ನನ್ನ ಪುಟಗಳು

13 ಅಕ್ಟೋಬರ್ 2015

೨೯) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ದ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ದ)
೧೫೮೮. ದಕ್ಕಗೊಡದಿರು = ವಶಮಾಡದಿರು, ಸಿಕ್ಕದಂತೆ ಮಾಡು
(ದಕ್ಕು < ತಕ್ಕು(ತ) = ಸಿಕ್ಕು, ಅರಗು)
ಪ್ರ : ಅವನು ಲಪಟಾಯಿಸಬೇಕು ಅಂತ ಏನೇ ಪ್ರಯತ್ನ ಮಾಡಿದರೂ, ಇವರು ದಕ್ಕಗೊಡಲಿಲ್ಲ.
೧೫೮೯. ದಕ್ಕಿಸಿಕೊಳ್ಳು = ಜಯಿಸಿಕೊಳ್ಳು, ಅರಗಿಸಿಕೊಳ್ಳು
ಪ್ರ : ನಾನು ಇದನ್ನು ದಕ್ಕಿಸಿಕೊಳ್ತೇನೆ, ಯಾರಿಗೂ ಒಂದು ಕೂದಲೆಳೆಯಷ್ಟನ್ನೂ ಸಿಕ್ಕಿಸುವುದಿಲ್ಲ.
೧೫೯೦. ದಕ್ಕು ನುಂಗು = ಕಕ್ಕಬೇಕಾದ ಅವಿವೇಕ ಮಾಡು
(ದಕ್ಕು = ರೇಕು, ಗೂಟ)
ಪ್ರ : ಗಾದೆ – ದಕ್ಕು ನುಂಗಿದೋರು ಕಕ್ಕಲೇಬೇಕು
ದಕ್ಕಿಸಿಕೊಳ್ಳೋಕೆ ಆಗಲ್ಲ
೧೫೯೧. ದಕ್ಷಿಣೆ ಕೊಡು = ಮಾಮೂಲು ಕೊಡು, ಲಂಚ ಕೊಡು
ಪ್ರ : ಗಾದೆ – ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ
ದಕ್ಷಿಣೆ ಹಾಕಿದರೇ ತೀರ್ಥ ಸಿಗೋದು
೧೫೯೨. ದಗಾಹಾಕು = ಮೋಸಮಾಡು
ಪ್ರ: ಅಚ್ಚೇರುಠಕ್ಕಸೇರುಠಕ್ಕನಿಗೆದಗಾಹಾಕಿದ.
೧೫೯೩. ದಟ್ಟವಿರು = ದೇಹವಿರು (ದಟ್ಟ = ದೇಹ)
ಪ್ರ: ಈದಟ್ಟಇರೋವರೆಗೂಬೆಟ್ಟಗಳಜಾಗಬಿಟ್ಟುಕೊಡಲ್ಲ.
೧೫೯೪. ದಟ್ಟಿಸಿಕೇಳು = ಹೆದರಿಸಿಬೆದರಿಸಿಕೇಳು (ದಟ್ಟಿಸು = ಗದರಿಸಿ, ಬೆದರಿಸು)
ಪ್ರ: ದಟ್ಟಿಸಿಕೇಳಿದಾಗದಟ್ಟಬಿಚ್ಚೆಸೆಡದುನಿಂತುಕೊಂಡ.
೧೫೯೫. ದಡಕಡಿದುಮೇಲೆಳೆದುಕೊಳ್ಳು = ಅವಿವೇಕಮಾಡಿಕೊಳ್ಳು (ದಡ = ಗುಡಿಯ, ಬಾವಿಯ, ತೊರೆಯಅಂದಚು, ತೀರ)
ಪ್ರ: ಕೆರಕಡಿಯೋನಿಗೆನೆರವಾಗಿದ್ದು, ದಡಕಡಿದುಮೇಲೆಳೆದುಕೊಂಡಂತಾಯ್ತು.
೧೫೯೬. ದಡಕಾಣಿಸು = ಗುರಿಮುಟ್ಟಿಸು, ಕಷ್ಟದಿಂದಪಾರುಮಾಡು.
ಪ್ರ: ಆಹುಡುಗಿಗೆಮದುವೆಮಾಡಿಒಂದುದಡಕಾಣಿಸಿಬಿಟ್ರೆ, ನನ್ನಜವಾಬ್ದಾರಿಮುಗೀತು.
೧೫೯೭. ದಡಗರಿ = ದಡದಡನೆಹಾರಾಡು, ಅಸಮಾಧಾನದಿಂದಆವುಟಮಾಡು.
ಪ್ರ: ಅವಳುದಡಗರಿದುಬಿಟ್ರೆ, ಇಲ್ಲಿನಡುಗೋರುಯಾರೂಇಲ್ಲ.
೧೫೯೮. ದಡರಬಡರಎನ್ನು = ಸಿಟ್ಟಿನಿಂದಎಗರಾಡು (ದಡರಬಡರ < ದಡಾರ್ಬಡಾರ್ = ಗುಡುಗುಸಿಡಿಲಿನಸದ್ದು)
ಪ್ರ: ದಡರಬಡರಅನ್ನೋಹೆಂಡ್ರುಕಟ್ಕೊಂಡುಉಂಡದ್ದುಊಟಅಲ್ಲ, ಕೊಂಡದ್ದುಕೂಟಅಲ್ಲ.
೧೫೯೯. ದತ್ತೂರಿಬೀಜಅರೆ = ಕೆಡಕುಬಗೆ.
(ಅರೆ = ನುಣ್ಣಗೆಪುಡಿಮಾಡು, ಗುಂಡುಕಲ್ಲಿನಿಂದಜಜ್ಜಿ, ಉಜ್ಜಿಧೂಳುಮಾಡು) ದತ್ತೂರಿಗಿಡದಬೀಜವಿಷವೆಂದುನಂಬಿಕೆ. ಕೈಮದ್ದುಹಾಕುವವರುಅದನ್ನುಬಳಸುತ್ತಾರೆಎಂಬಪ್ರತೀತಿಉಂಟು.
ಪ್ರ: ದುರ್ಬೀಜದನನ್ಮಗನನಗೇದತ್ತೂರಿಬೀಜವನ್ನುಅರೆದ.
೧೬೦೦. ದದ್ದನ್ನಕಟ್ಟಿಕೊಳ್ಳು = ದಡ್ಡನನ್ನುಮದುವೆಯಾಗು. (ದದ್ದ = ಮೊದ್ದು, ದಡ್ಡ)
ಪ್ರ: ದದ್ದನ್ನಕಟ್ಟಿಕೊಂಡ್ರೂದರ್ದುಅನುಭವಿಸಲಿಲ್ಲ.
೧೬೦೧. ದದ್ದಾಗು = ಬಿರುಕುಂಟಾಗು, ಸೀಳುಬಿಡು (ದದ್ದು = ಬಿರುಕು, ಸೀಳು)
ಪ್ರ: ಗಾದೆ – ದದ್ದುಮಡಕೇಲಿನೀರುನಿಲ್ಲಲ್ಲದದ್ದುಗೈಯಲ್ಲಿದುಡ್ಡುನಿಲ್ಲಲ್ಲ
೧೬೦೨. ದದ್ದರಿಸಿಕೊಳ್ಳು = ಊದಿಕೊಳ್ಳು (ದದ್ದರ = ಊತ)
ಪ್ರ: ಏಕೋಮುಖವೆಲ್ಲದದ್ದರಿಸಿಕೊಂಡಿದೆ.
೧೬೦೩. ದನಕಾಯೋಕೆಹೋಗು = ಬುದ್ಧಿಇಲ್ಲಎಂದುಹೀಗಳೆ.
ಶ್ರೇಣೀಕೃತಸಮಾಜದಲ್ಲಿಒಂದುವೃತ್ತಿಶ್ರೇಷ್ಠಮತ್ತೊಂದುವೃತ್ತಿಕನಿಷ್ಠಎಂದುತಾರತಮ್ಯಮಾಡಿಹೀಗಳೆಯುತ್ತಿದ್ದಪ್ರವೃತ್ತಿಗೆಪ್ರತೀಕವಾಗಿದೆಈನುಡಿಗಟ್ಟು. ಆದರೆಬಸವಣ್ಣನವರು, ಕನಕದಾಸರುಯಾವವೃತ್ತಿಯೂಮೇಲಲ್ಲಯಾವವೃತ್ತಿಯೂಕೀಳಲ್ಲಎಂಬುದನ್ನುಎತ್ತಿಹಿಡಿದರು.
ಪ್ರ: ನಿನಗೆಯಾಕೆಓದು, ದನಕಾಯೋಕೆಹೋಗುಎಂದರುಮೇಷ್ಟ್ರು.
೧೬೦೪. ದನಬರೋಹೊತ್ತಾಗು = ಸಂಜೆಯಾಗು
ಗಡಿಯಾರಬರುವಮುನ್ನಗ್ರಾಮೀಣರುಹೊತ್ತನ್ನುಸೂಚಿಸುವತಮ್ಮದೇಆದಪರಿಭಾಷೆಯನ್ನುರೂಢಿಸಿಕೊಂಡಿದ್ದರು. ಮೇದದನಮನೆಗೆಬರುವುದುಸಂಜೆಗೆ. ಆದ್ದರಿಂದಸಂಜೆಎಂದುಸೂಚಿಸದೆನಿಖರವಾಗಿಇಂಥಹೊತ್ತುಎಂದುಸೂಚಿಸಲಾಗಿದೆ.
ಪ್ರ: ಮನೆಗೆದನಬರೋಹೊತ್ತಾಯ್ತು, ಕೊಟ್ಟಿಗೆಬಾಗಿಲುತೆಗಿ
೧೬೦೫. ದನಿಇಕ್ಕು = ಶೃತಿಇಕ್ಕು, ಒಬ್ಬರುಹೇಳಿದಸೋಬಾನೆಹಾಡಿನಸಾಲನ್ನುಹಿಮ್ಮೇಳದಹೆಂಗಸರುಮತ್ತೆದನಿಯೆತ್ತಿಹಾಡುವಪದ್ಧತಿ.
ಪ್ರ : ನಾನೇನೋಸೋಬಾನೆಪದಹಾಡ್ತೀನಿ, ದನಿಇಕ್ಕೋರುಬೇಕಲ್ಲ.
೧೬೦೬. ದಪ್ಪಚರ್ಮವಾಗಿರು = ಮಂದಬುದ್ಧಿಯಾಗಿರು, ಸೂಕ್ಷ್ಮತೆಇಲ್ಲದಿರು.
ಪ್ರ : ದಪ್ಪ ಚರ್ಮದೋರಿಗೆ ಸನ್ನೆಗಿನ್ನೆ ಸಲಕ್ಕೆ ಬರಲ್ಲ.
೧೬೦೭. ದಬಾ ದುಬಿಯಾಗು = ದೊಂಬಿಯಾಗು, ಗಲಾಟೆಯಾಗು
(ದಬಾದುಬಿ < ದಬ್ + ದುಬ್ = ಏಟಿನ ಸದ್ದು)
ಪ್ರ : ಒಬ್ಬರಿಗೊಬ್ಬರು ತಿರುಗಿ ಬಿದ್ದು, ಸಭೆ ದಬಾದುಬೀಲಿ ಮುಗಿದು ಹೋಯ್ತು
೧೬೦೮. ದಬಾವಣೆ ಮಾಡು = ಬಾಯ್ಮಾಡು, ಮೇಲೆ ಬೀಳು, ಜೋರು ಮಾಡು
ಪ್ರ : ದಬಾವಣೆ ಮಾಡಿ ಅದು ನಂದು ಅಂತ ಎತ್ಕೊಂಡು ಹೋಗೇ ಬಿಟ್ಟ.
೧೬೦೯. ದಬ್ಬಾಕು = ಕೆಲಸ ಮಾಡು, ತಿರುವಿ ಹಾಕು
(ದಬ್ಬಾಕು < ದಬ್ಬ + ಹಾಕು = ಬೋರಲು ಹಾಕು, ತಿರುವಿ ಹಾಕು)
ಪ್ರ : ಬೆಳಗ್ಗೆಯಿಂದ ನೀನು ದಬ್ಬಾಕಿರೋದು ಇಷ್ಟೇ ತಾನೆ? ಯಾರ ಕಣ್ಣಿಗೆ ಮಣ್ಣೆರಚುತ್ತೀಯ?
೧೬೧೦. ದಮ್ಮಯ್ಯ ಅನ್ನು = ಗೋಗರೆ, ಬೇಡಿಕೊಳ್ಳು
(ದಮ್ಮಯ್ಯ < ಧರ್ಮ + ಅಯ್ಯ)
ಪ್ರ : ದಮ್ಮಯ್ಯ ಅಂದ್ರೂ ಬಿಡಲಿಲ್ಲ ಗಿಮ್ಮಯ್ಯ ಅಂದ್ರೂ ಬಿಡಲಿಲ್ಲ, ಕುಮ್ಮರಿಸಿಬಿಟ್ಟ.
೧೬೧೧. ದಮ್ಮಯ್ಯ ಗುಡ್ಡೆ ಹಾಕು = ದೈನ್ಯದಿಂದ ಬಗೆ ಬಗೆ-ಯಾ-ಗಿ ಮ-ತ್ತೆ ಮತ್ತೆ ಬೇಡಿಕೊಳ್ಳು
(ಗುಡ್ಡೆ = ರಾಶಿ)
ಪ್ರ : ಅವನು ಎಷ್ಟು ದಮ್ಮಯ್ಯ ಗುಡ್ಡೆ ಹಾಕಿದರೂ, ನಾನು ಜುಂ ಎನ್ನಲಿಲ್ಲ, ಜಪ್ಪಯ್ಯ ಅನ್ನಲಿಲ್ಲ.
೧೬೧೨. ದಮ್ಮಸ್ಸು ಮಾಡು = ಸಮ ಮಾಡು, ಸಮತಟ್ಟು ಮಾಡು
ಪ್ರ : ದಮ್ಮಸ್ಸು ಮಾಡೋ ಅಷ್ಟರಲ್ಲಿ ಅಣ್ಣನ ಹುಮ್ಮಸ್ಸೆಲ್ಲ ಇಳಿದು ಹೋಯ್ತು
೧೬೧೩. ದಮ್ಮಿರು = ಶಕ್ತಿ ಇರು, ಸಾಮರ್ಥ್ಯವಿರು
(ದಮ್ಮು = ಉಸಿರು, ಶಕ್ತಿ)
ಪ್ರ : ನಿನಗೆ ದಮ್ಮಿದ್ರೆ ನನ್ನ ಮೇಲೆ ಕೈಮಾಡು
೧೬೧೪. ದಮ್ಮು ಕಟ್ಟಿ ತಿಣುಕು = ಉಸಿರು ಕಟ್ಟಿ ಪ್ರಯತ್ನಿಸು
ಪ್ರ : ನೀನು ಎಷ್ಟೇ ದಮ್ಮು ಕಟ್ಟಿ ತಿಣುಕಿದ್ರೂ, ಆ ಚಪ್ಪಡೀನ ಮಿಣಗೋಕೆ ಆಗೋದಿಲ್ಲ.
೧೬೧೫. ದಮ್ಮು ಬರು = ಏದುಸಿರು ಬರು, ಉಸಿರಾಟಕ್ಕೆ ತೊಂದರೆಯಾಗು
ಪ್ರ : ಬೀಡಿ ಸೇದಿ ಸೇದಿ, ದಮ್ಮು ಬಂದು ಗೊರ್ರ‍ಗೊರ್ರಾ‍ತೊಯ್ಯ ತೊಯ್ಯಾ ಅಂತಾನೆ
೧೬೧೬. ದಯ ಮಾಡಿ = ಬನ್ನಿ, ಆಗಮಿಸಿ.
ಗುರುಹಿರಿಯರಿಗೆ ಬನ್ನಿ ಎನ್ನದೆ ದಯಮಾಡಿ ಎಂದು ಹೇಳುವ ಪದ್ಧತಿ ಸಮಾಜದಲ್ಲಿ ಬೆಳೆದು ಬಂದಿದೆ. ಅದರ ಪ್ರತೀಕ ಈ ನುಡಿಗಟ್ಟು.
ಪ್ರ : ನಿಮ್ಮಂಥ ದೊಡ್ಡೋರು ಬಡವನ ಮನೆಗೆ ದಯಮಾಡಿದ್ರಲ್ಲ, ಅಷ್ಟೆ ಸಾಕು.
೧೬೧೭. ದಯಮಾಡಿಸಿ = ಹೊರಡಿ, ನಿರ್ಗಮಿಸಿ.
ದೊಡ್ಡವರಿಗೆ ಕೊಡುವ ಗೌರವದ ಬೀಳ್ಕೊಡಗೆಯ ರೀತಿಯಲ್ಲಿ ಕೆಟ್ಟವರನ್ನು ಅಹಂಕಾರಿಗಳನ್ನು ಮನೆಯಿಂದ ಹೊರಗೆ ಕಳಿಸುವಾಗ ಬಳಸುವ ಈ ನುಡಿಗಟ್ಟಿನಲ್ಲಿ ವ್ಯಂಗ್ಯವಿದೆ, ಕಟಕಿ ಇದೆ.
ಪ್ರ : ತಾವು ತುಂಬಾ ದೊಡ್ಡವರು, ಇಲ್ಲಿಂದ ತಾವು ದಯಮಾಡಿಸಿ ಮೊದಲು.
೧೬೧೮. ದರ್ದಿರು = ಅಗತ್ಯವಿರು, ತೊಂದರೆ ಇರು
(ದರ್ದು = ತೊಂದರೆ, ನೋವು)
ಪ್ರ : ಗಾದೆ – ದರ್ದಿದ್ದೋನಿಗೆ ಧಾರಣೆ ಕಡಮೆ.
೧೬೧೯. ದರ್ಬಾರು ನಡೆಸು = ಆಡಳಿತ ನಡೆಸು, ಧಿಮಾಕು ಮಾಡು
(ದರ್ಬಾರು = ಸಿಂಹಾಸನವೇರಿದ ರಾಜ ನಡೆಸುವ ಸಭೆ, ಸಮಾರಂಭ)
ಪ್ರ : ಎಷ್ಟು ದಿನ ದರ್ಬಾರು ನಡೆಸ್ತಾನೋ ನಡೆಸಲಿ, ನಾನೂ ನೋಡ್ತೀನಿ.
೧೬೨೦. ದರವೇಸಿ ಕೆಲಸ ಮಾಡು = ಅಯೋಗ್ಯ ಕೆಲಸ ಮಾಡು, ತಿರುಪೆ ಬೇಡು
(ದರವೇಸಿ < ದರವೇಷ್ = ಮನೆಮನೆಯ ಬಾಗಿಲುಗಳಿಗೆ (ದ್ವಾರ) ಬಂದು ಬೇಡುವ ಮುಸ್ಲಿಂ ಜನಾಂಗದ ಸಂನ್ಯಾಸಿಗಳು.)
ಪ್ರ : ನೀನಿಂಥ ದರವೇಸಿ ಕೆಲಸ ಮಾಡಬಾರ್ದಾಗಿತ್ತು. ನನ್ನನ್ನಾದ್ರೂ ಒಂದು ಮಾತು ಕೇಳಬಾರ್ದಿತ್ತ?
೧೬೨೧. ದವಡೆ ಗಿಟಕಾಯಿಸಿಕೊಳ್ಳು = ದುಃಖ ಆವರಿಸು, ಆಳು ಉಮ್ಮಳಿಸು
(ದವಡೆ = ಮೆಲುಕು; ಗಿಟಕಾಯಿಸಿಕೊಳ್ಳು = ಬೆಸೆದುಕೊಳ್ಳು)
ಪ್ರ : ಅವ್ವನ ಸಾವಿನಿಂದ ಕಣ್ಣು ಕೋಡಿ ಬಿದ್ದು, ದವಡೆ ಗಿಟಕಾಯಿಸಿಕೊಂಡವು
೧೬೨೨. ದವಡೆ ಹಲ್ಲುದುರಿಸು = ದಂಡಿಸು, ಬುದ್ಧಿಗಲಿಸು.
ಪ್ರ : ಮೋಣು ಮೆಡ್ಡು ಅಂದಾಗ ದವಡೆ ಹಲ್ಲುದುರಿಸಿ ಕಳಿಸಿದೆ.
೧೬೨೩. ದವಸಾಳನಾಗು = ದಂಡಪಿಂಡವಾಗು, ತಿಂಡಿಪೋತನಾಗು
(ದವಸಾಳ < ದವಸ + ಹಾಳ : ದವಸ ಅಥವಾ ಧಾನ್ಯವನ್ನು ಕರಗಿಸುವ ವ್ಯಕ್ತಿಯಾಗು)
ಪ್ರ : ದವಸಾಳ ಗಂಡನನ್ನು ಕಟ್ಕೊಂಡು, ಬವಸಿದ್ದನ್ನು ಉಣ್ಣೋ ಹಂಗದೋ, ಉಡೋ
ಹಂಗದೋ, ತೊಡೋ ಹಂಗದೋ?
೧೬೨೪. ದವುಡು ಬರು = ಬೇಗ ಬರು
(ದವುಡು < ದೌಡು (ಹಿಂ) = ಓಡು, ವೇಗವಾಗಿ ಚರಿಸು)
ಪ್ರ : ಕಣ್ಣು ಮುಚ್ಚಿ ಕಣ್ಣು ತೆರೆಯೋದರೊಳಗೆ ದವುಡು ಬಂದುಬಿಟ್ಟ
೧೬೨೫. ದಸಕತ್ತು ಹಾಕು = ರುಜು ಹಾಕು, ಒಪ್ಪಿಗೆ ಸೂಚಿಸು.
(ದಸಕತ್ತು = ಸಹಿ, ರುಜು)
ಪ್ರ : ದಸಕತ್ತು ಹಾಕಿದರೆ ತೀರ್ತು, ಪುರಸೊತ್ತು ಸಿಕ್ತು ಅಂತಲೇ ಲೆಕ್ಕ.
೧೬೨೬. ದಳಗೆ ಹಾಕು = ಹೊಲಿಗೆ ಹಾಕು
ಪ್ರ : ದರ್ಜಿ ಹತ್ರಕ್ಕೆ ಬಟ್ಟೆ ತಗೊಂಡು ಹೋಗಿ, ಹರಿದು ಹೋಗಿರೋದಕ್ಕೆ ಒಂದು ದಳಗೆ ಹಾಕಿಸಿಕೊಂಡು ಬಾ.
೧೬೨೭. ದಳೆದು ಬಿಡು = ದಟ್ಟವಾಗಿಸು, ಒತ್ತು ಮಾಡು
(ದಳೆ = ಹೊಲಿ, ಹೊಲಿಗೆ ಹಾಕು)
ಪ್ರ : ಪೈರನ್ನು ಒಂದರ ತಿಕ್ಕೊಂದು ದಳೆದುಬಿಟ್ಟಿದ್ದಾನೆ, ಜಾಗ ಬಿಟ್ಟು ನಾಟಿ ಹಾಕಿದರಲ್ವ, ಪೈರು ಮೊಂಟೆ ಹೊಡೆದು ಬೆಳೆ ಚೆನ್ನಾಗಿ ಬರೋದು?
೧೬೨೮. ದಾಕ್ಷಿಣ್ಯಕ್ಕೆ ಬಸುರಾಗು = ಬೇಡವೆನ್ನಲಾಗದೆ ಬವಣೆಗೆ ಒಳಗಾಗು, ಹಂಗಿಗೊಳಗಾಗಿ ಅನಾನುಕೂಲಕ್ಕೊಳಗಾಗು.
ಪ್ರ : ಗಾದೆ – ದಾಕ್ಷಿಣ್ಯಕ್ಕೆ ಬಸುರಾಗಿ ಹೆರೋಕೆ ತಾವಿಲ್ಲ.
೧೬೨೯. ದಾಟು ಆಗು = ಗಾಯವಾಗು, ಅಲರ್ಜಿಯಾಗು
ಮುಟ್ಟಾದ ಹೆಂಗಸರ ಬಟ್ಟೆಯನ್ನು ದಾಟಿದಾಗ, ಅಲರ್ಜಿಯಿಂದ ಗಾಯವಾಗುವುದೆಂದೂ, ಅದಕ್ಕಾಗಿ ‘ದಾಟು ತೆಗೆ’ಯುವ ಆಚರಣೆಯನ್ನು ಮಾಡುತ್ತಾರೆ. ಇದು ಹಳ್ಳಿಗಾಡಿನ ಜನರ ಮೂಡ ನಂಬಿಕೆ. ಗಾಯ ಮಾಯುವ ಮದ್ದನ್ನು ಕೊಡಿಸದೆ ‘ದಾಟು ತೆಗೆ’ ಯುವ ಮೂಢ ಆಚರಣೆಯಿಂದ ಅದು ಮಾಯುವುದಿಲ್ಲ ಎಂಬುದು ವಿದ್ಯೆಬುದ್ಧಿ ಬಂದ ಮೇಲೆ ಗೊತ್ತಾಗಿದೆ. ಆ ಆಚರಣೆ ತಾನಾಗಿಯೇ ಮಾಯವಾಗಿದೆ.
ಪ್ರ : ಮಗೀಗೆ ‘ದಾಟು’ ಆಗಿದೆ, ಮೊದಲು ‘ದಾಟು ತೆಗೆದು’ ಮೂರು ದಾರಿ ಕೂಡೋ ಕಡೆ ಹಾಕಿ ಬಾ.
೧೬೩೦. ದಾಡಾಬಂದಾಗು = ಕಷ್ಟವಾಗು
(ದಾಡಾಬಂದು = ತೊಂದರೆ, ಇಕ್ಕಟ್ಟು)
ಪ್ರ : ದಾಡಾಬಂದಾಗೋದು ಬಡವರಿಗೇ ಅಲ್ಲ, ಬಲಗಾರರಿಗೂ ಆಗ್ತದೆ.
೧೬೩೧. ದಾಡಿ ಬರು = ತೊಂದರೆ ಬರು
(ದಾಡಿ = ತೊಂದರೆ, ಅನಾನುಕೂಲ)
ಪ್ರ : ಎದ್ದು ಕೆಲಸ ಮಾಡೋಕೆ, ಅವನಿಗೇನು ದಾಡಿ ಬಂದಿರೋದು?
೧೬೩೨. ದಾದೀನ ದೂರವಿಡು = ಕರುಬರನ್ನು, ಕೆಡುಕರನ್ನು ಹತ್ತಿರ ಸೇರಿಸದಿರು
(ದಾದಿ < ದಾಯಾದಿ = ಜ್ಞಾತಿ)
ಪ್ರ : ಗಾದೆ – ದಾದಿಯೋ ? ಮೈಮೇಲಿನ ಯಾದಿಯೋ?
೧೬೩೩. ದಾಪುಗಾಲು ಹಾಕು = ಬೀಸುಗಾಲಲ್ಲಿ ನಡೆ
ಪ್ರ : ಕತ್ತಲಾಗ್ತಾ ಬಂತು, ದಾಪುಗಾಲು ಹಾಕಿ ನಡೆ
೧೬೩೪. ದಾಬು ಹಿಡಿಸದಿರು = ಬಸುರಿಯಾಗಿರು
(ದಾಬು < ಡಾಬು = ಸೊಂಟಕ್ಕೆ ಹಾಕುವ ವಡ್ಯಾಣ)
ಪ್ರ : ಸೊಂಟಕ್ಕೆ ದಾಬು ಹಿಡಿಸಲ್ಲ ಅಂದ್ರೆ ಅರ್ಥ ಆಗಲ್ವ ಯಾಕೆ ಅಂತ?
೧೬೩೫. ದಾಮ್ ದೂಮ್ ಮಾಡು = ಸಿಕ್ಕಾಪಟ್ಟೆ ಖರ್ಚು ಮಾಡು, ದುಂದುವ್ಯಯ ಮಾಡು
ಪ್ರ : ದಾಮ್‌ದೂಮ್ ಮಾಡಿ ಮನೇನ ವಪನ ಹೊಂದಿಸಿಬಿಟ್ಟ
೧೬೩೬. ದಾಯವಾಗಿ ಸಿಕ್ಕು = ಬಿಟ್ಟಿಯಾಗಿ ಸಿಕ್ಕು, ಅಗ್ಗವಾಗಿ ದೊರಕು
(ದಾಯ = ಕೊಡುಗೆ, ಕಾಣಿಕೆ)
ಪ್ರ : ಗಾದೆ – ದಾಯವಾಗಿ ಸಿಕ್ಕಿದರೆ, ನನಗೊಂದಿರಲಿ, ನಮ್ಮಪ್ಪನಿಗೊಂದಿರಲಿ
೧೬೩೭. ದಾರಿ ಕಾಯು = ಎದುರು ನೋಡು, ನಿರೀಕ್ಷೆಯಲ್ಲಿರು
ಪ್ರ : ಎದ್ದಾಗಲಿಂದ ನಿನ್ನ ದಾರಿ ಕಾಯ್ತಿದ್ದೆ, ಸದ್ಯ ಬಂದೆಯಲ್ಲ
೧೬೩೮. ದಾರಿ ಬಿಡು = ದಾರಿ ಕೊಡು, ಹೋಗಲು ಅವಕಾಶ ನೀಡು
(ದಾರಿ < ತಾರಿ < ತಾರೈ(ತ) = ಹಾದಿ)
ಪ್ರ : ದಾರಿ ಬಿಡದಿದ್ರೆ ತೂರಿ ಹೋಗಬೇಕು, ಇಲ್ಲ, ಹಾರಿ ಹೋಗಬೇಕು.
೧೬೩೯. ದಾರಿ ಚಿಲ್ಲರೆ ಹೊಡಿ = ಕವಲು ದಾರಿಯಾಗು
ಪ್ರ : ಅವರಿಬ್ಬರ ದಾರಿ ಈಗ ಚಿಲ್ಲರೆ ಹೊಡೆದು ಬೇರೆಬೇರೆಯಾಗಿದೆ.
೧೬೪೦. ದಾರಿ ಬಿಡು = ಹೆದ್ದಾರಿ ಬಿಟ್ಟು ಅಡ್ಡ ದಾರಿಗಿಳಿ, ದುರ್ಮಾರ್ಗಕ್ಕಿಳಿ
ಪ್ರ : ದಾರಿ ಬಿಟ್ಟ ಮಗ ಅಪ್ಪ ಅಮ್ಮನ ಮಾತ್ನ ಕೇಳ್ತಾನ?
೧೬೪೧. ದಾರಿ ಮಾಡಿಕೊಂಡು = ಬದುಕುವ ಮಾರ್ಗ ತೋರಿಸು, ಅವಕಾಶ ಕಲ್ಪಿಸಿಕೊಡು
ಪ್ರ : ಅವನಿಗೊಂದು ದಾರಿ ಮಾಡು ಕೊಡದಿದ್ರೆ, ಅವನು ಬದುಕೋದು ಹೇಗೆ?
೧೬೪೨. ದಾರಿಗೆ ಮುಳ್ಳು ಹಾಕು = ಸಂಬಂದ ಕಡಿದುಕೊಳ್ಳು
ಪ್ರ : ಅವರೂರ ದಾರಿಗೆ ಮುಳ್ಳು ಹಾಕಿ, ಮೂರು ತಿಂಗಳಾಯ್ತು
೧೬೪೩. ದಾರಿ ಹಿಡಕೊಂಡು ಹೋಗು = ಅನ್ಯರ ಗೊಡವೆ ಬಿಟ್ಟು ನಿನ್ನದನ್ನು ನೀನು ನೋಡಿಕೊಳ್ಳು
ಪ್ರ : ನಿನ್ನ ದಾರಿ ಹಿಡಕೊಂಡು ನೀನು ಹೋಗು, ಅನ್ಯರ ಗೊಡವೆ ನಿನಗ್ಯಾಕೆ?
೧೬೪೪. ದಾವಣಿ ಕಟ್ಟು = ದನಗಳನ್ನು ಒಂದರ ಪಕ್ಕಕ್ಕೆ ಒಂದನ್ನು ನಿಲ್ಲಿಸಿ, ಸರಪಳಿ ಹಾಕಿದಂತೆ ಹಗ್ಗ ಹಾಕಿ ಕಟ್ಟು.
ಒಂದು ಹಸು ಅಥವಾ ಎತ್ತಿನ ಕೊರಳಿಗೆ ಕಟ್ಟಿದ ಹಗ್ಗದಲ್ಲೇ ಉಳಿದವುಗಳಿಗೂ ಕುಣಿಕೆ ಹಾಕಿ ಕಟ್ಟುತ್ತಾ ಹೋಗುತ್ತಾರೆ. ಈ ರೀತಿ ಸಾಲಾಗಿ ಕಟ್ಟಿದಾಗ ಯಾವುವೂ ಒಂಟಿಯಾಗು ಹೋಗಲು ಸಾಧ್ಯವಿಲ್ಲ, ಒಟ್ಟಾಗಿಯೇ ಹೋಗಬೇಕು. ಕಣದಲ್ಲಿ ಹಂತಿ ತುಳಿಸುವಾಗ ದಾವಣಿ ಕಟ್ಟುತ್ತಾರೆ. ಹಾಗೆಯೇ ದನಗಳನ್ನು ಕಸಾಯಿ ಅಂಗಡಿಗೆ ಹೊಡೆಯುವಾಗ ದಾವಣಿ ಕಟ್ಟಿ ದೂಡಿಕೊಂಡು ಹೋಗುತ್ತಾರೆ.
ಪ್ರ : ದಾವಣಿ ಕಟ್ಟಿದ ದನಗಳು ಕೋಳ ಹಾಕಿದ ಖೈದಿಗಳಂತೆ ಬಂಧಿಗಳು.
೧೬೪೫. ದಾವರ ಹತ್ತು = ಬಾಯಾರಿಕೆಯಾಗು, ಗಂಟಲು ಒಣಗು.
(ದಾವರ < ಡಾವರ = ನೀರಡಿಕೆ)
ಪ್ರ : ಗಾದೆ – ದಾವರ ಹತ್ತಿದಾಗ ದೇವರ ಧ್ಯಾನ.
೧೬೪೬. ದಾವಾಗು = ನೀರಡಿಕೆಯಾಗು
(ದಾವು < ದಾವರ < ಡಾವರ = ಬಾಯಾರಿಕೆ)
ಪ್ರ : ದನಗಳು ದಾವಾಗಿ ‘ಬೆಳೋ’ ಅಂತವೆ, ನೀರು ಕುಡಿಸದೆ ಕುಂತಿದ್ದೀರಲ್ಲ.
೧೬೪೭. ದಾಳ ಉರುಳಿಸು = ಸಂಚು ಮಾಡು
(ದಾಳ = ಲೆತ್ತ, ಪಗಟೆಯಾಟದಲ್ಲಿ ಉರುಳಿಸುವ ಸಾಧನ)
ಪ್ರ : ದಾಳ ಉರುಳಿಸೋದು ಉರುಳಿಸೋಣ, ಬಿದ್ದರೆ ಆಗಲಿ, ಬೀಳದಿದ್ರೆ ಹೋಗಲಿ.
೧೬೪೮. ದಿಕ್ಕಾಪಾಲಾಗು = ಚೆಲ್ಲಾಪಿಲ್ಲಿಯಾಗು, ಚೆದುರಿ ಹೋಗು
ಪ್ರ : ಒಬ್ಬೊಬ್ಬರೂ ಒಂದೊಂದು ಕಡೆ ದಿಕ್ಕಾಪಾಲಾಗಿ ಓಡಿ ಹೋದರು
೧೬೪೯. ದಿಕ್ಕಲ್ಲದಿರು = ಅನಾಥವಾಗಿರು
ಪ್ರ : ದಿಕ್ಕಿಲ್ಲದೋರಿಗೆ ದೇವರೇ ದಿಕ್ಕು
೧೬೫೦. ದಿಕ್ಕು ದಿವಾಣಿ ಇಲ್ಲದಿರು = ನೀನೇ ಎನ್ನುವವರು ಇಲ್ಲದಿರು
(ದಿವಾಣಿ = ಲೇವಾದೇವಿ ವ್ಯವಹಾರ)
ಪ್ರ : ಆ ಮನೆಗೆ ದಿಕ್ಕು ದಿವಾಣಿ ಯಾರೂ ಇಲ್ಲ.
೧೬೫೧. ದಿಕ್ಕು ದೆಸೆ ಇಲ್ಲದಂತಾಗು = ನಿರಾಶ್ರಿತನಾಗು, ಅನಾಥನಾಗು
(ದೆಸೆ < ದಿಶೆ = ದಿಕ್ಕು)
ಪ್ರ : ದಿಕ್ಕುದೆಸೆ ಒಂದೂ ಇಲ್ಲದಂತಾದಾಗ, ದೇವರಂತೆ ಬಂದು ನಮ್ಮನ್ನು ಕಾಪಾಡಿದೆ.
೧೬೫೨. ದಿನ ಎಣಿಸು = ಸಾವಿನ ನಿರೀಕ್ಷೆಯಲ್ಲಿರು
ಪ್ರ : ಸಾಯುವ ಕಾಲ ಹತ್ತಿರ ಬಂದಿದೆ, ದಿನ ಎಣಿಸುತ್ತಿದ್ದಾನೆ ಅಷ್ಟೆ
೧೫೫೩. ದಿನತುಂಬು = ಹೆರೆಗೆಯಾಗು ಸಮಯ ಸಮೀಪಿಸು
ಪ್ರ : ದಿನ ತುಂಬಿದ ಬಸುರೀನ ಈ ಉರಿಬಿಸಲಲ್ಲಿ ನಡೆಸ್ತಾರ?
೧೬೫೪. ದಿನ ತುಂಬು = ಮರಣ ಕಾಲ ಪ್ರಾಪ್ತವಾಗು
ಪ್ರ : ದಿನ ತುಂಬಿದ ಮೇಲೆ ಗಾಡಿ ಬಿಡಲೇ ಬೇಕು. ಯಾಕೆ ಅಂದ್ರೆ ಯಾವ ಕಾಲ ತಪ್ಪಿದರೂ ಸಾವ ಕಾಲ ತಪ್ಪದು.
೧೬೫೫. ದಿನಪರ್ತಿ ಮೇಲೆ ಇಳಿಪರ್ತಿಯಾಗು = ದಿನ ಕಳೆದಂತೆಲ್ಲ ಕ್ಷಯಿಸು
(ದಿನಪರ್ತಿ < ದಿನಂಪ್ರತಿ = ದಿವಸ ದಿವಸವೂ; ಇಳಿಪರ್ತಿ, ಇಳಿ + ಪ್ರತಿ = ಕ್ಷಯ, ಕ್ಷೀಣತೆ)
ಪ್ರ : ಯಾಕೆ ಮಾವ, ದಿನಪರ್ತಿ ಮೇಲೆ ಇಳಿಪರ್ತಿ ಅನ್ನೋ ಹಂಗಾದಲ್ಲ.
೧೬೫೬. ದಿಮ್ಮಲೆ ರಂಗನಂತಿರು = ರಾಜನಂತಿರು, ಆರಾಮವಾಗಿರು
(ದಿಮ್ಮಲೆ < ದಿರುಮಲೆ < ತಿರುಮಲೆ < ತಿರುಮಲಯ < ಶ್ರೀಮಲೈ = ತಿರುಪತಿ ಬೆಟ್ಟ)
ಪ್ರ : ಯಾವುದು ಏನೇ ಆದರೂ, ಅವನು ಮಾತ್ರ ದಿಮ್ಮಲೆ ರಂಗ ಅಂತ ಮಲಗಿರ್ತಾನೆ.
೧೬೫೭. ದಿರಸು ಬದಲಾದರೂ ವರಸೆ ಒಂದೇ ಆಗಿರು = ವೇಷ ಬದಲಾದರೂ ಸ್ವಭಾವ ಯಥಾಪ್ರಕಾರವಾಗಿರು
(ದಿರಸು < Dress = ತೊಡುವ ಬಟ್ಟೆ; ವರಸೆ = ಪಟ್ಟು, ಸ್ವಭಾವ)
ಪ್ರ : ವರಸೆ ಒಂದೇ ಆಗಿರುವಾಗ ದಿರಸು ಬದಲಾದರೆ ಫಲವೇನು?
೧೬೫೮. ದಿಷ್ಟಿಯಾಗು = ಕಣ್ಣೆಂಜಲಾಗು
(ದಿಷ್ಟಿ.< ದೃಷ್ಟಿ = ಕಣ್ಣೋಟದ ನಂಜು)
ಪ್ರ : ಮಗೀಗೆ ದೃಷ್ಟಿಯಾಗಿದೆ, ಉಪ್ಪು ಮೆಣಸಿನಕಾಯಿ ನೀವಳಿಸಿ ಒಲೆಗೆ ಹಾಕು
೧೬೫೯. ದಿಷ್ಟಿಯಾಗುವಂತಿರು = ತುಂಬ ಸುಂದರವಾಗಿರು, ಸ್ಫುರದ್ರೂಪಿಯಾಗಿರು
ಪ್ರ : ಮದುವೆ ಹೆಣ್ಣು ದಿಷ್ಟಿಯಾಗುವಂತಿದ್ದಾಳೆ.
೧೬೬೦. ದೀಪ ತುಂಬು = ದೀಪವನ್ನು ಆರಿಸು
ಜನಪದರು ದೀಪವನ್ನು ಆರಿಸು ಎಂದು ಹೇಳುವುದಿಲ್ಲ. ಆರಿಸು ಅಂದವರನ್ನು ಬೈಯುತ್ತಾರೆ. ಅವರ ದೃಷ್ಟಿಯಲ್ಲಿ ಈ ಖಂಡ ಜ್ಯೋತಿ ಆ ಅಖಂಡಜ್ಯೋತಿಯ ಅಂಶ. ಆದ್ದರಿಂದ ಈ ಖಂಡ ಜ್ಯೋತಿಯನ್ನು ಆ ಅಖಂಡ ಜ್ಯೋತಿಯೊಡನೆ ಸೇರಿಸು ಎಂಬ ಅರ್ಥದಲ್ಲಿ ‘ತುಂಬು’ ಶಬ್ದವನ್ನು ಬಳಸುತ್ತಾರೆ. ಅರ್ಥಾತ್ ಮನುಷ್ಯನ ಆತ್ಮ ಅಥವಾ ಚೈತನ್ಯ ನಾಶವಾಗುವುದಿಲ್ಲ, ಅಖಂಡ ಚೈತನ್ಯದೊಡನೆ ಒಂದಾಗುತ್ತದೆ ಎಂಬ ಅನುಭಾವ ದೃಷ್ಟಿಯೂ ಕಲ್ಯಾಣ ದೃಷ್ಟಿಯೂ ಈ ನುಡಿಗಟ್ಟಿನಲ್ಲಿ ಮಡುಗಟ್ಟಿದೆ.
ಪ್ರ : ಬೆಳಕಿದ್ರೆ ನಿದ್ರೆ ಬರಲ್ಲ, ದೀಪ ತುಂಬು.
೧೬೬೧. ದೀಪ ದೊಡ್ಡದು ಮಾಡು = ದೀಪವನ್ನು ನಂದಿಸು
ಈ ಮನೆಯ ಸಣ್ಣ ಜ್ಯೋತಿಯನ್ನು ಸೃಷ್ಟಿಮೂಲವಾದ ದೊಡ್ಡ ಜ್ಯೋತಿಯೊಡನೆ ಒಂದು ಮಾಡು ಎಂಬ ಆಶಯದ ಈ ನುಡಿಗಟ್ಟೂ ಸಹ ಮೇಲಿನ ನುಡಿಗಟ್ಟಿನ ಅನುಭಾವ ದೃಷ್ಟಿ ಹಾಗೂ ಕಲ್ಯಾಣ ದೃಷ್ಟಿಗಳನ್ನೇ ಒಳಗೊಂಡಿದೆ. ಇದು ಗ್ರಾಮೀಣ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತದೆ.
ಪ್ರ : ಮಲಗೋಕೆ ಮುಂಚೆ ದೀಪ ದೊಡ್ಡದು ಮಾಡೋದನ್ನು ಮರೆತು ಬಿಟ್ಟೀಯ?
೧೬೬೨. ದೀಪ ಪುಕಪುಕ ಎನ್ನು = ಎಣ್ಣೆ ಮುಗಿದು ದೀಪ ನಂದುವ ಸ್ಥಿತಿಯಲ್ಲಿರು
ಪ್ರ : ದೀಪ ಪುಕಪುಕ ಅಂತಾ ಇದೆ, ಬೇಗ ಎಣ್ಣೆ ತಂದು ಬಿಡು
೧೬೬೩. ದುಕ್ಕ ಉಕ್ಕಳಿಸು = ಅಳು ಕೋಡಿ ಬೀಳು
(ದುಕ್ಕ < ದುಃಖ = ಅಳು ; ಉಕ್ಕಳಿಸು = ಹೊರಚೆಲ್ಲು)
ಪ್ರ : ದುಕ್ಕ ಉಕ್ಕಳಿಸಿಕೊಂಡು ಬಂದ್ರೂ ತಡಕೊಂಡು ಸಹಕರಿಸಿದೆ
೧೬೬೪. ದುಗ್ಗಾಣಿ ಇಲ್ಲದಿರು = ಎರಡು ಬಿಡಿಗಾಸಿಲ್ಲದಿರು
(ದುಗ್ಗಾಣಿ < ದುಗ + ಕಾಣಿ ; ದುಗ = ಎರಡು, ಕಾಣಿ = ಕಾಸು)
ಪ್ರ : ದುಗ್ಗಾಣಿಗೆ ಗತಿಯಿಲ್ಲದೋಳ ಹತ್ರ ದುಡ್ಡು ಕೇಳ್ತೀಯಲ್ಲ?
೧೬೬೫. ದುಡ್ಡಿಗೆ ಪಂಚೇರಾಗು = ಅಗ್ಗವಾಗು, ಮಾನ ಹರಾಜಾಗು
(ದುಡ್ಡು = ನಾಲ್ಕು ಕಾಸು ; ಪಂಚೇರು < ಪಂಚ + ಸೇರು = ಐದು ಸೇರು)
ಪ್ರ: ಮಗ ಹುಟ್ಟಿ ಮನೆತನದ ಮಾನಾನ ದುಡ್ಡಿಗೆ ಪಂಚೇರು ಮಾಡಿಬಿಟ್ಟ.
೧೬೬೬. ದುಪ್ತಿಯಾಗು = ಮುನಿಸುಂಟಾಗು, ಎರಡುಪಟ್ಟು ಊದಿಕೊಂಡು ಕುಂತಿರು.
(ದುಪ್ತಿ < ದುಪ್ಪಟಿ < ದ್ವಿಪಟ < ದ್ವಿಪಟೀ = ಎರಡು ಪದದ ದಪ್ಪ ಹೊದಿಕೆ, ಹಚ್ಚಡ)
ಪ್ರ : ತೃಪ್ತಿ ಇರದ ಸಣ್ಣ ಸ್ವಭಾವದೋಳು ದುಪ್ತಿ ಬಂದು ದೆವ್ವದಂಗೆ ಕುಂತವಳೆ.
೧೬೬೭. ದುಬಾರಿಯಾಗು = ಬೆಲೆ ಜಾಸ್ತಿಯಾಗು
(ದುಬಾರಿ < ದುಬಾರ < ದೋ + ಬಾರ್ = ಎರಡು ಪಟ್ಟು)
ಪ್ರ : ನೀನು ಹೇಳೋ ಬೆಲೆ ತುಂಬ ದುಬಾರಿ, ಯಾರು ಕೊಡೋಕೆ ತಯಾರಿಲ್ಲ.
೧೬೬೮. ದುಮುದುಮುಗುಟ್ಟು =ಮುನಿಸಿನಿಂದ ಸಿಡಿಮಿಡಿಗೊಳ್ಳು, ಕೊತಕೊತನೆ ಕುದಿ
ಪ್ರ : ತನ್ನನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ ಅಂತ ದುಮುದುಮುಗುಟ್ತಾ ಅವನೆ.
೧೬೬೯. ದುಮ್ಮ ಸಾಲಿಕ್ಕು = ಮೆರೆ, ಇತ್ತಲಿಂದ ಅತ್ತ, ಅತ್ತಲಿಂದ ಇತ್ತ ಗಸ್ತು ತಿರುಗು.
ದುಮ್ಮಸಾಲಿಕ್ಕುವುದು ಒಂದು ಜನಪದ ಆಟ. ಮುಸ್ಲಿಮರ ಮೊಹರಂ ಹಬ್ಬದ ಆಚರಣೆ ಎಂದೂ ಪ್ರತೀತಿ
ಪ್ರ : ವಯಸ್ಸಿಗೆ ಬಂದ ಹೆಣ್ಮಕ್ಕಳು ಹಿಂಗೆ ದುಮ್ಮಸಾಲಿಕ್ಕಿದರೆ ಯಾರು ಏನು ಅನ್ನಲ್ಲ?
೧೬೭೦. ದುರುಗುಟ್ಟಿಕೊಂಡು ನೋಡು = ಬಿರುಗಣ್ಣಲ್ಲಿ ನೋಡು, ಕೋಪದಿಂದ ಕೆಕ್ಕರಿಸು
ಪ್ರ : ಏನು ನನ್ನ ತಿನ್ನೋನಂಗೆ ದುರುಗುಟ್ಟಿಸಿಕೊಂಡು ನೋಡಿದ್ದೂ ನೋಡಿದ್ದೆ.
೧೬೭೧. ದೂರಿ ಹಾಡು = ಜೋಗುಳ ಹಾಡು, ಲಾಲಿ ಪದ ಹೇಳು.
ಪ್ರ : ‘ದೂರಿ ದೂರಿ, ದುಮ್ಮಣ್ಣದುರುಗ, ನಿಮ್ಮಣ್ಣ ಹೊಲೆಯ’ ಅಂತ ದೂರಿ ಹಾಡು ಹೇಳ್ತಾ ತೊಟ್ಲು ತೂಗೋದನ್ನು ನಗರದೋರು ಎಲ್ಲಿ ನೋಡಿರ್ತಾರೆ, ಕೇಳಿರ್ತಾರೆ?
೧೬೭೨. ದೂರಿ ದೂರಿ ಉಡುಗೂರಿ ಹೋಗು = ಎದೆಗುದಿಯಿಂದ ಅನ್ಯರ ಮೇಲೆ ಗೊಂಬೆ ಕೂರಿಸಿ ಕೂರಿಸಿ ಒಣಗಿ ಕಗ್ಗಾಗು.
(ದೂರು = ದೂರನ್ನು ಹೊರಿಸು ಉಡುಗೂರು = ಒಣಗು)
ಪ್ರ : ಬೇರೆಯವರನ್ನು ದೂರಿ ದೂರಿ, ಆ ಹೊಟ್ಟೆ ಉರಿಯಲ್ಲೇ ಉಡುಗೂರಿ ಹೋದ.
೧೬೭೩. ದೆವ್ವ ಹಿಡಿ = ಮೈಮರೆತು ಕೂಡು, ಸೆಟೆದುಕೊಂಡು ಕೂತುಕೊಳ್ಳು
ಪ್ರ : ನನಗೇನು ದೆವ್ವ ಹಿಡೀತೋ, ಅಲ್ಲಿಗೆ ಹೋಗೋದನ್ನೆ ಮರೆತುಬಿಟ್ಟೆ
೧೬೭೪. ದೆವಿಗೆ ಹಾಕಿ ಹೊರು = ತೂಕವಾಗಿರು, ಮಜಭೂತಾಗಿರು
(ದೆವಿಗೆ < ಡವಿಗೆ < ಡವುಗೆ = ಬಿದಿರ ಬೊಂಬು ; ದೆವಿಗೆ ಹಾಕು = ಅಡ್ಡ ಹಾಕು)
ಪ್ರ : ದೆವ್ವದಂಥ ಹಂದೀನ ದೆವಿಗೆ ಹಾಕಿ ಹೊರಬೇಕಾಯ್ತು
೧೬೭೫. ದೆಸೆ ಕುಲಾಯಿಸು = ಅದೃಷ್ಟ ಒದಗು, ಶುಕ್ರದೆಶೆ ಮೂಡು.
ಪ್ರ : ಅವನಿಗೇನು ದೆಸೆ ಕುಲಾಯಿಸಿತೋ, ಎಲ್ಲ ಕಡೆಯಿಂದಲೂ ಲಾಭ
೧೬೭೬. ದೇಕಿಬಿಡು = ಗುರಿಮುಟ್ಟು, ಸಾಗಿ ಬರು
(ದೇಕು = ಹೊಟ್ಟೆ ಮಕಾಡೆ ಮಲಗಿ ಕೈಯೂರಿ ತೆವಳು)
ಪ್ರ : ಹಂಗೂ ಹಿಂಗೂ ಮಾಡಿ ಇಲ್ಲೀವರೆಗೆ ದೇಕಿಬಿಟ್ಟೆ, ಇನ್ನು ಅವರಪ್ಪರಾಣೆ,
ಏನ್ನ ಮಾಡಿಕೊಳ್ಳಲಿ.
೧೬೭೭. ದೇಕಿ ದೇಕಿ ಸಾಕಾಗು = ತೆವಳಿ ತೆವಳಿ ಸುಸ್ತಾಗು.
ಪ್ರ : ತಗ್ಗಿದ್ದ ಕಡೆ ಕೋಲೂರಿಕೊಂಡು, ದಿಣ್ಣೆ ಇದ್ದ ಕಡೆ ಕೈಯೂರಿಕೊಂಡು ದೇಕಿ ದೇಕಿ ಸಾಕಾಯ್ತು ಅಂದ ರಸಿಕ ಮುದಿಗಂಡ.
೧೬೭೮. ದೇಗುಲದಿಂದ ಬರು = ದೂರದಿಂದ ಬರು
(ದೇಗುಲ < ದೇವಕುಲ = ದೇವಸ್ಥಾನ, ಸ್ವರ್ಗ?)
ಪ್ರ : ಅವನು ಆ ದೇಗುಲದಿಂದ ಬರಬೇಕಾದರೆ ಸಾಕಷ್ಟು ಸಮಯವಾಗ್ತದೆ.
೧೬೭೯. ದೇಟಿಗೆ ಸರಿಯಾಗಿ ಮುಟ್ಟಿಸು = ಸಮಯಕ್ಕೆ ಸರಿಯಾಗಿ ಪಾವತಿಸು
(ದೇಟು < Date = ತಾರೀಖು; ಮುಟ್ಟಿಸು = ತಲುಪಿಸು)
ಪ್ರ : ಅವನು ತಗೊಂಡ ಸಾಲವನ್ನು ದೇಟಿಗೆ ಸರಿಯಾಗಿ ಮುಟ್ಟಿಸಿಬಿಡ್ತಾನೆ.
೧೬೮೦. ದೇವದಾಸಿ ಬಿಡು = ಸೂಳೆ ಬಿಡು
ದೇವದಾಸಿ ಪದ್ಧತಿ ಚಾಲ್ತಿಗೆ ಬಂದದ್ದು ಶ್ರೀಮಂತರ, ಹೊಟ್ಟೆ ತುಂಬಿದವರ ಭೋಗಕ್ಕೆ ಮಾಡಿಕೊಂಡ ತಂತ್ರ. ದೇವರ ಹೆಸರಿನಲ್ಲಿ ದಾಸಿಯಾಗಿಸಿ, ಭೋಗಿಸುವ ದೇವರುಗಳು ಭೂದೇವರುಗಳೇ, ಪಟ್ಟಭದ್ರ ಹಿತಾಸಕ್ತಿಗಳೇ ಎಂಬುದು ಸತ್ಯಕ್ಕೆ ದೂರವಾದುದಲ್ಲ.
ಪ್ರ : ವಯಸ್ಸಿಗೆ ಬಂದ ಹೆಣ್ಣನ್ನು ದೇವದಾಸಿ ಬಿಟ್ಟು, ಉಳ್ಳವರ ದೇಹದ ದಾಹಕ್ಕೆ ಅನುವು ಮಾಡಿಕೊಡುವುದು ಮೌಢ್ಯತೆಯ ಪರಮಾವಧಿ.
೧೬೮೧. ದೇವರಾಗು = ಮಾತಾಡದಿರು, ಮೌನದಿಂದ ಕುಳಿತಿರು
ಪ್ರ : ಎಲ್ಲರೂ ಕೊಂಚ ದೇವರಾಗಿ, ಗೌಡರೊಬ್ಬರು ಮಾತಾಡಲಿ
೧೬೮೨. ದೇವರು ಕಣ್ಣು ಬಿಡು = ಅನುಗ್ರಹಿಸು, ಕೃಪೆ ತೋರು.
ಪ್ರ : ದೇವರು ಕಣ್ಣು ಬಿಟ್ಟ, ಎಲ್ಲ ಸರಿ ಹೋಯ್ತು.
೧೬೮೩. ದೇವರು ಕೊಟ್ಟದ್ದನ್ನು ತಿನ್ನು = ಏನಿದೆಯೋ ಅದನ್ನು ತಿನ್ನು, ಎಟುಕದ್ದನ್ನು ಬಯಸದಿರು
ಪ್ರ : ದೇವರು ಕೊಟ್ಟದ್ದನ್ನು ತಿಂದು, ನೆಮ್ಮದಿಯಿಂದ ಇರೋದನ್ನ ಕಲಿ
೧೬೮೪. ದೇವರು ಬಂದಂತಾಗು = ಅನುಗ್ರಹವಾಗು, ಕಷ್ಟಪರಿಹಾರವಾಗು
ಪ್ರ : ನೀವು ಬಂದದ್ದು ದೇವರು ಬಂದಂತಾಯ್ತು, ಬದುಕಿಕೊಂಡೆ
೧೬೮೫. ದೇವರೇ ಶಿವನೇ ಎನ್ನು = ಸಂಕಟದಿಂದ ನರಳು.
ಪ್ರ : ನಾನೇ ದೇವರೇ ಶಿವನೇ ಅನ್ನುವಾಗ, ಇನ್ನೊಬ್ಬರ್ನ ಸಾಕೋ ಹಂಗಿದ್ದೀನಾ?
೧೬೮೬. ದೇವಿ ಹಾಕು = ತೋಡಿ ಹಾಕು, ಬಾಚಿ ಹಾಕು
(ದೇವು = ತೋಡು, ಬಾಚು) ಎತ್ತುಡಿ ( ಎತ್ತುವ ಬಲೆ) ಯಲ್ಲಿ ನೀರಿನಲ್ಲಿರುವ ಮೀನನ್ನು ಬಾಚಿಕೊಳ್ಳುವುದಕ್ಕೆ ದೇವು ಎನ್ನುತ್ತಾರೆ. ಹಾಗೆಯೇ ಎಸರಿನಲ್ಲಿರುವ ಕಾಯಿಪಲ್ಲೆ, ಕಾಳು ಅಥವಾ ಮಾಂಸದ ತುಂಡುಗಳನ್ನು ಸೌಟಿನಲ್ಲಿ ದೋಚಿಕೊಳ್ಳುವುದಕ್ಕೆ ದೇವು ಎನ್ನುತ್ತಾರೆ. ಈ ನುಡಿಗಟ್ಟಿಗೆ ಅದು ಮೂಲ.
ಪ್ರ : ಮುಂದುಣ್ಣೋರ್ಗೆಲ್ಲ ಹಿಂಗೆ ದೇವಿ ದೇವಿ ಹಾಕಿಬಿಟ್ರೆ, ಹಿಂದುಣ್ಣೋರ ಗತಿ ಏನು?
೧೬೮೭. ದೊಗರು ತೋರಿಸಿ ಎಗರು = ಕೈಕೊಡು, ವಂಚಿಸು
(ದೊಗರು < ಡೊಗರು = ಗುಂಡಿ, ಯೋನಿ ; ಎಗರು = ಹಾರು, ಮಾಯವಾಗು)
ಪ್ರ : ನಮ್ಮನೇಲೆ ಉಂಡು ತಿಂದು, ಕೊನೆಗೆ ನಮಗೇ ದೊಗರು ತೋರಿಸಿ ಎಗರಿದ್ಲು
೧೬೮೮. ದೊಗೆದಿಕ್ಕು = ತೋಡಿ ಬಡಿಸು,
(ದೊಗೆ = ತೋಡು, ಬಗೆ)
ಪ್ರ : ಗಾದೆ – ಒಳಗಿಲ್ಲ ಅಂದ್ರೆ, ದೊಗೆದಿಕ್ಕು ಅಂದ.
೧೬೮೯. ದೊಡ್ಡ ಜೀವ ಹಾರಿ ಹೋಗು = ಅತಿ ಭಯವಾಗು
ಮನುಷ್ಯ ಸಾಯುವಾಗ ಮೊದಲು ದೊಡ್ಡ ಜೀವ (ಪ್ರಾಣ, ಉಸಿರು) ಹೋದ ಮೇಲೂ ಸಣ್ಣ ಜೀವ ಅಥವಾ ಗುಟುಕು ಜೀವ ಇನ್ನೂ ಇರುತ್ತದೆಂದೂ ಆಮೇಲೆ ಅದು ಹೋಗುತ್ತದೆ ಎಂದೂ ನಂಬಿಕೆ.
ಪ್ರ : ದೆವ್ವದಂಥೋನು ದುತ್ತನೆ ಎದುರು ನಿಂತಾಗ, ನನಗೆ ದೊಡ್ಡ ಜೀವ ಹಾರಿ ಹೋಯ್ತು.
೧೬೯೦. ದೊಡ್ಡದಾಗಿ ಬರು = ಆಡಂಬರದಿಂದ ಬರು, ಗೌರವಸ್ಥರಂತೆ ಆಗಮಿಸು
ಪ್ರ : ದೊಡ್ಡದಾಗಿ ಬರ್ತಾರೆ, ಸಣ್ಣದಾಗಿ ನಡ್ಕೋತಾರೆ
೧೬೯೧. ದೊಡ್ಡ ಮಾರ್ಗದಲ್ಲಿ ಹೋಗು = ಘನತೆಯಿಂದ ಬಾಳು, ಅಡ್ಡದಾರಿಗಳಿಂದ ಹೆದ್ದಾರಿಯಲ್ಲಿ ನಡೆ
ಪ್ರ : ನಿಮ್ಮ ಹೆತ್ತರು ಮುತ್ತರು ಬಾಳಿದಂತೆ ದೊಡ್ಡ ಮಾರ್ಗದಲ್ಲಿ ಹೋಗು, ಗೊತ್ತಾಯಿತಾ?
೧೬೯೨. ದೊಡ್ಡ ಲಜ್ಜೆಯಾಗು = ರಂಪವಾಗು, ಹೈರಾಣವಾಗು
(ಲಜ್ಜೆ = ನಾಚಿಕೆ, ರಾಡಿ)
ಪ್ರ : ಮದುವೆ ಮನೇಲಿ ಹೆಣ್ಣುಗಂಡುಗಳ ಕಡೆಯ ಹೆಂಗಸರಿಗೆ ಪರಸ್ಪರ ಮಾತು ಬೆಳೆದು ದೊಡ್ಡ ಲಜ್ಜೆ ಆಗಿ ಹೋಯ್ತು.
೧೬೯೩. ದೊಡ್ಡವಳಾಗು = ಋತುಮತಿಯಾಗು, ನೆರೆ.
ಪ್ರ : ನನ್ನ ಮಗಳು ದೊಡ್ಡೋಳಾದ್ಲು, ಗುಡ್ಲು ಹಾಕ್ತಾ ಇದ್ದೀವಿ, ತಪ್ಪದೆ ಬನ್ನಿ.
೧೬೯೪. ದೊಡ್ಡಿಯಾಗು = ಪೋಲಿಪಕಾಳಿಗಳ ತಂಗುದಾಣವಾಗು, ಹೇಳುವವರು ಕೇಳುವವರು ಇಲ್ಲದ ಕೊಂಪೆಯಾಗು
(ದೊಡ್ಡಿ = ಕೊಟ್ಟಿಗೆ) ಹಿಂದೆ ಕುರಿ ಕೂಡುವ, ದನ ಕಟ್ಟುವ ಜಾಗಕ್ಕೆ ದೊಡ್ಡಿ ಎಂಬ ಹೆಸರಿತ್ತು. ಕಾಳುಮುದ್ದನ ದೊಡ್ಡಿ ಮೊದಲಾದ ಊರ ಹೆಸರುಗಳಲ್ಲಿ ಅದು ಮೂಲಾರ್ಥವನ್ನು ಉಳಿಸಿಕೊಂಡಿದೆ. ಆದರೆ ಇಂದು ಪೋಲಿದನಗಳನ್ನು ಕೂಡುವ ಜಾಗ ಎಂಬ ಅರ್ಥ ಬಂದಿದೆ.
ಪ್ರ : ಕಾಡು ಸಿದ್ಧೇಶ್ವರನ ಗುಡಿ ಇವತ್ತು ದೊಡ್ಡಿಗಿಂತ ಅತ್ತತ್ತವಾಗಿದೆ.
೧೬೯೫. ದೊಡ್ಡು ನುಗ್ಗಿದಂತೆ ನುಗ್ಗು = ರೂಕ್ಷ ಕಾಡು ಕೋಣನಂತೆ ನುಗ್ಗು
ದೊಡ್ಡು ಒಂದು ಬಲಿಷ್ಠ ಪ್ರಾಣಿ ವಿಶೇಷ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಎಂಬ ಕಾದಂಬರಿಯಲ್ಲಿ ಆ ಹೆಸರಿನ ಪ್ರಾಣಿಯ ಪ್ರಸ್ತಾಪ ಬರುತ್ತದೆ. ಕುರುಬರಲ್ಲಿ ‘ದುಡ್ಡಿನ ಕುರುಬರು’ ಎಂಬ ಬೆಡಗು ಅಥವಾ ಕುಲವುಂಟು. ಕುಲದೇವತಾ ಪದ್ಧತಿಯ ಪ್ರಕಾರ ಪ್ರಾಣಿಗಳನ್ನು, ವೃಕ್ಷಗಳನ್ನು ಆರಾಧಿಸುವ ಪರಿಪಾಠ ಬುಡಕಟ್ಟು ಜನಾಂಗಗಳಲ್ಲಿತ್ತು. ಉದಾಹರಣೆಗೆ ಕುರುಬರಲ್ಲಿ ಬೇಲದ ಕುರುಬರು, ಬನ್ನಿ ಕುರುಬರು, ಬಸರಿ ಕುರುಬರು – ಇತ್ಯಾದಿಯಾಗಿ ವೃಕ್ಷಾರಾಧಕ ಕುಲಗಳು ಉಂಟು. ಹಾಗೆಯೇ ಆನೆ ಕುರುಬರು, ಕುದುರೆ ಕುರುಬರು (ಶಾತವಾಹನರು) – ಇತ್ಯಾದಿಯಾಗಿ ಪ್ರಾಣಿಯಾರಾಧಕ ಕುಲಗಳೂ ಉಂಟು. ‘ದುಡ್ಡಿನ ಕುರುಬರು’ ಎಂಬುದು ‘ದೊಡ್ಡಿನ ಕುರುಬರು’ ಎಂಬ ಪ್ರಾಣಿ ಮೂಲ ಬೆಡಗಾಗಿರಬಹುದೆ ಎಂಬ ಅನುಮಾನ ಕಾಡುತ್ತದೆ.
ಪ್ರ : ಅವನು ದೊಡ್ಟಡು ನುಗ್ಗಿದಂತೆ ನುಗ್ಗಿ ಬಂದಾಗ, ಲಡ್ಡು ಜನವೆಲ್ಲ ದಿಕ್ಕಾಪಾಲಾದರು.
೧೬೯೬. ದೊಣ್ಣೆ ಸೇವೆ ಮಾಡು = ಲಾಠಿ ಚಾರ್ಜ್‌ಮಾಡು, ಲೊಟ್ಟದಿಂದ ಹೊಡಿ
ಪ್ರ : ಪೋಲೀಸರಿಂದ ದೊಣ್ಣೆ ಸೇವೆ ಮಾಡಿಸಿಕೊಂಡು ಮಣ್ಣು ಮುಕ್ಕಿ ಬಂದ
೧೬೯೭. ದೊಮ್ಮೆ ಒಣಗಿ ಹೋಗು = ಭಯವಾಗು
(ದೊಮ್ಮೆ = ಶ್ವಾಸಕೋಶ)
ಪ್ರ : ಸುತ್ತ ಮುತ್ತ ಆನೆಗಳು ಘೀಳಿಟ್ಟಾಗ, ನನಗೆ ದೊಮ್ಮೆ ಒಣಗಿ ಹೋಯ್ತು.
೧೬೯೮. ದೊಮ್ಮೆ ಇಲ್ಲದಿರು = ಶಕ್ತಿ ಇಲ್ಲದಿರು, ಪ್ರಾಣದ ತ್ರಾಣ ಇಲ್ಲದಿರು
ದಮ್ಮಿನ (ಉಸಿರಿನ) ತಿದಿಯೇ ದೊಮ್ಮೆ. ದೊಮ್ಮೆ ಭಗ್ನವಾದರೆ ಪ್ರಾಣವೂ ಇರುವುದಿಲ್ಲ. ತ್ರಾಣವೂ ಇರುವುದಿಲ್ಲ ಎಂಬುದನ್ನು ಸೂಚಿಸುತ್ತದೆ.
ಪ್ರ : ದೊಮ್ಮೆ ಇದ್ದರೆ ಎದ್ದು ಬಂದು ಕೈ ಮಾಡು, ಇಲ್ಲದಿದ್ರೆ ಬಿದ್ದಿರು.
೧೬೯೯. ದೊರೆಯಂತಿರು = ಗಂಭೀರವಾಗಿರು
ಪ್ರ : ದೊಡ್ಡ ಮಗ ದೊರೆಯಂಗಿದ್ರೆ, ಚಿಕ್ಕಮಗ ನರಿಯಂಗೆ ಊಳಿಡ್ತಾನೆ.
೧೭೦೦. ದೊಳ್ಳು ಒಡೆ ಹಾಕು = ಹೊಟ್ಟೆ ಸೀಳು ಹೊಟ್ಟೆಯನ್ನು ಹೋಳು ಮಾಡು.
(ದೊಳ್ಳು < ಡೊಳ್ಳು < ಡೋಲು = ಒಂದು ವಾದ್ಯ ವಿಶೇಷ) ದೇಹದಲ್ಲಿ ಹೊಟ್ಟೆ ಡೊಳ್ಳು ವಾದ್ಯದಂತೆ ಇದೆ ಎಂಬ ಕಲ್ಪನೆಯಿಂದ ಮೂಡಿದ್ದು ಈ ನುಡಿಗಟ್ಟು.
ಪ್ರ : ಕಳ್ಳು ಬಾಯಿಗೆ ಬರೋ ಹಂಗೆ ದೊಳ್ಳು ಒಡೆ ಹಾಕಿದ್ದೀನಿ.
೧೭೦೧. ದೋಣು ಬರಿದಾಗು = ಹೊಟ್ಟೆ ಖಾಲಿಯಾಗು, ಹಸಿವೆಯಾಗು
(ದೋಣು < ದ್ರೋಣ = ಕುಂಭ ಅಥವಾ ದೋಣು < ಡೋಣು < ಡೋಲು = ವಾದ್ಯ ವಿಶೇಷ)
ಪ್ರ : ಗಾದೆ – ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
೧೭೦೨. ದಂಗು ಬಡಿದು ಹೋಗು = ವಿಸ್ಮಯವಾಗು, ಆಘಾತವಾಗು
ಪ್ರ : ಕ್ರಿಯಾಭ್ರಷ್ಟನ ಮಾತು ಕೇಳಿ ದಂಗು ಬಡಿದು ಹೋದೆ.
೧೭೦೩. ದಂಟಾಗು = ದುಂಡಗಾಗು, ಚೆನ್ನಾಗಿ ಆಗು
ಪ್ರ : ಗಾದೆ – ಎಂಟು ವರ್ಷಕ್ಕೆ ನನ್ನ ಮಗ ದಂಟಾದ.
೧೭೦೪. ದಂಡಯಾತ್ರೆ ಮಾಡು = ಅನುತ್ತೀರ್ಣನಾಗು, ದಂಡೆತ್ತಿ ಹೋಗು.
ಪ್ರ : ಬಿ.ಎ ಪಾಸು ಮಾಡೋಕೆ ಹತ್ತು ಸಾರಿ ದಂಡಯಾತ್ರೆ ಮಾಡಿದ.
೧೭೦೫. ದಂಡವಾಗಿ ಮೀಸೆ ಹೊತ್ಕೊಂಡಿರು = ಗಂಡಸುತನದ ಗೈರತ್ತಿಲ್ಲದಿರು
(ದಂಡವಾಗಿ = ವ್ಯರ್ಥವಾಗಿ)
ಪ್ರ : ಯಾಕೆ ದಂಡವಾಗಿ ಮೀಸೆ ಹೊತ್ಕೊಂಡಿದ್ದೀಯಾ, ಹೋಗಿ ಬೋಳಿಸಿ ಹಾಕು
೧೭೦೬. ದಂಡೆಯಾಗು = ಮಸ್ತಾಗು, ಬೇಕಾದಷ್ಟಾಗು, ಆಗಿ ಮಿಗು
(ದಂಡೆ = ಮಸ್ತು, ಹೆಚ್ಚು)
ಪ್ರ : ಇನ್ನೂ ಎರಡು ಪಂಕ್ತಿ ಜನ ಬಂದರೂ, ಮಾಡಿದ ಅನ್ನ ಸಾರು ದಂಡೆಯಾಗ್ತದೆ.
೧೭೦೭. ದಂಡೆ ಒತ್ತು = ಸಾಮು ಮಾಡು, ವ್ಯಾಯಾಮ ಮಾಡು.
ತಮ್ಮೆರಡು ಅಂಗೈಗಳನ್ನು ನೆಲದ ಮೇಲೆ ಊರಿ, ಕಾಲುಗಳನ್ನು ಹಿಂದಕ್ಕೆ ಬಾಚಿ ಬೆರಳ ಮೇಲೆ ನಿಲ್ಲಿಸಿ. ಶರೀರವನ್ನು ಹಿಂದಕ್ಕೆ ತಂದು, ನೆಲಕ್ಕೆ ಸೋಕುವ ಹಾಗೆ ಮುಂದಕ್ಕೆ ಕೊಂಡೊಯ್ದು, ನಾಗರ ಹಾವಿನ ಹೆಡೆಯಂತೆ ಮೇಲಕ್ಕೆ ತಲೆ ಎತ್ತುವ ವ್ಯಾಯಾಮಕ್ಕೆ ದಂಡೆ ಒತ್ತುವುದು ಎಂದು ಹೇಳಲಾಗುತ್ತದೆ.
ಪ್ರ : ಗಾದೆ – ದಂಡೆ ಒತ್ತೋಕೆ ಬರದೋನು ಗಂಡೇ ಅಲ್ಲ.
೧೭೦೮. ದಂಡೆ ಹಾಕು = ಗೌರವಿಸು
(ದಂಡೆ = ಮಾಲೆ, ಹೂವಿನ ಹಾರ)
ಪ್ರ : ನನ್ನನ್ನು ಗೆಲ್ಲಿಸಿದ್ದೂ ಅಲ್ಲದೆ ಕೊರಳಿಗೆ ದಂಡೆ ಹಾಕಿ, ಮಂಡೆ ಎತ್ಕೊಂಡು ತಿರುಗೋ ಹಂಗೆ ಮೆರವಣಿಗೆಯನ್ನೂ ಮಾಡಿಬಿಟ್ರು.
೧೭೦೯. ದಾಂಡದಡಿಗನಾಗಿರು = ಸೀದ ಹಂದಿಯಂತಿರು, ಸಿಗಿದರೆ ಎರಡಾಳಾಗುವಂತಿರು
(ದಾಂಡದಡಿಗ < ದಾಂಡಿಗ + ದಡಿಗ = ಮರದ ದಿಮ್ಮಿಯಂತಿರುವವನು)
ಪ್ರ : ಪಂಚ ಪಾಂಡವರು ದಾಂಡದಡಿಗರಂಗಿದ್ರೂ ಸಭೇಲಿ ಹೆಂಡ್ರು ಮಾನ ಕಾಪಾಡಲಿಲ್ಲ.
೧೭೧೦. ದಿಂಡಾಗಿರು = ಗಟ್ಟಿಮುಟ್ಟಾಗಿರು
(ದಿಂಡು = ಮರದ ತುಂಡು, ದಿಮ್ಮಿ)
ಪ್ರ : ಗಾದೆ – ದಿಂಡಾಗಿರೋ ಮಿಂಡ ಸಿಕ್ಕಿದ್ರೆ ಬೆಂಡಾಗಿರೋ ಗಂಡ ಯಾಕೆ ಬೇಕು?
೧೭೧೧. ದಿಂಡುಗಟ್ಟು = ಹೊರೆಗಟ್ಟು, ಕಂತೆಗಟ್ಟು
(ದಿಂಡು = ಕಂತೆ, ಹೊರೆ)
ಪ್ರ :ಎಲ್ಲವನ್ನೂ ದಿಂಡುಗಟ್ಟಿ, ಮನೆಗೆ ಹೊತ್ಕೊಂಡು ಹೋಗು, ಒಲೆಗೆ ಸೌದೆ ಆಗ್ತವೆ.
೧೭೧೨. ದಿಂಡುರುಳು ಸೇವೆ ಮಾಡು = ನೆಲದಲ್ಲಿ ಉರುಳಾಡಿ ಬೇಡು, ಅಂಗಲಾಚು
ಪ್ರ : ದಿಂಡುರುಳು ಸೇವೆ ಮಾಡಿದ್ರೂ, ಅಲುಗಾಡದೆ ಮೊಂಡ ಕುಂತಂಗೆ ಕುಂತಿದ್ದ.
೧೭೧೩. ದಿಂಡು ಹಾಕು = ಈಡು ಹಾಕು, ಹುದಿ ಹಾಕು
(ದಿಂಡು = ಬದು, ಹುದಿ, ಈಡು)
ಪ್ರ : ಇಲ್ಲಿಗೊಂದು ದಿಂಡು ಹಾಕು, ನೀರು ನಿಂತ್ಕೊಳ್ಳೋಕೆ, ಅನುಕೂಲವಾಗ್ತದೆ.
೧೭೧೪. ದುಂಡುದುಂಡಗಾಗು = ಮೈಕೈ ತುಂಬಿಕೊಳ್ಳು. ಕೈ ಇಟ್ಟರೆ ಜಾರುವಂತಾಗು
ಪ್ರ : ಪರವಾ ಇಲ್ಲ, ಗಂಡನ ಮನೆಗೆ ಹೋದ ಮೇಲೆ ದುಂಡು ದುಂಡಗೆ ಆಗಿದ್ಧೀಯ
೧೭೧೫. ದುಂಬಾಲು ಬೀಳು = ಅಂಗಲಾಚು
(ದುಂಬಾಲು < ದುಂಬುಗಾಲು < ತುಂಬುಕಾಲು = ಎರಡು ಕಾಲು)
ಪ್ರ : ಅವನು ಬಂದು ದುಂಬಾಲು ಬಿದ್ದ, ನಾನು ಹರಿಶಿವಾ ಅನ್ನಲಿಲ್ಲ.
೧೭೧೬. ದುಂಬುದೆಗೆ = ಧೂಳು ಹೊಡಿ
(ದುಂಬು < ತುಂಬು (ತ) = ಧೂಳು)
ಪ್ರ : ಮೊದಲು ರಾಶಿ ಮೇಲಿನ ದುಂಬು ತೆಗೀರಿ
೧೭೧೭. ದೆಂಗಿ ದೇವರು ಮಾಡು = ನುಂಗಿ ನೀರು ಕುಡಿ, ತಿಂದು ತೇಗು
(ದೆಂಗು = ಸಂಭೋಗಿಸು; ದೇವರು ಮಾಡು = ಹಬ್ಬ ಮಾಡು, ಹಬ್ಬದ ಸಡಗರದಲ್ಲಿ ಮುಳುಗು)
ಪ್ರ : ಅವರ ಆಸ್ತೀನೆಲ್ಲ ದೆಂಗಿ ದೇವರು ಮಾಡಿಬಿಟ್ಟ.
೧೭೧೮. ದೊಂಬರಾಟವಾಡು = ಇಲ್ಲದ ಕಸರತ್ತು ಮಾಡು, ಜನಮನ ಗೆಲ್ಲುವ ಪ್ರಯತ್ನ ಮಾಡು
ದೊಂಬರು ಒಂದು ಅಲೆಮಾರಿ ಜನಾಂಗ. ಊರೂರಿಗೆ ಹೋಗಿ ಊರ ಮುಂದೆ ಗಣೆ ನೆಟ್ಟು, ತುದಿಗೆ ಹತ್ತಿ ಹೋಗಿ, ತುದಿಯ ಮೇಲೆ ಹೊಟ್ಟೆ ಹಾಕಿ, ಕೈಕಾಲುಗಳನ್ನು ಚಾಚಿ ಸುತ್ತಲೂ ಗರಗರನೆ ತಿರುಗುವ ಹತ್ತಾರು ಸಾಹಸ ಕಾರ್ಯ ಪ್ರದರ್ಶಿಸಿ, ಜನರಿಂದ ಹಣ, ಧಾನ್ಯ ಸ್ವೀಕರಿಸಿ ಹೊಟ್ಟೆ ಹೊರೆಯುವಂಥವರು.
ಪ್ರ : ಅವನು ಎಷ್ಟೇ ದೊಂಬರಾಟ ಆಡಿದರೂ, ನಾನು ಒಂದು ಪೈಸೆ ಕೂಡ ಕೊಡಲಿಲ್ಲ.
೧೭೧೯. ದೊಂಬಿದಾಸರಾಟವಾಡು = ಸಂಗೀತಮಯವಾದ ನಾಟಕವಾಡು.
(ಆಟ = ನಾಟಕ) ದೊಂಬಿದಾಸರು ಕೂಡ ಒಂದು ಅಲೆಮಾರಿ ಜನಾಂಗವೇ ಆದರೆ ಸಂಗೀತ ಸಾಹಿತ್ಯಕಲೆಗಳಲ್ಲಿ ನಿಷ್ಣಾತರಾದವರು. ಗಂಧರ್ವ ವಿದ್ಯೆಯಲ್ಲಿ ನುರಿತ ಜನ ಅವರು. ಅವರಾಡುವ ನಾಟಕಗಳಲ್ಲಿ ಹಾಡಿನ ಮೋಡಿ ಜನರನ್ನು ಮರುಳು ಮಾಡಿ ಬಿಡುತ್ತದೆ. ಅಷ್ಟು ಮಂಜುಳಗಾಯನವಿರುತ್ತದೆ. ನಾಗರೀಕತೆ ಬಂದಂತೆಲ್ಲ ಆ ಜನ ಊರೂರ ಮೇಲೆ ಹೋಗಿ ನಾಟಕವಾಡುವ ವೃತ್ತಿಯನ್ನು ಬಿಟ್ಟು ಒಂದು ಕಡೆ ತಂಗಿ ವ್ಯವಸಾಯದಲ್ಲೋ ವ್ಯಾಪಾರದಲ್ಲೋ ವಿದ್ಯಾರ್ಜನೆಯಲ್ಲೋ ತೊಡಗಿಕೊಂಡಿರುವುದು ಸಂತೋಷವಾದರೂ, ಆ ನಾಟಕ ಕಲೆಯನ್ನು ಬಿಟ್ಟದ್ದು ದುಃಖಕರ.
ಪ್ರ : ಇವತ್ತು ದೊಂಬಿದಾಸರಾಟಕ್ಕೆ ತಪ್ಪಿಸಿಕೊಂಡೋರುಂಟ ? ನಾನು ಹೋದೇ ಹೋಗ್ತೀನಿ.
ಕಾಮೆಂಟ್‌‌ ಪೋಸ್ಟ್‌ ಮಾಡಿ