ನನ್ನ ಪುಟಗಳು

26 ನವೆಂಬರ್ 2013

ಸಾರ್ಥಕ ಬದುಕಿನ ಸಾಧಕ (ಗದ್ಯ-4)

ಈ ಗದ್ಯಭಾಗವನ್ನು ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು  ಬರೆದಿರುವ 'ಸಾಹಿತ್ಯ ರತ್ನ ಸಂಪುಟ' ಕೃತಿಯಿಂದ ತೆಗೆದುಕೊಳ್ಳಲಾಗಿದೆ.

ಲೇಖಕರ ಪರಿಚಯ: ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು 
ಜನನ: ೧೯೩೬ ಅಕ್ಟೋಬರ್ ೨೯ 
ಹುಟ್ಟೂರು: ಶಿವಮೊಗ್ಗ
ಪೂರ್ಣಹೆಸರು:  'ಶಿವಮೊಗ್ಗ ಶಿವರಾಮಭಟ್ಟ ಲಕ್ಷ್ಮೀನಾರಾಯಣ ಭಟ್ಟ. 
ತಂದೆ: ಶಿವರಾಮ ಭಟ್ಟ, ತಾಯಿ: ಮೂಕಾಂಬಿಕೆ. 
ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 

ಇವರ ವಿದ್ಯಾಭ್ಯಾಸ

ಶಿವಮೊಗ್ಗದಲ್ಲಿ 'ಇಂಟರ್ ಮೀಡಿಯೆಟ್ ಮುಗಿಸಿ', ಕನ್ನಡ ’ಎಂ.ಎ. ಆನರ್ಸ್ ಪದವಿ’ ಮೈಸೂರಿನ ಮಹಾರಾಜ ಕಾಲೇಜ್ ನಲ್ಲಿ ಗಳಿಸಿದರು. ಅಧ್ಯಯನದುದ್ದಕ್ಕೂ ಮೊದಲ ದರ್ಜೆಯಲ್ಲೇ ಉತ್ತೀರ್ಣರಾದರು. ತುಂಬಾ ಹರಟುವ ಸ್ವಭಾವ, ಸರಳ ಸಜ್ಜನಿಕೆ, ಅತ್ಯುತ್ತಮ ಸ್ಮರಣ ಶಕ್ತಿ, ಯನಂತರ, ’ತೀನಂಶ್ರೀ’ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿಯನ್ನು ಕೈಗೊಂಡರು. ೧೯೬೫ ರಲ್ಲಿ ಬೆಂಗಳೂರು ವಿಶ್ವವಿಧ್ಯಾಲಯವನ್ನು ಸೇರಿ, ’ಅಧ್ಯಾಪಕ’, ’ರೀಡರ್’, ’ಪ್ರಾಧ್ಯಾಪಕ’, ’ನಿರ್ದೇಶಕ’೧೯೯೦ ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆದರು. ಈ ಎಲ್ಲಾ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ’ಪಿ ಎಚ್ ಡಿ’ ಪದವಿಗೆ ’ಆಧುನಿಕ ಕನ್ನಡ ಕಾವ್ಯ’ ಕುರಿತು ಪ್ರಬಂಧ ಸಾದರಪಡಿಸಿದರು. 'ತೀನಂಶ್ರೀ', 'ಸಿಡಿಎನ್', 'ಡಿಎಲ್ಎನ್', 'ಶ್ರೀಕಂಠ ಶಾಸ್ತ್ರಿ' ಮೊದಲಾದ ಶ್ರೇಷ್ಟ ಮಟ್ಟದ ಆಚಾರ್ಯರ ಚಿಂತನ ಧಾರೆಯಿಂದ ಪ್ರಭಾವಿತರಾಗಿದ್ದರು. 'ಹಳೆಗನ್ನಡ ಕಾವ್ಯ'ಗಳನ್ನು 'ನವೀನ ಸಾಹಿತ್ಯ'ದೊಂದಿಗೆ ಸಮನಾಗಿ ಜೀರ್ಣಿಸಿಕೊಂಡರು. ಇಂಗ್ಲೀಷ್ ಮತ್ತು ಸಂಸ್ಕೃತಸಾಹಿತ್ಯದಲ್ಲೂ ಅವರ ಅಧ್ಯಯನ ಪುಟಗೊಂಡಿದೆ.

ಶ್ರೀಯುತರ ಸಾಹಿತ್ಯಸೇವೆ

'ಶಿಶುಸಾಹಿತ್ಯ’ ಅವರಿಗೆ ಬಹು-ಪ್ರಿಯವಾದ ಪ್ರಕಾರಗಳಲ್ಲಿ ಒಂದು. ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, `ಎನ್.ಸಿ.ಆರ್.ಟಿ’ ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ`ಬಾಲಸಾಹಿತ್ಯ ಪುರಸ್ಕಾರ’ ಲಭಿಸಿದೆ. ಅನುವಾದಗಳಲ್ಲಿ ಮುಖ್ಯವಾದವುಗಳು, `ಮೃಚ್ಛಕಟಿಕ’, `ಇಸ್ಪೀಟ್ ರಾಜ್ಯ’, ` ಟ್ವೆಲ್ಫ್ತ್ ನೈಟ್’, ಮತ್ತು `ಭಾರತೀಯ’ ಗ್ರಂಥ ಸಂಪಾದನಾ ಪರಿಚಯ’, `ಕನ್ನಡ ಮಾತು’ ಎನ್ನುವ ಪುಟ್ಟ-ಗ್ರಂಥ, ಕನ್ನಡ ಭಾಷೆಯನ್ನು ಬೆಳವಣಿಗೆಯನ್ನು ಸೂಕ್ತ ದರ್ಶನಗಳೊಂದಿಗೆ ಸಾರ್ವಜನಿಕರಿಗೆ ತಲುಪುವ ಆಶಯದಲ್ಲಿ ಯಶಸ್ವಿಯಾಗಿವೆ.
 ********************************
 ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ [ಡಿವಿಜಿ] 
ಜನನ: ಮಾರ್ಚ್ ೧೭, ೧೮೮೭ 
ಮರಣ: ಅಕ್ಟೋಬರ್ ೭, ೧೯೭೫ 
ಬಿರುದು: ಕನ್ನಡದ ಆಧುನಿಕ ಸರ್ವಜ್ಞ
 

ಶ್ರೀಯುತರ ವೃತ್ತಿ ಜೀವನ
     ಪ್ರೌಢಶಾಲೆಯಲ್ಲಿ ಓದುವಾಗಲೇ ಗುಂಡಪ್ಪನವರಿಗೆ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಮುಂದೆ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರು. ಅದೇ ಅವರ ವೃತ್ತಿ ಜೀವನದ ನಾಂದಿ. ಆದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಮುಂದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ, ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಎಲ್ಲೆಂದರಲ್ಲಿ ಅಲೆದರು.
ಕೃತಿಗಳು: 

ಪತ್ರಿಕೋದ್ಯಮ
       ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕಿದ್ದ ಗುಂಡಪ್ಪನವರು "ಸೂರ್ಯೋದಯ ಪ್ರಕಾಶಿಕ" ಪತ್ರಿಕೆಯಲ್ಲಿ ಬಾತ್ಮೀದಾರರಾಗಿ ಸೇರಿಕೊಂಡರು. ಹೆಚ್ಚು ಕಾಲ ಈ ಪತ್ರಿಕೆ ನಡೆಯಲಿಲ್ಲ. ಪುನಃ ಮತ್ತೊಂದಕ್ಕೆ ಗುಂಡಪ್ಪನವರ ಹೆಜ್ಜೆ, ಖರ್ಚಿಗಾಗಿ ಏನಾದರೂ ಬರೆಯಬೇಕಿತ್ತು. ಯಾವುದಾದರೂ ಪತ್ರಿಕೆ ಬೇಕಿತ್ತು. ಹಲವಾರು ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಬರೆದರು. ಕನ್ನಡ ಪತ್ರಿಕೆಗಳಲ್ಲಿ ಅನುಭವ ಪಡೆದರು. "ವೀರಕೇಸರಿ" ಯಲ್ಲಿ ಕಾರ್ಯ ನಿರ್ವಹಿಸಲು ಮದ್ರಾಸ್ ಗೆ ಹೋದಾಗ ಅಲ್ಲಿ "ಹಿಂದೂ" ಪತ್ರಿಕೆಗೆ ಬರೆದರು. ನಂತರ "ಮೈಸೂರು ಟೈಮ್ಸ್" ಇಂಗ್ಲಿಷ್ ಪತ್ರಿಕೆಯ ಸಹಾಯಕ ಸಂಪಾದಕರಾದರು.
ಪ್ರಮುಖ ಕೃತಿಗಳು
  • ಮಂಕುತಿಮ್ಮನ ಕಗ್ಗ
  • ಮರುಳ ಮುನಿಯನ ಕಗ್ಗ
  • ಶ್ರೀಮದ್ಭಗವದ್ಗೀತಾ ತಾತ್ಪರ್ಯ 

ಕಾವ್ಯ

  • ನಿವೇದನ
  • ಉಮರನ ಒಸಗೆ
  • ಮಂಕುತಿಮ್ಮನ ಕಗ್ಗ - I
  • ಮರುಳ ಮುನಿಯನ ಕಗ್ಗ - II
  • ಶ್ರೀರಾಮ ಪರೀಕ್ಷಣಂ
  • ಅ೦ತಃಪುರಗೀತೆ
  • ಗೀತ ಶಾಕುಂತಲಾ

ಪ್ರಬಂಧ

  • ಜೀವನ ಸೌಂದರ್ಯ ಮತ್ತು ಸಾಹಿತ್ಯ
  • ಸಾಹಿತ್ಯ ಶಕ್ತಿ
  • ಸಂಸ್ಕೃತಿ
  • ಬಾಳಿಗೊಂದು ನಂಬಿಕೆ

ನಾಟಕ

  • ವಿದ್ಯಾರಣ್ಯ ವಿಜಯ
  • ಜಾಕ್ ಕೇಡ್
  • ಮ್ಯಾಕ್ ಬೆಥ್

ಗೌರವಗಳು / ಪ್ರಶಸ್ತಿಗಳು

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ