ನನ್ನ ಪುಟಗಳು

18 ಜನವರಿ 2015

10ನೇ ತರಗತಿ ಪದ್ಯಪಾಠ-3 ಹಲಗಲಿ ಬೇಡರು, ಚಟುವಟಿಕೆಗಳು ಮತ್ತು ಮಾನಕಗಳು

ಪದ್ಯಪಾಠ-3  ಹಲಗಲಿ ಬೇಡರು
ಚಟುವಟಿಕೆಗಳು:             1] ಜನಪದಗೀತೆಗಳನ್ನು ಸಂಗ್ರಹಿಸುವುದು.
2] ಜನಪದ ಸಾಹಿತ್ಯ ಪ್ರಕಾರಗಳನ್ನು ಪಟ್ಟಿಮಾಡಿ ಪರಿಚಯಿಸುವುದು.
                                      3] ಜನಪದಗೀತೆಗಳ ಗಾಯನಮಾಡಿಸುವುದು.
ಮಾನಕಗಳು (ಪ್ರತಿ ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳಂತೆ ಒಟ್ಟು 15 ಅಂಕಗಳು)
1] ಜನಪದಗೀತೆಗಳನ್ನು ಸಂಗ್ರಹಿಸುವುದು.
1) ವಿದ್ಯಾರ್ಥಿಗೆ ಜನಪದಗೀತೆಯ ಪರಿಕಲ್ಪನೆ ಇದೆಯೇ?
2) ಸಂಗ್ರಹಿಸಿದ ಗೀತೆಗಳು ಜನಪದಗೀತೆಯ ಚೌಕಟ್ಟಿಗೆ ಒಳಪಡುತ್ತವೆಯೇ?
3) ವ್ಯಾಕರಣ ದೋಷವಿಲ್ಲದೆ ಅಂದವಾಗಿ ಬರೆಯಲಾಗಿದೆಯೇ?
4) ಸಂಗ್ರಹಿಸಿದ ಜನಪದಗೀತೆಯ ಸಾಹಿತ್ಯ ಪ್ರಕಾರವನ್ನು ಪರಿಚಯಿಸಲಾಗಿದೆಯೇ?
5) ಚಟುವಟಿಕೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗಿದೆಯೇ?

2] ಜನಪದ ಸಾಹಿತ್ಯ ಪ್ರಕಾರಗಳನ್ನು ಪಟ್ಟಿಮಾಡಿ ಪರಿಚಯಿಸುವುದು.
1) ವಿದ್ಯಾರ್ಥಿಗೆ ಜನಪದಗೀತೆಯ ಪರಿಕಲ್ಪನೆ ಇದೆಯೇ?
2) ಜನಪದ ಗೀತೆಯ ಪ್ರಕಾರಗಳನ್ನು ಪಟ್ಟಿ ಮಾಡಲಾಗಿದೆಯೇ?
3) ವ್ಯಾಕರಣ ದೋಷವಿಲ್ಲದೆ ಅಂದವಾಗಿ ಬರೆಯಲಾಗಿದೆಯೇ?
4) ಜನಪದಗೀತೆಯ ಸಾಹಿತ್ಯ ಪ್ರಕಾರಗಳ ಪ್ರಾದೇಶಿಕ ಮಹತ್ವವನ್ನು ತಿಳಿಸಲಾಗಿದೆಯೇ?
5) ಚಟುವಟಿಕೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗಿದೆಯೇ?

3] ಜನಪದಗೀತೆಗಳ ಗಾಯನ ಮಾಡಿಸುವುದು.
1) ವಿದ್ಯಾರ್ಥಿಗೆ ಜನಪದಗೀತೆಯ ಪರಿಕಲ್ಪನೆ ಇದೆಯೇ?
2) ಆರಿಸಿಕೊಂಡ ಜನಪದಗೀತೆಯು ಸೂಕ್ತವಾಗಿದೆಯೇ?
3) ಗಾಯನದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಇದೆಯೇ?
4) ವಿದ್ಯಾರ್ಥಿಯು ಗೀತೆಯನ್ನು ಸ್ಪಷ್ಟವಾಗಿ ಮತ್ತು ನಿರರ್ಗಳವಾಗಿ ಹಾಡಿದನೇ?
5) ಗಾಯನವು ಗ್ರಾಮೀಣ ಸೊಗಡನ್ನು ಬಿಂಬಿಸುವಂತಿತ್ತೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ