ನನ್ನ ಪುಟಗಳು

22 ಅಕ್ಟೋಬರ್ 2018

ಕನ್ನಡ ದೀವಿಗೆಯ ಓದುಗರಿಗೆ.............

ಸಕಲ ಕನ್ನಡ ಕುಲಬಾಂಧವರಿಗೆ,
ಕನ್ನಡ ರಾಜ್ಯೋತ್ಸವದ  ಹಾರ್ದಿಕ ಶುಭಾಶಯಗಳು


 50,00,000 ಪುಟವೀಕ್ಷಣೆ ದಾಟಿದ ಸಂಭ್ರಮದಲ್ಲಿ 
ಕನ್ನಡ ದೀವಿಗೆ..!!
'ಕನ್ನಡ ದೀವಿಗೆ'ಯನ್ನು ಅಭಿಮಾನದ ಬೊಗಸೆಯಿಂದ ಸದಾ ಬೆಳಗುವಂತೆ ಮಾಡಿದ ಎಲ್ಲಾ ಕನ್ನಡಾಭಿಮಾನಿಗಳಿಗೂ
ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಬತ್ತಿ ಸರಿಪಡಿಸಿ ದೀವಿಗೆ ಬೆಳಗಿಸಿದವರಿಗೂ
ಮೆಚ್ಚುಗೆ ನುಡಿಯ ಎಣ್ಣೆ ಎರೆದು ಉತ್ಸಾಹದ ದೀವಿಗೆ ಬತ್ತದಂತೆ ಮಾಡಿದವರಿಗೂ
ದೀಪದಿಂದ ದೀಪ ಹಚ್ಚುವಂತೆ ಸಂಪನ್ಮೂಲಗಳನ್ನು ನನ್ನೊಡನೆ ಹಂಚಿಕೊಂಡವರಿಗೂ
ಸದಾ ಈ ಕನ್ನಡದ ಕೈದೀವಿಗೆಯನ್ನು ಅನುಸರಿಸುತ್ತಾ ಬೆಂಬಲವಾಗಿರುವವರಿಗೂ

ಕನ್ನಡದ ಕೈಂಕರ್ಯದಲ್ಲಿ ದೀವಿಗೆಯನ್ನು ಬಳಸಿಕೊಂಡವರಿಗೂ
ಬಳಸಿಕೊಳ್ಳುತ್ತಿರುವವರಿಗೂ
ಪ್ರೋತ್ಸಾಹದ ನುಡಿಗಳಿಂದ ನನ್ನಲ್ಲಿ ಸತ್ವ ತುಂಬುತ್ತಿರುವ 
ನನ್ನ ಬಂಧು-ಮಿತ್ರರಿಗೂ
ನನ್ನ ಕನ್ನಡದ ಸೇವೆಯಲ್ಲಿ ಸದಾ ಬೆನ್ನೆಲುಬಾಗಿ ನಿಂತಿರುವ 
ನನ್ನ ಧರ್ಮಪತ್ನಿಗೂ

ಪುಟವೀಕ್ಷಣೆ ಐವತ್ತು ಲಕ್ಷ ದಾಟಿರುವ ಈ ಶುಭ ಸಂದರ್ಭದಲ್ಲಿ
ನನ್ನ ಅನಂತಾನಂತ ಧನ್ಯವಾದಗಳು
********
ಸದಾ ಕನ್ನಡದ ಸೇವೆಯಲ್ಲಿ
ಎಸ್.ಮಹೇಶ್
*****