ನನ್ನ ಪುಟಗಳು

18 ಜನವರಿ 2015

10ನೇ ತರಗತಿ ಪದ್ಯಪಾಠ-2 ಹಕ್ಕಿ ಹಾರುತಿದೆ ನೊಡಿದಿರಾ, ಚಟುವಟಿಕೆಗಳು ಮತ್ತು ಮಾನಕಗಳು



ಪದ್ಯಪಾಠ-2  ಹಕ್ಕಿ ಹಾರುತಿದೆ ನೊಡಿದಿರಾ
ಚಟುವಟಿಕೆಗಳು:             1] ಭಾವಗೀತೆಗಳನ್ನು ಸಂಗ್ರಹಿಸುವುದು.
2] ಭಾವಗೀತೆ ಗಾಯನ.
                                      3] ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರ ಪರಿಚಯ.
ಮಾನಕಗಳು (ಪ್ರತಿ ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳಂತೆ ಒಟ್ಟು 15 ಅಂಕಗಳು)
1] ಭಾವಗೀತೆಗಳನ್ನು ಸಂಗ್ರಹಿಸುವುದು.
1) ವಿದ್ಯಾರ್ಥಿಗೆ ಭಾವಗೀತೆಯ ಪರಿಕಲ್ಪನೆ ಇದೆಯೇ?
2) ಸಂಗ್ರಹಿಸಿದ ಗೀತೆಗಳು ಭಾವಗೀತೆಯ ಚೌಕಟ್ಟಿಗೆ ಒಳಪಡುತ್ತವೆಯೇ?
3) ವ್ಯಾಕರಣ ದೋಷವಿಲ್ಲದೆ ಅಂದವಾಗಿ ಬರೆಯಲಾಗಿದೆಯೇ?
4) ಸಂಗ್ರಹಿಸಿದ ಭಾವಗೀತೆಗಳ ಕರ್ತೃಗಳನ್ನು ಪರಿಚಯಿಸಲಾಗಿದೆಯೇ?
5) ಚಟುವಟಿಕೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗಿದೆಯೇ?

2] ಭಾವಗೀತೆ ಗಾಯನ.
1) ವಿದ್ಯಾರ್ಥಿಗೆ ಭಾವಗೀತೆಯ ಪರಿಕಲ್ಪನೆ ಇದೆಯೇ?
2) ಆರಿಸಿಕೊಂಡ ಭಾವಗೀತೆಯು ಸೂಕ್ತವಾಗಿದೆಯೇ?
3) ಗಾಯನದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಇದೆಯೇ?
4) ವಿದ್ಯಾರ್ಥಿಯು ಗೀತೆಯನ್ನು ಸ್ಪಷ್ಟವಾಗಿ ಮತ್ತು ನಿರರ್ಗಳವಾಗಿ ಹಾಡಿದನೇ?
5) ಗಾಯನವು ಭಾವಪೂರ್ಣವಾಗಿತ್ತೆ?

3] ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಕವಿ/ಸಾಹಿತಿಗಳ ಸಚಿತ್ರ ಮಾಹಿತಿ ಸಂಗ್ರಹ
1) ಮಾಹಿತಿ ಸಂಗ್ರಹ ಸಮರ್ಪಕವಾಗಿದೆಯೇ?
2) ಭಾವಚಿತ್ರಗಳು ಮೂಲ ವ್ಯಕ್ತಿಗಳಿಗೆ ತಾಳೆಯಾಗುವಂತೆ ಸ್ಪಷ್ಟವಾಗಿವೆಯೇ?
3) ಮಾಹಿತಿ ವಿವರಣೆಯಲ್ಲಿ ಕ್ರಮಬದ್ಧತೆ ಇದೆಯೇ?
4) ಬರವಣಿಗೆ ಸ್ಪಷ್ಟ, ಮತ್ತು ಅಂದವಾಗಿದೆಯೇ?
5) ವ್ಯಾಕರಣ ದೋಷರಹಿತವಾಗಿ ಬರೆಯಲಾಗಿದೆಯೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ