು ತದ್ಧಿತಾಂತಗಳಾಗುತ್ತ ವೆಂದು ತಿಳಿಯಬೇಕು.

ಸ್ತ್ರೀಲಿಂಗದಲ್ಲಿ ಬರುವ ತದ್ಧಿತ ಪ್ರತ್ಯಯಗಳು
(೯೧) ಸ್ತ್ರೀಲಿಂಗದಲ್ಲಿ ಇತಿ, ಇತ್ತಿ, ಗಿತ್ತಿ, ತಿ, , ಇತ್ಯಾದಿ ತದ್ಧಿತ ಪ್ರತ್ಯಯಗಳು ಬಂದು ಸ್ತ್ರೀಲಿಂಗದ ತದ್ಧಿತಾಂತಗಳು ಸಿದ್ಧಿಸುವುವು.
ಉದಾಹರಣೆಗೆ:
ಇತಿ – ಬೀಗಿತಿ, ಬ್ರಾಹ್ಮಣಿತಿ
ಇತ್ತಿ - ಒಕ್ಕಲಗಿತ್ತಿ, ಹೂವಾಡಗಿತ್ತಿ
ಗಿತ್ತಿ – ನಾಯಿಂದಗಿತ್ತಿ, ಅಗಸಗಿತ್ತಿ
ತಿ – ಗೊಲ್ಲತಿ, ವಡ್ಡತಿ, ಮಾಲೆಗಾರ‍್ತಿ
– ಅರಸಿ, ಅಣುಗಿ
– ಕಳ್ಳೆ, ಜಾಣೆ, ಗುಣವಂತೆ,  ಇತ್ಯಾದಿ-

() ತದ್ಧಿತಾಂತ ಭಾವನಾಮಗಳು
(ಅ) ಬಡತನ ಸಿರಿತನಗಳು ಸ್ಥಿರವಲ್ಲ.
(ಆ) ಊರ ಗೌಡಿಕೆ ರಾಮಣ್ಣನದು.
(ಇ) ನಮಗೆ ಅದೊಂದು ಹಿರಿಮೆ.
ಈ ಮೇಲಿನ ಮೂರು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಬಡತನ, ಸಿರಿತನ, ಗೌಡಿಕೆ, ಹಿರಿಮೆ-ಈ ಶಬ್ದಗಳನ್ನು ಯೋಚಿಸಿ ನೋಡಿದರೆ-ಬಡವನ ಭಾವವೇ-ಬಡತನ; ಸಿರಿವಂತನ ಭಾವವೇ-ಸಿರಿತನ; ಗೌಡನ ಭಾವವೇ-ಗೌಡಿಕೆ; ಹಿರಿಯದರ ಭಾವವೇ-‘ಹಿರಿತನ’ ಎಂದು ಅರ್ಥವಾಗುವುದು.  ಇಲ್ಲಿ ಬಂದಿರುವ ತನ, ಇಕೆ, ಮೆ-ಪ್ರತ್ಯಯಗಳು ಭಾವಾರ್ಥದಲ್ಲಿ ಬಡವನ, ಸಿರಿವಂತನ, ಗೌಡನ, ಹಿರಿಯದರ – ಇತ್ಯಾದಿ ನಾಮಪದಗಳ ಮೇಲೆ ಬಂದಿವೆ ಎಂಬುದನ್ನು ಕೆಳಗೆ ಗಮನಿಸಿರಿ.
ಬಡವ-ಬಡತನ (ಬಡವನ ಭಾವ-ತನ)
ಸಿರಿ  – ಸಿರಿತನ (ಸಿರಿ ಉಳ್ಳವನ ಭಾವ-ತನ)
ಗೌಡ-ಗೌಡಿಕೆ (ಗೌಡನ ಭಾವ-ಇಕೆ)
ಹಿರಿದು-ಹಿರಿಮೆ (ಹಿರಿದರ ಭಾವ-ಮೆ)
ಸಾಮಾನ್ಯವಾಗಿ ಈ ಪ್ರತ್ಯಯಗಳೆಲ್ಲ ಷಷ್ಠೀವಿಭಕ್ತ್ಯಂತಗಳಾದ ನಾಮಪದಗಳ ಮೇಲೆ ಬಂದಿವೆ. ಆದುದರಿಂದ ಈ ಬಗೆಗೆ ಸೂತ್ರವನ್ನು ಹೀಗೆ ಹೇಳಬಹುದು.

(೯೨) ತದ್ಧಿತಾಂತಭಾವನಾಮಗಳು-ಸಾಮಾನ್ಯವಾಗಿ ಷಷ್ಠೀವಿಭಕ್ತ್ಯಾಂತಗಳಾದ ನಾಮಪದಗಳ ಮುಂದೆ ಭಾವಾರ್ಥದಲ್ಲಿ ತನ, ಇಕೆ, ಪು, ಮೆ - ಇತ್ಯಾದಿ ತದ್ಧಿತಪ್ರತ್ಯಯಗಳು ಸೇರಿ ತದ್ಧಿತಾಂತಭಾವನಾಮಗಳೆನಿಸುವುವು.
ಉದಾಹರಣೆಗೆ:
ಪ್ರತ್ಯಯ - ನಾಮಪದ - ಭಾವಾರ್ಥದಲ್ಲಿ ಪ್ರತ್ಯಯ - ತದ್ಧಿತಾಂತ ಭಾವನಾಮ
ತನ - ದೊಡ್ಡವನ (ಭಾವ) - ತನ - ದೊಡ್ಡತನ
ಜಾಣನ (ಭಾವ) - ತನ - ಜಾಣತನ; ಇದರಂತೆ ದಡ್ಡತನ, ಚಿಕ್ಕತನ, ಸಣ್ಣತನ, ಹುಡುಗತನ, ಕಿರಿತನ, ಕಳ್ಳತನ, ಕೆಟ್ಟತನ, ಸೋಮಾರಿತನ,  -ಇತ್ಯಾದಿ
ಇಕೆ - ಬ್ರಾಹ್ಮಣನ (ಭಾವ) - ಇಕೆ - ಬ್ರಾಹ್ಮಣಿಕೆ
ಚಲುವಿನ (ಭಾವ) - ಇಕೆ - ಚಲುವಿಕೆ; ಇದರಂತೆ  ಗೌಡಿಕೆ, ಉನ್ನತಿಕೆ, ತಳವಾರಿಕೆ, -ಇತ್ಯಾದಿ
- ಕಿವುಡನ (ಭಾವ) - - ಕಿವುಡು
ಕುಳ್ಳನ (ಭಾವ) - - ಕುಳ್ಳು; ಇದರಂತೆ ಕುರುಡು, ಕುಂಟು, ಮೂಕು, ತೊದಲು, -ಇತ್ಯಾದಿ.
ಪು - ಬಿಳಿದರ (ಭಾವ) - ಪು - ಬಿಳುಪು[2]
ಕರಿದರ (ಭಾವ) - ಪು - ಕಪ್ಪು[2]
ಇನಿದರ (ಭಾವ) - ಪು - ಇಂಪು
ತಣ್ಣನೆಯದರ (ಭಾವ) - ಪು - ತಂಪು[2]
ನುಣ್ಣನೆಯದರ (ಭಾವ) - ಪು - ನುಣುಪು[2]
ಮೆ - ಜಾಣನ (ಭಾವ) - ಮೆ - ಜಾಣ್ಮೆ
ಜಾಣೆಯ (ಭಾವ) - ಮೆ - ಜಾಣ್ಮೆ
ಕೂರಿತ್ತರ (ಭಾವ) - ಮೆ - ಕೂರ‍್ಮೆ
ಪಿರಿದರ (ಭಾವ) - ಮೆ - ಪೆರ‍್ಮೆ
ಹಿರಿದರ (ಭಾವ) - ಮೆ - ಹಿರಿಮೆ

() ತದ್ಧಿತಾಂತಾವ್ಯಯಗಳು
(ಅ) ಅವನು ರಾಮನಂತೆ ಕಾಣುವನು
(ಆ) ಊರವರೆಗೆ ನಡೆದನು
(ಇ) ಮನೆಯತನಕ ಕಳಿಸು
(ಉ) ಅವನಿಗೋಸುಗ ಬಂದೆನು
(ಊ) ಅವನಿಗಿಂತ ಚಿಕ್ಕವನು
ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ರಾಮನಂತೆ, ಊರವರೆಗೆ, ಮನೆಯತನಕ, ಅವನಿಗೋಸುಗ, ಅವನಿಗಿಂತ – ಇತ್ಯಾದಿ ಪದಗಳನ್ನು ಬಿಡಿಸಿದರೆ ರಾಮನ+ಅಂತೆ, ಊರ+ವರಗೆ, ಮನೆಯ+ತನಕ, ಅವನಿಗೆ+ಓಸುಗ, ಅವನಿಗೆ+ಇಂತ-ಹೀಗಾಗುವುವು.  ಇಲ್ಲಿ ಬಂದಿರುವ ಅಂತೆ, ವರೆಗೆ, ತನಕ, ಓಸುಗ, ಇಂತ – ಇತ್ಯಾದಿ ಪ್ರತ್ಯಯಗಳು ನಾಮ ಪದಗಳ ಮುಂದೆ ಸೇರುವುವು.  ಆಗ ನಾಮಪದಗಳಲ್ಲಿರುವ , , , ಗೆ, ಗೆ – ಈ ನಾಮವಿಭಕ್ತಿಪ್ರತ್ಯಯಗಳು ಲೋಪವಾಗುವುದಿಲ್ಲ.  ಇಂಥ ಪದಗಳನ್ನು ತದ್ಧಿತಾಂತಾವ್ಯಯಗಳೆಂದು ಕರೆಯುವುದು ವಾಡಿಕೆ.

(೯೩) ನಾಮಪದಗಳ ಮುಂದೆ ಅಂತೆ, ವೊಲ್, ವೊಲು, ವೋಲ್, ವೋಲು, ತನಕ, ವರೆಗೆ, ಮಟ್ಟಿಗೆ, ಓಸ್ಕರ, ಇಂತ, ಆಗಿ, ಓಸುಗ-ಇತ್ಯಾದಿ ಪ್ರತ್ಯಯಗಳು ಸೇರಿ ತದ್ಧಿತಾಂತಾವ್ಯಯಗಳೆನಿಸುವುವು.
ಈ ಪ್ರತ್ಯಯಗಳು ಬಂದಾಗ ನಾಮಪದದಲ್ಲಿರುವ ವಿಭಕ್ತಿಪ್ರತ್ಯಯವು ಲೋಪವಾಗುವುದಿಲ್ಲ.
ಉದಾಹರಣೆಗೆ:
ಅಂತೆ - ರಾಮನಂತೆ, ಚಂದ್ರನಂತೆ, ಭೀಮನಂತೆ, ಅವನಂತೆ
ವೊಲ್ - ರಾಮನವೊಲ್, ಚಂದ್ರನವೊಲ್, ಭೀಮನವೊಲ್, ಅವನವೊಲ್
ವೊಲು - ರಾಮನವೊಲು, ಚಂದ್ರನವೊಲು, ಭೀಮನವೊಲು, ನಿನ್ನವೊಲು
ವೋಲು - ಮನೆಯವೋಲು, ಅವನವೋಲು, ಚಂದ್ರನವೋಲು
ವೋಲ್ - ಮನೆಯವೋಲ್, ಅವನವೋಲ್, ಚಂದ್ರನವೋಲ್
ತನಕ - ಮನೆಯತನಕ, ಊರತನಕ, ಅಲ್ಲಿಯತನಕ
ವರೆಗೆ - ಊರವರೆಗೆ, ಚಂದ್ರನವರೆಗೆ
ಮಟ್ಟಿಗೆ - ಅವನಮಟ್ಟಿಗೆ, ನನ್ನಮಟ್ಟಿಗೆ, ನಿನ್ನಮಟ್ಟಿಗೆ
ಓಸ್ಕರ - ಅವನಿಗೋಸ್ಕರ, ರಾಮನಿಗೋಸ್ಕರ
ಸಲುವಾಗಿ - ನನ್ನ ಸಲುವಾಗಿ, ನಿನ್ನ ಸಲುವಾಗಿ
ಇಂತ - ಅವನಿಗಿಂತ, ಇವನಿಗಿಂತ
ಆಗಿ - ಅವನಿಗಾಗಿ, ನನಗಾಗಿ, ನಿನಗಾಗಿ
ಓಸುಗ - ರಾಮನಿಗೋಸುಗ, ಕಳ್ಳನಿಗೋಸುಗ

[1] ಕುಂಭಕಾರ, ಕರ್ಮಕಾರ-ಎಂಬ ಸಂಸ್ಕೃತ ಪದಗಳು ತದ್ಭವವಾಗಿ, ಕುಂಬಾರ, ಕಮ್ಮಾರ ಪದಗಳು ಸಿದ್ಧಿಸಿದೆ ಎಂಬುದು ಕೆಲವರ ಮತ.  ಆದರೆ ಹಳಗನ್ನಡದಲ್ಲಿ ಆರ ಪ್ರತ್ಯಯ ಬಂದು ಕುಂಬರ, ಕಮ್ಮರ ಎಂದಾದ ಈ ಶಬ್ದಗಳು ಹೊಸಗನ್ನಡದಲ್ಲಿ ಕುಂಬಾರ, ಕಮ್ಮಾರ-ಎಂದು ಆದುವೆಂದು ತಿಳಿಯುವುದು ಯುಕ್ತ.
[2] ಹಳಗನ್ನಡದಲ್ಲಿ ಇವುಗಳ ರೂಪಗಳು ಬೆಳ್ಪು, ಕರ್ಪು, ತುಣ್ಪು, ನುಣ್ಪು-ಇತ್ಯಾದಿಯಾಗಿ ಆಗುವುವು.