ನನ್ನ ಪುಟಗಳು

02 ಅಕ್ಟೋಬರ್ 2015

ಒಂದನೆಯ ನಾಗವರ್ಮ


ಒಂದನೆಯ ನಾಗವರ್ಮ
         ನಾಗವರ್ಮನು ವೆಂಗಿವಿಷಯದ ವೆಂಗಿಪಳು ಗ್ರಾಮದವನು. ತಂದೆ ವೆಂಗಿ ವಿಷಯದಲ್ಲಿನ ಸಪ್ತ ಗ್ರಾಮಗಳಲ್ಲಿ ಮನೋಹರವಾದ ವೆಂಗಿಪಳುವಿನಲ್ಲಿದ್ದ ಕೌಂಡಿನ್ಯ ಗೋತ್ರದ ವೆಣ್ಣಮಯ್ಯ , ತಾಯಿ ಪೋಳಕಬ್ಬೆ. ಚಂದ್ರನೆಂಬ ರಾಜನ ಆಸ್ಥಾನದಲ್ಲಿ ಈ ಕವಿ ಇದ್ದನು. ಈತನ ಕಾಲ ೧೦ನೆಯ ಶತಮಾನದ ಉತ್ತರಭಾಗ ಅಥವಾ ೧೧ನೆಯ ಶತಮಾನದ ಪೂರ್ವಭಾಗ.ರನ್ನಕವಿಯ ಸಮಕಾಲೀನ.ಇವನ ಕೃತಿಗಳು - ೧) ಕರ್ಣಾಟಕ ಕಾದಂಬರಿ ಮತ್ತು ೨) ಛಂದೋಂಬುಧಿ

೧) ಕರ್ಣಾಟಕ ಕಾದಂಬರಿ : ಇದು ಒಂದು ಚಂಪೂಕಾವ್ಯ. ಸಂಸ್ಕೃತದಲ್ಲಿ ಬಾಣಭಟ್ಟ ಹಾಗು ಆತನ ಮಗ ಭೂಷಣಭಟ್ಟರಿಂದ ರಚಿತವಾದ "ಕಾದಂಬರಿ"ಯನ್ನು ಆಧರಿಸಿ ಈ ಕರ್ಣಾಟಕ ಕಾದಂಬರಿಯನ್ನು ರಚಿಸಿದನು. ಚಂಪೂರೂಪದ ಈ ಕೃತಿ ಸಂಸ್ಕೃತದ ಅನುವಾದವಾದರೂ ಸ್ವತಂತ್ರಕೃತಿ ಎನ್ನಬಹುದಾದ ಶ್ರೇಷ್ಠ ಗ್ರಂಥ.

೨) ಛಂದೋಂಬುಧಿ :  ಕನ್ನಡ ಛಂದಸ್ಸನ್ನು ತಿಳಿಸುವ ಈ ಗ್ರಂಥವನ್ನು ಕ್ರಿ.ಶ. ೯೯೦ ರ ಸುಮಾರಿನಲ್ಲಿ ಬರೆದನು.

ಇವನಿಗೆ ಕವಿರಾಜಹಂಸ, ಬುಧಾಬ್ಜವನಕಳ ಹಂಸ, ಕಂದಕಂದರ್ಪ - ಇತ್ಯಾದಿ ಅನೇಕ ಬಿರುದುಗಳಿದ್ದವು. ಈತನು ಯುದ್ಧವೀರನಾಗಿದ್ದ ಹಾಗೆಯೂ ತೋರುವುದು. ಶ್ರವಣಬೆಳ್ಗೊಳದ ಗೊಮ್ಮಟೇಶ್ವರನ ವಿಗ್ರಹವನ್ನು ಕೆತ್ತಿಸಿ ಪ್ರಸಿದ್ಧನಾಗಿರುವ ಚಾವುಂಡರಾಯನೆಂಬುವನು ಇವನ ಆಶ್ರಯದಾತನು. ಅಜಿತಸೇನದೇವ ನೆಂಬುವರು ಇವನಿಗೆ ಗುರುಗಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ