ನನ್ನ ಪುಟಗಳು

09 ನವೆಂಬರ್ 2020

10ನೇ ತರಗತಿ ಕನ್ನಡ-ಗದ್ಯ-6-ಯುದ್ಧ-ಟಿಪ್ಪಣಿಗಳು

 ಟಿಪ್ಪಣಿಗಳು

ಸಣ್ಣಕಥೆ :

    ಗದ್ಯ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಣ್ಣಕಥೆಯೂ ಕೂಡ ಒಂದು. ಹೊಸಗನ್ನಡದ ಬಹುಜನಪ್ರಿಯ ಪ್ರಕಾರಗಳಲ್ಲಿ ಒಂದಾದ ಸಣ್ಣಕಥೆ ದೇಶೀಯ ಹಾಗೂ ವಿಶ್ವ ಸಂಸ್ಕೃತಿಯ ಅಭಿವ್ಯಕ್ತಿಗೆ ಪೂರಕ ಮಾಧ್ಯಮವಾಗಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಯು. ಆರ್. ಅನಂತಮೂರ್ತಿ, ಪಿ. ಲಂಕೇಶ್, ಚದುರಂಗ, ಅನುಪಮಾ ನಿರಂಜನ, ವೈದೇಹಿ, ಯಶವಂತ ಚಿತ್ತಾಲ, ಪೂ.ಚಂ.ತೇಜಸ್ವಿ, ಅಮರೇಶ ನುಗಡೋಣಿ, ಸಾರಾ ಅಬೂಬಕ್ಕರ್ ಮೊದಲಾದವರು ಸಣ್ಣಕಥಾ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಯುದ್ಧಕ್ಕೆ ಕಾರಣ ಮತ್ತು ಅದರ ಪರಿಣಾಮಗಳು :

    'ಯುದ್ಧ’ ಇತಿಹಾಸದ ಉದ್ದಕ್ಕೂ ಇರುವಂತಹದ್ದೇ ಆಗಿದೆ. ಸಾಮ್ರಾಜ್ಯ ವಿಸ್ತರಣೆ, ಲೋಭ, ಶಕ್ತಿಯ ಪ್ರದರ್ಶನ, ಕೌಟುಂಬಿಕ ಕಲಹಗಳು, ದ್ವೇಷ ಸಾಧನೆ ಮುಂತಾದವು ಯುದ್ಧಕ್ಕೆ ಕಾರಣವಾಗುತ್ತವೆ. 

  ಈ ಯುದ್ಧದ ಭೀಕರತೆಯು ಧರ್ಮ, ದೇಶಗಳ ಭೇದವಿಲ್ಲದೆ ಭಾಗಿಯಾದ ಸೈನಿಕರಿಗೂ ಅವರ ಕುಟುಂಬ ವರ್ಗದವರಿಗೂ ಹಾಗೂ ದೇಶಕ್ಕೂ ನಾನಾ ರೀತಿಯ ಸಂಕ?ಗಳನ್ನು ತಂದೊಡ್ಡುತ್ತದೆ. 

'ಬ್ಲಾಕ್ ಔಟ್’ ನಿಯಮ :

ಯುದ್ಧಕಾಲದಲ್ಲಿ ರಾತ್ರಿವೇಳೆ ಶತ್ರು ಸೈನಿಕರು ವೈಮಾನಿಕ ದಾಳಿಮಾಡಲು ಅವಕಾಶವಾಗದಂತೆ ವಿದ್ಯುತ್ ದೀಪ, ಬೆಂಕಿಯನ್ನು ಉರಿಸದೆ ಕತ್ತಲಿನಲ್ಲಿದ್ದು ರಕ್ಷಿಸಿಕೊಳ್ಳುವುದು. 

ಆರ್ತನಾದ :  ಕಷ್ಟಕ್ಕೆ ಸಿಕ್ಕಿದವರ ಕೂಗು, ಅಸಹಾಯಕತೆಯಿಂದ ಗಟ್ಟಿಯಾಗಿ ಅಳುತ್ತಾ ಕೂಗುವುದು.

ಕಿವಿಗಡಚಿಕ್ಕು : ಕಿವಿಗೆ ಕರ್ಕಶವಾಗು, ಕೇಳಿಸಿಕೊಳ್ಳಲು ಅಸಾಧ್ಯವಾಗು, ಉದಾಹರಣೆಗೆ - ದೊಡ್ಡದಾದ ಪಟಾಕಿ, ಬಾಂಬಿನ ಶಬ್ದವನ್ನು ಕಿವಿಗಡಚಿಕ್ಕುವ ಶಬ್ದ ಎನ್ನಬಹುದು.

ಕ್ರೌರ್ಯ : ನಿರ್ದಯತೆ, ಕರುಣೆಯಿಲ್ಲದ. ಅಂದರೆ ಕ್ರೂರವಾದದ್ದು.

ಗ್ರೌಂಡ್ : ಭೂಪ್ರದೇಶ (Ground)

ರೋದನ : ಅಳುವಿಕೆ , ಅಸಹಾಯಕತೆಯಿಂದ ಅಳುವುದು, ಗೋಳಾಡುವುದು.

ಸಾಂತ್ವನ: ಸಮಾಧಾನಪಡಿಸುವಿಕೆ, ದುಃಖದಲ್ಲಿರುವವರನ್ನು ಧೈರ್ಯದ ಮಾತುಗಳಿಂದ ಸಮಾಧಾನಪಡಿಸುವುದು.

ಸೂಲಗಿತ್ತಿ : ಹೆರಿಗೆಯ ಸಮಯದಲ್ಲಿ ಸಹಾಯ ಮಾಡುವವಳು. ಸೂಲಗಿತ್ತಿ ಎಂದರೆ 'ಹೆರಿಗೆ ಮಾಡಿಸುವವಳು' ಎಂಬ ಅರ್ಥವೂ ಇದೆ. 'ಸೂಲ' ಎಂದರೆ 'ಹೆರಿಗೆ' ಎಂದರ್ಥ.

ಹಂಬಲ : ತೀವ್ರ ಆಸೆ, ಯಾವುದರ ಬಗ್ಗೆಯಾದರು ಬಹಳ ಆಸೆ ಇಟ್ಟುಕೊಂಡಿರುವುದು.

ಹತಾಶೆ : ನಿರಾಶೆ, ಆಶಾಭಂಗ. ತನ್ನಿಂದ ಸಾಧ್ಯವಾಗದು ಎಂಬ ಬೇಸರದ ಭಾವನೆ

*******



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ