ಈ ಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ಬರೆಯಿರಿ.
ಒಮ್ಮೊಮ್ಮೆ = ಒಮ್ಮೆ + ಒಮ್ಮೆ - ಲೋಪಸಂಧಿ
ಜಾಗವನ್ನು = ಜಾಗ + ಅನ್ನು - ಆಗಮಸಂಧಿ
ಅತ್ಯಾದರ = ಅತಿ + ಆದರ - ಯಣ್‌ಸಂಧಿ
ವಾಚನಾಲಯ = ವಾಚನ + ಆಲಯ - ಸವರ್ಣದೀರ್ಘಸಂಧಿ
ಸಂಗ್ರಹಾಲಯ = ಸಂಗ್ರಹ + ಆಲಯ - ಸವರ್ಣದೀರ್ಘಸಂಧಿ
ಓಣಿಯಲ್ಲಿ = ಓಣಿ + ಅಲ್ಲಿ - ಆಗಮಸಂಧಿ
ಕಾಲ
ಕನ್ನಡದಲ್ಲಿ ಪ್ರಮುಖವಾಗಿ ಮೂರು ಕಾಲಗಳಿವೆ.
೧) ಭೂತಕಾಲ
೨) ವರ್ತಮಾನಕಾಲ : ನಡೆಯುತ್ತಿರುವ, ಶೀಘ್ರದಲ್ಲೇ ನಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.
೩) ಭವಿಷ್ಯತ್‌ಕಾಲ : ಮುಂದೆ ನಡಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.
೧) ಭೂತಕಾಲ : ಇದು ನಡೆದು ಹೋದ ಕ್ರಿಯೆಯನ್ನು ಸೂಚಿಸುತ್ತದೆ.
ಉದಾ: "ಮರದಿಂದ ಎಲೆಗಳು ಉದುರಿದವು." ಈ ವಾಕ್ಯದಲ್ಲಿ ಕ್ರಿಯೆ ಮುಗಿದಿರುವುದನ್ನು ಕಾಣಬಹುದು.
ಧಾತುಗಳಿಗೆ "ದ" ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ ಭೂತಕಾಲವಾಗುತ್ತದೆ.
[ಕೆಲವೊಮ್ಮೆ ಪ್ರಥಮ ಪುರುಷ-ನಪುಂಸಕ ಲಿಂಗದಲ್ಲಿ ಕಾಲಸೂಚಕ ಪ್ರತ್ಯಯ ಲೋಪವಾಗಿರುತ್ತದೆ. ಅದನ್ನು ಅರ್ಥದ ಮೂಲಕ ಗ್ರಹಿಸಿ ಅದು ಯಾವಕಾಲವೆಂಬುದನ್ನು ತಿಳಿಯಬೇಕು. ಉದಾ: ಕೋತಿ ಮರವನ್ನು ಏರಿತು. ಇಲ್ಲಿ ಏರಿತು ಎಂಬ ಪದದಲ್ಲಿ "ದ" ಪ್ರತ್ಯಯ ಇಲ್ಲದಿದ್ದರೂ ಅದು ಭೂತಕಾಲವಾಗುತ್ತದೆ]
೨) ವರ್ತಮಾನಕಾಲ : ಇದು ನಡೆಯುತ್ತಿರುವ, ಶೀಘ್ರದಲ್ಲೇ ನಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.
ಉದಾ: "ಮರದಿಂದ ಎಲೆಗಳು ಉದುರುತ್ತವೆ ಅಥವಾ ಉದುರುತ್ತಿವೆ." ಈ ವಾಕ್ಯದಲ್ಲಿ ಕ್ರಿಯೆ ಮುಗಿದಿಲ್ಲದಿರುವುದನ್ನು ಕಾಣಬಹುದು.
ಧಾತುಗಳಿಗೆ "ಉತ್ತ" ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ ವರ್ತಮಾನಕಾಲವಾಗುತ್ತದೆ.
೩) ಭವಿಷ್ಯತ್‌ಕಾಲ : ಮುಂದೆ ನಡಡೆಯಲಿರುವ ಕ್ರಿಯೆಯನ್ನು ಸೂಚಿಸುತ್ತದೆ.
ಉದಾ: "ಮರದಿಂದ ಎಲೆಗಳು ಉದುವವು." ಈ ವಾಕ್ಯದಲ್ಲಿ ಕ್ರಿಯೆ ಮುಂದೆಂದೋ ನಡೆಯುತ್ತದೆ ಎಂಬ ಅರ್ಥವನ್ನು ಕಾಣಬಹುದು.
ಧಾತುಗಳಿಗೆ "ವ" ಎಂಬ ಕಾಲಸೂಚಕ ಪ್ರತ್ಯಯ ಸೇರಿದಾಗ ಭವಿಷ್ಯತ್‌ಕಾಲವಾಗುತ್ತದೆ.
ಧಾತುಗಳಿಗೆ ಕಾಲಸೂಚಕದ ಜೊತೆಗೆ ಆಖ್ಯಾತ ಪ್ರತ್ಯಯಗಳು ಸೇರಿದಾಗ ಪುರುಷವಾಚಕಗಳಿಗೆ ಅನುಗುಣವಾಗಿ ಬೇರೆಬೇರೆ ರೂಪಗಳನ್ನು ಹೊಂದುತ್ತವೆ.
ಕ್ರಿಯಾಪದ, ಧಾತು, ಆಖ್ಯಾತ ಪ್ರತ್ಯಯ, ಕ್ರಿಯಾರೂಪಗಳು ಇತ್ಯಾದಿ ಹೆಚ್ಚಿನ ಮಾಹಿತಿಗಾಗಿ
>>>ಇಲ್ಲಿ ಕ್ಲಿಕ್ ಮಾಡಿ<<<
****************************
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ