ನನ್ನ ಪುಟಗಳು

28 ಏಪ್ರಿಲ್ 2020

'ಮಲೆನಾಡಿನ ಮಡಿಲು'

ಮಾಲೆಯಂತೆ ಪೋಣಿಸಿಹ ಮಲೆಗಳ ಸಾಲು, ಮುಗಿಲಿಗೆ ಮುತ್ತಿಡುತಿವೆ ಸಹ್ಯಾದ್ರಿಯ ಶಿಖರ, ಕವಿಗಳ ಕವಿತೆಯಲ್ಲೊಳೆವ ಮುತ್ತಿನ ಅಕ್ಷರ, ಇದುವೇ ನಮ್ಮ ಕರ್ನಾಟಕದ ಕಾಶ್ಮೀರ. ಅಚ್ಚ ಹಸಿರಿನ ನಾಡು, ವನ್ಯ ಜೀವಿಗಳ ಬೀಡು, ಬಗೆ ಬಗೆಯ ಬಾನಾಡಿಗಳ ಗೂಡು, ಇದುವೇ ನಮ್ಮ ಹೆಮ್ಮೆಯ ಮಲೆನಾಡು. ಗರಿ ಬಿಚ್ಚಿ ನಲಿಯುತಿದೆ ನವಿಲು, ಬಾನಂಗಳದಿ ಮಳೆಬಿಲ್ಲು ಮೂಡಿರಲು. ಹರುಷದಲಿ ಜಿಂಕೆಗಳು ಜಿಗಿಜಿಗಿಯುತಿರಲು, ಹಸಿರ ಗರಿಕೆಯು ಎಲ್ಲೆಲ್ಲೂ ಚಿಗುರಿರಲು. ಶರಾವತಿ ಜನಿಸಿಹಳು ಅಂಬುತೀರ್ಥದಿ, ಬಳುಕುತ ಧುಮುಕುತಿಹಳು ಜೋಗ ಜಲಪಾತದಿ. ಗಂಗಾಮೂಲದಿ ಹುಟ್ಟಿಹಳು ತುಂಗೆ, ನಗು ನಗುತಾ ಹರಿಯುತಿಹಳು, ಈ ಮಲೆನಾಡ ಮಡಿಲೊಳಗೆ, ಜೀವ ಜಲವಾಗಿರುವಳು ಸಹಸ್ರಾರು ಜೀವ ಕುಲಕೆ, ಎದೆ ಗೂಡಿನ ಉಸಿರಿವಳು ಅನ್ನಬ್ರಹ್ಮನಿಗೆ.

- ದರ್ಶನ್ ಕೆ
ಚಿಕ್ಕಮರಡಿ, ಶಿವಮೊಗ್ಗ.
೯೯೮೦೭೨೮೯೬೭

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ