ನನ್ನ ಪುಟಗಳು

24 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-06-ಸುಕುಮಾರಸ್ವಾಮಿಯ ಕಥೆ - ಕವಿ ಪರಿಚಯ

 

    ಶಿವಕೋಟ್ಯಾಚಾರ್ಯರ  ಕಾಲ ಕ್ರಿ. ಶ. ಸುಮಾರು ೧೦ ನೆಯ ಶತಮಾನ. 
    ಇವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ನಾಡಿನವರು. 
    ಇವರ ಕೃತಿ : `ವಡ್ಡಾರಾಧನೆ’
    
    ಇದು ಕನ್ನಡದ ಪ್ರಥಮ ಗದ್ಯಕೃತಿ ಎಂದು ಪ್ರಸಿದ್ಧವಾಗಿದೆ. ಜೈನ ಧಾರ್ಮಿಕ ಕಥೆಗಳ ಸಂಗ್ರಹವಾದ ವಡ್ಡಾರಾಧನೆಯಲ್ಲಿ ೧೯ ಕಥೆಗಳಿವೆ. ಈ ಕಥೆಗಳ ನಾಯಕರೆಲ್ಲ ಧರ್ಮವೀರರು. ಕೆಲವರು ಮೋಕ್ಷವನ್ನು ಸಂಪಾದಿಸಿಕೊಳ್ಳುತ್ತಾರೆ. ಕೆಲವರು ಮೋಕ್ಷಕ್ಕೆ ನೆರೆಮನೆಯಾದ ಸರ್ವಾರ್ಥಸಿದ್ಧಿಯೆಂಬ ಸ್ವರ್ಗಕ್ಕೆ ಹೋಗುತ್ತಾರೆ. ಪುಣ್ಯ-ಪಾಪ ರೂಪವಾದ ಕರ್ಮಕ್ಷಯದಿಂದ ಸಿದ್ಧಿಗಳು ಉಂಟಾಗುತ್ತವೆ. ಕರ್ಮಕ್ಷಯವು ತಪಸ್ಸಿನಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನು ಈ ಕಥೆಗಳು ಸಾರುತ್ತವೆ.

    ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ. ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು. ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾರೆ. ನೀತಿ, ಚರಿತ್ರೆ, ಧರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು. ಇದು ಒಂದು ಅದ್ಭುತ ಗದ್ಯ ಕಾವ್ಯ. 

‘ವಡ್ಡಾರಾಧನೆ’ಯಲ್ಲಿ ೧೯ ಕಥೆಗಳಿವೆ.
  1. ಸುಕುಮಾರಸ್ವಾಮಿಯ ಕಥೆ
  2. ಸುಕೌಶಳಸ್ವಾಮಿಯ ಕಥೆ
  3. ಗಜಕುಮಾರನ ಕಥೆ
  4. ಸನತ್ಕುಮಾರ ಚಕ್ರಚರ್ತಿಯ ಕಥೆ
  5. ಅಣ್ಣಿಕಾಪುತ್ರನ ಕಥೆ
  6. ಭದ್ರಬಾಹು ಭಟ್ಟಾರರ ಕಥೆ
  7. ಲಲಿತಘಟೆಯ ಕಥೆ
  8. ಧರ್ಮಘೋಷ ಭಟ್ಟಾರರ ಕಥೆ
  9. ಸಿರಿದಣ್ಣ ಭಟ್ಟಾರರ ಕಥೆ
  10. ವೃಷಭಸೇನ ಭಟ್ಟಾರರ ಕಥೆ
  11. ಕಾರ್ತಿಕ ಋಷಿಯ ಕಥೆ
  12. ಅಭಯಘೋಷ ಮುನಿಯ ಕಥೆ
  13. ವಿದ್ಯುಚ್ಚೋರನ ಕಥೆ
  14. ಗುರುದತ್ತ ಭಟ್ಟಾರರ ಕಥೆ
  15. ಚಿಲಾತಪುತ್ರನ ಕಥೆ
  16. ದಂಡಕನೆಂಬ ರಿಸಿಯ ಕಥೆ
  17. ಮಹೇಂದ್ರದತ್ತಾಚಾರ್ಯನ ಕಥೆ
  18. ಚಾಣಾಕ್ಯ ರಿಸಿಯ ಕಥೆ
  19. ವೃಷಭಸೇನ ರಿಸಿಯ ಕಥೆ
********







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ