ನನ್ನ ಪುಟಗಳು

20 ಜನವರಿ 2018

ಮಳೆ

ಮಳೆ ಬಂತು ಮಳೆ
ಅಂದದ ಚಂದದ ಮಳೆ
ಎಲ್ಲಿ ನೋಡಿದರು ನೀರಿನ ಹೊಳೆ
ಪ್ರಕೃತಿಗೆ ಉಣಿಸಿದ ತಂಪು

ಮನಜ ಕುಲ ತುಂಬಿತುಳುಕುತ್ತಿದೆ ಆನಂದ
ದೇವರಿಗೆ ಪೂಜೆ ಸಲ್ಲಿಸಿದ ಹೊಳೆ
ಪ್ರಾಣಿ ಪಕ್ಷಿಗಳ ಸಂತೋಷ ಮುಗಿಲು ಮುಟ್ಟಿತು.
ಮಾನವೀಯ ಮೌಲ್ಯಗಳನ್ನು ಬೆಳೆಸಿದ ಮಳೆ

ನಮ್ಮೆಲ್ಲರನು ಒಂದುಗೂಡಿಸಿದ ಮಳೆ
ರೈತರ ಬಾಳಿಗೆ ಬೆಳಕು ಮೂಡಿಸಿತು
ಭುವಿ ತುಂಬಾ ಹಸುರು ತುಂಬಿಸಿ.

ಪ್ರೀತಿಯ ಹೆಸರು ಬಂದಿದೆ ತುತ್ತರು
ಮಮತೆ ನೀಡುವ ಗುಣ ಬೆಳೆಸಿತು
ಸ್ನೇಹಿತರು ಒಂದಾಗಿ ಕುಣಿದು ಕುಪ್ಪಳಿಸಿ
ದುಃಖವನ್ನು ಮರೆತು ನಲಿದು.

ಭೂಮಿಗೆ ತಂಪು ಸೃಷ್ಟಿಸಿದ ಮಳೆ
ಬೆಳೆ ಬೆಳೆದು ನಿಂತಿರುವ ನೋಟ
ಎಲ್ಲರಲ್ಲೂ ಸಂಭ್ರಮದ ಹಾಡು
ರಸಪಾಕ ವಾಯಿತು.

ರಚನೆ:
ಶಿವರಾಜಕುಮಾರ್ ತಳವಾರ 
9164925569 
Chikkanaragund Shivu63362@gmail.com 
*💥ಇಹವೇ ಪರ💥*
ಕತ್ತಲೆಯ ಕಂಬಳಿಯ
ಕಿತ್ತೊಗೆದು ಅಂಬರದ
ಮೆತ್ತೆಯನು ತೊರೆದೆದ್ದು
ತ್ವರಿತದಿಂದ...

ಹೊನ್ನೀರ ಕಡಲಲ್ಲಿ
ಚೆನ್ನ ಸ್ನಾನವ ಗೈದು,
ಚಿನ್ನದಂಬರವುಟ್ಟು
ಸಿಂಗಾರದಿ.....,

ಏಳು ತುರಗಗಳೆಳೆವ
ಬೆಳ್ಳಿ ತೇರಲಿ ಕುಳಿತು
ಎಂಟು ದಿಕ್ಕಿಗೂ ದಿವ್ಯ
ಕಾಂತಿ ಚೆಲ್ಲಿ........ ,

 "ಏಳಿರೈ ಮಕ್ಕಳೇ" ........
 ಬೆಳಗಾಯಿತೆನ್ನುತ್ತ
ಮೂಡಣದಿ ಬಂದನೋ
ಪೊಡವಿಯೊಡೆಯ!!

ಸುಧೆ ಸುರಿಯುವೀ ಹೊತ್ತು
ತೊರೆದು ನಿದ್ದೆಯ ಮತ್ತು
ಎದ್ದವನೇ ಧನ್ಯನೈ
ಕೇಳು ಜಗದಿ......,

ಮನವು ಹೂವಂತರಳಿ,
ಹಕ್ಕಿಯಂದದಿ ಹಾರಿ,
ಕುಕಿಲಾಗಿ ಕೂಗುತಲಿ
ಗಾಳಿಯೊಳು ತೇಲಿ....

ಆನಂದ ಸಂದ್ರದಲಿ
ಮುಳುಗೆದ್ದು ಮೀಯುತಿರೆ.........,
ಸ್ವರ್ಗ ಬೇರೊಂದುಂಟೆ
ಹೇಳು ಪರದಿ!!

ರಚನೆ: 
ಮಲ್ಲಿಭಾಗವತ
ಮಲ್ಲಿಭಾಗವತ ಲಕ್ಷ್ಮೀ ನರಸಿಂಹ ಪ್ರಸಾದ್
9739481252
#82, 3ನೇ ಕ್ರಾಸ್, ಎ.ಜಿ.ಬಿ ಕಾಲನಿ, 
ಮಹಾಲಕ್ಷ್ಮಿ ಬಡಾವಣೆ, 
ಬೆಂಗಳೂರು-560 086

ನನ್ನಕನಸು

ನನ್ನಕನಸು 
ಮೂಡನ ಸೂರ್ಯನ ರಂಗಿನ ಹೊಳೆಯಲಿ
ಕಾಂತಿಯ ಬೆಳಕಿನ ಕವಿ ಕಾವ್ಯದ ಸೊಬಗಲಿ
ಪಸರಿಪ ನಾಡಿನ ಕರುನಾಡ ತಾಯ ಮಡಿಲಲಿ
ನಿರ್ಮಲ ಚಿತ್ತದ ಚಿತ್ರಿಪ ಕವಿ ತೃಷೆಯಲಿ

ಅಲ್ಲಿ ನೋಡಲು ಕೆನರ ಭಾಗದ ತನುವಲಿ
ಇಲ್ಲಿ ನೋಡಲು ಬಯಲ ಸೀಮೆಯ ಮೃದುತತೆಯಲಿ
ಮೇಲೆ ನೋಡಲು ವೀರಶೂರರ ಪ್ರಾಣತ್ಯಾಗದಲಿ
ಇತ್ತಲೆ ನೋಡಲು ಗಡಿ ತಾಯಿ ಸೋದರಿಯ ಸೆರಗಲಿ

ಇಸಿಲನಾಡು ಹೆಸರು ಪಡೆದಿಹ ನಾಡಲಿ
ಸಂಭ್ರಮದ ಪ್ರತಿದಿನ ಮುಂಗೋಳಿಕೂಗಲಿ
ಮಿರಿಮಿರಿ ಮಿಂಚುವ ವನದೇವಿಯ ನೆರಳಲಿ
ಬದುಕು ಸಾಗಿಪ ಜನರ ನಡು ನಡುವಲಿ

ಸಾಗಿದೆ ಮನಮರೆಸುವ ಜೀವನ ರಸದಲಿ
ಹುಟ್ಟಿ ಧನ್ಯತೆ ಪಡೆದೆ ನಾ ಈ ನಾಡಲಿ
ಮರಳಿ ಹುಟ್ಟುವಾಸೆ ಇಸಿಲತಾಯಿಯ ಮಡಿಲಲಿ
ಹರಸುವಳು ನನ್ನ ತಾಯಿ ತನ್ನ ಮನದಲಿ
 *******
ಮರೆಯಾದ ಗೆಳೆಯನ ಗೆಳೆತನ 
ನಂಬಿಕೆಯ ನಗುವಲ್ಲಿ
ನಗುಮೊಗದ ಮೊಗದಲ್ಲಿ
ಮರೆಯಾದೆನಾ , ನಾನು ?

ಮನಸ್ಸಿಗೆ ಸಾಂತ್ವಾನ
ನೀಡುವ , ಮನಸ್ಸಿಂದ
ಮರೆಯಾದೆನಾ , ನಾನು?

ಎಲ್ಲರಂತಲ್ಲ ನನಗೆಳೆಯ
ಎಲ್ಲರಿಗಿಂತ ಮುಂದು
ಮುಂದೋಗುವನು ಬಿಟ್ಟು
ಮರೆಯಾದೆನಾ , ನಾನು ?

ಮರೆತಿಲ್ಲ ಮಿತ್ರನ
ಮರೆಯೋಲ್ಲ ನನ್ನ ಎಂದಿದ್ದೀ
ಮರೆಯಾದೆನಾ , ನಾನು ?
******
ಮನದನ್ನೆ ಮಂದಾರ ಪುಷ್ಪದ ಮನದನ್ನೆ 
ಮರಸಿದಳು ಮನದ ನೋವನ್ನೆ 
ಮಲ್ಲಿಗೆಯ ಮುಗುಳ್ನಗೆಯ ತೋರಿಮನದನ್ನೆ 
ಮೆರೆದಳು ಮನದ ಸಿರಿಯನ್ನೆ 

ಮಧುಕರವ ನೀಡುವಳು ಮನದನ್ನೆ 
ಮಧುವಾಗಿ ವಧುವಾಗಿ ನೆನೆದಳು ನನ್ನನ್ನೆ 
ಮಾಮರದ ಕೋಗಿಲೆಯ ಕಂಠವನು ನಾಚಿಸಿದಳು ಮನದನ್ನೆ 
ಮರೆಮಾಡಿದಳು ವಸಂತನ ಸೊಬಗನ್ನೆ 

ಮಣಭಾರ ಪ್ರೀತಿಯ ಹೊತ್ತಳು ಮನದನ್ನೆ 
ಮಮ್ಮಲ ಮರುಗಿದಳು ಕಾಣದೆ ನನ್ನನ್ನೆ 
ಮನದನಿನ್ನಾರಾಜ್ಯದ ಒಡತಿನಾನೆಂದಳು ಮನದನ್ನೆ 
ಮನದೊಳಗೆ ಸುಳಿಯಲು ಬಿಡಳು ಸವತಿಯ ನೆರಳನ್ನೆ 

ಮನಃಶ್ಯಾಂತಿ ಪಡೆಯೆ ಬಾಯೆಂದಳು ಮನದನ್ನೆ 
ಮನರಂಜಿಪಳು ನೀಡುತಾ ತನ್ನನ್ನೆ 
ಮಗುವಿನ ಮುಗ್ಧನಗೆಯ ಬೀರುವಳು ಮನದನ್ನೆ 
ಮನದನ್ನೆಗೆ ನೀಡಿದೆನು ಸಂಪೂರ್ಣ ನನ್ನ ಮನವನ್ನೆ
********
ವಾರಿದಿಯಾದ ಗುರು
ಗುರುವು ಸರಿದಾರಿ ತೋರುವ ವಾರಿಧಿ
ಗುರುವು ಗುರಿ ತೋರುವ ಸಾರಥಿ
 ಗುರುವು ಜೀವನದ ಸಾರಾಂಶದ ಸನ್ನಿಧಿ
ಗುರುವು ಕನಸು ಕಲ್ಪನೆಯ ಗುಣನಿಧಿ

ಗುರುವು ಅಂಗೈಲಿ ಆಕಾಶವಿರುವಂತಾಗಿಸೋ ದಿವ್ಯ
ಗುರುವು ಸಕಲಗಳ ಪರಿಣತಿಯ ಭವ್ಯ
ಗುರುವು ಮಮತೆಯ ಅನನ್ಯ
ಗುರುವು ಸ್ಪೂರ್ತಿಯ ಚೈತನ್ಯ

ಗುರುವು ಉದ್ದೇಶಗಳ ಆಗರ ಗುರುವು
ಕೈವಲ್ಯದ ಮಹಾಪೂರ ಗುರುವು
ಸಂಕೇತದ ಸಾಗರ ಗುರುವು
ಭಾವನೆಯ ಹರಿಕಾರ ಗುರುವು

ಸಂಕಲ್ಪದ ಸಂರಕ್ಷಕ ಗುರುವು
ದುರ್ಗುಣಗಳ ಸಂಶಿಕ್ಷಕ ಗುರುವು
ಧರ್ಮಗಳ ಸಂಸೇವಕ ಗುರುವು
ವಿವರಣೆಯ ಸಂಸ್ಕಾರಕ
********
ಹೊಸತನ 
ಹೊಸವರುಷದ ಆದಿಯಲಿ 
ಹೊಸತನದ ದಾರಿಯಲಿ 
ಹೊಸದೀವಟಿಗೆಯ ಹಿಡಿದು 
ಹೊಸಹುರುಪು ತುಂಬುವ ಹೊಸತನ 

ಹೊಸದಾದ ನವದಿನದ 
ಶುಭಾರಂಭದ ಸಮಯದಲಿ 
ಕಾತುರದ ನಭಗಳಾಚೆಯ 
ನಕ್ಷತ್ರಗಳ ಬೆಳಕಿನ ಕನಸಲಿ ಹೊಸತನ 

ಹೊಸರಾಗದ ಹೊಸಸ್ನೇಹದ 
ಕೆಳೆಯರ ಕೂಟದಲಿ 
ಹೊಸತನ ಬರುವ ನಿಮಿಷಗಳ 
ಎಣಿಸುತ ಶುಭಾಷಯಗಳ ಸಲ್ಲಿಕೆಯಲಿ ಹೊಸತನ 

ಹೊಸದೆಂಬುದು ಆರಂಭವಾಗದೆ 
ಅದು ನಿರಂತರ ದಿನ, ದಿನಪನ 
ಆಗಮನದಲ್ಲೂ ಹೊಸಹುರುಪು 
ತುಂಬುತಲಿ ಮಾಂಗಲ್ಯದಿನವಾಗಲಿ ಹೊಸತನ

ಕರ್ತೃ:
ಲಕ್ಷ್ಮೀಶ ಡಿ ಜಿ (ಡಿ ಜಿ ಎಲ್)
9844237322
ಜೈನಬಿಯ ಖಾಸಗಿ ವಿದ್ಯಾಸಂಸ್ಥೆ ಹೊಳವನಹಳ್ಳಿ , 
ಕೊರಟಗೆರೆ ಮಧುಗಿರಿ ಶೈಕ್ಷಣಿಕ (ಜಿ) 
ಕೊರಟಗೆರೆ (ತಾ) ತುಮಕೂರು (ಜಿ)

9ನೇ ತರಗತಿ ಪ್ರಥಮ ಭಾಷೆ ಕನ್ನಡ ಪದ್ಯ-8-ಕನ್ನಡ ನಾಡು ನುಡಿ ಪ್ರಶ್ನೋತ್ತರ ವೀಕ್ಷಣೆ

9ನೇ ತರಗತಿ ಪ್ರಥಮ ಭಾಷೆ ಕನ್ನಡ ಗದ್ಯ-8-ಹರಲೀಲೆ ಪ್ರಶ್ನೋತ್ತರ ವೀಕ್ಷಣೆ