ಭಾಷಾ ಚಟುವಟಿಕೆ
೧. ವಿಗ್ರಹಿಸಿ ಸಮಾಸವನ್ನು ಹೆಸರಿಸಿ.
೧. ಸೊಲ್ಗೇಳಿ - ಸೊಲ್ಲನ್ನು + ಕೇಳಿ = ಕ್ರಿಯಾಸಮಾಸ
೨. ನಲ್ಗುದುರೆ - ನಲ್ಲಿತು + ಕುದುರೆ = ಕರ್ಮಧಾರಯಸಮಾಸ
೩. ಬಿಲ್ಗೊಂಡು - ಬಿಲ್ಲನ್ನು + ಕೊಂಡು = ಕ್ರಿಯಾಸಮಾಸ.
೪. ಬಿಲ್ದಿರುವನೇರಿಸಿ - ಬಿಲ್ಲಿನತಿರುವನ್ನು + ಏರಿಸಿ = ಕ್ರಿಯಾಸಮಾಸ.
೫. ಪೂದೋಟ - ಪೂವಿನ + ತೋಟ = ತತ್ಪುರುಷಸಮಾಸ.
೬. ಲಿಖಿತವನೋದಿ - ಲಿಖಿತವನ್ನು + ಓದಿ = ಕ್ರಿಯಾಸಮಾಸ
೭. ಯಜ್ಞತುರುಗ - ಯಜ್ಞದ + ತುರುಗ = ತತ್ಪುರುಷಸಮಾಸ.
೮. ಕದಳಿದ್ರುಮ - ಕದಳಿಯ + ದ್ರುಮ = ತತ್ಪುರುಷಸಮಾಸ.
೯. ಅಬ್ಧಿಪ - ಅಬ್ಧಿಗೆ (ಸಮುದ್ರಕ್ಕೆ) ಪತಿ (ಒಡೆಯ) ಯಾರೋ ಆತ (ವರುಣ) = ಬಹುವ್ರೀಹಿಸಮಾಸ.
೨. ತತ್ಸಮ-ತದ್ಭವ ಬರೆಯಿರಿ.
೧. ವೀರ - ಬೀರ
೨. ಯಜ್ಞ - ಜನ್ನ
೩. ಬಂಜೆ - ವಂದ್ಯಾ
೪. ಕುವರ - ಕುಮಾರ
೫. ಲೋಕ - ಲೋಗ
೩. ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.
೧. ಚರಿಸುತಧ್ವರದ - ಚರಿಸುತ + ಅಧ್ವರದ = ಲೋಪಸಂಧಿ.
೨. ನಿಜಾಶ್ರಮ - ನಿಜ + ಆಶ್ರಮ = ಸವರ್ಣಧೀರ್ಘಸಂಧಿ.
೩. ಲೇಖನವನೋದಿ - ಲೇಖನವನು + ಓದಿ = ಲೋಪಸಂಧಿ.
೪. ತೆಗೆದುತ್ತರೀಯಮಂ - ತೆಗೆದು + ಉತ್ತರೀಯಮಂ = ಲೋಪಸಂಧಿ.
೫. ಬೇಡಬೇಡರಸುಗಳ - ಬೇಡಬೇಡ + ಅರಸುಗಳ = ಲೋಪಸಂಧಿ.
೬. ನಿಂತಿರ್ದನ್ - ನಿಂತು + ಇರ್ದನ್ = ಲೋಪಸಂಧಿ.
೭. ಪೂದೋಟ - ಪೂ + ತೋಟ = ಆದೇಶಸಂಧಿ.
೮. ಸೊಲ್ಗೇಳಿ - ಸೊಲ್ಲು + ಕೇಳಿ = ಆದೇಶಸಂಧಿ.
೪. ಪ್ರಸ್ತಾರಹಾಕಿ ಗಣ ವಿಭಾಗ ಮಾಡಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ.
5 5 5 5
_ u _ _ _ u uuuuu _ _ u
ಉರ್ವಿಯೊಳ್ | ಕೌಸಲ್ಯೆ | ಪಡೆದಕುವ | ರಂರಾಮ|
5 5 5 5
_ u _ _ u _ uu_u uuuuu
ನೊರ್ವನೇ | ವೀರನಾ | ತನಯಜ್ಞ | ತುರಗಮಿದು|
5 5 5 5 5 5 2
_ uuu _ u _ _ uu_ uuu _ _ u _ uuu _ _
ನಿರ್ವಹಿಸ | ಲಾರ್ಪರಾ | ರಾದೊಡಂ | ತಡೆಯಲೆಂ | ದಿರ್ದಲೇ | ಖನವನೋ |ದಿ
ಛಂದಸ್ಸು : ವಾರ್ಧಕ ಷಟ್ಪದಿ
ವಾರ್ಧಕ ಷಟ್ಪದಿಯ ಲಕ್ಷಣಗಳು:
* ಆರು ಸಾಲುಗಳಿರುತ್ತವೆ.
* ೧, ೩, ೪ ಮತ್ತು ೫ ನೆಯ ಸಾಲುಗಳು ತಲಾ ೨೦ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೪ ಗಣಗಳಿರುತ್ತವೆ.
* ೩ ಮತ್ತು ೬ ನೆಯ ಸಾಲುಗಳು ತಲಾ ೩೨ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೬ ಗಣಗಳೊಂದಿಗೆ ಒಂದು ಗುರು ಇರುತ್ತದೆ.
* ಮೊದಲನೆಯ ಸಾಲಿನನ ಗಣವಿನ್ಯಾಸ : 5/5/5/5/
ಬಹು ಆಯ್ಕೆ ಪ್ರಶ್ನೆಗಳು:
೧. ’ರಗಳೆ’ ಪದದ ತದ್ಭವ ರೂಪವಿದೆ.
ಎ) ರಘಟಾ ಬಿ) ರಗಳಾ ಸಿ) ರಾಗಟ ಡಿ) ರಂಗಗೀತೆ
೨. ಇವುಗಳಲ್ಲಿ ಬಹುಪಾದಗಳುಳ್ಳ ಪದ್ಯ :
ಎ) ಕಂದ ಬಿ) ಷಟ್ಟದಿ ಸಿ) ವೃತ್ತ ಡಿ) ರಗಳೆ
೩. ವಾರ್ಧಕ ಷಟ್ಪದಿಯ ಒಂದು ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ :
ಎ) ೧೦೨ ಬಿ) ೧೪೦ ಸಿ) ೧೪೪ ಡಿ) ೬೪
೪. ಇವುಗಳಲ್ಲಿ ಯಾವುದು ರಗಳೆಯ ವಿಧವಾಗಿಲ್ಲ :
ಎ) ಉತ್ಸಾಹ ಬಿ) ಲಲಿತ ಸಿ) ಸರಸಿ ಡಿ) ಮಂದಾನಿಲ
೫. ವಾರ್ಧಕ ಷಟ್ಪದಿಯಲ್ಲಿ ಪ್ರತಿ ಗಣವು ಎಷ್ಟು ಮಾತ್ರೆಗಳಿಂದ ಕೂಡಿರುತ್ತದೆ?
ಎ) ೩ ಬಿ) ೬ ಸಿ) ೫ ಡಿ) ೪
೬. ‘ನೆತ್ತಿಯೊಳ್’ ಇದು ಈ ವಿಭಕ್ತಿಗೆ ಉದಾಹರಣೆಯಾಗಿದೆ.
ಎ) ಪ್ರಥಮ ಬಿ) ದ್ವಿತೀಯ ಸಿ) ತೃತೀಯ ಡಿ) ಸಪ್ತಮಿ
೭. ‘ಲಿಖಿತಮಂ’ ಇಲ್ಲಿರುವ ವಿಭಕ್ತಿ :
ಎ) ಪ್ರಥಮ ಬಿ) ದ್ವಿತೀಯ ಸಿ) ತೃತೀಯ ಡಿ) ಚತುರ್ಧಿ
೮. ‘ಕುವರಂ’ ಇಲ್ಲಿರುವ ಅಕ್ಷರಗಣ :
ಎ) ಭ-ಗಣ ಬಿ) ಸ-ಗಣ ಸಿ) ಮ-ಗಣ ಡಿ) ತ-ಗಣ
೯. ’ಉರ್ವಿಯೊಳ್’ ಪದದಲ್ಲಿರುವ ಕಾರಕಾರ್ಥ :
ಎ) ಕರ್ಮಾರ್ಥ ಬಿ) ಸಂಪ್ರದಾನ ಸಿ) ಅಪಾದಾನ ಡಿ) ಅಧಿಕರಣ
೧೦. ‘ಅಗಡು’ ಪದದ ಹೊಸಗನ್ನಡ ರೂಪ ಇದಾಗಿದೆ :
ಎ) ಅಡಗಿಕೋ ಬಿ) ಶೌರ್ಯ ಸಿ) ಕುದುರೆ ಡಿ) ಹಡಗು
[ಉತ್ತರಗಳು: ೧. ಎ) ರಘಟಾ ೨. ಡಿ) ರಗಳೆ ೩. ಸಿ) ೧೪೪ ೪. ಸಿ) ಸರಸಿ ೫. ಸಿ) ೫ ೬. ಡಿ) ಸಪ್ತಮಿ ೭. ಬಿ) ದ್ವಿತೀಯ
೮. ಬಿ) ಸ-ಗಣ ೯. ಡಿ) ಅಧಿಕರಣ ೧೦. ಬಿ. ಶೌರ್ಯ]
ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ:
೧. ಭಾಮಿನಿ : ೧೦೨ : : ವಾರ್ಧಕ : ___________
೨. ವೃತ್ತಗಳು : ಅಕ್ಷರಗಣ : : ರಗಳೆ : ___________
೩. ಸೊಲ್ಗೇಳಿ : ಕ್ರಿಯಾ ಸಮಾಸ : : ಪೂದೋಟ : ___________
೪. ಬಿಲ್ದಿರುವನೇರಿಸಿ : ಕ್ರಿಯಾ ಸಮಾಸ : : ನಲ್ಗುದುರೆ : ___________
೫. ನೃ : ರಾಜ : : ಅಬ್ಧಿಪ : ___________
೬. ಸೊಲ್ಗೇಳಿ : ಸೊಲ್ಲನ್ನು+ಕೇಳಿ : : ನಲ್ಗುದುರೆ : ___________
೭. ವೀರ : ಬೀರ : : ಬಂಜೆ : ___________
೮. ಗಳ : ಕೊರಳು : : ವಾಜಿ : ___________
8ನೇ ತರಗತಿ ಹೂವಿಂದ ಹುಡುಗಿ ಪಾಠದಲ್ಲಿ ಪತಿಯೊಡನೆ ಪದವು ಲಓಪಸಂದಇ ಎಂದು ತಿಳಿಸಿರುವಿರಿ ಆದರೆ ಅದು ಆಗಮ ಸಂಧಿ ಆಗುವುದಿಲ್ಲವೇ
ಪ್ರತ್ಯುತ್ತರಅಳಿಸಿವೀರಲವಪದ್ಯದಸಂಪೂನ್ರಛಂದಸ್ಸು
ಪ್ರತ್ಯುತ್ತರಅಳಿಸಿ