ನನ್ನ ಪುಟಗಳು

ಓದುಗರಿಗೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಓದುಗರಿಗೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

23 ನವೆಂಬರ್ 2023

ಕನ್ನಡ ದೀವಿಗೆಯ ಓದುಗರಿಗೆ.............


** 3,00,00,000 ** 
3 ಕೋಟಿ ಪುಟವೀಕ್ಷಣೆ ದಾಟಿದ ಸಂಭ್ರಮದಲ್ಲಿ 
ಕನ್ನಡ ದೀವಿಗೆ..!!
'ಕನ್ನಡ ದೀವಿಗೆ'ಯನ್ನು ಅಭಿಮಾನದ ಬೊಗಸೆಯಿಂದ ಸದಾ ಬೆಳಗುವಂತೆ ಮಾಡಿದ ಎಲ್ಲಾ ಕನ್ನಡಾಭಿಮಾನಿಗಳಿಗೂ ವಿದ್ಯಾರ್ಥಿಗಳಿಗೂ ಶಿಕ್ಷಕ ಮಿತ್ರರಿಗೂ
ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಬತ್ತಿ ಸರಿಪಡಿಸಿ ದೀವಿಗೆ ಬೆಳಗಿಸಿದವರಿಗೂ
ಮೆಚ್ಚುಗೆ ನುಡಿಯ ಎಣ್ಣೆ ಎರೆದು ಉತ್ಸಾಹದ ದೀವಿಗೆ ಬತ್ತದಂತೆ ಮಾಡಿದವರಿಗೂ
ದೀಪದಿಂದ ದೀಪ ಹಚ್ಚುವಂತೆ ಸಂಪನ್ಮೂಲಗಳನ್ನು ನನ್ನೊಡನೆ ಹಂಚಿಕೊಂಡವರಿಗೂ
ಸದಾ ಈ ಕನ್ನಡದ ಕೈದೀವಿಗೆಯನ್ನು ಅನುಸರಿಸುತ್ತಾ ಬೆಂಬಲವಾಗಿರುವವರಿಗೂ

ಕನ್ನಡದ ಕೈಂಕರ್ಯದಲ್ಲಿ ದೀವಿಗೆಯನ್ನು ಬಳಸಿಕೊಂಡವರಿಗೂ
ಬಳಸಿಕೊಳ್ಳುತ್ತಿರುವವರಿಗೂ
ಪ್ರೋತ್ಸಾಹದ ನುಡಿಗಳಿಂದ ನನ್ನಲ್ಲಿ ಸತ್ವ ತುಂಬುತ್ತಿರುವ 
ನನ್ನ ಬಂಧು-ಮಿತ್ರರಿಗೂ
ನನ್ನ ಕನ್ನಡದ ಸೇವೆಯಲ್ಲಿ ಸದಾ ಬೆನ್ನೆಲುಬಾಗಿ ನಿಂತಿರುವ 
ನನ್ನ ಧರ್ಮಪತ್ನಿಗೂ

'ಕನ್ನಡ ದೀವಿಗೆ'ಯ ಪುಟವೀಕ್ಷಣೆ 
ಮೂರು ಕೋಟಿ ದಾಟಿರುವ ಈ ಶುಭ ಸಂದರ್ಭದಲ್ಲಿ
ಅನಂತಾನಂತ ಧನ್ಯವಾದಗಳು
********
ಸದಾ ಕನ್ನಡದ ಸೇವೆಯಲ್ಲಿ
ಎಸ್.ಮಹೇಶ್, 
ಕನ್ನಡ ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ನಿಡುವಣಿ
ಹೊಳೆನರಸೀಪುರ ತಾ॥
ಹಾಸನ ಜಿಲ್ಲೆ
*****