'ಛಲಮೆನೆ ಮೆಱೆವೆಂ' ಪದ್ಯಭಾಗದ ಸಾರಾಂಶ
ಪೀಠಿಕೆ: ಮಹಾಭರತ ಯುದ್ದದಲ್ಲಿ ತನ್ನೆಲ್ಲ ಸಹೋದರರನ್ನೂ ಆಪ್ತಮಿತ್ರನಾದ ಕರ್ಣನನ್ನೂ ಕಳೆದುಕೊಂಡ ದುರ್ಯೋಧನನು ತನ್ನ ತಂದೆ ತಾಯಿಯರ ಅಪೇಕ್ಷೆಯಂತೆ ರಣರಂಗದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ತಾತ ಭೀಷ್ಮರ ಸಲಹೆಯನ್ನು ಪಡೆಯಲು ಬರುತ್ತಾನೆ. ಭೀಷ್ಮರು ಯುದ್ಧವನ್ನು ನಿಲ್ಲಿಸಿ ಪಾಂಡವರೊಡನೆ ಸಂಧಿ ಮಾಡಿಕಒಳ್ಳುವುದು ಸೂಕ್ತವೆಂದು ದುರ್ಯೋಧನನಿಗೆ ಸಲಹೆ ನೀಡುತಾರೆ. ಆದರೆ ಸಂಧಿಮಾಡಿಕೊಳ್ಳು ಒಪ್ಪದ ದುರ್ಯೋಧನನು ತಾನು ಯುದ್ಧಮಾಡುವುದಾಗಿ ಹೇಳುತ್ತಾನೆ.
ಈ ಸಂದರ್ಭದಲ್ಲಿ ದುರ್ಯೋಧನನು ಭೀಷ್ಮರೊಂದಿಗೆ ಮಾತನಾಡುವಾಗ ಆತನಲ್ಲಿ ಛಲ, ಅವನ ದೃಢನಿರ್ಧಾರ ಮತ್ತು ಅವನ ಅಭಿಮಾನದ ಮಾತುಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.
********
ವಚನ : ಇಂಬುಕೆಯ್ವೆಯಪ್ಪೊಡೆ ಪಾಂಡವರನೊಡಂಬಡಿಸಿ ಸಂಧಿಯಂ ಮಾಡಿ ಪೂರ್ವಕ್ರಮದೊಳ್ ನಡೆವಂತು ಮಾೞ್ಪೆಂ ಇನ್ನುಮವರೆಮ್ಮಂದುದಂ ಇಂಬುಕೆಯ್ಯದವರ್ ಮೀಱವರಲ್ಲ ನೀನುಮೆಮ್ಮ ಪೇೞ್ದುದಂ ಮೀಱದೆ ನೆಗೞಲ್ವೇೞ್ಕುಮೆನೆ ಸುಯೋಧನಂ ಮುಗುಳ್ನಗೆ ನಕ್ಕು-
ಸಾರಾಂಶ: ನೀನು ಒಪ್ಪುವೆಯಾದರೆ ಪಾಂಡವರನ್ನು ಒಪ್ಪಿಸಿ ಒಪ್ಪಂದ ಮಾಡಿ ಹಿಂದಿನಂತೆ ನಡೆಯುವ ಹಾಗೆ ಮಾಡುವೆನು. ಈಗಲೂ ಕೂಡ ಅವರು ನಮ್ಮ ಮಾತನ್ನು ಮೀರದೆ ಪಾಲಿಸುತ್ತಾರೆ. ನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೊಳ್ಳಬೇಕು. ಎಂದು ಭೀಷ್ಮರು ಹೇಳಿದಾಗ ದುರ್ಯೋಧನನು ಮುಗುಳು ನಗೆ ನಕ್ಕು-
ಕಂ|| ನಿಮಗೆ ಪೊಡೆಮಟ್ಟು ಪೋಪೀ|
ಸಮಕಟ್ಟಿಂ ಬಂದೆನಹಿತರೊಳ್ ಸಂಧಿಯನೇಂ||
ಸಮಕೊಳಿಸಲೆಂದು ಬಂದೆನೆ|
ಸಮರದೊಳೆನಗಜ್ಜ ಪೇೞಮಾವುದು ಕಜ್ಜಂ|| ||೧||
ಸಾರಾಂಶ: ನಿಮಗೆ ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದೆನೆ? ಅಜ್ಜಾ, ಯುದ್ಧದಲ್ಲಿ ಇನ್ನು ನನ್ನ ಕಾರ್ಯವೇನೆಂಬುದನ್ನು ಹೇಳಿರಿ.
ಕಂ|| ನೆಲಕಿಱವೆನೆಂದು ಬಗೆದಿರೆ|
ಚಲಕಿಱವೆಂ ಪಾಂಡುಸುತರೊಳೀನೆಲನಿದು ಪಾ||
ೞ್ನೆಲನೆನಗೆ ದಿನಪಸುತನಂ|
ಕೊಲಿಸಿದ ನೆಲನೊಡನೆ ಮತ್ತೆ ಪುದುವಾೞ್ದಪೆನೇ|| ||೨||
ಸಾರಾಂಶ: ನಾನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ? ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಪಾಳು ಭೂಮಿ. ದಿನಪಸುತನಾದ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಬಾಳುವೆನೆ?
ಉ|| ಎನ್ನಣುಗಾಳನೆನ್ನಣುಗದಮ್ಮನನಿಕ್ಕಿದ ಪಾರ್ಥಭೀಮರು|
ಳ್ಳನ್ನೆಗಮೊಲ್ಲೆನೆನ್ನೊಡಲೊಳೆನ್ನಸುವುಳ್ಳಿನಮಜ್ಜ ಸಂಧಿಯಂ||
ಮುನ್ನಮವಂದಿರಿರ್ಬರುಮನಿಕ್ಕುವೆನಿಕ್ಕಿ ಬೞಕ್ಕೆ ಸಂಧಿಗೆ|
ಯ್ವೊನ್ನೆಗೞ್ದಂತಕಾತ್ಮಜನೊಳೆನ್ನೞಲಾಱದೊಡಾಗದೆಂಬೆನೇ|| ||೩||
ಸಾರಾಂಶ: ನನ್ನ ಪ್ರೀತಿಯ ಗೆಳೆಯನನ್ನು(ಕರ್ಣನನ್ನು) ನನ್ನ ಪ್ರೀತಿಯ ತಮ್ಮನನ್ನು(ದುಶ್ಯಾಸನ) ಕೊಂದ ಅರ್ಜುನ-ಭೀಮರು ಬದುಕಿರುವವರೆಗೆ ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಅಜ್ಜಾ, ನಾನು ಸಂಧಿಯನ್ನು ಒಪ್ಪುವುದಿಲ್ಲ. ಮೊದಲು ಆ ಇಬ್ಬರನ್ನೂ ಕೊಲ್ಲುವೆನು. ಅವರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ. ನನ್ನ ದುಃಖ ಆರಿದ ನಂತರ ಸಂಧಿ ಆಗುವುದಿಲ್ಲ ಎನ್ನುವೆನೇ?
ಕಂ|| ಪುಟ್ಟಿದ ನೂರ್ವರುಮೆನ್ನೊಡ|
ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ||
ಪುಟ್ಟಿ ಪೊದೞ್ದುದು ಸತ್ತರ್
ಪುಟ್ಟರೆ ಪಾಂಡವರೊಳಿಱದು ಛಲಮನೆ ಮೆಱೆವೆಂ || ||೪||
ಸಾರಾಂಶ: ಹುಟ್ಟಿದ ನೂರು ಜನರೂ, ನನ್ನ ಒಡ ಹುಟ್ಟಿದ ನೂರುಮಂದಿ ಸಹೋದರರು (ಯುದ್ಧದಲ್ಲಿ) ಹೋರಾಡಿ ಸತ್ತರು. ಆದ್ದರಿಂದ ನನ್ನಲ್ಲಿ ಕೋಪ ಹುಟ್ಟಿ ಬೆಳೆಯಿತು(ಪೊದೞ್ದುದು). ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ? ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ.
ಕಂ|| ಕಾದದಿರೆನಜ್ಜ ಪಾಂಡವ|
ರಾದರ್ ಮೇಣಿಂದಿನೊಂದೆ ಸಮರದೊಳಾಂ ಮೇ||
ಣಾದೆನದಱಂದೆ ಪಾಂಡವ
ರ್ಗಾದುದು ಮೇಣಾಯ್ತು ಕೌರವಂಗವನಿತಳಂ|| ||೫||
ಸಾರಾಂಶ: ಅಜ್ಜ, ನಾನು ಹೋರಾಡದೆ ಬಿಡುವುದಿಲ್ಲ. ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ಇಲ್ಲವೆ ನಾನು ಉಳಿಯಬೇಕು. ಆದ್ದರಿಂದ ಈ ಭೂಮಿ ಪಾಂಡವರದಾಗಬೇಕು ಇಲ್ಲವೇ ಕೌರವನದಾಗಬೇಕು ಎಂದು ದುರ್ಯೋಧನನು ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರಿಗೆ ಹೇಳಿದನು.
**************
Super
ಪ್ರತ್ಯುತ್ತರಅಳಿಸಿ🙏
ಪ್ರತ್ಯುತ್ತರಅಳಿಸಿ👍
ಪ್ರತ್ಯುತ್ತರಅಳಿಸಿBest your teach sir
ಅಳಿಸಿSuper duper sir belithairi
ಅಳಿಸಿSir nimma sentence super
ಪ್ರತ್ಯುತ್ತರಅಳಿಸಿನಿಮ್ಮ ಒಂದು ಮಾರ್ಗದರ್ಶನ ನಮ್ಮಂಥ ಓದುಗರ ಒಂದು ಉಪಯುಕ್ತವಾಗಿದೆ ಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿNitesha s r
ಪ್ರತ್ಯುತ್ತರಅಳಿಸಿNitesha s r
ಪ್ರತ್ಯುತ್ತರಅಳಿಸಿSuper
ಪ್ರತ್ಯುತ್ತರಅಳಿಸಿ👍👍👍
ಪ್ರತ್ಯುತ್ತರಅಳಿಸಿThank you sir 🙏
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿTq
ಪ್ರತ್ಯುತ್ತರಅಳಿಸಿ👍👍👍
ಪ್ರತ್ಯುತ್ತರಅಳಿಸಿTq
ಪ್ರತ್ಯುತ್ತರಅಳಿಸಿsuper.....👍
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿTq sir..
ಪ್ರತ್ಯುತ್ತರಅಳಿಸಿTq so mach sir it will be very useful for huze
ಪ್ರತ್ಯುತ್ತರಅಳಿಸಿSuper tq sir sentence
ಪ್ರತ್ಯುತ್ತರಅಳಿಸಿformation is good
Nice and thank you so much
ಪ್ರತ್ಯುತ್ತರಅಳಿಸಿIt will be useful our huze thank you so much
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿ👌👌👌👌👌🙏
ಪ್ರತ್ಯುತ್ತರಅಳಿಸಿ👌👌👌👌👌🙏
ಪ್ರತ್ಯುತ್ತರಅಳಿಸಿSupper
ಪ್ರತ್ಯುತ್ತರಅಳಿಸಿNamage bahala changi artha aitu thanks sir
ಪ್ರತ್ಯುತ್ತರಅಳಿಸಿnana name priya bengeri sir super s 💖
ಪ್ರತ್ಯುತ್ತರಅಳಿಸಿBasavarj
ಪ್ರತ್ಯುತ್ತರಅಳಿಸಿThank you sir🙏🙏
ಪ್ರತ್ಯುತ್ತರಅಳಿಸಿYashwanth
ಪ್ರತ್ಯುತ್ತರಅಳಿಸಿಅಪ್ರತಿಮ
ಪ್ರತ್ಯುತ್ತರಅಳಿಸಿSuper sir TQ sir
ಪ್ರತ್ಯುತ್ತರಅಳಿಸಿSuper
ಪ್ರತ್ಯುತ್ತರಅಳಿಸಿಞಟಟ
ಪ್ರತ್ಯುತ್ತರಅಳಿಸಿ