ನೀವು ನನ್ನನ್ನು ಬಿಟ್ಟುಹೋದ
ಆಸ್ಪತ್ರೆಯ ಕಾರ್ಪೋಷನ್
ಕಸದ ತೊಟ್ಟಿಯ ಬಳಿ
ಅವರಿವರು ಬಿಸಾಡಿದ
ಅಳಸಿದ ಅನ್ನವನ್ನುಂಡು
ಊರಿನ ಕಲ್ಮಶವನ್ನೆಲ್ಲಾ ಹೊತ್ತು
ತರುವ ಮೋರಿಯ ನೀರುಕುಡಿದು
ಬದುಕಿದ್ದೇನೆ, ಬದುಕುತ್ತಲೇ
ಇದ್ದೇನೆ
ನನ್ನೆಡೆಗೆ ತಿರುಗಿ ನೋಡುವ
ಮೊಗಗಳಲ್ಲಿ ಅಪ್ಪ-ಅಮ್ಮನ
ನೋಟಗಳಿಗೆ ಪರಿತಪಿಸುತ್ತಿದ್ದೇನೆ.
ತುಂಡು ಬ್ರೆಡ್ಡು ಕೊಡುವ ಕೈಗಳನ್ನು
ಕನಿಕರದಿ ಕಾಸು ಕೊಡುವ ಕೈಗಳನ್ನು
ಮುಟ್ಟಿ ಮುಟ್ಟಿ ನೋಡುತ್ತಿದ್ದೇನೆ
ಕಳೆದುಕೊಂಡ ನನ್ನವರ ಗುರುತು ಹಿಡಿಯಲು.
ಈ ಉಸಿರು ನಿಂತು
ದೇಹ ಹುಳು ತಿಂದು
ಮಣ್ಣಾಗುವವರೆಗೂ ಈ ಸಣ್ಣ
ಜೀವವನ್ನು ಬಿಗಿಹಿಡಿದು
ಇಲ್ಲಿಯೇ ಕಾಯುತ್ತಿರುವೆನು
ಅಷ್ಟರಲ್ಲಿ ಒಮ್ಮೆಯಾದರೂ
ನನ್ನ ನೆನಪಾದರೆ ಬಂದು ಬಿಡಿ
-- ಡಾ. ಮಂಜಣ್ಣ
ಮಾರಮ್ಮನಹಳ್ಳಿ
ಮಾರಮ್ಮನಹಳ್ಳಿ, ಕೊಂಡ್ಲಹಳ್ಳಿ (ಪೋ),
ಮೊಳಕಾಲ್ಮೂರು
(ತಾ), ಚಿತ್ರದುರ್ಗ
(ಜಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ