ನನ್ನ ಪುಟಗಳು

23 ಅಕ್ಟೋಬರ್ 2018

ಹೊಲಸು ಮಂದಿಯ ಹೊಲಸಾಟ...!

ಹೊಲಸು ಮಂದಿಯ ದೊಂಬರಾಟ,
ಊರನೇ ಮೆಚ್ಚುವಂತಿತ್ತು,
ಟೊಳ್ಳು ಮಂದಿಯ ಪೊಳ್ಳು ಮಾತಿಗೆ,
ಲೋಕವೇ ಬೆರಗಾಗಿ ಸುಮ್ಮನಿತ್ತು....

ಬಣ್ಣ-ಬಣ್ಣದ ಬುಳ್ಳು ಭಾಷಣ,
ಭರತಸಂತತಿಯ ಬಾಯಿಗೊಷ್ಟು ಮಣ್ಣು ಹಾಕಿತು...

ನೋಟು ಕೊಟ್ಟು ಹೊಡೆದಾಡಿಸುವವನು,
ಎಣ್ಣೆ ಕೊಟ್ಟು ಯಾಮಾರಿಸುವವನು,
ಪ್ರಜಾಪ್ರಭುತ್ವದ ಪಾಲಕನೇ..???

ಬಾಯಿತುಂಬಾ ಸುಳ್ಳನಿಟ್ಟು,
ರಂಗು-ರಂಗಿನ ವೇಷ ತೊಟ್ಟು,
ಸ್ವಾರ್ಥದ ಸೀಮೆ ಸೃಷ್ಠಿಸುವ ಅವನು ಪ್ರಜೆಗಳ
ಪರಿಪಾಲಕನೇ...???

ಹಣದ ಆಸೆಗೆ ಹಂಗು ತೊರೆದು,
ಯೆಂಡಕ್ಕಾಗಿ ಹಿಂದೆ ಸುತ್ತಿ,
ಮೂರನ್ನು ದೂರವಿಟ್ಟು,
ಮತವ ಮಾರಿಕೊಳ್ಳುತ್ತಿರುವ,
ಮತಿಗೇಡಿಗಳಾಗುತಿರುವ ಪ್ರಜೆಗಳು,
ಭರತ ಖಂಡದ ಮಕ್ಕಳೇ...???
ದೇಶ ಕಟ್ಟುವ ದೇಶ ಪ್ರೇಮಿಗಳೇ...???
ದೇಶದ ಬೆನ್ನೆಲುಬುಗಳೇ...???
           ರಚನೆ:-  ಕೆ.ಜೆ.ಕೊಟ್ರೇಶ್ ಗೌಡ, ತೂಲಹಳ್ಳಿ
(ಮೂರನ್ನು=ಮಾನ,ಮರ್ಯಾದೆ,ಅಂಜಿಕೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ