ನನ್ನ ಪುಟಗಳು

27 ಏಪ್ರಿಲ್ 2018

ಮಲೆನಾಡಿನ ಚಿತ್ರಗಳು : ಮಲೆನಾಡಿಗೆ ಬಾ

ಮಲೆನಾಡಿಗೆ ಬಾ

ಮಲೆನಾಡಮ್ಮನ ಮಡಿಲಿನಲಿ
ಕರ್ಮುಗಿಲೊಡಲಿನಲಿ
ಮನೆಮಾಡಿರುವೆನು ಸಿಡಿಲಿನಲಿ
ಮಿಂಚಿನ ಕಡಲಿನಲಿ!
ಬನಗಳ ಬೀಡು
ಚೆಲ್ವಿನ ನಾಡು
ಮೋಹನ ಭೀಷಣ ಮಲೆನಾಡು!

ನೇಸರು ಮೂಡುವ ಪೆಂಪಿಹುದು,
ಮುಳುಗುವ ಸೊಂಪಿಹುದು;
ತಿಂಗಳ ಬೆಳಕಿನ ಕಾಂತಿಯಿದೆ,
ಇರುಳಿನ ಶಾಂತಿಯಿದೆ,
ಕೋಗಿಲೆಯಿಲ್ಲಿ
ಲಾವುಗೆಯಲ್ಲಿ
ಗಿಳಿಗಳ ನುಣ್ಣರವಿಹುದಿಲ್ಲಿ!

ಮೊರೆಯುತ ಹರಿಯುವ ತೊರೆಯಿಹುದು
ತುಂಬಿದ ಕೆರೆಯಿಹುದು;
ಹಾಡುತಲೇರಲು ಬೆಟ್ಟವಿದೆ.
ಬಣ್ಣಿಸ ಘಟ್ಟವಿದೆ.
ಬಿಸಲಿದೆ, ತುಂಪಿದೆ,
ಹೂಗಳ ಕಂಪಿದೆ;
ಹಸುರಿನ, ಹಣ್ಣುಗಳಿಂಪಿನೆದೆ!

ರನ್ನನು ಪಂಪನು ಬಹರಿಲ್ಲಿ;
ಶ್ರೀ ಗುರುವಿಹನಿಲ್ಲಿ!
ಮಿಲ್ಟನ್, ಷೆಲ್ಲಿ ಬಹರಿಲ್ಲಿ;
ಕವಿವರರಿಹರಿಲ್ಲಿ!
ಮುಂದಿನ ಹಳ್ಳಿ
ಈ ಕುಪ್ಪಳ್ಳಿ
ಬಾ, ಕಬ್ಬಿಗ ನಾನಿಹೆನಿಲ್ಲಿ!
                     (೨೪ – ೪ – ೧೯೨೯)
ಮುಂದಿನ ಭಾಗ : http://kannadadeevige.blogspot.com/p/blog-page_87.html ಹಾಸ್ಯದ ಚಟಾಕಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ