ನನ್ನ ಪುಟಗಳು

18 ಜನವರಿ 2015

10ನೇ ತರಗತಿ ಪದ್ಯಪಾಠ-6 ಕೌರವೇಂದ್ರನ ಕೊಂದೆ ನೀನು, ಚಟುವಟಿಕೆಗಳು ಮತ್ತು ಮಾನಕಗಳುಪದ್ಯಪಾಠ-6  ಕೌರವೇಂದ್ರನ ಕೊಂದೆ ನೀನು
ಚಟುವಟಿಕೆಗಳು:  1] ಷಟ್ಪದಿಯ-ಭಾಮಿನಿ ಷಟ್ಪದಿಯ ಲಕ್ಷಣಗಳೊಂದಿಗೆ ಪ್ರಸ್ಥಾರ ಹಾಕಿ ಗಣವಿಂಗಡನೆ ಮಾಡುವುದು.
                           2] ನಡುಗನ್ನಡ ಪದ್ಯವನ್ನು ಪದವಿಂಗಡಿಸಿ ಓದುವುದು.
 
ಮಾನಕಗಳು (ಪ್ರತಿ ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳಂತೆ ಒಟ್ಟು 15 ಅಂಕಗಳು)
1] ಷಟ್ಪದಿಯ-ಭಾಮಿನಿ ಷಟ್ಪದಿಯ ಲಕ್ಷಣಗಳೊಂದಿಗೆ ಪ್ರಸ್ಥಾರ ಹಾಕಿ ಗಣವಿಂಗಡನೆ ಮಾಡುವುದು.
1) ಷಟ್ಪದಿಯ ಸಾಮಾನ್ಯ ಲಕ್ಷಣ-ವಿಧಗಳನ್ನು ತಿಳಿಸಲಾಗಿದೆಯೇ?
2) ಭಾಮಿನಿ ಷಟ್ಪದಿಯ ಲಕ್ಷಣಗಳನ್ನು ತಿಳಿಸಲಾಗಿದೆಯೇ?
3) ಪದ್ಯಭಾಗಗಳನ್ನು ತಪ್ಪಿಲ್ಲದೆ ಅಂದವಾಗಿ ಬರೆಯಲಾಗಿದೆಯೇ?
4) ಛಂದೋ ಪ್ರಕಾರಕ್ಕೆ ಅನುಗುಣವಾಗಿ ಪ್ರಸ್ತಾರ ಹಾಕಿ ಗಣ ವಿಂಗಡಿಸಲಾಗಿದೆಯೇ?
5) ಚಟುವಟಿಕೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗಿದೆಯೇ?

2] ನಡುಗನ್ನಡ ಪದ್ಯವನ್ನು ಪದವಿಂಗಡಿಸಿ ಓದುವುದು.
1) ಅರ್ಥವತ್ತಾಗಿ ಪದವಿಂಗಡಿಸಿ ಓದಲಾಯಿತೆ?
2) ಧ್ವನಿ ಮತ್ತು ಉಚ್ಚಾರಣೆ ಸ್ಪಷ್ಟವಾಗಿತ್ತೆ?
3) ಸೂಕ್ತ ಸ್ಥಳಗಳಲ್ಲಿ ನಿಲುಗಡೆಯನ್ನು ಅನುಸರಿಸಲಾಯಿತೆ?
4) ವಾಚನ ಸ್ವರಭಾರ ಏರಿಳಿತವನ್ನು ಒಳಗೊಂಡಿತ್ತೆ?
5) ಓದುವಿಕೆ ಕೇಳುಗರಿಗೆ ಹಿತವಾಗುವಂತಿತ್ತೆ?
ಕಾಮೆಂಟ್‌‌ ಪೋಸ್ಟ್‌ ಮಾಡಿ