ಪ್ರಸ್ತುತ ಕವನವನ್ನು ಚೆನ್ನವೀರ ಕಣವಿಯವರ ‘ಆಕಾಶಬುಟ್ಟಿ’ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ವಿಮರ್ಶಾಲೇಖನಗಳು ಹಾಗು ಪ್ರಬಂಧ ಸಂಕಲನಗಳು
ಚೆನ್ನವೀರ ಕಣವಿಯವರ ಪರಿಚಯ
- ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ೧೯೨೮ರ ಜೂನ್ ೨೮ರಂದು ಜನಿಸಿದರು.
- ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
- ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು.
- ೧೯೫೬ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದರು. ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.
ಕಣವಿಯವರು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದ ವೇಳೆಗಾಗಲೇ ನವೋದಯ ಮಧ್ಯಂತರ ಸ್ಥಿತಿ ತಲುಪಿತ್ತು. ಬೇಂದ್ರೆ, ಕುವೆಂಪು, ಪು.ತಿ.ನ, ಮತ್ತು ಮಧುರಚನ್ನರಂತಹ ನವೋದಯ ಕವಿಗಳ ಕಾವ್ಯ ಹೊಸದಾಗಿ ಕಾವ್ಯರಚನೆಗೆ ತೊಡಗುವವರನ್ನು ಗಾಡವಾಗಿ ಪ್ರಭಾವಿಸುತ್ತಿದ್ದ ಕಾಲವದು. ಇದಕ್ಕೆ ಕಣವಿಯವರು ಹೊರತಾಗಿರಲಿಲ್ಲ. ಅವರ ಸಾಹಿತ್ಯ ಪ್ರಕಾರಗಳು ಪ್ರಭಾವ ಬೀರಿದವು.
ಕಣವಿಯವರ ಭಾವಜೀವಿ ಎಂಬ ಆತ್ಮಕಥನಾತ್ಮಕವಾದ ದೀರ್ಘಕವಿತೆಯ ಮೇಲೆ ಮಧುರಚನ್ನರ ನನ್ನ ನಲ್ಲ, ಕವಿತೆಯ ಪ್ರಭಾವವಿರುವುದು ಕಂಡುಬರುತ್ತದೆ. ಹಾಗೆಯೇ ಕಣವಿಯವರ ಪ್ರಕೃತಿಗೀತೆಗಳಲ್ಲಿ ವಿಶೇಷವಾಗಿ ಬೇಂದ್ರೆ, ಕುವೆಂಪುರವರ ಪ್ರಭಾವವನ್ನು ಗುರುತಿಸಬಹುದು. ಇದು ಬೆಳೆಯುವ ಯುವ ಕವಿಯೊಬ್ಬನಿಗೆ ಸಹಜವೂ ಹೌದು, ನಂತರ ಕಣವಿಯವರು ಇದರಿಂದ ಮೇಲೇರಿ ಸಾಹಿತ್ಯ ಸೃಷ್ಟಿಮಾಡಿದರು. ಕಣವಿಯವರು ಹಲವು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಕಣವಿಯವರು ತಮ್ಮ ವೈಯಕ್ತಿಕ ಕಾವ್ಯ ಮತ್ತು ಬದುಕಿನ ನಿಲುವನ್ನು ಹೀಗೆ ಕವಿ ವ್ಯಕ್ತಪಡಿಸಿದ್ದಾರೆ.
ಮಾಡಿ ಉಂಡಿದ್ದೇವೆ ನಮನಮಗೆ ಸೇರಿದ ಅಡಿಗೆ
ಇರಬಹುದು ಇದರಲ್ಲಿ ಕೆಲಭಾಗ ಜೀವನ ಸತ್ವ ಕಡಿಮೆ
ಇದ್ದಶಕ್ತಿಯಲ್ಲಿ ತುಸು ದೂರ ನಡೆದಿದ್ದೇವೆ
ರೂಡಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ
ಮುಖ್ಯ ಬೇಕಾದ್ದು ಜೀವನ ಗತಿ, ಹೊಸ ನೆತ್ತರಿನ ಕೊಡುಗೆ (ಕವಿತೆ:-‘ಕಾಲನಿಲ್ಲುವುದಿಲ್ಲ’)
ಕಣವಿಯವರ ಭಾವಜೀವಿ ಎಂಬ ಆತ್ಮಕಥನಾತ್ಮಕವಾದ ದೀರ್ಘಕವಿತೆಯ ಮೇಲೆ ಮಧುರಚನ್ನರ ನನ್ನ ನಲ್ಲ, ಕವಿತೆಯ ಪ್ರಭಾವವಿರುವುದು ಕಂಡುಬರುತ್ತದೆ. ಹಾಗೆಯೇ ಕಣವಿಯವರ ಪ್ರಕೃತಿಗೀತೆಗಳಲ್ಲಿ ವಿಶೇಷವಾಗಿ ಬೇಂದ್ರೆ, ಕುವೆಂಪುರವರ ಪ್ರಭಾವವನ್ನು ಗುರುತಿಸಬಹುದು. ಇದು ಬೆಳೆಯುವ ಯುವ ಕವಿಯೊಬ್ಬನಿಗೆ ಸಹಜವೂ ಹೌದು, ನಂತರ ಕಣವಿಯವರು ಇದರಿಂದ ಮೇಲೇರಿ ಸಾಹಿತ್ಯ ಸೃಷ್ಟಿಮಾಡಿದರು. ಕಣವಿಯವರು ಹಲವು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಕಣವಿಯವರು ತಮ್ಮ ವೈಯಕ್ತಿಕ ಕಾವ್ಯ ಮತ್ತು ಬದುಕಿನ ನಿಲುವನ್ನು ಹೀಗೆ ಕವಿ ವ್ಯಕ್ತಪಡಿಸಿದ್ದಾರೆ.
ಮಾಡಿ ಉಂಡಿದ್ದೇವೆ ನಮನಮಗೆ ಸೇರಿದ ಅಡಿಗೆ
ಇರಬಹುದು ಇದರಲ್ಲಿ ಕೆಲಭಾಗ ಜೀವನ ಸತ್ವ ಕಡಿಮೆ
ಇದ್ದಶಕ್ತಿಯಲ್ಲಿ ತುಸು ದೂರ ನಡೆದಿದ್ದೇವೆ
ರೂಡಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ
ಮುಖ್ಯ ಬೇಕಾದ್ದು ಜೀವನ ಗತಿ, ಹೊಸ ನೆತ್ತರಿನ ಕೊಡುಗೆ (ಕವಿತೆ:-‘ಕಾಲನಿಲ್ಲುವುದಿಲ್ಲ’)
*ಪ್ರಮುಖ ಕೃತಿಗಳು*
ಕವನ ಸಂಕಲನಗಳು- ನಗರದಲ್ಲಿ ನೆರಳು
- ಕಾವ್ಯಾಗ್ನಿ
- ಭಾವಜೀವಿ
- ಆಕಾಶಬುಟ್ಟಿ
- ಮಧುಚಂದ್ರ
- ಮಣ್ಣಿನ ಮೆರವಣಿಗೆ
- ದೀಪಧಾರಿ
- ನೆಲ ಮುಗಿಲು
- ಎರಡು ದಡ
- ಜೀವಧ್ವನಿ
- ಕಾರ್ತೀಕದ ಮೋಡ
- ಜೀನಿಯಾ
- ಹೊಂಬೆಳಕು
- ಶಿಶಿರದಲ್ಲಿ ಬಂದ ಸ್ನೇಹಿತ
- ಚಿರಂತನ ದಾಹ(ಆಯ್ದ ಕವನಗಳು)
- ಹೂವು ಹೊರಳುವವು ಸೂರ್ಯನ ಕಡೆಗೆ
ವಿಮರ್ಶಾಲೇಖನಗಳು ಹಾಗು ಪ್ರಬಂಧ ಸಂಕಲನಗಳು
- ಸಾಹಿತ್ಯಚಿಂತನ
- ಕಾವ್ಯಾನುಸಂಧಾನ
- ಸಮಾಹಿತ
- ಮಧುರಚೆನ್ನ
- ಸಮತೋಲನ
- ಹಕ್ಕಿ ಪುಕ್ಕ
- ಚಿಣ್ಣರ ಲೋಕವ ತೆರೆಯೋಣ
- ಕನ್ನಡದ ಕಾಲು ಶತಮಾನ
- ಸಿದ್ಧಿ ವಿನಾಯಕ ಮೋದಕ
- ಕವಿತೆಗಳು
- ನವಿಲೂರು ಮನೆಯಿಂದ
- ನವ್ಯಧ್ವನಿ
- ನೈವೇದ್ಯ
- ನಮ್ಮೆಲ್ಲರ ನೆಹರೂ
- ಜೀವನ ಸಿದ್ಧಿ
- ಆಧುನಿಕ ಕನ್ನಡ ಕಾವ್ಯ
- Modern Kannada Poetry
- ಸುವರ್ಣ ಸಂಪುಟ
- ರತ್ನ ಸಂಪುಟ
- ಬಾಬಾ ಫರೀದ
- ಇವರ "ಜೀವಧ್ವನಿ" ಎಂಬ ಕೃತಿಗೆ ೧೯೮೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[೭] ದೊರಕಿದೆ.
- ೧೯೯೬ರಲ್ಲಿ ಹಾಸನದಲ್ಲಿ ನಡೆದ ಅರವತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಣವಿಯವರು ಅಧ್ಯಕ್ಷರಾಗಿದ್ದರು.
- ಆಳ್ವಾಸ್ -ನುಡಿಸಿರಿ 2008 "ರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ,
- ರಾಜ್ಯೋತ್ಸವ ಪ್ರಶಸ್ತಿ,
- ಪಂಪ ಪ್ರಶಸ್ತಿ,
- ಬಸವ ಗುರು ಕಾರುಣ್ಯ ಪ್ರಶಸ್ತಿ,
- ನಾಡೋಜ ಪ್ರಶಸ್ತಿ,
- ಕರ್ನಾಟಕ ಕವಿರತ್ನ ಪ್ರಶಸ್ತಿ,
- ಅನಕೃ ನಿರ್ಮಾಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳು.
- 'ನಾಡೋಜ ಮತ್ತು ಪಂಪ ಪ್ರಶಸ್ತಿ ವಿಜೇತರು'. ಸೆಪ್ಟೆಂಬರ್, ೧, ೨೦೦೩.
Padya and pathad saransha hakidare ianu uattam sir
ಪ್ರತ್ಯುತ್ತರಅಳಿಸಿಪದ್ಯ ಸಾರಾಂಶ ಸಾರ್
ಪ್ರತ್ಯುತ್ತರಅಳಿಸಿಪದ್ಯದ ಸಾರಾಂಶ
ಅಳಿಸಿSuper
ಪ್ರತ್ಯುತ್ತರಅಳಿಸಿಗೆಳೆತನ ಪದ್ಯದ ಗೃಹಕಾರ್ಯದ ಉತ್ತರ
ಪ್ರತ್ಯುತ್ತರಅಳಿಸಿWhere is this poem summary sir.
ಪ್ರತ್ಯುತ್ತರಅಳಿಸಿಗೆಳತನ ಪಂದ್ಯದ ಸಾರಾಂಶ ತೋರಿಸಿ
ಪ್ರತ್ಯುತ್ತರಅಳಿಸಿದಾನ್ಯವಧಗಳು ಸರ್ದಾನ್ಯವಧಗಳು ಸರ್
ಪ್ರತ್ಯುತ್ತರಅಳಿಸಿ