ನನ್ನ ಪುಟಗಳು

18 ಜನವರಿ 2015

10ನೇ ತರಗತಿ ಪದ್ಯಪಾಠ-5 ಸಂಕಲ್ಪಗೀತೆ, ಚಟುವಟಿಕೆಗಳು ಮತ್ತು ಮಾನಕಗಳುಪದ್ಯಪಾಠ-5  ಸಂಕಲ್ಪಗೀತೆ
ಚಟುವಟಿಕೆಗಳು:   1] ಸಾಮಾಜಿಕ ಸ್ವಾಸ್ಥ್ಯದ ಬಗೆಗೆ ವಿದ್ಯಾರ್ಥಿಗಳಲ್ಲಿರುವ ಕಾಳಜಿ ವ್ಯಕ್ತಪಡಿಸುವ ಸರಳ ಕವನ ರಚನೆ.
2] ಜಿ.ಎಸ್.ಶಿವರುದ್ರಪ್ಪ ಅವರ ಭಾವಚಿತ್ರ-ಪರಿಚಯದೊಂದಿಗೆ ಕೃತಿಗಳನ್ನು ಪಟ್ಟಿಮಾಡುವುದು.
ಮಾನಕಗಳು (ಪ್ರತಿ ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳಂತೆ ಒಟ್ಟು 15 ಅಂಕಗಳು)
1] ಸಾಮಾಜಿಕ ಸ್ವಾಸ್ಥ್ಯದ ಬಗೆಗೆ ವಿದ್ಯಾರ್ಥಿಗಳಲ್ಲಿರುವ ಕಾಳಜಿ ವ್ಯಕ್ತಪಡಿಸುವ ಸರಳ ಕವನ ರಚನೆ.
1) ವಿದ್ಯಾರ್ಥಿಗೆ ಕವನ ರಚನೆಯ ಬಗ್ಗೆ ಉತ್ತಮ ಆಸಕ್ತಿ ಇದೆಯೇ?
2) ರಚನೆಯಲ್ಲಿ ಪರಿಣಾಮಕಾರಿಯಾದ ಪದಗಳನ್ನು ಬಳಸಲಾಗಿದೆಯೇ?
3) ಕವನದಲ್ಲಿ ಸಮಾಜದಲ್ಲಿರುವ ಕುಂದು-ಕೊರತೆಗಳ ಬಗ್ಗೆ ಕಾಳಜಿ ವ್ಯಕ್ತವಾಗಿದೆಯೇ?
4) ವಿಷಯ ಪ್ರತಿಪಾದನೆಯಲ್ಲಿ ನಿರಂತರತೆ ಇದೆಯೇ?
          5) ವ್ಯಾಕರಣ ದೋಷವಿಲ್ಲದೆ ಅಂದವಾಗಿ ಬರೆಯಲಾಗಿದೆಯೇ?


2] ಜಿ.ಎಸ್.ಶಿವರುದ್ರಪ್ಪ ಅವರ ಭಾವಚಿತ್ರ-ಪರಿಚಯದೊಂದಿಗೆ ಕೃತಿಗಳನ್ನು ಪಟ್ಟಿಮಾಡುವುದು.
1) ಜಿ.ಎಸ್.ಎಸ್. ಅವರ ಭಾವಚಿತ್ರ ಸಂಗ್ರಹಿಸಲಾಗಿದೆಯೇ?
2) ಕವಿಯ ಬಗ್ಗೆ ಪರಿಚಯಿಸಲಾಗಿದೆಯೇ?
3) ಕವಿಯ ಪ್ರಮುಖ ಕೃತಿಗಳಿಗೆ ದೊರೆತಿರುವ ಪ್ರಶಸ್ತಿ-ಪುರಸ್ಕಾರಗಳನ್ನು ಪಟ್ಟಿಮಾಡಲಾಗಿದೆಯೇ?
4) ವಿದ್ಯಾರ್ಥಿಯು ರಾಷ್ಟ್ರಕವಿಗಳ ಭಾವಚಿತ್ರಗಳನ್ನು ಗುರುತಿಸಬಲ್ಲನೆ?
5) ಚಟುವಟಿಕೆಯ ನಂತರ ಜಿ.ಎಸ್.ಎಸ್. ಅವರ ಪರಿಚಯವನ್ನು ಮೌಖಿಕವಾಗಿ ಹೇಳಬಲ್ಲನೇ?
ಕಾಮೆಂಟ್‌‌ ಪೋಸ್ಟ್‌ ಮಾಡಿ