ನನ್ನ ಪುಟಗಳು

11 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-02-ಲಂಡನ್ ನಗರ- ಟಿಪ್ಪಣಿಗಳು

ಟಿಪ್ಪಣಿಗಳು

ಪೆನ್ನಿ - ಇಂಗ್ಲೆಂಡಿನ ನಾಣ್ಯ 

***

ಕಬ್ಬಿಗ - ಕವಿ ಪದದ ತದ್ಭವ ರೂಪ
 ***
ಕೂಟ - ಅನೇಕ ರಸ್ತೆಗಳು ಸೇರುವ ಜಾಗ 

***

ಟೈಪಿಸ್ಟ್ - ಬೆರಳಚ್ಚುಗಾರ 

***
ಟ್ರಾಮ್ - ವಿದ್ಯುತ್ತಿನಿಂದ ಓಡಾಡುವ ಸ್ಥಳೀಯ ರೈಲುಗಾಡಿ

***
ಕಾರಕೂನ - ಗುಮಾಸ್ತ , ಲೆಕ್ಕ ಪತ್ರ ಬರೆಯುವವನು, ಕಛೇರಿ ಸಹಾಯಕ

****
ಪುಚ್ಚ - ಗರಿ 


*****
ಫೂಟು - ಅಡಿ, 12  ಇಂಚುಗಳಷ್ಟು ಉದ್ದ

*******
ಶೀಲಿಂಗ್ - ಇಂಗ್ಲೆಂಡಿನ ಒಂದು ಬೆಳ್ಳಿಯ ನಾಣ್ಯ 

****
50 ಶೀಲಿಂಗ್ ಸಿಂಪಿ : ಫಿಫ್ಟಿ ಶಿಲ್ಲಿಂಗ್ ಟೈಲರ್ಸ್ ಪುರುಷರ ಬಟ್ಟೆಗಳನ್ನು ಮಾರಾಟ ಮಾಡುವ ಅಂಗಡಿಗಳ ಬ್ರಿಟಿಷ್ ಸರಪಳಿಯಾಗಿತ್ತು. 1905 ರಲ್ಲಿ ಹೆನ್ರಿ ಪ್ರೈಸ್ ಅವರು ಲೀಡ್ಸ್ನಲ್ಲಿ ಸ್ಥಾಪಿಸಿದರು, ಈ ಸರಪಳಿಯು ದೇಶಾದ್ಯಂತ 399 ಕ್ಕೂ ಹೆಚ್ಚು ಮಳಿಗೆಗಳಿಗೆ ವಿಸ್ತರಿಸಿತು. 1936 ರಲ್ಲಿ, ಫಿಫ್ಟಿ ಶಿಲ್ಲಿಂಗ್ ಟೈಲರ್ಸ್ ವೆಸ್ಟ್ ಗೇಟ್‌ನಲ್ಲಿ ರಸ್ತೆಗೆ ಅಡ್ಡಲಾಗಿ ಹೊಸ ಮಳಿಗೆಯನ್ನು ತೆರೆದರು ಮತ್ತು ಡ್ಯೂಸ್‌ಬರಿಯ ಚಿಲ್ಲರೆ ವ್ಯಾಪಾರವು ಪ್ರವರ್ಧಮಾನಕ್ಕೆ ಬರುತ್ತಿತ್ತು. 1958 ರಲ್ಲಿ ಕಂಪನಿಯು ಯುಡಿಎಸ್‌ಗೆ ಮಾರಾಟವಾಯಿತು, ಅದನ್ನು ಜಾನ್ ಕೊಲಿಯರ್ ಎಂದು ಮರುನಾಮಕರಣ ಮಾಡಲಾಯಿತು . ಇದು ಯುಡಿಎಸ್ ಸಾಮ್ರಾಜ್ಯದೊಳಗೆ 1983 ರವರೆಗೆ ಯುಡಿಎಸ್ ಅನ್ನು ಹ್ಯಾನ್ಸನ್ ಪಿಎಲ್ಸಿಗೆ ಮಾರಾಟ ಮಾಡುವವರೆಗೂ ಮುಂದುವರೆಯಿತು . ಖರೀದಿಯ ವೆಚ್ಚವನ್ನು ಮರುಪಡೆಯಲು ಹ್ಯಾನ್ಸನ್ ಹಲವಾರು ಯುಡಿಎಸ್ ಸ್ವತ್ತುಗಳಲ್ಲಿ ಮಾರಾಟ ಮಾಡಿದರು, ಇದರಲ್ಲಿ ಜಾನ್ ಕೊಲಿಯರ್ ಸೇರಿದಂತೆ ನಿರ್ವಹಣಾ ಖರೀದಿ ತಂಡಕ್ಕೆ. 1985 ರಲ್ಲಿ ಕಂಪನಿಯನ್ನು ಬರ್ಟನ್ ಗ್ರೂಪ್‌ಗೆ ಮಾರಾಟ ಮಾಡಲಾಯಿತು, ಆದರೆ ಬ್ರಾಂಡ್ ಅನ್ನು ನಿಲ್ಲಿಸಲಾಯಿತು ಆದರೆ ಇಂದು ಅಸ್ತಿತ್ವದಲ್ಲಿಲ್ಲ.

*******
ಸಿಂಪಿ - ದರ್ಜಿಯವನು, ಟೈಲರ್


*******
ಗೋಲ್ಡ್‌ಸ್ಮಿತ್ : ಕ್ರಿ.ಶ. ೧೭೨೮ರಲ್ಲಿ ಐರ‍್ಲೆಂಡಿನಲ್ಲಿ ಜನಿಸಿದ ಪ್ರಸಿದ್ಧ ಇಂಗ್ಲಿಷ್ ಲೇಖಕ.


******* 
ಗ್ಲ್ಯಾಡ್‌ಸ್ಟನ್ : ೧೮೦೯ರಲ್ಲಿ ಲಿವರ್‌ಪೂಲಿನಲ್ಲಿ ಜನಿಸಿದ ೧೯ನೆಯ ಶತಮಾನದ ಪ್ರಸಿದ್ಧ ಬ್ರಿಟಿಷ್ ರಾಜತಂತ್ರಜ್ಞ, ನಾಲ್ಕುಸಾರಿ ಇಂಗ್ಲೆಡಿನ ಪ್ರಧಾನಿಯಾಗಿದ್ದ. 


****
ಡಿಸ್ರೇಲಿ : ೧೮೦೪ರಲ್ಲಿ ಲಂಡನ್‌ನಲ್ಲಿ ಜನಿಸಿದ ಈತ ಬ್ರಿಟಿಷ್ ರಾಜಕಾರಣಿ ಮತ್ತು ಲೇಖಕ. 


*****
ಕಿಪ್ಲಿಂಗ್ : ೧೮೬೫ರಲ್ಲಿ ಸ್ಟಾಫರ್ಡ್‌ಷೈರಿನಲ್ಲಿ ಜನಿಸಿದ ಈತ ಇಂಗ್ಲೆಂಡಿನ ಪ್ರಸಿದ್ಧ ಲೇಖಕ. 


****
ಜಾನ್‌ಸನ್ : ೧೭೦೯ರಲ್ಲಿ ಸ್ಟಾಫರ್ಡ್‌ಷೈರಿನಲ್ಲಿ ಜನಿಸಿದ ಈತ ಇಂಗ್ಲೆಂಡಿನ ಪ್ರಸಿದ್ಧ ಲೇಖಕ. 


****

ಡ್ರಯ್ಡನ್ : ೧೬೩೧ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಪ್ರಸಿದ್ಧ ವಿಮರ್ಶಕ ಮತ್ತು ಭಾಷಾಂತರಕಾರ. 


****

ವರ್ಡ್ಸ್‌ವರ್ತ್ : ೧೮ನೆಯ ಶತಮಾನದ ಮಹೋನ್ನತ ಆಂಗ್ಲಕವಿ, ಬ್ರಿಟನ್ನಿನ ’ರಾಷ್ಟ್ರಕವಿ’. 


*****

ನ್ಯೂಟನ್ : ೧೬೪೨ರಲ್ಲಿ ಲಂಡನ್ನಿನಲ್ಲಿ ಜನಿಸಿದ ಈತ ಬ್ರಿಟನ್ನಿನ ಪ್ರಸಿದ್ಧ ವಿಜ್ಞಾನಿ. ಚಲನ ನಿಯಮವನ್ನು ಕಂಡುಹಿಡಿದುದಲ್ಲದೆ, ಬೆಳಕು ಏಳು ವರ್ಣಗಳಿಂದ ಕೂಡಿದೆ ಎಂಬುದನ್ನು ಸಿದ್ಧಪಡಿಸಿದ. 


*****
ಡಾರ್ವಿನ್ : ೧೮೦೯ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ವಿಜ್ಞಾನಿ. ವಿಕಾಸವಾದದ ಮೂಲಪುರುಷ. 

******

ಹರ್ಷಲ್ : ೧೭೩೮ರಲ್ಲಿ ಜನಿಸಿದ ಈತ ಜರ್ಮನಿಯ ಖಗೋಳ ವಿಜ್ಞಾನಿ. ಸೂರ್ಯ-ನಕ್ಷತ್ರ- ನಕ್ಷತ್ರಗಳಿಗಿರುವ ದೂರವನ್ನು ಕಂಡುಹಿಡಿದನು. 


******
ರಿಚರ್ಡ್ : ೧೫೨೨ರಲ್ಲಿ ಜನಿಸಿದ. ಈತ ಇಂಗ್ಲೆಂಡಿನ ನಾಟಕಕಾರ ಮತ್ತು ಸಂಗೀತ ವಿದ್ವಾಂಸ. ಇವನು ರಾಜ. 

****
ಮೂರನೇ ಎಡ್ವರ್ಡ್ : ೧೩೨೭ರಲ್ಲಿ ಇಂಗ್ಲೆಂಡಿನ ಡ್ಯೂಕ್ ಆದನು. ಈತನ ಕಾಲದಲ್ಲಿ ಇಂಗ್ಲೆಂಡ್ ಮತ್ತು ಪ್ರಾನ್ಸ್ ನಡುವೆ ದೀರ್ಘಕಾಲದ ಯುದ್ಧ ಆರಂಭವಾಯಿತು. 


******
ರಾಣಿ ಎಲಿಜಬೆತ್ : ಈಕೆ ಇಂಗ್ಲೆಂಡಿನ ರಾಣಿಯಾಗಿದ್ದಳು. ೧೬೦೦ರ ಡಿಸೆಂಬರ್ ೩೧ರಂದು ಇಂಡಿಯಾದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪಿಸಿದಳು. 


****
ಒಂದನೇ ಜೇಮ್ಸ್ : ೧೫೬೬-೧೬೨೫ರವರೆಗೆ ಗ್ರೇಟ್‌ಬ್ರಿಟನ್ ಮತ್ತು ಐರ‍್ಲೆಂಡಿನ ದೊರೆಯಾಗಿದ್ದನು. ಇವನ ಕಾಲದಲ್ಲಿ ಮತೀಯ ಮತ್ತು ರಾಜಕೀಯ ಸಮಸ್ಯೆಗಳು ಉಲ್ಬಣಗೊಂಡವು.

****
ಷೇಕ್ಸ್‌ಪಿಯರ್ : ೧೫೬೪ರಲ್ಲಿ ಬ್ರಿಟನ್‌ನಲ್ಲಿ ಜನಿಸಿದ ಸುಪ್ರಸಿದ್ಧ ಇಂಗ್ಲಿಷ್ ನಾಟಕಕಾರ. 

*****
ನೆಲ್ಸನ್ : ಈತನು ಓರ್ವ ಯೋಧ. ಇವನ ಪೂರ್ಣ ಹೆಸರು ಹೊರ‍್ಯಾಷಿಯೋ ನೆಲ್ಸನ್. ಈತನು ಕ್ರಿ.ಶ.೧೮೦೫ರ ವೆಲ್ಲಿಂಗ್‌ಟನ್; ಟ್ರಾಫಲ್ಗರ್ ಯುದ್ಧದಲ್ಲಿ ಹೋರಾಡಿ ಮಡಿದನು. 

********



10ನೇ ತರಗತಿ-ಕನ್ನಡ-ಗದ್ಯ-02-ಲಂಡನ್ ನಗರ- ಲೇಖಕರ ಪರಿಚಯ

ವಿ.ಕೃ.ಗೋಕಾಕರ ಪರಿಚಯ
(ಪರೀಕ್ಷಾ ದೃಷ್ಟಿಯಿಂದ ಕಿರು ಪರಿಚಯ)
    ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ. ವಿನಾಯಕ ಕೃಷ್ಣ ಗೋಕಾಕ (ಕ್ರಿ.ಶ.೧೯೦೯) ಇವರು ಹಾವೇರಿ ಜಿಲ್ಲೆಯ ಸವಣೂರಿನವರು. 
    ವಿ.ಕೃ.ಗೋಕಾಕ ಅವರು ಸಮುದ್ರಗೀತೆಗಳು, ಪಯಣ, ಉಗಮ, ಇಜ್ಜೋಡು, ಸಮರಸವೇ ಜೀವನ, ಭಾರತ ಸಿಂಧುರಶ್ಮಿ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. 
    ಇವರ 'ದ್ಯಾವಾ ಪೃಥಿವೀ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್. ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರ ಪದ್ಮಶ್ರೀ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
*********
ವಿ.ಕೃ.ಗೋಕಾಕ್ ಅವರ ಬಗ್ಗೆ ಹೆಚ್ಚಿನ ಮಾಹಿತಿ

ಇಲ್ಲಿ ಡೌನ್ಲೋಡ್ ಮಾಡಿ >> ವಿ.ಕೃಗೋಕಾಕ್ ಅವರ ಪರಿಚಯ
ಡಾವಿ.ಕೃಗೋಕಾಕ್
ಜನನ: ೧೦--೧೯೦೯
ನಿಧನ: ೨೮--೧೯೯೨
       ಕನ್ನಡ ಸಾಹಿತ್ಯದಲ್ಲಿ ನವ್ಯ ಕಾವ್ಯ ಪ್ರವರ್ತಕರೆಂದೇ ಪ್ರಸಿದ್ಧರಾಗಿದ್ದ ವಿನಾಯಕ ಕೃಷ್ಣ ಗೋಕಾಕರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ. ತಂದೆ ಕೃಷ್ಣಗೋಕಾಕ, ತಾಯಿ ಸುಂದರಮ್ಮ. ಪ್ರಾರಂಭಿಕ ಶಿಕ್ಷಣ ಸವಣೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿ. ೧೯೩೬ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ಪಯಣ.
ಭಾರತಕ್ಕೆ ಹಿಂದಿರುಗಿದ ನಂತರ ೧೯೪೦ರಲ್ಲಿ ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜಿನಲ್ಲಿ, ೧೯೪೬ರಲ್ಲಿ ಗುಜರಾತಿನ ವೀಸನಗರ, ೧೯೪೯ರಲ್ಲಿ ಕೊಲ್ಹಾಪುರದ ರಾಜಾರಾಮ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ, ೧೯೫೨ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪ್ರಾಚಾರ‍್ಯರ ಹುದ್ದೆ ವಹಿಸಿಕೊಂಡರು. ನಂತರ ೧೯೫೯ರಲ್ಲಿ ಹೈದರಾಬಾದಿನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ನಿರ್ದೇಶಕರಾಗಿ ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ೧೯೭೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷರಾಗಿ, ೧೯೮೩ರಲ್ಲಿ ಅಧ್ಯಕ್ಷರಾಗಿ, ೧೯೮೫ರಲ್ಲಿ ಪುಟಪರ್ತಿ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸಲ್ಲಿಸಿದ ಸೇವೆ.
ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಪ್ರಾರಂಭ. ಮೊದಲ ಕವನ ಸಂಕಲನ THE SKY LINE ೧೯೨೫ರಲ್ಲಿ ಸಿದ್ಧ. ‘ಕಲೋಪಾಸಕ’ ಕನ್ನಡದ ಮೊದಲ ಕವನ ಸಂಕಲನ ೧೯೩೪ರಲ್ಲಿ ಪ್ರಕಟಿತ. ನಂತರ ಪಯಣ, ಸಮುದ್ರ ಗೀತೆಗಳು, ತ್ರಿವಿಕ್ರಮರ ಆಕಾಶಗಂಗೆ, ಬಾಳದೇಗುಲದಲ್ಲಿ, ದ್ಯಾವಾಪೃಥಿವಿ, ಕಾಶ್ಮೀರ, ಭಾವರಾಗ, ಪಾರಿಜಾತದಡಿಯಲ್ಲಿ ಮುಂತಾದುವು. ನಾಟಕಗಳು- ಜನನಾಯಕ, ಯುಗಾಂತರ. ಪ್ರಬಂಧ ಸಂಕಲನ-ಜೀವನಪಾಠ, ಚೆಲುವಿನ ನಿಲವು. ಪ್ರವಾಸ ಸಾಹಿತ್ಯ-ಸಮುದ್ರದಾಚೆಯಿಂದ, ಸಮುದ್ರದೀಚೆಯಿಂದ. ವಿಮರ್ಶೆ-ಕವಿಕಾವ್ಯ ಮಹೋನ್ನತಿ, ನವ್ಯತೆ ಹಾಗೂ ಕಾವ್ಯ ಜೀವನ, ಕಾವ್ಯಮೀಮಾಂಸೆ, ನವ್ಯತೆ. ಇಂಗ್ಲಿಷ್‌ನಲ್ಲಿ-ದಿ ಸಾಂಗ್ ಆಫ್ ಲೈಫ್ ಅಂಡ್ ಪೊಯಮ್, ದಿ ಪೊಯೆಟಿಕ್ ಅಪ್ರೋಚ್ ಟು ಲ್ಯಾಂಗ್ವೇಜ್, ಇಂಗ್ಲಿಷ್ ಇನ್ ಇಂಡಿಯಾ : ಇಟ್ಸ್ ಪ್ರೆಸೆಂಟ್ ಅಂಡ್ ಫ್ಯೂಚರ್, ಇನ್ ಲೈಫ್ಸ್ ಟೆಂಪಲ್, ಎಸ್ಸೆಸ್ ಇನ್ ಇಂಡೋ ಆಂಗ್ಲಿಯನ್ ಲಿಟರೇಚರ್ ಮುಂತಾದುವು ಸೇರಿ ೭೫ ಕೃತಿಗಳ ರಚನೆ. ಭಾರತ ಸಿಂಧುರಶ್ಮಿ ಮಹಾಕಾವ್ಯ. ಸಮರಸವೇ ಜೀವನ ಬೃಹತ್ಕಾದಂಬರಿ.
ಸಂದ ಗೌರವ ಪ್ರಶಸ್ತಿಗಳು ಹೇರಳ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಿಂದ ಹಿಡಿದು ಹಲವಾರು ಸಮ್ಮೇಳನ, ಗೋಷ್ಠಿಗಳ ಅಧ್ಯಕ್ಷತೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜಾಜಿ ಪ್ರಶಸ್ತಿ, ಕೇಂದ್ರ ಸರಕಾರದ ಪದ್ಮಶ್ರೀ, ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಪೆಸಿಫಿಕ್, ವಿ.ವಿ. ಗೌರವ ಡಾಕ್ಟರೇಟ್.
INDIAN RESPONSE TO POETRY IN ENGLISH ಸೇರಿದಂತೆ ಹಿತೈಷಿಗಳು ಅರ್ಪಿಸಿದ್ದು ಇಂಗ್ಲಿಷ್‌ನಲ್ಲಿ ೩, ಕನ್ನಡದಲ್ಲಿ ೨೧ ಗೌರವ ಗ್ರಂಥಗಳು.

****************











10ನೇ ತರಗತಿ ಕನ್ನಡ ಗದ್ಯ-01-ಶಬರಿ-ಪ್ರಶ್ನೋತ್ತರ ವೀಕ್ಷಣೆ & ಡೌನ್‌ಲೋಡ್

ಶಬರಿ_ಪ್ರಶ್ನೋತ್ತರ(Notes)          Download      



************


10ನೇ ತರಗತಿ ಕನ್ನಡ ಗದ್ಯ-01-ಶಬರಿ-ವ್ಯಾಕರಣಾಂಶಗಳು

ದ್ವಿರುಕ್ತಿ 

ಈ ವಾಕ್ಯಗಳನ್ನು ಗಮನಿಸಿ : 
- ಮಕ್ಕಳು ಓಡಿಓಡಿ ದಣಿದರು. 
- ಈಗೀಗ ಅವಳು ಚೆನ್ನಾಗಿ ಓದುತ್ತಾಳೆ. 
- ದೊಡ್ಡ ದೊಡ್ಡ ಮರಗಳು ಬಿದ್ದವು. 

ಈ ವಾಕ್ಯಗಳಲ್ಲಿ ಓಡಿ, ಈಗ, ದೊಡ್ಡ ಎಂಬ ಪದಗಳು ಎರಡೆರಡು ಬಾರಿ ಪ್ರಯೋಗವಾಗಿರುವುದನ್ನು ಗಮನಿಸಬಹುದು; 

ಸೂತ್ರ :- "ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೋ, ಒಂದು ವಾಕ್ಯವನ್ನೋ, ಎರಡೆರಡು ಬಾರಿ ಪ್ರಯೋಗ ಮಾಡುವುದಕ್ಕೆ 'ದ್ವಿರುಕ್ತಿ' ಎನ್ನುತ್ತಾರೆ. 

ಇಂತಹ ಪದಗಳು ಬೇರೆ ಬೇರೆ ಅರ್ಥಗಳಲ್ಲಿ ಪ್ರಯೋಗಿಸಲ್ಪಡುತ್ತವೆ. 
ಉದಾ: 
ಉತ್ಸಾಹದಲ್ಲಿ - ಹೌದು ಹೌದು, ನಿಲ್ಲುನಿಲ್ಲು, ಬಂದೆಬಂದೆ. 
ಆಧಿಕ್ಯದಲ್ಲಿ - ದೊಡ್ಡದೊಡ್ಡ, ಹೆಚ್ಚುಹೆಚ್ಚು. 
ಪ್ರತಿಯೊಂದು - ಮನೆಮನೆಗಳಲ್ಲಿ, ಕೇರಿಕೇರಿಗಳನ್ನು. 
ಸಂಭ್ರಮದಲ್ಲಿ - ಅಗೋಅಗೋ, ಬನ್ನಿಬನ್ನಿ. 
ಆಶ್ಚರ್ಯದಲ್ಲಿ - ಅಬ್ಬಬ್ಬಾ, ಅಹಹಾ. 
ಆಕ್ಷೇಪದಲ್ಲಿ - ಬೇಡಬೇಡ, ನಡೆನಡೆ. 
ನಿ?ಧದಲ್ಲಿ - ಸಾಕುಸಾಕು 
ಒಪ್ಪಿಗೆಯಲ್ಲಿ - ಹೌದ್ಹೌದು, ಆಗಲಿ ಆಗಲಿ, ಇರಲಿ ಇರಲಿ. 
ಅವಸರದಲ್ಲಿ - ಓಡುಓಡು, ನಡೆನಡೆ. 
ಇವುಗಳಲ್ಲದೆ ಇನ್ನೂ ಕೆಲವು ವಿಶೇಷ ರೂಪಗಳು ಇವೆ. 
ಮೊದಲುಮೊದಲು - ಮೊತ್ತಮೊದಲು / ಮೊಟ್ಟಮೊದಲು 
ಕಡೆಗೆಕಡೆಗೆ - ಕಟ್ಟಕಡೆಗೆ / ಕಡೆಕಡೆಗೆ 
ನಡುವೆನಡುವೆ - ನಟ್ಟನಡುವೆ / ನಡುನಡುವೆ 
ಬಯಲುಬಯಲು - ಬಟ್ಟಬಯಲು 
ತುದಿತುದಿ - ತುತ್ತತುದಿ 
ಕೊನೆಗೆಕೊನೆಗೆ - ಕೊನೆಕೊನೆಗೆ 
ಮೆಲ್ಲನೆಮೆಲ್ಲನೆ - ಮೆಲ್ಲಮೆಲ್ಲನೆ 


ಜೋಡುನುಡಿ
ಮೇಲ್ನೋಟಕ್ಕೆ ದ್ವಿರುಕ್ತಿಗಳ ಹಾಗೆ ಕಂಡುಬರುವ ಕೆಲವು ಪದಗಳಿವೆ. ಆದರೆ ಅವುಗಳನ್ನು ದ್ವಿರುಕ್ತಿಗಳೆಂದು ಹೇಳುವ ವಾಡಿಕೆಯಿಲ್ಲ. ಅವುಗಳನ್ನು ಜೋಡುನುಡಿಗಳೆಂದು ಕರೆಯಲಾಗುತ್ತದೆ. ದ್ವಿರುಕ್ತಿಯಲ್ಲಿ ಒಂದೇ ಪದ ಎರಡು ಬಾರಿ ಬಂದರೆ, ಇಲ್ಲಿ ಬೇರೆ ಬೇರೆ ಪದಗಳು ಜೊತೆಯಾಗಿರುತ್ತವೆ. ಹೀಗೆ ಜೊತೆಯಾಗಿ ಬರುವ ಪದಗಳಲ್ಲಿ ಎರಡು ವಿಧದ ಪದಗಳಿರುತ್ತವೆ.

    ೧. ಎರಡೂ ಪದಗಳಿಗೆ ಬೇರೆ ಬೇರೆ ಅರ್ಥವಿರುತ್ತದೆ. 
    ೨. ಎರಡು ಪದಗಳಲ್ಲಿ ಮೊದಲ ಪದಕ್ಕೆ ನಿರ್ದಿಷ್ಟ ಅರ್ಥವಿದ್ದು, ಎರಡನೆಯ ಪದಕ್ಕೆ ಅರ್ಥವಿರುವುದಿಲ್ಲ.

* ಎರಡೂ ಪದಗಳಿಗೆ ಅರ್ಥವಿರುವಂತಹವು: ಸತಿಪತಿ, ಕೆನೆಮೊಸರು, ಹಾಲ್ಜೇನು, ಮಕ್ಕಳುಮರಿ ಇತ್ಯಾದಿ ಪದಗಳು. 
* ಮೊದಲ ಪದಕ್ಕೆ ಮಾತ್ರ ಅರ್ಥವಿರುವಂತಹವು : (ಪ್ರತಿಧ್ವನಿ ಶಬ್ದಗಳು/ಮಾತಿಗೊಂದು ಗೀತು) ಕಾಫಿಗೀಫಿ, ಹುಳಹುಪ್ಪಡಿ, ದೇವರುಗೀವರು, ಹಣಗಿಣ, ಪುಸ್ತಕಗಿಸ್ತಕ ಇತ್ಯಾದಿ.
*********







 

10ನೇ ತರಗತಿ ಕನ್ನಡ ಗದ್ಯ-01-ಶಬರಿ-ಭಾಷಾಭ್ಯಾಸ

 ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 
೧. ಕನ್ನಡ ಸಂಧಿಗಳನ್ನು ಹೆಸರಿಸಿ, ಎರಡೆರಡು ಉದಾಹರಣೆಗಳನ್ನು ಬರೆಯಿರಿ.
   ಕನ್ನಡ ಸಂಧಿಗಳು:  ಲೋಪಸಂಧಿ, ಆಗಮ ಸಂಧಿ, ಆದೇಶಸಂಧಿ
ಉದಾಹರಣೆಗಳು: -
   ಲೋಪ - ಊರೂರು, ಬಲ್ಲೆನೆಂದು, ಮಾತಂತು, ಸಂಪನ್ನರಾದ. 
   ಆಗಮ - ಕೈಯನ್ನು, ಮಳೆಯಿಂದ, ಶಾಲೆಯಲ್ಲಿ, ಮರವನ್ನು, ಮಗುವಿಗೆ. 
   ಆದೇಶ - ಮಳೆಗಾಲ, ಮೈದೋರು, ಬೆಂಬತ್ತು, ಕಡುವೆಳ್ಪು, ಮೆಲ್ವಾತು. 

೨. ಸಂಸ್ಕೃತ ಸಂಧಿಗಳ ಹೆಸರುಗಳನ್ನು ಸ್ವರ ಮತ್ತು ವ್ಯಂಜನ ಸಂಧಿಗಳಿಗಾಗಿ ವಿಂಗಡಿಸಿ ಬರೆಯಿರಿ. 
    ಸಂಸ್ಕೃತ ಸ್ವರ ಸಂಧಿಗಳು : ಸವರ್ಣದೀರ್ಘ ಸಂಧಿ, ಗುಣಸಂಧಿ, ವೃದ್ಧಿಸಂಧಿ, ಯಣ್‌ಸಂಧಿ
    ಸಂಸ್ಕೃತ ವ್ಯಂಜನ ಸಂಧಿಗಳು : ಜಶ್ತ್ವಸಂಧಿ, ಶ್ಚುತ್ವಸಂಧಿ, ಅನುನಾಸಿಕ ಸಂಧಿ

೩. ಕೊಟ್ಟಿರುವ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ. 
ಸುರಾಸುರ = ಸುರ + ಅಸುರ - ಸವರ್ಣಧೀರ್ಘಸಂಧಿ
ಬಲ್ಲೆನೆಂದು = ಬಲ್ಲೆನು + ಎಂದು - ಲೋಪಸಂಧಿ 
ಸೂರ್ಯೋದಯ = ಸೂರ್ಯ + ಉದಯ - ಗುಣಸಂಧಿ
ಮಳೆಗಾಲ = ಮಳೆ + ಕಾಲ - ಆದೇಶಸಂಧಿ
ಅಷ್ಟೈಶ್ವರ್ಯ = ಅಷ್ಟ + ಐಶ್ವರ್ಯ = ವೃದ್ಧಿಸಂಧಿ
ವೇದಿಯಲ್ಲಿ = ವೇದಿ + ಅಲ್ಲಿ - ಆಗಮಸಂಧಿ

ಆ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ. 
೧. ನಮೋ ನಮೋ : ದ್ವಿರುಕ್ತಿ : : ಧೀರ ಶೂರ : ಜೋಡುನುಡಿ 
೨. ಲೋಪ ಸಂಧಿ : ಸ್ವರ ಸಂಧಿ : : ಆದೇಶ ಸಂಧಿ : ವ್ಯಂಜನಸಂಧಿ
೩. ಕಟ್ಟಕಡೆಗೆ : ಕಡೆಗೆ ಕಡೆಗೆ : : ಮೊತ್ತಮೊದಲು : ದ್ವಿರುಕ್ತಿ 
೪. ಶರಚ್ಚಂದ್ರ : ಶ್ಚುತ್ವ ಸಂಧಿ : : ದಿಗಂತ : ಜಶ್ತ್ವಸಂಧಿ
 
ಇ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ. 
೧. ತಾಳಿದವನು ಬಾಳಿಯಾನು / ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ?
* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ಅತಿಯಾಗಿ ಕೋಪಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು. ಕೋಪ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.
* ಕೋಪಂ ಅನರ್ಥ ಸಾಧನಂ ಎಂಬ ಮಾತಿನಂತೆ ಕೋಪವು ಕೆಡುಕನ್ನು ಉಂಟುಮಾಡುತ್ತದೆ. ಕ್ಷಣಕಾಲ ಕೋಪದ ಕೈಗೆ ಬುದ್ಧಿ ಕೊಟ್ಟರೆ ಅದು ನಮ್ಮನ್ನು ಮಾತ್ರವಲ್ಲದೆ ಅದಕ್ಕೆ ಗುರಿಯಾದವರನ್ನೂ ಅಪಾಯಕ್ಕೆ ನೂಕುತ್ತದೆ. ’ಒಬ್ಬ ವ್ಯಕ್ತಿಯನ್ನು ನಾಶ ಪಡಸಬೇಕೆಂದರೆ ಆತನು ಕೋಪಗೊಳ್ಳಿವಂತೆ ಮಾಡಬೇಕು’ ಎಂಬ ಮಾತಿದೆ. ಕುಂಬಾರನು ಹಲವು ದಿನಗಳು ಶ್ರಮ ಪಟ್ಟು ತಯಾರಿಸಿದ ಮಡಕೆಯನ್ನು ಒಂದು ದೊಣ್ಣೆಯಿಂದ ನಾಶ ಮಾಡಿದಂತೆ, ಕ್ಷಣಿಕ ಕೋಪವು ಅನಾಹುತವನ್ನು ಉಂಟುಮಾಡುತ್ತದೆ. ಆದರೆ ಅದನ್ನು ಸರಿಪಡಿಸಲಾಗುತ್ತದೆಯೇ? ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದ ನಂತರ ಚಿಂತಿಸಿದರೆ ಮತ್ತೆ ಸರರಿಂiಗುತ್ತದೆಯೇ? ಆದ್ದರಿಂದ ’ತಾಳ್ಮೆಯಿಂದ ಆಲೋಚಿಸಿ, ಕೋಪವನ್ನು ಹಿಂದಿಕ್ಕಿ ಮುನ್ನಡೆದವರೇ ಜೀವನದಲ್ಲಿ ವಿಜಯಶಾಲಿಗಳಾಗಲು ಸಾಧ್ಯ.’ ಎಂಬುದು ಈ ಗಾದೆಯ ಆಶಯವಾಗಿದೆ.
 
೨. ಮನಸಿದ್ದರೆ ಮಾರ್ಗ. 
    ಯಾವುದೇ ಕೆಲಸ ಮಾಡುವಾಗ ಅದರ ಸಾಧನೆಗೆ ಎರಡು ಅ೦ಶಗಳು ಮುಖ್ಯ - ಒ೦ದು, ಕೆಲಸವನ್ನು ಮಾಡುವ ಸಾಮರ್ಥ್ಯ, ಇನ್ನೊಂದು ಮನಸ್ಸಿಟ್ಟು ಆ ಕೆಲಸ ಮಾಡಿ ಮುಗಿಸುವ ಪ್ರಯತ್ನ, ಸಾಮರ್ಥ್ಯ-ಪ್ರಯತ್ನಗಳು ಒಟ್ಟು ಸೇರಿದಾಗ ಕಾರ್ಯಸಾಧನೆ ಕಟ್ಟಿಟ್ಟ ಬುತ್ತಿ. ಸಾಮರ್ಥ್ಯಕ್ಷಮತೆಗಳಿದ್ದರೂ ಮನಸ್ಸು-ಪ್ರಯತ್ನಗಳಿರದಿದ್ದರೆ ಕೆಲಸ ಹೇಗೆ ಸಾಧ್ಯ ವಾದೀತು? ಒ೦ದು ಕೆಲಸ ಆಗದೇ ಇರುವುದಕ್ಕೆ ಸಾಮರ್ಥ್ಯ ಅಥವಾ, ಪ್ರಯತ್ನದ ಕೊರತೆಯೇ ಕಾರಣ. ಆದರೆ ಹೆಚ್ಚಾಗಿ ನೋಡಿದರೆ ಪ್ರಯತ್ನದ ಅಭಾವವೇ ಕಂಡುಬರುತ್ತದೆ. ನಮ್ಮ ಅನೇಕ ವಿದ್ಯಾರ್ಥಿಗಳು ಬುದ್ಧಿವ೦ತರಾಗಿದ್ದರೂ, ಮಸಸ್ಸಿಟ್ಟು ಪ್ರಯತ್ನಿಸದೇ ಇರುವುದರಿ೦ದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗುವುದಿಲ್ಲ. ಓದಬೇಕೆಂಬ ಹಠವಿದ್ದರೆ ಪುಸ್ತಕಗಳನ್ನು ಎಲ್ಲೆಲ್ಲಿಂದಲೋ ಒದಗಿಸಿಕೊ೦ಡು, ಓದಿ ಪಾಸಾಗಬಹುದು. ಹಲವು ವೇಳೆ ಎಲ್ಲ ಪುಸ್ತಕಗಳನ್ನು ಹೊಂದಿದ್ದರೂ, ಓದಲು ಮನಸ್ಸಿಲ್ಲದೇ ಅನುತ್ತೀರ್ಣಪಾಗುವವರೂ ಇದ್ದಾರೆ. 

    ಒ೦ದು ಸೂಕ್ತಿ ಇದೆ - 'ಹೊರಟರೆ ಇರುವೆಯೂ ನೂರು ಯೋಜನೆ ಹೋಗುತ್ತದೆ, ಹೊರಡದಿದ್ದರೆ ಗರುಡನೂ ಒ೦ದು ಹೆಜ್ಜೆ ಮು೦ದೆ ಹೋಗುವುದಿಲ್ಲ, ಇದ್ದಲ್ಲಿಯೇ ಇರುತ್ತಾನೆ. ಈ ಸೂಕ್ತಿಯು ಕಲಸ ಮಾಡುವುದರಲ್ಲಿ ಮನಸ್ಸಿನ ಪಾತ್ರವೇನು ಎ೦ಬುದನ್ನು ಹೇಳುತ್ತದೆ. 'ಮನಸ್ಸಿದ್ದರೆ ಮಹಾದೇವ' ಎನ್ನುವ ಗಾದೆಯೂ, ಇಂಗ್ಲಿಷಿನಲ್ಲಿ "Where there is a will there is a way" ಎಂಬ ಮಾತೂ ಇದೇ ಅರ್ಥವನ್ನು ನೀಡುತ್ತವೆ.
**********











10ನೇ ತರಗತಿ ಕನ್ನಡ ಗದ್ಯ-01-ಶಬರಿ-ಚಿತ್ರಗಳ ಸಂಗ್ರಹ

 ಶಬರಿ ಪಾಠಕ್ಕೆ ಪೂರಕವಾದ ಚಿತ್ರಗಳ ಸಂಗ್ರಹ













***********















10ನೇ ತರಗತಿ ಕನ್ನಡ ಗದ್ಯ-01-ಶಬರಿ-ಟಿಪ್ಪಣಿಗಳು

ಶಬರಿ ನಾಟಕದಲ್ಲಿರುವ ಹೆಚ್ಚುವರಿ ಟಿಪ್ಪಣಿಗಳು

ಶಬರಿ : ಶಬರನ ಮಗಳು, ಶಬರನ ಮಗಳಾದ್ದರಿಂದ 'ಶಬರಿ' ಎಂಬ ಹೆಸರಾಯಿತು. ಮತಂಗ ಋಷಿಯ ಶಿಷ್ಯೆ.


************

ಮತಂಗ : ಒಬ್ಬ ಬ್ರಹ್ಮರ್ಷಿ. ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ. ವಾಲಿಯು ದುಂದುಭಿಯೆಂಬ ರಕ್ಕಸನನ್ನು ಕೊಂದು ಮದೋನ್ಮತ್ತನಾಗಿ ಕಳೇಬರವನ್ನು ಆಶ್ರಮಕ್ಕೆ ಎಸೆದಾಗ ಋಷ್ಯಾಶ್ರಮವು ಕಲುಷಿತಗೊಂಡಿತು. ಇದರಿಂದ ಕ್ರುದ್ಧನಾದ ಮತಂಗಮುನಿಯು "ವಾಲಿಯು ಈ ಆಶ್ರಮವನ್ನು ಪ್ರವೇಶ ಮಾಡಿದರೆ ಸಾವು ಸಂಭವಿಸಲಿ” ಎಂದು ಶಪಿಸಿದನು. ವಾಲಿಯಿಂದ ಭಯಗ್ರಸ್ತನಾಗಿದ್ದ ಸುಗ್ರೀವನು ಇಲ್ಲಿ ನೆಲೆಸಿದ್ದನು. ಶಬರಿಯು ಮತಂಗರ ಆಶ್ರಮದಲ್ಲಿದ್ದಳು. 


*******

ಭೂಮಿಜಾತೆ : ಸೀತೆ, ಭೂಮಿಯ ಮಗಳು. ಜನಕ ಮಹಾರಾಜನು ಸಂತಾನ ಫಲಕ್ಕಾಗಿ ಪುತ್ರಕಾಮೇಷ್ಠಿ ಮಾಡಿ ಮಿಥಿಲೆಯಲ್ಲಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ ದೊರೆತ ಶಿಶುವೇ ಸೀತೆ. ಹೀಗಾಗಿ ಸೀತೆಗೆ 'ಭೂಮಿಜಾತೆ’ಯೆಂದು ಮತ್ತೊಂದು ಹೆಸರು. 


*********
ಚಿತ್ರಕೂಟ : ಒಂದು ಪರ್ವತ. ಉತ್ತರ ಭಾರತದ ಪಯೋಷ್ಣಿ ನದಿಯ ಪಕ್ಕದಲ್ಲಿದೆ. ಶ್ರೀರಾಮನು ಸೀತಾಲಕ್ಷ್ಮಣರೊಂದಿಗೆ ಅರಣ್ಯವಾಸಕ್ಕೆ ಹೊರಟಾಗ ಮೊತ್ತಮೊದಲು ಇಲ್ಲಿ ಆಶ್ರಮವನ್ನು ಕಟ್ಟಿಕೊಂಡನು. ಭರತನು ಶ್ರೀರಾಮನನ್ನು ಭೇಟಿಯಾಗಿ ಆತನ ಪಾದುಕೆಗಳನ್ನು ಇಲ್ಲಿ ಪಡೆದನು.
ಭರತನು ಪಾದುಕೆಗಳನ್ನು ಸ್ವೀಕರಿಸುತ್ತಿರುವುದು.
********

ದಶರಥ : ಅಯೋಧ್ಯೆಯ ಅರಸು. ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಈತನ ಮಕ್ಕಳು. ಕೌಸಲ್ಯೆ, ಸುಮಿತ್ರೆ, ಕೈಕೆ ಈತನ ಮಡದಿಯರು.

ರಾಮನು ಕಾಡಿಗೆ ತೆರಳಿದ ನಂತರ ದುಃಖಿತನಾಗಿರುವ ದಶರಥ
*********

ಸೌಮಿತ್ರಿ : ಲಕ್ಷ್ಮಣ, ದಶರಥನ ಎರಡನೆಯ ಮಡದಿಯಾದ ಸುಮಿತ್ರೆಯ ಮಗ ಲಕ್ಷ್ಮಣ. ಸುಮಿತ್ರೆಯ ಮಗನಾದುದರಿಂದ 'ಸೌಮಿತ್ರಿ' ಎಂದು ಈತನನ್ನು ಕರೆಯುತ್ತಾರೆ. 



****************

ದನು : ದಂಡಕಾರಣ್ಯದಲ್ಲಿ ವಾಸಮಾಡುತ್ತಿದ್ದ ಕಬಂಧ ಎಂಬ ಹೆಸರಿನ ರಾಕ್ಷಸ. ಹಿಂದಣ ಜನ್ಮದಲ್ಲಿ ವಿಶ್ವಾವಸು ಎಂಬ ಗಂಧರ್ವನಾಗಿದ್ದ. ಈತ ಸ್ಥೂಲಶಿರನೆಂಬ ಮುನಿಯನ್ನು ಅಪಮಾನಿಸಿದ್ದರಿಂದ ರಾಕ್ಷಸನಾಗಿ ಜನಿಸಿದ. ಒಮ್ಮೆ ಇಂದ್ರನ ವಜ್ರಾಯುಧದ ಪ್ರಹಾರದಿಂದ ಇವನ ಮುಖಕುಸಿದು ಹೊಟ್ಟೆಯೊಳಗೆ ಸೇರಿಕೊಂಡಿತು. ಹಾಗಾಗಿ ಈತನಿಗೆ ಉದರಮುಖ ಎಂಬ ಹೆಸರುಬಂತು. ರಾಮಲಕ್ಷ್ಮಣರಿಂದ ಈತನಿಗೆ ಶಾಪವಿಮೋಚನೆಯಾಯ್ತು. ಶಬರಿಯ ವೃತ್ತಾಂತವನ್ನು ರಾಮನಿಗೆ ತಿಳಿಸಿದ ಈತ ಸುಗ್ರೀವನಲ್ಲಿ ಸಖ್ಯಮಾಡಿ ಸೀತೆಯನ್ನು ಮರಳಿ ಪಡೆಯಬಹುದು ಎಂಬ ಸಲಹೆಯನ್ನು ನೀಡುತ್ತಾನೆ. 

ಕಬಂಧ ಅಥವಾ ಉದರಮುಖನೊಡನೆ ಯುದ್ಧ ಮಾಡುತ್ತಿರುವ ರಾಮ-ಲಕ್ಷ್ಮಣರು
*************
 ಜಟಿಲಕಬರಿ : ಜಟಿಲ-ಜಡೆಯಾಕಾರದ, ಕಬರಿ - ತುರುಬು = ಜಡೆಯಾಕಾರದ ತುರುಬುಳ್ಳವಳು - ಶಬರಿ. 

*****************************

ಮೇಳ : ನಾಟಕಗಳಲ್ಲಿ ಹಾಡುವುದಕ್ಕಾಗಿ ಇರುವ ಒಂದು ವರ್ಗ ಇವರು ರಂಗದಲ್ಲಿ ಕಾಣಿಸಿಕೊಂಡು ನಾಟಕದ ಸನ್ನಿವೇಶಕ್ಕೆ ತಕ್ಕಂತೆ ಹಾಡುತ್ತಾರೆ.

*******

ಬಲವಂದು : ಪ್ರದಕ್ಷಿಣಾಕಾರವಾಗಿ (ಎಡದಿಂದ ಬಲಕ್ಕೆ) ಸುತ್ತುಬಂದು ಎಂದರ್ಥ. ದೇವರಿಗೆ, ತುಳಸಿಕಟ್ಟೆಗೆ, ಕಾಮಧೇನು, ಕಲ್ಪವೃಕ್ಷಗಳಿಗೆ, ಹೋಮಕುಂಡ ಮುಂತಾದವುಗಳಿಗೆ ಸುತ್ತುವರಿಯುವಾಗ ಅವು ನಮ್ಮ ಬಲಭಾಗದಲ್ಲಿರುವಂತೆ ಸುತ್ತುವರಿಯುತ್ತಾರೆ. ಆಗ ಅದು ಪ್ರದಕ್ಷಿಣೆಯಾಗುತ್ತದೆ. ಸುತ್ತುವರಿಯಬೇಕಾದ ವಸ್ತುವನ್ನು ಎಡಭಾಗದಲ್ಲಿರುವಂತೆ ಸುತ್ತುವರಿದರೆ (ಎಡಬಂದು) ಅದು ಅಪ್ರದಕ್ಷಿಣೆಯಾಗುತ್ತದೆ. 


*************

ಪರ್ಣಶಾಲೆ : ಎಲೆಗಳಿಂದ ಮೇಲ್ಚಾವಣಿ ನಿರ್ಮಿಸಿರುವ ಕುಟೀರ. 


******************




ಚಿತ್ರ ಕೃಪೆ: ಗೂಗಲ್ ಚಿತ್ರಗಳು

*******ಕನ್ನಡ ದೀವಿಗೆ******