ನನ್ನ ಪುಟಗಳು

18 ಜನವರಿ 2015

10ನೇ ತರಗತಿ ಪದ್ಯಪಾಠ-4 ವಚನ ಸೌರಭ, ಚಟುವಟಿಕೆಗಳು ಮತ್ತು ಮಾನಕಗಳುಪದ್ಯಪಾಠ-4  ವಚನ ಸೌರಭ
ಚಟುವಟಿಕೆಗಳು:             1] ವಚನಗಳನ್ನು ಸಂಗ್ರಹಿಸಿ ಭಾವಾರ್ಥ ಬರೆಯುವುದು.
2] ವಚನ ಗಾಯನ.

ಮಾನಕಗಳು (ಪ್ರತಿ ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳಂತೆ ಒಟ್ಟು 15 ಅಂಕಗಳು)
1] ವಚನಗಳನ್ನು ಸಂಗ್ರಹಿಸಿ ಭಾವಾರ್ಥ ಬರೆಯುವುದು.
1) ವಿದ್ಯಾರ್ಥಿಗೆ ವಚನ ಸಾಹಿತ್ಯ ಪ್ರಕಾರದ ಪರಿಕಲ್ಪನೆ ಇದೆಯೇ?
2) ಜನಪ್ರಿಯ ವಚನಕಾರರ ಪ್ರಸಿದ್ಧ ವಚನಗಳನ್ನು ಸಂಗ್ರಹಿಸಲಾಗಿದೆಯೇ?
3) ವ್ಯಾಕರಣ ದೋಷವಿಲ್ಲದೆ ಅಂದವಾಗಿ ಬರೆಯಲಾಗಿದೆಯೇ?
4) ಸಂಗ್ರಹಿಸಿದ ವಚನಗಳ ಕರ್ತೃವಿನ ಬಗ್ಗೆ ಪರಿಚಯಿಸಲಾಗಿದೆಯೇ?
5) ಸಂಗ್ರಹಿಸಿದ ವಚನಗಳ ಸಾರವನ್ನು ವ್ಯಕ್ತಡಿಸುವ ಸಾಮರ್ಥ್ಯವಿದೆಯೇ?

3] ವಚನ ಗಾಯನ. (ಸಾಮೂಹಿಕ ಚಟುವಟಿಕೆ)
1) ವಿದ್ಯಾರ್ಥಿಗಳಲ್ಲಿ ಗಾಯನ ಕೌಶಲ್ಯವಿದೆಯೇ?
2) ಆರಿಸಿಕೊಂಡ ವಚನವು ಗಾಯನಕ್ಕೆ ಸೂಕ್ತವಾಗಿದೆಯೇ?
3) ಗಾಯನದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಇದೆಯೇ?
4) ವಿದ್ಯಾರ್ಥಿಗಳು ವಚನವನ್ನು ಸ್ಪಷ್ಟವಾಗಿ ಮತ್ತು ನಿರರ್ಗಳವಾಗಿ ಹಾಡಿದರೇ?
5) ವಿದ್ಯಾರ್ಥಿಗಳು ಗುಂಪಿನಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಮಾನತೆಯಿಂದ ಹಾಡಿದರೇ?
ಕಾಮೆಂಟ್‌‌ ಪೋಸ್ಟ್‌ ಮಾಡಿ