ನನ್ನ ಪುಟಗಳು

ಜನಪ್ರಿಯ ಒಗಟುಗಳು


ಒಗಟುಗಳು
           ಜನಪದ ಸಾಹಿತ್ಯದಲ್ಲಿ ಒಂದು ಮುಖ್ಯವಾದ ಪ್ರಕಾರ (ರಿಡ್ಲ್‌). ಕನ್ನಡದಲ್ಲಿ ಒಡಪು, ಮುಂಡಿಗೆ ಎಂಬ ಬೇರೆ ಹೆಸರಗಳೂ ಉಂಟು. ಒಗಟು ಎಂದರೆ ಒಬ್ಬರು ಮತ್ತೊಬ್ಬರಿಗೆ ಒಡ್ಡಿದ ಸವಾಲು, ಸಮಸ್ಯೆ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೂಲಕ ಚಮತ್ಕಾರವಾಗಿ ವರ್ಣಿಸಿ ಆ ಅವ್ಯಕ್ತ ವಸ್ತುವನ್ನು ಕಂಡುಹಿಡಿಯುವಂತೆ ಹೇಳುವುದು ಇದರ ಕ್ರಮ. ಒಗಟಿನಲ್ಲಿ ಎರಡು ಸದೃಶವಸ್ತುಗಳಿರಬೇಕು ಒಂದು ಉಪಮಾನ, ಮತ್ತೊಂದು ಉಪಮೇಯ. ಇಲ್ಲಿ ಉಪಮಾನ ವಾಚ್ಯವಾಗಿರುತ್ತದೆ; ಉಪಮೇಯ ಅಸ್ಪಷ್ಟವಾಗಿ ರಹಸ್ಯವಾಗಿರುತ್ತದೆ. ಅದನ್ನು ಒಗಟೆಯ ಕರ್ತೃ ಬಹಳ ಜಾಣ್ಮೆಯಿಂದ ಬಚ್ಚಿಟ್ಟಿರುತ್ತಾನೆ. ಉಪಮಾನದ ಆಧಾರದಿಂದ ಉಪಮೇಯವನ್ನು ಪತ್ತೆಮಾಡಬೇಕಾಗುತ್ತದೆ. ಇದು ಬುದ್ಧಿಶಕ್ತಿಯ ಪರೀಕ್ಷೆಗೊಂದು ಒಳ್ಳೆಯ ಒರೆಗಲ್ಲು.

೧. ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ- ಕಣ್ಣು
೨. ಕಾಸಿನ ಕುದುರೆಗೆ ಬಾಲದ ಲಗಾಮು- ಸೂಜಿ ದಾರ
೩. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ- ಗಿಳಿ
೪. ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು?- ಮೂಗು, ಬಾಯಿ
೫. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?- ಮೊಟ್ಟೆ
೬. ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು?- ಕೋಳಿ
೭. ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?- ರೈಲು
೮. ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ- ಗಡಿಯಾರ
೯. ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ ನಿಮ್ಮ ದೇವರಾಣಿ- ಕಲ್ಲಂಗಡಿ ಹಣ್ಣು
೧೦. ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ-ತೆಂಗು
೧೨. ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ-ನೀರು
೧೩.ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ.-ದಾರಿ
೧೪. ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ ತಂತು.-ಯುಗಾದಿ
೧೫. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ .-ಬದನೆಕಾಯಿ.
೧೬. ಸಾಗರ ಪುತ್ರ ,ಸಾರಿನ ಮಿತ್ರ.-ಉಪ್ಪು
೧೭. ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ.-ಅಕ್ಕಿ
೧೮. ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು.-ನವಿಲು.
೧೯. ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.-ನದಿ
೨೦. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ ಮರಿಗಳು.- ಕೋಳಿ
೨೧. ಮೋಟು ಗೋಡೆ ಮೇಲೆ, ದೀಪ ಉರೀತಿದೆ.- ಮೂಗುಬೊಟ್ಟು
೨೨. ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ.-ನೆರಳು
೨೩. ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ-ಗಾಣ
೨೪. ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು ನೂರಾಗಿ-ಶ್ಯಾವಿಗೆ
೨೫. ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು ಸಿಕ್ಕಿತು-ತೆಂಗಿನಕಾಯಿ
೨೬. ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ ಕುಯ್ಯೋ, ಮರ್ರೋ ಅಂತವಳೇ-ತಂಬೂರಿ
೨೭. ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ-ಕಪ್ಪೆ
೨೮. ಕೈಲಿದ್ದಾಗ ಗುದಿಸಾಡುತ್ತೇನೆ, ಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ-ಕಸಪೊರಕೆ
೨೯. ಗಿಡ ಕೊಡಲಾರದು, ಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು-ಉಪ್ಪು
೩೦. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?-ನಕ್ಷೆ
೩೧. ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು ಗೊತ್ತಾಗುತ್ತದೆ.- ಅನ್ನದ ಅಗುಳು.
೩೨. ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ.-ಸಾಬೂನು.
೩೩. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು.-ಬದನೆಕಾಯಿ.
೩೪. ನಾನು ತುಳಿದೆ ಅದನ್ನ, ಅದು ತುಳಿಯೆತು ನನ್ನನ್ನ.-ನೀರು
೩೫. ಕೊಳದ ಒಳಗೆ ಒಂದು ಮರ ಹುಟ್ಟಿ ,ಬೇರು ಇಲ್ಲ ,ನೀರು ಇಲ್ಲ.-ಎಣ್ಣೆ ದೀಪ.
೩೬. ಬಡ ಬಡ ಬಂದ ಅಂಗಿ ಕಳಚಿದ ,ಬಾವಿಯೊಳಗೆ ಬಿದ್ದ.-ಬಾಳೆ ಹಣ್ಣು.
೩೭. ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು.-ಕನ್ನಡಿ
೩೮. ಅಕ್ಕ ಪಕ್ಕ ಚದುರಂಗ ,ಅದರ ಹೂವು ಪದುರಂಗ ಅದರ ಹೆಸರು ಅಯ್ಯಯ್ಯಪ್ಪ .ಇದು ಏನು?-ದತ್ತುರಿಯ ಮುಳ್ಳು.
೩೯. ವನದಲ್ಲಿ ಹುಟ್ಟಿ ,ವನದಲ್ಲಿ ಬೆಳೆದು ,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು.-ಕಮಲ.
೪೦. ಕಲ್ಲು ಕೋಳಿ ಕುಗುತ್ತದೆ, ಮುಲ್ಲ ಚೂರಿ ಹಾಕುತ್ತಾನೆ.-ಗಿರಣಿ
೪೧. ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿ ಹಾಕಿದರೆ ಸಾಯುತ್ತೆ.-ದುಡ್ಡು.
೪೨. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ, ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.-ಸಗಣಿ.
೪೩. ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ ದಾಗಿನ ಅಲ್ಲ.- ಗರಗಸ.
೪೪. ಕಡ್ಲೆ ಕಾಳಷ್ಟು ಹಿಂಡಿ೩೨ ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ.-ಹಲ್ಲುಪುಡಿ.
೪೫. ಕರಿ ಗುಡ್ಡ-ಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ.-ಗಡಿಗೆಮಜ್ಜಿಗೆ.
೪೬. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ .-ರೊಟ್ಟಿ, ದೋಸೆ
೪೭. ಕೆಂದ ಕುದುರೆ ,ಬಿಳಿ ತಡಿ, ಕರೆ ಲಗಾಮು, ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ-ಬೆಂಕಿ, ಸುಣ್ಣ ಹಚ್ಚಿದ ಹಂಚು, ಹೊಗೆ, ರೊಟ್ಟಿ
೪೮. ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು ಓಡ್ಯಾಡುತಾರೆ.-ಕಣ್ಣು.
೪೯. ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ.-ಬೆಣ್ಣೆ ಉಂಡೆ.
೫೦.ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.-ಅಂಗಿ.
೫೧. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-ಮಲ್ಲಿಗೆ
೫೨. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ-ಆಕಾಶ, ನಕ್ಷತ್ರ
೫೩. ಸುಟ್ಟ ಹೆಣ ಮತ್ತೆ ಸುಡ್ತಾರೆ-ಇದ್ದಿಲು
೫೪. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ- ಬಾಳೆ ಹಣ್ಣು
೫೫. ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ- ಬಳೆ
೫೬. ಒಂದು ಹಪ್ಪಳ ಊರಿಗೆಲ್ಲ ಊಟ- ಚಂದ್ರ
೫೭. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ- ಹುಣಸೇಹಣ್ಣು
೫೮. ನೀಲಿ ಕೆರೆಯಲಿ ಬಿಳಿ ಮೀನು-ನಕ್ಷತ್ರ
೫೯. ಒಂದು ತೇಲುತ್ತೆ ,ಒಂದು ಮುಳುಗುತ್ತೆ, ಒಂದು ಕರಗುತ್ತೆ.-ವಾರ,ತಿಂಗಳು,ವರ್ಷ
೬೦. ಬಾ ಅಂದರೆ ಬರೋಲ್ಲ , ಹೋಗು ಅಂದರೆ ಹೋಗೋಲ್ಲ-ಮಳೆ
೬೧. ನಾ ಇರುವಾಗ ಬರುತ್ತೆ , ನಾ ಹೋದ ಮೇಲೂ ಇರುತ್ತೆ-ಕೀರ್ತಿ
೬೨. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ-ಕಣ್ಣು
೬೩ ಅಕ್ಕನ ಮೇಲೆ ಛತ್ರಿ- ರೆಪ್ಪೆ
೬೪. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು-ತೆಂಗಿನ ಕಾಯಿ
೬೫. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ-ಕಣ್ಣು
೬೬.ಅಮ್ಮನ ಆಕಾಶವಾಣಿ ನಾನು-ಮಗು
೬೭. ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು-ಈರುಳ್ಳಿ
೬೮. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ- ಬಾಳೆಹಣ್ಣು
೬೯. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ-ಕಣ್ಣು
೭೦. ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ-ತೆಂಗಿನ ಕಾಯಿ
೭೧. ನೀನಿಲ್ಲದೆ ಊಟವಿಲ್ಲ- ಉಪ್ಪು
೭೨. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ
೭೩. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ - ಸೂಜಿ
೭೪. ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ-ಹೇನು ಕೂದಲು
೭೫. ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ-ಬೆಂಕಿ,ಬಾಣಲೆ, ದೋಸೆ
೭೬ . ಒಂದು ಮನೆಗೆ ಒಂದೇ ತೊಲೆ-ತಲೆ
೭೭. ಕಂದ ಬಂದ ಕೊಂದ ತಂದ-ಶ್ರೀ ರಾಮ ಚಂದ್ರ
೭೮. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ-ಭೂಪಟ
೭೯. ಚಿಕ್ಕಕ್ಕನಿಗೆ ಪುಕ್ಕುದ್ದ-ಸೌಟು
೮೦. ಎರಡು ಮನೆಗೆ ಒಂದೇ ದೂಲ-ಮೂಗು
೮೧. ನೀರಿರೋತಾವ ನಿಲ್ಲಲೇ ಕೋಣ-ಚಪ್ಪಲಿ
೮೨. ಹೋದ ನೆಂಟ, ಬಂದ ದಾರಿ ಗೊತ್ತಿಲ್ಲ-ನೆರಳು
೮೩. ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ-ಮನುಷ್ಯನ ಹುಟ್ಟು ಮಗು
೮೪. ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ, ಮಲ್ಲಿಕಾರ್ಜುನನ ಗುಡಿಗೆ ಬೆಳಕಾಗಿ, ಬಲ್ಲವರು ಹೇಳಿ -ಸುಣ್ಣ
೮೫. ಚಿಣಿಮಿನಿ ಎನ್ನುವ ಕೆರೆ, ಚಿಂತಾಮಣಿ ಎನ್ನುವ ಹಕ್ಕಿ, ಕೆರೆ ಬತ್ತಿದರೆ ಹಕ್ಕಿಗೆ ಮರಣ -ದೀಪ
೮೬. ಹೋಗುತ್ತಾ, ಬರುತ್ತಾ ಇರುವುದು ಎರಡು,ಹೋದ ಮೇಲೆ ಬರಲಾರವು ಎರಡು-ಸಿರಿತನ-ಬಡತನ, ಪ್ರಾಣ -ಬಡತನ
೮೭. ಒಂದು ಹಸ್ತಕ್ಕೆ ನೂರೆಂಟು ಬೆರಳು-ಬಾಳೆಗೊನೆ
೮೮. ಎಲ್ಲರ ಮನೆ ಅಜ್ಜಿಗೆ ಮೈಯೆಲ್ಲಾ ಕಜ್ಜಿ -ಜರಡಿ
೮೯. ಎಂದರೆ ತೆರಿತಾವ, ಅಪ್ಪ ಎಂದರೆ ಮುಚ್ಚುತಾವ-ಬಾಯಿ
೯೦. ದಾಸ್ ಬುರುಡೆ ದೌಲಥ ಬುರುಡೆ, ಲೋಕಕ್ಕೆಲ್ಲ ಎರಡೇ ಬುರುಡೆ-ಸೂರ್ಯ , ಚಂದ್ರ
೯೧. ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ ವ್ಯಾಪಾರಕ್ಕೆ ಮಗಳು ಮದುವೆಗೆ -ಅಡಿಕೆ ಮರ
೯೨.ಹಾರಾಡುತ್ತಿದೆ ಗಾಳಿಪತವಲ್ಲ , ಬಣ್ಣ ಮೂರಿರುವುದು ಕಾಮನಬಿಲ್ಲಲ್ಲ-ಧ್ವಜ
೯೩. ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ನಾನ್ಯಾರು?-ತಾರೆಗಳು
೯೪. ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು ,ಇದು ಏನು?-ಛತ್ರಿ
೯೫. ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ-ನೊಣ
೯೬. ಒಂಟಿಕಾಲಿನ ಕುಂಟ. ನಾನ್ಯಾರು?-ಬುಗರಿ
೯೭. ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ-ಇಲಿ
೯೮. ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು ಹಾಕಿದರೆ ಕೆಡುತ್ತೇ-ಕಳ್ಳಿ
೯೯. ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು-ಶ್ರೀಗಂಧ
೧೦೦. ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ ಕೋಟೆ ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು-ಪರಂಗಿ ಹಣ್ಣು
೧೦೧.ಒಂದು ಮನೆಯಲ್ಲಿ ಮೂರು ಜನ ಅಕ್ಕ-ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ- ಜಾದಳಕಾಯಿ
೧೦೨. ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ ಮುಕ್ಕ ನೀರಿಲ್ಲ-ಕಿವಿ
೧೦೩. ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ-ರೊಟ್ಟಿ
೧೦೪. ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಬಣ್ಣ-ಎಲೆ ಅದಿಕೆ
೧೦೫. ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ-ಬಾಳೆಲೆ
೧೦೬. ಎರಡು ಬಾವಿಗಳ ನಡುವೆಯೊಂದು ಸೇತುವೆ-ಮೂಗು
೧೦೭. ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು ಬೆರಳಿಲ್ಲ-ಕೋಟು ಅಂಗಿ
೧೦೮. ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ ಸಾವು -ವಿಷ
೧೦೯ . ಒಬ್ಬಳು ಮುಲುಗಿದಳು, ಒಬ್ಬಳು ಕರಗಿದಳು , ಒಬ್ಬಳು ತೇಲಿದಳು -ಅಡಿಕೆ , ಸುಣ್ಣ
೧೧೦.ಹೋಗೋದು ಮುಳುಗೋದು ತರೋದು ಏನು?-ಬಿಂದಿಗೆ
೧೧೧. ಕಿರೀಟ ಇದೆ ರಾಜ ಅಲ್ಲ, ಕಲ ತಿಳಿಸುತ್ತ್ತೆ ಗಡಿಯಾರವಲ್ಲ-ಕೋಳಿ
೧೧೨. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ-ವರ್ಷ
೧೧೩. ಗುಂಡಾಕಾರ ಮೈಯೆಲ್ಲಾ ತೂತು-ದೋಸೆ
೧೧೪.ಬಂಗಾರದ ಗುಬ್ಬಿ ಬಾಲದಲ್ಲೇ ನೀರನ್ನು ಕುಡಿಯುತ್ತೆ-ಚಿಮಿಣಿ
೧೧೫. ಒಂದು ಮರ , ಮರದಾಗ ಅಲ್ಲ, ಅಲ್ಲಿನಾಗ ಕೊಬ್ರಿ ಗುಂಡ-ಆಕಾಶ ನಕ್ಷತ್ರ ಚಂದ್ರ
೧೧೬. ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು-ಏಲಕ್ಕಿ
೧೧೭. ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು-ತಾರೆ
೧೧೮. ಲಟಪಟ ಲೇಡಿಗೆ ಒಂದೇ ಕಣ್ಣು-ಸೂಜಿ
೧೧೯. ಹಸಿರು ಕೋಲಿಗೆ ಮುತ್ತಿನ ತುರಾಯಿ-ಜೋಳದ ತೆನೆ
೧೨೦. ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ-ನಾಲಿಗೆ
೧೨೧. ಸೂಜಿ ಸಣ್ಣಕಾಗೆ ಬಣ್ಣ -ಕೂದಲು
೧೨೨. ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು?-ನೆನಪು
೧೨೩. ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ-ನುಸಿ
೧೨೪. ಊರಿಗೆಲ್ಲ ಒಂದೇ ಕಂಬಳಿ-ಆಕಾಶ
೧೨೫. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ-ಕುಂಕುಮ
೧೨೬. ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ-ಬೈತಲೆ
೧೨೭. ಒಂದು ಬತ್ತಿ ಮನೆಯೆಲ್ಲ ಬೆಳಕು-ಸೂರ್ಯ
೧೨೮.ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ -ಗಾಳಿ
೧೨೯. ಕಣ್ಣಿಗೆ ಹತ್ತಿರ ಕಾಲಿಗೆ ದೂರ-ಬೆಟ್ಟ
೧೩೦. ಊಟಕ್ಕೆ ಮೊದಲು ನಾನು ಅಂತ ಬರುತ್ತೆ -ಬಾಳೆ ಎಲೆ , ತಟ್ಟೆ
೧೩೧. ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ-ಮಾವು
೧೩೨. ಹುಲಿಯ ಚಿಕ್ಕಮ್ಮ , ಇಲಿಯ ಮುಕ್ಕಮ್ಮ-ಬೆಕ್ಕು
೧೩೩. ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ-ಕಪ್ಪೆ
೧೩೪. ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು-ಸುಣ್ಣ
೧೩೫. ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ-ದೀಪ
೧೩೬. ಕಲ್ಲು ತುಳಿಯುತ್ತೆ, ಮುಳ್ಳು ಮೆಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ-ಚಪ್ಪಲಿ
೧೩೭. ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ ನುಡಿಯುವುದು, ಮೇಲು ಕೆಳಗಾಗಿ ಓದುವುದು-ನದಿ
೧೩೮. ಜಂಬು ನೇರಳೆ ಮರ, ಎಳೆದರೆ ನಾಲ್ಕು ಬಾವಿ ನೀರು ಒಂದೇ ಆಗುತ್ತದೆ-ಮೇಡು
೧೩೯. ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ ತೆರೆದರೆ ಮೂಗು ಮುಚ್ಚುತ್ತಿ-ಆಕಾಶ
೧೪೦. ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ, ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ-ಜೋಳದ ದಂಟು
೧೪೧. ಎತ್ತ ಹೋದರು ಕುತ್ತಿಗೆಗೆ ಕೈ ಹಾಕುತ್ತಾರೆ! ನಾನ್ಯಾರು?-ಸಾಲಿಗ್ರಾಮ
೧೪೨. ಕರಿ ಹುಡುಗನಿಗೆ ಬಿಳಿ ಟೋಪಿ -ಹೆಂಡದ ಮಡಿಕೆ
೧೪೩. ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು,ಇದನ್ನು ನೋಡಲು ಜನ ಕಾದಿಹರು-ನಾಣ್ಯ
೧೪೪. ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ.-ತಿಗಣೆ
೧೪೫. ಕುದುರೆ ಬಾಲದಿಂದ ನೀರು ಕುಡಿಯುತ್ತದೆ-ಹೇನು
೧೪೬. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು.-ಸೀತ ಫಲ
೧೪೭. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ.-ಕಣ್ಣು
೧೪೮. ಮನೆ ಮೇಲೆ ಮಲ್ಲಿಗೆ ಹೂವು.-ಮಂಜು
೧೪೯. ಹಾರಿದರೆ ಹನುಮಂತ ಕೂಗಿದರೆ ಶಂಖ.-ಕಪ್ಪೆ
೧೫೦. ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು.-ಸುಣ್ಣ
೧೫೧.ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ.-ಪೋಸ್ಟ್ ಕಾರ್ಡ್
೧೫೨. ಬಿಳಿ ಕುದುರೆಗೆ ಹಸಿರು ಬಾಲ.-ಮೂಲಂಗಿ
೧೫೩. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ.-ಕುಂಕುಮ
೧೫೪. ಬರೋದ ಕಂಡು ಕೈ ಒಡ್ತಾರೆ.-ಬಸ್
೧೫೫. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು-ಹುಂಜ
೧೫೬. ಹಸಿರು ಮುಖಕ್ಕೆ ವಿಪರೀತ ಕೋಪ , ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ?-ಮೆಣಸಿನಕಾಯಿ
೧೫೭. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು-ಬೆಳ್ಳುಳ್ಳಿ
೧೫೮. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ?ನಾನ್ಯಾರು ಹೇಳಿ?-ನಕ್ಷತ್ರ
೧೫೯.ಹಗ್ಗ ಹಾಸಿದೆ ಕೋಣ ಮಲಗಿದೆ-ಕುಂಬಳಕಾಯಿ, ಬಳ್ಳಿ
೧೬೦. ನನ್ನ ಕಂಡರೆ ಎಲ್ಲರು ಓದೀತಾರೆ -ಚೆಂಡು
೧೬೧. ಹಳ್ಳಿ ಗಡಿಯಾರ, ಒಳ್ಳೆ ಆಹಾರ-ಕೋಳಿ
೧೬೨. ನೀರು ಇರುತ್ತೆ ನದಿ ಅಲ್ಲ, ಬಾಗಿಲು ಇರುತ್ತೆ ಮನೆ ಅಲ್ಲ-ಕಣ್ಣು.
೧೬೩. ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದಿದ್ದೆ ನಾನು ಯಾರು-ಗಾಂಧೀಜಿ
೧೬೪. ಬಾಯಲ್ಲಿ ಹಲ್ಲಿಲ್ಲ, ಮಯಲ್ಲಿ ಶಕ್ತಿ ಇಲ್ಲ , ತಲೆಯಲ್ಲಿ ಕೂದಲಿಲ್ಲ , ಆದ್ರೂ ಎಲ್ರುನ್ನು ಕಾಡತಿನಿ ನಾನ್ಯಾರು.-ಸೊಳ್ಳೆ
೧೬೫. ಅಕ್ಷರಗಳಿದ್ದರೂ ಪುಸ್ತಕವಲ್ಲ,ಸಿಂಹವಿದ್ದರೂ ಅರಣ್ಯವಲ್ಲ,ದುಂಡಾಗಿದ್ದರೂ ಚಕ್ರವಲ್ಲ,ನಾನ್ಯಾರು.-ನಾಣ್ಯ
೧೬೬. ಗಂಟೆ ಹೊಡೆಯುತ್ತಾನೆ ಪೂಜಾರಿ ಅಲ್ಲ, PAPER ಅರಿಯುತ್ತಾನೆ ಆದರೆ ಹುಚ್ಚುನೂ ಅಲ್ಲ, ಹಣ ಕೇಳುತ್ತಾನೆ ಭಿಕ್ಷುಕ ಅಲ್ಲ -ಕಂಡಕ್ಟರ್
೧೬೯. ಹಿಡಿದರೆ ಹಿಡಿಯಷ್ಟು ಬಿಟ್ಟರೆ ಮನೆತುಂಬ-ದೀಪದ ಬೆಳಕು
೧೭೦. ಕಾಲಿಲ್ಲದೆ ನಡೆಯುವುದು ಬಾಯಿಲ್ಲದೆ ನುಡಿಯುವುದು ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು-ನದಿ
೧೭೧. ಚೋಟುದ್ದ ಹುಡುಗಿಗೆ ಮಾರುದ್ದ ಜಡೆ - ಸೂಜಿ ದಾರ
೧೭೨. ಊರುಂಟು ಜನರಿಲ್ಲ ನದಿಯುಂಟು ನೀರಿಲ್ಲ - ಭೂಪಟ.
೧೭೩. ಚಿಕ್ಕ ಬೋರನಿಗೆ ಬಾಲದಲ್ಲಿ ಕತ್ತಿ : ಹುರಳಿಕಾಯಿ
೧೭೪. ಬಿಳಿಯ ಹೊಲದಲ್ಲಿ ಕರಿ ಕಾಳು ಕೈಯಲ್ಲಿ ಬಿತ್ತುತ್ತಾರೆ ಬಾಯಲ್ಲಿ ಏತ್ತುತ್ತಾರೆ ನಾನು ಯಾರು : ಪುಸ್ತಕ ಮತ್ತು ಅಕ್ಷರಗಳು
೧೭೫. ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು? : ಭಾರತ
೧೭೬. ನಾಲ್ಕು ಕಂಬಗಳುಂಟು ದೇವಾಲಯವಲ್ಲ; ಎರಡು ಮೊರಗಳುಂಟು ಕೇರಲಾಗುವುದಿಲ್ಲ; ಒಂದು ಕಹಳೆಯುಂಟು ಊದಲಾಗುವುದಿಲ್ಲ; ಹಾಗಾದರೆ ನಾನು ಯಾರು? : ಆನೆ
೧೭೭. ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು? : ಭಾರತ
೧೭೮. ಕರಿ ಕಂಬ್ಳಿ ನೆಂಟ, ಸರೊತ್ತಿನಲ್ಲಿ ಹೊಂಟ, ಅವನ್ಯಾರು? : ಹೆಗ್ಗಣ
೧೭೯. ರಾಮನಂತ ಸಮುದ್ರ ರತ್ನದಂತ ಮೀನು ನೀರು ಬತ್ತಿಹೋದ್ರೆ ಮೀನು ಸತ್ತು ಹೋಗುತ್ತೆ : ದೀಪ / ಹಣತೆ
೧೮೦. ಕಲ್ಲರಳಿ ಹೂವಾಗಿ, ಎಲ್ಲರಿಗು ಬೇಕಾಗಿ,. ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ. ಬಲ್ಲವರು ಹೇಳಿ ಸರ್ವಜ್ಞ”-ಸುಣ್ಣದ ಕಲ್ಲು!

**************

193 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. ಕಬ್ಬಿಣದ ಬಾವಿಯಲ್ಲಿನ ಮುಚ್ಚಳ ಡಬಡಬ ಎಂದರೆ ಒಬ್ಬರಿಗೂ ಕೇಳಿಸಲ್ಲ ಅದು ಏನು

      ಅಳಿಸಿ
    2. ಈ ಒಗಟು ಬಿಡಿಸಿ!

      ಹೆಸರಿಲ್ಲದ ಊರಗೌಡನ ಹೆಂಡತಿ, ತಳವಿಲ್ಲದ ಮಡಿಕೆ ತಗೊಂಡು, ನೀರಿಲ್ಲದ ಕೆರೆಗೆ ಹೋಗುತ್ತಾಳೆ. ಅಲ್ಲಿ ತಲೆ ಇಲ್ಲದ ಹುಲ್ಲೆಕರು, ಬೇರಿಲ್ಲದ ಗರಿಕೆ ಮೇಯುತ್ತಿರುತ್ತದೆ. ಇದನ್ನು ಕಣ್ಣಿಲ್ಲದವನು ನೋಡಿ, ಕಿವಿಯಿಲ್ಲದವನು ಕೇಳಿ, ಕೈ‌ಯಿಲ್ಲದವನು ಹೊಡೆದು, ತಲೆ ಇಲ್ಲದವನು ಹೊತ್ತೊಯ್ದು, ಭೂಮಿ ಇಲ್ಲದೆಡೆ ಹೂತುಹಾಕ್ತಾರೆ.

      ಏನಿದು?

      ಅಳಿಸಿ
    3. ಅಕ್ಕನ ಗಂಡ ಬಹಳ ಚಂದ ನೋಡಲು ಕಪ್ಪು ಈಡಿ ರಾಜ್ಯ ಆಳುತಾನ ನಿರು ನೋಡಿದರೆ ಅಂಜುತಾನ

      ಅಳಿಸಿ
    4. ಮುಳ್ಳಿನ ಗಿಡದಲ್ಲಿ ಬಂಗಾರದ ಮೊಟ್ಟೆ

      ಅಳಿಸಿ
  2. ಮರದ ಮೇಲೆ ಕುಳಿತಿರುವೆ ಹಕ್ಕಿಯಲ್ಲ ಹಸಿರು ಅಂಗಿ ತೊಟ್ಟಿರುವೆ ಬಾಲಕನಲ್ಲ ಕೆಂಪು ಮೂತಿ ಇದೆ ಗಿಳಿಯಲ್ಲ
    ಉತ್ತರ ತಿಳಿಸಿ

    ಪ್ರತ್ಯುತ್ತರಅಳಿಸಿ
  3. ನೀರು ಇರುತ್ತೆ ನದಿ ಅಲ್ಲ, ಬಾಗಿಲು ಇರುತ್ತೆ ಮನೆ ಅಲ್ಲ

    ಪ್ರತ್ಯುತ್ತರಅಳಿಸಿ
  4. ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದಿದ್ದೆ ನಾನು ಯಾರು

    ಪ್ರತ್ಯುತ್ತರಅಳಿಸಿ
  5. ನೀರು ಇರುತ್ತೆ ನದಿ ಅಲ್ಲ, ಬಾಗಿಲು ಇರುತ್ತೆ ಮನೆ ಅಲ್ಲ

    ಪ್ರತ್ಯುತ್ತರಅಳಿಸಿ
  6. ಮನೆ ಮೇಲೆ ಮನೆ ಕಟ್ಟಿ ಮರಿ ಸ್ವಾಮಿ ಗುಡಿ ಕಟ್ಟಿ ಕೊಂಬೆ ಮೇಲೆ ಕುಂತವನೆ ಕೊರಮ ಕರಿ ಶೆಟ್ಟಿ answer

    ಪ್ರತ್ಯುತ್ತರಅಳಿಸಿ
  7. ಒಗಟು ಬಿಡಿಸಿ ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ ಮೈಯೊಳಗ ನವಗಾಯ ಒಂಬತ್ತು ತುಂಡ ಒಯ್ಯನೊಯ್ಯನೇ ಒಂದು ಹೆಗಲೇರಿಕೊಂಡ ರಾಯ ರಾಯರಿಗ್ಲೆ ತಾನೇ ಪ್ರಚಂಡ

    ಪ್ರತ್ಯುತ್ತರಅಳಿಸಿ
  8. ಬಾಯಲ್ಲಿ ಹಲ್ಲಿಲ್ಲ, ಮಯಲ್ಲಿ ಶಕ್ತಿ ಇಲ್ಲ , ತಲೆಯಲ್ಲಿ ಕೂದಲಿಲ್ಲ , ಆದ್ರೂ ಎಲ್ರುನ್ನು ಕಾಡತಿನಿ ನಾನ್ಯಾರು.

    ಪ್ರತ್ಯುತ್ತರಅಳಿಸಿ
  9. ಅಕ್ಷರಗಳಿದ್ದರೂ ಪುಸ್ತಕವಲ್ಲ,ಸಿಂಹವಿದ್ದರೂ ಅರಣ್ಯವಲ್ಲ,ದುಂಡಾಗಿದ್ದರೂ ಚಕ್ರವಲ್ಲ,ನಾನ್ಯಾರು

    ಪ್ರತ್ಯುತ್ತರಅಳಿಸಿ
  10. ಗಂಟೆ ಹೊಡೆಯುತ್ತಾನೆ
    ಪೂಜಾರಿ ಅಲ್ಲ
    PAPER ಅರಿಯುತ್ತಾನೆ |
    ಅದರೆ ಹುಚ್ಚು ನು ಅಲ್ಲ .."
    ಹಣ ಕೇಳುತ್ತಾನೆ
    ಭಿಕ್ಷುಕ ಅಲ್ಲ ..

    ಪ್ರತ್ಯುತ್ತರಅಳಿಸಿ
  11. ಗಂಡ ವಾರಕ್ಕೊಮ್ಮೆ ನೋಡ್ತಾರೆ ಹೆಂಡತಿ ವರ್ಷಕ್ಕೊಮ್ಮೆ ನೋಡ್ತಾರೆ ?? ಉತ್ತರ ಕೊಡಿ

    ಪ್ರತ್ಯುತ್ತರಅಳಿಸಿ

  12. ಗಂಡ ವಾರಕ್ಕೊಮ್ಮೆ ನೋಡುತ್ತಾನೆ ಹೆಂಡತಿ ವರ್ಷಕ್ಕೊಮ್ಮೆ ನೋಡುತ್ತಾಳೆ?? ಉತ್ತರ ಕೊಡಿ ಸರ್

    ಪ್ರತ್ಯುತ್ತರಅಳಿಸಿ
  13. ಹಿಡಿದರೆ ಹಿಡಿಯಷ್ಟು ಬಿಟ್ಟರೆ ಮನೆತುಂಬ

    ಪ್ರತ್ಯುತ್ತರಅಳಿಸಿ
  14. ಕಾಲಿಲದೆ ನಡೆಯುವುದು ಬಾಯಿಲದೆ ನುಡಿಯುವುದು ಇದರ ಹೊಟೆ ಹಲವಕೆ ಮನೆಯಾಗಿರುವುದು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. *ನಾನು ಯಾರೆಂದು ಹೇಳುವಿರಾ?*

      ಮರದಲ್ಲಿ ನಾನಿರುವೆ ಮನೆಯಲ್ಲಿ ನಾನಿಲ್ಲ
      ನೆಲದಲ್ಲಿ ನಾನಿಲ್ಲ ನೀರಲ್ಲಿ ನಾನಿರುವೆ
      ಕಾರಲ್ಲಿ ನಾನಿರುವೆ ಬಸ್ಸಲ್ಲಿ ನಾನಿಲ್ಲ
      ಮುಡಿಯಲ್ಲಿ ನಾನಿಲ್ಲ, ಶಿರದಲ್ಲಿ ನಾನಿರುವೆ...

      *ಹಾಗಾದರೆ ನಾನಾರು ನೀ ಹೇಳು ಕನ್ನಡದ ಜಾಣಮರಿ*

      ಅಳಿಸಿ
  15. ಒಟ್ಟಾರೆ 12 ಜನ ಊಟಕ್ಕೆ ಕುಳಿತಿರುತ್ತಾರೆ,ಒಬ್ಬರು ಇನ್ನೊಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬ ಉಳಿದವರೆಲ್ಲರಿಗು ಬಡಿಸಿರುತ್ತಾನೆ. Ans pls

    ಪ್ರತ್ಯುತ್ತರಅಳಿಸಿ
  16. ಇದು ನನಗೆ ಬಹಳ ಸಹಕಾರಿಯಾಗಿದೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  17. ಚೋಟುದ್ದ ಹುಡುಗಿಗೆ ಮಾರುದ್ದ ಜಡೆ ಒಗಟು ಬಿಡಿಸಿ

    ಪ್ರತ್ಯುತ್ತರಅಳಿಸಿ
  18. ಡಾಕ್ಟರ್ ಆದ್ರೂ ಔಷಧಿ ನೀಡಲ್ಲ, ಕೋಗಿಲೆ ಗಂಟಲಿದ್ರು ಹಡ ಲ್ಲಾ

    ಪ್ರತ್ಯುತ್ತರಅಳಿಸಿ
  19. ಹಳಸಲಾರದ ಹಣ್ಣು ಬಳಸಲಾರದ ನೀರು ಕಳಸಲಾರದ ಹೆಣ್ಣು

    ಪ್ರತ್ಯುತ್ತರಅಳಿಸಿ
  20. ಪ್ರಾಯದಲ್ಲಿ ಹೂ ಮುಡಿತ್ತಾಳೆ, ಮುಪ್ಪಿನಲ್ಲಿ ಗೆಜ್ಜೆ ಕಟ್ಟಿ ಕುಣಿಯುತ್ತಲೆ ಏನು?

    ಪ್ರತ್ಯುತ್ತರಅಳಿಸಿ
  21. ಅಪ್ಪ ಆಕಾಶಕ್ಕೆ.... ಅಮ್ಮ ಪಾತಾಳಕ್ಕೆ.. ಅಣ್ಣ ವ್ಯಾಪಾರಕ್ಕೆ.... ಅಕ್ಕ ದೇವಸ್ಥಾನಕ್ಕೆ.... ಹಾಗಾದರೆ ನಾನ್ಯಾರು?

    ಪ್ರತ್ಯುತ್ತರಅಳಿಸಿ
  22. ಚಿಕ್ಕ ಬೋರನಿಗೆ ಬಗಲಲ್ಲಿ ಕತ್ತಿ ans thisss....

    ಪ್ರತ್ಯುತ್ತರಅಳಿಸಿ
  23. ಬಿಳಿಯ ಹೊಲದಲ್ಲಿ ಕರಿ ಕಾಳು ಕೈಯಲ್ಲಿ ಬಿತ್ತುತ್ತಾರೆ ಬಾಯಲ್ಲಿ ಏತ್ತುತ್ತಾರೆ ನಾನು ಯಾರು !!

    ಪ್ರತ್ಯುತ್ತರಅಳಿಸಿ
  24. ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು?

    ಪ್ರತ್ಯುತ್ತರಅಳಿಸಿ
  25. ನಾಲ್ಕು ಕಂಬಗಳುಂಟು ದೇವಾಲಯವಲ್ಲ
    ಎರಡು ಮೊರಗಳುಂಟು ಕೇರಲಾಗುವುದಿಲ್ಲ
    ಒಂದು ಕಹಳೆಯುಂಟು ಊದಲಾಗುವುದಿಲ್ಲ
    ಹಾಗಾದರೆ ನಾನು ಯಾರು?

    ಪ್ರತ್ಯುತ್ತರಅಳಿಸಿ
  26. ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು

    ಪ್ರತ್ಯುತ್ತರಅಳಿಸಿ
  27. ಮಗ ಬೆಳಗ್ತಾನೆ,ತಂದೆ ಅಳ್ತಾನೆ,ತಾಯಿ ಅರಚುತ್ತಾಳೆ

    ಪ್ರತ್ಯುತ್ತರಅಳಿಸಿ
  28. ಹೆತ್ತ ಮಕ್ಕಳನ್ನು ಹೆತ್ತವರಿಗೆ ಕೊಟ್ಟು ತಾನು ಬರಿ ತೊಟ್ಟಿಲು ತೂಗುತೈತೆ ಏನದು

    ಪ್ರತ್ಯುತ್ತರಅಳಿಸಿ
  29. ಕರಿ ಕಂಬ್ಳಿ ನೆಂಟ, ಸರೊತ್ತಿನಲ್ಲಿ ಹೊಂಟ, ಅವನ್ಯಾರು?

    ಪ್ರತ್ಯುತ್ತರಅಳಿಸಿ
  30. ಸುತ್ತಮುತ್ತ ನೋಡಬೇಡ ನನಗಾಗಿ ಮೇಲೊಬ್ಬ ಕುಳಿತಿಹ ನಿನಗಾಗಿ

    ಪ್ರತ್ಯುತ್ತರಅಳಿಸಿ
  31. ಅಪ್ಪನ ಮನೆಗೆ ಒಗ್ಬೇಕಾದ್ರೆ ಪಟಪಟ ಅಂತ ಹೋಗ್ತಾಳೆ ಗಂಡನ ಮನೆಗೆ ಹೋಗ್ಬೇಕದ್ರೆ ನೀದನುಕ್ ಒಗ್ತಾಳೆ...

    ಪ್ರತ್ಯುತ್ತರಅಳಿಸಿ
  32. ಗಂಡ ವಾರಕ್ಕೊಮ್ಮೆ, ಹೆಂಡತಿ ವರ್ಷಕೊಮ್ಮೆ..
    ಇದ್ರ ಉತ್ತರ ಹೇಳಿ

    ಪ್ರತ್ಯುತ್ತರಅಳಿಸಿ
  33. ಕೊಂಡಾಗ ಕಪ್ಪಗೆ ಇರುತ್ತೇನೆ?
    ಬಳಸಿದರೆ ಕೆಂಪಾಗುತ್ತೇನೆ?
    ಕೊನೆಗೆ ಬಿಳಿ ಆಗುತ್ತೇನೆ?
    ಹೇಳಿ ನೋಡೋಣ ನಾ ಯಾರು?

    ಪ್ರತ್ಯುತ್ತರಅಳಿಸಿ
  34. ಒಗಟು ಬೇಡಿಸಿ.

    😟ಎದರು ಬದರೂ ಕೋತುಕೊಂಡು ವ್ಯವಾರ ಮಾಡುತ್ತಾರೇ ಅರ್ದ ಹೋದರೆ ನೋವುತ್ತೆ ಪೂರ್ತಿ ಹೋದರೆ ಕುಸಿ ಆಗುತ್ತೆ..... 🤔😇

    ಪ್ರತ್ಯುತ್ತರಅಳಿಸಿ
  35. ತಯಾರಿಸುವವನಿಗೆ ಅವಶಕತೆ ಇರುದಿಲ್ಲ. ಖರೀದಿಸುವವನು ಉಪಯೋಗಿಸುದಿಲ್ಲ. ಉಪಯೀಗಿಸುವವನು ಖರೀದಿಸುದಿಲ್ಲ. ಹೇಳಿ ಅದು ಏನು ಅಂತ

    ಪ್ರತ್ಯುತ್ತರಅಳಿಸಿ
  36. ಬಿತ್ತುವುದು ಕೈಯಲ್ಲಿ, ಆರಿಸುವುದು ಬಾಯಿಯಲ್ಲಿ ಅಥವಾ ಕಣ್ಣಿನಲ್ಲಿ ಹಾಗಾದರೆ ನಾನ್ಜ್ ಯಾರು

    ಪ್ರತ್ಯುತ್ತರಅಳಿಸಿ
  37. ಹತ್ತು ತಲೆ ಕೆಂಪಾದ ವನ,ಆರು ತಲೆ ಕಪ್ಪಾದ ವನ, ಸಖನ ಪುತ್ರನ ಯಜಮಾನನ ವೈರಿಯ ಅನುಜನ ಪ್ರಿಯ ಪತ್ನಿ ಯಾರು ಹೇಳಿ ನೋಡೋಣ??

    ಪ್ರತ್ಯುತ್ತರಅಳಿಸಿ
  38. ಊರುಂಟು ಜನರಿಲ್ಲ ನದಿಯುಂಟು ನೀರಿಲ್ಲ ರಸ್ತೆಯುಂಟು ವಾಹನವಿಲ್ಲ ಹಾಗಾದರೆ ನಾನು ಯಾರು

    ಪ್ರತ್ಯುತ್ತರಅಳಿಸಿ
  39. ರವಿಸುತನ ಸತಿಯತ್ತೆಯ
    ಸವತಿಯ ಪತಿಯ ತ್ರತೀಯ ಸುತನ ಸುತನಸುತನನು
    ಕೊಂದವನಾರು?
    ಅರ್ಥ ವಿವರಿಸಿ ಉತ್ತರಿಸಿರಿ.... 🙂

    ಪ್ರತ್ಯುತ್ತರಅಳಿಸಿ
  40. ೩ ಕಡೆ ನೀರು ನೆತ್ತಿ ಮೇಲೆ ದೀಪ ಹಾಗಾದರೆ ನಾನು ಯಾರು ಒಗಟು ಬಿಡಿಸಿ

    ಪ್ರತ್ಯುತ್ತರಅಳಿಸಿ
  41. ಎಲೆ ಬಿಡುವುದಿಲ್ಲ ಊರೆಲ್ಲ ಬಳ್ಳಿ ಅರಡುತ್ತೆ

    ಪ್ರತ್ಯುತ್ತರಅಳಿಸಿ
  42. ಕಲ್ಲು ಅರಳಿ ಹೂವು ಆಗಿ ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ ಹಾಗಾದರೆ ನಾನು ಯಾರು ಇದು ಹೇಳಿ ನೋಡೋಣ

    ಪ್ರತ್ಯುತ್ತರಅಳಿಸಿ
  43. ಒಗಟು ಬಿಡಿಸಿ ನೋಡೋಣ . ರಾಮನಂತ ಸಮುದ್ರ ರತ್ನದಂತ ಮೀನು ನೀರು ಬತ್ತಿಹೋದ್ರೆ ಮೀನು ಸತ್ತು ಹೋಗುತ್ತೆ ... ಎನ್ ಅದು

    ಪ್ರತ್ಯುತ್ತರಅಳಿಸಿ
  44. ಬಿಳಿ ಕಲ್ ಮೇಲೆ ಕರಿ ಕಲ್ಲು
    ಕರಿ ಕಲ್ ಮೇಲೆ ರಂಗೋಲಿ

    ಪ್ರತ್ಯುತ್ತರಅಳಿಸಿ
  45. ಕಟ್ಟೆ ಇಲ್ಲದ ಕೆರೆಯಲ್ಲಿ ತಟ್ಟೆ ತೇಲಿಕೊಂಡು ಬರುತ್ತೆ

    ಪ್ರತ್ಯುತ್ತರಅಳಿಸಿ
  46. ಬೆನ್ನಿಂದ ತಿನ್ನುತ್ತದೆ ಬಾಯಿಂದ ಉಗುಳುತ್ತದೆ ಎದುರಿಗೆ ಬಂದವರನ್ನು ಕೊಲ್ಲುತ್ತದೆ ಈ ಒಗಟನ್ನ ಬಿಡಿಸಿ

    ಪ್ರತ್ಯುತ್ತರಅಳಿಸಿ
  47. ಚಿನ್ನದ ಮನೆಯಲ್ಲಿ ಬೆಳೆದ ಬೆಳ್ಳಿಯ ಲಿಂಗ

    ಪ್ರತ್ಯುತ್ತರಅಳಿಸಿ
  48. ಕಲ್ಲಾದರೂ ಬಂಡೆಯಲ್ಲ,ಚಕ್ರಗಳಿದ್ದರೂ ಗಾಡಿಯಲ್ಲ, ಉಂಡರೂ ಜೀವಿಯಲ್ಲ.

    ಪ್ರತ್ಯುತ್ತರಅಳಿಸಿ
  49. ಬಿಸಿಲಿರಲಿ ನೆರಳಿರಲಿ ಮಳೆಯಿರಲಿ ರಾತ್ರಿಯಿರಲಿ ಹಗಲಿರಲಿ ಯಾವಾಗಲೂ ಹೊರಗೆ ಮಲಗಿರುತ್ತೆ ಹಾಗಾದರೆ ನಾನು ಯಾರು❓

    ಪ್ರತ್ಯುತ್ತರಅಳಿಸಿ
  50. ಚಿಕ್ಕ ಪ್ರಾಯದ ಬಾಲೆ ಸೋಕ್ಕಿಗನ್ಣೆಯಿಲ್ಲ ನಕ್ಕರೆ ಉದುರುವುದು ಹಲ್ಲುಗಳು ಒಂದೊಂದು ಹೆಕ್ಕೆಕ್ಕಿ ಬಿಡಿಸಿ

    ಪ್ರತ್ಯುತ್ತರಅಳಿಸಿ
  51. ಬಾಯಿ ಇಲ್ಲದೆ ಮಾತಾಡ್ತೀನಿ,ಕಿವಿ ಇಲ್ಲದೆ ಕೆಳುಸ್ಕೊತಿನಿ,ದೇಹ ಇಲ್ಲದೆ ಬದುಕ್ತಿನಿ,ಗಾಳಿ ಬಂದಾಗ ಉಸಿರಾಡ್ತಿನಿ ,ಹಾಗಾದರೆ ನಾನು ಯಾರು??????

    ಪ್ರತ್ಯುತ್ತರಅಳಿಸಿ
  52. ಅಂಗೈಯಗಲದ ಗದ್ದೆ ಗದ್ದೆಗೆ ನೀರು ನೀರಿಗೆ ಬೇರು ಬೇರಿಗೆ ಬೆಂಕಿ ಉತ್ತರ ಏನು

    ಪ್ರತ್ಯುತ್ತರಅಳಿಸಿ
  53. ಒಂದು ಕೊಂಬಿನ ಗೂಳಿ ಆದರೆ ತಲೆ ಎಲ್ಲ ಮುಳ್ಳು

    ಪ್ರತ್ಯುತ್ತರಅಳಿಸಿ
  54. ಈ ಒಗಟು ಬಿಡಿಸಿ!

    ಹೆಸರಿಲ್ಲದ ಊರಗೌಡನ ಹೆಂಡತಿ, ತಳವಿಲ್ಲದ ಮಡಿಕೆ ತಗೊಂಡು, ನೀರಿಲ್ಲದ ಕೆರೆಗೆ ಹೋಗುತ್ತಾಳೆ. ಅಲ್ಲಿ ತಲೆ ಇಲ್ಲದ ಹುಲ್ಲೆಕರು, ಬೇರಿಲ್ಲದ ಗರಿಕೆ ಮೇಯುತ್ತಿರುತ್ತದೆ. ಇದನ್ನು ಕಣ್ಣಿಲ್ಲದವನು ನೋಡಿ, ಕಿವಿಯಿಲ್ಲದವನು ಕೇಳಿ, ಕೈ‌ಯಿಲ್ಲದವನು ಹೊಡೆದು, ತಲೆ ಇಲ್ಲದವನು ಹೊತ್ತೊಯ್ದು, ಭೂಮಿ ಇಲ್ಲದೆಡೆ ಹೂತುಹಾಕ್ತಾರೆ.

    ಏನಿದು?

    ಪ್ರತ್ಯುತ್ತರಅಳಿಸಿ
  55. ಅಕ್ಕನ ಮನ್ಯಾಗ ದೀಪ ಹಚ್ಚಿದರೆ
    ತಂಗಿ ಮನ್ಯಾಗ ಬೆಳಕು ಬಿತ್ತು.
    #ಕನ್ನಡಒಗಟು

    ಪ್ರತ್ಯುತ್ತರಅಳಿಸಿ
  56. ದೇಹ ಇಲ್ದೆ ಉಸಿರಾಡುತ್ತವೆ,,
    ಕಿವಿ ಇಲ್ದೆ ಕೆಲಸ್ಕೊಳುತ್ತೆ,,
    ಬಾಯಿ ಇಲ್ದೆ ಮಾತನಾಡುತ್ತೆ,,
    ಗಾಳಿ ಬಂದಾಗ ಜೀವಂತ ವಾಗುತ್ತೆ,,

    ಪ್ರತ್ಯುತ್ತರಅಳಿಸಿ
  57. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  58. ದೇಹ ಇಲ್ದೆ ಉಸಿರಾಡುತ್ತವೆ,,
    ಕಿವಿ ಇಲ್ದೆ ಕೆಲಸ್ಕೊಳುತ್ತೆ,,
    ಬಾಯಿ ಇಲ್ದೆ ಮಾತನಾಡುತ್ತೆ,,
    ಗಾಳಿ ಬಂದಾಗ ಜೀವಂತ ವಾಗುತ್ತೆ,,

    ಪ್ರತ್ಯುತ್ತರಅಳಿಸಿ
  59. ಹುಟ್ಟು ವಾಗ ಹಸಿರು ಹುಲ್ಲು. ಬೆಳೆಯುವಾಗ ಒಂದೇ ಹೆಸರು . ಸತ್ತ ಮೇಲೆ ಸಾವಿರ ಹೆಸರು

    ಪ್ರತ್ಯುತ್ತರಅಳಿಸಿ
  60. ಬಿಳಿ ಕಲ್ಲಿನ ಮೇಲೆ ಕರಿ ಕಲ್ಲು ಕರಿ ಕಲ್ಲಿನ ಮೇಲೆ ರಂಗೋಲಿ. ಒಗಟಿನ ಉತ್ತರ?

    ಪ್ರತ್ಯುತ್ತರಅಳಿಸಿ
  61. ಒಂಟಿ ಕಾಲು ಕೊಕ್ಕರೆ ಒಂಬೈನೂರು ತತ್ತಿ. ಒಗಟಿನ ಉತ್ತರ?

    ಪ್ರತ್ಯುತ್ತರಅಳಿಸಿ
  62. ತಯಾರಿಸುವವನಿಗೆ ಅದರ ಅವಶ್ಯಾಕತೆ ಇಲ್ಲ . ಖರೀದಿಸುವವನು ಅದನ್ನು ಉಪಯೋಗಿಸುವುದಿಲ್ಲ .ಉಪಯೋಗಿಸುವವನು ಅದನ್ನು ಖರೀದಿಸುವುದಿಲ್ಲ .ಅದನ್ನು ನೋಡುವುದಕ್ಕು ಆಗುವುದಿಲ್ಲ .ಏನದು

    ಪ್ರತ್ಯುತ್ತರಅಳಿಸಿ
  63. ಹೆಸರಿಲ್ಲದ ಊರ ಗೌಡನ ಹೆಂಡತಿ ತಳವಿಲ್ಲದ ಮಡಿಕೆ ತಗೊಂಡು ನೀರಿಲ್ಲದ ಕೆರೆಗೆ ಹೋಗುತ್ತಾಳೆ ಅಲ್ಲಿ ತಲೆ ಇಲ್ಲದ ಹೊಲೇಕರು ಬೇರಿಲ್ಲದ ಗರಿಕೆ ಮೇಯುತಿರುತ್ತದೆ ಇದ್ದನು ಕಣ್ಣ ಇಲ್ಲದವನು ನೋಡಿ ಕಿವಿ ಇಲ್ಲದವನು ಕೇಳಿ ಕೈ ಇಲ್ಲದವನು ಹೊಡೆದು ತಲೆಯಿಲ್ಲದವು ಹೊತ್ತೊಯದು ಭೂಮಿ ಇಲ್ಲದೆಡೆ ಹೂತು ಹಾಕುತ್ತಾರೆ ಏನಿದು?

    ಪ್ರತ್ಯುತ್ತರಅಳಿಸಿ
  64. ಒಂಟಿ ಕಾಲು ಕೊಕ್ಕರೆ ಒಂಬೈನೂರು ತತ್ತಿ

    ಪ್ರತ್ಯುತ್ತರಅಳಿಸಿ
  65. ಈ ಒಗಟು ಬಿಡಿಸಿ
    ಅರಕಟ್ಟ ಮರಕಟ್ಟ ಮರಕ ಮೂವತ ಕಟ್ಟ ಸೀತಿ ಕಟ್ಟ ಸಿದ್ದರಾಯನ ಕಟ್ಪ ಒಡದ ಕೋಟೊರಿಗೆ ಬಂಗಾರ ಕಟ್ಟ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅಕ್ಕನ ಗಂಡ ಬಹಳ ಚಂದ ನೋಡಲು ಕಪ್ಪು ಈಡಿ ರಾಜ್ಯ ಆಳುತಾನ ನಿರು ನೋಡಿದರೆ ಅಂಜುತಾನ

      ಅಳಿಸಿ


  66. " ಒಂದು ಗುಡ್ಡ
    ಗುಡ್ಡದಾಗ ಕಡ್ಡಾ(ಮೇವು )
    ಕಡ್ಡದಾಗ ದಾರಿ
    ದಾರಿಗಿ ಆನಿ "

    ಪ್ರತ್ಯುತ್ತರಅಳಿಸಿ
  67. ಜುಟ್ಟುಂಟು ನಾರಿ ಅಲ್ಲ,ಕಣ್ಣುಂಟು ಮನುಷ್ಯನಲ್ಲ,ನೀರುಂಟು ಬಾವಿಯಲ್ಲ, ಹಾಗಾದರೆ ನಾನು ಯಾರು?
    ೧) ಎಳನೀರು
    ೨) ಹಲಸಿನಹಣ್ಣು
    ೩) ತೆಂಗಿನಕಾಯಿ
    ೪) ಅವರೆ ಕಾಯಿ

    ಪ್ರತ್ಯುತ್ತರಅಳಿಸಿ
  68. ಐದು ಕಾಲಿದೆ 8 ಕೈ ಇದೆ, ಯಾವ ಪ್ರಾಣಿ??

    ಪ್ರತ್ಯುತ್ತರಅಳಿಸಿ
  69. please nannge uttara heli ಒಬ್ಬರಿಗೆ ಕೇಳಿದ್ದಾರೆ ಅವರಿಗೆ ಹೇಳ್ಬೇಕು ಉತ್ತರ plzzzzzz

    ಪ್ರತ್ಯುತ್ತರಅಳಿಸಿ
  70. ಒಂದು ಗುಡಿ ಗುಡಿಯಲ್ಲಿ ಮೂರು ದೇವರು ಒಂದೊಂದು ದೇವರಿಗೆ ಒಂದೊಂದು ಹೊಂಡ ಹೊಂಡದಲ್ಲಿ ಪೂಜಾರಿ ಹೂವನ್ನು ತೆಗೆದುಕೊಂಡು ಮುಳುಗಿ ಎದ್ದರೆ ಆ

    ಹೂವು ಡಬಲ್ ಆಗುತ್ತದೆ ಅದನ್ನು ತೆಗೆದುಕೊಂಡು ದೇವರಿಗೆ ಅರ್ಪಿಸಿ ಮತ್ತೊಂದು ಹೊಂಡದಲ್ಲಿ ಮುಳುಗಿ ಎದ್ದರೆ ಡಬಲ್ ಆದ ಹೂವು ಮತ್ತೊಂದು ದೇವರಿಗೆ ಅರ್ಪಿ ಸುತ್ತಾನೆ ಮೂರು ದೇವರಿಗೆ ಹೂವು ಸಮ ಆಗಬೇಕು ಕೈಯಲ್ಲಿದ್ದ ಹೂವು ಕಾಲಿ ಆಗಬೇಕು ( ಉತ್ತರ ಹೇಳಿ ಪ್ಲೀಸ್) ಒಂದು ಕ್ಲಿವ್ 1. ರಿಂದ 10 ರ ಒಳಗೆ ಇದೆ


    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮೊದಲಿಗೆ ಏಳು ಹೂವಗಳನ್ನು ಕೇಳುತ್ತಾನೆ ಅದು 14 ಆಗುತ್ತದೆ.. ಅದರಲ್ಲಿ 8 ನಷ್ಟೇ ಅರ್ಪಿಸುತ್ತಾನೆ ..

      ಉಳಿದ 6 ಹೂಗಳೂ ಮತ್ತೆ 12 ಹೂಗಳಾಗುತ್ತವೆ ಅದರಲ್ಲಿ 8ನ್ನು ಅರ್ಪಿಸುತ್ತಾನೆ

      ಉಳಿದದ್ದು ನಾಲ್ಕು ಅದು ಎಂಟಾಗುತ್ತದೆ ಅದನ್ನು ಕೊನೆಯ ದೇವಸ್ಥಾನಕ್ಕೆ ಅರ್ಪಿಸುತ್ತಾನೆ

      ಎಲ್ಲಾ ದೇವಸ್ಥಾನಕ್ಕೂ 8 ಹೂವನ್ನು ನೀಡಲಾಗುವುದು

      ಅಳಿಸಿ
  71. ಒಂದು ಪೆಟ್ಟಿಗೆ ಯೊಳಗೆ ಇಬ್ಬರು ಕಳ್ಳರು ಒಗಟಿನ ಉತ್ತರ ಏನು?

    ಪ್ರತ್ಯುತ್ತರಅಳಿಸಿ
  72. ಏರಿ ಮೇಲೆ ಸಾವಿರ ಮರ ಹಾಗಾದರೆ ನಾನು ಯಾರು

    ಪ್ರತ್ಯುತ್ತರಅಳಿಸಿ
  73. ಮಣಿ ಮಣಿಗಾರ, ಮಣಿ ಶೃಂಗಾರ ನೋಡಲು ಮನೋಹರ m ಮುಟ್ಟಿದರೆ ಹರೋಹರ

    ಪ್ರತ್ಯುತ್ತರಅಳಿಸಿ
  74. ತಳದಾಗ ನೀರು ಮೇಲೆ ಪೈರು ಇದರ ಒಗಟನ್ನು ತಿಳಿಸಿ

    ಪ್ರತ್ಯುತ್ತರಅಳಿಸಿ
  75. ತಳದಾಗ ನೀರು ಮೇಲೆ ಪೈರು ಈ ಒಗಟಿನ ಉತ್ತರ ತಿಳಿಸಿ

    ಪ್ರತ್ಯುತ್ತರಅಳಿಸಿ
  76. ಹೆತ್ತ ಮಕ್ಕಳನ್ನು ಹೆತ್ತವರಿಗೆ ಕೊಟ್ಟು, ತಾನು ಬರಿ ತೊಟ್ಟಿಲು ತೂಗು ತೈತೆ ... ಯಾರದು???

    ಪ್ರತ್ಯುತ್ತರಅಳಿಸಿ
  77. ವರ್ಷದಲ್ಲಿ ಒಂದು ಸಲ ಬರುತ್ತೆ ವಾರದಲ್ಲಿ ಎರಡು ಸಲ ಬರುತ್ತೆ ಏನದು

    ಪ್ರತ್ಯುತ್ತರಅಳಿಸಿ
  78. ಒಂದು ಹಿಡಿದರೆ ಎರಡು ಅಲ್ಲಾಡುತ್ತೆ ಏನಿದರ ಉತ್ತರ ಕಾಮೆಂಟ್ ಮಾಡಿ

    ಪ್ರತ್ಯುತ್ತರಅಳಿಸಿ
  79. ಕಣ್ಣು ಇಲ್ಲ ಕಾಲು ಇಲ್ಲ ಆದ್ರೂ ನಡೆಯುತ್ತೆ ಏನದು

    ಪ್ರತ್ಯುತ್ತರಅಳಿಸಿ