ನನ್ನ ಪುಟಗಳು

01 ಸೆಪ್ಟೆಂಬರ್ 2018

ದೈಹಿಕ ಶಿಕ್ಷಣ: ಅರ್ಥ-ಮಹತ್ವ-ಮೂಲತತ್ವಗಳು

ಈ ಕೆಳಗಿನ ಅಂಶಗಳನ್ನು ಆರಿಸಿ....


  • ಶಿಕ್ಷಣ
  • ದೈಹಿಕ ಶಿಕ್ಷಣ
  • ಮಹತ್ವ
  • ಮೂಲ ತತ್ವಗಳು

  •  

     ಶಿಕ್ಷಣ

    ಶರೀರ ಶಿಕ್ಷಣ ಎಂಬ ಶಬ್ದವು ಶರೀರ ಮತ್ತು ಶಿಕ್ಷಣ ಎಂಬ ಎರಡು ಪದಗಳ ಸಮ್ಮಿಲನವಾಗಿದೆ. ಆದುದರಿಂದ ಶರೀರ ಶಿಕ್ಷಣದ ಅರ್ಥ ತಿಳಿಯುವ ಮೊದಲು ಶಿಕ್ಷಣದ ಅರ್ಥವನ್ನು ತಿಳಿಯೋಣ.

    ಶಿಕ್ಷಣ ಎಂಬ ಪದವು ಇಂಗ್ಲೀಷ್ ಅನುವಾದ Education ಎಂಬ ಪದದಿಂದಾಗಿದೆ. ಆಂಗ್ಲಭಾಷೆಯ ಈ Education ಎಂಬ ಪದವು Educe ಎಂಬ ಲ್ಯಾಟಿನ್ ಪದದಿಂದ ಬಂದಿದೆ. Educe ಎಂದರೆ ಹೊರ ತೆಗೆ ಅಥವಾ ಬೆಳೆಸು ಎಂದರ್ಥವಾಗುತ್ತದೆ. ಆದುದರಿಂದ ಶಿಕ್ಷಣವು ಮಾನವನ ಆಂತರಿಕ ಶಕ್ತಿಯನ್ನು ಹೊರ ತರುವುದಲ್ಲದೇ ಅದನ್ನು ಬೇಳೆಸುತ್ತದೆ.

    ಇದನ್ನೇ ಮಹಾತ್ಮ ಗಾಂಧೀಜಿ ಮತ್ತು ಎಡಿಸನ್ ರವರು ಶಿಕ್ಷಣ ಎಂಬ ಪದವು Educare ಎಂಬ ಮೂಲ ಪದದಿಂದ ಉದ್ಭವಿಸಿದೆ ಎಂದಿದ್ದಾರೆ. ಇದರ ಅರ್ಥ ಒಳ್ಳೆಯ ಗುಣವನ್ನು ಹೊರ ತೆಗೆ ಅಥವಾ ಬೆಳೆಸು ಎಂಬುದಾಗಿದೆ. ಅಂದರೆ ವ್ಯಕ್ತಿಯಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುವುದೇ ಶಿಕ್ಷಣವಾಗಿದೆ.

    ಶಿಕ್ಷಣದ ಬಗ್ಗೆ ಹಲವಾರು ಶಿಕ್ಷಣ ತಜ್ಞರುಗಳು, ಧರ್ಮ ಗುರುಗಳು, ತತ್ವಜ್ಞಾನಿಗಳು ತಮ್ಮದೇ ವ್ಯಾಖ್ಯಾನಗಳನ್ನು ನೀಡಿರುವರು. ಅವು ಈ ಕೇಗಿನಂತಿವೆ.

    ಕ್ರೋವ್ ಮತ್ತು ಕ್ರೋವ್ : ಪೀಳಿಗೆಯಿಂದ ಪೀಳಿಗೆಗೆ ಆಗುವ ಜ್ಞಾನದ ವರ್ಗಾವಣೆಯೇ ಶಿಕ್ಷಣ ಎಂದಿದ್ದಾರೆ.
    ಟಿ.ಪಿ.ನನ್ :ಪ್ರತಿ ವ್ಯಕ್ತಿಯೂ ಪರಿಪೂರ್ಣವಾಗಿ ಬೆಳೆಯುವಂತೆ ಯೋಗ್ಯ ಪರಿಸರವನ್ನು ನಿರ್ಮಿಸುವುದೇ ಶಿಕ್ಷಣ ಎನ್ನುತ್ತಾರೆ.
    ಬ್ಯಾನರ್ಜಿ: ಬದಲಾಗಿತ್ತಿರುವ ಸಮಾಜದ ವಾತಾವರಣಕ್ಕೆ ಹೊಂದಿಕೊಂಡು ಹೋಗುವಂತೆ ಮಾಡುವುದೇ ಶಿಕ್ಷಣ ಎನ್ನುತ್ತಾರೆ.
    ಜಾನ್ ಡ್ಯೂಯಿ : ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳ ಪುನರ್ ಪರಿಶಿಲನೆಯೇ ಶಿಕ್ಷಣ ಎಂದಿದ್ದಾರೆ.
    ಮಹಾತ್ಮಗಾಂಧೀಜಿ : ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ನೈತಿಕವಾಗಿ ಸಮರ್ಥರನ್ನಾಗಿಸುವುದೇ ಶಿಕ್ಷಣ ಎಂದಿದ್ದಾರೆ.

    ಮೇಲಿನ ಎಲ್ಲಾ ವ್ಯಾಖ್ಯಾನಗಳನ್ನು ಕ್ರೂಢೀಕರಿಸಿದಾಗ ಇಂದಿನ ಪ್ರಗತಿಪರ ಸಮಾಜಕ್ಕೆ ಮಹಾತ್ಮ ಫಾಂಧೀಜಿಯವರ ವ್ಯಾಖ್ಯಾನ ಇಂದಿನ ಕೆಲವು ಸವಾಲುಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಹೇಳಬಹುದಾಗಿದೆ. ಆದರೆ ಶೈಕ್ಷಣಿಕ ಅನುಭವವು ಮನೆ,ಶಾಲೆ,ಪುಸ್ತಕ ಭಂಡರ,ಪ್ರಯೋಗಶಾಲೆ, ಪ್ರವಾಸ, ಆಟದ ಬಯಲು, ಪೇಟೆ ಹಾಗೂ ಸಮಾಜದ ಎಲ್ಲಾ ಕಡೆಗಳಲ್ಲೂ ನಡೆಯುತ್ತಿರುತ್ತದೆ.

    ಆದರೆ ಅದಲ್ಲವನ್ನು ಕ್ರಮಬದ್ದಗೊಳಿಸಿ ಒಮ್ದು ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಂತೆ ಮಾಡುವ ಜವಾಬ್ದಾರಿ ಶಿಕ್ಷಕನಿಗಿದ್ದು, ಅವನ ವ್ಯಕ್ತಿತ್ವದ ಮೇಲೆ ಶಿಕ್ಷಣ ಅವಲಂಬಿತವಾಗಿದೆ ಎಂದರೆ, ತಪ್ಪಾಗಲಾರದು. ಆದರೆ ಅವನಿಗೆ ಒಂದು ವ್ಯಾಪ್ತಿಯಿದ್ದು ಅದರಲ್ಲಿ ಮಗುವಿಗೆ ಅವಶ್ಯಕವಾದುದ್ದನ್ನು ಶಿಕ್ಷಣ ತಜ್ಞರುಗಳು ಸೂಚಿಸಿದ ಪಠ್ಯವಸ್ತುವಿನ ಆಧಾರದ ಮೇಲೆ ಮುಂದಿನ ಸತ್ಪ್ರಜೆಗಳನ್ನು ಶಿಕ್ಷಕ ತಯಾರುಮಾಡುವ ಕೆಲಸದಲ್ಲಿ ಕಾರ್ಯಪ್ರವೃತ್ತನಾಗಿದ್ದಾನೆ.

     

    ದೈಹಿಕ ಶಿಕ್ಷಣ

    ಮಾನವನಿಗೆ ಅತಿ ಹೆಚ್ಚು ಪ್ರಿಯವಾದುದೆಂದರೆ ಆತನ ಶರೀರ. ಈ ಶರೀರವನ್ನು  ಬಿಟ್ಟು ಒಂದು ಕ್ಷಣವು ಅವನಿರುವುದಾದರೆ ಅದು ನಿರ್ಜೀವಿಯಾಗಿ ಮಾತ್ರ. ಶರೀರವೇ ಶ್ರೇಷ್ಠ, ಶರೀರವಿಲ್ಲದ ಮನುಷ್ಯನನ್ನು ಕಲ್ಪಿಸಲು ಅಸಾಧ್ಯ ಈ ಶರೀರದೊಳಗೆ ಅತ್ಮ, ಮನಸ್ಸು, ಬುದ್ಧಿ, ಭಾವನೆಗಳು ಸೇರಿಕೊಂಡಿವೆ. ಇವುಗಳು ಶರೀರದ ಮೂಲಕ ತಮ್ಮ ಚಟುವಟಿಕೆಯನ್ನು ನಿರ್ವಹಿಸುವುದರಿಂದಲೇ ಮಹಾಕವಿ ಕಾಳಿದಾಸನು ಶರೀರ ಮಾಧಂಖಲು ಧರ್ಮಂ ಸಾಧನಂ ಎಂಬ ಉಕ್ತಿಯನ್ನು ಜಗತ್ತಿಗೆ ನೀಡಿದ್ದು ಅದು ಬಹಳ ಮಹತ್ವದ್ದಾಗಿದೆ.
    ದೈಹಿಕ ಶಿಕ್ಷಣವನ್ನು ಶಿಕ್ಷಣದ ಒಂದು ಮೃದುವಾದ ಅಂಗ ಅಥವಾ ಶಿಕ್ಷಣದ ಒಂದು ಜೀವಾಳ ಎಂದೆಲ್ಲಾ ಹೇಳಲಾಗುತ್ತದೆ. ದೈಹಿಕ ಎಂಬ ಪದವು ದೇಹಕ್ಕೆ ಸಂಬಂಧಿಸುವುದಾಗಿದೆ. ಶಿಕ್ಷಣಕ್ಕೆ ಶರೀರ ಒಂದು ಪ್ರಮುಖ ಸಾಧನ. ಈ ಸಾಧನಕ್ಕೂ ಸಹ ಶಿಕ್ಷಣ ಬೇಕು.
    ಶರೀರ ಶಿಕ್ಷಣವು ಶಾರೀರಿಕ ಚಟುವಟಿಕೆಗಳ ಮೂಲಕ ಶಿಕ್ಷಣದ ಪ್ರಗತಿಗೆ ಪೂರಕ ಹಾಗೂ ಮೂಲಭೂತವಾಗಿ ಸ್ಪಂಧಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.

    ಜೀವನ ಪ್ರಗತಿಗೆ ಬೌದ್ಧಿಕ ಶಿಕ್ಷಣ ಹೇಗೆ ಅವಶ್ಯಕವೋ ಹಾಗೆಯೇ ಶರೀರದ ಆರೋಗ್ಯಕ್ಕೆ ದೈಹಿಕ ಶಿಕ್ಷಣ ಅವಶ್ಯವಾಗಿರುತ್ತದೆ. ದೈಹಿಕ ಶಿಕ್ಷಣದ ಬಗ್ಗೆ ಅನೇಕ ಪ್ರಸಿದ್ದ ಶಿಕ್ಷಣ ತಜ್ಞರುಗಳು ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡಿದ್ದಾರೆ.

    ಸಿ.ಎ. ಬ್ಯೂಕರ್ ಎಂಬ ಶಿಕ್ಷಣ ತಜ್ಞರು, “ದೈಹಿಕ ಶಿಕ್ಷಣವು ಒಟ್ಟು ಶಿಕ್ಷಣ ಕ್ರಿಯೆಯ ಒಂದು ಮಹತ್ವದ ಭಾಗ ಯೋಗ್ಯವಾದ ಶಾರೀರಿಕ ಚಟುವಟಿಕೆಗಳ ಮೂಲಕ, ಶಾರೀರಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ  ಮತ್ತು ಸಾಮಾಜಿಕವಾಗಿ ಯೋಗ್ಯರಾದ ನಾಗರೀಕನನ್ನು ನಿರ್ಮಾಣ ಮಾಡುವುದೆ ದೈಹಿಕ ಶಿಕ್ಷಣವಾಗಿದೆ ಎಂದಿದ್ದಾರೆ.

    .ಎ.ಹೆಚ್.ಪಿ.ಇ.ಆರ್.ಡಿ.(American Association Helth, Physical Education, Recreation and Dance)ರವರು “ವ್ಯಕ್ತಿಯ ಬೆಳವಣಿಗೆ, ಅಭಿವೃದ್ಧಿ, ಮತ್ತು ನಡೆತೆಗಳ ಮೌಲ್ಯಗಳಿಗನುಗುಣವಾಗಿ ಆಯ್ದು ಶಾರೀರಿಕ ಚಟುವಟಿಕೆಗಳ ಮೂಲಕ ಕೊಡುವಂತಹ ಶಿಕ್ಷಣಕ್ಕೆ ದೈಹಿಕ ಶಿಕ್ಷಣ ಎಂದು ಕರೆಯುತ್ತಾರೆ”.

    ಜೆ.ಪಿ.ಥಾಮಸ್ ಎಂಬ ಶಿಕ್ಷಣ ತಜ್ಞರು “ಶರೀರದ ಮೂಲಕ ಶರೀರಕ್ಕೆ ಕೊಡುವ ಶಿಕ್ಷಣವೇ ದೈಹಿಕ ಶಿಕ್ಷಣ “, ಇದು ದೇಹಕ್ಕೆ ಸಂಬಂಧಿಸಿರುವುದಕ್ಕಿಂತ ಹೆಚ್ಚಾಗಿ ಶೀಕ್ಷಣಕ್ಕೆ ಸಂಬಂಧಿಸಿದೆ ಎಂದಿದ್ದಾರೆ.

    ಮೇಲಿನ ಎಲ್ಲಾ ಅಂಶಗಳನ್ನು ಕ್ರೂಡೀಕರಿಸಿದಾಗ ದೈಹಿಕ ಶಿಕ್ಷಣ ಶರೀರದಲ್ಲಿ ರುವ ಮನಸ್ಸು ಬುದ್ಧಿ, ಭಾವನೆಗಳನ್ನು ಶಾರೀರಿಕ ಚಟುವಟಿಕೆಗಳ ಮೂಲಕ ನೈತಿಕವಾಗಿಯೂ ಅಭಿವೃದ್ಧಿ ಹೊಂದುವಂತೆ ಮಾಡಲು ಪ್ರಯತ್ನಿಸುತ್ತದೆ.

     

    ಮಹತ್ವ

    ಪ್ರಗತಿಯ ಹಾದಿಯಲ್ಲಿ ಬುದ್ಧಿಶಕ್ತಿಗೆ ಬಹಳ ಪ್ರಾಮುಖ್ಯತೆ ಇವೆ. ಹಾಗಾಗಿ ಇದರ ಅಭಿವೃದ್ಧಿಗಾಗಿ ಒಂದು ಸುವ್ಯವಸ್ಥಿತವಾಗಿ ಶಿಕ್ಷಣವೆಂಬ ವ್ಯವಸ್ಥೆ ನಮ್ಮಲ್ಲಿದೆ. ಇದು ಕೇವಲ ಬೌದ್ಧಿಕ ಶಕ್ತಿಗಷ್ಟೇ ಸೀಮಿತವಾಗಿರದೆ ವಿವಿಧ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸರ್ವಾಂಗೀಣ ವ್ಯಕ್ತಿತ್ವದ ವಿಕಸನಕ್ಕೆ ದೈಹಿಕ ಶಿಕ್ಷಣ ಸಂಗೀತ, ನೃತ್ಯ, ಚಿತ್ರಕಲೆ ನಾಟಕಗಳಂತಹವುಗಳು ಸಹ ಬಹಳ ಮುಖ್ಯವಾಗಿವೆ. ಇವು ಸಹ ಶಿಕ್ಷಣವೆಂಬ ವ್ಯವಸ್ಥೆಯಲ್ಲಿ ಕಲಿಕೆಯ ವಸ್ತುವಾಗಿದ್ದು, ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ.
    ಜೀವನ ವಿಜ್ಞಾನದ ಪರಿಕಲ್ಪನೆಯ ಪಂಚವಲಯಗಳನ್ನು ಅಭಿವೃದ್ಧಿ ಪಡಿಸುವಲ್ಲಿ ದೈಹಿಕ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತಿದೆ ಎನ್ನಬಹುದಾಗಿದೆ.
    ಶಿಕ್ಷಣವೆಂಬ ಮಹಾ ಸಾಗರದಲ್ಲಿ ದೈಹಿಕ ಶಿಕ್ಷಣ ಶಾಲಾ ಮುಖ ಲಕ್ಷಣವಾಗಿ ಶಾಲಾ ಮೈದಾನ ಇದಕ್ಕೆ ಅಭರಣವಾಗಿ ಶೋಭಿಸುವ ನಿಟ್ಟಿನಲ್ಲಿ ಶಿಕ್ಷಣ ಮತ್ತು ದೈಹಿಕ ಶಿಕ್ಷಣ ಒಂದೇ ನಾಣ್ಯದ ಎರಡು ಮೂಖಗಳಂತೆ ತಾರ್ಯ ನಿರ್ವಹಿಸುತ್ತಿವೆ.
    ಶಿಕ್ಷಣ ದೈಹಿಕ ಶಿಕ್ಷಣಕ್ಕೆ ಸ್ಪೂರ್ತಿಯಾದರೆ, ದೈಹಿಕ ಶಿಕ್ಷಣ ಶಿಕ್ಷಣ ಬೌದ್ಧಿಕ ವಿಷಯಗಳಿಗೆ ಪೂರಕ ಅಂಶಗಳನ್ನು ನೀಡಿ ಕಲಿಕಾ ಪ್ರಗತಿಗೆ ಪೂರಕ ವ್ಯವಸ್ಥೆಯನ್ನು ಮಾಡಿಕೊಡುತ್ತದೆ. ಆದರೆ ಇವೆರೆಡರ ಗುರಿ ಬಹುಶಃ ಉತ್ತಮ ನಾಗರೀಕರನ್ನು ತಯಾರು ಮಾಡುವುದೇ ಆಗಿದ್ದರೂ ಸಹ ಇವು ತಮ್ಮದೇ ಆದ ವಿವಿಧ ಗುರಿ ಉದ್ದೇಶಗಳನ್ನು ಈಡೇರಿಸುತ ತಮ್ಮಗಳ ಗುರಿಯತ್ತ ಸಾಗುತ್ತದೆ. ಆದರೆ ಇವುಗಳ ಈ ಬೋಧನ ತಂತ್ರ ಮತ್ತು ಚಟುವಟಿಕೆಯಲ್ಲಿ ಒಂದಕ್ಕೊಂದು ಸಾಮ್ಯತೆ ಇದ್ದರೂ ಸಹ ವ್ಯತ್ಯಾಸಗಳು ಕಂಡುಬರುತ್ತದೆ.
    ಉದಾ:ಬೌದ್ಧಿಕ ತರಗತಿ ಕೊಠಡಿ ಒಳಗೆ ನಡೆದರೆ, ಕಪ್ಪು ಹಲಗೆ ಹಾಗೂ ಪಠ್ಯ ಪುಸ್ತಕ ಇದರ ಕಲಿಕಾ ಸಾಮಾಗ್ರಿಗಳಾಗುತ್ತವೆ. ಆದರೆ ದೈಹಿಕ ಶಿಕ್ಷಣದ ಚಟುವಟಿಕೆಗಳು ಆಟದ ಮೈದಾನ, ವ್ಯಾಯಾಮ ಮಂದಿರಗಳಲ್ಲಿ ನಡೆದರೆ ಇದಕ್ಕೆ ಕಲಿಕಾ ಸಾಮಾಗ್ರಿಗಳು ಆಟೋಪಕರಣಗಳು ಮತ್ತು ಆತನ ಶರೀರವೆ ಆಗೆದೆ.
    ಶಿಕ್ಷಣದಲ್ಲಿ ದೈಹಿಕ ಶಿಕ್ಷಣದ ಮಹತ್ವವನ್ನು ಅರಿತ ಶ್ರೇಷ್ಠ ಶಿಕ್ಷಣ ತಜ್ಞರಾದ ಪ್ರೊಬೆಲ್ಲನು ಪ್ಲೋಟೋವಿನ ಆದರ್ಶವಾದ ರೋಸೋವಿನ ನಿಸರ್ಗವಾದ ಪೆಸ್ಟಾಲೋಜಿಯಾ ಶಿಶು ಕೇಂದ್ರಿತ ಶಿಕ್ಷಣದ ತತ್ವಗಳನ್ನು ಕ್ರೂಡೀಕರಿಸಿ ಮೂಲ ಶಿಕ್ಷಣದ ಅಂಶಗಳನ್ನು ಪರಿವರ್ತಿಸಿ ಚಟುವಟಿಕೆಯ ಆಂದೋಲನಕ್ಕೆ ಒಂದು ಮೂರ್ತಿ ರೂಪವನ್ನು ಕೊಟ್ಟರು. ಇವರು ಕಿಂಡರ್ ಗಾರ್ಡ್ ನ್ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದು ಸ್ವಯಂ ಚಟುವಟಿಕೆ ಮತ್ತು ಆಟದ ಮೂಲಕ ಪಾಠ ಕಲಿಸುವುದೇ ಲೇಸು ಎಂದು ತಿಳಿದ ಇವರು ಮನೋವೈಜ್ಞಾನಿಕ ಅಂಶಗಳನ್ನು ಒಳಗೊಂಡು ಆಟಾಗಳನ್ನು ವಿಂಗಡಿಸಿ ಮಕ್ಕಳಿಗೆ ಬೋಧಿಸಿದರು.
    1. ರಚನಾತ್ಮಕ ಚಟುವಟಿಕೆಯನ್ನು ಒಳಗೊಂಡ ಆಟಗಳು.
    2. ಬೌದ್ಧಿಕ ಸಾಮರ್ಥ್ಯ ಮತ್ತು ಕಲ್ಪನಾ ಶಕ್ತಿಯನ್ನು ವರ್ಧಿಸುವ ಆಟಗಳು.
    3. ಸಹಕಾರ ಮತ್ತು ಸಾಂಘಿಕ ಮನೋಭಾವ ಬೇಳೆಸುವ ಆಟಗಲು.
    4. ಚಾರಿತ್ರಿಕ ನಿರ್ಮಾಣದಲ್ಲಿ ಸಹಾಯ ಮಾಡುವ ಆಟಗಳು.
    5. ಕಲಿಕೆಯಲ್ಲಿ ಸುಲಭ ಮಾಡುವ ಆಟಗಳೇ ಆಗಿವೆ
    ಹದಿನೆಂಟನೆಯ ಶತಮಾನದ ಪ್ರಸಿದ್ಧ  ಮತ್ತು ಯಶಸ್ವಿ ಶಿಕ್ಷಣ ತಜ್ಞ ಮೇರಿಯ ಮಾಂಟೇಸರಿ ಶಾಲೆಯಲ್ಲಿ ಚಟುವಟಿಕೆಗಳು ಪೂರ್ವ ನಿಯೋಜಿತವಾಗಿದ್ದರೂ  ಮಕ್ಕಳ ಸ್ವಾತಂತ್ರ್ಯಕ್ಕೆ ಭಂಗ ಬರದಂತೆ ಓದು, ಬರಹ, ಗಣಿತ ಮುಂತಾದುವುಗಳನ್ನು ಆಟ, ಕ್ರೀಡೆಯಂತಹ ಚಟುವಟಿಕೆಗಳ ಮುಖಾಂತರವೇ ಮಕ್ಕಳಿಗೆ ಕಲಿಸುತ್ತಿದ್ದರು ಎಂಬುದನ್ನು ಗಮನಿಸಬಹುದಾಗಿದೆ.

               ಜಾಗತೀಕರಣದಲ್ಲಿ ತಂತ್ರಜ್ಞಾನ ಮುಂದುವರಿದಂತೆ ದೈಹಿಕ ಚಲನೆ ಕಡಿಮೆಯಾಗಿ ಮಧುಮೇಹ, ಹೃದಯಘಾತ, ರಕ್ತದೊತ್ತಡ ಮತ್ತು ಮಾನೋ ದೈಹಿಕ ಖಾಯಿಲೆಗಳಿಗೆ ತೊತ್ತಾಗುತ್ತಿರುವ ವಿಷಯವನ್ನು ಪ್ರಚಾರ ಮಾಧ್ಯಮಗಳಲ್ಲಿ ದಿನನಿತ್ಯ ತಿಳಿಯುತ್ತಿದದ್ದೇವೆ.
            ಈ ನಿಟ್ಟಿನಲ್ಲಿ ಅಪೋಲೋ ಆಸ್ಪತ್ರೆಯ ಪ್ರಸಿದ್ಧ ವೈದ್ಯರಾದ ಡಾ॥ ಭಕ್ತಿಯಾರ್ ಚೌಧರಿ ಯವರು ಮಕ್ಕಳ ಆರೋಗ್ಯ ಕುರಿತು ಸಂಶೋಧನೆ ನಡೆಸಿ ಮುಂದೆ ಮಕ್ಕಳು ಗಾಜಿನ ಗೊಂಬೆಗಳಾಗುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರಗಳನ್ನು ಹೊರ ತಂದಿದ್ದಾರೆ. ಇದಕ್ಕೆ ಕಾರಣಗಳನ್ನು ಈ ರೀತಿ ಹೇಳುತ್ತಾರೆ. ಮನೆಯಲ್ಲಿ ಮಕ್ಕಳನ್ನು ಕಣ್ಣಿನ ರೆಪ್ಪೆಯಂತೆ ಪೋಷಿಸುತ್ತಿರುವುದು.ಶಾಲೆಗಳಲ್ಲಿ ದೈಹಿಕ ಚಟುವಟಿಕೆಗಳು ನಡೇಯದಿರುವುದು ಹಾಗೂ ಮಕ್ಕಳಿಗೆ ಸ್ವತಂತ್ರವಾಗಿ ಆಟವಾಡಲು ಮೈದಾನವಿಲ್ಲದಿರುವುದು ಇಂದಿನ ಟ್ಯೂಷನ್, ಟಿ.ವಿ. ಕಂಪ್ಯೂಟರ್ ಗಳ ಹಾವಳಿ ಹೆಚ್ಚಾಗಿರುವುದೇ ಇದಕ್ಕೆ ಕಾರಣವೆಂದಿದ್ದಾರೆ. ಹಾಗೆಯೇ ಭಾರತದ ಪ್ರಸಿದ್ಧ ಅಥ್ಲೇಟಿಕ್ ತರಬೇತುದಾರರಾದ ಡಾIIಲಕ್ಷ್ಮೀಶ್ರವರು ಕರ್ನಾಟಕದ ಫ್ರೌಢಶಾಲಾ ಮಕ್ಕಳ ಚಟುವಟಿಕೆಯ ಮೇಲೆ ಸಂಶೋಧನೆ ನಡೆಸಿ ಅಮೇರಿಕಾದಲ್ಲಿ ವೃದ್ದಾಪ್ಯದಲ್ಲಿ ಬರುವ ಮುಪ್ಪು ನಮ್ಮ ಫ್ರೌಢಶಾಲಾ ಮಕ್ಕಳ ವಯಸ್ಸಿಗೆ ಬಂದಿರುತ್ತದೆ ಎಂದಿದ್ದಾರೆ. ಇವರ ಸಂಶೋಧನೆಯನ್ನು ನೋಡಿದರೆ ಇಂದಿನ ಒಲಂಪಿಕ್ ನಲ್ಲಿ ನಮ್ಮ ದೇಶದ ಪದಕಗಳು ಎಲ್ಲಿದೆಯೆಂದು ಹುಡುಕಾಡುವ ಸ್ಥಿತಿಯಲ್ಲಿ ನಾವಿರುವಾಗ ಇದೇನು ಅತಿಯೋಕ್ತಿಯೇನಲ್ಲ ಎಂದೆನಿಸುತ್ತ್ದೆ. ಹಾಗೆಯೇ ನೌಕರರ ಒಕ್ಕೂಟ ನಡೆಸಿದ ಸಂಶೋಧನೆಯಲ್ಲಿ ನೌಕರರು ತಮ್ಮ ವೇತನದಲ್ಲಿ ಹಿಂದಿಗಿಮ್ತಲೂ ಸಹ ಇಂದು ಆರೋಗ್ಯ ರಕ್ಷಣೆಗಾಗಿ ಮಾಡುವ ಖರ್ಚು ಅಧಿಕವಗಿದೆ. ಎಂಬ ಅಂಶವನ್ನು ಹೊರತಂದಿರುವುದನ್ನು ನೋಡಿದರೆ ದೈಹಿಕ ಶಿಕ್ಷಣದ ಅವಶ್ಯಕತೆ ಬಹಳವಿದೆ ಎಂದನಿಸುತ್ತದೆ.ಈಗಾಗಲೇ ಜಪಾನಿನ ಆರೋಗ್ಯ ತಜ್ಞರಾದ ಹಿದೆಯುಕಿ ತೋಭೆ ಯವರು ಪ್ರಾಥಮಿಕ ಮತ್ತು ಫ್ರೌಢಶಾಲಾ ಮಕ್ಕಳ ಆರೋಗ್ಯ ಮತ್ತು ದೈಹಿಕ ಶೈಕ್ಷಣಿಕ ಪ್ರಗತಿ ಕುರಿತಾದ ಒಂದು ಸಂಶೋಧನೆ ನಡೆಸಿ ಅವರು ದೈಹಿಕ ಶಿಕ್ಷಣ ಚಟುವಟಿಕೆಯಲ್ಲಿ ಪಾಲ್ಗೊಂಡ ಮಕ್ಕಳು ಚುರುಕಾಗಿಯೂ ಕ್ರಿಯೆಗೆ ಉತ್ತಮ ಪ್ರಕ್ರಿಯೆ ನೀಡುವುದಾಗಿದ್ದೂ, ಅವರ ಕಲಿಕೆಯಲ್ಲಿ ಉತ್ತಮ ಪ್ರಗತಿಯಾಗುತ್ತಿದೆ, ಆದರೆ ಉಳಿದ ಮಕ್ಕಳು ಅವರಿಗಿಂತ ಪ್ರಗತಿಯಲ್ಲಿ ಮತ್ತು ಆರೋಗ್ಯದಲ್ಲಿ ಹಿಂದುಳಿದಿರುವ ವಿಚಾರಗಳನ್ನು ಹೊರತಂದಿರುತ್ತಾರೆ. ಈ ನಿಟ್ಟಿನಲ್ಲಿ ಗಮನಿಸುವುದಾದರೆ ಸಹ ಶಿಕ್ಷಣದಲ್ಲಿ ದೈಹಿಕ ಚಟುವಟಿಕೆಗಳ ಅವಶ್ಯಕತೆ ಕಂಡು ಬರುತ್ತದೆ. ಇಂತೆಲ್ಲಾಚಟುವಟಿಕೆಗಳ ಜೊತೆಯಲ್ಲಿ ಆರೋಗ್ಯಕ್ಕಾಗಿ ಯೋಗ ಶಿಕ್ಷಣ, ನೈತಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣವನ್ನೊಳ್ಗೊಂಡಂತೆ. ದೈಹಿಕ ಶಿಕ್ಷಣವನ್ನು ಶಾಸ್ತ್ರಿಯವಾಗಿ ಬೋಧಿಸುವ ಅವಶ್ಯಕತೆ ಮತ್ತು ಅನಿವಾರ್ಯತೆಯ ಬಗ್ಗೆ ಚಿಂತಿಸಬೇಕಾಗಿರುವುದು ಕ್ರ್ವಲ ದೈಹಿಕ ಶಿಕ್ಷಣ ವಿಭಾಗ ಮಾತ್ರವಲ್ಲ. ಶಿಕ್ಷಣ ತಜ್ಞ ಥಾಮಸ್ ರವರು ಹೇಳುವಂತೆ ದೈಹಿಕ ಶಿಕ್ಷಣ ದೇಹಕ್ಕೆ ಸಂಬಂಧಿಸಿರುವುದಕ್ಕಿಂತ ಹೆಚ್ಚಾಗಿ ಶಿಕ್ಷಣಕ್ಕೆ ಸಂಬಂಧಿಸಿದೆ ಎಂದಿದ್ದಾರೆ. ಅವರ ಮಾತು ನಿಜವೆಂಬಂತೆ ಇಂದು ಶಿಕ್ಷಣದಲ್ಲಿ ದೈಹಿಕ ಶಿಕ್ಷಣವನ್ನು ಸಮರ್ಪಕವಾಗಿ ಹಾರಿಗೆ ತರದ ಹೊರತು, ಶಿಕ್ಷಣದ ಅನೇಕ ಸಮಸ್ಯೆಗಳು ಸಮಸ್ಯೆಯಾಗಿ ಕಾಡುತ್ತಿರುವುದರ ಬಗ್ಗೆ ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಕಂಡುಬರುತ್ತದೆ.


     

    ಮೂಲ ತತ್ವಗಳು


  • ಸತತ ಪ್ರಗತಿ ಪರತೆಯ ತತ್ವ ಸುಲಭದಿಂದ ಕಠಿಣತೆಯ ಕಡೆಗೆ(principles of progressive loadinga): ದೈಹಿಕ ಶಿಕ್ಷಣದ ಚಟುವತಿಕೆ ಮತ್ತು ಕೌಶಲ್ಯಗಳನ್ನು ಹೇಳಿ ಕೊಡುವಾಗ ಹಂತ ಹಂತವಾಗಿ ಸುಲಭದಿಂದ ಕಠಿಣದ ವಿಷಯವನ್ನು ಬೋದಿಸಿ ಕಲಿಸಬೇಕು. practice makes man perfect ಎಂಬ ತತ್ವವು ಇದಕ್ಕೆ ಬಿಡಿಸಲಾರದ ಸಂಬಂಧ ಎಂಬುದನ್ನು ಅರಿಯಬೇಕು.
  • ತರಬ್ರ್ತಿಯ ಮಧ್ಯದಲ್ಲಿ ವಿರಾಮದ ತತ್ವ (principles of interval) : ಸತತವಾಗಿ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ಸ್ನಾಯುಗಳು ಆಯಾಸಗೊಂಡಾಗ ಅಗತ್ಯವಿರುವಷ್ಟು ವಿಶ್ರಾಂತಿ ನೀಡಬೇಕು. ಹೆಚ್ಚು ವಿಶ್ರಾಮ್ತಿ ಕೊಟ್ಟಾಗ warm Down ಆಗುತ್ತದೆ.
  • ತರಬೇತಿಯ ವಿಶಿಷ್ಟತೆಯ ತತ್ವ (Principles of specificity) : ಕ್ರೀಡಾ ಕ್ಷೇತ್ರದಲ್ಲಿ ಹತ್ತು ಹಲವಾರು ವರ್ಷಗಳ ಪರಿಶ್ರಮವೇ ಅವನ ಉನ್ನತ ಮಟ್ಟದ ಸಾಧನೆಗೆ ಕಾರಣವಾಗುತ್ತದೆ.ವಿವಿಧ ಹಂತದ ತರಬೇತಿಯೊಂದೇ ಕ್ರೀಡಾ ಪಟುವಿನ ಅಭಿವೃದ್ಧಿಗೆ ಸೂಕ್ತ ಮಾರ್ಗ.
  • ಸರ್ವತೋಮುಖ ಅಭಿವೃದ್ಧಿಯ ಹಂತ : ಈ ಹಂತವೂ ಶಾಲೆಗಳಲ್ಲಿ ಒಂದನೇ ತರಗತಿಯಿಂದ 4,5ನೇ ತರಗತಿ ಮಕ್ಕಳಿಗೆ ಸಂಬಂಧಿಸಿದೆ. ಈ ಹಂತದಲ್ಲಿ ವೈವಿಧ್ಯಮಯವಾದ ದೈಹಿಕ ಚಟುವಟಿಕೆಗಳಲ್ಲಿ ಮಗು ಪಾಲ್ಗೊಳ್ಳುವಂತೆ ಮಾಡಬೇಕು. ಸುಲವ ಮೈನರ್ ಗೇಮ್ಸ್ ಆಟಗಳು ಉತ್ತಮವಾಗಿದೆ. ಇ ಹಂತದಲ್ಲಿ ಕ್ರೀಡಾಪಟುವಿಕೆ ಇಂತಹದೇ ಎಂಬ ಆಟದ ನಿರ್ದಿಷ್ಟತೆಯಿಲ್ಲ.
  • ಪ್ರಾಥಮಿಕ ಪರಿಣಿತಿ ಹಂತ : ಇಲ್ಲಿ ಸುಲಭವಾದ ಆಟದ ಕೌಶಲ್ಯಗಳನ್ನು ತಿಳಿಸಬೇಕು.Shotput ಅನ್ನು ಗ್ಲೈಡಿಂಗ್ ಮಾಡದೇ ನಿಂತು ಎಸೆಯುವುದು. ವಾಲಿಬಾಲ್ ಸರ್ವಿಸ್ ಗಳಲ್ಲಿ Simple ಸರ್ವೀಸ್ ಹೇಗೆ ಹೇಳಿಕೊಡಬೇಕು.ಈ ಹಂತದಲ್ಲಿ ಮಕ್ಕಳು 6 ರಿಂದ 8 ನೇ ತರಗತಿಯ ವಯಸ್ಸಿನವರಾಗಿರುತ್ತಾರೆ. ಈ ಹಂತದಲ್ಲೂ ವೈವಿಧ್ಯಮಯವಾದ ಕ್ರೀಡೆಯಲ್ಲಿ ಭಾಗವಹಿಸಬೇಕು. ಇಚ್ಛಿಸಿದ ಕ್ರೀಡೆಯ ಆಯ್ಕೆಯಲ್ಲಿ ಆತುರ ಪಡಬಾರದು.
  • ಉನ್ನತಿ ಪರಿಣಿತಿ ಹಂತ : ಈ ಹಂತವು 9 ರಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ವಯಸ್ಸಿನವರಿಗೆ ಅನ್ವಯಿಸುತ್ತದೆ. ಈ ಸಂದರ್ಭದಲ್ಲಿ ಕ್ರೀಡಾಪಟುವಿನ ದೈಹಿಕ ಬೆಳವಣಿಗೆಯು ಅಂತಿ9ಮ ಚರಣದಲ್ಲಿದ್ದು, ಇಲ್ಲಿ ಯಾವುದಾದ್ರೊಂದು ಪಂದ್ಯವನ್ನು ಆಯ್ದು ಅದರಲ್ಲಿ ಪರಿಪಕ್ವವಾಗಲು ಉನ್ನತ ಮಟ್ಟದ ತರಬೇತಿಯನ್ನು ನೀಡಬೇಕು. ಈ ಹಂತದಲ್ಲಿ ಕಠಿಣವಾದ ಕೌಶಲ್ಯಗಳನ್ನು ಹೇಳಿಕೊಡಬಹುದು.

  • ತರಗತಿ ತೆಗೆದುಕೊಳ್ಳುವ ಮುನ್ನ ಪೂರ್ವ ತಯಾರಿ

    1. ಆಟದ ಸ್ಥಳದ ಸ್ವಚ್ಛತೆ ಮತ್ತು ಆಟಕ್ಕೆ ಸಂಬಂಧಿಸಿದೆ ಗೆರೆ, ವೃತ್ತ ಹೀಗೆ ಗುರುತುಗಳನ್ನು ಮಾರ್ಕಿಂಗ್ ಪೌಡರ್ ಇಲ್ಲವೇ ಸುಣ್ಣದಿಂದ ಹಾಕಿರಬೇಕು (ಕಡ್ಡಿ ಗೆರೆಯಾದರೂ ಸರಿಯೇ)
    2. ಆಟೋಪಕರಣವನ್ನು ಶಿಕ್ಷಕರ ಮೇಜು ಕುರ್ಚಿಗಳ ಪಕ್ಕದಲ್ಲಿಟ್ಟಿರಬೇಕು.(ಆಟದ ಮೈದಾನದಲ್ಲಿ ಆಟೋಪಕರಣವನ್ನು ಜೋಡಿಸಿಟ್ಟಿರಬೇಕು),
    3. ಶಿಕ್ಷಕರ ಮೈದಾನದಲ್ಲಿರುವ ಮೇಜಿನ ಮೇಲೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಸಾಮರ್ಥ್ಯ ಗುರುತಿಸುವ ಪುಸ್ತಕವಿರಬೇಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು.
    4. ಆಟದ ಉದ್ದೇಶ ಹಾಗೂ ಇಂದಿನ ಪಾಠದ ಯೋಜನೆ ತಯಾರು ಮಾಡಿರಬೇಕು, ಹಿಂದಿನ ದಿನದ ಪಾಠದ ಬಗ್ಗೆ ಪ್ರಶ್ನೆಗಳನ್ನು ಪಾಠ ಟಿಪ್ಪಣಿಯಲ್ಲಿ ಸೇರಿಸಿರಬೇಕು.
    5. ಶಿಕ್ಷಕರು ಸೂಕ್ತ ಸಮವಸ್ತ್ರ ಮತ್ತು ಸೀಟಿಯೊಂದಿಗೆ ತಯಾರಾಗಬೇಕು.
    6. ಮಕ್ಕಳು ಆಯಾ ಆಟಕ್ಕೆ ಸಂಬಂಧಿಸಿದ ಸಮವಸ್ತ್ರ ಧರಿಸುವ ಕಡೆ ಗಮನ ಹರಿಸಬೇಕು.

    ಕ್ರೀಡಾ ತರಬೇತಿಯಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುಬೇಕಾದ ವಿಚಾರಗಳು

    1. ಕಿರಿಯ ವಯಸ್ಸಿನ ಕ್ರೀಡಾಪಟುಗಳು ಪುಟ್ಟ ಯುವಕರಲ್ಲ.
    2. ಮಕ್ಕಳ ಬೆಳವಣಿಗೆ ವಯಸ್ಸಿನಲ್ಲಿ ಸಾಮಾನ್ಯವಾಗಿ ಕಂಡುಬರುವ ದೈಹಿಕ ಬೆಳವಣಿಗೆ ಮತ್ತು ವಿಕಾಸಗಳ ಕಡೆಗೆ ಜ್ಞಾನವಿರಬೇಕು. ಮಕ್ಕಳ ಸಾಧನೆಯ ಬಗ್ಗೆ ಅತಿಯಾದ ನಿರೀಕ್ಷೆ ಮಾಡಬಾರದು.
    3. ಬೆಳವಣಿಗೆ ಹಂತದಲ್ಲಿರುವ ಕಿರಿಯ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡುವಾಗ ಹೆಚ್ಚಿನ ಗಮನಹರಿಸಬೇಕು.
    4. ಕ್ರೀಡಪಟುಗಳಿಗೆ ಮೊದಲು ಆಸಕ್ತಿ ಬೆಳೆಸಿ ನಿರಾಶೆಯಾಗದಂತೆ ನೋಡಿಕೊಳ್ಳಬೇಕು.
    5. ಸರ್ವತೋಮುಖ್ ಬೆಳ್ವಣಿಗೆಯ ಹಂತದಲ್ಲಿರುವ 1ರಿಂದ8ನೇ ತರಗತಿ ವಯಸ್ಸಿನ ಮಕ್ಕಳಿಗೆ ಯಾವುದೇ ಒಂದು ನಿರ್ದಿಷ್ಟ ಆಟಕ್ಕೆ ಸೀಮಿತಗೊಳಿಸಬಾರದು.
    6. ಸ್ವರ್ಧೆಗಳಲ್ಲಿ ಸೆಣಸಲು ಆತುರದ ಪರಿಣಿತಿಯನ್ನು ಪಡೆಯಲು ಪ್ರಯತ್ನಿಸಬಾರದು.
    7. ಗಾಬರಿ, ಭಯ, ಆತಂಕವಿರುವಾಗ ಯಾವುದೇ ಕೌಶಲ್ಯಗಳನ್ನು ಹ್ರ್ಳಿಕೊಟ್ಟು ಕಲಿಸಬಾರದು.
    8. ಕಲಿಕೆಯ ಹಂತದಲ್ಲಿ ತಪ್ಪು ಕಲ್ಪನೆಗಳು ನುಸುಳದಂತೆ ನೋಡಿಕೊಳ್ಳಬೇಕು.
    9. ಮಕ್ಕಳ ಮನೋವಿಜ್ಞಾನದ ಬಗ್ಗೆ ತಿಳಿದುಕೊಂಡಿರಬೆಕು.
    10. ಮಾತು ಕಡಿಮೆ ಮಾಡಿ, ಕೆಲಸ ಹೆಚ್ಚು ಮಾಡಬೇಕು.

    ತರಗತಿ ತೆಗೆದುಕೊಂಡ ನಂತರ ಗಮನಿಸಬೇಕಾದ ಅಂಶಗಳು

    1. ತರಗತಿಯನ್ನು ತೆಗೆದುಕೊಂಡ ನಂತರ ಹಾಜರಾತಿಯ ಬಗ್ಗೆ ತಿಳಿದು ಕೊಳ್ಳುವುದು. ಹಾಗೂ ಮಕ್ಕಳ ಸ್ವಚ್ಛತೆ ಆರೋಗ್ಯ, ಸಮವಸ್ತ್ರದ ಕಡೆಗೆ ಗಮನ ಹರಿಸಿ ಅನಾರೋಗ್ಯದ ವಿದ್ಯಾರ್ಥಿಗಳು ಒಂದೆಡೆ ಕುಳಿತು ಚಟುವಟಿಯನ್ನು ವಿಕ್ಷಿಸುವಂತೆ ತಿಳಿಸಬೇಕು.
    2. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಚಟುವಟಿಕೆಯ ಅವಶ್ಯಕತೆ ಕಂಡುಬಮ್ದರೆ ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ತಕ್ಷಣ ಮಾಡಿಕೊಳ್ಳಬೇಕಾಗುತ್ತದೆ.
    3. ಶಿಕ್ಷಕನು ಹೇಳಿಕೊಡುವ ಚಟುವಟಿಕೆಯು ಎಲ್ಲಾ ಮಕ್ಕಳಿಗೆ ಕೇಳಿಸುವಂತೆ ಎಲ್ಲಾ ಮಕ್ಕಳು ನೋಡುವಂತೆ ಪ್ರದರ್ಶನ ಮಾಡಿ ಹಾಗೂ ವಿವರಣೆಗಳನ್ನು ನೀಡುತ್ತಾ ಹೇಳಿಕೊಡಬೇಕು.
    4. ಶಿಕ್ಷಕರು ಮೊದಲು ಅಖಂಡ ಖಂಡ ಪದ್ಧತಿಯಲ್ಲಿ ಮಾಡಿ ತೋರಿಸಿ ನಂತರ ಮಕ್ಕಳಿಗೆ ಖಂಡ ಅಖಂಡ ಪದ್ಧತಿಯಲ್ಲಿ ಮಾಡಿಸಬೇಕು.
    5. ಶಿಕ್ಷಕರು ತಪ್ಪುಗಳನ್ನು ತಕ್ಷಣತಿದ್ದುತ್ತ ಚುರುಕಾಗಿ ಓಡಾಡುತ್ತಿರಬೇಕು ಹಾಗೂ ಆಜ್ಞೆಗಳನ್ನು ಸಾವ್ ಧಾನ್ ಸ್ಥಿತಿಯಲ್ಲಿ ಮಕ್ಕಳ ಮುಂದೆ ನಿಂತು ಕೊಡಬೇಕು.
    6. ಆಯಾ ವಿಭಾಗದ ಚಟುವಟಿಕೆಯನ್ನು ಆಯಾ ಸಮಯದಲ್ಲಿ ಮುಗಿಸಲು ಪ್ರಯತ್ನಿಸಬೇಕು.
    7. ಶಿಕ್ಷಕರು ಕೆಲವೊಮ್ಮೆ ಚಟುವಟಿಕೆಗಳನ್ನು ಮಾಡುತ್ತಾ ಮಕ್ಕಳು ಅದನ್ನು ಅನುಸರಿಸುವಂತಯೇ ತಿಳಿಸಿ ಅದರಂತೆಯೂ ಸಹ ಚಟುವಟಿಕೆ ಮಾಡಿಸಬಹುದು.
    8. ತರಗತಿಯಲ್ಲಿ ಸಂತೋಷ, ಮನರಂಜನೆ, ವಿನೋದಗಳಿರಬೇಕು. ಆದರೆ, ಬಿಗಿ ರಹಿತ ತರಗತಿ ಗೊಂದಲ ಮತ್ತು ಅಶಿಸ್ತಿನಿಂದ ಇರುವುದೆಂಬ ಅಂಶವನ್ನು ಸಹ ತಿಳಿದಿರಬೇಕು.
    9. ಆಯಾ ಪರಿಸರಕ್ಕೆ ತಕ್ಕಂತೆ ಬೋಧನೆಯನ್ನು ಮತ್ತು ವಿಷಯಗಳನ್ನು ಸಂದರ್ಭಾನುಸಾರ ಮಾಡಬೇಕು.
    10. ಶಿಕ್ಷಕರು ಚಟುವಟಿಕೆಯನ್ನು ಹೇಲಿಕೊಡುವಾಗ ವಿಶ್ ರಾಮ್ ಕೊಟ್ಟು ಚಟುವಟಿಕೆ ಮಾಡಿಸುವಾಗ ಸಾವ್ ಧಾನ್ ಕೊಟ್ಟು ಮಾಡಿಸಬೇಕು.
    11. ಮಕ್ಕಳೀಗೆ ಸ್ವತಂತ್ರವಾಗಿ ಅಭ್ಯಾಸ ಮಾಡಲು ಕಾಲಾವಕಾಶವನ್ನು ಮಾಡಿಕೊಟ್ಟು ಆ ಸಮಯದಲ್ಲಿ ತಪ್ಪುಗಳನ್ನು ಶಿಕ್ಷಕರು ತಿದ್ದಬಹುದು.
    12. ತರಗತಿಯಲ್ಲಿ ಸೂಕ್ತವಾಗಿ ಚಟುವಟಿಕೆಯನ್ನು ಮಾಡುವ ಹಾಗೂ ಕಾರ್ಯಕ್ರಮವನ್ನು ನಿಭಾಯಿಸುವ ನಾಯಕನನ್ನು ಗುರುತಿಸಿ ಅವನಿಂದ ಚಟುವಟಿಕೆಯನ್ನು ಮಾಡಿಸಬೇಕು.
    13. ಎಲ್ಲಾ ಮಕ್ಕಳು ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು.
    14. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪರೋಕ್ಷವಾಗಿ ಸಹಾಯ ಮತ್ತು ಪ್ರೋತ್ಸಾಹಗಳು ಅವಶ್ಯಕವಾಗಿರುತ್ತದೆ. ದೈಹಿಕ ಶಿಕ್ಷಣದ ಮೂಲ ಉದ್ದೇಶಗಳಾದ ದೈಹಿಕ ಚಲನೆ ಮನರಂಜನೆ ಶಿಸ್ತು ಈ ಮೂರು ಅಂಶಗಳನ್ನು ಒಳಗೊಂಡ ತರಗತಿಯನ್ನು ಶಿಕ್ಷಕನು ತೆಗೆದುಕೊಳ್ಳುವುದು ಬಹಳ ಮುಖ್ಯ ವಿಶ್ರಾಂತಿ ಮತ್ತು ಆರೋಗ್ಯ ಶಿಕ್ಷಣದ ಬೋದನೆಯಲ್ಲಿ ಅನಾರೋಗ್ಯದಿಂದ ತರಗತಿಯಿಂದ ಹೊರಗುಳಿದ ವಿದ್ಯಾರ್ಥಿಗಳೂ ಸಹ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.
    15. ಕಲಿಕೆ ನಿಧಾನವಾಗಿದ್ದರೂ ಸಹ ಆತುರಗೊಳ್ಳದೆ ತಾಳ್ಮೆಯಿಂದ ಕಲಿಸಿ ಉತ್ತಮ ವಾದುದನ್ನು ರೂಢಿಸುವುದು ಬಹಳ ಮುಖ್ಯವಾಗಿದೆ.
    16. ಮಕ್ಕಳ ಚಟುವಟಿಕೆಯನ್ನು ಪ್ರೀತಿಯಿಂದ ಗಮನಿಸಿ ಅದರಲ್ಲಿರುವ ವಿಶೇಷತೆಗಳನ್ನು ಮನದಾಳದಲ್ಲಿ ಸವಿಯುವ ಮಾಹಾನ್ ಸಹೃದಯಿ ಬಂಧುವೇ ಈ ಪಾಠದ ಯಶಸ್ವಿ ಶಿಕ್ಷಕನಾಗುವನು.
    17. ತರಗತಿಯ ವಿಸರ್ಜನೆಯಲ್ಲಿ ಒಂದು ವಿಶೇಷವಾದ ಆರೋಗ್ಯ, ದೈಹಿಕ ಶಿಕ್ಷಣ ಇಮ್ತಹ ಚಟುವಟಿಕೆಗಳ ನುಡಿ ಮುತ್ತುಗಳನ್ನು, ಗಾದೆಗಳನ್ನು ಘೋಷಣೆಯ ಮೂಲಕ ಸುಂದರವಾಗಿ ಒಂದೇ ಸಮನೆ ಕೂಗಿಸಿ ಸಂತೋಷದಿಂದ ಮತ್ತೆ ಮಕ್ಕಳು ಆಟದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ವಿಸರ್ಜಿಸುವುದು.
    ******ಮಾಹಿತಿ ಕೃಪೆ: ವಿಕಾಸ್‌ಪೀಡಿಯಾ******

    2 ಕಾಮೆಂಟ್‌ಗಳು: