ನನ್ನ ಪುಟಗಳು

23 ಅಕ್ಟೋಬರ್ 2018

ಬೇಂದ್ರೆ ತಾತನಿಗೊಂದು ನಮನ

ಬೇಂದ್ರೆ ತಾತನಿಗೊಂದು ನಮನ 
 
ಬೆಂದರೆ ಬೇಂದ್ರೆಯಾಗುತಿ ಎಂದೇಳಿದ
ಬೇಂದ್ರೆ ತಾತನಿಗೆ ನಮನಗಳು

ಬದುಕಿನ ಅರಿವನು
ಅಕ್ಕರಗಳಲಿ ಅವಿತಿರಿಸಿದ
ಪದಮಾಂತ್ರಿಕನಿಗೊ ನಮನಗಳು

ಗಂಗಾವತರಣದಿ
ಕನ್ನಡಕೆ ಕಾಣ್ಕೆಯಿತ್ತ
ಆಡುನುಡಿಯ ವರಕವಿಗಿದೊ ನಮನಗಳು

ಹೃದಯ ಸಮುದ್ರದಲಿ
ನಾದಲೀಲೆಯ ನುಡಿಸಿದ
ಸಾಧನಕೇರಿಯ ತಾತನಿಗಿದೋ ನಮನಗಳು

ಚಿತ್ತಿಮಳೆಯ ಸ್ವಾತಿ ಮುತ್ತಾದ
ಜೀವನದ ನಾಕುತಂತಿಗೆ
ಜ್ಞಾನಪೀಠದ ಗರಿಯನು
 ಕನ್ನಡ ದೇವಿಗೆ ಇರಿಸಿದ
 ಅಂಬಿಕಾತನಯರಿಗಿದೊ ನಮನಗಳು

          - ಕೆ.ಪಿ.ರುದ್ರೇಶಮೂರ್ತಿ ಸಹ ಶಿಕ್ಷಕರು ಶ್ರೀ.ಜ.ಜ.ಮು.ಪ್ರೌಢಶಾಲೆ. ದಾವಣಗೆರೆ


****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ