ನನ್ನ ಪುಟಗಳು

19 ಜನವರಿ 2014

ಕರ್ನಾಟಕದ ಪ್ರವಾಸೀ ಕೇಂದ್ರಗಳ ಕಿರು ಪರಿಚಯ

            ದೇಶ ಸುತ್ತು-ಕೋಶ ಓದು ಎಂಬ ನಾಣ್ಣುಡಿಯಂತೆ ಜ್ಞಾನಾರ್ಜನೆಗೆ ಪುಸ್ತಕದ ಓದು ಒಂದು ಕಡೆಯಾದರೆ, ಓದಿದ ವಿಷಯಗಳ ಮೂರ್ತರೂಪದ ಅನುಭವಕ್ಕೆ ಪ್ರವಾಸ ಮತ್ತೊಂದು ಪ್ರಮುಖ ಅಂಶವಾಗಿದೆ. ಭವ್ಯ ಪರಂಪರೆಯ ನೆಲೆವೀಡಾಗಿರುವ ಕರುನಾಡಿನಲ್ಲಿ ನೂರಾರು ಪ್ರಸಿದ್ಧ ಪ್ರವಾಸಿ ತಾಣಗಳು, ಪುಣ್ಯ ಕ್ಷೇತ್ರಗಳು ಕೈಬೀಸಿ ಕರೆಯುತ್ತಿವೆ. ಬನ್ನಿ, ಕನ್ನಡ ನಾಡಿನ ಪ್ರಸಿದ್ಧ ಪ್ರವಾಸಿ ಕೇಂದ್ರಗಳ ಪರಿಚಯಮಾಡಿಕೊಳ್ಳೋಣ.... ರಜಾದಿನಗಳಲ್ಲಿ ಬಂಧು-ಮಿತ್ರರೊಡನೆ ಕೈಗೊಳ್ಳುವ ಪ್ರವಾಸವು ಮನಸ್ಸಿಗೆ ಆಹ್ಲಾದವನ್ನುಂಟು ಮಾಡಿ ನಮಗೆ ಅಪಾರ ನೈಜ ಅನುಭವಗಳನ್ನು ನೀಡುತ್ತದೆ....   



ಚಾಮುಂಡಿ ಬೆಟ್ಟ, ಮೈಸೂರು.


ಶ್ರೀ ಚಾಮುಂಡೇಶ‍್ವರಿ ದೇವಾಲಯ
ಸಮುದ್ರ ಮಟ್ಟದಿಂದ 3489 ಅಡಿ ಎತ್ತರದಲ್ಲಿದೆ. ದ್ರಾವಿಡಶೈಲಿಯಲ್ಲಿ ನಿರ್ಮಿಸಲಾಗಿದೆ. ಮಹಾದ್ವಾರಕ್ಕೆ ಏಳು ಅಂತಸ್ತಿನ ಗೋಪುರವಿದೆ. ತಾಯಿ ಚಾಮುಂಡಿಯು ಮಹಿಷಾಸುರನನ್ನು ಸಂಹರಿಸಿ ಇಲ್ಲಿ ನೆಲೆಸಿದಳೆಂದು ಪ್ರತೀತಿ. ಶ್ರೀ ಚಾಮುಂಡೇಶ್ವರಿಯು ಮೈಸೂರಿನ ಒಡೆಯರ ಆರಾಧ್ಯ ದೈವವಾಗಿದ್ದಳು.

ಮಾರ್ಗ:- ಮೈಸೂರಿನಿಂದ ರಸ್ತೆಮಾರ್ಗವಾಗಿ 12 ಕಿ.ಮೀ.
ಬೆಟ್ಟದ ಪಾದದಿಂದ (4.4 ಕಿ.ಮೀ) ಮೇಲಕ್ಕೆ 1008 ಮೆಟ್ಟಿಲುಗಳಿವೆ.
ಉತ್ತನಹಳ್ಳಿ ಸಮೀಪದಿಂದಲೂ (9 ಕಿ.ಮೀ) ಮೇಲಕ್ಕೆ ಹತ್ತಲು ಮೆಟ್ಟಿಲುಗಳಿವೆ.

ಪೂಜಾ ಸಮಯ:- 
ಬೆ. 7.30 (ಶುಕ್ರವಾರ ಬೆ 6.00) ರಿಂದ ಮ. 2.00
ಮ. 3.30 ರಿಂದ ಸಂ. 6.00 ಮತ್ತು
ರಾ. 7.30 ರಿಂದ ರಾ. 9.30