|
ಕ್ರ. ಸಂ. |
ವ್ಯಾಕರಣಾಂಶಗಳು |
|
1 |
|
|
2 |
|
|
3 |
|
|
4 |
|
|
5 |
|
|
6 |
|
|
7 |
|
|
8 |
|
|
9 |
|
|
10 |
|
|
11 |
23 ಜೂನ್ 2024
Grammar-Quizzes
26 ಸೆಪ್ಟೆಂಬರ್ 2023
10ನೇ ತರಗತಿ ಪದ್ಯಪಾಠ-7 ವೀರಲವ-ವ್ಯಾಕರಣ/ಛಂದಸ್ಸು (10th-Veeralava-Grammar)
07 ಜನವರಿ 2021
10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ವ್ಯಾಕರಣಾಂಶಗಳು
ಸಂಬಂಧವಾಚಕಗಳು : ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಚಿಕ್ಕಪ್ಪ, ಮಾವ, ಬಾವ, ಅಣ್ಣ, ತಂಗಿ, ತಮ್ಮ ಇತ್ಯಾದಿ.
ಪ್ರಾಣಿಗಳು : ಇಲಿ, ಹಾವು, ಎತ್ತು, ಎಮ್ಮೆ, ದನ, ಕೋಳಿ ಇತ್ಯಾದಿ.
ಪದಾರ್ಥಗಳು : ಬಾಗಿಲು, ಉಪ್ಪು, ಹಾಲು, ಚಿಲಕ ಇತ್ಯಾದಿ.
ಸರ್ವನಾಮಗಳು : ನಾನು, ಅವನು, ನೀನು, ಅವಳು, ಅದು, ಅವು, ಅವರು ಇತ್ಯಾದಿ.
ಸಂಖ್ಯಾವಾಚಕಗಳು : ಒಂದರಿಂದ ಒಂಬೈನೂರತೊಂಬತ್ತೊಂಬತ್ತರವರೆಗಿನ ಸಂಖ್ಯೆಗಳು.
ಧಾತುಗಳು : ತಿನ್ನು, ಹೋಗು, ಕೇಳು, ಬಿಡು ಇತ್ಯಾದಿ.
ಫಾರ್ಸಿಯಿಂದ - ಅಬಕಾರಿ, ರಸ್ತೆ, ದವಾಖಾನೆ, ಚೌಕಾಷಿ, ಅಜಮಾಯಿಸಿ, ಆಮದು, ದಲ್ಲಾಳಿ - ಇತ್ಯಾದಿ
ಅರಬ್ಬೀಯಿಂದ - ಅಮಾನತು, ಅಸಲು, ಇನಾಮು, ಕಾಯ್ದೆ, ಗಲೀಜು, ತಕರಾರು, ತರಬೇತು, ನಕಲಿ ಇತ್ಯಾದಿ
ಪೋರ್ಚ್‌ಗೀಸ್‌ನಿಂದ - ಮೇಜು, ತಂಬಾಕು, ಅನಾನಸು, ಸಾಬೂನು, ಚೊಂಬು, ಇಸ್ತ್ರಿ, ರಸೀದಿ - ಇತ್ಯಾದಿ.
ಉರ್ದುವಿನಿಂದ - ಕಿಮ್ಮತ್ತು, ತಾರೀಕು, ತಾಲೂಕು, ಅಹವಾಲು, ಇಲಾಖೆ, ದರ್ಜೆ, ಬಂದೂಕು, ರುಜು, ಶುರು, ಶಾಮೀಲು - ಇತ್ಯಾದಿ.
ಹಿಂದೂಸ್ಥಾನಿ - ಅರ್ಜಿ, ಕಚೇರಿ, ಕಾರ್ಖಾನೆ, ಸಲಾಮು, ದರ್ಬಾರು, ಕುರ್ಚಿ, ಕಾಗದ, ಹುಕುಂ - ಇತ್ಯಾದಿ.
ಇಂಗ್ಲಿಷ್‌ನಿಂದ - ಬಸ್ಸು, ಕಾರು, ಕಾಲೇಜು, ಲೈಟು, ಪೆನ್ನು - ಇತ್ಯಾದಿ.
ತತ್ಸಮ-ತದ್ಭವ
ಸಂಸ್ಕೃತದಿಂದ ಕನ್ನಡಕ್ಕೆ ಸಾಕ? ಪದಗಳು ಬಂದಿವೆ. ಹೀಗೆ ಸಂಸ್ಕೃತದಿಂದ ಬಂದ ಪದಗಳಲ್ಲಿ ಕೆಲವು ಅಲ್ಪಸ್ವಲ್ಪ ಬದಲಾವಣೆಗೊಂಡು ಬಂದರೆ ಇನ್ನು ಕೆಲವು ಪೂರ್ತಿ ಬದಲಾವಣೆಗೊಂಡು ಬಂದಿವೆ. ಹೀಗೆ ಸಂಸ್ಕೃತದಿಂದ ಬಂದಿರುವ ಪದಗಳನ್ನು ತತ್ಸಮ-ತದ್ಭವಗಳೆಂದು ಕರೆಯುವ ರೂಢಿಯಿದೆ.
ತತ್ಸಮಗಳು : ಸಂಸ್ಕೃತದಿಂದ ಬರುವಾಗ ವಿಕಾರ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಪದಗಳನ್ನು ’ತತ್ಸಮ’ಗಳೆಂದು ಕರೆಯುತ್ತಾರೆ. ’ತತ್’ ಎಂದರೆ ’ಅದಕ್ಕೆ’ (ಸಂಸ್ಕೃತಕ್ಕೆ) ’ಸಮ’ ಎಂದರೆ ’ಸಮಾನ’ ಎಂದರ್ಥ. ಅಂದರೆ ಸಂಸ್ಕೃತಕ್ಕೆ ಸಮಾನವಾದದ್ದು ಎಂದರ್ಥ. ತದ್ಭವಗಳ ಸಂಸ್ಕೃತ ರೂಪವನ್ನೂ ತತ್ಸಮ ಎಂದು ಕರೆಯುತ್ತಾರೆ.
ಉದಾ : ರಾಮ, ವಸಂತ, ಸೋಮ, ಚಂದ್ರ, ಗ್ರಹ, ಸ್ತ್ರೀ, ಶ್ರೀ, ಭುವನ, ಶ್ರುತಿ, ಕಾವ್ಯ, ಪಶು – ಇತ್ಯಾದಿ.
ತದ್ಭವಗಳು : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ವಿಕಾರವನ್ನಾಗಲೀ, ಪೂರ್ಣ ವಿಕಾರವನ್ನಾಗಲೀ ಹೊಂದಿ ಬಂದಿರುವ ಪದಗಳನ್ನು ’ತದ್ಭವ’ ಎಂದು ಕರೆಯುತ್ತಾರೆ. ’ತತ್’ ಎಂದರೆ ಅದರಿಂದ, ಎಂದರೆ ಸಂಸ್ಕೃತದಿಂದ ’ಭವ’ ಎಂದರೆ ಹುಟ್ಟಿದ್ದು ಅಂದರೆ ಸಂಸ್ಕೃತದಿಂದ ಹುಟ್ಟಿದ್ದು ಎಂದರ್ಥ.
ಅಲ್ಪಸ್ವಲ್ಪ ಬದಲಾವಣೆಗೊಂಡ ತದ್ಭವರೂಪಗಳು : ಶಶಿ-ಸಸಿ, ಶಿರ-ಸಿರ, ಕಲಶ-ಕಳಸ, ಅಂಕುಶ- ಅಂಕುಸ, ವ?-ವರುಸ ಇತ್ಯಾದಿ
ಪೂರ್ಣ ವ್ಯತ್ಯಾಸ ಹೊಂದಿದ ತದ್ಭವರೂಪಗಳು : ದ್ಯೂತ-ಜೂಜು, ವಂಧ್ಯಾ-ಬಂಜೆ, ವಿದ್ಯಾಧರ- ಬಿಜ್ಜೋದರ, ವೈಶಾಖ-ಬೇಸಗೆ, ಕುಠಾರ-ಕೊಡಲಿ, ಪಾದುಕಾ-ಹಾವುಗೆ, ಅರ್ಕ-ಎಕ್ಕ ಇತ್ಯಾದಿ.
ವ್ಯಾಕರಣಾಂಶಗಳ ಹೆಚ್ಚುವರಿ ಪ್ರಶ್ನೆಗಳು
೧. ’ವಿಲಾತಿ’ ಪದದ ಸಮಾರ್ಥಕ ಪದ :ಎ) ಆಯುಧ ಬಿ) ವಿಹಾರ ಸಿ) ವಿಲಂತಿ ಡಿ) ವಿಲಾಯಿತಿ.೨. ’ ಸಕ್ಕರೆ ’ ಪದದ ತದ್ಭವರೂಪ :ಎ) ಸಂಕರೆ ಬಿ) ಶರ್ಕರಾ ಸಿ) ಶಬ್ದ ಡಿ) ಸಂಬಂಧ೩. ’ ಚಟೇಕಾರ ’ - ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ :ಎ) ಕೃದಂತನಾಮ ಬಿ) ಅವ್ಯಯ ಸಿ) ನಾಮಪದ ಡಿ) ತದ್ಧಿತಾಂತನಾಮ.೪. ’ಮಂಗಳಸೂತ್ರ ’ - ಪದವು ಈ ಸಮಾಸಕ್ಕೆ ಉದಾಹರಣೆ :ಎ) ದ್ವಿಗುಸಮಾಸ ಬಿ) ಅಂಶಿಸಮಾಸ ಸಿ) ತತ್ಪುರುಷಸಮಾಸ ಡಿ) ದ್ವಂದ್ವಸಮಾಸ೫. ’ ಗುಡದಾಗ ’ ಪದದ ಗ್ರಾಂಥಿಕ ರೂಪ :ಎ) ಗುಡ್ಡದಲ್ಲಿ ಬಿ) ಗುಡ್ಡದಮೇಲೆ ಸಿ) ಗುಡ್ಡದೊಳಗೆ ಡಿ) ಗುಡ್ಡದಕೆಳಗೆ೬. ’ ನಡುರಾತ್ರಿ ’ ಪದವು ಈ ಸಮಾಸವಾಗಿದೆ :ಎ) ಗಮಕಸಮಾಸ ಬಿ) ಅಂಶಿಸಮಾಸ ಸಿ) ತತ್ಪುರುಷಸಮಾಸ ಡಿ) ಕರ್ಮಧಾರೆಯಸಮಾಸ೭. ’ಕಬುಲ’ ಪದದ ಅರ್ಥ :ಎ) ಕಪ್ಪಕಾಣಿಕೆ ಬಿ) ಅನುಮತಿ ಸಿ) ಪಿತೂರಿ ಡಿ) ಸೈನ್ಯ೮. ’ವಿದ್ಯಾಧರ ’ ಪದದ ತದ್ಭವ ರೂಪ :ಎ) ವಿದ್ಯಾವಂತ ಬಿ) ಬುದ್ಧಿವಂತ ಸಿ) ಬಿಜ್ಜೋದರ ಡಿ) ವಿದ್ಯೆಹೀನ೯. ’ಅಂಕುಶ’ ಪದದ ತತ್ಸಮ ರೂಪವಿದು :ಎ) ಅಂಕುಸ ಬಿ) ಅಂಕಶ ಸಿ) ಶೂಲ ಡಿ) ಬರ್ಜಿ೧೦. ’ ದಮ್ಮಡಿ ’ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ.ಎ) ಗ್ರೀಕ್ ಮತ್ತು ರೋಮನ್ ಬಿ) ಉರ್ದು ಸಿ) ಹಿಂದೂಸ್ಥಾನಿ ಡಿ) ಪರ್ಷಿಯನ್೧೧. ’ ಅಬಕಾರಿ ’ ಪದವು ಈ ಭಾಷೆಯ ಪದವಾಗಿದೆ :ಎ) ಹಿಂದೂಸ್ಥಾನಿ ಬಿ) ಫಾರ್ಸಿ ಸಿ) ಪೋರ್ಚಗೀಸ್ ಡಿ) ಅರಬ್ಬೀ೧೨. ’ ಹುಕುಂ ’ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ :ಎ) ಇಂಗ್ಲೀಷ್ ಬಿ) ಪರ್ಷಿಯನ್ ಸಿ) ಹಿಂದೂಸ್ಥಾನಿ ಡಿ) ಉರ್ದು೧೩. ’ ಬಂದೂಕು ’ ಪದವು ಈ ಭಾಷೆಯ ಶಬ್ದವಾಗಿದೆ :ಎ) ಉರ್ದು ಬಿ) ಪರ್ಷಿಯನ್ ಸಿ) ಅರಬ್ಬೀ ಡಿ) ಹಿಂದೂಸ್ಥಾನಿ
೧. ಹಿಂಗೆ - ಹೀಗೆ
೨. ಮ್ಯಾಗ - ಮೇಲೆ
೩. ಕಳಿವ್ಯಾರೆ - ಕಳುಹಿಸಿದ್ದಾರೆ.
೪. ಇಲ್ಲದ್ಹಂಗ - ಇಲ್ಲದ ಹಾಗೆ
೫. ಇಸವಾಸ - ವಿಶ್ವಾಸ
೬. ಸಕ್ಕಾರಿ - ಸಕ್ಕರೆ
೭. ಕುಂಪಣಿ - ಕಂಪನಿ
೮. ಹೋಯ್ತ - ಹೋಯಿತು.
೯. ಸಿಡಿದ್ಹಾಂಗ - ಸಿಡಿದ ಹಾಗೆ.
೧೦. ಮಾಡ್ಯಾರೊ - ಮಾಡಿದರು
೧೧. ಗುಡದಾಗ - ಗುಡ್ಡದಲ್ಲಿ
೧೨. ಬ್ಯಾಡಿರಿ - ಬೇಡಿರಿ.
10ನೇ ತರಗತಿ-ಕನ್ನಡ-ಪದ್ಯ-03-ಹಲಗಲಿ ಬೇಡರು-ಭಾಷಾಭ್ಯಾಸ
ಮುಂಗೈ = ಕೈಯ + ಮುಂದು = ಅಂಶಿಸಮಾಸ
ನಡು ರಾತ್ರಿ = ರಾತ್ರಿಯ +ನಡುವೆ = ಅಂಶಿ ಸಮಾಸ
ಹನುಮ ಭೀಮರಾಯ = ಹನುಮನೂ + ಭೀಮನೂ + ರಾಮನೂ = ದ್ವಂದ್ವ ಸಮಾಸ
ಮೋಸಮಾಡು = ಮೋಸವನ್ನು + ಮಾಡು = ಕ್ರಿಯಾಸಮಾಸ
೨. ಗ್ರಾಮ್ಯ ಪದಗಳಿಗೆ ಗ್ರಂಥಸ್ಥ ರೂಪ ಬರೆಯಿರಿ.
ಹೀಂಗ-ಹೀಗೆ,
ಮ್ಯಾಗ-ಮೇಲೆ,
ಕಳುವ್ಯಾರೆ-ಕಳಿಸಿದರು,
ಇಲ್ಲದಂಗ-ಇಲ್ಲದ ಹಾಗೆ,
ಇಸವಾಸ-ವಿಶ್ವಾಸ,
ಸಕ್ಕಾರಿ-ಸಕ್ಕರೆ.
೩. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.
ಅ) ”ಒಳಗಿನ ಮಂದಿ ಗುಂಡು ಹೊಡೆಸಿದರೊ ಮುಂಗಾರಿ ಸಿಡಿಲು ಸಿಡಿದಾಂಗ ”.
ಉಪಮೇಯ : ಒಳಗಿನ ಮಂದಿ ಹೊಡೆಸಿದ ಗುಂಡು
ಉಪಮಾನ : ಮುಂಗಾರಿನ ಸಿಡಿಲು
ಉಪಮಾವಾಚಕ : ಹಾಂಗ (ಹಾಗೆ)
ಸಮಾನಧರ್ಮ : ಸಿಡಿಯುವುದು
ಅಲಂಕಾರ : ಉಪಮಾಲಂಕಾರ
ಸಮನ್ವಯ: ಉಪಮೇಯವಾದ ಒಳಗಿನ ಮಂದಿ ಹೊಡೆಸಿದ ಗುಂಡನ್ನು ಉಪಮಾನವಾದ ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಆ) ”ಸಿಡಿಲ ಸಿಡಿದಾಂಗ ಗುಂಡು ಸುರಿದಾವ ”.
ಉಪಮೇಯ _ ಸುರಿದ ಗುಂಡು (ಗುಂಡು ಸುರಿಯುವುದು)
ಉಪಮಾನ - ಸಿಡಿದ ಸಿಡಿಲು (ಸಿಡಿಲು ಸಿಡಿಯುವುದು)
ಉಪಮಾವಾಚಕ - ಹಾಂಗ (ಹಾಗೆ)
ಸಮಾನ ಧರ್ಮ - ಸಿಡಿಯುವುದು
ಅಲಂಕಾರ - ಉಪಮಾಲಂಕಾರ
ಸಮನ್ವಯ - ಉಪಮೇಯವಾದ ಗುಂಡು ಸುರಿಯುವುದನ್ನು ಉಪಮಾನವಾದ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
೫. ದೇಶ್ಯ ಅನ್ಯ ದೇಶ್ಯಪದಗಳನ್ನು ಗುರುತಿಸಿ.
ದೇಶ್ಯ - ಹೊತ್ತು, ಬಂಟರು, ಮುಂಗೈ, ಮುಂಗಾರು
ಅನ್ಯದೇಶ್ಯ - ಹತಾರ, ಮಸಲತ್ತು, ಹುಕುಮ, ಸಾಹೇಬ, ಕಾರಕೂನ, ಸಿಪಾಯಿ, ಕಬುಲ
*********
02 ಡಿಸೆಂಬರ್ 2020
10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ - ವ್ಯಾಕರಣಾಂಶಗಳು : ಕ್ರಿಯಾಪದ ಮತ್ತು ವಿಭಕ್ತಿ ಪ್ರತ್ಯಯಗಳು
ಎ) ಕರ್ತರಿ
೨. ಈ ಕೆಳಗಿನವುಗಳಲ್ಲಿ ವಿದ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ :
ಎ) ತಿಂದಾರು
೫. ‘ಕಲುಷಿತವಾದೀ ನದೀಜಲಗಳಿಗೆ ಮುಂಗಾರಿನ ಮಳೆಯಾಗೋಣ’ ಈ ವಾಕ್ಯದಲ್ಲಿ ಷಷ್ಠೀ ವಿಭಕ್ತಿ ಪ್ರತ್ಯಯ ಹೊಂದಿರುವ ಪದ :
ಎ) ಕಲುಷಿತವಾದೀ
೬. ‘ಹೊಸ ಎಚ್ಚರದೊಳು ಬದುಕೋಣ’ ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವಿಭಕ್ತಿ ಪ್ರತ್ಯಯ :
ಎ) ಪಂಚಮೀ
೭. ಒಂದು ವಿಭಕ್ತಿ ಪ್ರತ್ಯಯಕ್ಕೆ ಬದಲಾಗಿ ಬೇರೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವುದನ್ನು ಹೀಗೆನ್ನುತ್ತಾರೆ:
ಎ) ವಚನ ಪಲ್ಲಟ
೮. ದ್ವಿತೀಯಾ ವಿಭಕ್ತಿ ಪ್ರತ್ಯಯದಲ್ಲಿರುವ ಕಾರಕಾರ್ಥ :
ಎ) ಕರ್ತ್ರರ್ಥ
೯. ದೆಸೆಯಿಂದ, ಅತ್ತಣಿಂ- ಈ ಪ್ರತ್ಯಯಗಳನ್ನು ಹೊಂದಿರುವ ವಿಭಕ್ತಿ :
ಎ) ಪಂಚಮೀ
೧೦. ‘ನಿಲ್ಲಿಸು’ ಪದದಲ್ಲಿರುವ ಧಾತು :
೧೧. ‘ಕಲುಷಿತ’ ಪದದ ಸಮಾನಾರ್ಥಕ ಪದ :
ಎ) ಮಲಿನ
೧೨. ‘ಕಾಡುಮೇಡು’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ಎ) ದ್ವಿರುಕ್ತಿ
೧೩. ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ಸೇತುವೆಯಾಗೋಣ- ಇಲ್ಲಿ ಗೆರೆ ಎಳೆದ ಪದವು ಈ ವ್ಯಾಕರಣಾಂಶವಾಗಿದೆ :
೧೪. ‘ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ’ ಈ ವಾಕ್ಯದಲ್ಲಿರುವ ಅಲಂಕಾರ : ಎ) ಉಪಮಾ
೧೫. ಅಡ್ಡಗೋಡೆ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಎ) ಅಂಶಿ
೧೬. ‘ಮುಂಗಾರು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಎ) ಅಂಶಿ
೬. ಸಿ) ಸಪ್ತಮಿ ೭. ಬಿ) ವಿಭಕ್ತಿ ಪಲ್ಲಟ ೮. ಸಿ) ಕರ್ಮಾರ್ಥ ೯. ಎ) ಪಂಚಮೀ ೧೦. ಡಿ) ನಿಲ್ಲು
೧೧. ಎ) ಮಲಿನ ೧೨. ಬಿ) ಜೋಡುನುಡಿ ೧೩. ಡಿ) ನುಡಿಗಟ್ಟು ೧೪. ಬಿ) ರೂಪಕ ೧೫. ಎ)ಕರ್ಮಧಾರಯಸಮಾಸ ೧೬. ಅಂಶಿಸಮಾಸ ]
ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ :
೨. ಓದರು : ನಿಷೇಧಾರ್ಥಕ : : ಓದಿಯಾರು : __________
೩. ಹಡಗನು : ಪ್ರಥಮಾ ವಿಭಕ್ತಿ : : ಮನುಜರ : __________
೪. ಭಯದಿಂದ : ತೃತೀಯಾ ವಿಭಕ್ತಿ : : ಎಚ್ಚರದೊಳು : __________
೫. ಷಷ್ಠಿ ವಿಭಕ್ತಿ : ಸಂಬಂಧಕಾರಕ : : ಚತುರ್ಥಿ ವಿಭಕ್ತಿ : __________
೬. ಪ್ರಥಮಾ ವಿಭಕ್ತಿ : ಕರ್ತೃಕಾರಕ : : ಸಪ್ತಮಿ ವಿಭಕ್ತಿ : __________
23 ನವೆಂಬರ್ 2020
10ನೇ ತರಗತಿ-ಕನ್ನಡ-ಗದ್ಯ-06-ವೃಕ್ಷಸಾಕ್ಷಿ - ವ್ಯಾಕರಣ
೧] ಮೊದಲೆರಡು ಪದಗಳಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
೧) ವಡ್ಡಾರಾಧನೆ : ಶಿವಕೋಟ್ಯಾಚಾರ್ಯ : : ಪಂಚತಂತ್ರ : ದುರ್ಗಸಿಂಹ
೨) ಕಬ್ಬ : ಕಾವ್ಯ : : ಬೇಹಾರಿ : ವ್ಯಾಪಾರಿ
೩) ಅನೃತ : ಸುಳ್ಳು : : ಕೃತ್ರಿಮ : ಮೋಸ
೪) ಬಂದಲ್ಲದೆ : ಲೋಪ : : ಧೃತಿಗೆಟ್ಟು : ಆದೇಶ
೫) ದೈವಭಕ್ತಿ : ತತ್ಪುರುಷ : : ಅಬ್ಜೋದರ : ಬಹುವ್ರೀಹಿ
೨] ಈ ಪದಗಳನ್ನು ವಿಂಗಡಿಸಿ, ಸಂಧಿಯ ಹೆಸರನ್ನು ತಿಳಿಸಿ.
೧) ಪೋಗಲ್‌ವೇೞ್ಕುಂ = ಪೋಗಲ್ + ಬೇೞ್ಕುಂ - ವಕಾರಾದೇಶ ಸಂಧಿ
೨) ತಕ್ಕನಿತು = ತಕ್ಕ + ಅನಿತು - ಲೋಪಸಂಧಿ
೩) ಪೂೞ್ದೆಡೆ = ಪೂೞ್ದ + ಎಡೆ - ಲೋಪಸಂಧಿ
ಋ] ನೀಡಿರುವ ಪದಗಳನ್ನು ವಿಗ್ರಹಿಸಿ, ಸಮಾಸವನ್ನು ಹೆಸರಿಸಿ.
೧) ಅತಿಕುಟಿಲ = ಅತಿಯಾದ + ಕುಟಿಲ - ಕರ್ಮಧಾರಯ ಸಮಾಸ
೨) ಕೈಕೊಳ್ವುದು = ಕೈಯನ್ನು + ಕೊಳ್ವುದು (ಕೈಯಂ + ಕೊಳ್ವುದು) - ಕ್ರಿಯಾಸಮಾಸ
೩) ಕಟ್ಟೇಕಾಂತ = ಕಡಿದಾದ + ಏಕಾಂತ - ಕರ್ಮಧಾರಯ ಸಮಾಸ
೪) ಸ್ವಾಮಿದ್ರೋಹ = ಸ್ವಾಮಿಗೆ + ದ್ರೋಹ - ತತ್ಪುರುಷ ಸಮಾಸ
೫) ಪರಧನ = ಪರರ + ಧನ - ತತ್ಪುರುಷ ಸಮಾಸ
೬) ಧನಹರಣ = ಧನದ + ಹರಣ - ತತ್ಪುರುಷ ಸಮಾಸ
೭) ಸಾಕ್ಷಿಮಾಡಿ = ಸಾಕ್ಷಿಯನ್ನು + ಮಾಡಿ - ಕ್ರಿಯಾಸಮಾಸ
೮) ಬಲವಂದು = ಬಲಮಂ + ಬಂದು - ಕ್ರಿಯಾಸಮಾಸ
ಎ] ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣವಿಂಗಡಿಸಿ, ಛಂದಸ್ಸಿನ ಹೆಸರು ಮತ್ತು ಲಕ್ಷಣ ಬರೆಯಿರಿ.
-ಇದು ಕಂದ ಪದ್ಯ
೪|೪|೪|೪|೪ = ೨೦
ಆ) ಮೇದಿನಿ | ಯಂಕ್ರಮ | ಕ್ರಮದೆ | ಪುರ್ವಿದು | ದಾತ್ತನ | ಭೋವಿ ಭಾ | ಗಮಾ
-ಇದು ಉತ್ಪಲಮಾಲಾವೃತ್ತ
ಲಕ್ಷಣ:- ಭರನಭಭರಲಗ
************
20 ನವೆಂಬರ್ 2020
10ನೇ ತರಗತಿ-ಕನ್ನಡ-ಗದ್ಯ-06-ಎದೆಗೆ ಬಿದ್ದ ಅಕ್ಷರ-ಭಾಷಾಭ್ಯಾಸ-ವ್ಯಾಕರಣಾಂಶಗಳು
ತಲೆಯಲ್ಲಿ + ನೋವು = ತಲೆನೋವು
ಕರ್ಮಧಾರಯ ಸಮಾಸ :
ಮೆಲ್ಲಿತು + ಮಾತು = ಮೆಲ್ವಾತು
ಹೊಸದು + ಕನ್ನಡ = ಹೊಸಗನ್ನಡ
ದ್ವಿಗುಸಮಾಸ :
ಮೂರು + ಕಣ್ಣು = ಮುಕ್ಕಣ್ಣು
ಸಪ್ತಗಳಾದ + ಸ್ವರಗಳು = ಸಪ್ತಸ್ವರಗಳು


