ನನ್ನ ಪುಟಗಳು

27 ಮೇ 2017

10ನೇ ತರಗತಿ ಗದ್ಯ ಪಾಠ-4-ಭಾಗ್ಯಶಿಲ್ಪಿಗಳು(10th Kannada Lesson 4-Bhagya Shilpigalu)

ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ ಅವರ ಜೀವನ ಸಾಧನೆ
ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ

         ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಜನಪ್ರಿಯವಾಗಿ ಸರ್ ಎಂ.ವಿ ಎಂಬ ಹೆಸರಿನಿಂದ ಪ್ರಖ್ಯಾತರು, ಕನ್ನಡ ನಾಡಿನ ಕೀರ್ತಿಯ ಭಾವುಟವನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡದು ತೋರಿಸಿದ ಮಹಾನ್ ಮೇಧಾವಿ ನಮ್ಮ ಸರ್ ಎಂ.ವಿಶ್ವೇಶ್ವರಯ್ಯ ಅವರು. ಇವರು ಸೆಪ್ಟೆಂಬರ್ 15, 1860 ರಲ್ಲಿ, ಮೈಸೂರ್ ಪ್ರಾಂತ್ಯ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದ್ದರು. ಅಂದಿನ ಮೈಸೂರ್ ಪ್ರಾಂತ್ಯ, ಇಂದಿನ ಕರ್ನಾಟಕ ರಾಜ್ಯವಾಗಿದೆ. ತೆಲುಗು ಬ್ರಾಹ್ಮಣರ ಮನೆತನದ ಆಯುರ್ವೇದಿಕ್ ಪಂಡಿತರು ಆಗಿದ್ದ ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಟಲಕ್ಷ್ಮಮ್ಮ ಇವರ ತಂದೆ-ತಾಯಿ. ಮೋಕ್ಷಗುಂಡಂ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಒಂದು ಹಳ್ಳಿ. ಇವರು ಮಾಡಿದ ಸೇವೆಗಳನ್ನು ಗುರುತಿಸಿ, ಜ್ಞಾಪಕಾರ್ತವಾಗಿ ಇಂದು ನಾವು ಸರ್ ಎಂ.ವಿ ಅವರ ಜನ್ಮ ದಿನವನ್ನು "ಎಂಜಿನಿಯರ್ಗಳ ದಿನ" ಎಂದು ಆಚರಿಸುತ್ತೇವೆ. ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ಸಾದನೆಗಳನ್ನು ಮಾಡಿದ ಸರ್ ಎಂ.ವಿ ಅವರಂತಹ ದೇಶಪ್ರೇಮಿಗೆ ಗೌರವ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವು ಸಹ ಆಗಿದೆ. ಸರ್ ಎಂ.ವಿಶ್ವೇಶ್ವರಯ್ಯ ಅವರು ಸದಾ ಸ್ಪೂರ್ತಿಯ ನೆಲೆ, ಆಳರಸರನ್ನು ಓಲೈಸಲು ಹೋಗದೆ ನಾಡಿನ ಪ್ರಗತಿಯನ್ನಷ್ಟೇ ಉಸಿರಾಡಿದ ಜೀವ ಅವರದ್ದು.
          ಚಿಕ್ಕಬಳ್ಳಾಪುರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ, ನಂತರದ ಪ್ರೌಢ ಶಾಲಾ ವ್ಯಾಸಂಗವನ್ನು ಬೆಂಗಳೂರಿನಲ್ಲಿ ಗಳಿಸಿದರು. ಬಿ. ಎ. ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ 1881 ರಲ್ಲಿ ಪಡೆದರು. ಉನ್ನತ ವ್ಯಾಸಂಗ ಸಿವಿಲ್ ಎಂಜಿನಿಯರ್ ಪದವಿಯನ್ನು 1883 ರಲ್ಲಿ ಪುಣೆಯ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಪಡೆಯುವುದರ ಮೂಲಕ ಸಾಧನೆಯ ಹೆಜ್ಜೆಗಳತ್ತ ಸಾಗಿದರು. ಮೊದಲಿಗೆ ಬಾಂಬೆ ಸರ್ಕಾರದ (ಇಂದಿನ ಮಹಾರಾಷ್ಟ್ರ), ಲೋಕೊಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಬಾಂಬೆ ಸರ್ಕಾರದ ನಿಯಂತ್ರಣದಲ್ಲಿದ್ದ ಸಿಂಧ್ ಪ್ರಾಂತ್ಯದ, ಸಿಂಧು-ಸುಕ್ಕೂರಿಗೆ ನೀರು ಹರಿಸುವ ಯೋಜನೆಯ ಜವಾಬ್ದಾರಿ ಸರ್ ಎಂ.ವಿಶ್ವೇಶ್ವರಯ್ಯ ಅವರಿಗೆ ದೊರೆಯಿತು. ತಮ್ಮ ಕಷ್ಟ ಫಲ, ಕಾರ್ಯ ನಿಷ್ಠೆ, ಚಮತ್ಕಾರಿಕೆಯ ಕಾರ್ಯವೈಖರಿ ಆಡಳಿತ ಸರ್ಕಾರದ ಗಮನ ಸೆಳೆಯುವಂತೆ ಮಾಡಿತ್ತು. ನಂತರ ಗುಜರಾತಿನ ಸೂರತ್ ನಲ್ಲಿಯೂ ನೀರು ಸರಬರಾಜು ವ್ಯವಸ್ಥೆಯನ್ನು ಸಹ ಅತ್ಯುತ್ತಮ ರೀತಿಯಲ್ಲಿ ಯೋಜನೆ ತಯಾರಿಸಿ ಸಂಪೂರ್ಣ ಗೊಳಿಸಿದರು.
ಈಗಲೂ ಸಹ ಬಹಳಷ್ಟು ಭೂಕಂಪಗಳು ಸಂಭವಿಸಿದ ನಂತರವೂ ಸರ್ ಎಂ.ವಿ ಅವರ ಕಾಮಗಾರಿ ಸುರಕ್ಷಿತವಾಗಿದೆ.
         1903 ರಲ್ಲಿ ಪುಣೆಯ ಬಳಿ 'ಖಡಕ್ ವಾಸ್ಲಾ ಜಲಾಶಯ' ದಲ್ಲಿ, ತಮ್ಮ ವಿಶಿಷ್ಟವಾದ ತಂತ್ರಜ್ಞಾನದಿಂದ ಮಾಡಿದ್ದ ಸ್ವಯಂ ಚಾಲಿತ ಕಣಿವೆಮಾರ್ಗಗಳನ್ನು ಉಪಯೋಗಿಸಿ, ಜಲಾಶಯದ ಈ ತಂತ್ರಜ್ಞಾನ ವಿಶ್ವದಲ್ಲೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರಜ್ಞಾನಿಯಾಗಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ ಸರ್ ಎಂ.ವಿ. 1909 ರಲ್ಲಿ ಹೈದರಾಬಾದ್, ವಿಶಾಖ ಪಟ್ಟಣದಲ್ಲಿ ಪ್ರವಾಹದಿಂದ ರಕ್ಷಿಸಲು ಯೋಜನೆ ರೂಪಿಸಿ ಪೂರ್ಣಗೊಳಿಸಿದರು. ಜನ ಸಾಗರವನ್ನು ಆಕರ್ಷಿಸುತ್ತಿರುವ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ಆಣೆಕಟ್ಟು1911 ಜಗತ್ತೇ ಆಶ್ಚರ್ಯದಿಂದ ನೋಡುವಂತಾಗಿದ್ದು, ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲೇ ಅತ್ಯಂತ ದೊಡ್ದ ಆಣೆಕಟ್ಟು ಎಂಬ ಹೆಬ್ಬಳಿಕೆ ರೂಪಿಸಿಕೊಂಡಿತ್ತು.
         ಕೃಷ್ಣರಾಜ ಸಾಗರ (ಕನ್ನಂಬಾಡಿ) ಜೀವನದಿ ಕಾವೇರಿ ನದಿಗೆ ಕಟ್ಟಲಾದ ಆಣೆಕಟ್ಟನ್ನು ಪ್ರಾರಂಭಿಸಿ ನಾಲ್ಕು ವರ್ಷಗಳಲ್ಲಿ ಮುಗಿಸಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೊಬ್ಬರೂ ಮಾಡಿರದಂತಹ ಸಾಧನೆ ಮಾಡಿದರು. ಬೇರೆ ಆಣೆಕಟ್ಟುಗಳು ಸಿಮೆಂಟ್, ಕಾಂಕ್ರಿಟ್ ನಿಂದ ನಿರ್ಮಾಣವಾಗಿದ್ದರೆ, ಕೆ.ಆರ್.ಎಸ್. ಆಣೆಕಟ್ಟು ಸರ್ ಎಂ.ವಿ. ಯವರ ಜಾಣ್ಮೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣ ದಿಂದ ಕಟ್ಟಿದ ಗಟ್ಟಿ ಮಾನವ ನಿರ್ಮಿತವಾಗಿದ್ದು, ದಾಖಲೆಯೊಂದಿಗೆ ಶತಮಾನದಿಂದ ಮೈಸೂರು, ಮಂಡ್ಯ, ಬೆಂಗಳೂರು, ತಮಿಳುನಾಡಿಗೆ  ಜೀವಜಲವನ್ನು ನೀಡುತ್ತಿರುವ ವಾಸ್ತುಶಿಲ್ಪವಾಗಿದೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟುಗಳು ತನ್ನಷ್ಟಕ್ಕೆ ತಾನೆ ತೆರೆದು ಕೊಂಡು ಮುನ್ನುಗುವ ಅಪಾರ ಪ್ರಮಾಣದ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗಲು  ಮುಂದಾಲೋಚನೆಯಿಂದ ಆಣೆಕಟ್ಟು ನಿರ್ಮಿಸುವಾಗಲೇ ಆಳವಾದ ಆಲೋಚನೆಯಿಂದ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಅದ್ಭುತಗಳ ಸಾಲಲ್ಲಿ ಬರುವ ಕೃಷ್ಣ ರಾಜ ಸಾಗರ ಆಣೆಕಟ್ಟು ಒಂದು ಲಕ್ಷ ಇಪ್ಪತ್ತು ಸಾವಿರ ಏಕರೆ ಕೃಷಿ ಭೂಮಿಗೆ ನೀರುಣಿಸಿ, ದಕ್ಷಿಣ ಭಾರತದ ಕೋಟ್ಯಾಂತರ ಜೀವಿಗಳಿಗೆ ಜೀವ ಜಲವನ್ನು ನೀಡಿದ ಭಾರತದ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯನವರನ್ನು ದಕ್ಷಿಣ ಭಾರತದ ಜನತೆ ಮರೆಯುವಂತಿಲ್ಲ. ಬೃಂದಾವನ ಉಧ್ಯಾನ ವನದಲ್ಲಿ ವೈವಿಧ್ಯಮಯ ನರ್ತಿಸುವ ಕುಣಿದು ಕುಪ್ಪಳಿಸುವ ನೀರಿನ ಕಾರಂಜಿಗಳು, ಪುಷ್ಪಕಾಶಿ ಯೊಂದಿಗೆ ಜಗತ್ತಿನ ನಾನಾ ದೇಶದ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.
          ಸರ್ ಎಂ.ವಿ ಎಂದೊಡನೆ, ಅಸಾಧಾರಣ ಎಂಜಿನಿಯರ್, ಅನನ್ಯ ರಾಷ್ಟ್ರಪ್ರೇಮ, ಕರ್ತವ್ಯನಿಷ್ಠ ಅಧಿಕಾರಿ, ದಕ್ಷ ಆಡಳಿತಗಾರ, ಭವ್ಯ ಭಾರತ ನಿರ್ಮಾಣದ ಕನಸುಗಾರ. 'ಕೈಗಾರಿಕೆ ಇಲ್ಲವೇ ಸರ್ವನಾಶ' ಎಂದು ಎಚ್ಚರಿಸಿದ ರಾಷ್ಟ್ರಚಿಂತಕ. ನಿಸ್ಸ್ವಾರ್ತಿ, ಛಲವಾದಿ, ಎಂಬ ವಿಚಾರಗಳು ನಮ್ಮ ಮನಸ್ಸಿನಲ್ಲಿ ಮೂಡಿ ಬರುತ್ತವೆ. ಇಷ್ಟೇ ಅಲ್ಲದೇ ಸರ್ ಎಂ.ವಿ ಅವರು ಮಾನವೀಯತೆಯುಳ್ಳ ದಯಾಳು ಹೃದಯದ ಮನುಷ್ಯ ಸಹ ಆಗಿದ್ದರು. ಅವರ ಚಿಕ್ಕಂದಿನಿಂದಲೂ ನಮ್ಮ ಸಂಸ್ಕೃತಿ ಸಂಪ್ರದಾಯಗಳಿಗೆ ಗೌರವ ಕೊಡುತ್ತಿದರು. ಸರ್ ಎಂ.ವಿ ಅವರು ಮೈಸೂರು ಸಂಸ್ಥಾನದ ದಿವಾನರು ಆಗಿದ್ದ ಕಾಲದಲ್ಲಿ, ಅವರ ಸಂಭಂದಿಕರು ಒಬ್ಬರು ಇವರ ಬಳಿ ಬಂದು ಮೈಸೂರು ಮಹಾರಾಜರ ಬಳಿ ಹೇಳಿ ಒಂದು ಒಳ್ಳೆಯ ಸಂಬಳದ ಕೆಲಸ ದಕ್ಕಿಸಿಕೊಡುವುದಾಗಿ ಕೇಳಿದ್ದರಂತೆ. ಸರ್ ಎಂ.ವಿ ಅವರು ಒಂದೇ ಮಾತಿನಲ್ಲಿ "ಆಗೋಲ್ಲ" ಅಂತ  ಹೇಳಿ ಜೊತೆಗೆ ಪ್ರತಿ ತಿಂಗಳು ಅವರ ಸ್ವಂತ ದುಡ್ಡಿನಲ್ಲಿ ಅವರ ಸಂಬಂದಿಕನಿಗೆ 100 ರುಪಾಯಿ ಕಳೆಹಿಸುತ್ತಿದ್ದಂತ ಸಹೃದಯರು. ಅವರ ಅಧಿಕಾರವನ್ನು ಅವರು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ. ಅವರು ದೀವನರು ಆಗಿದ್ದ ಅವಧಿ ಅಲ್ಲಿ, ನಮ್ಮ ಸರ್ಕಾರ ಅವರಿಗೆ ಅಂತ ಒಂದು ಕಾರನ್ನು ಕೊಟ್ಟಿತ್ತು. ಅವರು ಕೇವಲ ಕಚೇರಿಯ ಉಪಯೋಗಕ್ಕೆ ಮಾತ್ರ ಆ ಕಾರನ್ನು ಬಳೆಸುತ್ತಿದ್ದು ಅವರ ವೈಯಕ್ತಿಕ ಕೆಲಸಗಳಿಗೆ ಅವರ ಸ್ವಂತ ಕಾರನ್ನು ಉಪಯೋಗಿಸುತ್ತಿದ್ದರು. ಜೊತೆಗೆ ಸರ್ಕಾರದ ಕಾಗದ-ಪೆನ್ನನ್ನು ಸಹ ಅವರ ವೈಯಕ್ತಿಕ ವಿಷಯಗಳಿಗೆ ಉಪಯೋಗಿಸುತ್ತಿರಲಿಲ್ಲ. ಇದರಂದಿಲೀ ಅವರ ಕೆಲಸದ ಪ್ರಾಮಾಣಿಕತೆ ತಿಳಿದುಕೊಳ್ಳ ಬಹುದು. ಸರ್ ಎಂ.ವಿ ಅವರು ಶಿಸ್ತಿನ ಸಿಪಾಯಿ ಸಹ ಆಗಿದ್ದರು. ಪ್ರತಿನಿತ್ಯ ರಾತ್ರಿ 10 ಘಂಟೆಗೆ ಮಲಗಿ, ಬೆಳಿಗ್ಗೆ 6 ಘಂಟೆಗೆ ಎದ್ದು, 7 ಘಂಟೆಗೆಲ್ಲಾ ಕೆಲಸಕ್ಕೆ ಹೊರಡುತ್ತಿದ್ದರು.
           ಸರ್ ಎಂ.ವಿ ಅವರ ಸಾದನೆಗಳು ಅಪಾರ, ಅನಿಯಮಿತ ಹಾಗೂ ಅಸ೦ಖ್ಯಾತ. ಸರ್ ಎಂ.ವಿ ಅವರ ಹೆಸರಿನಲ್ಲಿ ಹಲವಾರು ಖಾರ್ಕನೆಗಳು, ಶಾಲಾ-ಕಾಲೇಜುಗಳು ಬಂದವು. 1955 ರಲ್ಲಿ ಅತ್ಯುತ್ತಮ ಪ್ರಶಸ್ತಿ ಭಾರತ ರತ್ನ ದೊರಕಿತು. ಹಲವು ಬಾರಿ ಡಾಕ್ಟರೇಟ್ ಪ್ರಶಸ್ತಿಯನ್ನು ದೊರಕಿಸಿ ಕೊಂಡ ಕೀರ್ತಿ ಸರ್ ಎಂ.ವಿ ಅವರದ್ದು. ಏಪ್ರಿಲ್ 14, 1962 ರಂದು ಸರ್ ಎಂ.ವಿ ಅವರು, ನಮ್ಮನ್ನು ಅಗಲಿ, ವಿಧಿವಶರಾದರು. ಇಂದಿನ ಆಧುನಿಕ ಎಂಜಿನಿಯರ್ ಗಳಿಗೆ ಸ್ಪೂರ್ತಿಯ ನೆಲೆ ಆಗಿದ್ದಾರೆ, ಸರ್ ಎಂ.ವಿ.  [ಲೇಖನ ಕೃಪೆ: ಪ್ರಶಾಂತ್ ಬ್ಲಾಗ್]
 ವಿಶ್ವೇಶ್ವರಯ್ಯ ಅವರ ಜೀವನ ಸಾಧನೆಗಳು ಚಿತ್ರಗಳು


ಮುದ್ದೇನಹಳ್ಳಿಯಲ್ಲಿರುವ ಸರ್ ಎಂ ವಿ   ಅವರ ಮನೆ

 ಬದುಕಿದ್ದಾಗಲೇ ತಮ್ಮ ಅಂಚೆ ಚೀಟಿಯನ್ನು ತಾವೇ ನೋಡಿದ ಮಹನೀಯರು ಸರ್ ಎಂ ವಿ
 

ಪ್ರಥಮ ಪ್ರಧಾನಿ ನೆಹರೂ ಅವರೊಂದಿಗೆ ಸರ್ ಎಂ ವಿ
 
ಸರ್ ಎಂ ವಿ ಅವರ 150 ನೇ ಜನ್ಮದಿನದ ಗೌರವಾರ್ಥ ವಿಶೇಷ ಅಂಚೆ ಪತ್ರ ಬಿಡುಗಡೆhttps://image.jimcdn.com/app/cms/image/transf/dimension=1070x10000:format=jpg/path/sacfca08ff45fbdf4/image/i0b0176b94c914f09/version/1437674814/london-panorama-southwark-bridge.jpg
ಸರ್ ಎಂ ವಿ ಯವರಿಂದ ನಿರ್ಮಿತವಾದ ಲಂಡನ್ ಬ್ರಿಡ್ಜ್

ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ

ಮೈಸೂರು ಗಂಧದ ಸಾಬೂನು ಕಾರ್ಖಾನೆ
 ಸ್ಟ್ಏಟ್ ಬ್ಯಾಂಕ್ ಆಫ್ ಮೈಸೂರು
*****************
ಕಾಮೆಂಟ್‌‌ ಪೋಸ್ಟ್‌ ಮಾಡಿ