ನನ್ನ ಪುಟಗಳು

ನಡುಗನ್ನಡ ಕವಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಡುಗನ್ನಡ ಕವಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

26 ಸೆಪ್ಟೆಂಬರ್ 2023

10ನೇ ತರಗತಿ ಪದ್ಯ ವೀರಲವ- ಕವಿ-ಕೃತಿ ಪರಿಚಯ(0th-Veeralava-Kavi-kruthi)

ಲಕ್ಷ್ಮೀಶ ಕವಿ ಮತ್ತು ಆತನ ಕೃತಿ ಪರಿಚಯ

    ಪೋಷಕರ ಅಸೆಯನ್ನು ನೆರೆವೆರಿಸುವ ಮಕ್ಕಳನ್ನು ನೀವು ಕಂಡಿರಬಹುದು. ಕರ್ನಾಟಕದ ಸಾಹಿತ್ಯದ ಇತಿಹಾಸದಲ್ಲಿ ತಂದೆಯ ಆಸೆಯಂತೆ ಮಗನು ಜೈಮಿನಿ ಋಷಿಗಳು ಸಂಸ್ಕೃತದಲ್ಲಿ ಬರೆದ ಭಾರತವನ್ನು ಕನ್ನಡದಲ್ಲಿ ರಚಿಸಿದ. ಪಂಪ, ರನ್ನ ಮತ್ತು ಕುಮಾರವ್ಯಾಸರನ್ನು ನೀಡಿದ ಕನ್ನಡ ಸಾಹಿತ್ಯಕ್ಕೆ ತನ್ನದೇ ಅದ ವಿಶಿಷ್ಟ ರೀತಿಯಲ್ಲಿ ಗುರುತಿಸಿ ಕೊಂಡ ಮಹಾಕವಿ ಯಾರು ಗೊತ್ತೇ . ಆತನೇ ಚಿಕ್ಕಮಗಳೂರಿನ ಕಡೂರು ತಾಲೂಕು ದೇವನೂರು ಗ್ರಾಮದ ಶ್ರೀಕಾಂತ ಮುಂದೆ `ಲಕ್ಷ್ಮೀಶ' ಎಂದು ಪ್ರಸಿದ್ಧಿ ಪಡೆದು 'ಜೈಮಿನಿ ಭಾರತ' ಕೃತಿಯನ್ನು ರಚಿಸಿದ.

ಸಾಲ ಸಾಲಂಗಳಿಂ ಬಕುಳ ಕುಳ ದಿಂದೆ ಹಿಂ
ತಾಳ ತಾಳಗಳಿಂ ಮಾದಲದಲರ್ಗಳಿಂ ತ
ಮಾಲ ಮಾಲತಿಗಳಿಂ ಸಂರಂಭ ರಂಭ ದಿಂದ ಮಂದ ಮಂದಾರದಿಂದೆ….


         ಈ ಮೇಲಿನ ಪದ್ಯ ನೋಡಿದರೆ ಒಂದು ಸ್ವಾರಸ್ಯ ಇದೆ. ಒಂದೇ ಪದ ವನ್ನ ಎರಡು ಬಾರಿ ಉಪಯೋಗಿಸಿರುವುದು. ಸಾಲ, ತಾಳ, ದಲ ಕುಳ, ಮಾಲ, ರಂಭ. ಇದು ವಾರ್ಧಕ ಷಟ್ಪದಿಯಲ್ಲಿ ಅನುಪ್ರಾಸ ಅಲಂಕಾರದಲ್ಲಿ ನಿಬಧ್ಧ ವಾಗಿರುವ ಒಂದು ಪದ್ಯದ ಮೂರು ಸಾಲುಗಳು. ಇಂತಹ ಸುಂದರವಾದ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತ ಗೊಳಿಸಿದ, ಕರ್ನಾಟ ಕವಿ ಚೂತವನ ಚೈತ್ರ ಎಂದು ಬಿರುದಾಂಕಿತ ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಲಕ್ಷ್ಮೀಶನ ಜನ್ಮ ಸ್ಥಳ. ಅಣ್ಣಯ್ಯ ದಂಪತಿಗಳಿಗೆ ಚೈತ್ರ ಶುಧ್ಧ ಹುಣ್ಣಿಮೆಯಂದು ಜನಿಸಿದ ಶ್ರೀಕಾಂತ ಮುಂದೆ ಲಕ್ಷ್ಮೀಶನಾಗಿ ಪ್ರಸಿಧ್ಧಿ ಹೊಂದಿದ. ತಂದೆಗೆ ಮಗ ಕೀರ್ತಿಶಾಲಿಯಾಗಬೇಕು ಮತ್ತು ತನಗೆ ಪ್ರಿಯವಾದ ಜೈಮಿನಿ ಭಾರತವನ್ನು ಕನ್ನಡದಲ್ಲಿ ಬರೆಯಬೇಕು ಎಂಬ ಮಹದಾಸೆಯಿಂದ ಮಗನಿಗೆ ದಿನಕ್ಕೊಂದು ಕತೆ ಹೇಳಿ ಮಗನ ಯೋಚನಾ ಶಕ್ತಿಗೆ ನೀರೆರೆದ. ಜೈಮಿನಿ ಎಂಬ ಋಷಿ ಸಂಸ್ಕೃತದಲ್ಲಿ ಬರೆದದನ್ನು ಕನ್ನಡದಲ್ಲಿ ಬರೆ,ಇದು ನನ್ನ ಆಸೆ ಎಂದ ಮಗನಲ್ಲಿ ತನ್ನ ಮನದಾಳದ ಇಂಗಿತವನ್ನು ಮತ್ತು ಅವನ ಜೀವನದ ಉದ್ದೇಶವನ್ನು ತಿಳಿಸಿದ.
          ದೇವರ ಅನುಗ್ರಹದಿಂದ ಮತ್ತು ಪ್ರಾರ್ಥನೆಯಿಂದ ಅವನಿಗೆ ಚಮತ್ಕಾರವಾಗಿ ಜೈಮಿನಿ ಕವಿಯ ಭಾರತದ ಪ್ರತಿ ಸಿಗುತ್ತದೆ. ಅವನ ಅಂತರಂಗದಲ್ಲಿ “ನೀನು ದೇವನೂರಿಗೆ ಹೋಗಿ ದೇವರಗುಡಿಯಲ್ಲೇ ಬರೆ, ನೀನು ಕವಿಯಾಗಬಲ್ಲೆ ” ಎಂದು ಕೇಳಿಸುತ್ತದೆ. ಕವಿ ಕಾವ್ಯ ರಚನೆಯನ್ನು ಶುರುಮಾಡುತ್ತಾನೆ.

"ವೀಣೆಯಿಂ ಗಾನಮಂ ನುಡಿಸವಂದೊಳೆನ್ನ ವಾಣಿಯಿಂ ಕವಿತೆಯಂ ಪೇಲಿಸಿದ" ಎಂದು ನಾರಾಯಣನೆ ಕರ್ತೃ ಎಂದು ಹೇಳುತ್ತಾನೆ.
           ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು.ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಈ ಕಾವ್ಯದಲ್ಲಿ ೩೪ ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ ೧೯೩೬ ಕಾವ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ.ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ದೈವಿಕತೆಯನ್ನು ಸ್ಥಾಪಿಸುವ ಮತ್ತು ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ.
          ಲಕ್ಷ್ಮೀಶನು ಷಟ್ಪದಿ ಪ್ರಕಾರದಲ್ಲಿ ಅಪಾರ ಸಾಧನೆ ಮಾಡಿದ್ದ ಕುಮಾರವ್ಯಾಸ, ರಾಘವಾಂಕ, ಚಾಮರಸ ಮುಂತಾದವರ ಸವಾಲನ್ನು ಎದುರಿಸಬೇಕಾಗಿತ್ತು. ರಾಮಾಯಣ ಮತ್ತು ಮಹಾಭಾರತಗಳ ಹಲವು ಸಾಧ್ಯತೆಗಳನ್ನು ಅವನಿಗಿಂತ ಹಿಂದಿನ ಹಿರಿಯ ಕವಿಗಳು ಸೂರೆ ಮಾಡಿದ್ದರು. ಆದ್ದರಿಂದಲೇ ಈ ಕವಿಯು, ತನ್ನ ಕಾವ್ಯವಸ್ತುವಾಗಿ, ಮಹಾಭಾರತ ಯುದ್ಧದ ನಂತರದ ಘಟನೆಗಳನ್ನು ಆರಿಸಿಕೊಂಡನು.

ಲಕ್ಷ್ಮೀಶ ಕಾವ್ಯಗಳಲ್ಲಿ ಬರುವ ವಿಶೇಷತೆಗಳು:

ಸುರ್ರನೆ, ಕಿರ್ರನೆ, ಕರ್ರನೆ, ಘರ್ರನೆ, ತಿರ್ರನೆ ಸರ್ರನೆ ಎಂಬ ಪದಗಳಿಂದ ರಣರಂಗದ ಭೀಭತ್ಸವನ್ನು ಹೀಗೆ ವರ್ಣಿಸುತ್ತಾನೆ.

ಸುರ್ರನೆ ಸುಲಿದು ಸುತ್ತಿ ಬೆಂ ಡಾಗೆ ಕುದುರೆಗಳ್
ಕಿರ್ರನೆ ಕಪಿಶ್ವರ್ಮ್ ಪಲಿರಿದು ಚೀರಲ್ಕೆ
ಕರ್ರನೆ ಕವಿಯೇ ಕತ್ತಲೆ ಶಿರೋಭ್ರಮನೆಯಿಂ ಕೃಷ್ಣಾ ಫಳುಗುನರ್ಗೆ ….
ಮೇಲಿನ ಕಾವ್ಯ ಅರ್ಜುನ ಮತ್ತು ಬಬ್ರುವಾಹನರ ನಡುವಿನ ಯುದ್ಧದ ವರ್ಣನೆಯ ಬಗೆ

ತೇರ ವಂಗ ಡದ ಜರ್ಜಾವರಂ ಗಜದ ಘಂಟಾರವಂ
ಹಾಯದ ಹೆಷಾರವಂ ನಡೆವ ಸೇನಾರವಂ ಭೇರಿಯ ಮಹಾರವಂ ಬಹಳ ಕಹಳಾರವಂ …

ರವಂ ಪದ ಹೇಗೆ ಪ್ರಯೋಗಿಸಿಧ್ಧನೆ ಎಂಬುದನ್ನು ನೋಡಬಹುದು.

ಪದಲಾಲಿತ್ಯದ ಕೆಲ ಸಾಲುಗಳನ್ನು ನೋಡೋಣ

ಈ ವನದ ನಡುನಡುವೆ ಕೊಳ ತೊಳ ಗುತಿರುತಿಹ ಸ
ವರದೊಲೆರೋ ಬೆಳೆ ಬೆಳೆದು ರಾ
ಜೀವದಳರಲರ ತುಳಿತುಳಿದಿಡಿದಿಡಿದ ಬಂಡ ನೋಡ ನೋಡನೆ ಸವಿದು ಸವಿದು

ಸವಿಯೇ ಪ್ರಿಯರಾಗಮದರಾಗಮದರಾಗಮದ
ನ ವಿಳಾಸ ಮೆಂದು ತಾಂಬೂಲಮಂ ತೋರ್ಪರ್ಮು
ಡಿವೊಡೆ ಬೇಕಾದಳರ್ಕಾದಲರ್ಕಾದಲರ್ಕಂಗಜಾಹವದೊಳೆಂದು


ಅಶ್ವಮೇಧ ಯಾಗದ ಕಥೆಯ ಸೂತ್ರದಲ್ಲಿ ಅನೇಕ ಸಣ್ಣ ಕಥೆಗಳನ್ನುಪೋಷಿಸಿದ ಜೈಮಿನಿ ಭಾರತ. ಇದರಲ್ಲಿ ಮರುತ್ತನ ಕತೆ, ಅನುಸಾಲ್ವನ ಕಾಳಗ ಸ್ವಾಹ ಪರಿಣಯ ಬಬ್ರುವಾಹನನ ಕಾಳಗ, ವೀರವರ್ಮನ ಕತೆ, ಚಂದ್ರಹಾಸನ ಕತೆ ಮುಂತಾದವು ಇವೆ. ಯುದ್ಧಗಳ ವರ್ಣನೆ ಸ್ತ್ರೀ ಹಾಗು ಪ್ರಕೃತಿ ವರ್ಣನೆಗಳು ಕಾವ್ಯದಲ್ಲಿ ವಿಸ್ತಾರವಾಗಿ ಬಂದಿವೆ.

ಲಕ್ಷ್ಮೀಶನಿಗೆ ಹುಟ್ಟಿದ ಸ್ಥಳದ ಬಗ್ಗೆ ತುಂಬಾ ಪ್ರೇಮ. ” ಸ್ವರ್ಗಕ್ಕಿಂತಲೂ ನಾನ ಓರೆ ನನಗೆ ದೊಡ್ಡದು , ದೇವನೂರೆ ಕೈಲಾಸ ” ಎಂದು ಹಲವು ಬಾರಿ ತನ್ನ ಊರನ್ನು ಕೊಂಡಾಡಿದ್ದಾನೆ. ಹುಟ್ಟಿದ ಊರಿಗೆ ಅಷ್ಟಿಷ್ಟು ಸೇವೆ ಸಲ್ಲಿಸ ಬೇಕೆಂಬುದು ಕವಿಯ ಆಸೆ. ಅದಕ್ಕಾಗಿ ಊರ ಮುಂದೆ ಸುಂದರವಾದ ತೋಟ ಮಾಡಿಸಿದ, ನೀರಿಗಾಗಿ ಬಾವಿಗಳನ್ನು ತೊಡಿಸಿದ, ಕೆರೆ ತುಂಬಲು ಕಾಲುವೆಗಳನ್ನು ತೆಗೆಸಿದ. ಲಕ್ಷ್ಮೀಶನ ಗುಡಿಯಲಿ ಒಂದು ಕೀರ್ತಿ ಮಂಟಪ ಮಾಡಿಸಿದ. ಜನರನ್ನು ಮತ್ತು ಕವಿಗಳನ್ನು ಸತ್ಕರಿಸಿದ. ಅಭಿಮಾನಿಗಳು ನೀಡಿದ ಧನ ಕನಕ ವಸ್ತುಗಳನ್ನು ಜನ ಸೇವೆಗೆ ನೀಡಿದ ಉದಾರ ಕವಿ ನಮ್ಮ ಲಕ್ಷ್ಮೀಶ.

'ಜೈಮಿನಿ ಭಾರತ' ಕುರಿತು
ಕಾವ್ಯದ ಹೆಸರು: ಜೈಮಿನಿ ಭಾರತ
ಕವಿಯ ಹೆಸರು: ಲಕ್ಷ್ಮೀಶ
ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ)
ಸ್ಥಳ/ಸ್ಥಳಗಳು: ಚಿಕ್ಕಮಗಳೂರು ಜಿಲ್ಲೆಯ ದೇವನೂರು. (ಗುಲ್ಬರ್ಗ ಜಿಲ್ಲೆಯ ಸುರಪುರ.
ಮತ-ಧರ್ಮ: ಬ್ರಾಹ್ಮಣ
ಆಶ್ರಯದಾತರು: ಯಾವ ರಾಜನೂ ಇಲ್ಲ
ಬಿರುದುಗಳು: ಕರ್ನಾಟ ಕವಿಚೂತವನ ಚೈತ್ರ, ಉಪಮಾಲೋಲ.
ಸಾಹಿತ್ಯಪ್ರಕಾರ: ಕಾವ್ಯ
ಛಂದೋರೂಪ: ವಾರ್ಧಕ ಷಟ್ಪದಿ.
ಹಸ್ತಪ್ರತಿಗಳು: ಓಲೆಯ ಗರಿ ಮತ್ತು ಕಾಗದ
ಪ್ರಕಟವಾದ ವರ್ಷ: 1848, (ಕಲ್ಲಚ್ಚಿನ ಪ್ರತಿ), 1875, ವ್ಯಾಖ್ಯಾನಸಹಿತವಾಗಿ (ಕಲ್ಲಚ್ಚಿನ ಪ್ರತಿ)
ಸಂಪಾದಕರು: ವೆಂಕಟ ರಂಗೋ ಕಟ್ಟಿ (1875)(ಕಲ್ಲಚ್ಚಿನ ಪ್ರತಿ), ಹೊಳಕಲ್ ಶ್ರೀನಿವಾಸ ಪಂಡಿತ, 1875, ಮುದ್ರಿತ ಪ್ರತಿ.
ಪ್ರಕಾಶಕರು: ಕೃಷ್ಣರಾಜ ಮುದ್ರಾಕ್ಷರ ಶಾಲೆ, ಮೈಸೂರು.

ಕಿರು ಪರಿಚಯ: ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಜೈಮಿನಿ ಭಾರತವು ಕನ್ನಡದ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದಾಗಿತ್ತು. ಗಮಕ ಪರಂಪರೆಯ ನೆರವಿನಿಂದ ಹಳ್ಳಹಳ್ಳಿಗಳಲ್ಲಿಯೂ ಪ್ರಚುರವಾಗಿದ್ದ ಈ ಕಾವ್ಯದ ಅನೇಕ ಸನ್ನಿವೇಶಗಳು ನಾಟಕರೂಪವನ್ನೂ ಪಡೆಯುತ್ತಿದ್ದವು. ಜೈಮಿನಿ ಭಾರತವು, ಸಂಸ್ಕೃತದಲ್ಲಿ ಜೈಮಿನಿ ಎಂಬ ಋಷಿಯಿಂದ ರಚಿತವಾದ ಕಾವ್ಯ. ಲಕ್ಷ್ಮೀಶನ ಕಾವ್ಯವು ಯಾವುದೇ ಅರ್ಥದಲ್ಲಿಯೂ ಮೂಲದ ಕನ್ನಡ ಅನುವಾದವಲ್ಲ. ಕವಿಯು ತನಗಿರುವ ಸ್ವಾತಂತ್ರ್ಯವನ್ನು ಉಪಯೋಗಿಸಿ ಅನೇಕ ನೀರಸವಾದ ಭಾಗಗಳನ್ನು ಬಿಟ್ಟಿದ್ದಾನೆ ಮತ್ತು ತನ್ನದೇ ಆದ ಹೊಸ ಾಯಾಮಗಳನ್ನು ಸೇರಿಸಿದ್ದಾನೆ. ಈ ಕಾವ್ಯದಲ್ಲಿ 34 ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ 1936 ಪದ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ. ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ಕೃಷ್ಣನ ದೈವಿಕತೆಯನ್ನು ಖಚಿತವಾಗಿ ಸ್ಥಾಪಿಸುವ ಮತ್ತು ಅರ್ಜುನನಂತಹ ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ. ಅಶ್ವಮೇಧಯಾಗವನ್ನು ಮಾಡಬೇಕೆಂಬ ಧರ್ಮರಾಯನ ತೀರ್ಮಾನ ಮತ್ತು ಅದರ ಪೂರ್ವಸಿದ್ಧತೆ, ಪರಿಣಾಮಗಳನ್ನು ಬಹಳ ವಿವರವಾಗಿ ನಿರೂಪಿಸಲಾಗಿದೆ. ಅರ್ಜುನನು ತನಗಿಂತಲೂ ಎಷ್ಟೋ ಪಟ್ಟು ಬಲಶಾಲಿಗಳಾದ, ಆದರೆ ಕೃಷ್ಣನ ಬಗ್ಗೆ ಪ್ರಶ್ನಾತೀತವಾದ ಗೌರವವನ್ನು ಹೊಂದಿರುವ ಅನೇಕ ವೀರರನ್ನು ಅರ್ಜುನನು ಭೇಟಿಯಾಗುತ್ತಾನೆ. ಸುಧನ್ವ, ಹಂಸಧ್ವಜ, ಯೌವನಾಶ್ವ ಮುಂತಾದ ಅನೇಕ ವೀರರು ಅರ್ಜುನನನ್ನು ಸೋಲಿನ ಅಂಚಿಗೆ ತರುತ್ತಾರೆ. ಆದರೆ, ಎಲ್ಲ ಸಂದರ್ಭಗಳಲ್ಲಿಯೂ ಅವನು ಕೃಷ್ಣನ ಅನುಗ್ರಹದಿಂದ ಗೆಲುವು ಪಡೆಯುತ್ತಾನೆ ಮತ್ತು ಮರೆಯಲಾಗದ ಪಾಠವನ್ನು ಕಲಿಯುತ್ತಾನೆ. ಆದ್ದರಿಂದ ಜೈಮಿನಿ ಭಾರತವು ಪರಾಕ್ರಮವನ್ನು ಹಿನ್ನೆಲೆಗೆ ಸರಿಸಿ, ಭಕ್ತಿಯನ್ನು ಮುಂದೆಮಾಡುವ ಭಕ್ತಿಯುಗದ ಉತ್ಪನ್ನವೆಂದರೂ ತಪ್ಪಿಲ್ಲ.
         ಆದರೆ, ಲಕ್ಷ್ಮೀಶನ ಕೃತಿಯ ಜನಪ್ರಿಯತೆಗೆ, ತನ್ನ ಕಾವ್ಯವಸ್ತುವಿನ ನಿರ್ವಹಣೆಯಲ್ಲಿ ಕವಿಯು ತೋರಿಸಿರುವ ಅನುಪಮವಾದ ಕುಶಲತೆಯೇ ಕಾರಣ. ವಾಸ್ತವವಾಗಿ ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು. ಯಾಗದ ಕುದುರೆಯ ಹಿಂದೆ ಚಲಿಸುತ್ತಾ ಲೋಕಪರ್ಯಟನೆ ಮಾಡುವ ಅರ್ಜುನನು ಈ ಕಥೆಗಳನ್ನು ಪೋಣಿಸುವ ದಾರ. ಆದರೆ, ಈ ಕಾವ್ಯದ್ದು, ಬಿಡುಬೀಸಾಗಿ ಚಲಿಸುವ ನಿಧಾನಗತಿಯೇ ವಿನಾ ಯುದ್ಧಕಾತರವಾದ ನಾಗಾಲೋಟವಲ್ಲ. ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಅವನು ನಿಸರ್ಗಸೌಂದರ್ಯವನ್ನು ಗುರುತಿಸಬಲ್ಲ. ಅಂತೆಯೇ ಮನುಷ್ಯಸ್ವಭಾವದ ಆಳವಾದ ಪರಿಚಯವೂ ಅವನಿಗಿದೆ. ಈ ಕಾವ್ಯದಲ್ಲಿ ಬರುವ ಸೀತಾಪರಿತ್ಯಾಗದ ಹೃದಯಸ್ಪರ್ಶಿಯಾಗಿದ್ದು, ಸರಿಯಾಗಿ ವ್ಯಾಖ್ಯಾನ ಮಾಡಿದಾಗ ಅದು ಸ್ತ್ರೀವಾದೀ ಆಯಾಮಗಳನ್ನು ಪಡೆಯಬಲ್ಲುದು. ಚಂಡಿ-ಉದ್ಧಾಲಕರ ಪ್ರಸಂಗದಲ್ಲಿ ಲಕ್ಷ್ಮೀಶನ ಹಾಸ್ಯಪ್ರಜ್ಞೆಯು ಪ್ರಖರವಾಗಿ ಕಂಡುಬರುತ್ತದೆ. ಚಂದ್ರಹಾಸನ ಕಥೆಯು ಕನ್ನಡ ಓದುಗರಿಗೆ ಪ್ರಿಯವಾದ ಇನ್ನೊಂದು ಸಂದರ್ಭ. ಕವಿಯು ತನ್ನ ಕಾವ್ಯದಲ್ಲಿ ವೀರ, ಶೃಂಗಾರ, ಕರುಣ, ಹಾಸ್ಯ ಮುಂತಾದ ರಸಗಳನ್ನು ಅಂತೆಯೇ ಭಕ್ತಿಯಂತಹ ಭಾವನೆಗಳನ್ನು ನಿರೂಪಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ ಮತ್ತು ಅವುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾನೆ. ಈ ಕವಿಯ ಪ್ರತಿಭೆಯು ಅವನು ಬಳಸುವ ಉಪಮೆಗಳಲ್ಲಿ ಹಾಗೂ ಸಂಗೀತಕ್ಕೆ ಸಮೀಪವೆನ್ನುವಷ್ಟು ಮಧುರವಾದ ಭಾಷೆಯ ಬಳಕೆಯಲ್ಲಿ ನಿರ್ದಿಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಅವನನ್ನು ‘ಉಪಮಾಲೋಲ’, ‘ನಾದಲೋಲ’ ಎಂದೇ ಕರೆಯಲಾಗಿದೆ. ಕನ್ನಡದ ಶ್ರೇಷ್ಠ ವಿಮರ್ಶಕರಾದ ಕುವೆಂಪು, ಬೇಂದ್ರೆ, ಮಾಸ್ತಿ, ಕುರ್ತಕೋಟಿ, ಚಿ.ಎನ್. ರಾಮಚಂದ್ರನ್ ಅವರು ಲಕ್ಷ್ಮೀಶನ ಬಗ್ಗೆ ವಿವರವಾದ ಮತ್ತು ಒಳನೋಟಗಳಿಂದ ಕೂಡಿದ ವಿಮರ್ಶೆಯನ್ನು ಮಾಡಿದ್ದಾರೆ.

******* ಕನ್ನಡ ದೀವಿಗೆ ******

10 ಜುಲೈ 2020

ವಾದಿರಾಜರು

ವಾದಿರಾಜರು

Sameer Bharadwaj on Twitter: "Today is #Vadiraja Jayanti ...

ಹದಿನೈದನೆಯ ಶತಮಾನದ ಅಂತ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿರುವ ಹೂವಿನಕೆರೆ ಎಂಬ ಗ್ರಾಮದಲ್ಲಿ ಜನನ. ತಂದೆ ರಾಮಾಚಾರ್ಯ ಮತ್ತು ತಾಯಿ ಸರಸ್ವತಿದೇವಿ. ಪೂರ್ವಾಶ್ರಮದ ಹೆಸರು ಭೂವರಾಹ.

 ವಾದಿರಾಜರು ನೂರಾ ಇಪ್ಪತ್ತು ವರ್ಷಗಳವರೆಗೆ ಕಣ್ಣಿಗೆ ಗೋಚರರಾಗಿದ್ದಂತಹವರು. ಹಯವದನ ವಾದಿರಾಜರ ಆರಾದ್ಯ ದೈವ. ತಮ್ಮ ಎಂಟನೆಯ ವಯಸ್ಸಿನಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ವಾದಿರಾಜರ ಸನ್ಯಾಸ ಜೀವನದ ಅವಧಿ ೧೧೨ ವರ್ಷಗಳು. ಶಿರಸಿ ತಾಲೂಕಿನ ಸೋಂದಾ ಕ್ಷೇತ್ರದಲ್ಲಿ ಇವರ ಬೃಂದಾವನವಿದೆ.

 ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ವಾದಿರಾಜರು ಕೃತಿಗಳನ್ನು ರಚಿಸಿದ್ದಾರೆ. ಹಯವದನ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಈವರೆಗೆ ವಾದಿರಾಜರು ರಚಿಸಿರುವ ೩೪೩ ಕೀರ್ತನೆಗಳು ಲಭ್ಯವಾಗಿದ್ದು, ಅದರಲ್ಲಿ ೯ ದೀರ್ಘ ಕೃತಿಗಳು. ವಾದಿರಾಜರು ರಚಿಸಿರುವ ಲಕ್ಷೀಶೋಭಾನ ಪದವನ್ನು ಮದುವೆ ಮನೆಯಲ್ಲಿ ಹಾಡಿದರೆ ಮದುಮಕ್ಕಳಿಗೆ ಶುಭವಾಗುತ್ತದೆಂಬ ನಂಬಿಕೆ ಇದೆ. ಲಕ್ಷೀಶೋಭಾನದಲ್ಲಿ ಬರುವ ಈ ಚರಣ ಆದಕ್ಕೆಕಾರಣವಾಗಿರಬಹುದು -

 "ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ ಮದುಮಕ್ಕಳಿಗೆ ಮುದವಹುದು

ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವುದು ಮದನನಯ್ಯನ ಕೃಪೆಯಿಂದ"

 ಇತರ ವಿವರಗಳು

ವಾದಿರಾಜರು ಬ್ರಾಹ್ಮಣ ಮನೆತನಕ್ಕೆ ಸೇರಿದವರು. ತಮ್ಮ ಪಾಂಡಿತ್ಯದಿಂದಾಗಿ ವಿಜಯನಗರ ಅರಸರಿಂದ ಸನ್ಮಾನಿಸಲ್ಪಟ್ಟಿದ್ದರು. "ಕುಡುಮ" ಎಂದು ಕರೆಯಲಾಗುತ್ತಿದ್ದ ಕ್ಷೇತ್ರವನ್ನು ಧರ್ಮಸ್ಥಳವೆಂದು ಹೆಸರಿಸಿದವರು ವಾದಿರಾಜರು.

**** ಮಾಹಿತಿ ಕೃಪೆ: ವಿಕಿಪೀಡಿಯಾ ****

- ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಲೇಖನ

ವಾದಿರಾಜರು ಕನ್ನಡ ಹರಿದಾಸ ಸಾಹಿತ್ಯದ ಧೀಮಂತ ಶ್ರೇಷ್ಠರು. ಉಡುಪಿಯ ಶ್ರೀಕೃಷ್ಣನ ಪೂಜಾ ಪರಿಸರದಲ್ಲಿ ಕನ್ನಡದ ಸರಳ ಸುಂದರ ಕೀರ್ತನೆಗಳನ್ನು ಹಾಡುವ ಸತ್ಸಂಪ್ರದಾಯವನ್ನು ಸಮರ್ಥವಾಗಿ ಪ್ರಾರಂಭಿಸಿದ ಪ್ರವರ್ತಕ ಮನೀಷಿಗಳು ವಾದಿರಾಜರು. ಭಗವಂತನ ದಶಾವತಾರದ ವರ್ಣನೆಯನ್ನು ವೈವಿಧ್ಯಪೂರ್ಣವಾಗಿ ವಿಶಿಷ್ಟಶೈಲಿಯಲ್ಲಿ ಬಿತ್ತರಿಸುವ ವಾದಿರಾಜರ ಕೃತಿಗಳ ಚಮತ್ಕಾರ ಅಪೂರ್ವ. ಲೀಲಾಜಾಲವಾಗಿ ಹೊಸ ಬೀಸಿನಲ್ಲಿ ಸುಂದರ ಸಮನೋಹರವಾಗಿ ಕಾವ್ಯಕಲೆಯನ್ನು ಅವರು ಅರಳಿಸುವ ಪರಿ ಅನನ್ಯ.

ಪುರಂದರದಾಸರು, ವ್ಯಾಸರಾಜರು, ಕನಕದಾಸರು ಮುಂತಾದವರ ಸಮಕಾಲೀನರಾಗಿದ್ದು ಉಡುಪಿಯ ಶ್ರೀಕೃಷ್ಣನ ಸೇವೆಯಲ್ಲಿ ಪರಿವ್ರಾಜಕರಾಗಿ ಪರಮ ಪೂಜ್ಯರೆನಿಸಿದರು. ತಾವಿದ್ದ ಪರಿಸರದಲ್ಲೆಲ್ಲಾ ಧಾರ್ಮಿಕ ಜಾಗೃತಿಯ ನವಚೇತನವನ್ನು ಮೂಡಿಸಿ ದಾರ್ಶನಿಕ ಧೃವತಾರೆಗಳೆನಿಸಿದರು. ಉಪಾಸ್ಯಮೂರ್ತಿ ಹಯಗ್ರೀವ ದೇವರ ಮಹಿಮಾತಿಶಯಗಳನ್ನು ಕಂಡು 'ಹಯವದನ' ಅಂಕಿತದಿಂದ ಸಹಸ್ರ ಸಹಸ್ರ ಕೀರ್ತನೆಗಳನ್ನು ಕನ್ನಡ ಜನರ, ಭಗವದ್ಭಕ್ತರ ಒಡಲಿಗೆ ಹಾಕಿದ ಪುಣ್ಯಪುರುಷರು ಶ್ರೀ ವಾದಿರಾಜರು.

 

ದಿವ್ಯಭಾವಗೀತೆಯ ಸಂಚಾರಿ

ದಾಸ-ವ್ಯಾಸ ಪರಂಪರೆಗಳ ಅದ್ಭುತ ಪ್ರತಿಭೆ ಪಾಂಡಿತ್ಯಗಳ ಮಹಾನ್‌ ಪ್ರತೀಕವಾಗಿದ್ದ ವಾದಿರಾಜರು ಕನ್ನಡ ಹಾಗೂ ತುಳು ಭಾಷೆಯಲ್ಲಿ ಕೀರ್ತನೆ ಹಾಗೂ ಪಾಡ್ದನಗಳನ್ನು ಜನಸಾಮಾನ್ಯರ ಆತ್ಮೋದ್ಧಾರಕ್ಕಾಗಿ ರಚಿಸಿ, ತಾವೇ ಅವನ್ನು ಹಾಡಿ, ಹಾಡಿಸಿ, ಶತಮಾನಗಳ ಕಾಲ ಜನಸಮುದಾಯವನ್ನು ತಣಿಸುತ್ತಿರುವ ಯತಿಶ್ರೇಷ್ಠರು. ಇವರ ಸುಳಾದಿ, ಉಗಾಭೋಗ, ದೇವರನಾಮಗಳು ದಿವ್ಯಭಾವಗೀತೆಯ ಸೊಬಗಿನಲ್ಲಿ ಸಂಚಾರಿಯಾಗುತ್ತವೆ. ತತ್ವಭೋದಕ ದಿವ್ಯಾಮೃತವಾಗಿ ಅವು ಪರಿಣಮಿಸಿವೆ. ತಪಸ್ಸು, ವಿದ್ಯೆ, ವಿರಕ್ತಿ, ಭಗವದ್ಭಕ್ತಿ, ಹಾಗೂ ವಾತ್ಸಲ್ಯಗಳಿಂದ ಯತಿಶ್ರೇಷ್ಠರೆನ್ನಿಸಿದ ವಾದಿರಾಜರು ಕನ್ನಡ ಸಂಸ್ಕೃತಿಗೆ, ಸಾಹಿತ್ಯ ಸಂಗೀತಗಳಿಗೆ, ದರ್ಶನಕ್ಕೆ, ಸಮಾಜದ ಸಂಘಟನೆಗೆ, ಸದಾಚಾರದ ಸಾಮೂಹಿಕ ಪುನರುದ್ದೀಪನಕ್ಕೆ ಸಲ್ಲಿಸಿರುವ ಸೇವೆ ಚಿರಸ್ಮರಣೀಯ.

ದಶಾವತಾರದ ಕಲ್ಪನೆ

ಸಾಮಾಜಿಕ ಪ್ರಜ್ಞೆ ಹಾಗೂ ಸಮಾಜದ ಬಗೆ ಅಪಾರ ಕಳಕಳಿಯನ್ನು ತಮ್ಮ ಕೃತಿಗಳಿಂದ, ಕಾರ್ಯಗಳಿಂದ ಮೆರೆದಿರುವ ವಾದಿರಾಜರು ವಾಸ್ತವ ಪ್ರಜ್ಞೆಯೆಡೆಗೆ ಜನರನ್ನು ಕರೆದೊಯ್ಯುವುದರಲ್ಲಿ ನಿಷ್ಣಾತರು. ಭಗವನ್ನಾಮಸ್ಮರಣೆ ಮನುಷ್ಯನಿಗೆ ಉತ್ತಮ ಹಿನ್ನೆಲೆಯನ್ನು ನಿರ್ಮಿಸಬಲ್ಲುದೆಂದು ಹೇಳಿ 'ಪ್ರಾತಃಕಾಲದಲ್ಲೆದ್ದು ಪಾರ್ಥಸಾರಥಿಯನು ಪ್ರೀತೀಲಿ ನೆನೆದರೆ ಪ್ರೀತನಾಗುವ ಹರಿ, ಮಾತುಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ' ಎಂಬ ಸಂದೇಶ ನೀಡಿದವರು. ಅವರ ದಶಾವತಾರ ವರ್ಣನೆಗಳಂತೂ ಭಗವಂತನ ಹತ್ತವತಾರಗಳ ಮುತ್ತಿನ ಮಣಿಹಾರ. ದಶಾವತಾರದ ಕಾವ್ಯರಚನೆಗೆ ಕೈಯಿಟ್ಟೊಡನೆಯೇ ಸ್ವಾದಿಯ ವಾದಿರಾಜರು ಮೈಮರೆಯುತ್ತಾರೆ. ಕಾವ್ಯಸರಸ್ವತಿ ಗೆಜ್ಜೆ ಕಟ್ಟಿಕೊಂಡು ಅವರ ಭಾವಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ನರ್ತಿಸುವ ನಾದವೈಖರಿ ಅಸಾಧಾರಣ.

 

ಸಂಸ್ಕೃತಿಯ ಪುನರುತ್ಥಾನ

ವೈದಿಕ ಸಂಸ್ಕೃತಿಯ ಪುನರುತ್ಥಾನದಲ್ಲಿ ವಾದಿರಾಜರ ಪಾತ್ರ ಬಹಳ ಹಿರಿದು. ತತ್ವಜ್ಞಾನದ ಪ್ರಸಾರ. ವೈಷ್ಣವ ಸಿದ್ಧಾಂತದ ಪ್ರಬಲ ಪ್ರತಿಷ್ಠಾಪನೆಯಲ್ಲಿ ಅದ್ಭುತ ಕ್ರಿಯಾಶಕ್ತಿಯಾದವರು ವಾದಿರಾಜರು. ತಪಶ್ಯಕ್ತಿ, ಮಂತ್ರಸಿದ್ಧಿ ಹಾಗೂ ನಿಶ್ಚಿತ ತತ್ವಜ್ಞಾನಗಳ ತ್ರಿವೇಣಿ ಸಂಗಮವಾಗಿದ್ದ ವಾದಿರಾಜರಿಗೆ ರಾಜ ಮಹಾರಾಜರುಗಳೇ ನಾ ಮುಂದು ತಾ ಮುಂದು ಎಂದು ಬಂದು ಸೇವೆ ಮಾಡುತ್ತಿದ್ದರು. ಸೋದೆಯ ಅರಸಪ್ಪ ನಾಯಕನಿಗಂತೂ ವಾದಿರಾಜರೇ ಸರ್ವಸ್ವ. ವಾದಿರಾಜರನ್ನು ಅನೇಕ ಸಾಮ್ರಾಟ ಸಾಮಂತರುಗಳು ಪ್ರಸಂಗಾಭರಣತೀರ್ಥ, ಷಡ್ದರ್ಶನ ಷಣ್ಮುಖ, ಸರ್ವಜ್ಞಕಲ್ಪ, ಕವಿಕುಲತಿಲಕ ಮುಂತಾದ ಮಹತ್ವದ ಪ್ರಶಸ್ತಿ ಗೌರವಗಳನ್ನು ನೀಡಿ ಗೌರವಿಸಿದರು. ಗೋವೆಯ ದೈವಜ್ಞ ಬ್ರಾಹ್ಮಣರನ್ನು ಅವರ ಸ್ವರೂಪ ಗ್ರಹಿಸಿ ಮುದ್ರಾಧಾರಣೆ ಮಾಡಿ ಚಕ್ರಾಂಕನ ನೀಡಿ ಮಾಧ್ವ ತತ್ವಜ್ಞಾನದ ಮುಮುಕ್ಷ ುಗಳಾಗುವಂತೆ ಅವರನ್ನು ಅನುಗ್ರಹಿಸಿದರು. ಧರ್ಮಸ್ಥಳ ಮುಂತಾದೆಡೆಗಳಲ್ಲಿ ಈಶ್ವರನನ್ನು ಅರ್ಚಿಸಿ ಪ್ರತಿಷ್ಠಾಪನೆ ಮಾಡಿದ ಇವರ ಸಾಧನೆಯು ವೈಷ್ಣವರು ಶಿವದ್ವೇಷಿಗಳೆಂಬ ಭ್ರಮೆಯನ್ನು ಸಂಪೂರ್ಣ ನಿವಾರಿಸಿತು. ಇವರು ಪಾಠ ಪ್ರವಚನಗಳನ್ನು ನಿರಂತರ ನಡೆಸಿ ಸಿದ್ಧಾಂತ ಪರಂಪರೆಯನ್ನು ಮುಂದುವರೆಸಬಲ್ಲ ಅನೇಕ ಶಿಷ್ಯರನ್ನು ಅರಳಿಸಿದರು. ಇವರ ಸೋದರರೂ ಆನಂತರ ಭಂಡಾರಕೇರಿ ಪೀಠವನ್ನಲಂಕರಿಸಿದವರೂ, ಇವರ ಯುಕ್ತಿಮಲ್ಲಿಕಾ ಗ್ರಂಥಕ್ಕೆ ಟೀಕೆ ಬರೆದವರೂ ಆದ ಸುರೋತ್ತಮತೀರ್ಥರು; ಇವರ ರುಕ್ಮಿಣೀಶವಿಜಯ, ತೀರ್ಥಪ್ರಬಂಧಗಳಿಗೆ ಉತ್ಕೃಷ್ಟ ವ್ಯಾಖ್ಯಾನಗಳನ್ನು ಬರೆದಿರುವ ನಾರಾಯಣಾಚಾರ್ಯರು; ಇವರ ಜೀವನಚರಿತ್ರೆಯನ್ನು ಹೃದಯಂಗಮವಾಗಿ ಚಿತ್ರಿಸಿರುವ ವೃತ್ತರತ್ನ ಸಂಗ್ರಹಕಾರ ರಘುನಾಥಾಚಾರ್ಯರೂ ಈ ಪರಂಪರೆಯಲ್ಲಿ ಪಲ್ಲವಿಸಿದರು.

 

ಕನಕದಾಸರ ಅಭಿಮಾನ

ಕನಕದಾಸರಿಗೆ ವಾದಿರಾಜರ ಮೇಲೆ, ವಾದಿರಾಜರಿಗೆ ಕನಕದಾಸರ ಮೇಲೆ ವಿಶೇಷ ಅಭಿಮಾನ. ಕನಕದಾಸರು ತಮ್ಮ ಮೋಹನತರಂಗಿಣಿಯಲ್ಲಿ ತಾನೂ 'ತ್ರಿವಿಕ್ರಮದಾಸರ ದಾಸ' ಎಂದು ಅವರನ್ನು ಸ್ತುತಿಸಿದ್ದಾರೆ. ಅನ್ಯಜಾತಿಯವರಾದರೂ ಹರಿದಾಸರಾಗಿದ್ದ ಕನಕದಾಸರ ಮೇಲೆ ತೋರಿದ ಅಭಿಮಾನ, ಸಂಸ್ಕೃತ ಬಾರದ ಸಾಮಾನ್ಯರಿಗಾಗಿ ತುಳುವಿನಲ್ಲಿ ದಶಾವತಾರ ರಚಿಸಿದ ಔದಾರ್ಯ, ವಾದಿರಾಜರ ಘನತೆಗೆ ದ್ಯೋತಕ. ವಾದಿರಾಜರು ಕನ್ನಡಹರಿದಾಸಸಾಹಿತ್ಯದ ಸವ್ಯಸಾಚಿಗಳು. ಸೊಬಗು, ಲಾಲಿತ್ಯ, ವೇದಾಂತ ಭಾವಗಳ, ಸಾಮಾಜಿಕ ತತ್ವಗಳ ಅಪೂರ್ವ ಕೃತಿಗಳನ್ನು ಅವರು ನೀಡಿದ್ದಾರೆ. ವೈಕುಂಠವರ್ಣನೆ,ಲಕ್ಷ್ಮೀಶೋಭಾನೆ,ಸ್ವಪ್ನಪದ, ಗುಂಡಕ್ರಿಯೆ, ತತ್ವಸುವ್ವಾಲಿ, ಭ್ರಮರಗೀತೆ, ನಾರದಕೊರವಂಜಿ ಮುಂತಾದ ಕೃತಿಗಳು ಅವರ ಲೋಕಾನುಭವಕ್ಕೆ, ಅನುಭಾವಕ್ಕೆ, ಸಾಹಿತ್ಯ ಸಾಮರ್ಥ್ಯ‌ಗಳಿಗೆ ನಿಚ್ಚಳವಾದ ನಿದರ್ಶನವಾಗಿವೆ.

 

ಪೂಜಾಪದ್ಧತಿಯಲ್ಲಿ ಸುಧಾರಣೆ

ವಾದಿರಾಜರು ಉಡುಪಿಯ ಕೃಷ್ಣನ ಪೂಜಾಪದ್ಧತಿಯಲ್ಲಿ ಸುಧಾರಣೆಯನ್ನು ತಂದರು. ಎರಡು ತಿಂಗಳ ಪೂಜಾಪದ್ಧತಿಯನ್ನು ಎರಡು ವರ್ಷಗಳ ಪರ್ಯಾಯ ಪದ್ಧತಿಯನ್ನಾಗಿ ಪುನವ್ರ್ಯವಸ್ಥೆ ಮಾಡಿದರು. ಅಷ್ಟಮಠಗಳಿಗೆ ಅರಸರುಗಳ ಸಹಕಾರದಿಂದ ಉತ್ತಮ ಭೂಸ್ಥಿತಿಗಳನ್ನೇರ್ಪಡಿಸಿದರು. ತಮ್ಮ ಕನ್ನಡದ ಹಾಡು 'ಲಕುಮಿನಾರಾಯಣ ಜಯ ಲಕುಮಿನಾರಾಯಣ'ವನ್ನು ಎಲ್ಲರೂ ಯತಿಗಳ ಸಹಿತವಾಗಿ ಪ್ರತಿರಾತ್ರಿಯ ಪೂಜಾಕಾಲದಲ್ಲಿ ಭಜನ ರೀತಿಯಿಂದ ಹಾಡುತ್ತಾ ತಾಳ ಬಾರಿಸುತ್ತಾ, ನರ್ತನಸೇವೆಯ ಹೊಸ ಭಜನ ಸಂಪ್ರದಾಯವೊಂದನ್ನು ಬಳಕೆಗೆ ತಂದರು. ಪೂರ್ಚುಗೀಸರ ಮತಾಂತರ ಉಪಟಳ ತಾಳದೇ ಕರಾವಳೀ ಕನ್ನಡದ ಕಡೆಗೆ ಬಂದು ನೆಲೆಸಿದ್ದ ಗೋವಾ ಜನರ ಸ್ವರೂಪಗತವಾಗಿದ್ದ ಬ್ರಾಹ್ಮಣಸಂಸ್ಕಾರವನ್ನು ಗ್ರಹಣ ಮಾಡಿದ ವಾದಿರಾಜರು ಅವರಿಗೆಲ್ಲಾ ಚಕ್ರಾಂಕನದ ಮೂಲಕ ಭಾಗವತ ಧರ್ಮದ ದೀಕ್ಷೆ ನೀಡಿ ತಮ್ಮ ಮಠದ ಮುಖ್ಯ ಶಿಷ್ಯರನ್ನಾಗಿ ಪರಿಗಣಿಸಿದರು. ಅದೇ ಮೇರೆಗೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದ ಕೆಲವು ಸಾರಸ್ವತರಿಗೆ ಮಾಧ್ವಮತ ದೀಕ್ಷೆ ಕೊಟ್ಟು ಪುರಸ್ಕರಿಸಿದರು.

 

ಕುಡುಮ ಎಂದು ಕರೆಯುತ್ತಿದ್ದ ತೀರ್ಥಕ್ಷೇತ್ರವನ್ನು ವಾದಿರಾಜರು 'ಧರ್ಮಸ್ಥಳ' ಎಂದು ಹೆಸರಿಟ್ಟು ಅಲ್ಲಿ ಆಗ ಮಂಜುನಾಥನ ಪ್ರತಿಷ್ಠಾಪನೆಯ ಕಾರ್ಯ ನೆರವೇರಿಸಿದರು. ಸಕಲ ಹರಿದಾಸರಿಂದಲೂ ವಾಯುಪದಾರ್ಹ ಋುಜುಗಣಸ್ತರೆಂದೇ ಕೊಂಡಾಡಲ್ಪಟ್ಟ ವಾದಿರಾಜರು ಬದರಿಕಾಶ್ರಮಕ್ಕೆ ಹೋಗಿ ತ್ರಿವಿಕ್ರಮೂರ್ತಿಯನ್ನು ಪಡೆದು ಭೂತರಾಜರ ಮೂಲಕ ಪುಣ್ಯಕ್ಷೇತ್ರ ಸ್ವಾದಿಯಲ್ಲಿ ಅದನ್ನು ಪ್ರತಿಷ್ಠಾಪಿಸಿದರು.

 

ಕನ್ನಡ ಯಶೋಡಿಂಡಿಮ

ಕಲಿಯುಗದಲ್ಲಿ ಭಗವಂತನನ್ನು ಕಂಡು ಆತ್ಮಾನುಭವವನ್ನು ಉಂಡ ಕೆಲವೇ ಪ್ರಭಾವಿಗಳಾದ ಅನುಭಾವಿಗಳಲ್ಲಿ ಅಗ್ರಗಣ್ಯರು ವಾದಿರಾಜರು. ವಾದಿರಾಜರ ಬದುಕೇ ಚತುರ್ಮುಖ ಬ್ರಹ್ಮನಂತೆ. ಅವರು ಸರ್ವಸಂಗ ಪರಿತ್ಯಾಗ ಮಾಡಿದ ಪರಿವ್ರಾಹಕ ಪ್ರಭುಗಳಾದರೂ ರಾಜರೆಂದೇ ವಿಖ್ಯಾತರಾಗಿದ್ದಾರೆ. ಸದ್ಗ್ರಂಥ - ಉದ್ಗ್ರಂಥಗಳನ್ನು ರಚಿಸಿ ದರ್ಶನ ಜಗತ್ತಿನ ಗೌರೀಶಂಕರವೆನ್ನಿಸಿಕೊಂಡರೂ, ಮಾಘನ ಶಿಶುಪಾಲವಧವನ್ನು ಮೀರಿಸುವ ರಸಕಾರಂಜಿ ರುಕ್ಮಿಣೀಶ ವಿಜಯವನ್ನು ರಚಿಸಿ ಕವಿರಾಜರೂ ಆಗಿದ್ದಾರೆ. ಅವರ ಅಶ್ವಧಾಟಿಯಂತೂ ಕಾವ್ಯದಲ್ಲಿ ಹೆಜ್ಜೆಹೆಜ್ಜೆಗೂ ಕುಣಿಯುತ್ತಾ ಪ್ರಾಸಾಲಂಕಾರಗಳ ಕಿಂಕಿಣಿನಾದವನ್ನು ನಿನದಿಸುತ್ತದೆ. ಭಾವದ ರಿಂಗಣಗುಣಿತಕ್ಕೆ ತಾಳಹಾಕಿ ರಸಮೇಳ ನಿರ್ಮಿಸಿರುವ ಅವರ ರುಕ್ಮಿಣೀಶವಿಜಯ ಕಲ್ಪನಾ ಸೌಂದರ್ಯಕ್ಕೊಂದು ಸುಂದರ ದೃಷ್ಟಾಂತ. ರುಕ್ಮಿಣೀಶವಿಜಯದ 'ಕುಂಡಲೀಕೃತ ಮನೋರಮರಾಮಾ, ಖಂಡಿತಾನನ ಸರೋರುಹಧಾಮಾ, ಗಂಡಚುಂಬನ ಕುತೂಹಲಕಾಮಾ|| ಶಂಭ್ವಾದ್ಯೈಃ ಪರಿಷೇವಿತಾಂ ಸುವಸನಾಂ ಜಾಂಬೂನದಾಲಂಕೃತಾಂ ಅಂಬಾಂ ತಾಂ ಪ್ರಣತೋಸ್ಮಿ ಕೃಷ್ಣರಮಣೀಂ ಲಂಬಾಲಕಾಂ ರುಕ್ಮಿಣೀಂ' ಎನ್ನುವ ಪದಪುಂಜಗಳಲ್ಲಿ, ಶಬ್ದಕುಂಜಗಳಲ್ಲಿ ಪುಟಿಯುವ ರಸಾಕಾರಂಜಿಯನ್ನು ಕಂಡು ಪುಣೆಯ ವಿದ್ವಜ್ಜನರು ವಿಸ್ಮಯಗೊಂಡಿದ್ದೇನೂ ಆಶ್ಚರ್ಯವೇನಲ್ಲ. ತಮ್ಮ ಕೃತಿಕೌಶಲ್ಯದಿಂದ ಹೊರನಾಡಿನಲ್ಲಿಯೂ ಕನ್ನಡಿಗರ ವಿಜಯಧ್ವಜವನ್ನು ಹಿಡಿದೆತ್ತಿ ಯಶೋಡಿಂಡಿಮವನ್ನು ಮೊಳಗಿಸಿದ ರಾಜರೆಂದರೆ ವಾದಿರಾಜರೊಬ್ಬರೇ.

 

ಸರಳತೆಯ ಸಾಕ್ಷಾತ್ಕಾರ

ಶಾಸ್ತ್ರೀಯ ಸಾಹಿತ್ಯದ ಇತಿಹಾಸದಲ್ಲಿ ಮುಖ್ಯ ಮೈಲಿಗಲ್ಲಾಗಿರುವ 'ಯುಕ್ತಿಮಲ್ಲಿಕಾ' ವಾದಿರಾಜರ ಶಾಸ್ತ್ರಪ್ರಭುತ್ವ ಹಾಗೂ ಸಾಹಿತ್ಯಪಟುತ್ವಗಳ ಎತ್ತರ - ಬಿತ್ತರಗಳನ್ನು ದಿಟ್ಟವಾಗಿ ಮೂಡಿಸುವ ಕೃತಿ. ಶ್ರೀಮನ್ನ್ಯಾಯಸುಧಾ ಹಾಗೂ ತತ್ವಪ್ರಕಾಶಿಕಾ ಕೃತಿಗಳಿಗೆ ವಾದಿರಾಜರು ಬರೆದಿರುವ 'ಗುರ್ವರ್ಥದೀಪಿಕೆ' ಎಂಬ ಟೀಕಾಗ್ರಂಥ ವೇದಾಂತಸಾರದ ರಹಸ್ಯಗಳನ್ನೆಲ್ಲಾ, ಸುಧಾ ಪ್ರಮೇಯಗಳನ್ನೆಲ್ಲಾ ಸಂಪೂರ್ಣ ತಿಳಿಸಿಕೊಡುವ ಸುಂದರ ಗ್ರಂಥ. ಅನಂದತೀರ್ಥರ ಜ್ಞಾನ ದಿಗಂತಗಳಿಗೆ ಹಿಡಿದಿಟ್ಟ ಕನ್ನಡಿಯಂತೆ ಕಂಗೊಳಿಸುತ್ತಿರುವ ವಾದಿರಾಜರ 'ಮಹಾಭಾರತ ತಾತ್ಪರ್ಯನಿರ್ಣಯ'ದ ಟಿಪ್ಪಣಿ ಸರಳತೆಯ ಸಾಕ್ಷಾತ್ಕಾರ. ವಾದಿರಾಜರ ವೇದವೇದಾಂತಗಳ ವಿಕ್ರಮದ ಬೌದ್ಧಿಕ ಹಿರಿಮೆಗೆ ಹಾಗೂ ಅವರ ವಾದಕೌಶಲ್ಯ ವಾಗ್ವೈಖರೀ, ವಿಷಯವಿನ್ಯಾಸಪಾಟವಗಳಿಗೆ ನಿತ್ಯನಿದರ್ಶನವೆನ್ನಿಸುವಂತಹ ಕೃತಿಗಳು - 'ಸರಸಭಾರತೀವಿಲಾಸ' ಹಾಗು 'ತೀರ್ಥಪ್ರಬಂಧ'.

ವಾದಿರಾಜರು ಪ್ರಯಾಗದಲ್ಲಿರುವ ಬ್ರಹ್ಮದೇವರ ಸಂಧ್ಯಾಮಂಟಪದಲ್ಲಿ ಧ್ಯಾನಪುಳಕಿತಮೂರ್ತಿಗಳಾಗಿ ಮೈಮರೆತು ಕುಳಿತಿದ್ದಾಗ ವೇದವ್ಯಾಸದೇವರೇ ಅವರಿಗೆ ದರ್ಶನವಿತ್ತು ವಾದಿರಾಜರ ತಾಯಿ ಹರಿಸಿಕೊಂಡಿದ್ದ ಲಕ್ಷಾಲಂಕಾರವನ್ನು ಹೇಳಿ, ಮಹಾಭಾರತದ ಲಕ್ಷ ಶ್ಲೋಕಗಳ ಕಠಿಣ ತಾತ್ಪರ್ಯವನ್ನು ವಿವರಿಸಿ ಬರೆದು ಅರ್ಪಿಸಿದರೆ ಆ ಹರಕೆ ತೀರಿದಂತಾಗುವುದೆಂದು ನುಡಿದರು. ಆಗ ವಾದಿರಾಜರು ವ್ಯಾಸಭಾರತದ ಹಿನ್ನೆಲೆಯಲ್ಲಿ ಕೋಶಗಳನ್ನು ತಮ್ಮದೇ ಆದ ನಿರೂಪಣ ನೈಪುಣ್ಯದಿಂದ 'ಲಕ್ಷಾಲಂಕಾರ'ವಾಗಿ ರಚಿಸಿ ಸಮರ್ಪಣ ಮಾಡಿದ ವಾದಿರಾಜರು ಪ್ರಾತಃಸ್ಮರಣೀಯರಾಗಿದ್ದಾರೆ.

**** ಮಾಹಿತಿ ಕೃಪೆ: ವಿಜಯ ಕರ್ನಾಟಕ ****

ರತ್ನಾಕರವರ್ಣಿ

ರತ್ನಾಕರವರ್ಣಿ
ರತ್ನಾಕರ ವರ್ಣಿಯ ಕಾಲ್ಪನಿಕ ಚಿತ್ರ (ಕೃಪೆ: www.icarelive.com)
  • ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬನಾದ ರತ್ನಾಕರವರ್ಣಿಯ ಕಾಲ ಸುಮಾರು ಕ್ರಿ.ಶ. ೧೫೫೭. (೯ನೇ ತರಗತಿ ಪಠ್ಯಪುಸ್ತಕದಲ್ಲಿ ಈತನ ಕಾಲ ಸು.ಕ್ರಿ.ಶ.೧೫೬೦ ಎಂದಿದೆ)
  • ಈತನ ತಂದೆಯ ಹೆಸರು ದೇವರಾಜ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ. 
  • ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜನಾದ ಕಾರ್ಕಳದ ಭೈರರಾಜನ ಆಸ್ಥಾನದಲ್ಲಿದ್ದ ಕವಿ.
  • ರತ್ನಾಕರವರ್ಣಿ ರಚಿಸಿದ ಕೃತಿಗಳು:
  • ಭರತೇಶ ವೈಭವ - ರತ್ನಾಕರವರ್ಣಿಯ ಮೇರು ಕೃತಿ.
  • ತ್ರಿಲೋಕ ಶತಕ
  • ಅಪರಾಜಿತೇಶ್ವರ ಶತಕ
  • ರತ್ನಾಕರಾಧೀಶ್ವರ ಶತಕ
  • ಸೋಮೇಶ್ವರ ಶತಕ (ಕೆಲ ವಿದ್ವಾಂಸರ ಪ್ರಕಾರ ರತ್ನಾಕರವರ್ಣಿಯು ಈ ಕೃತಿಯನ್ನು ತನ್ನ ಬದುಕಿನ ಸಂದಿಗ್ಧ ಘಟ್ಟವೊಂದರಲ್ಲಿ ಮತಾಂತರಗೊಂಡಾಗ ರಚಿಸಿದ್ದಾನೆ)
  • ಅಣ್ಣನ ಪದಗಳು

ಘಟನೆ
ಕಾಲ
ಜನನ
೧೫೩೨
ತ್ರಿಲೋಕಶತಕದ ರಚನೆ
೧೫೫೭
ಭರತೇಶವೈಭವದ ರಚನೆ
೧೫೬೭
ವೀರಶೈವನಾದುದು
೧೫೭೨
ಮತ್ತೆ ಜೈನನಾದುದು
೧೫೭೫
ರತ್ನಾಕರಶತಕದ ರಚನೆ
೧೫೭೭
ಅಪರಾಜಿತಶತಕದ ರಚನೆ
೧೫೮೨
ಅಧ್ಯಾತ್ಮಗೀತದ ರಚನೆ
೧೫೮೭
ಮರಣ
೧೬೦೦ರ ಮೇಲೆ
              ಭರತೇಶ ವೈಭವವು ನಡುಗನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿ. ಇದು ರತ್ನಾಕರವರ್ಣಿಯ ಮೇರು ಕೃತಿ. ಹಳೆಗನ್ನಡದ ಕವಿಗಳು ಛಂದಸ್ಸುಗಳಲ್ಲಿ ತೋಯ್ದ ಘನವಾದ ಕೃತಿಗಳನ್ನು ರಚಿಸುತ್ತಿದ್ದ ಕಾಲದಲ್ಲಿ ರತ್ನಾಕರವರ್ಣಿಯು ಸಾಂಗತ್ಯರೂಪದಲ್ಲಿ ಭರತೇಶ ವೈಭವವನ್ನು ರಚಿಸಿ ಕನ್ನಡ ಕಾವ್ಯದ ಹೊಸ ಶಕೆಯೊಂದಕ್ಕೆ ನಾಂದಿ ಹಾಡುತ್ತಾನೆ.
(ಮಾಹಿತಿ ಕೃಪೆ: ವಿಕಿಪೀಡಿಯಾ)
 ************************

ಸರ್ವಜ್ಞ

ಸರ್ವಜ್ಞ

ಸರ್ವಜ್ಞ  (ಚಿತ್ರ ಕೃಪೆ: ಗೂಗಲ್ ಚಿತ್ರಗಳು)

(ಸರ್ವಜ್ಞ ಎಂದರೆ ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎಂದರ್ಥ). ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿರುವ ಈತನ ಕಾಲದ ಕುರಿತು ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರಾಗಿ ೧೭ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪ್ರಾಯಶಃ ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ.

ಜನನ ಮತ್ತು ಬಾಲ್ಯ

ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ಅಬಲೂರ. ಇದು ಈಗ ಸರ್ವಜ್ಞನ ಅಬಲೂರ ಎಂದೇ ಪ್ರಸಿದ್ಧಿ ಪಡೆದಿದೆ.

ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸನು, ಎಷ್ಟು ದಿನಗಳಾದರೂ ಮಕ್ಕಳಾಗ ದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ.

ಭಕ್ತಿಯಿಂದ ಸೇವೆ ಮಾಡಿದ ಬಸವರಸನಿಗೆ ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ, 'ನಿನಗೆ ಪುತ್ರಪ್ರಾಪ್ತಿಯಾಗುವುದು. ಹುಟ್ಟುವ ಮಗನು ನನ್ನ ಪ್ರಸಾದದಿಂದ ಮಹಾಜ್ಞಾನಿಯಾಗುವನು' ಎಂದು ಹೇಳಲು ಆನಂದಭರಿತನಾದ ಬಸವರಸನು, ಪ್ರಾತಃಕಾಲದಲ್ಲಿ ಎದ್ದು, ಪವಿತ್ರ ಗಂಗಾಸ್ನಾನ ಮಾಡಿ, ವಿಶ್ವನಾಥನನ್ನು ಅರ್ಚಿಸಿ, ಪ್ರಸಾದಗಳೊಂದಿಗೆ ತನ್ನ ಗ್ರಾಮದ ಹಾದಿ ಹಿಡಿದನು.

ಹಗಲಿರುಳು ಪ್ರಯಾಣ ಮಾಡಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ, ದಾರಿಯಲ್ಲಿ ಸಿಕ್ಕ 'ಅಂಬಲೂರ ಎಂಬ ಗ್ರಾಮಕ್ಕೆ ಬರುವಾಗ ಭಯಂಕರ ಗುಡುಗು, ಸಿಡಿಲುಗಳಿಂದ ಮಳೆ ಸುರಿಯುತ್ತಿತ್ತು. ಸಮೀಪದಲ್ಲಿದ್ದ ಕುಂಬಾರಸಾಲೆಯಲ್ಲಿ ಕುಂಬಾರ ಮಾಳಿ ಎಂಬುವಳ ಮನೆಯಲ್ಲಿ ವಸತಿ ಮಾಡಿದನು. ಕಾಲಧರ್ಮ ಸಂಯೋಗದಿಂದ ಮಾಳಿಯಲ್ಲಿ ವ್ಯಾಮೋಹಗೊಂಡ ಬಸವರಸನಿಗೆ ಕಾಮ ವಿಕಾರವಾಯಿತು.

ಕಾಶಿಯಿಂದ ತಂದ ತೀರ್ಥ ಪ್ರಸಾದಗಳನ್ನು ಕೊಟ್ಟು ಅವಳ ಸಂಗ ಮಾಡಿದನು. ೯ ತಿಂಗಳ ನಂತರ ಮಾಳಿ ದಿವ್ಯ ತೇಜಸ್ಸಿನ ಗಂಡು ಕೂಸಿಗೆ ಜನ್ಮವಿತ್ತಳು. 'ಪುಷ್ಪದತ್ತ'ನೆಂದು ನಾಮಕರಣವೂ ಆಯಿತು. ಮುಂದೆ ಈ ಮಗುವೇ ಜಗತ್ತಿಗೆ ಸರ್ವಜ್ಞನೆಂದು ಪ್ರಸಿದ್ಧಿಯಾದನು. ಬಾಲ್ಯದಲ್ಲಿಯೆ ಅಗಾಧವಾದ ಪಾಂಡಿತ್ಯವನ್ನು ಶಿವನ ವರಪ್ರಸಾದದಿಂದ ಪಡೆದಿದ್ದನು.

ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ ಜನಪ್ರಿಯ ವಚನಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿವೆ. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವನು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು ೭,೦೭೦ ವಚನಗಳು ಲಭ್ಯವಾಗಿದೆಯೆಂದು ತಜ್ಞರ ಅಭಿಪ್ರಾಯ.

ಸರ್ವಜ್ಞ - ತನ್ನ ಬಗೆಗೆ ಹೇಳಿರುವ ತ್ರಿಪದಿಗಳು

೧. ಮುನ್ನ ಪೂರ್ವದಲಾನು ಪನ್ನಗಧರನಾಳು

 ಎನ್ನಯ ಪೆಸರು ಪುಷ್ಪದತ್ತನು-ಎಂದು

ಮನ್ನಿಪರು ನೋಡ ಸರ್ವಜ್ಞ

 

೨. ಅಂದಿನಾ ಪುಷ್ಪದತ್ತ ಬಂದ ವರರುಚಿಯಾಗಿ

ಮುಂ ದೇವಸಾಲೆ ಸರ್ವಜ್ಞ – ನೆಂದೆನಿಸಿ

ನಿಂದವನು ತಾನೇ ಸರ್ವಜ್ಞ

 

೩. ಮಕ್ಕಳಿಲ್ಲವು ಎಂದು  ಅಕ್ಕಮಲ್ಲಮ್ಮನು

ದುಕ್ಕದಿ ಬಸವ ಗರಿಪಲ್ಲವ - ಕಾಶಿಯ

ಮುಕ್ಕಣ್ಣಗೆ ಹೋದ ಸರ್ವಜ್ಞ

 

೪. ಮಾಸನೂರ ಬಸವರಸ ಕೊಸನಿಶನ ಕೇಳಲು

ಕಾಶಿಯೀಶನೊಳು ಪಡೆದ ವರ - ವಧು ನಡುವೆ

ಸೂಸಿತೆಂತಲು ಸರ್ವಜ್ಞ

 

೫. ಗಂಡಾಗಬೇಕೆಂದು ಪಿ0ಡವ ನುಂಗಲು

ಲಂಡೆ ಮಾಳ್ವೆಯೊಳು ಜನಿಸಿ - ಲೋಕದೊಳು

ಕಂಡುದನೆ ಪೇಳ್ವೆ ಸರ್ವಜ್ಞ

 

೬. ಗಡಿಗೆ-ಮಡಕೆಯ ಕೊಂಡು ಅಡುವಡಾವಿಗೆಯೊಳಗೆ

ಬಿಡದೆ ಮಳೆಮೋಡ ಹಿಡಿಯಲವ - ರಿಬ್ಬರಿಗು

ತಡೆ ಬಿಡಲಾಯ್ತು ಸರ್ವಜ್ಞ

 

೭. ಅಂಬಲೂರೊಳಗೆಸೆವ ಕುಂಬಾರಸಾಲೆಯಲಿ

ಇಂದಿನ ಕಳೆಯ ಮಾಳಿಯೊಳು - ಬಸವರಸ

ನಿಂಬಿಟ್ಟನೆನ್ನ ಸರ್ವಜ್ಞ

 

೮. ಬಿಂದುವ ಬಿಟ್ಟು ಹೋದಂದು ಬಸುರಾದಳವ

ಳಂದದಿಯಷ್ಟಾದಶ ಮಾಸ - ಉದರದಲಿ

ನಿಂದು ನಾ ಬೆಳೆದೆ ಸರ್ವಜ್ಞ

 

೯. ಹೆತ್ತವಳು ಮಾಳಿ ಎನ್ನನೊತ್ತಿ ತೆಗೆದವಳು ಕೇಶಿ

ಕತ್ತು ಬೆನ್ನ ಹಿಡಿದವಳು ಕಾಳಿ - ಮೊರಿದೊಳೆನ್ನ

ಬತ್ತಲಿರಿಸಿದಳು ಸರ್ವಜ್ಞ

 

೧೦. ಬೆಳೆದೆನವರಿಂದೆನ್ನ ಕಳೆಯ ಕಂಡವರೆಲ್ಲ

ಮೊಳೆಯಲ್ಲಿ ಸಸಿಯನರಿವಂತೆ - ಮಾಳಿಯ

ತಿಳಿದವರರೆಗು ಸರ್ವಜ್ಞ

 

೧೧. ಗಂಡ ತನ್ನಯದೆಂಬ ಲಂಡೆ ತನ್ನಯದೆಂಬ

ಖಂಡಪರಶುವಿನ ವರಪುತ್ರ - ನಾನು ನೆರೆ

ಕಂಡುದನೆ ಪೇಳ್ವೆ ಸರ್ವಜ್ಞ

 

೧೨. ಮಾಳನು ಮಾಳಿಯು ಕೊಳ್ ತಿಂದ ಹೆಮ್ಮೆಯಲಿ

ಕೇಳೆ ನೀನಾರ ಮಗನೆಂದು - ನಾ ಶಿವನ

ಮೇಳದಣುಗೆಂಬೆ ಸರ್ವಜ್ಞ

 

 

ತ್ರಿಪದಿಗಳು

ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ.

 

ಸರ್ವಜ್ಞನ ತ್ರಿಪದಿಗಳ ಕೆಲವು ಉದಾಹರಣೆಗಳು:

 

ಮಾಸೂರ ಬಸವರಸ । ಕೂಸನೀಶನ ಕೇಳೆ।

ಕಾಶಿಯ ಅಭವನೊಳು । ಪಡೆದ ವರವದುವೇ ।

ಸೂಸಿತೆಂತೆನಲು ಸರ್ವಜ್ಞ ॥

 

ಸರ್ವಜ್ಞನೆಂಬುವನು ಗರ್ವದಿಂದಾದವನೇ?

ಸರ್ವರೊಳು ಒಂದೊಂದು ನುಡಿಗಲಿತು

ವಿದ್ಯೆಯ ಪರ್ವತವೆ ಆದ ಸರ್ವಜ್ಞ.

 

ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು

ಗೋರ್ಕಲ್ಲಮೇಲೆ ಮಳೆಗರೆದರೆ

ಆಕಲ್ಲು ನೀರುಕುಡಿವುದೆ ಸರ್ವಜ್ಞ?

 

ಸಾಲವನು ಕೊಂಬಾಗ ಹಾಲೋಗರುಂಡಂತೆ

ಸಾಲಿಗರು ಕೊಂಡು ಎಳೆವಾಗ

ಕಿಬ್ಬಡಿಯ ಕೀಲು ಮುರಿದಂತೆ ಸರ್ವಜ್ಞ.

 

ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ

ಏಳು ಸಾವಿರದ ಎಪ್ಪತ್ತು ವಚನಗಳ

ಹೇಳಿದನು ಕೇಳ ಸರ್ವಜ್ಞ."

 

ಬೆಚ್ಚನೆಯ ಮನೆಯಾಗೆ ವೆಚ್ಚಕ್ಕೆ ಹೊನ್ನಾಗೆ

ಇಚ್ಛೆಯನರಿವ ಸತಿಯಾಗೆ ಸ್ವರ್ಗಕ್ಕೆ

ಕಿಚ್ಚು ಹಚ್ಚೆಂದ ಸರ್ವಜ್ಞ

*****ಮಾಹಿತಿ ಕೃಪೆ: ವಿಕಿಪೀಡಿಯಾ*****

ಸಾಳ್ವ ಕವಿ

ಸಾಳ್ವ ಕವಿ 

ಈತ ೧೬ನೆಯ ಶತಮಾನದ ಜೈನಕವಿ. ಸಾಳ್ವಭಾರತ, ರಸರತ್ನಾಕರ, ಶಾರದಾವಿಲಾಸ, ವೈದ್ಯಸಾಂಗತ್ಯ ಎಂಬ ಗ್ರಂಥಗಳ ಕರ್ತೃ. ಈತನ ತಂದೆ ಧರ್ಮಚಂದ್ರ. ಗುರು ದೇಶೀಗಣದ ಶ್ರುತಕೀರ್ತಿ. ವಿಜಯನಗರದ ಅರಸರ ಮಹಾಮಾಂಡಲಿಕರಾಗಿ ನಗಿರೆ ರಾಜ್ಯದಲ್ಲಿ ಆಳುತ್ತಿದ್ದವರ ಪೀಳಿಗೆಯಲ್ಲಿ ಸಾಳ್ವಮಲ್ಲ ಸು.೧೫೫೦ರಲ್ಲಿ ಆಧಿಪತ್ಯ ನಡೆಸುತ್ತಿದ್ದನೆಂದು ಕೆಲವು ಶಾಸನಗಳಿಂದ ತಿಳಿಯುತ್ತದೆ. ಕನ್ನಡ ಭಾಷೆಗೆ ವಿಶೇಷವಾಗಿ ಪ್ರೋತ್ಸಾಹ ನೀಡಿದ್ದ ಈತ ಕವಿಸರೋವರರಾಜಹಂಸ ಎಂಬ ಬಿರುದನ್ನೂ ಪಡೆದಿದ್ದ. ಸಾಳ್ವ ಈತನ ಆಸ್ಥಾನದಲ್ಲಿ ಕವಿಯಾಗಿದ್ದ. ಸಂಸ್ಕಂತ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣತನಾಗಿದ್ದ. ಭಾರತ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದೆ. ಇದರಲ್ಲಿ ಸು. ೮೦೦೦ಪದ್ಯಗಳೂ ೧೬ ಆಶ್ವಾಸಗಳೂ ಇವೆ. ಇದು ಜೈನ ಸಂಪ್ರದಾಯಕ್ಕೆ ಅನುಸಾರವಾಗಿ ರಚಿತವಾಗಿದೆ. ನೇಮೀಶ್ವರಚರಿತ್ರೆ ಎಂಬುದು ಇದಕ್ಕಿರುವ ಮತ್ತೊಂದು ಹೆಸರು. ಇದೊಂದು ಪಾಡುಗವಿತೆ ಎಂದು ಕವಿಯೇ ಹೇಳಿಕೊಂಡಿದ್ದಾನೆ. ಕವಿಯ ಪ್ರತಿಭೆ, ಪ್ರೌಢಿಮೆ, ಕಾವ್ಯರಚನಾ ಸಾಮಥ್ರ್ಯವನ್ನು ಸಮರ್ಥಿಸುವ ಅನೇಕ ಸಂದರ್ಭಗಳು ಈ ಕಾವ್ಯದಲ್ಲಿವೆ.

ರಸರತ್ನಾಕರ ರಸ ವಿವೇಚನೆಯನ್ನು ಸಮಗ್ರವಾಗಿ ಒಳಗೊಂಡಿರುವ ಕನ್ನಡದ ಮೊತ್ತ ಮೊದಲ ಲಕ್ಷಣಗ್ರಂಥ. ಇದರಲ್ಲಿ ಒಟ್ಟು ನಾಲ್ಕು ಪ್ರಕರಣಗಳಿವೆ. ಮೊದಲನೆಯ ಪ್ರಕರಣದಲ್ಲಿ ಶೃಂಗಾರ ರಸ ವಿಚಾರ, ಎರಡನೆಯ ಪ್ರಕರಣದಲ್ಲಿ ಉಳಿದ ಎಂಟು ರಸಗಳ ವಿಚಾರ, ಮೂರನೆಯ ಪ್ರಕರಣದಲ್ಲಿ ನಾಯಕ-ನಾಯಿಕಾ ವಿಚಾರ ಮತ್ತು ನಾಲ್ಕನೆಯ ಪ್ರಕರಣದಲ್ಲಿ ವ್ಯಭಿಚಾರೀಭಾವ ಮತ್ತು ಸಾತ್ವಿಕ ಭಾವಗಳ ವಿಚಾರವೆ ವರ್ಣಿತವಾಗಿವೆ. ಸಂಸ್ಕøತದ ಅಲಂಕಾರಿಕರಾದ ಅಮೃತಾನಂದಿ, ರುದ್ರಭಟ್ಟ ವಿದ್ಯಾನಾಥ ಇವರ ಮಾರ್ಗವನ್ನು ಅಲ್ಲಲ್ಲೆ ಅನುಸರಿಸಿದ್ದರೂ ಹೇಮಚಂದ್ರನ ಮತವನ್ನೇ ವಿಶೇಷವಾಗಿ ಈ ಕೃತಿಯಲ್ಲಿ ಅನುಸರಿಸಿರು ವುದು ಕಾಣಬರುತ್ತದೆ. ಲಕ್ಷ್ಯಪದ್ಯಗಳಲ್ಲಿ ಹಲವನ್ನು ಕವಿ ಕಾಮನ ಶೃಂಗಾರ ರತ್ನಾಕರ, ನಾಗವರ್ಮನ ಕಾವ್ಯಾವಲೋಕನ, ಪಂಪ, ಪೊನ್ನ, ರನ್ನ, ಜನ್ನ, ರುದ್ರಭಟ್ಟ, ಅಗ್ಗಳ ಇವರ ಗ್ರಂಥಗಳಿಂದಲೂ ಆರಿಸಿಕೊಂಡಿದ್ದಾನೆ. ಇದಲ್ಲದೆ ಉದಯಾದಿತ್ಯ, ಗಣೇಶ್ವರಾಗ್ನಿ ಎಂಬಿಬ್ಬರ ಮತವನ್ನೂ ವಿರುದ್ಧ ರಸ ಪ್ರತಿಪಾದನ ಸಂದರ್ಭದಲ್ಲಿ ಸಂಗ್ರಹಿಸಿದ್ದಾನೆ.

ಶಾರದಾವಿಲಾಸ ಕೃತಿ ಕನ್ನಡದಲ್ಲಿ ಧ್ವನಿ ವಿಚಾರವನ್ನು ಕಂದ, ವೃತ್ತಗಳಲ್ಲಿ ಹೇಳಿರುವ ಮೊದಲ ಗ್ರಂಥ. ಸಂಪೂರ್ಣ ಗ್ರಂಥ ಉಪಲಬ್ಧ ವಿಲ್ಲ. ದೊರೆತಿರುವ ಎರಡನೆಯ ಆಶ್ವಾಸದಲ್ಲಿ ವ್ಯಂಗ್ಯ ವಿಷಯ ವರ್ಣಿತವಾಗಿದೆ.

ವೈದ್ಯಸಾಂಗತ್ಯ ಒಂದು ವೈದ್ಯಗ್ರಂಥ. ಇದು ಸಾಂಗತ್ಯದಲ್ಲಿ ರಚಿತವಾಗಿದೆ. ಪೂರ್ಣಗ್ರಂಥ ದೊರೆತಿಲ್ಲ.

(ಎಸ್.ಎನ್.ಕೆ.)

*******ಮಾಹಿತಿ ಕೃಪೆ: ಮೈಸೂರು ವಿ.ವಿ. ವಿಶ್ವಕೋಶ*******