ತಂತಿ ಇರದ ಅಂದವಾದ
ವೀಣೆ ಏತಕೆ
ನಾನು ನೀನು ಜೊತೆಗೆ ಇರದ
ಕೋಣೆ ಏತಕೆ
ನೀನು ಬರದ ದಾರಿಯಲ್ಲಿ
ಹಾಸದೇತಕೆ
ನೀನೇ ಇರದ ಊರಿನಲ್ಲಿ
ವಾಸವೇತಕೆ
ನೀನು ಇರದ ರಾತ್ರಿ ಹೂ
ಮುಡಿಯಲೇತಕೆ
ನೀನೇ ಇರದ ಮಗ್ಗುಲಲ್ಲಿ
ಮೆತ್ತೆಯೇತಕೆ
ನಾನೇ ನೀನು ನೀನೇ ನಾನು
ದೂರ ಸರಿದೆ ಏತಕೆ
ನಮ್ಮೊಳಿರುವ ಒಲವನ್ನು
ಮರೆತೆ ಏತಕೆ
ನಾನೇ ಸೋತ ಮೇಲೆ
ಕೊಂಕು ಮಾತದೇತಕೆ
ಸೋತು ಗೆಲುವ ಒಲವಿನಲ್ಲಿ
ಬಿಂಕವೇತಕೆ
ಒಂದೇವಾದ್ಯದಲ್ಲಿ ಭಿನ್ನ
ರಾಗವೇತಕೆ
ಏಕವಾದಮೇಲೆ ಬೇರೆ
ವಾದವೇತಕೆ.
-ಜ್ಯೋತಿ
ಬಸವರಾಜ ದೇವಣಗಾವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ