ನನ್ನ ಪುಟಗಳು

18 ಜನವರಿ 2015

10ನೇ ತರಗತಿ ಗದ್ಯಪಾಠ-4 ಧರ್ಮಸಮದೃಷ್ಟಿ, ಚಟುವಟಿಕೆಗಳು ಮತ್ತು ಮಾನಕಗಳು



ಗದ್ಯಪಾಠ-4  ಧರ್ಮಸಮದೃಷ್ಟಿ
ಚಟುವಟಿಕೆಗಳು:    1) ಸರಳ ಗದ್ಯಾನುವಾದ
                             2) ಚರ್ಚಾಸ್ಪರ್ಧೆ

ಮಾನಕಗಳು (ಪ್ರತಿ ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳು)
1] ಸರಳ ಗದ್ಯಾನುವಾದ
        1) ಬರವಣಿಗೆಯು ವ್ಯಾಕರಣ ದೋಷಮುಕ್ತವಾಗಿದ್ದು ಅಂದವಾಗಿದೆಯೇ?
          2) ಗದ್ಯಾನುವಾದವು ವಿಷಯಕ್ಕೆ ಪೂರಕವಾಗಿದೆಯೇ?
          3) ವಿದ್ಯಾರ್ಥಿಯು ಮೂಲಶಾಸನದ ಆಶಯಗಳನ್ನು ಅರ್ಥೈಸಿಕೊಂಡಿದ್ದಾನೆಯೇ?
          4) ಭಾಷಾಭಿವ್ಯಕ್ತಿಯು ಪರಿಣಾಮಕಾರಿಯಾಗಿದೆಯೇ?
          5) ಅನುವಾದದಲ್ಲಿ ವಿದ್ಯಾರ್ಥಿಯ ಸೃಜನಶೀಲತೆ ವ್ಯಕ್ತವಾಗಿದೆಯೇ?

2] ಚರ್ಚಾಸ್ಪರ್ಧೆ
          1) ಮಾತುಗಾರಿಕೆಯಲ್ಲಿ ಉಚ್ಚಾರಣಾ ಸ್ಪಷ್ಟತೆ, ನಿರರ್ಗಳತೆ ಇತ್ತೆ?
          2) ಚರ್ಚೆಯು ಆರಿಸಿಕೊಂಡ ವಿಷಯಕ್ಕೆ ಪೂರಕವಾಗಿತ್ತೇ?
          3) ವಿಷಯವನ್ನು ಸೂಕ್ತ ನಿದರ್ಶನದ ಮೂಲಕ ನಿರೂಪಿಸಲಾಯಿತೆ?
          4) ಚರ್ಚಿಸುವಾಗ ಸಂದರ್ಭೋಚಿತ ಆಂಗಿಕ ಭಾವಾಭಿನಯವಿತ್ತೆ?
          5) ವಿಷಯ ಮಂಡನೆ ಪ್ರೇಕ್ಷಕರನ್ನು ಆಕರ್ಷಿಸುವಂತಿತ್ತೆ?
ಕಾಮೆಂಟ್‌‌ ಪೋಸ್ಟ್‌ ಮಾಡಿ