ವೇದವ್ಯಾಸರು : ಹಿಂದೂಗಳು ನಂಬುವ ಪ್ರಕಾರ ಇವರು ಪ್ರಾಚೀನ ಕಾಲದ ಒಂದು ವೇದವನ್ನು ನಾಲ್ಕು ವೇದಗಳನ್ನಾಗಿ ವಿಂಗಡಿಸಿದ ಕಾರಣ ವೇದವ್ಯಾಸ ಎಂಬ ಹೆಸರು ಬಂತು. ಈ ಹೆಸರಿನಲ್ಲಿಯೇ ಇವರು ಬಹಳ ಪರಿಚಿತರು. ವ್ಯಾಸರು ಒಬ್ಬ ವ್ಯಕ್ತಿಯೇ ಅಥವಾ ಮೇಧಾವಿಗಳ ಗುಂಪೇ ಎಂದು ತರ್ಕಿಸಲಾಗಿದೆ. ವಿಷ್ಣು ಪುರಾಣದಲ್ಲಿ ಇದರ ಬಗ್ಗೆ ಒಂದು ಕುತೂಹಲಕಾರೀ ವಿವರಣೆಯಿದೆ.
ಇದರ ಪ್ರಕಾರ: ಪ್ರತಿ ಮೂರನೇ (ದ್ವಾಪರ)ಯುಗದಲ್ಲಿ ವಿಷ್ಣು ವ್ಯಾಸರ ರೂಪದಲ್ಲಿ ಬಂದು ಮಾನವ ಕುಲದ ಉದ್ಧಾರಕಾಗಿ ವೇದವನ್ನು ವಿಂಗಡಿಸುತ್ತಾನೆ.
ಇದರ ಪ್ರಕಾರ: ಪ್ರತಿ ಮೂರನೇ (ದ್ವಾಪರ)ಯುಗದಲ್ಲಿ ವಿಷ್ಣು ವ್ಯಾಸರ ರೂಪದಲ್ಲಿ ಬಂದು ಮಾನವ ಕುಲದ ಉದ್ಧಾರಕಾಗಿ ವೇದವನ್ನು ವಿಂಗಡಿಸುತ್ತಾನೆ.
![](https://blogger.googleusercontent.com/img/b/R29vZ2xl/AVvXsEjXJGYF4SRthy8kdMcsC1m4fw3NNvTjDCGYZ0JxXfHuFKWRCsco1m3_jk0KDrj3YctQdL8oPH2f20JX9AWFG44QKmepP1qahWUMfO49rICtNGGhmX0yrG4sCyH63fOY3qkIlRC24ae3EadQ/w292-h400/Vyasa.jpg)
ವೇದವ್ಯಾಸರು
ವೇದವನ್ನು ಇಪ್ಪತ್ತೆಂಟು ಬಾರಿ ವೈವಸ್ವತ ಮನ್ವಂತರದ ಮಹರ್ಷಿಗಳಿಂದ ವಿಂಗಡಿಸಲಾಗಿದೆ. ಆದ್ದರಿಂದ ಇಪ್ಪತ್ತೆಂಟು ವ್ಯಾಸರು ಬಂದು ಹೋಗಿದ್ದಾರೆ. ಇದರಲ್ಲಿ ಪ್ರಥಮವಾಗಿ ವೇದವನ್ನು ವಿಂಗಡಿಸಿದ ಸ್ವಯಂಭೂ (ಬ್ರಹ್ಮ); ಅದರ ನಂತರ ವೇದವನ್ನು ವಿಂಗಡಿಸಿದ್ದು ಪ್ರಜಾಪತಿ... (ಹೀಗೇ ಇಪ್ಪತ್ತೆಂಟು ಬಾರಿ).*****
ಕರ್ಣ:
ಕರ್ಣ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬ. ಈತ ಕುಂತಿಯ ಮೊದಲ ಪುತ್ರ ಮತ್ತು ದುರ್ಯೋಧನನ ಆಪ್ತ ಮಿತ್ರ. ಇವನ ತಂದೆ ಸೂರ್ಯದೇವ. ಇವನನ್ನು ರಾಧೇಯನೆಂದೂ ಕರೆಯುತ್ತಿದ್ದರು. ಇವನು ಅಂಗ ದೇಶದ ಅಧಿಪತಿಯಾಗಿದ್ದನು. ಕರ್ಣನನ್ನು ದಾನ ವೀರ ಶೂರ ಕರ್ಣ ಎಂದು ಕರೆಯುತ್ತಾರೆ.![](https://blogger.googleusercontent.com/img/b/R29vZ2xl/AVvXsEgIJ-9YbYSTLVIbp6nIwedECVDXwTGF4awp7dDaV-uD-H5an42RIQIbkNYyX1TSgv4eOw4xgUzcL4_2itTHb_SNXF-HA55Z3hNqYJEzXWwc99OAYd29i81S1kzQ5Dkynhouzw2zTgAHiMio/w400-h363/Karna_in_Kurukshetra.jpg)
ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ (ತೈಲವರ್ಣಚಿತ್ರ) ಕೃಪೆ : ವಿಕಿಪೀಡಿಯ
![](https://blogger.googleusercontent.com/img/b/R29vZ2xl/AVvXsEiP8ntRnPAMxtztFQSZTOt9CcB_zRpwoMVOppbzuFi11NwZTzdtvzc-6z_UbO4XLL0oHSlHuNnV0dJobZ6wSif1PGbLMrktgueKTcEg_RUQGxmeK7EpB6Mh1bvnnjWy9cQek_mfyZM2EiOM/w278-h400/Death_of_Karna.jpg)
ಕರ್ಣನ ಅವಸಾನ (ಮರಣ) ಸನ್ನಿವೇಶ ಕೃಪೆ : ವಿಕಿಪೀಡಿಯ
******
ಇನ : ಸೂರ್ಯ, ರವಿ, ಅರ್ಕ, ನೇಸರ, ಭಾಸ್ಕರ, ದಿನಮಣಿ, ದಿನಪ
******
ತನುಜ (ತನೂಜ) : ಮಗ, ಪುತ್ರ.
******
ಕೃಷ್ಣ : (ಪಾಠದಲ್ಲಿ ಬಂದಿರುವ ಹೆಸರುಗಳು) ದನುಜರಿಪು, ಮುರಾರಿ, ಶೌರಿ, ದಾನವ ಸೂದನ, ಮಾಧವ,
ದನುಜರಿಪು : ದನುಜರನ್ನು ಸಂಹರಿಸಿದವನಾದ್ದರಿಂದ ಕೃಷ್ಣನಿಗೆ ದನುಜರಿಪು ಎಂಬ ಹೆಸರಿದೆ. (ರಾಕ್ಷಸರ ಶತ್ರು (ದನುಜ= ರಾಕ್ಷಸ, ರಿಪು=ಶತ್ರು))
ಮುರಾರಿ : ಮುರ+ಅರಿ; ಮುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ್ದರಿಂದ ಕೃಷ್ಣನಿಗೆ 'ಮುರಾರಿ' ಎಂಬ ಹೆಸರು ಬಂತು.
ಶೌರಿ : ಕೃಷ್ಣನು ಶೂರಸೇನನ ವಂಶದವನಾದ್ದರಿಂದ ಅವನನ್ನು 'ಶೌರಿ' ಎಂದು ಕರೆಯುವರು.
ದಾನವಸೂದನ : ದಾನವರನ್ನು ಸಂಹರಿಸಿದವನಾದ್ದರಿಂದ ಕೃಷ್ಣನಿಗೆ 'ದಾನವಸೂದನ' ಎಂಬ ಹೆಸರಿದೆ. (ರಾಕ್ಷಸರ ಶತ್ರು (ದಾನವ= ರಾಕ್ಷಸ, ಸೂದನ=ಸಂಹಾರ))
******
ಇನ : ಸೂರ್ಯ,
ಯಾದವರು - ಯದುವಿನ ವಂಶಸ್ಥರು. ಶ್ರೀಕೃಷ್ಣನು ಯದುವಂಶಕ್ಕೆ ಸೇರಿದವನು. ಶ್ರೀಕೃಷ್ಣನ ನಿರ್ಣಯಾನುಸಾರ ಯಾದವರು ಕುರುಕ್ಷೇತ್ರ ಯುದ್ಧದಲ್ಲಿ ದುರ‍್ಯೋಧನನ ಪರವಾಗಿ ಹೋರಾಡಿದರು.
ಮಾದ್ರಿ - ಪಾಂಡುರಾಜನ ಎರಡನೆಯ ಹೆಂಡತಿ. ಮದ್ರದೇಶದ ರಾಜಕುಮಾರಿ. ಕುಂತಿಯಿಂದ ಪಡೆದ ಮಂತ್ರದ ಬಲದಿಂದ ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿ ನಕುಲ ಸಹದೇವರೆಂಬ ಅವಳಿ ಮಕ್ಕಳನ್ನು ಪಡೆದವಳು.
ಚತುರಂಗಬಲ - ಆನೆ, ಕುದುರೆ, ರಥ, ಕಾಲಾಳುಗಳನ್ನೊಳಗೊಂಡ ಸೈನ್ಯ ಸಮೂಹ.
ರಾಜೀವ ಸಖ - ರಾಜೀವ-ಕಮಲ (ತಾವರೆ); ಸಖ-ಗೆಳೆಯ - ತಾವರೆಯ ಗೆಳೆಯ - ಸೂರ‍್ಯ
ಮಾಧವ - ಮಾ-ಲಕ್ಷ್ಮೀ, ಧವ-ಪತಿ, ಒಡೆಯ, ಧರಿಸಿದವ, ಲಕ್ಷ್ಮೀಯನ್ನು ಎದೆಯಲ್ಲಿ ಧರಿಸಿದವ-ವಿಷ್ಣು-ಇಲ್ಲಿ ಕೃಷ್ಣ (ಕೃಷ್ಣನು ವಿಷ್ಣುವಿನ ಅವತಾರ)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ