ನನ್ನ ಪುಟಗಳು

27 ನವೆಂಬರ್ 2013

ಬೆಡಗಿನತಾಣ ಜಯಪುರ (ಗದ್ಯ-2)




ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨ - ಸೆಪ್ಟೆಂಬರ್ ೧೨ ೧೯೯೭) - "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ.

              ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿ ಬಾಳಿ, ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮ ಕಾರಂತರು ೧೯೯೭, ಡಿಸೆಂಬರ್ ೦೯ ರಂದು ನಿಧನ ಹೊಂದಿದರು. ತಮ್ಮ ಜೀವಿತಾವಧಿಯಲ್ಲಿ ಸುಮಾರು ೪೨೭ ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಕಾದಂಬರಿಗಳು ೪೭. ತಮ್ಮ ೯೬ನೆಯ ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಒಂದು ಸಾಧನೆ ಎನ್ನಬಹುದು.
ಸಾಹಿತಿಯಾಗಿ ಶಿವರಾಮ ಕಾರಂತರು ಪ್ರಸಿದ್ಧಿಯಾಗಿರುವಂತೆ, ಇತರ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿದವರು ಅವರು. ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು ಕಲಿತು, ಬ್ಯಾಲೆಯಲ್ಲೂ ಗಂಭೀರ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದರು. ಯುವಕರಾಗಿದ್ದಾಗ, ಸಮಾಜ ಸುಧಾರಣೆಗೂ ಕೈ ಹಾಕಿ, ವೇಶ್ಯಾ ವಿವಾಹಗಳನ್ನು ಮಾಡಿಸಿದ್ದರು! ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರಪಡಿಸಲು ಯತ್ನಿಸಿದರು.ಮಕ್ಕಳಲ್ಲಿದ್ದ ಪ್ರತಿಭೆ ಅರಳಿಸಲು ಪುತ್ತೂರಿನಲ್ಲಿ ಬಾಲವನ ಎಂಬ ಅಸಂಪ್ರದಾಯಿಕ ಶೈಕ್ಷಣಿಕ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು, ತಮ್ಮ ಪುಸ್ತಕಗಳನ್ನು ಮುದ್ರಿಸುತ್ತಿದ್ದರಲ್ಲದೆ, ತಮ್ಮ ಹಲವು ಕಾದಂಬರಿಗಳಿಗೆ ತಾವೆ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಇವರದ್ದು! ಬಹುಶಃ ಮುಖಪುಟ ಚಿತ್ರ ಬರೆದು ಪ್ರಕಟಿಸಿದ ಕನ್ನಡದ ಪ್ರಮುಖ ಸಾಹಿತಿ ಇವರೊಬ್ಬರೇ.
ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮ ಕಾರಂತ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು. ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ .ಹರಿಜನರ ಬದುಕನ್ನು ಆಧರಿಸಿದ್ದ ಡೊಮಿಂಗೋ (೧೯೩೦) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ಭೂತರಾಜ್ಯ (೧೯೩೧) ಎಂಬ ಮೂಕಿ ಚಿತ್ರಗಳನ್ನು ಸಹ ನಿರ್ಮಿಸಿದರು. "ನಮನ'
ಪರಿಸರ ಹೋರಾಟ: ಕಾರಂತರ ಕಾದಂಬರಿಗಳುದ್ದಕ್ಕೂ ಪರಿಸರದ ಚಿತ್ರಣ ಗಾಢವಾಗಿದೆ. ನಿಜ ಜೀವನದಲ್ಲೂ ಪರಿಸರದ ಉಳಿವಿಗೆ ಹೋರಾಡಿದ ಕಾರಂತರು, ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಪ್ರಖ್ಯಾತವಾಗಿದೆ.
ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ತಮ್ಮ ಕೊನೆಗಾಲದವರೆಗೂ ಪ್ರವಾಸ ಮಾಡಿದ್ದರು.
ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಪಡೆದಿರುವರಲ್ಲದೆ ಇವರಿಗೆ ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ. ಇವರು ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ "ಕಾರಂತಜ್ಜ" ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.
   

ಸಾಲಿಗ್ರಾಮದಲ್ಲಿ...........

ಡಾ. ಕಾರಂತರ ಹಲವು ವರ್ಷ ಜೀವನ ನಡೆಸಿದ ಸಾಲಿಗ್ರಾಮದಲ್ಲಿ (ಉಡುಪಿ ಜಿಲ್ಲೆ), ಕಾರಂತ ಸ್ಮೃತಿಚಿತ್ರ ಶಾಲೆ ಎಂಬ ಸುಂದರ ಬಹುಮಹಡಿ ಕಟ್ಟಡದಲ್ಲಿ, ಕಾರಂತರ ಕುರಿತಾದ ಹಲವಾರು ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಅವರ ಕಾದಂಬರಿಗಳ ಆಶಯದ ದೊಡ್ಡ ದೊಡ್ಡ ಭಿತ್ತಿ ಚಿತ್ರಗಳು, ಯಕ್ಷಗಾನದ ದಿರಿಸುಗಳು, ಕಾದಂಬರಿಗಳ ಹಳೆಯ ಪ್ರತಿಗಳು, ಕಾರಂತರು ಬರೆದ ಚಿತ್ರಗಳು, ಅವರು ಉಪಯೋಗಿಸುತ್ತಿದ್ದ ಲೇಖನಿ ಮತ್ತಿತರ ವಸ್ತುಗಳನ್ನೊಂಡ ಸುಂದರ ವಸ್ತು ಸಂಗ್ರಹಾಲಯ ಇದು. ಸಾಲಿಗ್ರಾಮದ ಪೇಟೆಯಲ್ಲಿ ಹೆದ್ದಾರಿಯ ಬದಿಯಲ್ಲೇ ಇರುವ ಈ ಕಟ್ಟಡವನ್ನು ಕಂಡರೆ, ಕಾರಂತರ ಬಗ್ಗೆ ಅಭಿಮಾನ ಉಕ್ಕುತ್ತದೆ. ಮಾಲಿನ ಮಲ್ಯ ಅವರು ನೋಡಿಕೊಳ್ಳುತ್ತಿರುವ ಈ ಸಂಗ್ರಹಾಲಯವನ್ನು ನೋಡಲು ಸದಾ ಅವಕಾಶವಿದೆ.

ಚೋಮನ ದುಡಿ

ಕಡಲ ತೀರದ ಭಾರ್ಗವ ಶಿವರಾಮ ಕಾರಂತರ ಕುರಿತ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ http://karanth.kannadavedike.net

ಇವರ ಕೃತಿಗಳು

ಕವನ

  • ರಾಷ್ಟ್ರಗೀತ ಸುಧಾಕರ
  • ಸೀಳ್ಗವನಗಳು

ಕಾದಂಬರಿ

  • ಅದೇ ಊರು, ಅದೆ ಮರ
  • ಅಳಿದ ಮೇಲೆ
  • ಅಂಟಿದ ಅಪರಂಜಿ
  • ಆಳ, ನಿರಾಳ
  • ಇದ್ದರೂ ಚಿಂತೆ
  • ಇನ್ನೊಂದೇ ದಾರಿ
  • ಇಳೆಯೆಂಬ
  • ಉಕ್ಕಿದ ನೊರೆ
  • ಒಡ ಹುಟ್ಟಿದವರು
  • ಒಂಟಿ ದನಿ
  • ಔದಾರ್ಯದ ಉರುಳಲ್ಲಿ
  • ಕಣ್ಣಿದ್ದೂ ಕಾಣರು
  • ಕನ್ನಡಿಯಲ್ಲಿ ಕಂಡಾತ
  • ಕನ್ಯಾಬಲಿ
  • ಕರುಳಿನ ಕರೆ
  • ಕುಡಿಯರ ಕೂಸು (ಚಲನಚಿತ್ರವಾಗಿದೆ)
  • ಕೇವಲ ಮನುಷ್ಯರು
  • ಗೆದ್ದ ದೊಡ್ಡಸ್ತಿಕೆ
  • ಗೊಂಡಾರಣ್ಯ
  • ಚಿಗುರಿದ ಕನಸು(ಚಲನಚಿತ್ರವಾಗಿದೆ)
  • ಚೋಮನ ದುಡಿ (ಚಲನಚಿತ್ರವಾಗಿದೆ)
  • ಜಗದೋದ್ಧಾರ ನಾ
  • ಜಾರುವ ದಾರಿಯಲ್ಲಿ
  • ದೇವದೂತರು
  • ಧರ್ಮರಾಯನ ಸಂಸಾರ
  • ನಷ್ಟ ದಿಗ್ಗಜಗಳು
  • ನಂಬಿದವರ ನಾಕ, ನರಕ
  • ನಾವು ಕಟ್ಟಿದ ಸ್ವರ್ಗ
  • ನಿರ್ಭಾಗ್ಯ ಜನ್ಮ
  • ಬತ್ತದ ತೊರೆ
  • ಬೆಟ್ಟದ ಜೀವ(ಚಲನಚಿತ್ರವಾಗಿದೆ)
  • ಭೂತ
  • ಮರಳಿ ಮಣ್ಣಿಗೆ
  • ಮುಗಿದ ಯುದ್ಧ
  • ಮೂಕಜ್ಜಿಯ ಕನಸುಗಳು
  • ಮೂಜನ್ಮ
  • ಮೈ ಮನಗಳ ಸುಳಿಯಲ್ಲಿ
  • ಮೊಗ ಪಡೆದ ಮನ
  • ವಿಚಿತ್ರ ಕೂಟ
  • ಶನೀಶ್ವರನ ನೆರಳಿನಲ್ಲಿ
  • ಸನ್ಯಾಸಿಯ ಬದುಕು
  • ಸಮೀಕ್ಷೆ
  • ಸರಸಮ್ಮನ ಸಮಾಧಿ
  • ಸ್ವಪ್ನದ ಹೊಳೆ
  • ಹೆತ್ತಳಾ ತಾಯಿ

ನಾಟಕ

  • ಅವಳಿ ನಾಟಕಗಳು
  • ಏಕಾಂಕ ನಾಟಕಗಳು
  • ಐದು ನಾಟಕಗಳು
  • ಕಟ್ಟೆ ಪುರಾಣ
  • ಕಠಾರಿ ಭೈರವ
  • ಕರ್ಣಾರ್ಜುನ
  • ಕೀಚಕ ಸೈರಂಧ್ರಿ
  • ಗರ್ಭಗುಡಿ
  • ಗೀತ ನಾಟಕಗಳು
  • ಜಂಬದ ಜಾನಕಿ
  • ಜ್ಯೂಲಿಯಸ್ ಸೀಸರ್
  • ಡುಮಿಂಗೊ
  • ದೃಷ್ಟಿ ಸಂಗಮ
  • ನವೀನ ನಾಟಕಗಳು
  • ನಾರದ ಗರ್ವಭಂಗ
  • ಬಿತ್ತಿದ ಬೆಳೆ
  • ಬೆವರಿಗೆ ಜಯವಾಗಲಿ
  • ಬೌದ್ಧ ಯಾತ್ರಾ
  • ಮಂಗಳಾರತಿ
  • ಮುಕ್ತದ್ವಾರ
  • ಯಾರೊ ಅಂದರು
  • ವಿಜಯ
  • ವಿಜಯ ದಶಮಿ
  • ಸರಳ ವಿರಳ ನಾಟಕಗಳು
  • ಸಾವಿರ ಮಿಲಿಯ
  • ಹಣೆ ಬರಹ
  • ಹಿರಿಯಕ್ಕನ ಚಾಳಿ
  • ಹೇಗಾದರೇನು?
  • ಹೇಮಂತ

ಸಣ್ಣ ಕತೆ

  • ಕವಿಕರ್ಮ
  • ತೆರೆಯ ಮರೆಯಲ್ಲಿ
  • ಹಸಿವು
  • ಹಾವು

ಹರಟೆ, ವಿಡಂಬನೆ

  • ಗ್ನಾನ
  • ಚಿಕ್ಕ ದೊಡ್ಡವರು
  • ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು
  • ಮೈಗಳ್ಳನ ದಿನಚರಿಯಿಂದ
  • ಮೈಲಿಕಲ್ಲಿನೊಡನೆ ಮಾತುಕತೆಗಳು
  • ಹಳ್ಳಿಯ ಹತ್ತು ಸಮಸ್ತರು

ಪ್ರವಾಸ ಕಥನ

  • ಅಪೂರ್ವ ಪಶ್ಚಿಮ
  • ಅರಸಿಕರಲ್ಲ
  • ಅಬೂವಿನಿಂದ ಬರಾಮಕ್ಕೆ
  • ಪಾತಾಳಕ್ಕೆ ಪಯಣ
  • ಪೂರ್ವದಿಂದ ಅತ್ಯಪೂರ್ವಕ್ಕೆ
  • ಯಕ್ಷರಂಗಕ್ಕಾಗಿ ಪ್ರವಾಸ

ಆತ್ಮಕಥನ

  • ಸ್ಮೃತಿಪಟಲದಿಂದ (೧,೨,೩)
  • ಹುಚ್ಚು ಮನಸ್ಸಿನ ಹತ್ತು ಮುಖಗಳು

ಜೀವನ ಚರಿತ್ರೆ

  • ಕಲಾವಿದ ಕೃಷ್ಣ ಹೆಬ್ಬಾರರು

ಕಲಾಪ್ರಬಂಧ

  • ಕಲೆಯ ದರ್ಶನ
  • ಕರ್ನಾಟಕದಲ್ಲಿ ಚಿತ್ರಕಲೆ
  • ಚಾಲುಕ್ಯ ವಾಸ್ತು ಮತ್ತು ಶಿಲ್ಪ
  • ಚಿತ್ರ,ಶಿಲ್ಪ,ವಾಸ್ತು ಕಲೆಗಳು
  • ಜಾನಪದ ಗೀತೆಗಳು
  • ಭಾರತೀಯ ಚಿತ್ರಕಲೆ
  • ಭಾರತೇಯ ಶಿಲ್ಪ
  • ಯಕ್ಷಗಾನ ಬಯಲಾಟ
  • ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು

ವೈಜ್ಞಾನಿಕ

  • ಅದ್ಭುತ ಜಗತ್ತು(೧. ವಿಚಿತ್ರ ಖಗೋಲ,೨. ನಮ್ಮ ಭೂಖಂಡಗಳು)
  • ಉಷ್ಣವಲಯದ ಆಗ್ನೇಸ್ಯ
  • ಪ್ರಾಣಿಪ್ರಪಂಚದ ವಿಸ್ಮಯಗಳು
  • ಮಂಗನ ಕಾಯಿಲೆ
  • ವಿಜ್ಞಾನ ಮತ್ತು ಅಂಧಶೃದ್ಧೆ
  • ವಿಶಾಲ ಸಾಗರಗಳು
  • ಹಿರಿಯ ಕಿರಿಯ ಹಕ್ಕಿಗಳು

ಇತರ

  • ಪ್ರಜಾಪ್ರಭುತ್ವವನ್ನು ಕುರಿತು
  • ಬಾಳ್ವೆಯೇ ಬೆಳಕು
  • ಬಾಳ್ವೆಯೇ ಬೆಳಕು ಅಥವಾ ಜೀವನ ಧರ್ಮ
  • ಮನೋದೇಹಿಯಾದ ಮಾನವ
  • ವಿಚಾರಶೀಲತೆ
  • ವಿಚಾರ ಸಾಹಿತ್ಯ ನಿರ್ಮಾಣ
  • ಸ್ವಾರ್ಥಿ ಮಾನವ

ಸಂಪಾದನೆ

  • ಐರೋಡಿ ಶಿವರಾಮಯ್ಯ ಬದುಕು, ಬರಹ
  • ಕೌಶಿಕ ರಾಮಾಯಣ
  • ಪಂಜೆಯವರ ನೆನಪಿಗಾಗಿ

ವಿಶ್ವಕೋಶ

  • ಕಲಾ ಪ್ರಪಂಚ
  • ಪ್ರಾಣಿ ಪ್ರಪಂಚ
  • ಬಾಲ ಪ್ರಪಂಚ (೧,೨,೩)
  • ವಿಜ್ಞಾನ ಪ್ರಪಂಚ (೧,೨,೩,೪)

ನಿಘಂಟು

  • ಸಿರಿಗನ್ನಡ ಅರ್ಥಕೋಶ

ಅನುವಾದ

  • ಕೀಟನಾಶಕಗಳ ಪಿಡುಗುಗಳು
  • ಕೋಟ ಮಹಾಜಗತ್ತು
  • ಜನತೆಯೂ ಅರಣ್ಯಗಳೂ
  • ನಮ್ಮ ಪರಮಾಣು ಚೈತನ್ಯ—ಉತ್ಪಾದನಾ ಸಾಧನಗಳು
  • ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ
  • ನಮ್ಮ ಸುತ್ತಲಿನ ಕಡಲು
  • ನಮ್ಮೆಲ್ಲರಿಗೂ ಒಂದೇ ಭವಿಷ್ಯ
  • ಪರಮಾಣು – ಇಂದು ನಾಳೆ
  • ಪಂಚ ಋತು
  • ಬೆಳೆಯುತ್ತಿರುವ ಸಮಸ್ಯೆ
  • ಭಾರತದ ಪರಿಸರ – ದ್ವಿತೀಯ ಸಮಿಕ್ಷೆ
  • ಭಾರತದ ಪರಿಸರದ ಪರಿಸ್ಥಿತಿ – ೧೯೮೨ – ಪ್ರಜೆಯ ದೃಷ್ಟಿಯಲ್ಲಿ
  • ಭಾರತ ವರ್ಷದಲ್ಲಿ ಬ್ರಿಟಿಷರು
  • ಯಾರು ಲಕ್ಷಿಸುವರು?
  • ಶ್ರೀ ರಾಮಕೃಷ್ಣರ ಜೀವನ ಚರಿತೆ

ಮಕ್ಕಳ ಪುಸ್ತಕಗಳು

  • ಅನಾದಿ ಕಾಲದ ಮನುಷ್ಯ
  • ಒಂದೇ ರಾತ್ರಿ ಒಂದೇ ಹಗಲು
  • ಗಜರಾಜ
  • ಗೆದ್ದವರ ಸತ್ಯ
  • ಢಂ ಢಂ ಢೋಲು
  • ನರನೋ ವಾನರನೋ
  • ಮರಿಯಪ್ಪನ ಸಾಹಸಗಳು
  • ಮಂಗನ ಮದುವೆ
  • ಸೂರ್ಯ ಚಂದ್ರ
  • ಹುಲಿರಾಯ
  • ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆಗೆ ಸಂಬಂಧಿಸಿದ ೧೦ ಪುಸ್ತಕಗಳು
  • ಐಬಿಎಚ್, ಮೂಲವಿಜ್ಞಾನ ಪಾಠಮಾಲೆ ಹಾಗು ‘ಇಕೊ’ ದವರಿಗಾಗಿ ಮಾಡಿದ ಅನುವಾದಗಳು : ಸುಮಾರು ೧೩೩
  • ‘ಇಕೊ’ ದವರಿಗಾಗಿ ಮಾಡಿದ ಸಂಪಾದಿತ ಪುಸ್ತಕಗಳು : ೪೨

ಶೈಕ್ಷಣಿಕ

ಮಕ್ಕಳ ಶಿಕ್ಷಣ

  • ಓದುವ ಆಟ
  • ಗೃಹ ವಿಜ್ಞಾನ (೧,೨,೩)
  • ಚಿತ್ರಮಯ ದಕ್ಷಿಣ ಕನ್ನಡ
  • ಚಿತ್ರಮಯ ದಕ್ಷಿಣ ಕನ್ನಡ – ಅಂದು, ಇಂದು
  • ಚಿತ್ರಮಯ ದಕ್ಷಿಣ ಹಿಂದುಸ್ತಾನ
  • ನಾಗರಿಕತೆಯ ಹೊಸ್ತಿಲಲ್ಲಿ
  • ರಮಣ ತಾತ
  • ಸ್ನೀತಿ (೧,೨,೩)
  • ಸಾಮಾನ್ಯ ವಿಜ್ಞಾನ (೧,೨,೩)
  • ಸಿರಿಗನ್ನಡ ಪಾಠಮಾಲೆ (೧,೨,೩,೪,೫,೬,೭)
  • ಹೂಗನ್ನಡ ಪಾಠಮಾಲೆ (೧,೨,೩,೪,೫,೬,೭,೮)

ವಯಸ್ಕರ ಶಿಕ್ಷಣ

  • ಅಳಿಲ ಭಕ್ತಿ ಮಳಲ ಸೇವೆ
  • ಕರ್ನಾಟಕದ ಜಾನಪದ ಕಲೆಗಳು
  • ಕೋಳಿ ಸಾಕಣೆ
  • ಜೋಗಿ ಕಂಡ ಊರು
  • ದಕ್ಷಿಣ ಹಿಂದುಸ್ತಾನದ ನದಿಗಳು
  • ದೇವ ಒಲಿದ ಊರು
  • ಬೇರೆಯವರೂ ಸರಿ ಇರಬಹುದು
  • ಹುಟ್ಟು ಸಾವು ಒಟ್ಟು ಒಟ್ಟು

ಆಂಗ್ಲ ಭಾಷೆಯಲ್ಲಿ ಸಾಹಿತ್ಯ

  • Folk Art of Karnataka
  • Karnataka Paintings
  • My Concern for Life, Literature and Art
  • Picturesque South Kanara
  • Yakshagana

ಪ್ರಶಸ್ತಿ/ಪುರಸ್ಕಾರಗಳು


ಕಾರಂತರ ಕೆಲವು ಚಿಂತನೆಗಳು

  • ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ, ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.
  • ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.
  • ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು.
  • ಸಮಾಜ ನನ್ನನ್ನು ಹೇಗೆ ಕಂಡಿತು - ಎಂದು ನಾನು ತಿಳಿದುಕೊಳ್ಳುವ ಬಗೆ ಹೇಗೆ? ಒಂದು ಗ್ರಂಥದ ಸಾವಿರ ಪ್ರತಿಗಳು ಹತ್ತು ವರ್ಷಗಳಲ್ಲಿ ಖರ್ಚಾದರೆ, ಅವನ್ನು ಓದಿದವರಲ್ಲಿ ಹತ್ತು ಮಂದಿ ನನಗೆ ಪತ್ರ ಬರೆದರೆ, ಅದರಿಂದ ಜನಗಳು ನನ್ನನ್ನು ಮೆಚ್ಚುತ್ತಿದ್ದಾರೆ- ಎಂದು ತಿಳಿಯಲು ಸಾಧ್ಯವೇ? ನಾವು ಬರೆಯುವುದು ಸಾಮಾಜಿಕರೊಡನೆ ಸಂಭಾಷಿಸುವುದಕ್ಕಾಗಿ. ಈ ಸಂಭಾಷಣೆ ಏಕಮುಖಿಯಾದದ್ದು. ನಾವೇನೋ ಗ್ರಂಥಗಳಲ್ಲಿ ಅನೇಕ ವಿಚಾರಗಳನ್ನು ಮಂಡಿಸುತ್ತೇವೆ; ಓದುಗರು ನಮ್ಮ ಕಣ್ಮುಂದೆ ಇರುವುದಿಲ್ಲ. ಅವರ ಮನಸ್ಸಿನಲ್ಲಿ ಓದುತ್ತ, ಓದುತ್ತ ಯಾವೆಲ್ಲ ಪ್ರತಿಕ್ರಿಯೆಗಳಾಗುತ್ತವೆ ಎಂದು ತಿಳಿಯುವ ಬಗೆ ಹೇಗೆ? ಆರಂಭದಿಂದಲೂ ನನ್ನ ಪುಸ್ತಕಗಳನ್ನು ಪತ್ರಿಕೆಗಳಿಗೆ ವಿಮರ್ಶೆಗೆ ಕಳುಹಿಸುವ ಪರಿಪಾಠವನ್ನು ನಾನು ಇರಿಸಿಕೊಳ್ಳದ್ದರಿಂದ, ವಿಮರ್ಶಕರು ಏನು ಹೇಳುತ್ತಾರೆಂಬುದು ಕೂಡಾ ನನಗೆ ತಿಳಿಯದ ಸಂಗತಿ. ಯಾರು ಏನನ್ನೇ ಹೇಳಲಿ, ನನಗೆ ತೋಚಿದಂತೆ ಬರೆಯುತ್ತೇನೆ- ಎಂದು ಬರೆಯುವ ನನಗೆ ಜನಾದರಣೆಯ ವಿಚಾರ ತಿಳಿಯುವುದು ಕಷ್ಟ. ವಿಕ್ರಯಗೊಳ್ಳುವ ಪುಸ್ತಕಗಳ ಸಂಖ್ಯೆಯಿಂದ ನಾನು ಅದನ್ನು ತರ್ಕಿಸುವುದಾದರೆ, ನನ್ನ ಜನಪ್ರಿಯತೆಗೆ ಬೇಕಾದ ಆಧಾರ ಸಿಗುವಂತಿಲ್ಲ. ಒಂದು ಕಾದಂಬರಿಯ ಸಾವಿರ ಪ್ರತಿಗಳು ಹತ್ತು ವರ್ಷಗಳಲ್ಲಿ ವಿಕ್ರಯಗೊಳ್ಳುವ, ಅಥವಾ ಅದರ ಭರ ಒಂದಿಷ್ಟು ಹೆಚ್ಚಿಗಿದ್ದರೂ, ಒಂದು ಪುಸ್ತಕದ ಮರುಮುದ್ರಣ ವರ್ಷಕ್ಕೆ ನೂರು ಪ್ರತಿಗಳಿಗಿಂತ ಹೆಚ್ಚಿಗೆ ವಿಕ್ರಯಗೊಳ್ಳದಾಗ, ಅಲ್ಲಿ, ಇಲ್ಲಿ, ನನ್ನನ್ನು ಜನರು ಭಾಷಣಗಳ ಕಾಲದಲ್ಲಿ ಸುಪ್ರಸಿದ್ಧ ಸಾಹಿತಿ ಎಂದು ಕರೆದರೂ, ಅಂಥ ಪ್ರಸಿದ್ಧಿಯ ಗಾತ್ರ ಸಾಕಷ್ಟು ಕುಬ್ಜವಾದದ್ದು ಎಂಬ ಅಭಿಪ್ರಾಯ ನನಗೆ. ಆ ದೃಷ್ಟಿಯಿಂದ ದಿವಂಗತ ಅ.ನ.ಕೃಷ್ಣರಾಯರು ಬರೆದ ಕಾದಂಬರಿಗಳು ನನಗಿಂತ ಎಷ್ಟೋ ಪಾಲು ಹೆಚ್ಚಿನ ಜನಾಕರ್ಷಣೆಯನ್ನು ಪಡೆದಿವೆ. ನನ್ನ, ಅವರ ಓದುಗರು ಯಾರು ಎಂಬುದನ್ನು ಕೂಡ ವಿಂಗಡಿಸಿ ತಿಳಿಯುವುದು ಕಷ್ಟ. ಅಂಥ ಓದುಗರು ಪ್ರಬುದ್ಧರೋ, ಅಪ್ರಬುದ್ಧರೋ, ಹೆಂಗಸರೋ, ಗಂಡಸರೋ, ತರುಣರೋ, ವೃದ್ಧರೋ, ಗಂಭೀರ ವಿಚಾರಕ್ಕೆ ಮನಸ್ಸು ಕೊಡುವವರೋ, ಅನುಭವ ಸಾಮ್ಯತೆ ಪಡೆದವರೋ, ಚಿಂತನಶೀಲರೋ, ಅಲ್ಲದವರೋ- ಇಂಥ ಯಾವೊಂದು ಸಂಗತಿಗಳನ್ನೂ ಎಣಿಸದೆ ಜನಮನ್ನಣೆಯ ತೂಕವನ್ನು ಅಳೆಯುವುದು ಅಸಾಧ್ಯ.
  • ಆದಷ್ಟು ಕಡಿಮೆ ತಿನ್ನಿ. ನಾಲಗೆ ರುಚಿಗಾಗಿ ಸಿಕ್ಕಿದ್ದನ್ನೆಲ್ಲಾ ತಿನ್ನುವುದಲ್ಲ. ಮನಬಂದ ಕೆಲಸವನ್ನೆಲ್ಲಾ ಮಾಡುವುದಲ್ಲ. ಇದು ನನ್ನ ಆರೋಗ್ಯದ ರಹಸ್ಯ.

ವಿದ್ವಾಂಸರ ಕಣ್ಣಲ್ಲಿ ಕಾರಂತ ಸಾಹಿತ್ಯ

ತೀ.ನಂ.ಶ್ರೀಕಂಠಯ್ಯ

ಶ್ರೀ ಶಿವರಾಮ ಕಾರಂತರು ನಮ್ಮ ತಲೆಮಾರಿನ ಕನ್ನಡದ ಕ್ರಾಂತಿಪುರುಷರಲ್ಲಿ ಒಬ್ಬರು. ಅವರ ಪ್ರತಿಭೆಗೆ ಅಳವಡದ ಕಲೆಯಿಲ್ಲ. ಅವರ ಲೇಖನಿಯಿಂದ ಸತತವಾಗಿ ಹೊರಬೀಳುತ್ತಿರುವ ಕೃತಿಗಳಲ್ಲಿ ಹಲವನ್ನು ಓದಿ ಮೆಚ್ಚಿರುವ ಅನೇಕ ಮಂದಿ ಕನ್ನಡಿಗರಲ್ಲಿ ನಾನೂ ಒಬ್ಬ. ದೂರದಿಂದ ಮಾತ್ರವಲ್ಲದೆ ಹತ್ತಿರದಿಂದಲೂ ಅವರ ಬಹುಮುಖವಾದ ಕಾರ್ಯೋತ್ಸಾಹವನ್ನು ಆಗಾಗ ವೀಕ್ಷಿಸಿ ಬೆರಗಾಗಿದ್ದೇನೆ; ಅವರ ಪರಿಚಯ ಭಾಗ್ಯವನ್ನೂ ಕೆಲವು ಮಟ್ಟಿಗೆ ಪಡೆದು ನನ್ನ ಅನುಭವ ಆನಂದಗಳನ್ನೂ ಹೆಚ್ಚಿಸಿಕೊಂಡಿದ್ದೇನೆ.
ನಿಸರ್ಗವೇ ನಮ್ಮ ಎದುರಿಗೆ ಸುರುಳಿ ಬಿಚ್ಚಿಕೊಂಡು ಸಾಗುತ್ತಿದ್ದರೆ ಉಂಟಾಗಬಹುದಾದ ಅನುಭವ ಕಾರಂತರ ಕೃತಿಗಳನ್ನು ಓದುತ್ತಿರುವಾಗ ನನಗೆ ಅನೇಕ ವೇಳೆ ಲಭಿಸಿದೆ. ಅವರ ಬರಹದಲ್ಲಿ ಒಟ್ಟಿನ ಮೇಲೆ ಕಲೆಯ ನಿರ್ಮಿತಿಗಿಂತ ನಿಸರ್ಗದ ಆವಿಷ್ಕೃತಿ ಹೆಚ್ಚು. ಇಲ್ಲಿ ನಿಸರ್ಗವೆಂದರೆ ಕಡಲು, ಬೆಟ್ಟ, ಹೊಳೆ, ಕಾಡು ಮೊದಲಾದ ಅಚೇತನ ಪ್ರಕೃತಿ ಮಾತ್ರವಲ್ಲ, ವಿವಿಧ ವಿಚಿತ್ರವಾದ ಮಾನವಪ್ರಕೃತಿಯೂ ಅವರಲ್ಲಿ ಹಾಸುಹೊಕ್ಕಾಗಿ ಸೇರುತ್ತದೆ.
ಕಾರಂತರ ಬರವಣಿಗೆ ಬೆಳೆದಂತೆಲ್ಲ ಅವರ ಸಹಾನುಭೂತಿ ಶಕ್ತಿಯೂ ಬೆಳೆದು ಬಂದಿರುವಂತೆ ಕಾಣುತ್ತದೆ. ದುಡಿಮೆ ದುಃಖ ಇವೇ ತಮ್ಮ ಬಾಳಿನ ಸಾರವಾದರೂ ಅಚಲ ಶ್ರದ್ಧೆಯನ್ನು ಭದ್ರವಾಗಿ ನೆಮ್ಮಿ ನಿಲ್ಲುವ ಸ್ತ್ರೀಪಾತ್ರಗಳಲ್ಲಂತೂ ಕಾರಂತರಿಗೆ ಅಪಾರ ಗೌರವ. ಇಂಥ ಪಾತ್ರಗಳಿಂದಲೇ ಅವರ ಮಹಾಕೃತಿ ಮರಳಿ ಮಣ್ಣಿಗೆ, ನಂಬಿದವರ ನಾಕ-ನರಕ ಮೊದಲಾದವು ಅಮರವಾಗಿರುವುದು. ವಿಚಾರಪರರಾದ ಕಾರಂತರ ದೃಷ್ಟಿಯಲ್ಲಿ ಬಾಳ್ವೆಯೇ ಬೆಳಕು. ಆದರೆ ಅನ್ಯರ ಬದುಕನ್ನು ಅರ್ಥಮಾಡಿಕೊಳ್ಳಬೇಕಾದರೆ ಅವರ ಸಾಂಪ್ರದಾಯಿಕವಾದ ನಂಬಿಕೆಗಳನ್ನು -ಅವು ತಮ್ಮವಲ್ಲದಿದ್ದರೂ- ಅರ್ಥಮಾಡಿಕೊಳ್ಳಬೇಕು ಎಂಬುದು ಕಾರಂತರ ಧೃಡತತ್ವ. ಡಾಂಭಿಕವರ್ತನೆಯನ್ನು, ಆಷಾಡಭೂತಿ ವಿದ್ಯೆಯನ್ನು ಕಂಡರೆ ಮಾತ್ರ ಅವರಿಗೆ ಎಂದಿಗೂ ಆಗದು. ಅದನ್ನು ವ್ಯಂಗ್ಯವಾಗಿ ವಾಚ್ಯವಾಗಿ ಅವರು ಖಂಡಿಸುತ್ತಲೇ ಇರುತ್ತಾರೆ. ಇಷ್ಟಾದರೂ ಬದುಕಿನ ಅನಂತ ವಿವಿಧತೆಯನ್ನು ಅವರು ಚೆನ್ನಾಗಿ ಮನಗಂಡವರು; 'ಹಳ್ಳಿಯ ಹತ್ತು ಸಮಸ್ತರು' ಎಂಬ ಅಪೂರ್ವ ಕೃತಿ ಇದಕ್ಕೆ ಉತ್ತಮ ಸಾಕ್ಷಿ. ಕಾದಂಬರಿಯ ತಂತ್ರದ ಕಡೆ ಕಾರಂತರ ಗಮನ ಕಡಿಮೆ. ಆದರೆ ಮನಸ್ಸು ಮಾಡಿದರೆ ಅದರಲ್ಲಿ ಎಂಥ ಸಿದ್ಧಿಯನ್ನು ಅವರು ಮುಟ್ಟಬಲ್ಲರೆಂಬುದನ್ನು ಅವರ 'ಅಳಿದ ಮೇಲೆ' ಸಾರುತ್ತದೆ.

ಪೂರ್ಣಚಂದ್ರ ತೇಜಸ್ವಿ

ಲೋಹಿಯಾರವರ ತತ್ವ ಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದ ದೃಷ್ಟಿ ಮತ್ತು ಬದುಕಿನಲ್ಲಿನ ಪ್ರಯೋಗಶೀಲತೆ- ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮಗಳನ್ನುಂಟು ಮಾಡಿರುವಂಥವು. ಬಹುಶಃ ಮುಂಬರುವ ಕಲಾವಿದರಿಗೆ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯಶಕ್ತಿಯಾಗಬಲ್ಲಂಥವು ಈ ಮೂರೇ.

ಹಾ.ಮಾ.ನಾಯಕ

ಯಾವ ಮಾನದಿಂದ ಅಳೆದರೂ ಕಾರಂತರು ವಿಶ್ವಲೇಖಕರ ಪಟ್ಟಿಯಲ್ಲಿ ಸೇರಬಲ್ಲವರು.

ಗೋಪಾಲಕೃಷ್ಣ ಅಡಿಗ

ಶಿವರಾಮ ಕಾರಂತರನ್ನು ನಿಮಗೆ ಪರಿಚಯ ಮಾಡಿಕೊಡುವುದೂ ಒಂದೇ, ನೇಸರನ್ನು ಸೊಡರಿನಿಂದ ತೋರಿಸುವದೂ ಒಂದೇ.

ಜಿ.ಎಸ್.ಶಿವರುದ್ರಪ್ಪ

ಬೆಟ್ಟ ಕಡಲಿನ ನಡುವೆ ಹುಟ್ಟಿದ ಈ ಚೈತನ್ಯ ಕಡಲಿನಷ್ಟೇ ವಿಸ್ತಾರವಾದ ಅನುಭವಗಳನ್ನು ತಮ್ಮ ಕೃತಿಗಳಲ್ಲಿ ಹಿಡಿದಿರಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಾರಂತರ ನಿಧನದಿಂದ ಉಜ್ವಲವಾದ ಸೃಜನ ಪರಂಪರೆಯ ಒಂದು ತಲೆಮಾರಿನ ಮುಕ್ತಾಯದ ಶೂನ್ಯದೊಳಕ್ಕೆ ನಾವು ಪ್ರವೇಶಿಸಿದ ಅನುಭವವಾಗುತ್ತಿದೆ.

ಬಾಲವನದಲ್ಲಿ ಕಾರಂತಜ್ಜ

ಕಾರಂತರು ಕೆಲಕಾಲ 'ತರಂಗ' ಸಾಪ್ತಾಹಿಕದ 'ಬಾಲವನ' - ಮಕ್ಕಳ ವಿಭಾಗದಲ್ಲಿ 'ಬಾಲವನದಲ್ಲಿ ಕಾರಂತಜ್ಜ' ಎಂಬ ಕಾಲಂ ನಡೆಸಿಕೊಡುತ್ತಿದ್ದರು. ಇದು ಬಹಳವಾಗಿ ಜನಪ್ರಿಯವಾಗಿತ್ತು. ಪುಟಾಣಿಗಳು ಕಳುಹಿಸಿದ ವಿಜ್ಞಾನ ಕುರಿತ ಪ್ರಶ್ನೆಗಳಿಗೆ ಕಾರಂತರು ಮಕ್ಕಳಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ಉತ್ತರ ನೀಡುತ್ತಿದ್ದರು. ಆಗಿನ ತಲೆಮಾರಿನ ಕನ್ನಡಿಗರಿಗೆ ಕಾರಂತರು, 'ಕಾರಂತಜ್ಜ' ರೆಂದೇ ಚಿರಪರಿಚಿತ.

ಬೆಡಗಿನ ತಾಣ ಜಯಪುರದ ಬಗ್ಗೆ ಪರಿಚಯ 
ಜಯಪುರದ ಬಗ್ಗೆ ಪರಿಚಯಾತ್ಮಕ ವೀಡಿಯೋ ಡೌನ್ ಲೋಡ್ ಮಾಡಲು ಕೆಳಗಿನ ಡೌನ್ಲೋಡ್ ಬಟನ್ ಕ್ಲಿಕ್ ಮಾಡಿ 

   


       ರಾಜಸ್ಥಾನದ ಪ್ರವಾಸದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿರಿ. http://www.rajasthantourism.gov.in/Home/videos.aspx
       ಜಯಪುರವು ಪಿಂಕ್ ಸಿಟಿ ಎಂದು ಪ್ರಸಿದ್ಧವಾಗಿದೆ. ಇದನ್ನು ಭಾರತದ ಪ್ಯಾರಿಸ್ ಎಂದೂ ಕರೆಯುತ್ತಾರೆ. ಇದು ರಾಜಸ್ಥಾನದ ರಾಜಧಾನಿ. ಈ ನಗರವನ್ನು ಕ್ರಿ.ಶ.1727ರ ಸರಿ ಸುಮಾರಿನಲ್ಲಿ ಮಹಾರಾಜ 2ನೇ ಸವಾಯಿ ಜೈಸಿಂಗ್ ಅಭಿವೃದ್ಧಿಪಡಿಸಿದನು. ಆ ಸಮಯದಲ್ಲಿ ಜೈಪುರದ ವಾಸ್ತು ಶಿಲ್ಪಕಲೆಯು ಬಹಳ ಮುಂದುವರೆದಿತ್ತು. ಈಗಲೂ ಸಹ ಜೈಪುರವು ಭಾರತದ ಸುಂದರ ನಗರಗಳಲ್ಲಿ ಒಂದಾಗಿದೆ. ಹಾಗೂ ಆ ಕಾಲದಲ್ಲೆ ಜೈಪುರವು ಪ್ರಪಂಚದಲ್ಲಿ ಯೋಜನಾಬದ್ಧವಾಗಿ ನಿರ್ಮಿತವಾದ ನಗರವೆಂದು ಹೆಸರಾಗಿತ್ತು. ಕಲೆಯ ಗಣಿಯಂತಿರುವ ಸಾಂಸ್ಕೃತಿಕ ವೈಭವದಿಂದ ಕಂಗೊಳಿಸುತ್ತಿರುವ ಸುವ್ಯವಸ್ತಿತವಾದ ಯೋಜನಾಬದ್ಧವಾದ ಈ ನಗರವು ಪ್ರವಾಸೋಧ್ಯಮದ ಸುವರ್ಣ ಕಡಗವಾಗಿದೆ.
         ಈಗ ಅಲ್ಲಿನ ಕಲಾ ವೈಭವದ ಬಗ್ಗೆ ತಿಳಿಯೋಣ.
ಹವಾಮಹಲ್
ಹವಾಮಹಲ್ ಇದು ಜಯಪುರದ ಸುವರ್ಣ ಮಕುಟದಂತಿದೆ. ಇದನ್ನು ಆಂಗ್ಲ ಭಾಷೆಯಲ್ಲಿ Palace Of Winds ಎಂದು ಕರೆಯಲಾಗುತ್ತದೆ. ಇದನ್ನು ಮಹಾರಾಜ ಸವಾಯಿ ಪ್ರತಾಪ್ ಸಿಂಗ್ 1799ರಲ್ಲಿ ಕಟ್ಟಿಸಿದನು. ಸವಾಯಿ ಪ್ರತಾಪ್ ಸಿಂಗ್ ಭಗವಾನ್ ಕೃಷ್ಣನ ಭಕ್ತನಾಗಿದ್ದನು. ಆದ್ದರಿಂದ ಈ ಅರಮನೆಯನ್ನು ಅವನು ತನ್ನ ಭಕ್ತಿಗಾಗಿ ಸಮರ್ಪಿಸಿದನು. ಇದರ ಆಕಾರವು ಮಹಾರಾಜನ ಶಿರದಲ್ಲಿ ಶೋಭಿಸುವ ಕಿರೀಟದಂತಿದೆ. ಇದರ ರಚನೆಯಲ್ಲಿ ಪಿರಮಿಡ್ ಆಕಾರದ ಸಣ್ಣ ಸಣ್ಣ ರಚನೆಗಳನ್ನು ಒಂದರಮೇಲೊಂದು ಪೇರಿಸಿದಂತೆ ನಿರ್ಮಿಸಲಾಗಿದೆ. ಕಮಾನಿನಾಕಾರದ ರಚನೆಗಳು, ಕೂಡಿದ್ದು ಬಹಳ ವಿಶಾಲವಾಗಿದೆ. ಈ ಅರಮನೆಯ ಪ್ರತಿ ಕೋಣೆಯೂ ಮನೋಹರವಾಗಿದೆ. 7 ಅಡಿ ಎತ್ತರದ ತಳಹದಿಯ ಮೇಲೆ ನಿರ್ಮಿತವಾಗಿರುವ ಇದು ಸುಮಾರು 900 ಕಮಾನು ದ್ವಾರಗಳನ್ನು ಒಳಗೊಂಡಿದೆ. ವೃತ್ತಾಕಾರದ, ಕಮಾನಿನಂತೆ ಬಾಗಿದ ರಚನೆಗಳು ಮತ್ತು ಗೋಪುರಗಳು, ಬೆಣಚುಕಲ್ಲಿನ ಜಾಲಾಂದ್ರಗಳು (ಗ್ರಿಲ್ ಗಳು)  ಇ ಅರಮನೆಗೆ ಒಂದು ಅಭೂತಪೂರ್ವವಾದ ರೂಪ ನೀಡಿವೆ.





ಜಂತರ್ ಮಂತರ್
 ಇದು ಪಿಂಕ್ ಸಿಟಿ ಎಂದು ಹೆಸರಾದ ಜೈಪುರದ ಐತಿಹಾಸಿಕ ಖಗೋಳ ವಿಕ್ಷಣಾ ಕೇಂದ್ರ. ಇದು ವಿಶ್ವ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ. ಇದನನ್ಉ ಮಹಾರಾಜ 2ನೇ ಸವಾಯ್ ಜೈಸಿಂಗ್ 1728ರಲ್ಲಿ ಕಟ್ಟಿಸಿದನು. ಇಲ್ಲಿ ಈ ಮಹಾರಾಜನು ಸ್ವತಃ ಖಗೋಳ ವೀಕ್ಷಣೆ ಮಾಡುತ್ತಿದ್ದನು. ಜೈಪುರದ ಪ್ರವಾಸಕ್ಕೆ ಹೋದವರು ಜಂತರ್ ಮಂತರ್ ವೀಕ್ಷಣೆ ಮಾಡದೇ ಬರುವುದಿಲ್ಲ.
        ಜಂತರ್ ಮಂತರ್ ನಲ್ಲಿ ಆಗಿನಕಾಲದಲ್ಲಿ ಸ್ಥಳೀಯ ಕಾಲಮಾನವನ್ನು ಲೆಕ್ಕಾಚಾರ, ಭಾರತದ ಜ್ಯೋತಿಷ್ಯದ ಲೆಕ್ಕಾಚಾರ, ಗ್ರಹ ಮತ್ತು ನಕ್ಷತ್ರಗಳ ಚಲನೆ, ರಾಶಿಗಳ ಬದಲಾವಣೆ, ಮಳೆಮಾಪನ, ಅಕ್ಷಾಂಶ ಮತ್ತು ರೇಖಾಂಶಗಳ ಲೆಕ್ಕಾಚಾರ ಹಾಗೂ ಇತರೆ ಆಕಾಶಕಾಯಗಳ ಚಲನೆ ಅದರಲ್ಲೂ ಮುಖ್ಯವಾಗಿ ಬೆಳಗಿನ ಸಮಯದಲ್ಲಿ ಸೂರ್ಯ ಮತ್ತು ಇತರೆ ನಕ್ಷತ್ರಗಳ ನಡುವಿನ ದೂರವನ್ನು ಅಳೆಯಲು ಬಳಸುತ್ತಿದ್ದರು.
























ಅಂಬರ್ ಕೋಟೆ

    ಇದು ಕೋಟೆ ಮತ್ತು ಅರಮನೆಗಳ ಸಂಕೀರ್ಣವಾಗಿದೆ. ಇಲ್ಲಿ ಮುಖ್ಯವಾಗಿ ಜಲೇವ್ ಚಾವ್, ಸಿಂಗ್ ಪೌಲ್, ದಿವಾನೆ ಆನೆ ಆಮ್, ದಿವಾನೆ ಖಾಸ್, ಶೀಷ್ ಮಹಲ್, ಗಣೇಶ್ ಪೌಲ್, ಯಶ್ ಮಂದಿರ್, ಸುಖ್ ಮಂದಿರ್, ಸುಹಾಗ್ ಮಂದಿರ್, ಶಿಲಾದೇವಿ ದೇವಾಲಯ, ಬಾರಾದರಿ, ಬೂಲ್ ಬುಲಾಯ, ಜವಾನ್ ಡ್ಯೂಡಿ  ಹಾಗು ಮಹಿಳೆಯರಿಗಾಗಿ ಅಂತಃಪುರಗಳನ್ನು ಒಳಗೊಂಡಿದೆ.
ಅಂಬರ್ ಕೋಟೆಯ ಮೇಲೆ ಆನೆ ಸವಾರಿ
     ಅಂಬರ್ ಕೋಟೆಯು ಒಂದು ಬೆಟ್ಟದ ಮೇಲೆ ನಿರ್ಮಾಣವಾಗಿದೆ. ಕೋಟೆಯನ್ನು ಏರಲು ಎರಡು ಮಾರ್ಗಗಳಿವೆ. ಒಂದು ಆನೆಯ ಮೇಲೆ ಕುಳಿತು ಹೋಗುವುದು, ಮತ್ತೊಂದು ಕಾಲುನಡಿಗೆಯ ಮಾರ್ಗ. ಇದು ಸಿಮೆಂಟಿನಿಂದ ಕಟ್ಟಲಾದ ಮೆಟ್ಟಿಲುಗಳಂತೆ ಕಾಣುತ್ತದೆ. ಇತ್ತೀಚೆಗೆ ಒಂದು ರಸ್ತೆಯನ್ನು ನಿರ್ಮಿಸಲಾಗಿದ್ದು ಬೆಟ್ಟದ ತಳದಿಂದ ಕೋಟೆ ತಲುಪಲು ಅನುಕೂಲಕರವಾಗಿದೆ. ಈ ಅಂಬರ್ ಕೋಟೆಯ ಪ್ರವಾಸದ ಆನಂದವನ್ನು ಅನುಭವಿಸಬೇಕಾದರೆ ಕಾಲುನಡಿಗೆ ಅಥವಾ ಆನೆಸವಾರಿ ಉಚಿತವಾದುದು.


















ನಾಹರ್ಡ ಕೋಟೆ

ಇದು ಬೆಟ್ಟದ ಮೇಲೆ ಸುಮಾರು 700 ಅಡಿ ಎತ್ತರದಲ್ಲಿ ನಿರ್ಮಾಣವಾಗಿದೆ. ಇದನ್ನು ಮಹಾರಾಜ ಸವಾಯ್ ಜೈಸಿಂಗ್ 1734ರಲ್ಲಿ ಕಟ್ಟಿಸಿದನು. ಮಹಾರಾಜ ಸವಾಯ್ ರಾಮಸಿಂಗ್ ಮತ್ತು ಮಹಾರಾಜ ಎರಡನೇ ಸವಾಯ್ ಮಾಧವ ಸಿಂಗ್ ಇಬ್ಬರೂ  ತಮ್ಮ ಆಡಳಿತಾವಧಿಯಲ್ಲಿ ಬಹಳ ಸುಂದರವಾದ ವೈಯಕ್ತಿಕ ವಾಸದ ಅರಮನೆಗಳನ್ನು  ಕಟ್ಟಿಸಿದರು. 
    ರಾಜನ ಮುಖ್ಯ ವಾಸದ ಅರಮನೆಯನ್ನು 'ಮಾಧವೇಂದ್ರ ಭವನ' ಎಂದು ಕರೆಯಲಾಗುವುದು. ನಾಹರ್ ಗಡ್ ಕೊಟೆಯಲ್ಲಿರುವ ಈ ಅರಮನೆಯು ಒಂದೇ ರೀತಿಯ 9 ವಿಭಾಗಗಳನ್ನು ಒಳಗೊಂಡಿದೆ. ಇವುಗಳಿಗೆ ಸೂರಜ್ ಪ್ರಕಾಶ್, ಚಂದ್ರ ಪ್ರಕಾಶ್, ಕುಶಲ್ ಪ್ರಕಾಶ್, ಆನಂದ್ ಪ್ರಕಾಶ್, ಜವಾಹರ್ ಪ್ರಕಾಶ್, ಲಕ್ಷ್ಮೀ ಪ್ರಕಾಶ್, ರತ್ನ ಪ್ರಕಾಶ್, ಲಲಿತ ಪ್ರಕಾಶ್, ಮತ್ತು ಬಸಂತ್ ಪ್ರಕಾಶ್ ಎಂದು ಹೆಸರಿಸಲಾಗಿದೆ. ಈ ಪ್ರತಿಯೊಂದು ವಿಭಾಗಗಳು ಸಭಾಭವನ, ಮಲಗುವ ಕೋಣೆ, ಶೌಚಾಲಯ, ಉಗ್ರಾಣ, ಅಡುಗೆ ಮನೆ ಮುಂತಾದ  ಸೌಲಬ್ಯಗಳನ್ನು ಹೊಂದಿದ್ದು ಒಂದು ವೈಭೋಗದ ಕುಟುಂಬಕ್ಕೆ ಹೇಳಿಮಾಡಿಸಿದಂತೆ ವಿನ್ಯಾಸಗೊಳಿಸಲಾಗಿದೆ. ಈ ಅರಮನೆಯು ಇಂಡೋ ಯೂರೋಪಿಯನ್ ವಾಸ್ತುಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿದೆ.














ಜೈಗಡ್ಕೋಟೆ
      ಇದು 1726 ರಲ್ಲಿ ಸವಾಯ್ ಮಿರ್ಜಾ ಜೈಸಿಂಗ್ ನಿಂದ ಮತ್ತು 2ನೇ ಸವಾಯ್ ಜೈಸಿಂಗ್ ನಿಂದ ನಿರ್ಮಾಣವಾಯಿತು. ಇದು 500 ಅಡಿ ಎತ್ತರದಲ್ಲಿ ಬೆಟ್ಟದಮೇಲೆ ನಿರ್ಮಾಣವಾಗಿದೆ. 
ಜೈಗಟ್ಕೋಟೆ
ರಕ್ಷಣೆ ಮತ್ತು ಸೈನ್ಯಾಡಳಿತ ಇದರ ಮುಖ್ಯ ಉದ್ದೇಶ. ಮಧ್ಯಭಾರತದಲ್ಲಿ ನಿರ್ಮಾಣವಾದ ಶ್ರೇಷ್ಟ ರಚನೆ ಇದಾಗಿದೆ. ಈ ಕೋಟೆಯು ಪ್ರಸಿದ್ಧವಾಗಿರುವುದು ಅಲ್ಲಿರುವ 'ಜಯಬಾಣ' ಹೆಸರಿನ ಫಿರಂಗಿಗಾಗಿ. ಇದು ಪ್ರಪಂಚದಲ್ಲೆ ಬಹಳ ಸುಂದರವಾದ ಮತ್ತೊಂದು ವಾಸ್ತುಶಿಲ್ಪ ಲಕ್ಷ್ಮೀವಿಲಾಸ್ ಇದು ಅಂದಿನಕಾಲದ ಸುಂದರ ವಾಸ್ತುಶಿಲ್ಪ ಕಲೆಯನ್ನು ಪ್ರತಿಬಿಂಬಿಸುತ್ತದೆ.

ಅಲ್ಬರ್ಟ್ಹಾಲ್ ವಸ್ತುಸಂಗ್ರಹಾಲಯ
       ಇದು ಜಯಪುರದ ರಾಮನಿವಾಸ್ ಭಾಗದಲ್ಲಿ ನಿರ್ಮಾಣವಾಗಿದೆ. ಇದು 19ನೇ ಶತಮಾನದ ಶ್ರೇಷ್ಟವಾದ ವಸ್ತುಸಂಗ್ರಹಾಲಯ. ಇಲ್ಲಿ ಸುಮಾರು 19 ಸಾವಿರ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. 
ಇಲ್ಲಿ ಸುಮಾರು 19 ಸಾವಿರ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಮಣ್ಣಿನ, ಮರದ ಕೆತ್ತನೆಯ, ಲೋಹದಿಂದ ತಯಾರಿಸಿದ ವಸ್ತುಗಳಲ್ಲದೆ ಶಿಲ್ಪ ಕಲಾಕೃತಿಗಳು, ರತ್ನಗಂಬಳಿಗಳು, ವಿವಿಧ ಬಗೆಯ ಬೆಲೆಬಾಳುವ ವಸ್ತ್ರಗಳು, ಮಣ್ಣಿನ ಆಕೃತಿಗಳು, ವರ್ಣ ಚಿತ್ರಕಲೆ, ಸಂಗೀತ ಸಾಮಗ್ರಿಗಳು, ಆಭರಣಗಳು, ಈಜಿಪ್ಟ್ ನ ಮಮ್ಮಿಗಳು, ಪಿಂಗಾಣಿಯ ವಸ್ತುಗಳು ಈ ಸಂಗ್ರಹಾಲಯವನ್ನು ವಿಶ್ವದರ್ಜೆಗೇರಿಸಿವೆ. ಜಯಪುರದ ಪ್ರವಾಸದಲ್ಲಿ ಈ ಸಂಗ್ರಹಾಲಯದ ಸಂದರ್ಶನ ಅವಿಸ್ಮರಣೀಯ. 
ರಾತ್ರಿ ಬೆಳಕಿನ ಚೆಲ್ಲಾಟ ಮ್ಯೂಸಿಯಂನ ಮನೋಹರ ನೋಟ
ಮಣ್ಣಿನ, ಮರದ ಕೆತ್ತನೆಯ, ಲೋಹದಿಂದ ತಯಾರಿಸಿದ ವಸ್ತುಗಳಲ್ಲದೆ ಶಿಲ್ಪ ಕಲಾಕೃತಿಗಳು, ರತ್ನಗಂಬಳಿಗಳು, ವಿವಿಧ ಬಗೆಯ ಬೆಲೆಬಾಳುವ ವಸ್ತ್ರಗಳು, ಮಣ್ಣಿನ ಆಕೃತಿಗಳು, ವರ್ಣ ಚಿತ್ರಕಲೆ, ಸಂಗೀತ ಸಾಮಗ್ರಿಗಳು, ಆಭರಣಗಳು, ಈಜಿಪ್ಟ್ ನ ಮಮ್ಮಿಗಳು, ಪಿಂಗಾಣಿಯ ವಸ್ತುಗಳು ಈ ಸಂಗ್ರಹಾಲಯವನ್ನು ವಿಶ್ವದರ್ಜೆಗೇರಿಸಿವೆ. ಜಯಪುರದ ಪ್ರವಾಸದಲ್ಲಿ ಈ ಸಂಗ್ರಹಾಲಯದ ಸಂದರ್ಶನ ಅವಿಸ್ಮರಣೀಯ.
 
 


ಜಲಮಹಲ್
ಇದು ಸರೋವರದ ಅರಮನೆಯಾಗಿದೆ. ಇದನ್ನು ಮಾನ್ ಸಾಗರ್ ಸರೊವರದ ನಡುವೆ ಮತ್ತು ಅಮೇರ್ ನ ಸಮೀಪ ನಿರ್ಮಿಸಲಾಗಿದೆ. ಇದು ಇಲ್ಲಿನ ಐದು ಪ್ರಮುಖ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿದೆ. 
ಇದನ್ನು ಕೆಂಪು ಮರಳುಶಿಲೆಯಲ್ಲಿ ಕಟ್ಟಲಾಗಿದೆ. ಇಲ್ಲಿನ ವಿಶೇಷವೆಂದರೆ ಈ ಮಹಲ್ ಮೇಲ್ಭಾಗದಲ್ಲಿ ಉದ್ಯಾನವನವಿದೆ. ಇದು ಸುಂದರವಾದ ಮರಗಿಡಗಳಿಂದ ಕೂಡಿದ್ದು ನೋಡಲು ಬಹಳ ಮನೋಹರವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಈ ಅರಮನೆಯಲ್ಲಿ ಅವಿಸ್ಮರಣೀಯ ಸಂಜೆಯ ಸವಿನೋಟವನ್ನು ಆನಂದಿಸುತ್ತಾರೆ.









 

ಸಿಟಿ ಪ್ಯಾಲೇಸ್
ಇದು ಜಯಪುರದ ಹೃದಯಭಾಗದಲ್ಲಿದೆ. ಇದನ್ನು ಮಹಾರಾಜರ ವೈಭವದ ಕುಟುಂಬಗಳಿಗಾಗಿ ನಿರ್ಮಿಸಲಾಯಿತು. ಇದನ್ನು ಮಹಾರಾಜ ಎರಡನೇ  ಸವಾಯ್ ಜೈಸಿಂಗ್ ಕಟ್ಟಿಸಿದನು. 
ಸಿಟಿ ಪ್ಯಾಲೇಸ್
ಇದು ಭಾರತದ ಸುಂದರ ವಾಸ್ತುಶಿಲ್ಪಕಲೆಗೆ ಉತ್ತಮ ಉದಾಹರಣೆಯಾಗಿದೆ. ಇಲ್ಲಿನ ಪ್ರಮುಖ ವೈಶಿಷ್ಟ್ಯವೆಂದರೆ ಪ್ರಪಂಚದಲ್ಲೆ ಬಹುದೊಡ್ಡ ಬೆಳ್ಳಿಯ ಗಂಗಾಜಲ ಪಾತ್ರೆ. ಇದನ್ನು ಪವಿತ್ರವಾದ ಗಂಗಾಜಲವನ್ನು ಸಂಗ್ರಹಿಸಿಡಲು ಬಳಸುತ್ತಿದ್ದರು. ಇದು ಪ್ರಪಂಚದಲ್ಲೆ ಅತಿದೊಡ್ಡ ಗಂಗಾಜಲ ಪಾತ್ರೆ ಎಂದು ಹೆಸರಾಗಿದ್ದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ.
           ಒಟ್ಟಾರೆಯಾಗಿ ಹೇಳುವುದಾದರೆ ಜಯಪುರವು ತನ್ನಲ್ಲಿರುವ ಅಭೂತಪೂರ್ವವಾದ ಶಿಲ್ಪಕಲಾಕೃತಿಗಳಿಂದ, ಪ್ರಾಕೃತಿಕ ಸೌಂದರ್ಯದಿಂದ ಅಲ್ಲದೆ ಕಲಾಪೂರ್ಣವಾದ ವಿನ್ಯಾಸ, ರಾಜರ ಘನತೆಗೆ ತಕ್ಕಂತಹ ಯೋಜನಾ ಪೂರ್ವಕವಾದ ಕಟ್ಟಡ ನಿರ್ಮಾಣ ಪ್ರವಾಸಿಗರನ್ನು ಮನಸೂರೆಗೊಳ್ಳುವುದರ ಮೂಲಕ ಬೆಡಗಿನ ತಾಣವೆನಿಸಿದೆ.























































ರಾಜಾಸ್ತಾನದ ಸಾಂಸ್ಕೃತಿಕ ವೈಭವದ ಬಗ್ಗೆ ವೀಡಿಯೋಗೆ ಇಲ್ಲಿ ಕ್ಲಿಕ್ ಮಾಡಿ

8 ಕಾಮೆಂಟ್‌ಗಳು: