ನನ್ನ ಪುಟಗಳು

13 ಸೆಪ್ಟೆಂಬರ್ 2019

ಪ್ರಬಂಧ: ‘ಸಮಕಾಲೀನ ಭಾರತೀಯ ಸಮಾಜದಲ್ಲಿ ಸಾಂಸ್ಕೃತಿಕ ಬದಲಾವಣೆ.’

ಪೀಠಿಕೆ:-
ಬದಲಾವಣೆಎಂಬುದುಒಂದು ನಿರಂತರವಾಗಿ ನಡೆಯುವ ಪ್ರಕ್ರಿಯೆ.ಅದು ನಿಂತ ನೀರಲ್ಲ, ಸದಾ ಹರಿಯುವ ನೀರು. ಮನುಷ್ಯ ಸೃಜನಶೀಲತೆಯೆಡೆಗೆ ಸಾಗುವಾಗ ಅವನ ಬುದ್ಧಿಶಕ್ತಿಗೆ ಎಲ್ಲೆಯೇಇರದಕಾರಣ ಅವನು ಅನೇಕ ಪ್ರಯೋಗಗಳನ್ನು,ಅನ್ವೇಷಣೆಗಳನ್ನು ನಿರಂತರವಾಗಿತನ್ನಜೀವನದಎಲ್ಲಾ ಕ್ಷೇತ್ರಗಳಲ್ಲಿ ಮಾಡುತ್ತಿರುತ್ತಾನೆ. ಅಂದರೆಆಧುನಿಕಯುಗದಲ್ಲಿ ವೈಜ಼್ಞಾನಿಕ, ತಾಂತ್ರಿಕ ಮುಖ್ಯವಾಗಿಎಲೆಕ್ಟ್ರಾನಿಕ್ಸ್‌ಹಾಗೂ ಕಂಪ್ಯೂಟರ್ ಕ್ಷೇತ್ರಗಳಲ್ಲಿ ಆಗಿರುವ ಸಂಶೋಧನೆಗಳು ಮತ್ತು ಪ್ರಯೋಗಗಳಿಂದಾಗಿ ಜಾಗತೀಕರಣಕ್ಕೆತನ್ನದೇಆದ ಮಹತ್ವದ ಕೊಡುಗೆಗಳನ್ನು ನೀಡಿದ್ದಾವೆ. ಇಂತಹ ಪ್ರಯೋಗಗಳಲ್ಲಿ ಸಮೂಹ ಮಾದ್ಯಮಗಳು ಹಾಗೂ ಅವುಗಳ ಸರಿಯಾದ ಬಳಕೆ ಅತ್ಯಗತ್ಯ, ಎಕೆಂದರೆ ಇವು ನೇರವಾಗಿ ಸಮಾಜದಲ್ಲಿರುವಎಲ್ಲಾ ವರ್ಗಗಳ, ಎಲ್ಲಾ ವಯಸ್ಸಿನವರ ಮೇಲೂ ತಮ್ಮದೇಆದಧನಾತ್ಮಕ ಹಾಗೂ Iiಣಾತ್ಮಕ ಪರಿಣಾಮಗಳನ್ನುಂಟು ಮಾಡುತ್ತಿವೆ.
 
ಸಮೂಹ ಮಾದ್ಯಮಗಳು ಹಾಗೂ ಪ್ರಸ್ತುತ ಭಾರತೀಯ ಸಮಾಜದಲ್ಲಿ ಸಾಂಸ್ಕೃತಿಕ ಬದಲಾವಣೆ.
ಭಾರತೀಯ ಸಮಾಜ ಮೂಲತಃ ಆಧ್ಯಾತ್ಮದ ಹಿನ್ನೆಲೆಯಲ್ಲಿ ಬೆಳೆದು ಬಂದಿದ್ದು ಈಗ ಪ್ರಸ್ತುತ ಭಾರತೀಯ ಸಮಾಜ ಆಧುನಿಕತೆಯ ಬಣ್ಣದ ಲೇಪನ ಪಡೆದು ಪಾಶ್ಚಾತ್ತ್ಯೀಕರಣದ ನೀರಿನ ಅಲೆಯಲ್ಲಿ ಕೊಚ್ಚಿ ಹೋಗುತ್ತಿರುವುದಕ್ಕೆ ಕಾರಣಗಳನ್ನು ಹುಡುಕ ಹೊರಟರೆ, ಅದರಲ್ಲಿಆಧುನಿಕತೆ ಹಾಗೂ ಪಾಶ್ಚಾತ್ತ್ಯೀಕರಣದ ಹೆಸರಲ್ಲಿ ಅಂಧಾಃನುಕರಣೆಯೂ ಒಂದು.ಅಂದರೆ, ಇದರರ್ಥ ಆಧುನಿಕತೆ ಹಾಗೂ ಪಾಶ್ಚ್ಯಾತ್ತೀಕರಣ ಕೆಟ್ಟವು ಎಂದಲ್ಲ, ಆದರೆ ಪಾಶ್ಚಿಮಾತ್ಯರ ಯಾವ ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳಬೇಕು? ಮತ್ತು ಅದು ಯಾವಾಗ ಅಂದರೆ, ಭಾರತದ ಸಾಮಾಜಿಕ ನೆಲೆಗಟ್ಟಿನಲ್ಲಿ ನಾವು ಅಳವಡಿಸಿಕೊಳ್ಳಬೇಕಿರುವ ಪದ್ಧತಿಗಳು ಯಾವ ಪರಿಣಾಮವನ್ನುಂಟು ಮಾಡುತ್ತವೆ ಎಂಬುದನ್ನು ಅರಿಯುವ ಅವಶ್ಯಕತೆ ಇದೆ . ಭಾರತೀಯ ಸಮಾಜದ ಪ್ರಾಥಮಿಕ ಹಂತವಾದ ಕುಟುಂಬ ವ್ಯವಸ್ಥೆಯು ಮೂಲತಃ ಆಧ್ಯಾತ್ಮ ಮತ್ತು ನೈತಿಕ ಹಿನ್ನೆಲೆಯುಳ್ಳದ್ದಾಗಿದ್ದು, ಈ ಪರಂಪರೆಯಲ್ಲಿ ಮೊದಲು ಕುಟುಂಬದ ಸದಸ್ಯರಾದ ಗಂಡು-ಹೆಣ್ಣಿನ ಸ್ಥಾನ, ಅವರ ಅಧಿಕಾರ, ಅವರಿರ್ವರಿಗೆ ಸಮಾಜದಲ್ಲಿ ಸಿಗುವ ಮನ್ನಣೆ ಹಾಗೂ ಅವರ ವ್ಯಕ್ತಿ ಸ್ವಾತಂತ್ರ್ಯ, ಸ್ವಾಭಿಮಾನ, ಮತ್ತು ಇಬ್ಬರ ಆರ್ಥಿಕ ಸ್ವಾತಂತ್ರ್ಯ, ಅವರ ಶೈಕ್ಷಣಿಕಜ಼್ಞಾನ ಮತ್ತು ನೈತಿಕತೆ, ಆಚಾರ-ವಿಚಾರ, ಉಡುಗೆ-ತೊಡುಗೆ, ಒದಗಿಸುವಒಂದು ಸಂಸ್ಕಾರ ಕುಟುಂಬದಲ್ಲಿ ಅತಿ ಅವಶ್ಯಕ. ಸಂಬಂಧಗಳಲ್ಲಿ ಪ್ರೀತಿ-ಸ್ನ್ಹೇಹ, ವಿಶ್ವಾಸ, ತ್ಯಾಗ, ದಯೆ, ಕರುಣೆ ಮುಂತಾದ ಮಾನವೀಯ ಗುಣಗಳು ಹಾಗೂ ಮನುಷ್ಯತ್ವ, ಸಮಾಜದ ಬೆಳವಣಿಗೆಗೆ ಪೂರಕವಾಗಿ ಬೇಕೇ ಬೇಕು ಮತ್ತು ಈ ಎಲ್ಲವನ್ನೂ ಆದರೆ ಈ ಆಧುನಿಕತೆಯ ಹಾಗೂ ಪಾಶ್ಚಾತ್ಯೀಕರಣದ ಪ್ರವಾಹದ ಅಲೆಯಲ್ಲಿ ಸೇರುವ ಭರದಲ್ಲಿ ನಾವು ಎಲ್ಲೋ ಈ ಮೇಲೆ ಹೇಳಿದ ಸಂಸ್ಕಾರ ನೀಡುವ ಪ್ರಾಥಮಿಕ ಕರ್ತವ್ಯವನ್ನು ನಿರ್ಲಷಿಸುತ್ತಿದ್ದೇವೆ. ಇದಕ್ಕೆ ಕಾರಣ ನಮ್ಮ ಸಮಾಜದಲ್ಲಿ ಈಗ ನಡೆಯುತ್ತಿರುವ ಅಪರಾಧಗಳು, ಅದರಲ್ಲಿಯೂ ಇಂತಹ ಅಪರಾಧಿಗಳಲ್ಲಿ ಹೆಚ್ಚಿನ ಸಂಖೆಯ ಅಪರಾಧಿಗಳು ಯುವ ಸಮುದಾಯದವರಾಗಿರುವುದರಿಂದ ನಮ್ಮದೇಶದ ಮಾನವಸಂಪನ್ಮೂಲವನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬುದು .
ಉದಾಹರಣೆಗೆ ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಅಪರಾಧಗಳಲ್ಲಿ ಹೆಚ್ಚಿನವರು ಯುವಕರು ಹಾಗೂ ಒಬ್ಬ ಬಾಲಾಪರಾಧಿಯೂ ಇರುವುದು. ಇದೊಂದು ಪೈಶಾಚಿಕ ಕೃತ್ಯವಾಗಿದ್ದು, ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮೊದಲನೆಯದು ಅಪರಾಧಿಗಳೆಲ್ಲರೂ ಅಪರಾಧಿ ಹಿನ್ನೆಲೆಯುಳ್ಳವರಲ್ಲ ಹಾಗೂ ಈ ಅಪರಾಧಿಗಳು ಇಂತಹ ಪೈಶಾಚಿಕ ಕೃತ್ಯವನ್ನು ನಡೆಸಬೇಕಾದರೆ, ಅವರ ಈ ಮನಸ್ಥಿತಿಗೆ ಕಾರಣವನ್ನು ಹುಡುಕ ಹೊರಟರೆಅದಕ್ಕೆ ನೇರ ಹೊಣೆ ಪ್ರಸ್ತುತ ನಮ್ಮ ಸಮಾಜ ಹಾಗೂ ನಮ್ಮ ಆಡಳಿತ ವ್ಯವಸ್ಥೆಯೇಆಗಿರುತ್ತದೆ. ಏಕೆಂದರೆ, ದೆಹಲಿಯಂತಹ ಪಾಶ್ಚಿಮಾತ್ಯ ದೇಶಗಳ ನೇರ ಸಂಪರ್ಕ ಹೊಂದಿರುವ, ಆಧುನಿಕತೆಗೆ ತೆರೆದುಕೊಂಡಿರುವ ಸಾಮಾಜಿಕ ನಗರ ಪರಿಸರದಲ್ಲಿರುವ ಯುವ ಸಮುದಾಯವನ್ನು ಪರಿಗಣಿಸಿದರೆ, ಅಂತಹ ಯುವ ಸಮುದಾಯದಲ್ಲಿ ನಾವು ಎರಡು ವರ್ಗಗಳನ್ನು ಕಾಣಬಹುದು. ಒಂದು, ಪೂರ್ಣ ಪ್ರಮಾಣದ ಶೈಕ್ಷಣಿಕ ಜ಼್ಞಾನವನ್ನು ನೈತಿಕ ಹಿನ್ನೆಲೆಯಲ್ಲಿ ಹೊಂದುತ್ತಿರುವ (ಆಧುನಿಕತೆಗೆ ತೆರೆದುಕೊಂಡಿರುವವರು) ಮತ್ತೋಂದು ಕೇವಲ ಜೀವನೋಪಾಯಕ್ಕಾಗಿ ನೈತಿಕ ಹಿನ್ನೆಲೆಯಿಲ್ಲದೆ ಶೈಕ್ಷಣಿಕ ಜ಼್ಞಾನ ಹೊಂದುತ್ತಿರುವ ಯುವಕರು (ನಿರುದ್ಯೋಗಿಗಳು, ಆಧುನಿಕತೆಯೆಡೆಗೆ ತುಡಿಯುತ್ತಿರುವ ಮನಸ್ಸುಗಳು ಆದರೆ, ಬಡತನ, ಶೈಕ್ಷಣಿಕ ಅನರ್ಹತೆಯಿಂದಾಗಿ, ಆಧುನಿಕತೆಯ ಬಣ್ಣದಿಂದ ವಂಚಿತವಾದ ಯುವ ಸಮುದಾಯ )
        ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಆಧುನಿಕ ಸಮೂಹ ಮಾದ್ಯಮಗಳು ಉದಾಹರಣೆಗೆ ಇಂಟರ್‌ನೆಟ್, ದೂರದರ್ಶನ ಮುಂತಾದವು ಮೊದಲನೆ ವರ್ಗದವರಿಗೆ ಧನಾತ್ಮಕ ಪ್ರಭಾವ ಬೀರಿದರೆ, ಎರಡನೇ ಯುವ ವರ್ಗಕ್ಕೆ ಋಣಾತ್ಮಕ ಪ್ರಭಾವವನ್ನು ಬೀರುತ್ತಿವೆ. ಇವು ಅಂದರೆ, ಸಾಮಾಜಿಕ ಸ್ಥಿತ್ಯಂತರದ ಪರಿಕಲ್ಪನೆಯಿಲ್ಲದೆ ಆಧುನಿಕತೆಯ ಹೆಸರಿನಲ್ಲಿ ಅಂಧಾಃನುಕರಣೆ ಅದರಲ್ಲೂ ಭಾರತೀಯ ಸಮಾಜದಲ್ಲಿ ಸ್ತ್ರೀ ಸ್ವಾತಂತ್ರ್ಯ ಹಾಗೂ ಲೈಂಗಿಕ ಹಿಂಸೆಗಳು, ಅತ್ಯಾಚಾರಗಳಿಗೆ ಬಹುಮುಖ್ಯ ಕಾರಣ, ಪ್ರಚೋದನೆ. ಪ್ರಸ್ತುತ ನಮ್ಮ ಸಮಾಜದಲ್ಲಿಇಂತಹ ಪ್ರಚೋದನೆಗಳಿಗೆ ಅತ್ಯಂತ ಹೇರಳವಾಗಿ ಅವಕಾಶ ಮಾಡಿಕೊಡಲಾಗಿದೆ. ಅದು, ಇಂಟರ್‌ನೆಟ್, ಮೊಬೈಲ್ ದುರ್ಬಳಕೆ ಮತ್ತು ಯುವತಿಯರು ತೊಡುತ್ತಿರುವ ತುಂಡುಡುಗೆಗಳು ಮತ್ತು ದೂರದರ್ಶನದಂತಹ ಮಾದ್ಯಮಗಳಲ್ಲಿ ಬಿತ್ತರಿಸುವ ಪ್ರಚೋದನಾತ್ಮಕ ಜಾಹಿರಾತುಗಳು ಇನ್ನೂ ಮುಂತಾದವುಗಳು .ಕಾರಣ ನಾವೀಗ ಸಮಾಜಿಕ ಬದಲಾವಣೆಯಲ್ಲಿ ತೊಡಗಿದ್ದೇವೆಆದರೆ, ಇಲ್ಲಿ ಗಮನಿಸಬೇಕಾದ ಮತ್ತೋಂದುಅಂಶವೆಂದರೆ, ಪಾರಂಪರಿಕವಾಗಿ ಭಾರತೀಯ ಸಮಾಜದಲ್ಲಿದ್ದ ನೈತಿಕ ಮೌಲ್ಯಗಳು ನಶಿಸುತ್ತಿವೆ ಮತ್ತು ಲೈಂಗಿಕತೆಯಂತಹ ಸೂಕ್ಷ್ಮ ವಿಷಯಗಳಿಗೆ ಬಂದಾಗ ಭಾರತದಲ್ಲಿಗೌಪ್ಯ ಲೈಂಗಿಕತೆ ಮತ್ತುಲೈಂಗಿಕತೆಗೆ ಪಾವಿತ್ರ್ಯತೆಯನ್ನುಒದಗಿಸಲಾಗಿತ್ತು.ಆದರೆ, ಇಂದು ಸಮೂಹ ಮಾದ್ಯಮಗಳ ಮೇಲೆ ಸರಿಯಾದ ನಿಯಂತ್ರಣವಿಲ್ಲದೇಅದರ ದುರ್ಬಳಕೆ ಹೆಚ್ಚಾಗಿದ್ದು ಸ್ತ್ರೀ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಲ್ಲಿ ಸ್ವೇಚ್ಛಾಚಾರದ ನಡವಳಿಕೆ, ಯುವಜನತೆಯಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆ,ಮತ್ತುಈ ಮೇಲೆ ಹೇಳಿದ ಒಂದು ಯುವಸಮುದಾಯವು ಇನ್ನೊಂದು ಯುವಸಮುದಾಯವನ್ನು ಕಂಡುಧ್ವೇಷ, ಅಸೂಯೆಯಂತಹ ಭಾವನೆಗಳನ್ನು ಬೆಳೆಸಿಕೊಂಡು ಮಾನಸಿಕ ಕ್ಷೋಭೆಯನ್ನು ಎದುರಿಸುತ್ತಿವೆ.
 
ಪ್ರಚೋದನೆ ಮತ್ತು ಸಮೂಹ ಮಾದ್ಯಮಗಳು
ಪ್ರಚೋದನೆ ಮತ್ತು ಸಮೂಹ ಮಾದ್ಯಮಗಳು ಒಂದಕ್ಕೊಂದು ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿವೆ. ಸಮೂಹ ಮಾದ್ಯಮಗಳು ಮನುಷ್ಯನ ಮನಸ್ಸನ್ನು ಅತಿ ಹೆಚ್ಚಾಗಿ ಪ್ರಚೋದಿಸುತ್ತಿವೆ. ಇದು ಪ್ರಸ್ತುತ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಅನೇಕ ಘಟನೆಗಳನ್ನು ಅವಲೋಕಿಸಿದಾಗ ತಿಳಿಯುತ್ತದೆ. ಉದಾಹರಣೆಗೆ ಇತ್ತೀಚಗೆ ನಮ್ಮ ಸಮಾಜದ ಮುಖ್ಯ ವಾಹಿನಿಯಲ್ಲಿರುವ ಅನೇಕರು ನಡೆದುಕೊಂಡಿರುವ ರೀತಿಯಿಂದ ತಿಳಿಯುತ್ತದೆ ಅವುಗಳಲ್ಲಿ ಪ್ರಮುಖವಾದುವುಗಳೆಂದರೆ ನಮ್ಮನ್ನಾಳುವ ಶಾಸಕರು ಪವಿತ್ರವಾದ ವಿಧಾನಸೌಧದೊಳಗೆ ಕುಳಿತು ಅಶ್ಲೀಲ ಚಿತ್ರ ವೀಕ್ಷಣೆಮಾಡಿದ್ದು, ಅನೇಕ ಸ್ವಾಮಿಜಿಗಳು ಲೈಂಗಿಕ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವುದು, ಶಿಕ್ಷಕರ ಲೈಂಗಿಕ ದೌರ್ಜನ್ಯಗಳು, ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರದಂತಹ ಘಟನೆಗಳು ನಮ್ಮ ಸಮಾಜದಲ್ಲಿ ಹೆಚ್ಚಾಗುತ್ತಿವೆ.
        ಭಾರತೀಯ ಸಮಾಜ ಆಧುನಿಕತೆ, ಜಾಗತೀಕರಣ ಮತ್ತು ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಕ್ರಮೇಣ ಸಮಾಜದ ಪ್ರಾಥಮಿಕ ಹಂತವಾಗಿರುವ ಕುಟುಂಬ ವಿಘಟನೆಯಾಗುತ್ತಿರುವುದು ದಿನೇ-ದಿನೇ ಹೆಚ್ಚುತ್ತಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ಪ್ರತಿ ವರ್ಷವೂ ಏರುತ್ತಿರುವ ವಿವಾಹ ವಿಚ್ಛೇದನಗಳ ಸಂಖ್ಯೆ .ಇದಕ್ಕೆ ಮತ್ತೊಂದು ಪೂರಕ ಅಂಶವೆಂದರೆ, ಈಗ ಭಾರತದಲ್ಲಿ ವಿರಳವಾಗಿರುವ ಅವಿಭಕ್ತ ಕುಟುಂಬ ವ್ಯವಸ್ಥೆ. ಈಗ ಅಣ್ಣ, ಅತ್ತಿಗೆ, ನಾದಿನಿ, ಮೈದುನ, ಬಾವ, ಚಿಕ್ಕಪ್ಪ, ಚಿಕ್ಕಮ್ಮ ಎಂಬಂತಹ ಅನೇಕ ಸಂಬಂಧಗಳು ಕಾಣೆಯಾಗುತ್ತಿರುವುದೂ ಸಹ, ಇಂದಿನ ಯುವ ಪೀಳಿಗೆಯಲ್ಲಿ ಪರಸ್ತ್ರೀಯರ ಬಗ್ಗೆ ಕೇವಲ ಕೆಟ್ಟಭಾವನೆಗಳು ಮೂಡುವಂತೆ ಮಾಡುತ್ತಿವೆ. ಇದಕ್ಕೆ ಪೂರಕವಾಗಿ ಸಮೂಹ ಮಾಧ್ಯಮಗಳ ದುರ್ಬಳಕೆಯೂ ಸಹ ಪ್ರಮುಖವಾಗಿದೆ.

ಉಪಸಂಹಾರ
ಯಾವುದೇ ವ್ಯಕ್ತಿ ಹುಟ್ಟುತ್ತಾ ಅಪರಾಧಿಯಲ್ಲ, ಆದರೆ, ಅವನಿರುವ ಸಮಾಜ ಹಾಗೂ ಅವನು ಬೆಳೆದು ಬಂದ ಪರಿಸರ ಅವನನ್ನು ಅಪರಾಧಿಯನ್ನಾಗಿಸುತ್ತದೆ. ಆದರೆ, ಈಗ ಆಧುನಿಕ ಯುಗದಲ್ಲಿ ಸಮೂಹ ಮಾಧ್ಯಮಗಳು ವ್ಯಕ್ತಿಯ ಮೇಲೆ, ಸಮಾಜದ ಮೇಲೆ ಅತ್ಯಂತ ಪ್ರಖರವಾಗಿ ಬೇಗನೇ ಪ್ರಭಾವ ಬೀರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಉತ್ತಮ ಸಮಾಜಕ್ಕಾಗಿ ಆಧುನಿಕತೆ ಹಾಗೂ ಜಾಗತೀಕರಣ ಮತ್ತು ಪಾಶ್ಚಾತ್ತೀಕರಣದಲ್ಲಿರುವ ಎಲ್ಲಾ ಧನಾತ್ಮಕ ಅಂಶಗಳನ್ನು ಭಾರತೀಯ ಮೂಲ ಸಾಮಾಜಿಕ ಪರಿಕಲ್ಪನೆಗೆ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ.

                -ಭೀಮನಗೌಡ.ಕೆ.ಎಂ
               (ಎಂ.ಎ.,ಬಿಎಡ್.,ಎಲ್‌ಎಲ್ ಬಿ.)
               bkm.gowda@rediffmail.com
               ಶಿಕ್ಷಕರು, ಪಿ,ಎಸ್,ಎಸ್,ಇ,ಎಮ್,ಆರ್, ಶಾಲೆ.
              ತೋಳಹುಣಸೆ, ಡಾವಣಗೆರೆ-೨
              ಮೊಬೈಲ್-೯೪೮೨೦೬೬೩೩೪



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ