ನನ್ನ ಪುಟಗಳು

18 ಜನವರಿ 2015

10ನೇ ತರಗತಿ ಪದ್ಯಪಾಠ-7 ವೀರಲವ, ಚಟುವಟಿಕೆಗಳು ಮತ್ತು ಮಾನಕಗಳುಪದ್ಯಪಾಠ-7  ವೀರಲವ
ಚಟುವಟಿಕೆಗಳು:   1] ಪದ್ಯಭಾಗದಲ್ಲಿರುವ ರಾಮಾಯಣದ ಪಾತ್ರಗಳ ಪರಿಚಯಾತ್ಮಕ ಲೇಖನ ಬರೆಯುವುದು.
2] ವಿವಿಧ ಷಟ್ಪದಿಗಳ ತೂಗುಪಟ ತಯಾರಿಕೆ. (ಗುಂಪು ಚಟುವಟಿಕೆ)

ಮಾನಕಗಳು (ಪ್ರತಿ ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳಂತೆ ಒಟ್ಟು 15 ಅಂಕಗಳು)
1] ಪದ್ಯಭಾಗದಲ್ಲಿರುವ ರಾಮಾಯಣದ ಪಾತ್ರಗಳ ಪರಿಚಯಾತ್ಮಕ ಲೇಖನ ಬರೆಯುವುದು.
1) ರಾಮಾಯಣ ಮಹಾಕಾವ್ಯದ ಬಗ್ಗೆ ಅರಿವಿದೆಯೇ?
2) ಪದ್ಯಭಾಗದಲ್ಲಿ ಉಲ್ಲೇಖವಾಗಿರುವ ರಾಮಾಯಣದ ಪಾತ್ರಗಳನ್ನು ಗುರುತಿಸಲಾಗಿದೆಯೇ?
3) ಪಾತ್ರಗಳ ಗುಣವಿಶೇಷತೆಗಳನ್ನು ತಿಳಿಸಲಾಗಿದೆಯೇ?
4) ಪದ್ಯಭಾಗದಲ್ಲಿ ಕಂಡು ಬರುವ ಪ್ರಮುಖ ಪಾತ್ರದ ಬಗ್ಗೆ ವಿವರಿಸಲಾಗಿದೆಯೇ?
5) ಬರವಣಿಗೆ ವ್ಯಾಕರಣ ದೋಷವಿಲ್ಲದೆ ಸ್ಪಷ್ಟವಾಗಿದೆಯೇ?

2] ವಿವಿಧ ಷಟ್ಪದಿಗಳ ತೂಗುಪಟ ತಯಾರಿಕೆ. (ಗುಂಪು ಚಟುವಟಿಕೆ)
1) ವಿದ್ಯಾರ್ಥಿಗಳಿಗೆ ಛಂದಸ್ಸಿನ ಮೂಲ ಪರಿಕಲ್ಪನೆಗಳ ಅರಿವಿದೆಯೇ?
2) ವಿದ್ಯಾರ್ಥಿಗಳಿಗೆ ಷಟ್ಪದಿಯ ಸಾಮಾನ್ಯ ಲಕ್ಷಣಗಳ ಬಗ್ಗೆ ತಿಳಿದಿರುವುದೆ?
3) ಆರಿಸಿಕೊಂಡ ಷಟ್ಟದಿಯ ವಿಧದ ಲಕ್ಷಣಗಳನ್ನು ತೂಗುಪಟದಲ್ಲಿ ಬರೆಯಲಾಗಿದೆಯೇ?
4) ಉದಾಹರಣೆ ಪದ್ಯಕ್ಕೆ ಸೂಕ್ತವಾಗಿ ಪ್ರಸ್ಥಾರ ಹಾಕಿ ಗಣವಿಂಗಡಿಸಲಾಗಿದೆಯೇ?
5) ತೂಗುಪಟ ಅಂದವಾಗಿದ್ದು, ಆಕರ್ಷಣೀಯವಾಗಿದೆಯೇ?
ಕಾಮೆಂಟ್‌‌ ಪೋಸ್ಟ್‌ ಮಾಡಿ