ಷಟ್ಟದಿ
ಆರು ಜಾತಿಯ ಷಟ್ಪದಿಗಳ ಲಕ್ಷಣಗಳನ್ನು ಕ್ರಮವಾಗಿ ತಿಳಿಯೋಣ. (ಷಟ್=ಆರು, ಪದಿ=ಪಾದಗಳುಳ್ಳದ್ದು ಎಂದು ಅರ್ಥ). ಷಟ್ಪದಿಗಳ ಲಕ್ಷಣಗಳು
ಆರು ಪಾದಗಳುಳ್ಳ ಪದ್ಯವನ್ನು ‘ಷಟ್ಪದಿ’ ಎಂದು ಕರೆಯುತ್ತಾರೆ. ಇದರ ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳು ಮಾತ್ರಾ ಸಂಖ್ಯೆಯಲ್ಲಿ ಒಂದಕ್ಕೊಂದು ಸಮಾನವಾಗಿರುತ್ತವೆ. ಮೂರು ಮತ್ತು ಆರನೆಯ ಪಾದಗಳು ಪರಸ್ಪರ ಸಮವಾಗಿರುತ್ತವೆ. ಒಂದನೆಯ ಪಾದದಲ್ಲಿರುವ ಮಾತ್ರೆಗಳ ಒಂದೂವರೆಯಷ್ಟು ಮತ್ತು ಒಂದು ಗುರು ಮೂರನೆಯ ಮತ್ತು ಆರನೆಯ ಪಾದಗಳಲ್ಲಿರುತ್ತವೆ. ದ್ವಿತೀಯಾಕ್ಷರವು ಪ್ರಾಸಾಕ್ಷರವಾಗಿರುತ್ತದೆ. ಷಟ್ಪದಿಗಳಲ್ಲಿ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ ಮತ್ತು ವಾರ್ಧಕ ಎಂಬ ಆರು ವಿಧಗಳಿರುತ್ತವೆ.
(೧) ಶರಷಟ್ಪದಿ


ಈ ಮೇಲಿನ ಪದ್ಯವು ಆರು ಸಾಲುಗಳಿಂದ ಕೂಡಿದೆ. ೧, ೨, ೪, ೫ ನೆಯ ಸಾಲುಗಳು ಒಂದು ಸಮನಾಗಿದ್ದು ೪ ಮಾತ್ರೆಯ ೨ ಗಣಗಳಿಂದ ಕೂಡಿವೆ. ೩ ಮತ್ತು ೬ ನೆಯ ಸಾಲುಗಳು ಒಂದು ಸಮನಾಗಿದ್ದು ೪ ಮಾತ್ರೆಯ ೩ ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿವೆ. ಮೂರು ಮತ್ತು ಆರನೆಯ ಸಾಲುಗಳ ಕೊನೆಯಕ್ಷರ ಲಘುವಾಗಿದ್ದರೂ ಗುರುವೆಂದೇ ತಿಳಿಯಬೇಕು. ಈ ಜಾತಿಯ ಪದ್ಯದಲ್ಲಿ ಮಧ್ಯಗುರುವುಳ್ಳ “U _ U” ಈ ರೀತಿಯ ಗಣವು ಎಲ್ಲಿಯೂ ಬರಕೂಡದು. ಇಂಥ ಲಕ್ಷಣದಿಂದ ಕೂಡಿದ ಪದ್ಯಗಳು ಶರಷಟ್ಪದಿಗಳೆಂದು ತಿಳಿಯಬೇಕು.
(೨) ಕುಸುಮಷಟ್ಪದಿ

ಆರು ಪಾದಗಳುಳ್ಳ ಪದ್ಯ. ೧, ೨, ೪, ೫ ನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಎರಡು ಗಣಗಳಿಂದ ಕೂಡಿವೆ. ಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಮೂರು ಗಣಗಳಿಂದಲೂ ಮೇಲೆ ಒಂದು ಗುರುವಿನಿಂದಲೂ ಕೂಡಿವೆ. ೩ ಮತ್ತು ೬ ನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆಂದು ಭಾವಿಸಬೇಕು. ಈ ಜಾತಿಯ ಪದ್ಯದಲ್ಲಿ “U_UU ” ಹೀಗಿರುವ ಮತ್ತು ” U_ _” ಹೀಗಿರುವ ಗಣವು ಬರಕೂಡದು. ಈ ಲಕ್ಷಣಗಳಿಂದ ಕೂಡಿದ ಪದ್ಯಗಳೇ ಕುಸುಮ ಷಟ್ಪದಿಗಳೆನಿಸುವುವು.
(೩) ಭೋಗಷಟ್ಪದಿ

ಆರು ಸಾಲುಗಳಿಂದ ಕೂಡಿದ ಪದ್ಯ. ೧, ೨, ೪, ೫ ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮೂರು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿವೆ. ಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮಾತ್ರೆಗಳ ಆರಾರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ. ಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುವುದು. ಈ ಜಾತಿಯ ಛಂದಸ್ಸಿನ ಪದ್ಯದಲ್ಲಿ ” U_ ” ಹೀಗೆ ಇರುವ ಮಾತ್ರಾಗಣ ಬರಕೂಡದು. ಇಂಥ ಲಕ್ಷಣಗಳಿಂದ ಕೂಡಿದ ಪದ್ಯವೇ “ಭೋಗಷಟ್ಪದಿ” ಎನಿಸುವುದು.
(೪) ಭಾಮಿನೀ ಷಟ್ಪದಿ

ಆರು ಪಾದಗಳುಳ್ಳ ಪದ್ಯ. ೧, ೨, ೪, ೫ ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮತ್ತು ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿರುತ್ತವೆ. (ಮೊದಲು ಮೂರು ಮಾತ್ರೆಯ ಗಣ ಅನಂತರ ೪ ಮಾತ್ರೆಯ ಗಣ ಈ ಕ್ರಮದಲ್ಲಿ ಒಟ್ಟು ನಾಲ್ಕು ಗಣಗಳಿರುತ್ತವೆ.) ೩ನೆಯ ೬ನೆಯ ಸಾಲುಗಳು ಒಂದು ಸಮನಾಗಿದ್ದು, ಮೂರು ಮತ್ತು ನಾಲ್ಕು ಮಾತ್ರೆಗಳ ಆರುಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ. ಮೂರು ಮತ್ತು ಆರನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುತ್ತದೆ. ಈ ಜಾತಿಯ ಪದ್ಯದಲ್ಲಿ “U _ U” ಈ ರೀತಿಯ ಮಧ್ಯ ಗುರುವುಳ್ಳ ಗಣವು ಎಲ್ಲಿಯೂ ಬರಕೂಡದು. ಇಂಥ ಲಕ್ಷಣವುಳ್ಳವು ಭಾಮಿನೀ ಷಟ್ಪದಿಗಳೆನಿಸುವುವು.
(೫) ಪರಿವರ್ಧಿನೀಷಟ್ಪದಿ

ಆರು ಪಾದಗಳುಳ್ಳ ಪದ್ಯ. ೧, ೨, ೪, ೫ ನೆಯ ಸಾಲುಗಳು ಒಂದು ಸಮನಾಗಿದ್ದು, ನಾಲ್ಕು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿವೆ. ೩ ಮತ್ತು ೬ನೆಯ ಸಾಲುಗಳು ಒಂದು ಸಮನಾಗಿದ್ದು ನಾಲ್ಕು ಮಾತ್ರೆಯ ಆರು ಗಣಗಳಿಂದಲೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ. ಈ ಪದ್ಯದಲ್ಲಿ ” U _ U ” ಈ ರೀತಿಯಿರುವ ಗಣವು ಎಲ್ಲಿಯೂ ಬರಕೂಡದು. ಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆನಿಸುವುದು. ಈ ಲಕ್ಷಣದಿಂದ ಕೂಡಿದ ಪದ್ಯವು ಪರಿವರ್ಧಿನೀಷಟ್ಪದಿಯೆನಿಸುವುದು.
(೬) ವಾರ್ಧಕಷಟ್ಪದಿ
(೬) ವಾರ್ಧಕಷಟ್ಪದಿ

******
ಪರಿವರ್ದಿನಿ ಷಟ್ಪದಿ ಗೆ ಉದಾಹರಣೆಯಲ್ಲಿ 2 ನೇರವಾಗಿ ಸಾಲಿನ ಕೊನೆಯ ಪದ "ಮನ್ರ್ರತಂ" ಲಘು-ಗುರು ಸರಿ ಇದೆನಾ ಸರ್.....
ಪ್ರತ್ಯುತ್ತರಅಳಿಸಿSir vardhaka shatpadi ge udaharane kalisi
ಪ್ರತ್ಯುತ್ತರಅಳಿಸಿಬಡತನದ ಹೊತ್ತಾನೆ ದೊರಕಿಫಲ ವೇನುನೀ
ಅಳಿಸಿರಡಸಿರ್ದ ಹೊತ್ತಾಜ್ಯ ದೊರಕಿಫಲ ವೇನುರುಜೆ
ಯಡಸಿಕೆಡೆ ದಿಹಹೊತ್ತು ರಂಬೆದೊರೆ ಕೊಂಡಲ್ಲಿ ಫಲವೇನು ಸಾವಹೊ ತ್ತು
Very useful sir.
ಪ್ರತ್ಯುತ್ತರಅಳಿಸಿNice sir
ಪ್ರತ್ಯುತ್ತರಅಳಿಸಿDevaraja kavi rachisiruva sobagina sone kruti parivardhini shatpadiyallide
ಪ್ರತ್ಯುತ್ತರಅಳಿಸಿGood.thank you. Sir
ಪ್ರತ್ಯುತ್ತರಅಳಿಸಿBhoga shatpadi example please
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿಬಿಸುಡದಿರು ಬಿಸುಡದಿರು ಬೇಡ ಬೇಡ ಕಟ ಕಟಾ ಹಸುಳೆ ನೊಂದ ಹನೆಂದು ಬೀಳ್ವವವನನೆತ್ತಿ ಕ್ಕಿಸಿಕೊಂಡು ಕುಲವ ನೋಡದೆ ಬೇಡಿಕೊಂಬೆ ನಿನ್ನ ಮಗನಲ್ಲ ನಿನ್ನ
ಪ್ರತ್ಯುತ್ತರಅಳಿಸಿಇದಕ್ಕೆ ಪ್ರಸ್ತಾರ ಹಾಕಿ ಗಣ ವಿಂಗಡಿಸಿ ಛಂದಸ್ಸನ್ನು ಹೆಸರಿಸಿ
ಸರ್ ans heli
ಅಳಿಸಿSagar
ಪ್ರತ್ಯುತ್ತರಅಳಿಸಿಸಾಗರ
ಪ್ರತ್ಯುತ್ತರಅಳಿಸಿI want ಭಾಮಿನಿ ಷಟ್ಪದಿ 4 ಸಾಲು ಪ್ರಸ್ತಾರ ಹಾಕಿ ಗಣ ವಿಂಗಡಿಸಿ
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿVa sir
ಪ್ರತ್ಯುತ್ತರಅಳಿಸಿಷಟ್ಪದಿಗಳುಗೆ ಉಪಸಂಹಾರ ಬೇಕು
ಪ್ರತ್ಯುತ್ತರಅಳಿಸಿ