ನನ್ನ ಪುಟಗಳು

26 ಅಕ್ಟೋಬರ್ 2017

ಸೋಮೇಶ್ವರ ಶತಕ(ಪದ್ಯ-6) Someshwara-Shathaka-Poem-6

ಪುಲಿಗೆರೆ ಸೋಮನಾಥ
  •      ಪುಲಿಗೆರೆ ಸೋಮನಾಥ (ಜನನ ಸುಮಾರು ೧೨೯೯) ಹಳಗನ್ನಡದ ಕವಿಗಳಲ್ಲೊಬ್ಬ ಸೋಮನಾಥನು ಹಿಂದಿನ ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆಯವನು. ಆದಯ್ಯನ ಪರಮ ಶಿವಭಕ್ತನಾಗಿದ್ದ, ಅವನು ಈ ದೇವಾಲಯದಲ್ಲಿ ಜೈನ ಮೂರ್ತಿಯನ್ನು ಭಗ್ನಗೊಳಿಸಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ಹರಿಹರನ ಆದಯ್ಯನ ರಗಳೆಯಲ್ಲಿ ಪ್ರಸ್ತಾಪಿಸಲಾಗಿದೆ.
  •     ಸೌರಾಷ್ಟ್ರದಲ್ಲಿರುವ ಸೋಮನಾಥನಂತೆ ಮೂರ್ತಿಯನ್ನು ಮಾಡಿಸಿ ಇಲ್ಲಿ ಪ್ರತಿಷ್ಠಾಪಿಸಿದನೆಂದು ಹೇಳಲಾಗಿದೆ. ದೇವಾಲಯವು ಮೂಲತಃ ಜೈನ ಬಸದಿಯಾಗಿದ್ದು ಅದರಲ್ಲಿ ಶಿವನನ್ನು ಪ್ರತಿಷ್ಠಾಪಿಸುವ ಮೂಲಕ ಶಿವಾಲಯವಾಗಿದೆ. ದಂಡನಾಯಕ ನಾಗವರ್ಮಯ್ಯನು ಪುಲಿಗೆರೆಯ ೧೨೦ ಮಹಾಜನರಿಂದ ಭೂಮಿಯನ್ನು ಕೊಂಡು ಸೋಮೇಶ್ವರ ದೇವಾಲಯಕ್ಕೆ ದಾನ ಮಾಡಿದ ವಿವರಗಳಿವೆ. 
  •       ಕನ್ನಡ, ಸಂಸ್ಕೃತ ಭಾಷಾ ಪಂಡಿತನಾದ ಈತನ ಅಂಕಿತ ನಾಮ “ಹರಹರ ಶ್ರೀ ಚನ್ನಸೋಮೇಶ್ವರ” 
  •      ಕನ್ನಡದಲ್ಲಿ 'ರತ್ನಾಕರಂಡಕ' ಕಾವ್ಯವನ್ನು ಚಂಪೂವಿನಲ್ಲಿಯು, 'ಸೋಮೇಶ್ವರ ಶತಕ'ವನ್ನು ವೃತ್ತಛಂದಸ್ಸಿನಲ್ಲಿಯೂ ರಚಿಸಿದ್ದಾನೆ.
**********
ಶ್ರೀ ಸೋಮನಾಥ ದೇವಾಲಯ, ಲಕ್ಷ್ಮೇಶ್ವರ
ಕಲ್ಲುತಾ ಕರಗುತ್ತ. ಮಲ್ಲಿಗೆಯ ಹೂವಾಗಿ
ಚಲ್ಲುವರೆದಿಹುದು ಶಿಲ್ಪದಲಿ! ಪುಲಿಗೆರೆಯ
ನಲ್ಮೆಯ ಸೋಮನಾಥನಲಿ!

ಶಿಲೆಯಲ್ಲಿ ಅಡಗಿರುವ ಕಲೆಯನ್ನು ಅರಳಿಸುವ.
ಒಲುಮೆಯ ವಿದ್ಯೆ ಪಡೆದಂತೆ! ಸ್ಥಪತಿಗಳ
ನಿಲಯ ಫುಲಿಗೆರೆಯ ಮಂದಿರ ವು !

ಶರಣ ಆದಯ್ಯನ ವರಸೋಮದೇವನು
ಕರುಣೆಯ ತೋರಿ ಪುಲಿಗೆರೆಗೆ! ಬಂದುತಾ
ಚಿರವಾಗಿ ನೆಲೆಸಿ ನಿಂತಾನ!

ಶಾಸನ ಶಿಲ್ಪಗಳ ಕೋಶವು ಪುಲಿಗೆರೆ
ಲೇಸು ಆದಯ್ಯನ ನೆಲೆವೀಡು! ಸೋಮನಾಥ
ವಾಸ ಹೂಡಿದ ಚಲುನಾಡು! 

(ಕೃಪೆ: ಶಿವಾಮೃತ ಬ್ಲಾಗ್)
 *******

         ಸೌರಾಷ್ಟ್ರದ ಸೋಮನಾಥ: ಜೈನಕಾಶಿ ಎನಿಸಿದ್ದ ಇಲ್ಲಿ ಸೌರಾಷ್ಟ್ರದ ಸೋಮನಾಥೇಶ್ವರ ಪ್ರತಿಷ್ಠಾಪನೆಯಾದ ಬಗ್ಗೆ ಐತಿಹ್ಯವೊಂದಿದೆ.  ಅದು ಜೈನ ಹಾಗೂ ವೀರಶೈವ ಧರ್ಮದ ನಡುವಿನ ಘರ್ಷಣೆಯನ್ನು ಹೇಳುತ್ತದೆ.  ಸೌರಾಷ್ಟ್ರ ಪ್ರಾಂತ್ಯದ ಆದಯ್ಯ ಎಂಬ ಶಿವಭಕ್ತ ಇಲ್ಲಿಗೆ ಬಂದು ಜೈನಧರ್ಮದ ಪದ್ಮಾವತಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ.
          ಶಿವಭಕ್ತರಿಗಾಗಿ ಮಾಡಿದ ಪ್ರಸಾದವನ್ನು ಆಕೆಯ ತಾಯಿ ಜೈನಮುನಿಗಳಿಗೆ ಬಡಿಸಿದ್ದನ್ನು ಕೇಳಿ ಕಿಡಿಯಾಗಿ, ಸೌರಾಷ್ಟ್ರದ ಸೋಮನಾಥನನ್ನು ತರಲು ಹೋದ. ಅಲ್ಲದೇ ಇಲ್ಲಿ ಸೋಮನಾಥನನ್ನು ಪ್ರತಿಷ್ಠಾಪಿಸಿಯೇ ತೀರುವುದಾಗಿ ಪ್ರತಿಜ್ಞೆ ಮಾಡಿದ. ಹೀಗೆ ಹೊರಟ ಆತನಿಗೆ ದಾರಿಯಲ್ಲಿ ಶಿವ ಪ್ರತ್ಯಕ್ಷನಾಗಿ,  ತಾನೇ ಪುಲಿಗೆರೆಯ ಬಸದಿಗೆ ಬಂದು ನಿಲ್ಲುವುದಾಗಿ ಹೇಳುತ್ತಾನೆ. ಆ ಪ್ರಕಾರ ಆದಯ್ಯ ಬಂದು ನೋಡಿದಾಗ ಇಲ್ಲಿನ ಸುರಹೊನ್ನೆ ಬಸದಿಯಲ್ಲಿ ಸೋಮನಾಥೇಶ್ವರ ನಿಂತಿದ್ದನಂತೆ.
       ಸೋಮನಾಥೇಶ್ವರ ದೇವಾಲಯದಲ್ಲಿ ಗರ್ಭಗುಡಿ, ಅರ್ಧಮಂಟಪ, ನವರಂಗ, ಮುಖಮಂಟಪಗಳಿವೆ. ಮೇ ಕೊನೆ ವಾರದ 5 ದಿನಗಳ ಬೆಳಗಿನ ಸೂರ್ಯರಶ್ಮಿ ಈ ಎಲ್ಲ ಮಂಟಪ ದ್ವಾರಗಳನ್ನು ದಾಟಿ ಗರ್ಭಗುಡಿಯ ಶಿವಪಾರ್ವತಿಯರ ಮೇಲೆ ಬೀಳುತ್ತಿದ್ದು, ಅದನ್ನು ನೋಡಲು ಜನಸಾಗರವೇ ಸೇರಿರುತ್ತದೆ.
(ಕೃಪೆ: ಪ್ರಜಾವಾಣಿ ಸುದ್ಧಿ-15 Mar, 2016)

*********

ಸೋಮೇಶ್ವರ ಶತಕ ಪದ್ಯಭಾಗದ (ಭಾವಾರ್ಥ)

ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ |
ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು ||
ಶ್ರುತಿಮಾರ್ಗಂ ಬಿಡದಾತ ಸುವ್ರತಿ ಮಹಾ ಸದ್ವಿದ್ಯೆಯೇ ಪುಣ್ಯದಂ |
ಸುತನೇ ಸದ್ಗತಿದಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ || ೧ ||


ಭಾವಾರ್ಥ:- ಯಾರು ನಮ್ಮ ಹಿತವನ್ನು ಬಯಸುವನೋ ಅವನೇ ಆತ್ಮಬಂಧು(ನೆಂಟ). ಸಾಕಿ, ಸಲಹಿ  ಕಾಪಾಡುವವನೇ ತಂದೆ. ಧರ್ಮ ಮಾರ್ಗದಿಂದ ನಡೆದುಕೊಂಡು ಹೋಗುವ ಹೆಂಡತಿಯೇ ನಮ್ಮ ಎಲ್ಲಾ ಸುಖಕ್ಕೂ ಕಾರಣ, ಒಂದಕ್ಷವನ್ನು ಕಲಿಸಿದವನಾದರೂ ಅವನೂ ಗುರುವೇ. ವೇದಗಳನ್ನು ಬಿಡದೆ ಪಠಿಸುತ್ತಾ ಪಾಲನೆ ಮಾಡುವವನೇ ಮುನಿ. ಒಳ್ಳೆಯ ವಿದ್ಯೆಯೇ ಪುಣ್ಯಸಂಪಾದನೆಗೆ ದಾರಿ. ಒಳ್ಳೆಯ ಮಗನೇ ಸದ್ಗತಿಯನ್ನು ತಂದುಕೊಡುತ್ತಾನೆ ಎಂದು ಸೋಮನಾಥ ಹೇಳಿದ್ದಾನೆ.

ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ |
ನಿಜ ಮಂತ್ರೀಶ್ವರ ತಂದೆ ತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ ||
ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ |
ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀಚೆನ್ನಸೋಮೇಶ್ವರಾ || ೨ ||


ಭಾವಾರ್ಥ:- ಪ್ರಜೆಗಳನ್ನು ಪಾಲಿಸಬಲ್ಲವನೆ ನಿಜವಾದ ಅರಸ. ಲಂಚ ಆಮಿಷಗಳನ್ನು ಬಯಸದವನೇ ನಿಜವಾಗಿ ಒಳ್ಳೆಯ ಮಂತ್ರಿ. ತಂದೆ-ತಾಯಿಯನ್ನು ಸಲಹುವವನೇ ಧರ್ಮವಂತ, ಭಕ್ತಿಯಿಂದ ಪೂಜಿಸುವವನೇ ನಿಜಕವಾದ ಭಕ್ತ. ಧೈರ್ಯವಂತನೇ ನಿಜವಾದ ಭಟ. ಒಳ್ಳೆಯ ಆಚಾರವನ್ನು ಹೊಂದಿರುವವನೇ ದ್ವಿಜ(ಬ್ರಾಹ್ಮಣ) ಎಂದು ಸೋಮನಾಥ ಹೇಳಿದ್ದಾನೆ.

ಅತಿ ಗಂಭೀರನುದಾರ ಧೀರನು ಮಹಾ ಸಂಪನ್ನ ಸತ್ಯಾತ್ಮನೂ |
ರ್ಜಿತ ನಾನಾಲಿಪಿಭಾಷೆಯೊಳ್ ಪರಿಚಿತಂ ಲಂಚಕ್ಕೆ ಕೈನೀಡದಂ ||
ವ್ರತ ಸದ್ಧರ್ಮ ವಿಚಾರಶಾಲಿ ಚತುರೋಪಾಯಂಗಳಂ ಬಲ್ಲವಂ |
ಪತಿಕಾರ‍್ಯಂ ವರ ಮಂತ್ರಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ || ೩ ||


ಭಾವಾರ್ಥ:- ಸೋಮನಾಥನು ಒಳ್ಳೆಯ ಮಂತ್ರಿಯಲ್ಲಿರ ಬೇಕಾದ ಗುಣಗಳನ್ನು ಈ ಪದ್ಯಭಾಗದಲ್ಲಿ ಪಟ್ಟಿಮಾಡಿದ್ದಾನೆ. ಅತಿ ಗಂಭೀರನೂ ಉದಾರನೂ ಧೀರನೂ ಮಹಾ ಸಂಪನ್ನನೂ, ಸತ್ಯಾತ್ಮನೂ, ರೂಧಿಯಲ್ಲಿರುವ ಹಲವು ಲಿಪಿ-ಭಾಷೆಗಳನ್ನು ಬಲ್ಲವನೂ ಲಂಚಕ್ಕೆ ಕೈ ಚಾಚದವನೂ ವ್ರತವನ್ನು ಪಾಲಿಸುವವನೂ ಧರ್ಮಪರನೂ ವಿಚಾರವಂತನೂ ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳನ್ನು ಬಲ್ಲವನೂ ಒಡೆಯನ ಕಾರ್ಯದಲ್ಲಿ ನಿಷ್ಠೆ ಇರುವವನೂ ಆಗಿರುವವನೇ ನಿಜವಾಗಿ ಒಳ್ಳೆಯ ಮಂತ್ರಿ ಎಂದು ಸೋಮನಾಥ ಹೇಳಿದ್ದಾನೆ.

ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನೃಗ್ರೋಧಭೀಜಂ ಕೆಲಂ |
ಸಿಡಿದುಂ ಪೆರ್ಮರನಾಗದೇ ಎಳಗರುಂ ಎತ್ತಾಗದೇ ಲೋಕದೊಳ್ ||
ಮಿಡಿ ಪಣ್ಣಾಗದೆ ದೈವನೊಲ್ಮೆಯಿರಲಾ ಕಾಲಾನುಕಾಲಕ್ಕೆ ತಾಂ |
ಬಡವಂ ಬಲ್ಲಿದನಾಗನೇ ಹರಹರಾ ಶ್ರೀಚೆನ್ನಸೋಮೇಶ್ವರಾ || ೪ ||


ಭಾವಾರ್ಥ:- ಜೀವನದಲ್ಲಿ ಆಶಾವಾದಿಯಾಗಿರಬೇಕು. ಒಂದಲ್ಲಾ ಒಂದು ದಿನ ಒಳ್ಳೆಯದು ಆಗೇ ಆಗುತ್ತದೆ ಎಂಬುದನ್ನು ಇಲ್ಲಿ ಕವಿ ಪ್ರತಿಪಾದಿಸಿದ್ದಾನೆ.
    ಚಂದ್ರನು ಒಂದೇ ಸಮನಾಗಿರುವುದಿಲ್ಲ. ಕಳೆಗುಂದುತ್ತಾನೆ ಮತ್ತೆ ಹೆಚ್ಚಾಗುವುದಿಲ್ಲವೇ? ಆಲದ ಮರದ ಕೆಲವು ಬೀಜಗಳಾದರೂ ಸಿಡಿದು, ಭೂಮಿಯಲ್ಲಿ ಚಿಗುರಿ ಹೆಮ್ಮರವಾಗುವುದಿಲ್ಲವೇ? ಈ ಲೋಕದಲ್ಲಿ ಎಳೆಗರು ಬೆಳೆದು ಎತ್ತಾಗುವುದಿಲ್ಲವೇ? ಮಿಡಿ ಹಣ್ಣಾಗುವುದಿಲ್ಲವೇ? ದೇವರ ಕೃಪೆಯೊಂದಿದ್ದರೆ ಕಾಲಾಂತರದಲ್ಲಿ ಬಡವನು ಸಿರಿವಂತನಾಗುವುದಿಲ್ಲವೇ? ಎಂದು ಹೇಳುವ ಮೂಲಕ, ಜೀವನದಲ್ಲಿ ಯಾವುದೂ ನಿಶ್ಚಿತವಲ್ಲ. ಬದಲಾವಣೆ ಜಗದ ನಿಯಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.



***********






50 ಕಾಮೆಂಟ್‌ಗಳು:

  1. ಇದರ ಮಾಹಿತಿ ಹುಡುಕುತ್ತಿದ್ದೆ ಸಿಕ್ಕಿದ್ದು ತುಂಬಾ ಖುಷಿಯಾಯಿತು

    ಪ್ರತ್ಯುತ್ತರಅಳಿಸಿ
  2. ಓದಿ ತುಂಬಾ ಸಂತೋಷ ವಾಯಿತು.೧೯೯೯ರಲ್ಲಿ ಈ ಪದ್ಯಗಳನ್ನು ಪಠ್ಯವನ್ನಾಗಿ ನಿಗದಿ ಮಾಡಿದ್ದರು.

    ಪ್ರತ್ಯುತ್ತರಅಳಿಸಿ
  3. ಧನ್ಯವಾದಗಳು ಸರ್ ತುಂಬಾ ಸಂತೋಷವಾಯಿತು. ಸೋಮೇಶ್ವರ ಶತಕದ ಪೂಣ೵ ಪಿಡಿಎಫ್ ದಯವಿಟ್ಟು ಅಪ್ ಲೋಡ್ ಮಾಡಿ ಲಿಂಕ್ ಒದಗಿಸಿ
    ಇವೆಲ್ಲವೂ ಮುಂದಿನ ಪೀಳಿಗೆಗೆ ದೊರೆಯದ ಕುಸುಮಗಳು.

    ಪ್ರತ್ಯುತ್ತರಅಳಿಸಿ
  4. ತುಂಬಾ ಖುಷಿ ಆಯ್ತು ಪಿಯುಸಿ ಯಲ್ಲಿ ಓದಿದ್ಧು...

    ಪ್ರತ್ಯುತ್ತರಅಳಿಸಿ
  5. ನನಗೆ ಇಂದು ಸೋಮೇಶ್ವರ ಶತಕ ಎಂಬ ಪದ್ಯ ಭಾಗದ ವಿವರಣೆ ತಿಳಿಯಲಿಲ್ಲ ಇದರಿಂದ ಇದು ಇಂದು ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  6. Nanage someshwara shataka da Ella padyagalu bekagive ? Dayvittu pustaka dorekisikoduva sahaya maduvira?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ರವಿಕುಮಾರ್ Lv ಅವರು ನಮ್ಮ ಸಾದನಕೇರಿ whatsapp group ನಲ್ಲಿ ದಿನಕ್ಕೆ ಒಂದೊಂದು ಪದ್ಯದಂತೆ ಪ್ರಚುರಪಡಿಸುತ್ತಿದ್ದಾರೆ..you can join this group also... Link available in fb

      ಅಳಿಸಿ
    2. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೇವಲ 60 ರೂ,20% ಡಿಸ್ಕೌಂಟ್ ಗೆ ದೊರಕುತ್ತದೆ. ಕೊಂಡು ಓದಿ. ಬಹಳ ಚೆನ್ನಾಗಿ ಮುದ್ರಿಸಿದ್ದಾರೆ.

      ಅಳಿಸಿ
  7. ತುಂಬಾ ಉಪಯುಕ್ತವಾದ ಮಾಹಿತಿ.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  8. ನಾನು ಬಹುಶ್ಯಾ1975 ರಲ್ಲಿ ನಾಲ್ಕನೇ ತರಗತಿಯಲ್ಲಿ ಸೋಮೇಶ್ವರನ ಶತಕದ ಒಂದಷ್ಟು ಪದ್ಯ ಓದಿದ್ದು...ಅದು..ಭಜಕಂ ದೈವದಿ ಭಕ್ತಯುಳ್ಳವಡೇ ಭಟಂ ನಿರ್ಭೀತ ತಾನಾದವಂ...ಕಾಕಾಳಿಯೋ ಮೀಯದಂ....ಇರಬಹುದು. ದಯವಿಟ್ಟು ಸಾಧ್ಯವಾದರೆ ಪೂರ್ಣ ಪದ್ಯವನ್ನು ನನ್ನ ಮೇಲ್ಗೆ ಕಳಿಸಿ ಸರ್..

    ಪ್ರತ್ಯುತ್ತರಅಳಿಸಿ
  9. ಕನ್ನಡ ಸಾಹಿತ್ಯ ಪರಿಷತ್ ಕೇವಲ 50 ರೂಪಾಯಿಗೆ 100 ಪದ್ಯಗಳ ಅಥ೯ಸಹಿತ ಪುಸ್ತಕವನ್ನ ಹೊರತಂದಿದೆ.ಕೊಂಡು ಓದಿ. ಬಹಳ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  10. ಕನ್ನಡ ಸಾಹಿತ್ಯ ಪರಿಷತ್ ಕೇವಲ 50 ರೂಪಾಯಿಗೆ 100 ಪದ್ಯಗಳ ಅಥ೯ಸಹಿತ ಪುಸ್ತಕವನ್ನ ಹೊರತಂದಿದೆ.ಕೊಂಡು ಓದಿ. ಬಹಳ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  11. Manjunath Naikನವೆಂಬರ್ 11, 2019 ರಂದು 04:06 ಅಪರಾಹ್ನ ಸಮಯಕ್ಕೆ
    Chennagide

    ಪ್ರತ್ಯುತ್ತರ

    Unknownನವೆಂಬರ್ 18, 2019 ರಂದು 08:54 ಅಪರಾಹ್ನ ಸಮಯಕ್ಕೆ
    Thanks All poem's saramsha bidi

    ಪ್ರತ್ಯುತ್ತರ

    Unknownನವೆಂಬರ್ 18, 2019 ರಂದು 08:54 ಅಪರಾಹ್ನ ಸಮಯಕ್ಕೆ
    Thanks All poem's saramsha bidi

    ಪ್ರತ್ಯುತ್ತರ

    Unknownನವೆಂಬರ್ 25, 2019 ರಂದು 06:07 ಅಪರಾಹ್ನ ಸಮಯಕ್ಕೆ
    ತುಂಬಾ ಒಳ್ಳೆಯ ವಚನ

    ಪ್ರತ್ಯುತ್ತರ

    Unknownನವೆಂಬರ್ 26, 2019 ರಂದು 02:27 ಅಪರಾಹ್ನ ಸಮಯಕ್ಕೆ
    ಧನ್ಯವಾದಗಳು ಸರ್

    ಪ್ರತ್ಯುತ್ತರ

    Unknownಡಿಸೆಂಬರ್ 6, 2019 ರಂದು 12:11 ಅಪರಾಹ್ನ ಸಮಯಕ್ಕೆ
    ತುಂಬಾ ಉಪಯುಕ್ತವಾದ ಮಾಹಿತಿ.
    ಧನ್ಯವಾದಗಳು.

    ಪ್ರತ್ಯುತ್ತರ

    Unknownಡಿಸೆಂಬರ್ 8, 2019 ರಂದು 06:29 ಅಪರಾಹ್ನ ಸಮಯಕ್ಕೆ
    ಧನ್ಯವಾದಗಳು

    ಪ್ರತ್ಯುತ್ತರ

    Unknownಡಿಸೆಂಬರ್ 18, 2019 ರಂದು 06:05 ಅಪರಾಹ್ನ ಸಮಯಕ್ಕೆ
    ಥಾಂಕ್ಸ್

    ಪ್ರತ್ಯುತ್ತರ

    Khaja bandenawazಜನವರಿ 1, 2020 ರಂದು 06:57 ಅಪರಾಹ್ನ ಸಮಯಕ್ಕೆ
    Thanks

    ಪ್ರತ್ಯುತ್ತರ

    Geeta reddyಜನವರಿ 7, 2020 ರಂದು 09:23 ಅಪರಾಹ್ನ ಸಮಯಕ್ಕೆ
    Super sir tq. Its very useful sir

    ಪ್ರತ್ಯುತ್ತರ

    Unknownಜನವರಿ 18, 2020 ರಂದು 05:42 ಪೂರ್ವಾಹ್ನ ಸಮಯಕ್ಕೆ
    ನಾನು ಬಹುಶ್ಯಾ1975 ರಲ್ಲಿ ನಾಲ್ಕನೇ ತರಗತಿಯಲ್ಲಿ ಸೋಮೇಶ್ವರನ ಶತಕದ ಒಂದಷ್ಟು ಪದ್ಯ ಓದಿದ್ದು...ಅದು..ಭಜಕಂ ದೈವದಿ ಭಕ್ತಯುಳ್ಳವಡೇ ಭಟಂ ನಿರ್ಭೀತ ತಾನಾದವಂ...ಕಾಕಾಳಿಯೋ ಮೀಯದಂ....ಇರಬಹುದು. ದಯವಿಟ್ಟು ಸಾಧ್ಯವಾದರೆ ಪೂರ್ಣ ಪದ್ಯವನ್ನು ನನ್ನ ಮೇಲ್ಗೆ ಕಳಿಸಿ ಸರ್..

    ಪ್ರತ್ಯುತ್ತರ

    Unknownಜನವರಿ 18, 2020 ರಂದು 06:04 ಪೂರ್ವಾಹ್ನ ಸಮಯಕ್ಕೆ
    ನನ್ನ ಮೇಲ್ ID-smubarakmlp@gmail.com

    ಪ್ರತ್ಯುತ್ತರ

    Unknownಫೆಬ್ರವರಿ 26, 2020 ರಂದು 06:55 ಪೂರ್ವಾಹ್ನ ಸಮಯಕ್ಕೆ
    Thank you soooooooo much

    ಪ್ರತ್ಯುತ್ತರ

    Unknownಫೆಬ್ರವರಿ 26, 2020 ರಂದು 06:56 ಪೂರ್ವಾಹ್ನ ಸಮಯಕ್ಕೆ
    Sir it is so full for me sir

    ಪ್ರತ್ಯುತ್ತರ

    Unknownಮಾರ್ಚ್ 7, 2020 ರಂದು 07:07 ಪೂರ್ವಾಹ್ನ ಸಮಯಕ್ಕೆ
    The summary was very easy Thank you very much

    ಪ್ರತ್ಯುತ್ತರ

    Kousalyaಜೂನ್ 11, 2020 ರಂದು 12:11 ಪೂರ್ವಾಹ್ನ ಸಮಯಕ್ಕೆ
    Someshwara shataka yava sahithya paddathige seriddu?

    ಪ್ರತ್ಯುತ್ತರ
    ಪ್ರತ್ಯುತ್ತರಗಳು

    ಬಿ.ಕೆ.ಜಯರಾಂ B.K.Jayaram Sakharayapatna.ಜನವರಿ 17, 2021 ರಂದು 05:01 ಪೂರ್ವಾಹ್ನ ಸಮಯಕ್ಕೆ
    ಇದೊಂದು ನೀತಿ ಶತಕ.ವೃತ್ತಛಂದಸ್ಸಿನಲ್ಲಿ ರಚಿತವಾಗಿದೆ.


    Unknownಫೆಬ್ರವರಿ 10, 2021 ರಂದು 06:27 ಅಪರಾಹ್ನ ಸಮಯಕ್ಕೆ
    Thank you 😊😊


    Unknownಮಾರ್ಚ್ 8, 2021 ರಂದು 07:41 ಪೂರ್ವಾಹ್ನ ಸಮಯಕ್ಕೆ
    ಧನ್ಯವಾದಗಳು

    ಪ್ರತ್ಯುತ್ತರ

    ಬಿ.ಕೆ.ಜಯರಾಂ B.K.Jayaram Sakharayapatna.ಜನವರಿ 17, 2021 ರಂದು 04:57 ಪೂರ್ವಾಹ್ನ ಸಮಯಕ್ಕೆ
    ಕನ್ನಡ ಸಾಹಿತ್ಯ ಪರಿಷತ್ ಕೇವಲ 50 ರೂಪಾಯಿಗೆ 100 ಪದ್ಯಗಳ ಅಥ೯ಸಹಿತ ಪುಸ್ತಕವನ್ನ ಹೊರತಂದಿದೆ.ಕೊಂಡು ಓದಿ. ಬಹಳ ಚೆನ್ನಾಗಿದೆ.

    ಪ್ರತ್ಯುತ್ತರ

    ಬಿ.ಕೆ.ಜಯರಾಂ B.K.Jayaram Sakharayapatna.ಜನವರಿ 17, 2021 ರಂದು 04:57 ಪೂರ್ವಾಹ್ನ ಸಮಯಕ್ಕೆ
    ಕನ್ನಡ ಸಾಹಿತ್ಯ ಪರಿಷತ್ ಕೇವಲ 50 ರೂಪಾಯಿಗೆ 100 ಪದ್ಯಗಳ ಅಥ೯ಸಹಿತ ಪುಸ್ತಕವನ್ನ ಹೊರತಂದಿದೆ.ಕೊಂಡು ಓದಿ. ಬಹಳ ಚೆನ್ನಾಗಿದೆ.

    ಪ್ರತ್ಯುತ್ತರ

    Nagappa Halekoteಫೆಬ್ರವರಿ 20, 2021 ರಂದು 12:15 ಅಪರಾಹ್ನ ಸಮಯಕ್ಕೆ
    ತುಂಬು ಹೃದಯದ ಧನ್ಯವಾದಗಳು ಸರ್

    ಪ್ರತ್ಯುತ್ತರ

    H Sridharaಮೇ 1, 2021 ರಂದು 07:25 ಪೂರ್ವಾಹ್ನ ಸಮಯಕ್ಕೆ
    ಎಲ್ಲಾ ಶತಕಗಳನ್ನು ಪೋಸ್ಟ್ ಮಾಡಿ

    ಪ್ರತ್ಯುತ್ತರ

    Unknownಸೆಪ್ಟೆಂಬರ್ 5, 2021 ರಂದು 04:04 ಅಪರಾಹ್ನ ಸಮಯಕ್ಕೆ
    ತುಂಬಾ ಧನ್ಯವಾದ

    ಪ್ರತ್ಯುತ್ತರ

    ಪ್ರತ್ಯುತ್ತರಅಳಿಸಿ
  12. ಇದರ ಮಾಹಿತಿ ಹುಡುಕುತ್ತಿದ್ದೆ ಸಿಕ್ಕಿದ್ದು ತುಂಬಾ ಖುಷಿಯಾಯಿತು

    ಪ್ರತ್ಯುತ್ತರ

    ಪ್ರತ್ಯುತ್ತರಅಳಿಸಿ
  13. Information available about all aadayya sharanas vachans

    ಪ್ರತ್ಯುತ್ತರಅಳಿಸಿ
  14. ಸರ್ ಅವರು ಪ್ರಾತಿಪದೀಸುವ ನೈತಿಕ ಮೌಲ್ಯಗಳನೂ ಕಳುಹಿಸಿ‌ ಸರ್

    ಪ್ರತ್ಯುತ್ತರಅಳಿಸಿ
  15. ಬಹಳ ಅರ್ಥಗರ್ಭಿತವಾದ ಪದ್ಯ ಇಂದಿಗೂ (723 ವರ್ಷಗಳ ಬಳಿಕವೂ) ಪ್ರಸ್ತುತ. ಈ ಮಹಾಕವಿ ಸೋಮನಾಥರಿಗೊಂದು ದೀರ್ಘದಂಡ ನಮಸ್ಕಾರ🙏🙏💐

    ಪ್ರತ್ಯುತ್ತರಅಳಿಸಿ
  16. ನೈತಿಕ ವೌಲ್ಯಗಳನು ಕಳುಹಿಸಿ

    ಪ್ರತ್ಯುತ್ತರಅಳಿಸಿ
  17. ಚೆನಾಗಿದೆ


    ಸೂಪರ್

    🙏🙏🙏🙏🙏🙏🙏🙏🙏🙏🙏👍🏻👍🏻👍🏻👍🏻👍🏻

    🙏👍🏻🙏🙏🙏🙏🙏👍🏻

    ಪ್ರತ್ಯುತ್ತರಅಳಿಸಿ