ನನ್ನ ಪುಟಗಳು

26 ನವೆಂಬರ್ 2013

ತಲಕಾಡಿನ ವೈಭವ (ಗದ್ಯ-3)

ಹಿರೇಮಲ್ಲೂರು ಈಶ್ವರನ್

.೧೧.೧೯೨೨  -  ೨೩..೧೯೯೮

ಬೋಧಕ, ಪ್ರಕಾಶಕ, ಸಂಪಾದಕ, ಸಮಾಜ ವಿಜ್ಞಾನಿ, ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರೆನಿಸಿದ್ದ ಈಶ್ವರನ್‌ರವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರಿನಲ್ಲಿ (ಈಗ ಹಾವೇರಿ ಜಿಲ್ಲಿಗೆ ಸೇರಿದೆ). ತಂದೆ ಚೆನ್ನಬಸಪ್ಪ, ತಾಯಿ ಬಸಮ್ಮ. ತಂದೆ ಮುಲ್ಕಿ ಪರೀಕ್ಷೆಯವರೆಗೆ ಓದಿ, ಟ್ರೈನಿಂಗ್ ಕಾಲೇಜಿನಲ್ಲಿ ಟ್ರೈನಿಂಗ್ ಪಡೆದು ಮಾಸ್ತರಿಕೆ ಉದ್ಯೋಗ ಪ್ರಾರಂಭಿಸಿದರು.

ತಾಯಿ ನಿರಕ್ಷರಿ. ಹಳ್ಳಿಯಲ್ಲಿ ಮಾಸ್ತರದೇ ಕಡೇ ಮಾತು. ಸಕಲವೂ ಮಾಸ್ತರು ಹೇಳಿದಂತೆ ಕೇಳಬೇಕೆಂದು ರೂಢಿಸಿಕೊಂಡಿದ್ದು, ಮಾಸ್ತರಿಗೆ ಎಲ್ಲರೂ ಗೌರವ ತೋರುತ್ತಿದ್ದರು. ಅವಿಭಾಜ್ಯ ಕುಟುಂಬಕ್ಕೆ ಜಮೀನಿನಿಂದ ಬರುತ್ತಿದ್ದ ವರಮಾನ ಸಂಸಾರ ನಿರ್ವಹಣೆಗೆ ಸಾಲದಾಗಿದ್ದು ಕಡುಬಡತನದ ಜೀವನ. ಮಾಸ್ತರ ಮಗ ಯಾವಾಗಲೂ ಮೊದಲು ಸ್ಥಾನದಲ್ಲಿರಬೇಕೆಂಬ ಆಸೆ ತಂದೆಯದಾಗಿದ್ದರೂ, ಈಶ್ವರನ್‌ರವರಿಗೆ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಯಲ್ಲೇ ಆಸಕ್ತಿ ಜಾಸ್ತಿ. ಶಾಲಾದಿನಗಳಲ್ಲೇ ಸಾಹಿತ್ಯದ ರುಚಿ ಹತ್ತಿ ಪಠ್ಯ ಪುಸ್ತಕದೊಳಗಿಟ್ಟುಕೊಂಡು ಗಳಗನಾಥ್, ಈಶ್ವರ ಚಂದ್ರರ ಕಾದಂಬರಿಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು.

ಬೆಳಗಾವಿಯ ಲಿಂಗರಾಜು ಕಾಲೇಜಿನಲ್ಲಿ. ಬಿ.ಎ. ಪದವಿಯಲ್ಲಿ ಹೆಚ್ಚು ಅಂಕ ಗಳಿಸಿ ಫೆಲೋಆಗುವ ಅವಕಾಶ ಪಡೆದುಕೊಂಡರು. ವಿದ್ಯಾರ್ಥಿ ದೆಸೆಯಲ್ಲಿಯೇ ಹಲವಾರು ಲೇಖನಗಳನ್ನು ಪತ್ರಿಕೆಗೆ ಬರೆಯತೊಡಗಿದ್ದರು. ಇಂಗ್ಲಿಷ್ ಭಾಷೆಯನ್ನು ಕಲಿಯುವ ಇಚ್ಚೆ ವ್ಯಕ್ತಪಡಿಸಿದಾಗ ಫೆಲೋಷಿಪ್ ಕೈಬಿಟ್ಟುಹೋಗುವುದೆಂದರಿತು ಕಡೆಗೆ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಎಂ.ಎ. ಪದವಿ ಗಳಿಸುವ ಮುಂಚೆಯೇ ವಿಷ ನಿಮಿಷಗಳು’, ‘ಹಾಲಾಹಲ ಎಂಬ ಎರಡು ಗ್ರಂಥಗಳನ್ನು ಪ್ರಕಟಿಸಿದ್ದರು. ಎಂ.ಎ. ಫಲಿತಾಂಶ ಬಂದ ನಂತರ ಕಂದಾಯ ಇಲಾಖೆ ಸೇರಿದ್ದರಿಂದ ಮಗ ಕಲೆಕ್ಟರ್‌ವರೆಗೆ ಬಡ್ತಿ ಗಳಿಸಬಹುದೆಂಬ ಆಸೆ ತಂದೆಯದಾಗಿತ್ತು. ಆದರೆ ಇವರಿಗಿದ್ದ ಕನ್ನಡದ ಮೇಲಿನ ಪ್ರೀತಿಯಿಂದ ಕಂದಾಯ ಇಲಾಖೆಗೆ ರಾಜೀನಾಮೆ ಸಲ್ಲಿಸಿ ಹುಬ್ಬಳ್ಳಿಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇರಿದರು. ಆದರೆ ಕಾಲೇಜಿನ ಆಡಳಿತ ವರ್ಗದ ರೀತಿನೀತಿಯಿಂದ ಬೇಸತ್ತು ಕರ್ನಾಟಕ ಸಂಘ ಸ್ಥಾಪಿಸಿ ಕನ್ನಡದ ಏಳ್ಗೆಗಾಗಿ ದುಡಿಯತೊಡಗಿದರು.

ಪಿ.ಆರ್.ಕಂಠಿಯವರ ನೇತೃತ್ವದಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ನವಯುಗ ದೈನಿಕ ಪತ್ರಿಕೆಗೆ ಲೇಖನಗಳನ್ನು ಬರೆಯ ತೊಡಗಿದರು. ಇದೇ ಸಂದರ್ಭದಲ್ಲಿ ಕಲ್ಪನಾ ಗ್ರಂಥಮಾಲೆಯನ್ನು ಪ್ರಾರಂಭಿಸಿ ಶಿವನ ಬುಟ್ಟಿ’, ರಾಜಾರಾಣಿ ದೇಖೋ’, ‘ಕನ್ನಡ ತಾಯ್‌ನೋಟ ಮುಂತಾದ ಕೃತಿಗಳನ್ನು ಪ್ರಕಟಿಸಿದರು. ತಮ್ಮ ಕೃತಿಗಳನಷ್ಟೇ ಪ್ರಕಟಿಸದೆ ಚೆನ್ನವೀರಕಣವಿಯವರ ಮೊದಲ ಕವನ ಸಂಕಲನ ಕಾವ್ಯಾಕ್ಷಿ’, ವರದರಾಜ ಹುಯಲಗೋಳರ ಫಲಸಂಚಯ’, ಸಿಂಪಿ ಲಿಂಗಣ್ಣನವರ ಭಾರತದ ಭವ್ಯ ಸಿದ್ಧತೆ’, ‘ಅರವಿಂದರ ಕಾಗದಗಳು’, ಮಿರ್ಜಿ ಅಣ್ಣಾರಾಯರ ರಾಮಣ್ಣ ಮಾಸ್ತರ ಮುಂತಾದ ಕೃತಿಗಳು ಹೊರಬರಲು ಕಾರಣರಾದರು.

ಕಾಲೇಜಿನ ಆಡಳಿತ ಮಂಡಲಿಯ ಕಿರುಕುಳದಿಂದ ಬೇಸತ್ತಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಲಿಯು ಇವರನ್ನು ಸೊಲ್ಲಾಪುರದ ಸಂಗಮೇಶ್ವರ ಕಾಲೇಜಿಗೆ ವರ್ಗಮಾಡಿತು. ಕನ್ನಡದ ಮೇಲಿನ ಪ್ರೀತಿ, ಸೇವೆಯಿಂದ ವಂಚಿತರಾಗಿದ್ದೇ ಕಾರಣವಾಗಿ ಮಾನವ ಶಾಸ್ತ್ರದತ್ತ ಇವರ ಒಲವು ಬೆಳೆಯತೊಡಗಿತು. ಪ್ರಖ್ಯಾತ ಮಾನವಶಾಸ್ತ್ರಜ್ಞರಾಗಿದ್ದ ಪ್ರೊ. ಎಂ.ಎನ್.ಶ್ರೀನಿವಾಸ್‌ರವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಂತಹ ಹೊರ ಜಗತ್ತಿನ ಪರಿಚಯಕ್ಕೆ ನಾಂದಿ ಹಾಡಿದರು. ಮೊದಲಲ್ಲಿ ಇವರಿಗೆ ಆಕ್ಸ್‌ಫರ್ಡ್ ವಿ.ವಿ.ದ ರೀತಿ ನೀತಿಗಳು ಕೊಂಚ ತಬ್ಬಿಬ್ಬು ಗೊಳಿಸಿದರೂ ಕ್ರಮೇಣ ಒಗ್ಗಿಕೊಂಡರು. ಇವರ ಡಾಕ್ಟರೇಟ್‌ಗೆ ಮಾರ್ಗದರ್ಶಕರಾಗಿದ್ದ ಪೋಕಾಕ್‌ ರವರ ಭಾರತೀಯರ ಜನಜೀವನ ಕುರಿತು ಅಧ್ಯಯನ ಮಾಡಲು ಸೂಚಿಸಿದಾಗ ಇವರು ಐರ್ಲೆಂಡ್ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡುತ್ತೇನೆಂದು ಸೂಚಿಸಿದರು. ಇದಕ್ಕೆ ಮಾರ್ಗದರ್ಶಕರು ಒಪ್ಪದಿದ್ದಾಗ ಬೇರೊಂದು ವಿಶ್ವವಿದ್ಯಾಲಯವನ್ನೇ ಹುಡುಕ ತೊಡಗಿ ಕಡೆಗೆ ಹಾಲೆಂಡ್‌ನ ಲಾಯ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ಪಡೆದರು.

ಇವರು ಹಾಲೆಂಡಿನ ಕನ್ಯೆ ವೋಚಿನ್ ರವರನ್ನು ಮದುವೆಯಾಗಿ; ಈಶ್ವರನ್ ರವರಿಗೆ ಶೈಲಜಾ ಆದರು. ಇವರಿಗೆ ಹುಟ್ಟಿದ ಮೂವರು ಮಕ್ಕಳಲ್ಲಿ ಮೊದಲನೆಯವಳು ಅರುಂಧತಿ, ಎರಡನೆಯವನು ಹೇಮಂತ, ಮೂರನೆಯವನು ಶಿವಕುಮಾರ್. ಕರ್ನಾಟಕದ ಕರೆಯ ಮೇರೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ, ಮಾನವಶಾಸ್ತ್ರದ ಪ್ರೊಫೆಸರಾಗಿ ಸೇರಿದರಾದರೂ ಅಂದಿನ ಕುಲಪತಿಗಳಿಗೂ ಇವರಿಗೂ ಹೊಂದಾಣಿಕೆಯಾಗದೆ ಐದು ವರ್ಷ ಕಳೆಯುವಲ್ಲಿಯೇ ವಿಶ್ವವಿದ್ಯಾಲಯವನ್ನು ಬಿಡಬೇಕಾಯಿತು.

ಪುನಃ ಹಾರಿದ್ದು ವಿದೇಶಕ್ಕೆ. ಟೊರ್ಯಾಂಟೊದ ಯಾರ‍್ಕ್ ವಿಶ್ವವಿದ್ಯಾಲಯ ಸೇರಿ ಪ್ರಖ್ಯಾತ ಸಮಾಜಶಾಸ್ತ್ರಜ್ಞರೆನಿಸಿದರು. ಇದೇ ವಿ.ವಿ.ಯಲ್ಲಿ ಮೂರು ದಶಕಗಳಷ್ಟು ಕಾಲ ಸಮಾಜ ವಿಜ್ಞಾನದ ಪ್ರಾಧ್ಯಾಪಕರಾಗಿ, ಎಮಿರೇಟಸ್ ಪ್ರಾಧ್ಯಾಪಕರಾಗಿ ದುಡಿದರು. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಇವರು ರಚಿಸಿದ ಕೃತಿಗಳು ಸುಮಾರು ೨೫ ಕ್ಕೂ ಹೆಚ್ಚು. ಅಂತಾರಾಷ್ಟ್ರೀಯ ಮಟ್ಟದಲ್ಲಿ ೭೦ ಕ್ಕೂ ಕೃತಿಗಳನ್ನು ಸಂಪಾದಿಸಿದ್ದಾರೆ. ೩ ಜರ್ನಲ್‌ಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇದೀಗ ಕೆಲ ಜರ್ನಲ್‌ಗಳನ್ನು ಇವರ ಕಿರಿಯಮಗ ಶಿವಕುಮಾರ್ ನಡೆಸಿಕೊಂಡು ಹೋಗುತ್ತಿದ್ದಾರೆ. ಹದಿಮೂರು ತಾಯಂದಿರ ಜೀವನ ಚಿತ್ರದ ಸಂಕಲನವೇ ಕನ್ನಡ ತಾಯ್‌ನೋಟ’, ಕನ್ನಡ ನಾಡಿನ ಉದ್ದಗಲಕ್ಕೂ ಸಂಚರಿಸಿ ರಚಿಸಿದ ಕೃತಿ ಕವಿಕಂಡನಾಡು’. ವಲಸಿಗನಾಗಿ ವಿದೇಶಕ್ಕೆ ಹಾರಿ, ಬಡ ಕುಟುಂಬವೊಂದರ, ಬಡರೈತನ ಮಗನ ಬವಣೆಯ ಆತ್ಮಕಥೆಯಂತಿರುವ ಹೋರಾಟದ ಚಿತ್ರಣದ ಕೃತಿಯೇ ವಲಸೆ ಹೋದ ಕನ್ನಡಿಗರ ಕಥೆ’. ಮಗಳ ದುರಂತಮಯ ಬದುಕಿನ ಘಟನೆಗಳ ಕಥನಾತ್ಮಕ ನಿರೂಪಣೆಯ ಕೃತಿ ಅರುಂಧತಿ ನನ್ನ ಮಗಳು’, ಕರ್ನಾಟಕದ ವಿಶ್ವವಿದ್ಯಾಲಯಕ್ಕಾಗಿ ಸಿದ್ಧಪಡಿಸಿದ್ದ ಮಹಾಪ್ರಬಂಧ ಹರಿಹರನ ಕೃತಿಗಳು: ಒಂದು ಸಂಖ್ಯಾ ನಿರ್ಣಯ’, ಇದಲ್ಲದೆ ಲಿಂಗಾಯತ ಧರ್ಮ: ಒಂದು ಅಧ್ಯಯನ’, ‘ಬಸವಣ್ಣ ಮತ್ತು ಲಿಂಗಾಯತ ಧರ್ಮ’, ‘ಲಿಂಗಾಯತ, ಜೈನ, ಬ್ರಾಹ್ಮಣಧರ್ಮಗಳು; ಮಠಗಳ ಒಂದು ತೌಲನಿಕ ಅಧ್ಯಯನ ಮುಂತಾದ ಕೃತಿಗಳು.

ಇವರಿಗೆ ೭೬ ವರ್ಷ ತುಂಬಿದ ಸಂದರ್ಭದಲ್ಲೇ ಪಾರ್ಶ್ವವಾಯು ಪೀಡಿತರಾಗಿ ಆರೋಗ್ಯ ಸುಧಾರಣೆಗಾಗಿ ಧಾರವಾಡಕ್ಕೆ ಬಂದರು. ಅನಾರೋಗ್ಯ ಪೀಡಿತರಾಗಿದ್ದರೂ ಅವರ ಬರವಣಿಗೆಯ ಕಾಯಕಕ್ಕೆ ವಿಶ್ರಾಂತಿ ನೀಡಬಯಸದೆ ಮತ್ತೊಂದು ಕಾದಂಬರಿ ಬರೆಯುವ ಹವಣಿಕೆಯಲ್ಲಿದ್ದರು. ಮುಸ್ಸಂಜೆಯ ವಯಸ್ಸಿನಲ್ಲಿ ತಾಯ್ನಾಡಿನ ಆಕರ್ಷಣೆಗೊಳಗಾಗಿ ಅನಾರೋಗ್ಯವಾದಾಗಲ್ಲೆಲ್ಲಾ ಧಾರವಾಡಕ್ಕೆ ಧಾವಿಸುತ್ತಿದ್ದರು. ಹೀಗೊಮ್ಮೆ ಧಾರವಾಡಕ್ಕೆ ಬಂದಾಗಲೇ ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಶಿವಮೂರ್ತಿ ಸ್ವಾಮೀಜಿಯವರು ಬಸವ ಶ್ರೀಪ್ರಶಸ್ತಿ ನೀಡಿ ಗೌರವಿಸಿದ್ದರಿಂದ ಸಂಭ್ರಮಿಸಿದರು. ವಿದೇಶದಲ್ಲಿದ್ದರೂ ಕನ್ನಡ ನಾಡು-ನುಡಿಗಾಗಿ ಅಹರ್ನಿಶಿ ದುಡಿದ ವಿದ್ವಾಂಸರೊಬ್ಬರನ್ನು ಗುರುತಿಸಿ  ಸನ್ಮಾನಿಸಿದ್ದು ಅಭಿನಂದನಾರ್ಹ ಸಂಗತಿಯಾದರೂ ತನ್ನ ಪ್ರತಿಭೆಯನ್ನು ಕರ್ನಾಟಕದ ಜನತೆ ಗುರುತಿಸಿ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲವೆಂಬ ಕೊರಗು ಅವರನ್ನು ಬಾಧಿಸುತ್ತಲೇ ಇತ್ತು.
            ಸಮಾಜಶಾಸ್ತ್ರ, ಸಾಹಿತ್ಯ ಎರಡೂ ಕ್ಷೇತ್ರದಲ್ಲಿ ದುಡಿದ ಅಪರೂಪದ ಪ್ರತಿಭಾವಂತ ಈಶ್ವರನ್ ರವರು ಲೋಕವನ್ನು ತ್ಯಜಿಸಿದ್ದು ೨೩.೬.೧೯೯೮ ರಲ್ಲಿ.
****ಲೇಖಕರ ಪರಿಚಯ ಮಾಹಿತಿ ಕೃಪೆ: ಕಣಜ ಮತ್ತು ಸಿರಿ ಕನ್ನಡ ೮ನೆಯ ತರಗತಿ*********

ಕಾವೇರಿ ತಟದ ಪುಣ್ಯಕ್ಷೇತ್ರ ತಲಕಾಡು
ತಲಕಾಡು ಪುರಾತನ ಹಾಗೂ ಕಲಾತ್ಮಕ ಸುಂದರ ದೇವಾಲಯಗಳಿಂದ ಕೂಡಿದ ಐತಿಹಾಸಿಕ ಸ್ಥಳ. ಆಸ್ತಿಕ ನಾಸ್ತಿಕರಿಬ್ಬರನ್ನೂ ಸೆಳೆಯುವ ಈ ತಾಣದ ಸುತ್ತ ಹೆಣೆದುಕೊಂಡಿರುವ ಕಥೆಗಳು ನೂರಾರು. ಈ ಊರಿಗೆ  ತಲಕಾಡು ಎಂಬ ಹೆಸರು ಹೇಗೆ ಬಂತೆಂಬುದಕ್ಕೆ ಒಂದು ಕಥೆಯಾದರೆ, ಇಡೀ ಊರು ಮರಳಿನಿಂದ ಮುಚ್ಚಿ ಹೋಗಿರುವುದಕ್ಕೆ ಮತ್ತೊಂದು ಕಥೆ ಇದೆ.
ತಲಾ ಮತ್ತು ಕಾಡ ಎಂಬ ಇಬ್ಬರು ಕಿರಾತ ಸೋದರರಿಂದ ಈ ಊರಿಗೆ ತಲಕಾಡು ಎಂದು ಹೆಸರು ಬಂದಿದೆ ಎಂಬುದು ಸ್ಥಳ ಪುರಾಣ. ಅರಮನೆಗಳ ನಗರಿ ಮೈಸೂರಿಗೆ ೫೮ ಕಿಲೋ ಮೀಟರ್ ದೂರದಲ್ಲಿರುವ ಈ ಊರಿನಲ್ಲಿ ಪಂಚಲಿಂಗಗಳ ಪೈಕಿ ಮೂರು ಲಿಂಗಗಳಿವೆ.
ವೈದ್ಯೇಶ್ವರ, ಪಾತಾಳೇಶ್ವರ ಹಾಗೂ ಮರಳೇಶ್ವರ ದೇವಾಲಯಗಳು ಇಲ್ಲಿನ ವೈಶಿಷ್ಟ್ಯ. ಪಂಚಲಿಂಗಗಳ ಪೈಕಿ ಮತ್ತೆರೆಡು ಲಿಂಗಗಳಾದ ಅರ್ಕೇಶ್ವರ ದೇವಾಲಯ ಇಲ್ಲಿಗೆ ೪ ಕಿಲೋ ಮೀಟರ್ ದೂರದ ವಿಜಯಪುರದಲ್ಲೂ, ಮಲ್ಲಿಕಾರ್ಜುನ ದೇಗುಲ ಮುಡುಕುತೊರೆಯಲ್ಲೂ ಇದೆ.
ತಲಕಾಡಿನ ಶಿವನಿಗೆ ಗಜಾರಣ್ಯನಾಥ ಎಂದೂ ಕರೆಯುತ್ತಾರೆ. ಇದಕ್ಕೂ ಒಂದು ಕಥೆಯಿದೆ. ಆನೆಯ ಜನ್ಮ ಪಡೆದಿದ್ದ ಸೋಮದತ್ತನೆಂಬ ಋಷಿ ಮತ್ತು ಆತನ ಶಿಷ್ಯರು ಇಲ್ಲಿ ಮೋಕ್ಷ ಪಡೆದಿದ್ದರಿಂದ ಇದು ಗಜಾರಣ್ಯ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ತಲಕಾಡು ಹಿಂದೆ ಗಂಗ ಅರಸರ ರಾಜಧಾನಿಯಾಗಿತ್ತು. ಗಂಗರಸ ಹರಿವರ್ಮ ಇಲ್ಲಿ ನೆಲೆಸಿದ್ದನೆಂಬುದಕ್ಕೆ ಶಾಸನದ ಬಲವೂ ಇದೆ. ಚೋಳರೂ ಈ ಕ್ಷೇತ್ರವನ್ನು ಆಳಿದ್ದು, ಆಗ ಇದು ರಾಜರಾಜಪುರ ಎಂದೂ ಕರೆಸಿಕೊಂಡಿತ್ತು. ನಂತರ ಇದು ಹೊಯ್ಸಳರ ಆಳ್ವಿಕೆಗೆ ಕೂಡ ಒಳಪಟ್ಟು ಪುರೋಭಿವೃದ್ಧಿ ಹೊಂದಿತು.
೧೩೪೨ರಲ್ಲಿ ವಿಜಯನಗರದರಸರ ಆಳ್ವಿಕೆಯಲ್ಲಿ ಸ್ಥಳೀಯ ಮಾಧವ ಮಂತ್ರಿ ಊರಿನಂಚಿನಲ್ಲಿ ಪ್ರಶಾಂತವಾಗಿ ಹರಿಯುತ್ತಿದ್ದ ಕಾವೇರಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿಸಿದ. ಪರಿಣಾಮವಾಗಿ ಊರು ಮರಳ ಗುಡ್ಡವಾಗಿ ಪರಿಣಮಿಸಿತೆನ್ನುತ್ತಾರೆ ಕೆಲವರು. ಆದರೆ, ತಲಕಾಡು ಮರಳಾದ ಬಗ್ಗೆ ಬೇರೆಯದೇ ಕಥೆ ಇದೆ.
ವಿಜಯನಗರದರಸ ಪ್ರತಿನಿಯಾದ ಶ್ರೀರಂಗರಾಯ ಎಂಬಾತ ಶ್ರೀರಂಗಪಟ್ಟಣವನ್ನಾಳುತ್ತಿದ್ದ. ಅವನಿಗೆ ಬೆನ್ನುಪಣಿರೋಗ ಬಂದು ಯಾವ ಔಷಧದಿಂದಲೂ ಗುಣವಾಗದಿದ್ದಾಗ ವೈದ್ಯನಾಥೇಶ್ವರನಿಗೆ ಪೂಜೆ ಮಾಡಿ ತನ್ನ ರೋಗದಿಂದ ಮುಕ್ತಿಪಡೆಯಲು ತಲಕಾಡಿಗೆ ಆಗಮಿಸಿದ. ಪತಿ ಮರಣಾವಸ್ಥೆಯಲ್ಲಿರುವನೆಂದು ತಿಳಿದ ರಾಣಿ ತಾನೂ ಜೊತೆಗೆ ಬಂದಳು. ರಾಜ ತಲಕಾಡಿನಲ್ಲಿ ತನ್ನ ಕೊನೆಯುಸಿರೆಳೆದ. ಆತನ ಪತ್ನಿ ಅಲಮೇಲಮ್ಮ ತಲಕಾಡಿನ ಸನಿಹದ ಮಾಲಂಗಿ ಗ್ರಾಮದಲ್ಲಿ ನೆಲೆಸಿದಳು. ಆಗ
ರಾಜನಿಲ್ಲದ ಶ್ರೀರಂಗಪಟ್ಟಣವನ್ನು ಮೈಸೂರು ಅರಸರು ತಮ್ಮ ಕೈವಶ ಮಾಡಿಕೊಂಡರು. ಆಗ ಅವರಿಗೆ ಅಲಮೇಲಮ್ಮ ಬಳಿ ಇರುವ ಅಮೂಲ್ಯ ಅಭರಣಗಳ ವಿಷಯ ತಿಳಿಯಿತು. ಅದನ್ನು ಪಡೆಯಲು ಸೈನ್ಯ ಸಮೇತ ಧಾವಿಸಿದರು. ಆಗ ದಾರಿಕಾಣದ ಅಲಮೇಲಮ್ಮ ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಅರಸರಿಗೆ ಮಕ್ಕಳೇ ಆಗದಿರಲಿ ಎಂದು ಶಪಿಸಿ, ತಾನೂ ಮಾಲಂಗಿ ಮಡುವಿಗೆ ಮುಳುಗಿ ಸತ್ತಳಂತೆ. ಹೀಗಾಗೇ ತಲಕಾಡು ಮರಳಾಯಿತು, ಮಾಲಂಗಿ ಮಡುವಾಯಿತು, ಮೈಸೂರು ಅರಸರಿಗೆ ವಂಶೋದ್ಧಾರಕ ಸಂತಾನ ಭಾಗ್ಯವೇ ಇರಲಿಲ್ಲ ಎಂದು ಮತ್ತೊಂದು ಕಥೆ ಹೇಳುತ್ತದೆ.
ಇಂತಹ ಇತಿಹಾಸ ಪ್ರಸಿದ್ಧ ಹಾಗೂ ಪುರಾಣ ಪ್ರಸಿದ್ಧವಾದ ಊರಿನಲ್ಲಿ ಗಂಗರು, ಚೋಳರು, ಹೊಯ್ಸಳರು ೩೦ಕ್ಕೂ ಹೆಚ್ಚು ದೇವಾಲಯ ಕಟ್ಟಿಸಿದ್ದರೆನ್ನುತ್ತದೆ ಇತಿಹಾಸ. ಈಗ ಇಲ್ಲಿ ವೈದ್ಯನಾಥೇಶ್ವರ, ಪಾತಾಳೇಶ್ವರ, ಕೀರ್ತಿನಾರಾಯಣ, ಮರಳೇಶ್ವರ ಹಾಗೂ ಚೌಡೇಶ್ವರಿಯ ಐದು ದೇವಾಲಯಗಳಿವೆ. ಮತ್ತೊಂದು ದೇವಾಲಯ ಇತ್ತೀಚಗಷ್ಟೇ ಉತ್ಖನನ ಕಾಲದಲ್ಲಿ ಹೊರಹೊಮ್ಮಿದೆ.
ವೈದ್ಯೇಶ್ವರ ದೇವಾಲಯ ಇಲ್ಲಿರುವ ಭವ್ಯ ದೇಗುಲ. ಕೀರ್ತಿನಾರಾಯಣ ದೇಗುಲ ಹೊಯ್ಸಳರು ಕಟ್ಟಿಸಿದ ಏಕಮಾತ್ರ ದೇಗುಲ. ವೈದ್ಯೇಶ್ವರ ಊರಿನ ಪ್ರಮುಖ ದೇಗುಲ. ಇದನ್ನು ಮಾಧವ ಮಂತ್ರಿ ಕಟ್ಟಿಸಿದನೆಂದು ಪ್ರತೀತಿ. ಕಣಶಿಲೆಯಿಂದ ನಿರ್ಮಿಸಿರುವ ಈ ದೇಗುಲದಲ್ಲಿ ಸುಂದರ ಶಿಲ್ಪಾಲಂಕರಣಗಳಿವೆ. ಹೊರಬಿತ್ತಿಯ ಬಲ ಭಾಗದಲ್ಲಿ ಮೂಷಿಕ ವಾಹನನಾದ ಗಣಪನ ಸುಂದರ ಕೆತ್ತನೆಯಿದೆ. ಅಡ್ಡ ಪಟ್ಟಿಕೆಗಳಲ್ಲಿ ಹಲವು ಶಿಲ್ಪಗಳಿವೆ.
ವಿಶಾಲವಾದ ಪ್ರಾಕಾರದಲ್ಲಿ ಸಣ್ಣ ಸಣ್ಣ ಇತರ ದೇವರ ಗುಡಿಗಳಿವೆ. ಮುಖ್ಯದ್ವಾರದ ಬಳಿ ಸುಂದರ ಕೆತ್ತನೆಯ ೧೦ ಅಡಿ ಎತ್ತರದ ದ್ವಾರಪಾಲರ ಮೂರ್ತಿಗಳಿವೆ. ಇಷ್ಟು ಎತ್ತರವಾದ ದ್ವಾರಪಾಲಕ ಮೂರ್ತಿಗಳನ್ನು ಮತ್ತಾವ ದೇವಾಲಯದಲ್ಲೂ ನೋಡಲು ಸಿಗುವುದಿಲ್ಲ. ದ್ರಾವಿಡ-ಹೊಯ್ಸಳ ಶೈಲಿಯ ಈ ದೇಗುಲದಲ್ಲಿರುವ ಗರ್ಭಗುಡಿಯಲ್ಲಿ ಸುಂದರ ಶಿವಲಿಂಗವಿದೆ. ಕಂಚಿನ ನಟರಾಜ ಹಾಗೂ ಸುಂದರವಾದ ಉತ್ಸವ ಮೂರ್ತಿ ಮನಮೋಹಕವಾಗಿದೆ.
ಕಾರ್ತಿಕ ಬಹುಳ ಅಮಾವಾಸ್ಯೆಯ ಸೋಮವಾರ ಸೂರ್ಯಚಂದ್ರರಿಬ್ಬರೂ ವೃಶ್ಚಿಕ ರಾಶಿಯಲ್ಲಿ ಸೇರಿದಾಗ ಸಂಭವಿಸುವ ಕುಹುಯೋಗದಲ್ಲಿ ಇಲ್ಲಿ ಪಂಚಲಿಂಗ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಸೇರುತ್ತಾರೆ.
ಗೋಕರ್ಣ ತೀರ್ಥದಲ್ಲಿ ಮಿಂದು ವೈದ್ಯೇಶ್ವರನನ್ನೂ, ಉತ್ತರವಾಹಿನಿಯಲ್ಲಿ ಮಿಂದು ಅರ್ಕೇಶ್ವರನನ್ನೂ, ಪೂರ್ವವಾಹಿನಿಯಲ್ಲಿ ಸ್ನಾನ ಮಾಡಿ ಪಾತಾಳೇಶ್ವರನನ್ನೂ, ಪಶ್ಚಿಮ ವಾಹಿನಿಯಲ್ಲಿ ಮಿಂದು ಮಲ್ಲಿಕಾರ್ಜುನೇಶ್ವರನನ್ನೂ, ದಕ್ಷಿಣ ವಾಹಿನಿಯಲ್ಲಿ ಮಿಂದು ಮರಳೇಶ್ವರನನ್ನೂ ಪೂಜಿಸುತ್ತಾರೆ.
ಕೆಲವೊಮ್ಮೆ ೪ ವರ್ಷದ ಅವಧಿಯಲ್ಲೊಮ್ಮೆ, ಮತ್ತೆ ಕೆಲವು ಬಾರಿ ೧೪, ೧೫ ವರ್ಷಗಳಿಗೊಮ್ಮೆ ಈ ಕುಹುಯೋಗ ಪ್ರಾಪ್ತವಾಗುತ್ತದೆ. ಈ ಹಿಂದೆ ೧೯೦೮, ೧೯೧೫, ೧೯೨೫, ೧೯೩೮, ೧೯೫೨, ೧೯೫೯, ೧೯೬೬, ೧೯೭೯, ೧೯೮೬ ಹಾಗೂ ೧೯೯೩ರಲ್ಲಿ ನಡೆದಿತ್ತು. ಕಾರ್ತೀಕ ಸೋಮವಾರಗಳಂದು, ಶಿವರಾತ್ರಿಯ ದಿನ ಇಲ್ಲಿ ಸಹಸ್ರಾರು ಭಕ್ತರು ಆಗಮಿಸಿ, ಶಿವನ ದರ್ಶನ ಮಾಡಿ ಪುನೀತರಾಗುತ್ತಾರೆ. ದೇಗುಲದ ಅನತಿ ದೂರದಲ್ಲೇ ಮಂದಗತಿಯಲ್ಲಿ ಹರಿಯುವ ತಿಳಿನೀರ ಕಾವೇರಿ ನದಿಯಲ್ಲಿ ಆಡಿ ನಲಿಯುತ್ತಾರೆ. ನೀಲಾಗಸದ ಛಾಯೆಯಲ್ಲಿ ಕಂಗೊಳಿಸುವ ಈ ನದಿಯಲ್ಲಿ ತೆಪ್ಪದ ದೋಣಿ ವಿಹಾರ ಎಲ್ಲರಿಗೂ ಪ್ರಿಯವಾಗುತ್ತದೆ. 
ಪಂಚಲಿಂಗ ದೇವಾಲಯಗಳು
 
ಅರ್ಕೇಶ್ವರ ದೇವಾಲಯ
ಗೋಕರ್ಣೇಶ್ವರ ದೇವಾಲಯ

ಮುಡುಕುತೊರೆ ಮಲ್ಲಿಕಾರ್ಜುನ ದೇವಾಲಯ

ಪಾತಾಳೇಶ್ವರ ದೇವಾಲಯ

ವೈದ್ಯೇಶ್ವರ ದೇವಾಲಯ

ವೈದ್ಯೇಶ್ವರ ದೇವಾಲಯವನ್ನು ಹೋಲುವ ಇತರೆ ದೇವಾಲಯಗಳು

ಹಂಪಿಯ ಹಜಾರ ರಾಮ ದೇವಾಲಯ

ತಾಡಪತ್ರಿಯ ಲೇಪಾಕ್ಷಿ ದೇವಾಲಯ

ಶೃಂಗೇರಿಯ ವಿದ್ಯಾಶಂಕರ ದೇವಾಲಯ

ತಲಕಾಡು ಗಂಗರ ಇತಿಹಾಸ


ಪಶ್ಚಿಮ ಗಂಗ ರಾಜವಂಶ ಅಥವಾ ತಲಕಾಡು ಗಂಗರು ಎಂದು ಕರೆಯಲಾಗುವ ಈ ಅರಸೊತ್ತಿಗೆಯು ಕರ್ನಾಟಕದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ರಾಜವಂಶಗಳಲ್ಲಿ ಒಂದು. ತಮಿಳು ಸಂಸ್ಕೃತಿ ಮತ್ತು ಕರ್ನಾಟಕಗಳ ನಡುವೆ ಇದ್ದ ಸಂಬಂಧಗಳನ್ನು ಕುರಿತ ಬಹಳ ಬೆಲೆಬಾಳುವ ಮಾಹಿತಿಗಳನ್ನು ಈ ರಾಜವಂಶದ ಇತಿಹಾಸವು ದೊರಕಿಸಿಕೊಡುತ್ತದೆ. ಕರ್ನಾಟಕದ ಸಂಸ್ಕೃತಿಯ ದ್ರಾವಿಡ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ಇದರಿಂದ ನೆರವಾಗಿದೆ. ಈ ರಾಜವಂಶವು ಕ್ರಿ.ಶ. ನಾಲ್ಕನೆಯ ಶತಮಾನದಷ್ಟು ಹಿಂದೆಯೇ ಅಸ್ತಿತ್ವಕ್ಕೆ ಬಂದಿತು.(ಕ್ರಿ.ಶ. 350) ಈ ವಂಶವು ಜೈನಮುನಿಗಳಾದ ಸಿಂಹನಂದಿ ಆಚಾರ್ಯರ ಮಾರ್ಗದರ್ಶನದಲ್ಲಿ ರೂಪಿತವಾಯಿತೆಂಬ ಊಹೆಗೆ ಖಚಿತವಾದ ಪುರಾವೆಗಳು ಸಿಕ್ಕಿಲ್ಲ. ಮೊದಮೊದಲಿನ ಗಂಗ ದೊರೆಗಳು ವೈದಿಕ ಹಿನ್ನೆಲೆಯಿಂದ ಬಂದವರೆಂದೇ ತೋರುತ್ತದೆ. ಈ ರಾಜ್ಯವನ್ನು ಸ್ಥಾಪಿಸಿದವನು ಕೊಂಗುಣಿವರ್ಮ. ಕುವಳಾಲಪುರವು(ಇಂದಿನ ಕೋಲಾರ) ಅವನ ರಾಜಧಾನಿಯಾಗಿತ್ತು. ಆದರೆ, ಕಾಲಕ್ರಮದಲ್ಲಿ ರಾಜಧಾನಿಯು, ಇಂದು ತಲಕಾಡು ಎಂದು ಪ್ರಸಿದ್ಧವಾಗಿರುವ, ತಲವನಪುರಕ್ಕೆ ಸ್ಥಳಾಂತರವಾಯಿತು. ಈ ಬದಲಾಔಣೆಯು ಅವಿನೀತ (ಕ್ರಿ.ಶ. 469-529) ಎಂಬ ರಾಜನ ಆಳ್ವಿಕೆಯಲ್ಲಿ ನಡೆಯಿತು. ತಲಕಾಡು ದಟ್ಟವಾದ ಕಾಡುಗಳಿಂದ ತುಂಬಿದ್ದು,, ಆ ಹೆಸರು ಅದೇ ಕಾರಣದಿಂದ ಬಂದಿರಬಹುದು. ಗಂಗರ ರಾಜಲಾಂಛನವು ಆನೆಯಾಗಿರುವುದೂ ಅದೇ ಕಾರಣದಿಂದ. ಗಂಗ ವಂಶದ ಮೊದಮೊದಲ ಅರಸುಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಅವರ ಕಾಲಕ್ಕೆ ಸೇರಿದ ಅನೇಕ ಶಾಸನಗಳನ್ನು ಬಿ.ಎಲ್.ರೈಸ್ ಅವರು ವಿಶ್ವಸನೀಯವಲ್ಲದ ಕೂಟಶಾಸನಗಳೆಂದು ತೀರ್ಮಾನಿಸಿದ್ದಾರೆ. ಆದ್ದರಿಂದ ಅನಿಶ್ಚಿತತೆಯು ಇನ್ನಷ್ಟು ಜಾಸ್ತಿಯಾಗಿದೆ. ಅನೇಕ ಇತಿಹಾಸಜ್ಞರು ಮೊದಲಿನಿಂದ ಕೊನೆಯವರೆಗೆ, ತಲಕಾಡೇ ಗಂಗರ ರಾಜಧಾನಿಯಾಗಿತ್ತೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.    
ಗಂಗ ಸಾಮ್ರಾಜ್ಯವನ್ನು ಆಳಿದ ಕೆಲವು ಮುಖ್ಯ ರಾಜರುಗಳ ಹೆಸರು ಮತ್ತು ಆಳ್ವಿಕೆಯ ಕಾಲಗಳು ಹೀಗಿವೆ:
  1. ಕೊಂಗುಣೀವರ್ಮ,         (ಕ್ರಿ.ಶ. 325-350)
  2. ಮಾಧವ,                  (ಕ್ರಿ.ಶ. 350-375)
  3. ಆರ್ಯವರ್ಮ,             (ಕ್ರಿ.ಶ. 375-400)
  4. ಮಾಧವ-3,               (ಕ್ರಿ.ಶ. 440-469)
  5. ಅವಿನೀತ,                 (ಕ್ರಿ.ಶ. 469-529)
  6. ದುರ್ವಿನೀತ,              (ಕ್ರಿ.ಶ.  529-579)
  7. ಶ್ರೀವಿಕ್ರಮ,               (ಕ್ರಿ.ಶ. 629-654)
  8. ಭೂವಿಕ್ರಮ,               (ಕ್ರಿ.ಶ. 654-679)
  9. ಶಿವಮಾರ-1,             (ಕ್ರಿ.ಶ. 679-725)  
  10. ಶ್ರೀಪುರುಷ,               (ಕ್ರಿ.ಶ. 725-788)
  11. ಸೈಗೊಟ್ಟ ಶಿವಮಾರ,    (ಕ್ರಿ.ಶ. 788-816)
  12. ರಾಚಮಲ್ಲ,               (ಕ್ರಿ.ಶ. 816-843)
  13. ನೀತಿಮಾರ್ಗ ಎರೆಗಂಗ  (ಕ್ರಿ.ಶ. 843-870)                                                            
  14. ರಾಚಮಲ್ಲ-2             (ಕ್ರಿ.ಶ. 870-919)
  15. ಎರೆಗಂಗ
  16. ಬೂತುಗ-2               (ಕ್ರಿ.ಶ. 936-961)
  17. ಮಾರಸಿಂಹ-2           (ಕ್ರಿ.ಶ. 963-974)
  18. ರಾಚಮಲ್ಲ-3             (ಕ್ರಿ.ಶ. 974-999) 
ಅವಿನೀತನು ಪಟ್ಟಕ್ಕೆ ಬಂದ ನಂತರದ ದಾಖಲೆಗಳು ವಿಶ್ವಾಸಾರ್ಹವಾದ ಮಾಹಿತಿಗಳನ್ನು ನೀಡುತ್ತವೆ. ಈ ರಾಜರುಗಳಲ್ಲಿ ದುರ್ವಿನೀತ, ಭೂವಿಕ್ರಮ, ಶ್ರೀಪುರುಷ, ಸೈಗೊಟ್ಟ ಶಿವಮಾರ, ಮಾರಸಿಂಹ-2 ಮತ್ತು ಇಮ್ಮಡಿ ರಾಚಮಲ್ಲರು ಹೆಸರುವಾಸಿಯಾದವರು. ರಾಜ್ಯ ಸಂರಕ್ಷಣೆ ಮತ್ತು ವಿಸ್ತರಣೆಗಳಲ್ಲಿ      ಅವರು ಮಹತ್ವದ ಪಾತ್ರವನ್ನು ವಹಿಸಿದರು. ಗಂಗರು ಸದಾ ಸರ್ವದಾ ಚೋಳರು, ಪಲ್ಲವರು, ರಾಷ್ಟ್ರಕೂಟರು ಮತ್ತು ಹೊಯ್ಸಳರ ಸಂಗಡ ನಿರಂತರವಾದ ಸಂಘರ್ಷಗಳಲ್ಲಿ ತೊಡಗುವುದು ಅನಿವಾರ್ಯವಾಗಿತ್ತು. ಪುನ್ನಾಟರಂತಹ ಚಿಕ್ಕ ಪುಟ್ಟ ರಾಜವಂಶಗಳು ಗಂಗರ ಸಂಗಡ ಮೈತ್ರಿಯಿಂದಲೇ ಇದ್ದವು. ದುರ್ವಿನೀತನು ಪಲ್ಲವರು ಹಾಗೂ ಕದಂಬರೊಂದಿಗೆ ಯುದ್ಧಗಳನ್ನು ನಡೆಸಿ ಜಯಶಾಲಿಯಾದನು. ಅವನ ಸಾಮ್ರಾಜ್ಯವು ದಕ್ಷಿಣದಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ಮೊದಲಾಗಿ, ಉತ್ತರದಲ್ಲಿ ಬಳ್ಳಾರಿಯವರೆಗೆ ಹರಡಿತ್ತು. ಅವನು ಕಲೆ ಮತ್ತು ಸಾಹಿತ್ಯಗಳ ಪೋಷಕನೂ ಸ್ವತಃ ಕವಿಯೂ ಆಗಿದ್ದನು. ಅವನು ಶಬ್ದಾವತಾರ ಎಂಬ ಗ್ರಂಥವನ್ನು ಬರೆದಿದ್ದಾನೆ ಹಾಗೂ ಭಾರವಿಯಕಿರಾತಾರ್ಜುನೀಯಕ್ಕೆ ವ್ಯಾಖ್ಯಾನವನ್ನು ರಚಿಸಿದ್ದಾನೆ. ಅವನು ಗುಣಾಢ್ಯನ ವಡ್ಡಕಥಾ ಎಂಬ ಕೃತಿಯನ್ನು ಕನ್ನಡಿಸಿರುವನೆಂದೂ ಹೇಳಲಾಗಿದೆ. ಭೂವಿಕ್ರಮನು ಪಲ್ಲವರೊಂದಿಗೆ ನಡೆಸಿದ ಯುದ್ಧಗಳಿಗಾಗಿ ಪ್ರಸಿದ್ಧನಾಗಿದ್ದಾನೆ. ಗಂಗ ರಾಜರುಗಳಲ್ಲಿಯೇ ಹೆಸರಾಂತ ಶ್ರೀಪುರುಷನು ಬಹಳ ಪರಾಕ್ರಮಿಯಾಗಿದ್ದನು. ಅವನು ಒಂದು ಕಡೆ ನಂದಿವರ್ಮ ಪಲ್ಲವವರ್ಮನನ್ನು ಸೋಲಿಸಿದರೆ, ಇನ್ನೊಂದು ಗಡಿಯಲ್ಲಿ, ರಾಷ್ಟ್ರಕೂಟರನ್ನು ಬಳ್ಳರಿ ಜಿಲ್ಲೆಯ ಕಂಪ್ಲಿಯವರೆಗೆ ಹಿಮ್ಮೆಟ್ಟಿಸಿದನು. ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ ಶ್ರೀಪುರುಷನು ಗಜಶಾಸ್ತ್ರವೆಂಬ ಕೃತಿಯನ್ನೂ ರಚಿಸಿದ್ದಾನೆ. ಶ್ರೀಪುರುಷರು ತಮ್ಮ ಪರಮಾಧಿಕಾರವನ್ನು ರಾಷ್ಟ್ರಕೂಟರಿಗೆ ಬಿಟ್ಟುಕೊಟ್ಟು ಅವರ ಸಾಮಂತರಾಗಬೇಕಾಯಿತು. ಸೈಗೊಟ್ಟ ಶಿವಮಾರನಂತೂ ರಾಷ್ಟ್ರಕೂಟರ ಒಳಜಗಳಗಳ ಪಗಡೆಯಾಟದಲ್ಲಿ ದಾಳದಂತೆ ಬಳಕೆಯಾದನು. ಅವನು ತನ್ನ ಬದುಕಿನ ಸಾಕಷ್ಟು ಭಾಗವನ್ನು ಸೆರೆಮನೆಯಲ್ಲಿಯೇ ಕಳೆಯಬೇಕಾಯಿತು. ಅವನು ಗಜಾಷ್ಟಕ ಮತ್ತುಸೇತುಬಂಧ ಎಂಬ ಕೃತಿಗಳನ್ನು ರಚಿಸಿದ್ದಾನೆ. ಶಿವಮಾರನು ಜೈನಧರ್ಮಕ್ಕೆ ಮತಾಂತರ ಹೊಂದಿದ ಮೊಟ್ಟ ಮೊದಲ ಗಂಗ ದೊರೆ. ಇಮ್ಮಡಿ ಮಾರಸಿಂಹನು ರಾಷ್ಟ್ರಕೂಟರ ನಿಷ್ಠಾವಂತ ಬೆಂಬಲಿಗನಾಗಿದ್ದು, ಅವರಿಗಾಗಿ ಅನೇಕ ಯುದ್ಧಗಳನ್ನು ಗೆದ್ದುಕೊಟ್ಟನು. ಕ್ರಮೇಣ ಗಂಗ ದೊರೆಗಳು ರಾಜಕೀಯ ಸನ್ನಿವೇಶದ ಮೇಲಿನ ಹಿಡಿತವನ್ನು ಕಳೆದುಕೊಂಡರು. ಚೋಳರು ಮತ್ತು ಚಾಳುಕ್ಯರು ಪ್ರಬಲರಾಗಿ ಗಂಗವಂಶವು ಅವಸಾನವನ್ನು ಪಡೆಯಿತು.
          ಮೂವರು ಗಂಗ ರಾಜರುಗಳಿಗೆ ಸೇವೆ ಸಲ್ಲಿಸಿದ ಚಾವುಂಡರಾಯನು ಹೆಸರುವಾಸಿಯಾದ ವೀರನೂ ಕಲಾಪೋಷಕನೂ ಆಗಿದ್ದನು. ಅವನು ಶ್ರವಣಬೆಳಗೊಳದ ಬಾಹುಬಲಿ ವಿಗ್ರಹದ ಸ್ಥಾಪಕನೆಂದು ಅಂತೆಯೇ ಕವಿ ರನ್ನನಿಗೆ ಆಶ್ರಯ ನೀಡಿದವನೆಂದು ಪ್ರಸಿದ್ಧನಾಗಿದ್ದಾನೆ.
ಗಂಗ ರಾಜ್ಯವು, ಇಂದಿನ ಕರ್ನಾಟಕದ ಕೋಲಾರ, ಮೈಸೂರು, ಬೆಂಗಳೂರು, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳನ್ನು ಒಳಗೊಂಡಿತ್ತು. ಈ ಪ್ರದೇಶವನ್ನು ಗಂಗವಾಡಿಯೆಂದು ಕರೆಯುತ್ತಿದ್ದರು. ಆದರೆ, ಬೇರೆ ಬೇರೆ ಕಾಲಖಂಡಗಳಲ್ಲಿ, ಅದು ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಬಳ್ಳರಿ ಮತ್ತು ಧಾರವಾಡ ಜಿಲ್ಲೆಗಳ ಮೇಲೂ ಹಿಡಿತವನ್ನು ಸಾಧಿಸಿತ್ತು. ಆಗೀಗ ತಮಿಳುನಾಡಿನ ಸೇಲಂ ಮತ್ತು ಕೊಯಮತ್ತೂರುಗಳೂ ಅವರ ಅಧೀನದಲ್ಲಿ ಇರುತ್ತಿದ್ದವು. ತಲಕಾಡು ಅವರ ಮುಖ್ಯ ರಾಜಧಾನಿಯಾಗಿತ್ತು. ಮಣ್ಣೆ(ಮಾನ್ಯಪುರ) ಮತ್ತು ಮಂಕುಂಡಗಳು(ಮನಕುಂಡ) ಪ್ರಾದೇಶಿಕ ರಾಜಧಾನಿಗಳಾಗಿದ್ದವು. ಅವರು ಮೊದಲು ವೈದಿಕ ಧರ್ಮಕ್ಕೆ ಸೇರಿದ್ದು, ಅನಂತರ ಜೈನಧರ್ಮಕ್ಕೆ ಮತಾಂತರ ಹೊಂದಿದರು. ಏನೇ ಆದರೂ ಅವರು ಜಾತ್ಯತೀತವಾದ ಧೋರಣೆಗಳನ್ನು ಹೊಂದಿದ್ದು, ಎಲ್ಲ ಧರ್ಮಗಳನ್ನೂ ಪ್ರೋತ್ಸಾಹಿಸುತ್ತಿದ್ದರು. ಅವರು ಕೆರೆ ಕಾಲುವೆಗಳನ್ನು ನಿರ್ಮಿಸುವುದರ ಮೂಲಕ ಬೇಸಾಯಕ್ಕೆ ಉತ್ತೇಜನ ನೀಡಿದರು. ಸುಂಕಗಳನ್ನು ವಿಧಿಸುವುದನ್ನು ಒಂದು ವ್ಯವಸ್ಥೆಗೆ ಒಳಪಡಿಸುವುದರ ಮೂಲಕ ವಾಣಿಜ್ಯವನ್ನೂ ಪೋಷಿಸಿದರು. ಅವರಲ್ಲಿ ಕೆಲವರು ಸ್ವತಃ ಸಾಹಿತಿಗಳಾದರೆ, ಎಲ್ಲ ದೊರೆಗಳೂ ಕಲೆ ಮತ್ತು ಸಂಸ್ಕೃತಿಗಳ ಪೋಷಕರಾಗಿದ್ದರು.
          ಗಂಗರ ಕಾಲದ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳಿಗೆ ಅಂತಹ ವಿಶಿಷ್ಟ ಲಕ್ಷಣಗಳೇನೂ ಇಲ್ಲ. ಅವರ ಕಾಲದಲ್ಲಿ ಅನೇಕ ದೇವಾಲಯಗಳು ಮತ್ತು ಬಸದಿಗಳು ನಿರ್ಮಿತವಾದರೂ ಅವು ಅನನ್ಯವಲ್ಲ. ಮಣ್ಣೆ, ನರಸಮಂಗಲ, ಕೋಲಾರ, ಕಿತ್ತೂರು, ನಂದಿಗಳಲ್ಲಿರುವ ದೇವಾಲಯಗಳು ಹಾಗೂ ಶ್ರವಣಬೆಳಗೊಳದಲ್ಲಿರುವ ಚಾವುಂಡರಾಯನ ಬಸದಿ ಇವುಗಳಲ್ಲಿ ಮುಖ್ಯವಾದವು. ಗಂಗರ ಕಾಲದ ಶಾಸನಗಳಲ್ಲಿ ತಾಮ್ರಪತ್ರಗಳು, ಶಿಲಾಶಾಸನಗಳು ಮತ್ತು ಸ್ಮಾರಕಶಿಲೆಗಳೆಂಬ ಮೂರೂ ಪ್ರಕಾರಗಳನ್ನು ನೋಡಬಹುದು. ಗಂಗರ ತಾಮ್ರಶಾಸನಗಳ ಅಧಿಕೃತತೆಯನ್ನು ಕುರಿತಾದ ಅನುಮಾನಗಳು ಖಚಿತವಾದ ನಿಲುವುಗಳನ್ನು ತಳೆಯಲು ಅಡ್ಡಿಯಾಗಿವೆ. ಸಾಮಾನ್ಯವಾಗಿ, ತಾಮ್ರಶಾಸನಗಳು ಸಂಸ್ಕೃತದಲ್ಲಿದ್ದು ಶಿಲಾಶಾಸನಗಳು ಕನ್ನಡದಲ್ಲಿವೆ. ಈ ಶಾಸನಗಳು ಸುದೀರ್ಘವಾದ ಕಾಲಾವಧಿಯಲ್ಲಿ ರಚಿತವಾಗಿರುವುದರಿಂದ, ಅವುಗಳನ್ನು ಬಳಸಿಕೊಂಡು ಕನ್ನಡ ಲಿಪಿಯ ಬೆಳವಣಿಗೆಯನ್ನು ಗುರುತಿಸಲು ಸಾಧ್ಯ. ಸ್ಮಾರಕಶಿಲೆಗಳು, ವೈವಿಧ್ಯಮಯವಾಗಿದ್ದು ಅನೇಕ ವಸ್ತುಗಳನ್ನು ಕುರಿತಂತೆ, ಇವೆ. ಉದಾಹರಣೆಗೆ ಆತಕೂರು ಶಾಸನವು ಕಾಳಿ ಎಂಬ ನಾಯಿಯ ನಿಷ್ಠೆಯನ್ನು ಪ್ರಶಂಸಿಸುತ್ತದೆ. ಕರ್ನಾಟಕದ ನಾಣ್ಯಶಾಸ್ತ್ರಕ್ಕೂ ಗಂಗರ ಕೊಡುಗೆ ಅಷ್ಟಾಗಿ ಇಲ್ಲ. ಗಂಗರ ಲಾಂಛನವಾದ ಆನೆಯ ಗುರುತಿದ್ದು ಯಾವುದೇ ಲಿಪಿಯೂ ಇಲ್ಲದ ಐದು ನಾಣ್ಯಗಳು ಗಂಗರ ಕಾಲಕ್ಕೆ ಸೇರಿದವೆಂದು ಎಂ.ಎಚ್. ಕೃಷ್ಣ ಅವರು ಅಭಿಪ್ರಾಯ ಪಟ್ಟಿದ್ದಾರೆ.
          ತಲಕಾಡಿನ ಗಂಗರಲ್ಲದೆ ಗಂಗ ರಾಜವಂಶದ ಬೇರೆ ಕೆಲವು ಶಾಖೆಗಳೂ ಇವೆ. ಕಾದರವಳ್ಳಿಯ ಗಂಗರು, ಶಿವಮೊಗ್ಗದ ಮಂಡಳಿ ಗಂಗರು, ಕಡೂರಿನ ಸಮೀಪದ ಆಸಂದಿಯ ಗಂಗರು ಮತ್ತು ಕೋಲಾರದ ತಮಿಳು ಗಂಗರು ಅವರಲ್ಲಿ ಮುಖ್ಯರಾದ ಕೆಲವರು.

ತಲಕಾಡಿನ ಗಂಗರು(ಚುಟುಕು ಮಾಹಿತಿಗಳು)

ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು.
ಗಂಗರ ರಾಜ್ಯ ಕೋಲಾರ , ತುಮಕೂರು , ಬೆಂಗಳೂರು , ಮಂಡ್ಯ ಹಾಗೂ ಮೈಸೂರನ್ನ ಒಳಗೊಂಡಿತ್ತು .
ಗಂಗರು ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಸಾಮಾಂತರಾಗಿದ್ದರು .
“ಕೋಲಾರ ” ಅಥವಾ “ ಕುವಲಾಲ ” ಇವರ ಆರಂಭದ ರಾಜಧಾನಿ
ಗಂಗರ ಎರಡನೇ ರಾಜಧಾನಿ “ ತಲಕಾಡು “
ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
ಗಂಗರಲ್ಲಿ ಪ್ರಸಿದ್ದನಾದ ದೊರೆ “ ಶ್ರೀ ಪುರುಷ”
ರಾಚಮಲ್ಲನ ಮಂತ್ರಿಯಾದ “ಚಾವುಂಡ ರಾಯನು ” ಶ್ರವಣ ಬೆಳಗೋಳದಲ್ಲಿ ಕ್ರಿ.ಶ.980 ರಲ್ಲಿ “ಗೊಮ್ಮಟೇಶ್ವರನ ” ಏಕಶಿಲಾ ಮೂರ್ತಿಯನ್ನು ಕೆತ್ತಿಸಿದನು .
ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
ಚನ್ನಪಟ್ಟಣ್ಣದ “ ಮಾಕುಂದ ” ಹಾಗೂ ಬೆಂಗಳೂರು ಜಿಲ್ಲೆಯ ನೆಲಮಂಗಲ ಬಳಿಯ “ ಮನ್ನೇಯ ” ಇವರ ಇತರ ರಾಜಧಾನಿ .
ಗಂಗರನ್ನು “ ತಲಕಾಡಿನ ಗಂಗರು ” ಎಂದು ಪ್ರಸಿದ್ದರಾಗಿದ್ದರು .
ಗಂಗರ ರಾಜ ಮುದ್ರೆ ಅಥವಾ ರಾಜ ಲಾಂಛನ “ ಮದಗಜ ”
ಗಂಗರು “ ಗಂಗಟಕಾರರು ” ಎಂದು ಹೆಸರುವಾಸಿಯಾಗಿದ್ದರು .
ಗಂಗರು ಆಳಿತದ ಪ್ರದೇಶವನ್ನು “ ಗಂಗವಾಡಿ ಅಥವಾ ಗಂಗನಾಡು ” ಎಂದು ಕರೆಯುತ್ತಿದ್ದರು .
ಗಂಗರು ಸ್ವತಂತ್ರರಾಗಿ ಕ್ರಿ.ಶ. 350 – 600 ರವರೆಗೆ ಆಳ್ವಿಕೆ ಮಾಡಿದ್ದಾರೆ .
ಗಂಗರು ಚಾಲುಕ್ಯರ ಸಾಮಂತರಾಗಿ ಕ್ರಿ.ಶ.600 - 758 ರವರೆಗೆ ಆಳ್ವಿಕೆ ಮಾಡಿದರು .
ಗಂಗರು ರಾಷ್ಷ್ರಕೂಟರ ಸಾಮಾಂತರಾಗಿ ಕ್ರಿ.ಶ.757 – 973 ರವರೆಗೆ ಆಳ್ವಿಕೆ ಮಾಡಿದರು .
ಗಂಗರು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973 – 990 ರವರೆಗೆ ಆಳ್ವಿಕೆ ಮಾಡಿದರು .
“ತಲಕಾಡು ” ಗಂಗರ ಪ್ರಧಾನ ಆಡಳಿತ ಕೇಂದ್ರವಾಗಿತ್ತು .

ಗಂಗರ ಮೂಲ
ದೈವಿ ಸಿದ್ದಾಂತದ ಪ್ರಕಾರ ಇವರು ಇಕ್ಷಾಕು ವಂಶದವರೆಂದು
ಕಣ್ವ ಮೂವಗ ಪ್ರಕಾರ ಇವರು “ ಕಣ್ವ ” ವಂಶದವರು ಎಂದು
ತಮಿಳು ಮೂಲ - ಇವರು ಮೂಲತಃ “ಪೆರೂರು ” ಆಗಿದ್ದು ( ಕೊಯಮತ್ತೂರು ) ಇವರು ತಮಿಳು ಮೂಲದಿಂದ ಬಂದವರೆಂದು ಹೇಳಲಾಗಿದೆ .
ಕನ್ನಡ ಸಿದ್ದಾಂತದ ಪ್ರಕಾರ ಇವರು ಅಚ್ಚ ಕನ್ನಡಿಗರು - ಗಂಗರು ರಾಜಧಾನಿ ತಲಕಾಡು ದಕ್ಷಿಣ ಗಂಗೆ ಕಾವೇರಿ ನದಿಯ ದಡದಲ್ಲಿದ್ದರಿಂದ ಈ ವಂಶಕ್ಕೆ “ಗಂಗ ” ಎಂದು ಹೆಸರು ಬಂದಿದೆ .

ಗಂಗ ಮನೆತನದ ರಾಜರುಗಳು
ದಡಿಗ
ಒಂದನೇ ಮಾಧವ
ಎರಡನೇ ಮಾಧವ
ಮೂರನೇ ಮಾಧವ
ಅವನೀತ
ದುರ್ವಿನೀತ
ಶ್ರೀಪುರುಷ
ಎರಡನೇ ಶಿವಮಾರ
ಒಂದನೇ ರಾಚ ಮಲ್ಲ

ಗಂಗರ ರಾಜಕೀಯ ಇತಿಹಾಸ ( ದಡಿಗ or ಕೊಂಗುಣಿ ವರ್ಮ )
ಇವನು ಗಂಗ ವಂಶದ ಸ್ಥಾಪಕ
“ ಕುವಲಾಲ ಅಥವಾ ಕೋಲಾರ ” ಇವನ ರಾಜಧಾನಿ .
ಬಾಣರನ್ನು ಸೋಲಿಸಿ ಗಂಗ ವಂಶಕ್ಕೆ ಅಡಿಪಾಯ ಹಾಕಿದ
ಧರ್ಮ ಮಹಾರಾಜ ಹಾಗೂ ಬಾಣ ವಂಶದವನ ದಾವಲನ ಎಂಬುದು ಇವನ ಬಿರುದುದಳು .
ಈತನ ಗುರುವಿನ ಹೆಸರು - ಸಿಂಹ ನಂದಿ ( ಜೈನಗುರು )
ಸಿಂಹ ನಂದಿಯ ಇಚ್ಛೆಯ ಮೇರೆಗೆ ಶಿವಮೊಗ್ಗದ “ ದುಂಡಲಿ ” ಎಂಬಲ್ಲಿ ಒಂದು ಚೈತ್ಯಲಾಯವನ್ನು ನಿರ್ಮಿಸಿದನು .

ಒಂದನೇ ಮಾಧವ
ದಡಿಗನ ನಂತರ ಅಧಿಕಾರಕ್ಕೆ ಬಂದವನು
ಈತ ಸ್ವತಃ ಕವಿಯಾಗಿದ್ದನು ಹಾಗೂ ಕವಿಗಳಿಗೆ ಆಶ್ರಯ ನೀಡಿದ್ದನು
ಈತ ರಚಿಸಿದ ಕೃತಿ - “ ದತ್ತ ಸೂತ್ರ ”
ಇವನ ನಂತರ ಹರಿವರ್ಮ ಹಾಗೂ 2 ನೇ ಮಾಧವ ಆಳಿದರು

ಮೂರನೇ ಮಾಧವ
ಇವನು ತಂಡಂಗಾಲ ಮಾಧವ ಎಂದು ಹೆಸರಾಗಿದ್ದಾನೆ .
ಈತ ಕದಂಬ ಅರಸ ಕಾಕುಸ್ಥವರ್ಮನ ಮಗಳನ್ನು ವಿವಾಹವಾಗಿದ್ದ
ವಿಜಯ ಕೀರ್ತಿ - ಇವನ ದೀಕ್ಷಾ ಗುರುಗಳಾಗಿದ್ದರು .

ಅವನೀತ
ಈತ ಮೂರನೇ ಮಾಧವನ ಮಗ
ಈತ ಶಿವನ ಆರಾಧಕನಾಗಿದ್ದನು .
ಈತ ಸರ್ವಧರ್ಮ ಸಮನ್ವಯಿಯಾಗಿದ್ದನ್ನು
ಇತನನ್ನ ಶಾಸನಗಳು “ ಹರ ಚರಣಾರ ಎಂದ ಪ್ರಣಿಪಾತ ” ಎಂದು ಉಲ್ಲೇಕಿಸಿದೆ

ದುರ್ವಿನೀತ
ಈತ ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ
ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ
ಈತ ವೈಷ್ಣವ ಮತಾವಲಂಬಿಯಾಗಿದ್ದನು
ಬಾರವಿಯ 15 ನೇ ದಗಂಕ್ಕೆ ಭಾಷ್ಯವನ್ನ ಬರೆದನು
ಇತ “ಗುಣಾಡ್ಯನ ” “ ವಡ್ಡ ಕಥಾವನ್ನು ” ಪೈಶಾಚಿ ಭಾಷೇಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದರು
ಿತನ ಗುರು - ಪುಷ್ಯಪಾದ ಅಥವಾ ದೇವಾನಂದಿ
ೀತನ ಬಿರುದುಗಳು - ಅವನೀತ ಸ್ತರ ಪೂಜಾಲಾಯ . ಅಹೀತ , ಅನೀತ ಹಾಗೂ ಧರ್ಮ ಮಹಾರಾಜ ಕುಲೋಥರ , ನೀತಿಶಾಸ್ತ್ರ ವಕ್ತ , ಪ್ರಯೋಕ್ಷ ಕುಶಲ
ಈತನ ಗುರುಗಳಿಂದ ದೇವಾನಂದಿಯು ಸಂಸ್ಕೃತ ವ್ಯಾಕರಣ ಶಬ್ದಾವತಾರ ವನ್ನು ಬರೆದಿದ್ದಾನೆ .

ಶ್ರೀಪುರಷ
ದುರ್ವಿನೀತ ನಂತರ ಅಧಿಕಾರಕ್ಕೆ ಬಂದವನು
ಈತ “ ಗಜಶಾಸ್ತ್ರ ” ಎಂಬ ಕೃತಿಯನ್ನ ರಚಿಸಿದರು
ಈತ ರಾಜಧಾನಿಯನ್ನು ಮಾಕುಂದದಿಂದ - ಮಾನ್ಯಪರಕ್ಕೆ ಬದಲಾಯಿಸಿದನು
ಒಂದನೇ ಶಿವಮಾರನಿಗೆ - ್ವನಿ ಮಹೇಂದ್ರ ಎಂಬ ಬಿರುದಿತ್ತು
“ತುಂಡಕ ಕದನ ” ದಲ್ಲಿ ಪಲ್ಲವರನ್ನು ಸೋಲಿಸಿದವನು
ಇವನ ಕಾಲದಲ್ಲಿ ಗಂಗರಾಜ್ಯ “ಶ್ರೀರಾಜ್ಯ ” ಎಂದು ಕರೆಸಿಕೊಂಡಿತು .
ಈತನ ಬಿರುದುಗಳು - ರಾಜಕೇಸರಿ , ಪೆರ್ಮಾಡಿ , ಶ್ರೀವಲ್ಲಭ , ಬೀಮಕೋಪ

ಎರಡನೇ ಶಿವಮಾರ
ಈತನ ಇನ್ನೊಂದು ಹೆಸರು - ಸೈಗೋತ
ಈತನ ಕೃತಿಗಳು - ಗಜಾಷ್ಮಕ , ಸೇತುಬಂಧ ಹಾಗೂ ಶಿವಮಾರ ತರ್ಕ
ಈತ ಶ್ರವಣಬೆಳಗೋಳದಲ್ಲಿ ಜೈನ ಬಸದಿಯನ್ನು ನಿರ್ಮಿಸಿದನು
ಈತನ ತಂದೆಯ ಹೆಸರು - ಶ್ರೀಪುರುಷ

ಎರಡನೇ ಬೂತುಗ
ಈತ “ ತತ್ಕೋಳಂ ಕದನದಲ್ಲಿ ” ಚೋಳರ ರಾಜಾದಿತ್ಯನನ್ನು ಕೊಂದನು .
ಆತನ ಬಿರುದು - ಮಹಾರಾಜಾದಿರಾಜ

ಮಂತ್ರಿ ಚಾವುಂಡರಾಯ
ಈತ ಗಂಗರ ಆಸ್ಥಾನದಲ್ಲಿ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿದ್ದ
ಈತ ಅಜಿತಸೇನಾ ಭಟ್ಟಾರಕ ಹಾಗೂ ನೇಮಿಚಂದ್ರ ಮುನಿಯ ಅನುಯಾಯಿ
ಈತನ ಬಿರುದು - ಸತ್ಯವಿದಿಷ್ಠಿರ
ಈತನ ಕೃತಿಗಳು - ಸಂಸ್ಕೃತದಲ್ಲಿ “ಚರಿತ್ರಾಸಾರ ” ಕನ್ನಡದಲ್ಲಿ ಚಾವುಂಡರಾಯ ಪುರಣ ಅಥವಾ ಅಥವಾ “ ತ್ರಿಷಷ್ಠಿ ಲಕ್ಷಣ ಮಹಾಪುರರಣ ” ಹಾಗೂ ಲೋಕೋಪಾಕರ ( ವಿಶ್ವಕೋಶ )
ಈತನ ಮೊದಲ ಹೆಸರು - ಚಾವುಂಡರಾಜ
ರಾಚಮಲ್ಲನು ಚಾವುಂಡರಾಯನಿಗೆ ನೀಡಿದ ಬಿರುದು - “ರಾಯ ’
ಚಾವುಂಡರಾಯನ ಮಹಾತ್ಸಾಧಾನೆ - ಶ್ರವಣಬೆಳಗೋಳದ ಬಾಹುಬಲಿಯ ವಿಗ್ರಹ ನಿರ್ಮಾಣ
ಈತನ ಆಶ್ರಯ ಪಡೆದ ಕನ್ನಡದ ಹೆಸರಾಂತ ಕವಿ - ರನ್ನ
ಈತ ಗಂಗರ ಅರಸ 2ನೇ ಮಾರಸಿಂಹ ಆಳ್ವಿಕೆಯಲ್ಲಿ - ಪ್ರಧಾನ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿ ನಿಯುಕ್ತಿಗೊಂಡ
4 ನೇ ರಾಚಮಲ್ಲ ಈತನಿಗೆ ನೀಡಿದ ಬಿರುದು - ಸಮರ ಪರಶುರಾಮ
ಗೋಣೂರು ಕದನದಲ್ಲಿ ಜಗದೇಕ ವೀರನನ್ನು ಸೋಲಿಸಿ “ವೀರ ಮಾರ್ತಂಡ ” ಎಂಬ ಬಿರುದು ಪಡೆದ .
ಪಾಂಡ್ಯ ಅರಸ ರಾಜಾದಿತ್ಯನನ್ನು ಸೋಲಿಸಿ “ರಣಸಂಗ ಸಿಂಗ ” ಎಂಬ ಬಿರುದನ್ನು ಪಡೆದ
ಈತನ ಬಿರುದು - ಭುಜ ವಿಕ್ರಮ , ಸಮರ ದುರಂಧರ
ಈತನ ತಾಯಿ - ಕಾಳಲಾದೇವಿ
ಗೊಮ್ಮಟೇಶ್ವರನನ್ನು ಕೆತ್ತಿನೆಯ ಮೇಲ್ವಿಚಾರಕ ಶಿಲ್ಪಿ - ಅರಿಪ್ಪಾನೇಮಿ
ಗೊಮ್ಮಟೇಶ್ವರ ವಿಗ್ರಹ ನಿರ್ಮಾಣವಾದದು - ಕ್ರಿ.ಶ.981 – 983
ಈತನ ಇನ್ನೊಂದು ಮಹಾನ್ ಕಾರ್ಯ - ಚಾವುಂಡರಾಯ ಬಸದಿಯ ನಿರ್ಮಾಣ

ಗಂಗರ ಆಢಳಿತ
ರಾಜ - ಆಡಳಿತದ ಮುಖ್ಯಸ್ಥ ಈತನನ್ನು “ ಧ್ಮಮಾಹಾರಾಜ” ರೆಂದು ಕರೆಯುತ್ತಿದ್ದರು .
ಮಂತ್ರಿ ಮಂಡಲ - ರಾಜನಿಗೆ ಸಹಾಯಕರಾಗಿದ್ದರು
ಪ್ರಧಾನ ಮಂತ್ರಿಯನ್ನು - ಸರ್ಮಾಧಿಕಾರಿ ಎಂದು ಕರೆಯುತ್ತಿದ್ದರು
ವಿದೇಶಾಂಗ ಮಂತ್ರಿಯನ್ನು - ಸಂಧಿ ವಿಗ್ರಹಿ ಎಂದು ಕರೆಯುತ್ತಿದ್ದರು
ಸೈನ್ಯದ ಮುಖ್ಯಸ್ಥ - ದಂಡನಾಯಕ ನಾಗಿರುತ್ತಿದ್ದ
ಖಜಾನೆ ಮುಖ್ಯಧಿಕಾರಿಯನ್ನು - ಹಿರಿಯ ಭಂಡಾರಿಕ ಎಂದು ಕರೆಯುತ್ತಿದ್ದರು
ರಾಜನ ಉಡುಪಗಳ ಉಸ್ತುವಾರಿಕ - ಮಹಾಪಸಾಯಿಕಿ
ಅರಮನೆಯ ಮೇಲ್ವಿಚಾರಕನನ್ನು - ಮನೆ ವರ್ಗಡೆ ಎಂದು ಕರೆಯುತ್ತಿದ್ದರು .
ಲೆಕ್ಕ ಪತ್ರಗಳ ವಿಭಾಗಾಧಿಕಾರಿಯನ್ನು - ಶ್ರೀಕರಣಿಕ ಎಂದು ಕರೆಯುತ್ತಿದ್ದರು
ರಾಜ್ಯವನ್ನು - ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು
ಪ್ರಾಂತ್ಯಗಳ ಮುಖ್ಯಸ್ಥ - ಪ್ರಾಂತ್ಯಾಧಿಕಾರಿ
ಪ್ರಾಂತ್ಯಗಳ ವಿಭಾಗಗಳು - ವಿಭಾಗ ಹಾಗೂ ಕಂಪನ
ವಿಷಯಗಳ ಮುಖ್ಯಸ್ಥ - ವಿಷಯ ಪತಿ
ಕಂಪನಗಳ ಮುಖ್ಯಸ್ಥ - ಗೌಡ ಅಥವಾ ನಾಡ ಗೌಡ
ನಗರಾಡಳಿತ ಮುಖ್ಯಸ್ಥ - ನಾಗರೀಕ
ಪಟ್ಟಣ್ಣದ ಮುಖ್ಯಸ್ಥ - ಪಟ್ಟಣ್ಣ ಸ್ವಾಮಿ
ಗ್ರಾಮಾಢಳಿತ - ಗೌಡ ಮತ್ತು ಕರಣಿಕನಿಗೆ ಸೇರಿತ್ತು .
ಗಜದಳದ ಮುಖ್ಯಸ್ಥ - ಗಜ ಸಹನಿ
ಅಶ್ವ ಪಡೆಯ ಮುಖ್ಯಸ್ಥ - ಅಶ್ವಾಧ್ಯಕ್ಷ
ಗಂಗರ ಕಾಲದ ನಾಣ್ಯಗಳು - ಪೊನ್ನ , ಸುವರ್ಣ , ಗದ್ಯಾಣ , ನಿಷ್ಕ , ಹಾಗೂ ಬೆಳ್ಳಿಯ ಪಣ , ಹಾಗೂ ಹಗ , ಕಾಸು
ಇವರ ಸಮಾಜದಲ್ಲಿ ರಾಜರ ಸ್ವಾಮಿ ನಿಷ್ಠೆಗೆ ಪ್ರಾಣತ್ಯಾಗ ಮಾಡುವ ಪದ್ದತಿ - ಗರುಡ ಪದ್ದತಿ , ಅಸ್ಥಿತ್ವದಲ್ಲಿತ್ತು
ಸಾಂಸ್ಕೃತಿಕ ಸಾಧನೆ
ಶ್ರವಣಬೆಳಗೋಳ ಹಾಗೂ ತಲಕಾಡು ಅವರ ಪ್ರಸಿದ್ದ ಶಿಕ್ಷಮ ಕೇಂದ್ರಗಳು
ಕಾಳಮುಬಾ , ಕಪಾಲಿಕಾ ಹಾಗೂ ಪಾಶುಪಥಿ - ಇವರ ಶೈವ ಪಂಥಗಳು
ಇವರ ಕಾಲದಲ್ಲಿ ಪ್ರಬಲವಾಗಿ ಬೆಳೆದ ಧರ್ಮ - ಜೈನ ಧರ್ಮ
ಗಂಗ ರಾಜ್ಯ ಸ್ಥಾಪನೆಗೆ ಕಾರಣನಾದ ಜೈನ ಮುನಿ - ಸಿಂಹ ನಂದಿ
ಶ್ರವಣಬೆಳಗೋಳ ಜೈನರ ಕಾಶಿ ಎಂದು ಪ್ರಸಿದ್ದಿಯಾಗಿದೆ

ಗಂಗರ ಆಶ್ರಯದಲ್ಲಿ ಬರೆಯಲ್ಪಟ್ಟ ಮಹಾ ಕೃತಿಗಳು

ದತ್ತಕ ಸೂತ್ರ - 2 ನೇ ಮಾಧವ
ಶೂದ್ರಂತ ಹಾಗೂ ಹರಿವಂಶ - ಗುಣವರ್ಮ
ಛಂದೋಬುದಿ - 1ನೇ ನಾಗವರ್ಮ
ಗಜಾಷ್ಟಕ , ಸೇತುಬಂಧ ,ಶಿವಮಾರ ತರ್ಕ - 2 ನೇ ಶಿವಮಾರ
ಚಂದ್ರ ಪ್ರಭಾ ಪುರಾಮ - ವೀರನಂದಿ
ಬೃಹತ್ ಕಥಾವನ್ನು ಸಂಸ್ಕೃತ ಭಾಷೆಗೆ ಅನುವಾದ ಹಾಗೂ ಭಾರವಿಯ ಕಿರತಾರ್ಜುನಿಯ ಕೃತಿಗೆ ಭಾಷ್ಯ - ದುರ್ವೀನಿತ
ಗಜಶಾಸ್ತ್ರ - ಶ್ರೀಪುರುಷ

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗಂಗರ ಕೊಡುಗೆ :-
ಇವರ ವಾಸ್ತು ಶಿಲ್ಪ ಕದಂಬರು ಹಾಗೂ ಪಲ್ಲವರ ಕಲೆಯ ಮಿಶ್ರಣವಾಗಿದೆ
ಮನ್ನೇಯ ಕಪಿಲಶ್ವರ ದೇವಾಲಾಯ - ವಾಸ್ತು ಶಿಲ್ಪಿ ದೃಷ್ಠಿಯಿಂದ ಪ್ರಸಿದ್ದಿ
ಗಂಗರ ಕಾಲದ ಪ್ರಮುಖ ಬಸದಿಗಳು - ಪಾಶ್ವನಾಥ ಬಸದಿ ಹಾಗೂ ಚಾವುಂಡರಾಯ ಬಸದಿ
ಶ್ರಣಬೆಳಗೋಳದಲ್ಲಿರುವ ಪ್ರಮುಖ ಸ್ಥಂಭಗಳು - ಮಾನಸ್ತಂಭ , ಬ್ರಹ್ಮದೇವರ ಸ್ತಂಭ ಹಾಗೂ ತ್ಯಾಗದ ಬ್ರಹ್ಮ ದೇವರ ಸ್ತಂಭ
ಗಂಗರ ಕಾಲದ ಅಭೂತ ಪೂರ್ವ ಶಿಲ್ಪ ಕಲಾ ಕೆತ್ತನೆ - ಶ್ರವಮಬೆಳಗೋಳದ ಗೊಮ್ಮಟ
ಇವರ ಕಾಲದಲ್ಲಿ ಪ್ರಸಿದ್ದ ನೃತ್ಯಗಾತಿ - ಬಾಚಲು ದೇವಿ
ಬಾಚಲು ದೇವಿಗೆ ಇದ್ದ ಬಿರುದುಗಳು - ನೃತ್ಯವಿಶಾರದೆ ಹಾಗೂ ಪಾತ್ರ ಜಗದವಳೆ

Extra tips

ವಾದಿಮದ ಗಜೇಂದ್ರ ಎಂದು ಹೆಸರು ಗಳಿಸಿದ್ದ ಬೌದ್ಧ ಪಂಡಿತ - ಪರಿವ್ರಾಜಕ
ವಾದಿಭು ಸಿಂಹ ಎಂಬ ಬಿರುದನ್ನು ಹೊಂದಿದ್ದವನು - ಮಾಧವಭಟ್ಟ
ಮಾಧವ ಭಟ್ಟನಿಗೆ ವಾದಿಭು ಸಿಂಹ ಎಂಬ ಬಿರುದನ್ನು ನೀಡಿದ ಗಂಗರ ಅರಸ - ಹರಿವರ್ಮ
ಮೂರನೇ ಮಾಧವನ ಮತ್ತೊಂದು ಹೆಸರು - ತಡಂಗಾಲ ಮಾಧವ
“ ಶಿಷ್ಯ ಪ್ರಿಯ ಹಾಗೂ ಅವನಿ ಮಹೇಂದ್ರ ” ಎಂಬ ಬಿರುದನ್ನು ಪಡೆದಿದ್ದವರು - ಒಂದನೇ ಶಿವಮಾರ
ನೀತಿ ಮಾರ್ಗ , ರಣ ವಿಕ್ರಮ ಎಂಬ ಬಿರುದನ್ನು ಹೊಂದಿದ್ದ ಅರಸ - ಎರೆಯಾಂಗ
ಗರುಡ ಪದ್ದತಿಯ ಮೂಲಕ ಅಸುನಿಗಿದವರ ಕುಟುಂಬಕ್ಕೆ ಬಲಿದಾನವಾಗಿ ನೀಡುತ್ತಿದ್ದ ಭೂಮಿಯನ್ನು - ಕೀಳ್ಗುಂಟೆ ಎಂದು ಕರೆಯುವರು
ಮಹೇಂದ್ರ ಕತಕ ಎಂಬ ಬಿರುದನ್ನು ಪಡೆದಿದ್ದವನು - ಎರೆಯಪು
ಘೂರ್ಜ ರಾಜಾಧಿರಾಜ ಎಂಬ ಬಿರುದನ್ನು ಹೊಂದಿದವನು - ಎರಡನೇ ಮಾರಸಿಂಹ
ಗಂಗರ ಪ್ರಮುಖ ಕಲೆ ಮತ್ತು ವಾಸ್ತು ಶಿಲ್ಪ ಕೇಂದ್ರ - ತಲಕಾಡು
ಗೊಮ್ಮಟೇಶ್ವರನ ವಿಗ್ರಹವನ್ನು ನಿಖರವಾದ ಅಳತೆ - 58.8 ಅಡಿ ಎತ್ತರ ಎಂದು ಗೊತ್ತುಮಾಡಿದ ಉಪಕರಣ - 1980 ರಲ್ಲಿ ಕರ್ನಾಟಕ ವಿ.ವಿ. ನಿಲಯದ ಭಾರತೀಯ ಕಲಾ ಸಂಸ್ಥೆಯ - Theodolight or Institute of Indian art
ಕರ್ನಾಟಕವನ್ನಾಳಿದ ಮನೆತನಗಳಲ್ಲಿಯೇ ದೀರ್ಘಕಾಲ ಆಳ್ವಿಕೆ ನಡೆಸಿದ ಮನೆತನ - ತಲಕಾಡಿನ ಗಂಗರು
ಕೋಲಾರದ ಪ್ರಾಚೀನ ಹೆಸರು - ಕುವಾಲಾಲ
ತಲಕಾಡಿನ ಪ್ರಾಚೀನ ಹೆಸರು - ಕಳವನ ಪುರ
ಗಂಗರ ರಾಜಧಾನಿ ತಲಕಾಡು ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಮೈಸೂರು
ಗಂಗ ರಾಜ್ಯದ ಸ್ಥಾಪಕರು - ದಡಿಗ ಮತ್ತು ಮಾಧವರು
ಗಂಗರ ಕೊನೆಯ ರಾಜಧಾನಿ - ಮಾನ್ಯ ಪುರ
ಮಾನ್ಯಪುರ ಪ್ರಸ್ತುತ - ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿದೆ
ದುರ್ವೀನಿತನ ತಂದೆ ತಾಯಿಗಳು - ಅವನಿತ ಹಾಗೂ ಜೇಷ್ಠದೇವಿ
ದುರ್ವೀನಿತನ ಗುರುವಿನ ಹೆಸರು - ಪೂಜ್ಯಾಪಾದ
ಪೂಜ್ಯಪಾದನ ಕೃತಿ - ಶಬ್ದಾವತಾರ
ಪೆರ್ಮಾಡಿ ಎಂಬ ಬಿರುದು ಧರಿಸಿದ್ದ ಗಂಗರ ದೊರೆ - ಶ್ರೀಪುರುಷ
ಶ್ರೀಪುರುಷನ ಕಾಲದ ಗಂಗರ ರಾಜಧಾನಿ - ಮಾನ್ಯ ಪುರ
ಸೈಗೊಟ್ಟ ಶಿವಮಾರ ಎಂಬ ಬಿರುದುಳ್ಳ ಅರಸ - 2 ನೇ ಶಿವಮಾರ
ಗಂಗರ ಕೊನೆಯ ಪ್ರಮುಖ ದೊರೆ - 4 ನೇ ರಾಚಮಲ್ಲ
ವೀರ ಮಾರ್ತಾಂಡ ಎಂಬ ಬಿರುದ್ದನ್ನ ಹೊಂದಿದವರು - ಚಾವುಂಡರಾಯ
ಚಾವುಂಡ ರಾಯ ಪಾಂಡ್ಯ ಅರಸ ರಾಜ್ಯಾಧಿತ್ಯನನ್ನ ಸೋಲಿಸಿ ಧರಿಸಿದ್ದ ಬಿರುದು - ರಣಸಿಂಗ ಸಿಂಹ
ಚಾವುಂಡರಾಯನ ಕನ್ನಡ ಕೃತಿ ಚಾವುಂಡರಾಯ ಪುರಾಣದ ವಿಷಯ - ಜೈನ 24 ನೇ ತೀರ್ಥಂಕರನನ್ನು ಕುರಿತದ್ದಾಗಿದೆ
ಗಂಗರ ಕೊನೆಯ ಅರಸ - ರಕ್ಕಸ ಗಂಗ
ಗಂಗರ ಆಡಳಿತವನ್ನು ಕೊನೆಗಾಮಿಸಿದವನು - ಚೋಳ ದೊರೆ ಒಂದನೇ ರಾಜೇಂದ್ರ ಚೋಳ
ವರ್ಧಮಾನ ಪುರಾಣ ಕೃತಿಯ ಕರ್ತೃ - ಅಗಸ
ಸಮರಪರಶುರಾಮ ಹಾಗೂ ವೈರಿಕು ಕಾಲದಂಡ ಎಂಬ ಬಿರುದನ್ನು ಹೊಂದಿದ್ದವರು - ಚಾವುಂಡರಾಯ
ಗೊಮ್ಮಟೇಶ್ವರ ಈ ಬೆಟ್ಟದಲ್ಲಿದೆ - ವಿಂದ್ಯಾಗಿರಿ ಬೆಟ್ಟ
ಗೊಮ್ಮಟೇಶ್ವರ ಇರುವುದು - ಹಾಸನ ಜಿಲ್ಲೆಯಲ್ಲಿ
ಶ್ರವಣಬೆಳಗೋಳದ ಪ್ರಾಚೀನ ಹೆಸರು - ಕಾಥವಪುರಿ
ಗಂಗರ ಮೊದಲ ರಾಜಧಾನಿ - ಕುವಲಾಲ
ಗಂಗರ ಎರಡನೇ ರಾಜಧಾನಿ - ತಲಕಾಡು
ಗಂಗರ ಮೂರನೇ ರಾಜಧಾನಿ - ಮಾಕುಂದ
ಗಂಗರ ಕಾಲದ ಗಣ್ಯ ಕೇಂದ್ರ - ನಂದಿ ದುರ್ಗ ಅಥವಾ ನಂದಿ ಬೆಟ್ಟ
ದಡಿಗನಿಗೆ ಇರುವ ಇನ್ನೋಂದು ಹೆಸರು - ಕೊಂಗುಣಿವರ್ಮ
ಗೊಮ್ಮಟೇಶ್ವರನ ವಿಗ್ರಹ ನಿರ್ಮಾಣವಾದ ವರ್ಷ - ಕ್ರಿ.ಶ. 982
ಗಂಗರ ಕಾಲದ ಗ್ರಾಮದ ಮುಖ್ಯಸ್ಥ - ಪ್ರಭುಗಾವುಂಡ
ಗಂಗರ ಕಾಲದಲ್ಲಿದ್ದ ಹಿರಿಯ ರೈತರ ಸಮಿತಿ - ಪ್ರಜೆಗಾಮುಂಡ
ಗಂಗರ ಕಾಲದಲ್ಲಿದ ಕುಟುಂಬ ಪ್ರಮುಖರ ಕೂಟ - ಮಹಾಜನ
ಗಂಗರ ಕಾಲದಲ್ಲಿದ ದೊಡ್ಡ ನೆಯ್ಗೆಯ ಕೇಂದ್ರ - ವಿಜಯ ಪುರ
ಗಂಗರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು , ಅಗ್ರಹಾರ , ಹಾಗೂ ಬ್ರಹ್ಮಪುರಿ
ಬ್ರಹ್ಮಪುರಿ ಎಂದರೆ - ಒಂದು ಪೇಟೆಯಲ್ಲಿನ ಬ್ರಾಹ್ಮಣರ ಬೀದಿ
ಗಂಗರ ಕಾಲದ ಪ್ರಸಿದ್ದ ವಿದ್ಯಾಕೇಂದ್ರ - ಶ್ರವಮಬೆಳಗೋಳ ಜೈನ ಮಠ
ಬಾಣನ “ ಕಾದಂಬರಿ ” ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು - ನಾಗವರ್ಮ
ಗಂಗರ ಕಾಲದಲ್ಲಿ ಭತ್ತ ಕುಟ್ಟುವಾಗ ಹೇಳುವ ಗೀತೆಗಳನ್ನು ಒಳಗೊಂಡ ಕೃತಿ - ಗಜಾಷ್ಟಕ
ಗಂಗರ ಕಾಲದ ಪಂಚಕೂಟ ಬಸದಿ ಇರುವ ಸ್ಥಳ - ಕದಂಬ ಹಳ್ಳಿ
ಬೆಂಗಳೂರಿನ ಮ್ಯೂಸಿಯಂ ನಲ್ಲಿರುವ ಗಂಗರ ಕಾಲದ ವೀರಗಲ್ಲಿನ ಹೆಸರು - ಬೇಗೂರು ವೀರಗಲ್ಲ.

ತಲಕಾಡಿನ ಬಗ್ಗೆ ಮತ್ತಷ್ಟು ಮಾಹಿತಿ
ತಲಕಾಡು ಒಂದು ಕಾಲದಲ್ಲಿ 30 ದೇವಾಲಯಗಳಿಂದ ಕೂಡಿದ ಭವ್ಯ ನಗರವಾಗಿತ್ತು. ಆದರೆ  16ನೇ ಶತಮಾನದಲ್ಲಿ ಇವುಗಳೆಲ್ಲವು ಮರಳಿನಲ್ಲಿ ಮುಚ್ಚಿ ಹೋದವು. ಇತಿಹಾಸದ ಆಧಾರದ ಮೇಲೆ ಹೇಳುವುದಾದರೆ ಇದಕ್ಕೆ ಕಾರಣ ಒಡೆಯರ ಆಳ್ವಿಕೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ, ಆದರೆ ಸ್ಥಳೀಯ ದಂತಕಥೆಗಳು ಮತ್ತು ಕಟ್ಟುಕಥೆಗಳು ಹೇಳುವುದೇನೆಂದರೆ, ತಲಕಾಡು ಮರಳಲ್ಲಿ ಮುಚ್ಚಿಹೋಗಲು ಇಲ್ಲಿನ ರಾಣಿಯಾಗಿದ್ದ ಅಲಮೇಲಮ್ಮನ ಶಾಪ ಕಾರಣವಂತೆ.






Talakadu Photos

ತಲಕಾಡು ಮೊದಲಿಗೆ ಪಂಚ ಶಿವಲಿಂಗ ದೇವಾಲಯಗಳಿಗೆ ಪ್ರಸಿದ್ಧವಾಗಿತ್ತು.  ಗಂಗರು ಈ ಊರನ್ನು ಮೊದಲಿಗೆ ಆಳಿದರು ನಂತರ ಇದನ್ನು ಚೋಳರು ಆಳಿದರು.  ಹೊಯ್ಸಳರ ಅರಸ ವಿಷ್ಣುವರ್ದನ ಚೋಳರನ್ನು ಇಲ್ಲಿಂದ ತೊಲಗಿಸಿ ತನ್ನ ರಾಜ್ಯಭಾರ ಮಾಡಿದನು. ಅನಂತರ ಇದನ್ನು ವಿಜಯನಗರದ ರಾಜರು ಆಳಿದರು. ಅವರ ಬಳಿಕ ಮೈಸೂರು ಒಡೆಯರು ಈ ನಗರದ ಆಡಳಿತವಹಿಸಿಕೊಂಡರು.
16ನೇ ಶತಮಾನದಲ್ಲಿ ಒಮ್ಮೆ ಮೈಸೂರಿನ ರಾಜ ತಲಕಾಡಿನ ಮೇಲೆ ಸೈನ್ಯ ಸಹಿತ ದಂಡೆತ್ತಿ ಹೋದನಂತೆ, ಆಗ ಆತನು ತಲಕಾಡಿನ ರಾಣಿ ಅಲಮೇಲುವಿನ ಆಭರಣಗಳ ಮೇಲೆ ಕೈಹಾಕಲು ಹೋದಾಗ, ಆಕೆ ಅದನ್ನು ಕಾವೇರಿ ನದಿಯಲ್ಲಿ ಎಸೆದು ತಾನು ನೀರಿಗೆ ಹಾರಿದಳಂತೆ. ದಂತಕಥೆಗಳ ಪ್ರಕಾರ ಆಕೆ ಸಾಯುವ ಮೊದಲು “ ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ ಮತ್ತು ಮೈಸೂರು ಅರಸರಿಗೆ ಮಕ್ಕಳಾಗದಿರಲಿ”ಎಂದು ಶಾಪ ನೀಡಿದಳಂತೆ. ಅಂದಿನಿಂದ ತಲಕಾಡು ಮರಳಲ್ಲಿ ಮುಚ್ಚಿ ಹೋಯಿತು ಎನ್ನುತ್ತಾರೆ.

ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆ.

ಈ ನಗರವು ತನ್ನ ಐದು ದೇವಾಲಯಗಳಿಗೆ ಪ್ರಸಿದ್ಧವಾಗಿದೆ.  ಅವುಗಳೆಂದರೆ ವೈಧ್ಯನಾಥೇಶ್ವರ, ಪಾತಳೇಶ್ವರ, ಮರಳೇಶ್ವರ, ಅರ್ಕೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳು. ಈ ಎಲ್ಲಾ ದೇವಾಲಯಗಳು ಪ್ರತಿವರ್ಷ ಮರಳಿನಲ್ಲಿ ಮುಚ್ಚಿ ಹೋಗುತ್ತಿರುತ್ತವೆ. ಆದರೆ ಇತ್ತೀಚೆಗೆ ಇವುಗಳು ಮರಳಿನಲ್ಲಿ ಮುಚ್ಚಿ ಹೋಗದಂತೆ ಕಾಪಾಡುವ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿರುತ್ತವೆ. ಈ ಪ್ರಾಂತ್ಯದಲ್ಲಿ ಶಿವನ ದೇವಾಲಯಗಳೊಂದಿಗೆ ಒಂದು ವಿಷ್ಣು ದೇವಾಲಯವು ಇತ್ತು. ಅದನ್ನು ಕೀರ್ತಿನಾಥೇಶ್ವರ ದೇವಾಲಯವೆಂದು ಕರೆಯುತ್ತಾರೆ. ಇದನ್ನು ಈಗ ಪುನರ್ ನಿರ್ಮಾಣ ಮಾಡಲಾಗುತ್ತಿದೆ.
ಈ ನಗರದ ಪಕ್ಕದಲ್ಲಿಯೆ ಕಾವೇರಿ ನದಿ ಹರಿಯುತ್ತಿದ್ದು ಅದು ಇಲ್ಲಿ ತೀಕ್ಷ್ಣವಾದ ತಿರುವು ಪಡೆದುಕೊಳ್ಳುತ್ತದೆ. ಹಾಗಾಗಿ ಇಲ್ಲಿನ ನದಿ ತೀರ ಮತ್ತು ಅದರ ಸುತ್ತಲಿನ ದೃಶ್ಯಗಳು ನಯನ ಮನೋಹರವಾಗಿರುತ್ತವೆ. ತಲಕಾಡು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪಂಚಲಿಂಗ ದರ್ಶನ ಉತ್ಸವದಿಂದ ಭಾರಿ ಜನಪ್ರಿಯತೆ ಪಡೆದಿದೆ, ಇತ್ತೀಚೆಗೆ 2009ರಲ್ಲಿ ಈ ಉತ್ಸವ ನಡೆಯಿತು, ಪಂಚಲಿಂಗ ದರ್ಶನವು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಕುಹ ಯೋಗ ಮತ್ತು ವಿಶಾಖ ನಕ್ಷತ್ರಗಳು ಒಟ್ಟಿಗೆ ಬಂದಾಗ ಜರುಗುತ್ತದೆ.
ತಲಕಾಡಿಗೆ ಹೋದಾಗ ಪ್ರವಾಸಿಗರು ಸೋಮನಾಥಪುರ, ಶಿವನ ಸಮುದ್ರ, ಮೈಸೂರು, ಶ್ರೀರಂಗ ಪಟ್ಟಣ, ರಂಗನತಿಟ್ಟು ಮತ್ತು ಬಂಡೀಪುರಗಳಿಗೆ ಭೇಟಿಕೊಡಬಹುದು.

ತಲಕಾಡಿನ ಕುರಿತು ಕೆಲವು ಮಾಹಿತಿಗಳು.

ತಲಕಾಡಿಗೆ ಭೇಟಿ ಕೊಡಲು ನವೆಂಬರ್ ನಿಂದ ಮಾರ್ಚ್ ವರೆಗಿನ ಕಾಲ ಉತ್ತಮವಾಗಿರುತ್ತದೆ. ಆಗ ಇಲ್ಲಿನ ಹವಾಮಾನ ಹಿತಕರವಾಗಿರುತ್ತದೆ.
ತಲಕಾಡು ಮೈಸೂರು ಜಿಲ್ಲೆಯಲ್ಲಿದ್ದು, ಮೈಸೂರಿನಿಂದ 43 ಕಿ.ಮೀ ಹಾಗು ಬೆಂಗಳೂರಿನಿಂದ 120 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಎರಡು ಪ್ರಮುಖ ನಗರಗಳಿಂದ ತಲಕಾಡಿಗೆ ಸಾರಿಗೆ ವ್ಯವಸ್ಥೆ ಇದ್ದು, ರಸ್ತೆ ಮೂಲಕ ಸುಲಭವಾಗಿ ತಲುಪಬಹುದು.
ತಲಕಾಡಿನಲ್ಲಿ ಹೋದರೆ ದೇವಾಲಯಗಳ ದರ್ಶನ ಮಾಡಬಹುದು. ಇಲ್ಲವಾದರೆ ಅಲ್ಲಿನ ಅಂಗಡಿಗಳಲ್ಲಿ ಸಿಗುವ ಕುರುಕಲು ತಿಂಡಿಗಳನ್ನು ಮತ್ತು ಪಾನೀಯಗಳನ್ನು ಸವಿಯಬಹುದು. ಇಲ್ಲಿ ವಾಸ್ತವ್ಯ ಹೂಡಲು ಮನಸ್ಸು ಮಾಡಿದರೆ, ಈ ಊರಿನ ಪ್ರಮುಖ ಹೋಟೆಲ್ ಗಳು ಬಾಡಿಗೆ ರೂಮುಗಳನ್ನು ಒದಗಿಸುತ್ತವೆ. ನೀವು ಪುರಾಣ ಮತ್ತು ಇತಿಹಾಸ ಆಸಕ್ತರಾದಲ್ಲಿ ತಲಕಾಡಿನ ನಿಗೂಢ ಪಟ್ಟಣವು ನಿಮ್ಮ ಕುತೂಹಲವನ್ನು ಕೆರಳಿಸುತ್ತದೆ.
ಗದ್ಯಭಾಗದ ಪೂರಕ ವೀಡಿಯೋ ವೀಕ್ಷಿಸಿ









****************************


5 ಕಾಮೆಂಟ್‌ಗಳು: