ನನ್ನ ಪುಟಗಳು

11 ಆಗಸ್ಟ್ 2014

ಜೀವನದೃಷ್ಟಿ ಗದ್ಯಪಾಠ-3, 10ನೇ ತರಗತಿ ಕನ್ನಡ (Jeevanadrushti 10th Kannada lesson)ಜೀವನದೃಷ್ಟಿ ಗದ್ಯಪಾಠ-3, 10ನೇ ತರಗತಿ ಕನ್ನಡ
     ಇಲ್ಲಿ ಡೌನ್ಲೋಡ್ ಮಾಡಿ 
ಡಾ. ವಿ.ಕೃ. ಗೋಕಾಕ್
ಜನನ: ೧೦--೧೯೦೯
ನಿಧನ: ೨೮--೧೯೯೨
       ಕನ್ನಡ ಸಾಹಿತ್ಯದಲ್ಲಿ ನವ್ಯ ಕಾವ್ಯ ಪ್ರವರ್ತಕರೆಂದೇ ಪ್ರಸಿದ್ಧರಾಗಿದ್ದ ವಿನಾಯಕ ಕೃಷ್ಣ ಗೋಕಾಕರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ. ತಂದೆ ಕೃಷ್ಣಗೋಕಾಕ, ತಾಯಿ ಸುಂದರಮ್ಮ. ಪ್ರಾರಂಭಿಕ ಶಿಕ್ಷಣ ಸವಣೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.. ಪದವಿ. ೧೯೩೬ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್ಗೆ ಪಯಣ.
ಭಾರತಕ್ಕೆ ಹಿಂದಿರುಗಿದ ನಂತರ ೧೯೪೦ರಲ್ಲಿ ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ, ೧೯೪೬ರಲ್ಲಿ ಗುಜರಾತಿನ ವೀಸನಗರ, ೧೯೪೯ರಲ್ಲಿ ಕೊಲ್ಹಾಪುರದ ರಾಜಾರಾಮ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ, ೧೯೫೨ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪ್ರಾಚಾರ್ಯರ ಹುದ್ದೆ ವಹಿಸಿಕೊಂಡರು. ನಂತರ ೧೯೫೯ರಲ್ಲಿ ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಸಂಸ್ಥೆಯ ನಿರ್ದೇಶಕರಾಗಿ ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ೧೯೭೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷರಾಗಿ, ೧೯೮೩ರಲ್ಲಿ ಅಧ್ಯಕ್ಷರಾಗಿ, ೧೯೮೫ರಲ್ಲಿ ಪುಟಪರ್ತಿ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸಲ್ಲಿಸಿದ ಸೇವೆ.
     ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಪ್ರಾರಂಭ. ಮೊದಲ ಕವನ ಸಂಕಲನ THE SKY LINE ೧೯೨೫ರಲ್ಲಿ ಸಿದ್ಧ. ‘ಕಲೋಪಾಸಕಕನ್ನಡದ ಮೊದಲ ಕವನ ಸಂಕಲನ ೧೯೩೪ರಲ್ಲಿ ಪ್ರಕಟಿತ. ನಂತರ ಪಯಣ, ಸಮುದ್ರ ಗೀತೆಗಳು, ತ್ರಿವಿಕ್ರಮರ ಆಕಾಶಗಂಗೆ, ಬಾಳದೇಗುಲದಲ್ಲಿ, ದ್ಯಾವಾಪೃಥಿವಿ, ಕಾಶ್ಮೀರ, ಭಾವರಾಗ, ಪಾರಿಜಾತದಡಿಯಲ್ಲಿ ಮುಂತಾದುವು. ನಾಟಕಗಳು- ಜನನಾಯಕ, ಯುಗಾಂತರ. ಪ್ರಬಂಧ ಸಂಕಲನ-ಜೀವನಪಾಠ, ಚೆಲುವಿನ ನಿಲವು. ಪ್ರವಾಸ ಸಾಹಿತ್ಯ-ಸಮುದ್ರದಾಚೆಯಿಂದ, ಸಮುದ್ರದೀಚೆಯಿಂದ. ವಿಮರ್ಶೆ-ಕವಿಕಾವ್ಯ ಮಹೋನ್ನತಿ, ನವ್ಯತೆ ಹಾಗೂ ಕಾವ್ಯ ಜೀವನ, ಕಾವ್ಯಮೀಮಾಂಸೆ, ನವ್ಯತೆ. ಇಂಗ್ಲಿಷ್ನಲ್ಲಿ-ದಿ ಸಾಂಗ್ ಆಫ್ ಲೈಫ್ ಅಂಡ್ ಪೊಯಮ್, ದಿ ಪೊಯೆಟಿಕ್ ಅಪ್ರೋಚ್ ಟು ಲ್ಯಾಂಗ್ವೇಜ್, ಇಂಗ್ಲಿಷ್ ಇನ್ ಇಂಡಿಯಾ : ಇಟ್ಸ್ ಪ್ರೆಸೆಂಟ್ ಅಂಡ್ ಫ್ಯೂಚರ್, ಇನ್ ಲೈಫ್ಸ್ ಟೆಂಪಲ್, ಎಸ್ಸೆಸ್ ಇನ್ ಇಂಡೋ ಆಂಗ್ಲಿಯನ್ ಲಿಟರೇಚರ್ ಮುಂತಾದುವು ಸೇರಿ ೭೫ ಕೃತಿಗಳ ರಚನೆ. ಭಾರತ ಸಿಂಧುರಶ್ಮಿ ಮಹಾಕಾವ್ಯ. ಸಮರಸವೇ ಜೀವನ ಬೃಹತ್ಕಾದಂಬರಿ.
     ಸಂದ ಗೌರವ ಪ್ರಶಸ್ತಿಗಳು ಹೇರಳ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಿಂದ ಹಿಡಿದು ಹಲವಾರು ಸಮ್ಮೇಳನ, ಗೋಷ್ಠಿಗಳ ಅಧ್ಯಕ್ಷತೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜಾಜಿ ಪ್ರಶಸ್ತಿ, ಕೇಂದ್ರ ಸರಕಾರದ ಪದ್ಮಶ್ರೀ, ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಪೆಸಿಫಿಕ್, ವಿ.ವಿ. ಗೌರವ ಡಾಕ್ಟರೇಟ್.
INDIAN RESPONSE TO POETRY IN ENGLISH ಸೇರಿದಂತೆ ಹಿತೈಷಿಗಳು ಅರ್ಪಿಸಿದ್ದು ಇಂಗ್ಲಿಷ್ನಲ್ಲಿ , ಕನ್ನಡದಲ್ಲಿ ೨೧ ಗೌರವ ಗ್ರಂಥಗಳು.

ಜೀವನ ದೃಷ್ಟಿ ಸರಳ ವಿಮರ್ಶೆ  [ಕೃಪೆ-ಪ್ರತೀಕ್ಷಾ ಬ್ಲಾಗ್]


ಮನುಷ್ಯ ಸಮಾಜಜೀವಿ. ಸಮಾಜದಲ್ಲಿ ಜೀವಿಸುವಾಗ ಕೇವಲ ತನಗಾಗಿ ಜೀವಿಸದೆ ಕೆಲವೊಮ್ಮೆ ತನ್ನವರಿಗಾಗಿಯೂ ಇನ್ನೂ ಕೆಲವೊಮ್ಮೆ ಬೇರೆಯವರಿಗಾಗಿಯೂ ಬದುಕುವುದು, ಆಲೋಚಿಸುವುದು ಅನಿವಾರ್ಯ ಹೇಗೋ ಅಗತ್ಯ ಕೂಡ. ಸಮಾಜದಲ್ಲಿ ಜೀವಿಸುವಾಗ ಪ್ರತಿಯೊಬ್ಬನೂ ಇಲ್ಲಿ ಇರುವುದು ತಾನೊಬ್ಬನೇ ಅಲ್ಲ, ನನ್ನ ಸುತ್ತ ಸಮಾಜದ ಸದಸ್ಯರಿದ್ದಾರೆ ಎನ್ನುವುದನ್ನು ಮನಗಂಡಿರಬೇಕು. ಮನಗಂಡಿರುತ್ತಾನೆ ಕೂಡ. ಹಾಗಾಗಿ ಅವನ ಆಲೋಚನೆಗಳು, ವರ್ತನೆಗಳು ಅವನ ಸುತ್ತ ಅಥವಾ ಅವನಿಗೆ ಮಾತ್ರ ಕೇಂದ್ರೀಕೃತವಾಗಿರದೇ ಬೇರೆಯವರಿಗಾಗಿಯೂ ರೂಪಿಸಲ್ಪಡುತ್ತವೆ. ಸಮಾಜ ತನ್ನನ್ನು ಗಮನಿಸುತ್ತಿದೆ ಎಂದಾಗ ಸಮಾಜಕ್ಕೋಸ್ಕರವೇ ಕೆಲವೊಮ್ಮೆ ನಮ್ಮ ನಡುವಳಿಕೆಗಳು ವ್ಯಕ್ತಿತ್ವ ನಿರ್ದೇಶಿಸಲ್ಪಡುತ್ತವೆ. ಎಲ್ಲ ದೃಷ್ಟಿಯಿಂದ ಅವಲೋಕಿಸಿದಾಗ ನಮ್ಮ ಜೀವನದಲ್ಲಿ ನಮ್ಮ ಕುರಿತಾದ ಅನ್ಯರ ದೃಷ್ಟಿಕೋನ ಪ್ರಧಾನ ಪಾತ್ರವಹಿಸುತ್ತದೆ. ಹಾಗೆಯೇ ಅನ್ಯರಿಗೂ..
 ಅಂತರ್ಜೀವಿಯು ಮೊದಲಿಗೆ ತನ್ನನ್ನು ತಾನು ಪರಿಪೂರ್ಣಗೊಳಿಸಿಕೊಳ್ಳಬಯಸುವುದರಿಂದ ಅವನ ವಿಚಾರವು ಕೆಲವೊಮ್ಮೆ ಅವನ ಸುತ್ತಲೇ ಸುತ್ತುತ್ತಿರುತ್ತದೆ. ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲೇ, ತನ್ನ ದೋಷವನ್ನು ಗುರುತಿಸಿ ಅದನ್ನು ಸರಿಪಡಿಸಿಕೊಳ್ಳವುದರಲ್ಲೇ ಅವನ ಜೀವನದ ಸಮಯ ಕಳೆದು ಹೋಗುತ್ತಿರುತ್ತದೆ. ಅದರಲ್ಲೆ ಅವನ ಶಕ್ತಿ ವ್ಯಯವಾಗುತ್ತಿರುತ್ತದೆ. ಏಕೆಂದರೆ ಅಂತರಂಗದ ಭವ್ಯತೆಯ ಸಾಧನೆ ಅವನ ಗುರಿ. ಅದರ ಸಂತೃಪ್ತಿಯ ತುಡಿತ ಅವನಲ್ಲಿ ಮುಖ್ಯವಾಗಿರುತ್ತದೆ. ಹಾಗಾಗಿ ಇತರರ ಬಗ್ಗೆ ಪ್ರೀತಿ ಇದ್ದರೂ, ಅವನು ಪರಾಂತಃಕರಣಪ್ರವೇಶಿಯಾಗಿ ಅವರ ಭಾವನೆಗಳು, ಆಸೆಗಳು, ದುಗುಡ ದುಮ್ಮಾನಗಳು ಅರ್ಥೈಸಿಕೊಂಡರೂ ಅದನ್ನು ಬಗೆಹರಿಸಲು ಅವನಿಗೆ ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ತನ್ನ ಯೋಗಕ್ಷೇಮವನ್ನೂ ಕೂಡ ಅವನು ದೇವರ ಮೇಲೆ ಹೊರಿಸಲಾರ. ರೀತಿಯಾಗಿ ತನ್ನ ಗುಂಗಿನಲ್ಲಿಯೇ ಇರುವ ಅವನಿಗೆ ಪರರ ಹಂಗಿಲ್ಲ.
 ಹಿರಿಯ ಸಾಹಿತಿಯೊಬ್ಬರು ಹೇಳುವ ಹಾಗೆ ಕಲೋಪಾಸಕನಲ್ಲಿ ಸಮಾಜದ ಕಲ್ಯಾಣವನ್ನು ಪೋಷಿಸುವ ಶಕ್ತಿ ಇದೆ. ಸಮಾಜದಲ್ಲಿ ಅವನಿಗೆ ಇನ್ನು ಯಾವುದೇ ಹೊಣೆ ಹೊರಿಸಬಾರದು. ಬದಲಾಗಿ ಅವನನ್ನು ಸಮಾಜವೇ ಪೋಷಿಸಬೇಕು. ಆದರೆ ಕಲೋಪಾಸಕನೂ ಸಮಾಜದ ಘಟಕ. ಸಮಾಜಕ್ಕೆ ಅವನು ಸಲ್ಲಿಸಬೇಕಾದ ಜವಾಬ್ದಾರಿಯಿದೆ. ಕಲಾಸೇವೆಯನ್ನು ಮಾಡಿದ ಮಾತ್ರಕ್ಕೆ ಅವನು ತನ್ನವರಿಗಾಗಲಿ ಅಥವಾ ಸಮಾಜಕ್ಕೇ ಆಗಲಿ ಸಲ್ಲಿಸಬೇಕಾದ ಸೇವೆಯಿಂದ ಮುಕ್ತನಾಗುವುದು ಸರಿಯೇ? ಅವನ ವ್ಯಕ್ತಿತ್ವ ವಿಕಾಸವಾಗುವುದು ಸಮಾಜದಿಂದಲೇ ಆಗಿರುವುದರಿಂದ ತನಗೆ ಸಂಬಂಧಿಸಿದ ವ್ಯಕ್ತಿಗಳ ಅಥವಾ ಸಮಾಜದ ಅಂತಃಕರಣವನ್ನು ಅರಿತು ಅವರಿಗೆ ನೋವಾಗದಂತೆ, ತನ್ನ ವ್ಯಕ್ತಿತ್ವ ವಿಕಸನಕ್ಕೆ ಕಾರಣರಾದವರಿಗೆ ತನ್ನಿಂದಾದ ಸಹಾಯ ಸಲ್ಲಿಸುವುದು ಅವನ ಕರ್ತವ್ಯವೇ ಆಗಿದೆ.
 ಧರ್ಮಗಳಲ್ಲಿ ಸೂಚಿಸಿದ ಹಾಗೆ ಅಂತರ್ಜೀವಿಗಳನ್ನು, ಸಾಧಕರನ್ನು ಸಮಾಜವೇ ಸಲಹಬೇಕು. ಪೋಷಿಸಬೇಕು. ಹಿಂದೆ ರಾಜಾಶ್ರಯವಿದ್ದಂತೆ ಇಂದು ಧರ್ಮಶಾಲೆಗಳು, ಮಠಗಳು, ಅನ್ನಛತ್ರಗಳು ಸಾಧಕರನ್ನು ಕಲಾವಿದರನ್ನು ಪೋಷಿಸುವ ಕಾರ್ಯವನ್ನು ಮಾಡುತ್ತಿವೆ. ಆದರೆ ಸಮಾಜದಿಂದ ಉಪಕೃತನಾದ ಸಾಧಕನಿಗೂ ಅವನದೇ ಆದ ಕರ್ತವ್ಯವಿದೆ. ಅವನು ಇನ್ನೊಬ್ಬರಿಗೆ ಹೊರೆಯಾಗಬಾರದಲ್ಲವೇ? ತಾನಾಗಿಯೇ ಇನ್ನೊಬ್ಬರಿಂದ ಏನನ್ನೂ ತೆಗೆದು ಕೊಳ್ಳಬಾರದು. ಬಯಸಬಾರದು. ದಾನ ಕೊಡುತ್ತಿರುವವರ ಅಂತರಂಗ ಪರೀಕ್ಷಿಸಿ ತೆಗೆದು ಕೊಳ್ಳಬೇಕು. ಬೇರೆಯವರ ಮೇಲೆ ಅವಲಂಬಿತವಾದ ಸಾಧನೆ, ಬದುಕು 'ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ' ಆಶ್ರಯ ತಪ್ಪಿದಾಗ ನೆಲ ಕಚ್ಚಬಹುದು..
 ಹಿಂದೆ ಅಂತರ್ಜೀವಿಗಳು ಸಮಾಜದಿಂದ, ಕುಟುಂಬದಿಂದ (ಉದಾಹರಣೆಗೆ ಬುದ್ಧ) ಪ್ರತ್ಯೇಕವಾಗಿ ಜೀವಿಸಿದಂತೆ ಇಂದಿನ ದಿನಗಳಲ್ಲಿ ಸಾಧಕರಿಗೆ ಪ್ರತ್ಯೇಕವಾಗಿ (ಬೇರೆಯಾಗಿ) ಬದುಕು ಕುವುದು ಸಾಧ್ಯವಿಲ್ಲ. ಅವನು ಸಮಾಜದ ಮಧ್ಯೆಯೇ ಬದುಕಬೇಕು. ಜೀವನ ನಿರ್ವಹಣೆಗಾಗಿ ಪ್ರವೃತ್ತಿಯೊಂದೇ ಸಾಲದು ಅವನಿಗೆ ವೃತ್ತಿಯೂ ಬೇಕು. ಯೋಗಸ್ಥನಾಗಿರುವುದರ ಜೊತೆ ಗೃಹಸ್ಥನೂ ಆಗಿಯೆ ಬದುಕುವ ಅನಿವಾರ್ಯತೆ ಇದೆ. ಗೃಹಸ್ಥಾಶ್ರಮವು ಧನ್ಯವೆಂದು ಕಾಳಿದಾಸನೂ ಸ್ವತಃ ಹೇಳದಿದ್ದರೂ ಅವನಿಂದ ಸೃಷ್ಟಿಸಲ್ಪಟ್ಟ ಆರಣ್ಯಕನೆಂಬ ಋಷಿ ಈ ಮಾತನ್ನು ಹೇಳಿದ್ದಾನೆ. ದೂರದ ಬೆಟ್ತ ಕಣ್ಣಿಗೆ ನುಣ್ಣಗೆ ಎನ್ನುವಂತೆ ಗೃಹಸ್ಥಾಶ್ರಮದ ಅನುಭವವೇ ಇಲ್ಲದ ಆರಣ್ಯಕರಿಗೆ ಗೃಹಸ್ಥಾಶ್ರಮದ ಸಾಧಕ ಬಾಧಕಗಳು ಅರ್ಥವಾಗುವುದು ಹೇಗೆ ಸಾಧ್ಯ?
 ಹಾಗೆ ನೋಡಿದರೆ ಗೃಹಸ್ಥಾಶ್ರಮದಿಂದ ಧನ್ಯತೆ ಸಾಧ್ಯ. ಗೃಹಸ್ಥಾಶ್ರಮದಲ್ಲಿದ್ದು ಕೊಂಡೇ ಕಾರ್ಯಮಾಡುವ ಸಾಧಕನಿಗೆ ಅವನ ಸಾಧನೆಯನ್ನು ಪುನಃ ಪರೀಕ್ಷಿಸುವ, ವಿಮರ್ಶಿಸುವ ರತ್ನರಸಿಕರು (ವಿಮರ್ಶಕರು, ಪರೀಕ್ಷಕರು) ಸುತ್ತ ಇದ್ದೇ ಇರುತ್ತಾರೆ. ಹೆಜ್ಜೆ ಹೆಜ್ಜೆಗೂ ಅವನ ಪರೀಕ್ಷೆಯಾಗುವುದರಿಂದ ಅವನು ಯೋಚಿಸಿ ಹೆಜ್ಜೆಯಿಡಬೇಕಾಗುತ್ತದೆ. ಇಲ್ಲವಾದಲ್ಲಿ ತಪ್ಪಡಿಯಿಟ್ಟರೂ ದಂಡ, ಕೆಲವೊಮ್ಮೆ ತಪ್ಪಿಲ್ಲದೆಯೂ ದಂಡ ತೆರಬೇಕಿರುವ ಸಾಧ್ಯತೆಯಿದೆ. ಹಾಗಾಗಿ ಏನನ್ನು ಮಾಡಬೇಕಿದ್ದರೂ ಯೋಚಿಸಿಯೇ ಮಾಡಬೇಕಾದ ಅನಿವಾರ್ಯತೆ ಇದೆ. ಇದು ಅವನ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲ ಕೂಡ.
ಪರೋಪಕಾರಾರ್ಥಂ ಇದಂ ಶರೀರಂ ಎನ್ನುವಂತೆ. ಅನ್ಯರ ಹಿತಚಿಂತನೆ ಪರಮಾತ್ಮನ ಉಪಾಸನೆಯ ಒಂದು ಭಾಗ. ತನ್ನಂತೆ ಪರರು ಎಂದು ಬಗೆದ ಮಾತ್ರಕ್ಕೆ ಆ ಮಟ್ಟದ ಉದಾರತೆಯಿಂದ ಮಾತ್ರವೇ ಬದುಕಲು ಸಾಧ್ಯವಿದೆಯೇ? ಮನುಷ್ಯನಲ್ಲಿ ತನ್ನನ್ನು ರೂಪಿಸಿಕೊಳ್ಳುವ, ಬೆಳೆಸಿಕೊಳ್ಳುವ ಮತ್ತು ಬದುಕಲು ಅತೀ ಅವಶ್ಯವಾಗಿ ಬೇಕಿರುವ ವ್ಯವಹಾರ ಕುಶಲತೆಯೂ ಬೇಕಲ್ಲವೇ? ಸಮಾಜದ ಪುನರ್ಘಟನೆಗೆ ಪರಿಶ್ರಮ ಮತ್ತು ಭಕ್ತಿ (ಸಮತಾವಾದ ಮತ್ತು ಆಧ್ಯಾತ್ಮವಾದ) ಹೇಗೆ ಅವಶ್ಯವೋ ಹಾಗೆಯೆ ಸಾಧಕನಲ್ಲೆ ಆಗಲಿ ಸಾಮಾನ್ಯನಲ್ಲೆ ಆಗಲಿ ಸ್ವಹಿತ ಮತ್ತು ಪರಹಿತ ಈ ಎರಡರ ಅಗತ್ಯವೂ ಇದೆ. 'ಶಕ್ತಿಯೇ ಜೀವನ; ಸತ್ವವೇ ಜೀವನ'. ಆದರೆ ಇದು ಅಹಂ ಆಗಿ ಪರಿಣಮಿಸಬಾರದು. ಅದರ ಸೂಕ್ಷ್ಮತೆ ವಿಶಾಲತೆಗಳ ಅರಿವು ನಮಗೆ ಬೇಕು. ಸಮರಸವೇ ಸಹ ಜೀವನ. ಜೀವನದ ರಥ ಸರಾಗವಾಗಿ ಸಾಗಲು ಕೇವಲ ನಮ್ಮ ಅನುಭವಗಳಷ್ಟೇ ಸಾಲದು. ಸಹಾನುಭೂತಿಯೂ ಬೇಕು. ಪರಸ್ಪರ ಸಹಕಾರ, ಹೊಂದಾಣಿಕೆ ಪ್ರೀತಿ, ಕರುಣೆ ಈ ಎಲ್ಲವುಗಳ ಅಗತ್ಯತೆ ಇದೆ.
ಪರರ ಅನುಭವವಗಳನ್ನು ನಮ್ಮ ಅನುಭವಗಳೊಂದಿಗೆ ಹೊಂದಿಸಿಕೊಂಡು ಬಾಳಲು ಎರಡು ಚಿಂತನೆಗಳು ಅಗತ್ಯ. ಒಂದು ತನ್ನಿಂದ ಬೇರೆಯವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು. (ನಿರುಪದ್ರವಿಯಾಗಿರುವುದು) ಎರಡನೆಯದು ಸಾಧ್ಯವಾದಷ್ಟೂ ಸಂದರ್ಭಗಳಲ್ಲಿ ಅನ್ಯರಿಗೆ ಉಪಕಾರಿಯಾಗಿರಬೇಕು ಎಂಬ ಮನೋಭಾವ ಹೊಂದುವುದು. ಆದ್ದರಿಂದಲೇ ದೇವರು ಈ ಎರಡೂ ವಿಚಾರಗಳನ್ನೂ ಮಾನವನಿಗೆ ನೀಡಿ ಅವನ ಆಂತರಿಕ ವಿಕಾಸಕ್ಕಾಗಿ ಸಂದರ್ಭ ಬಂದಾಗ ನಿರ್ಧಾರ ತೆಗೆದುಕೊಳ್ಳುವ ಒಳಗಣ್ಣನ್ನು ಆಜ್ಞಾಚಕ್ರ(ಮೆದುಳು, ಮೇಧಾ ಶಕ್ತಿ) ದಲ್ಲಿ ನೀಡಿದ್ದಾನೆ.
         (ಈ  ಸಾರಂಶವನ್ನು ಮಮತಾ ಭಾಗ್ವತ ಅವರ  ಪ್ರತೀಕ್ಷಾ ದಿಂದ ತೆಗೆದುಕೊಳ್ಳಲಾಗಿದೆ

10ನೇ ತರಗತಿ ಕನ್ನಡ - ಜೀವನದೃಷ್ಟಿ ಗದ್ಯಪಾಠ-3 ಕ್ಕೆ ಪ್ರಶ್ನೋತ್ತರಗದ್ಯ ಪಾಠ ೩ ಜೀವನ ದೃಷ್ಟಿ -ಲೇಖಕರು ವಿ. ಕೃ. ಗೋಕಾಕ
ಅ] ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
. ಜೀವನದಲ್ಲಿ ಯಾವುದಕ್ಕೆ ಹೆಚ್ಚಿನ ಸ್ಥಾನವಿದೆ ?
  ಉ- ನಮ್ಮ ಜೀವನದಲ್ಲಿ ಅನ್ಯರ ದೃಷ್ಟಿಕೋನಕ್ಕೂ ಅನ್ಯರ ಜೀವನದಲ್ಲಿ ನಮ್ಮ ದೃಷ್ಟಿಕೋನಕ್ಕೂ ಒಂದು ಹೆಚ್ಚಿನ ಸ್ಥಾನವಿದೆ.
. ಅಂತರ್ಜೀವಿಗೆ ಯಾವುದು ದೊಡ್ಡ ಸಮಸ್ಯೆಯಾಗುತ್ತದೆ?
  ಉ- ಅಂತರ್ಜೀವಿಗೆ ಉಳಿದವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆಯಾಗುತ್ತದೆ .
. ಅಂತರ್ಜೀವಿಯ ಶಕ್ತಿ ಹೇಗೆ ವೆಚ್ಚವಾಗುತ್ತದೆ?
  ಉ- ತನ್ನ ಮನದ ಮೊಗಸಾಲೆಯನ್ನು ಓರಣವಾಗಿಸುವುದರಲ್ಲಿಯೇ ಅಂತರ್ ಜೀವಿಯ ಎಲ್ಲ ಶಕ್ತಿಯೂ ವೆಚ್ಚವಾಗುತ್ತದೆ.
. ಧರ್ಮಗಳು ಹಾಕಿಕೊಟ್ಟಿರುವ ರತ್ನಪಾಠ ಏನು ?
  ಉ- ಸಾಧಕನಿಗೆ, ಅಂತರ್ಜೀವಿಗೆ ಯಾವ ತೊಂದರೆಯೂ ಆಗಬಾರದೆಂದು ಅವನನ್ನು ಸಮಾಜವೇ ನೋಡಿಕೊಳ್ಳಬೇಕೆಂಬುದೇ ಧರ್ಮಗಳು ಹಾಕಿಕೊಟ್ಟಿರುವ ಧರ್ಮಗಳು ಹಾಕಿಕೊಟ್ಟಿರುವ ರತ್ನಪಾಠ.
. ಗೃಹಸ್ಥಾಶ್ರಮವು ಧನ್ಯ ಎಂದು ಹೇಳಿದವರು ಯಾರು ?
  ಉ- ಕಾಳಿದಾಸನು ಕಲ್ಪಿಸಿದ ಋಷಿ -ಅರಣ್ಯಕ ಗೃಹಸ್ಥಾಶ್ರಮವು ಧನ್ಯವೆಂದು ಹೇಳಿದ್ದಾನೆ.

ಆ] ಮೂರು -ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
. ಅಂತರ್ಜೀವಿಗೆ ಸುಲಭವಾಗಿ ರಕ್ತಗತವಾಗದ ಸಂಗತಿ ಯಾವುದು ?
  ಉ- ಅಂತರ್ಜೀವಿಗೆ ಉಳಿದವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆಯಾಗುತ್ತದೆ. ತನ್ನ ಯೋಗಕ್ಷೇಮವನ್ನು ಭಗವಂತನ ಮೇಲೆ ಹೊರಿಸಲು ಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯು ವುದು ಸುಲಭವಾಗಿ ರಕ್ತಗತವಾಗು ವುದಿಲ್ಲ.
. ಕಲೋಪಾಸಕನ ಕರ್ತವ್ಯವೇನು ?
  ಉ- ಕಲೋಪಾಸಕನೂ ಒಬ್ಬ ವ್ಯಕ್ತಿ .ಸಮಾಜದ- ಮನು ಕು ಲದ-ಒಂದು ಘಟಕ. ಕಲಾಸೇವೆಯನ್ನು ಸಲ್ಲಿಸು ವುದಲ್ಲದೆ ಪರಾಂತಃಕರಣ ಪ್ರವೇಶಿಯಾಗಿ ಜನತೆಯ ಮನವನ್ನೂ ,ಅಂತಃಕರಣವನ್ನೂ ಅವನು ತಿದ್ದಬಹು ದು . ಆದರೆ ಯಾವ ವ್ಯಕ್ತಿಗಳೊಡನೆ ಅವನ ಸಂಬಂಧ ಬರುವುದೋ ಅವರ ಅಂತಃಕರಣವನ್ನು ನೋಯಿಸದಂತೆ ತನ್ನನ್ನು ಅಲಕ್ಷಿಸಿಯಾದರೂ ಉಳಿದವರ ಹಿತಚಿಂತನೆ ಹಾಗೂ ಹಿತಸಾಧನೆಯಲ್ಲಿ ತೊಡಗುವುದು ಎಲ್ಲ ವ್ಯಕ್ತಿಗಳಂತೆ ಅವನ ಕರ್ತವ್ಯವೂ ಆಗಿದೆ.
. ಸಾಧಕನ ಯೋಗಕ್ಷೇಮವನ್ನು ಸಮಾಜ ಹೇಗೆ ನಿರ್ವಹಿಸುತ್ತಿತ್ತು ?
  ಉ- ಸಾಧಕನಿಗೆ,ಅಂತರ್ಜೀವಿಗೆ ಯಾವ ತೊಂದರೆಯೂ ಆಗಬಾರದೆಂದು ಎಲ್ಲ ಧರ್ಮಗಳೂ ಅವನನ್ನು ಸಮಾಜವೇ ನೋಡಿಕೊಳ್ಳಬೇಕೆಂದು ಹೇಳಿವೆ. ಧರ್ಮಶಾಲೆಗಳು, ವಿಹಾರಗಳು, ಅನ್ನಛತ್ರಗಳು -ಇವು ಏರ್ಪಟ್ಟಿರುವುದು ಇಂಥವರಿಗಾಗಿ ಹಾಗೂ ನಿರ್ಗತಿಕರಿಗಾಗಿ. ಅನೇಕ ದೇವಸ್ಥಾನಗಳಲ್ಲಿಯೂ, ಮಠಗಳಲ್ಲಿಯೂ ಇಂಥ ಏರ್ಪಾಟಿದೆ. ಇಂಥ ಸಾಧಕರನ್ನು ಮನೆಯಲ್ಲಿಟ್ಟುಕೊಂಡು ಅವರ ಯೋಗಕ್ಷೇಮವನ್ನು ನೋಡಿಕೊಂಡವರೂ ಉಂಟು. ಹೀಗೆ ಸಮಾಜವು ಸಾಧಕನ ಯೋಗಕ್ಷೇಮವನ್ನು ನಿರ್ವಹಿಸುತ್ತಿತ್ತು .
. ಸಹಾನುಭೂತಿಗಾಗಿ ಇರಬೇಕಾದ ಎರಡು ಕಣ್ಣುಗಳು ಯಾವುವು ?
  ಉ- ಸಹಾನುಭೂ ತಿಗಾಗಿ ಇರಬೇಕಾದ ಎರಡು ಕಣ್ಣುಗಳು ಯಾವಾಗಲೂ ತೆರೆದಿರ ಬೇಕಾಗುತ್ತದೆ. ಅವುಗಳೆಂದರೆ -ಒಂದು ತನ್ನಿಂದ ಹೆರವರಿಗೆ ಯಾವ ತೊಂದರೆಯೂ ಮಾನಸಿಕ ವ್ಯಥೆಯೂ ಆಗದಂತೆ ಎಚ್ಚರ ಪಡುವ ಕಣ್ಣು; ಇನ್ನೊಂದು ತನ್ನ ಅಳವಿನಲ್ಲಿ ಹೆರವರ ಐಹಿಕ, ಮಾನಸಿಕ ಇಲ್ಲವೆ ಆತ್ಮಿಕ ಹಿತಚಿಂತನೆ ಎಲ್ಲೆಲ್ಲಿ ಸಾಧ್ಯ ಎಂದು ಸದಾ ಅಭ್ಯಸಿಸುವ ಕಣ್ಣು .
ಇ] ಸಂದರ್ಭದೊಂದಿಗೆ ವಿವರಿಸಿ.
. "ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣಮಕ್ಕು "
  ಉ- ಮೇಲಿನ ವಾಕ್ಯವನ್ನು ವಿ.ಕೃ. ಗೋಕಾಕರು ಬರೆದ ಜೀವನ ದೃಷ್ಟಿ ಎನ್ನುವ ಗದ್ಯಪಾಠದಿಂದ ಆಯ್ದು ಕೊಳ್ಳಲಾಗಿದೆ.
ಮಾತನ್ನು ಸರ್ವಜ್ಞ ಕವಿ ಹೇಳಿದ್ದಾನೆ.
ಸಂದರ್ಭ: '' ಆತ್ಮಾನಂ ಸರ್ವ ಭೂತೇಷು, ಸರ್ವ ಭೂ ತಾನಿಚಾತ್ಮನಿ" ಎಂದು ಗೀತೆಯಲ್ಲಿ ಹೇಳಿದೆ. ಇದನ್ನೇ ಸರ್ವಜ್ಞನು ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಎಂದಿದ್ದಾನೆ. ಉಳಿದವರ ಕಣ್ಣಿನಲ್ಲಿ ಹೊಕ್ಕು ಅವರು ನಮ್ಮನ್ನು ಯಾವ ದೃಷ್ಟಿಯಿಂದ ಕಾಣುವರೋ ಆ ದೃಷ್ಟಿಯಿಂದ ನಮ್ಮನ್ನು ನಾವು ಕಂಡು ಕೊಳ್ಳಬೇಕು ಎಂದು ರ್ನ್ಸ್ ಕವಿ ಹೇಳಿದ್ದಾನೆ. ಆದ್ದರಿಂದ ನಮ್ಮ ಜೀವನದಲ್ಲಿ ಅನ್ಯರ ದೃಷ್ಟಿಕೋನಕ್ಕೂ, ಅನ್ಯರ ಜೀವನದಲ್ಲಿ ನಮ್ಮ ದೃಷ್ಟಿಕೋನಕ್ಕೂ ಒಂದು ಹೆಚ್ಚಿನ ಸ್ಥಾನವಿದೆ ಎಂದು ಲೇಖಕರು ವಿವರಿಸು ವಾಗ ಸರ್ವಜ್ಞನ ಮಾತಿನ ಉದಾಹರಣೆ ನೀಡಿದ್ದಾರೆ.
. ''ತನ್ನ ಗು೦ಗಿನಲ್ಲಿದ್ದ ಈ ಅಂತರಜೀವಿಗೆ ಪರರ ಹಂಗೆಲ್ಲಿ" ?
  ಉ- ಮೇಲಿನ ವಾಕ್ಯವನ್ನು ವಿ.ಕೃ. ಗೋಕಾಕರು ಬರೆದ ಜೀವನ ದೃಷ್ಟಿಎನ್ನುವ ಗದ್ಯಪಾಠದಿಂದ ಆಯ್ದು ಕೊಳ್ಳಲಾಗಿದೆ.
ಮಾತನ್ನು ಲೇಖಕರು ಅಂತರ್ಜೀವಿಯ ಬಗ್ಗೆ ಹೇಳಿದ್ದಾರೆ.
ಸಂದರ್ಭ: ಅಂತರ್ಜೀವಿಯು ಸಾಹಿತ್ಯಕ ದೃಷ್ಟಿಯಿಂದ ಪರಾಂತಃಕರಣವನ್ನು ಪ್ರವೇಶಿಸಿ ಅದನ್ನು ತಿಳಿದುಕೊಳ್ಳಬಲ್ಲ. ಆದರೆ ಉಳಿದ ಹೃದಯಗಳ ಆಸೆಯನ್ನು ಅಭ್ಯಸಿಸಿ ಅವುಗಳನ್ನು ಕಳೆಯಲು ಹವಣಿಸುವುದು ಅವನ ಸಹಜ ಸಿದ್ಧಿಯಾಚೆಗಿನ ಮಾತು. ಏಕೆಂದರೆ ತನ್ನ ಮನದ ಮೊಗಸಾಲೆಯನ್ನು ಓರಣವಾಗಿಸುವುದರಲ್ಲೇ ಅವನ ಎಲ್ಲ ಶಕ್ತಿಯೂ ವ್ಯಯವಾಗುತ್ತಿರುತ್ತದೆ. ತನ್ನ ಅಂತರಂಗದ ಭವ್ಯತೆಯು ಅವನನ್ನು ಕರೆಯುತ್ತಿರುತ್ತದೆ ಎಂದು ವಿವರಿಸುವಾಗ ಲೇಖಕರು ಮೇಲಿನಂತೆ ಹೇಳಿದ್ದಾರೆ.
. ''ಕಲೋಪಾಸಕನಿಗೆ ಸಮಾಜದಲ್ಲಿ ಯಾವ ಹೊಣೆಯೂ ಇರಬಾರದು ".
  ಉ- ಮೇಲಿನ ವಾಕ್ಯವನ್ನು ವಿ.ಕೃ. ಗೋಕಾಕರು ಬರೆದ 'ಜೀವನ ದೃಷ್ಟಿ ' ಎನ್ನುವ ಗದ್ಯಪಾಠದಿಂದ ಆಯ್ದು ಕೊಳ್ಳಲಾಗಿದೆ.
ಮಾತನ್ನು ಹಿರಿಯ ಸಾಹಿತಿಯೊಬ್ಬರು ಹೇಳಿದ್ದಾರೆ.
ಕಲೋಪಾಸಕನಲ್ಲಿ ಸಮಾಜದ ಕಲ್ಯಾಣವನ್ನು ಪೋಷಿಸುವ ಶಕ್ತಿಯು ಇರುತ್ತದೆ. ಆದ್ದರಿಂದ ಸಮಾಜದಲ್ಲಿ ಅವನಿಗೆ ಯಾವ ಹೊಣೆಯೂ ಇರಬಾರದು. ಬದಲಾಗಿ ಸಮಾಜವೇ ಅವನನ್ನು ಪೋಷಿಸುವ ಹೊಣೆಯನ್ನು ಹೊರಬೇಕು. ಅವನು ಎಲ್ಲ ಕಡೆ ಹೋದಾಗ ಅವನು ಕಲೋಪಾಸಕನೆಂದು ತಿಳಿದವರು ಅವನ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ಹಿರಿಯ ಸಾಹಿತಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ ಎಂದು ವಿವರಿಸುವಾಗ ಮೇಲಿನ ಮಾತು ಬಂದಿದೆ.
. "ದಾತೃವಿನ ಮನವನ್ನು ಹತ್ತು ಸಲ ಪರೀಕ್ಷಿಸಿ ದಾನವನ್ನು ಸ್ವೀಕರಿಸಬೇಕು
  ಉ- ಮೇಲಿನ ವಾಕ್ಯವನ್ನು ವಿ.ಕೃ. ಗೋಕಾಕರು ಬರೆದ 'ಜೀವನ ದೃಷ್ಟಿ' ಎನ್ನುವ ಗದ್ಯಪಾಠದಿಂದ ಆಯ್ದು ಕೊಳ್ಳಲಾಗಿದೆ.
ಈ ಮಾತನ್ನು ಲೇಖಕರು ಅಂತರ್ಜೀವಿಯು ದಾನ ಪಡೆಯುವಾಗ ವಹಿಸಬೇಕಾದ ಎಚ್ಚರಿಕೆಯನ್ನು ಕುರಿತು ಹೇಳಿದ್ದಾರೆ.
ಸಂದರ್ಭ: ಸಾಧಕನಿಗೆ ಅಂತರ್ಜೀವಿಗೆ ಯಾವ ತೊಂದರೆಯೂ ಆಗಬಾರದೆಂದು ಎಲ್ಲ ಧರ್ಮಗಳೂ ಅವನನ್ನು ಸಮಾಜವೇ ನೋಡಿಕೊಳ್ಳಬೇಕೆಂದು ಹೇಳಿವೆ. ಇದು ಸಮಾಜದ ಕರ್ತವ್ಯವಾದರೆ ಸಾಧಕನಿಗೂ ತನ್ನದೇ ಕರ್ತವ್ಯವಿದೆ. ಇನ್ನೊಬ್ಬರಿಗೆ ಅವನು ಹೊರೆಯಾಗಬಾರದು. ದಾತೃವಿನ ಮನವನ್ನು ಹತ್ತು ಸಲ ಪರೀಕ್ಷಿಸಿ ದಾನವನ್ನು ಸ್ವೀಕರಿಸಬೇಕು. ಕೇಳಿ ದೊರಕಿಸಿಕೊಂಡ ಸಾಮಗ್ರಿ-ಸೌಕರ್ಯಗಳ ಮೇಲೆ ನಿಂತ ಸಾಧನೆ-ತಪಸ್ಸು, ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ ಅದಕ್ಕೆ ಸ್ವಯಂಪೂರ್ಣತೆ ಇಲ್ಲ ಎಂದು ವಿವರಿಸುವಾಗ ಈ ಮಾತು ಬಂದಿದೆ.
.''ಜೀವನ ರಥಕ್ಕೆ ಒಗ್ಗಾಲಿಯ ಭೀತಿ ಇದೆ.”
  ಉ- ಮೇಲಿನ ವಾಕ್ಯವನ್ನು ವಿ.ಕೃ. ಗೋಕಾಕರು ಬರೆದ 'ಜೀವನ ದೃಷ್ಟಿ' ಎನ್ನುವ ಗದ್ಯಪಾಠದಿಂದ ಆಯ್ದು ಕೊಳ್ಳಲಾಗಿದೆ.
ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸಂದರ್ಭ: ಸಾಮಾಜಿಕ ಪುನರ್ಘಟನೆಯಲ್ಲಿ ರಶ್ಯದ ಸಮತಾವಾದವೂ ಭಾರತದ ಆಧ್ಯಾತ್ಮವಾದವೂ ರೂಪುಗೊಂಡು ಬೆರೆಯಬೇಕಾಗಿದ್ದಂತೆ ಇಂದಿನ ಓರ್ವ ವ್ಯಕ್ತಿಯ ಜೀವನದಲ್ಲಿ ಆಂತರಿಕ ದೃಷ್ಟಿಯ ಹಾಗು ಅನ್ಯರ ಹಿತದೃಷ್ಟಿಗಳ ಪ್ರಜ್ಙೆಯ ಸಮ್ಮಿಲನವಾಗಬೇಕಿದೆ. ರಸವೇ ಜೀವನ. ರಸದ ಸೂಕ್ಷ್ಮತೆ ವಿಶಾಲತೆಗಳ ವ್ಯತ್ಯಯರಹಿತ ವಿಕಾಸವೇ ವ್ಯಕ್ತಿಜೀವನ. ಸಮರಸವೇ ಸಹಜೀವನ. ಬರೀ ಸ್ವಾನುಭೂತಿಯಿಂದ ಸಾಗುವ ಜೀವನ ರಥಕ್ಕೆ ಒಗ್ಗಾಲಿಯ ಭೀತಿ ಇದೆ. ಸಹಾನುಭೂತಿಯೂ ಅದರ ಜೋಡಣೆಗೆ ಅವಶ್ಯವಾದುದು ಎಂಬುದು ಲೇಖಕರ ಅಭಿಪ್ರಾಯವಾಗಿದೆ.
ಈ] ಹೊಂದಿಸಿ ಬರೆಯಿರಿ. (ಬರೆದಿದೆ.)
. ಕಲೋಪಾಸಕ          -        ಗುಣಸಂಧಿ
. ವಿನಾಯಕ             -        ವಿ.ಕೃ.ಗೋಕಾಕ್
. ಅಂತರಂಗ             -        ಬಹಿರಂಗ
. ದೂರದ ಗುಡ್ಡ          -        ಕಣ್ಣಿಗೆ ನುಣ್ಣಗೆ
. ಆರಣ್ಯಕ                -        ಋಷಿ
ಉ] ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ.
. ಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯುತ್ತದೆ. (ಭವಿಷ್ಯತ್ ಕಾಲಕ್ಕೆ ಪರಿವರ್ತಿಸಿ )
  ಉತ್ತರ- ಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯುವುದು .
. ಕಲ್ಯಾಣವನ್ನು ಪೋಷಿಸುವ ಒಂದು ಶಕ್ತಿಯು ಅವನಲ್ಲಿರುವುದು. (ವರ್ತಮಾನಕಾಲಕ್ಕೆ ಪರಿವರ್ತಿಸಿ.)
  ಉತ್ತರ- ಕಲ್ಯಾಣವನ್ನು ಪೋಷಿಸುವ ಒಂದು ಶಕ್ತಿಯು ಅವನಲ್ಲಿರುತ್ತದೆ.
. ಅವನು ಹೆಚ್ಚಾಗಿ ಸಮಾಜದ ಮಧ್ಯದಲ್ಲಿಯೇ ಬಾಳುತ್ತಾನೆ. (ಭೂತಕಾಲಕ್ಕೆ ಪರಿವರ್ತಿಸಿ)
  ಉತ್ತರ- ಅವನು ಹೆಚ್ಚಾಗಿ ಸಮಾಜದ ಮಧ್ಯದಲ್ಲಿಯೇ ಬಾಳಿದನು.
ಊ] ಕೆಳಗಿನ ಪ್ರಶ್ನೆಗಳಿಗೆ ಎಂಟು -ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
 . ಜೀವನ ದೃಷ್ಟಿ ಗದ್ಯದಲ್ಲಿ ಅಂತರ್ಜೀವಿಯ ವ್ಯಕ್ತಿತ್ವ ಹೇಗೆ ವರ್ಣಿತ ವಾಗಿದೆ ?
  ಉತ್ತರ- ಅಂತರ್ಜೀವಿಗೆ ಉಳಿದವರ ಯೋಗಕ್ಷೇಮವನ್ನು ನೋಡಿಕೊಳ್ಲುವುದು ಒಂದು ದೊಡ್ಡ ಸಮಸ್ಯೆಯಾಗುತ್ತದೆ. ತನ್ನ ಯೋಗಕ್ಷೇಮವನ್ನೇ ಭಗವಂತನ ಮೇಲೆ ಹೊರಿಸಲು ಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯುವುದು ಸುಲಭವಾಗಿ ರಕ್ತಗತವಾಗುವುದಿಲ್ಲ. ಉಳಿದವರನ್ನು ಪ್ರೀತಿಯಿಂದ ಅವನು ಕಾಣಬಲ್ಲ. ತನ್ನಿಂದ ಆದಷ್ಟು ಯಾರಿಗೂ ತೊಂದರೆಯಾಗಬಾರದೆಂದು ಅವನು ಎಚ್ಚರಪಡಬಲ್ಲ. ಸಾಹಿತ್ಯಕ ದೃಷ್ಟಿಯಿಂದ ಪರಾಂತಃಕರಣವನ್ನು ಪ್ರವೇಶಿಸಿ ಅದನ್ನು ತಿಳಿದುಕೊಳ್ಳಲೂ ಬಲ್ಲ. ಆದರೆ ಉಳಿದ ಹೃದಯಗಳ ಆಸೆಗಳನ್ನು ತಾನಾಗಿಯೇ ಅಭ್ಯಸಿಸಿ ಅವುಗಳನ್ನು ಕಳೆಯಲು ಹವಣಿಸುವುದು ಅವನ ಸಹಜ ಸಿದ್ಧಿಯಾಚೆಗಿನ ಮಾತು. ಏಕೆಂದರೆ ತನ್ನ ಮನದ ಮೊಗಸಾಲೆಯನ್ನು ಓರಣವಾಗಿಸುವುದರಲ್ಲಿಯೇ ಅವನ ಎಲ್ಲ ಶಕ್ತಿಯೂ ವೆಚ್ಚವಾಗುತ್ತಿರುತ್ತದೆ. ತನ್ನ ಅಂತರಂಗದ ಭವ್ಯತೆಯು ಅವನನ್ನು ಕರೆಯುತ್ತಿರುತ್ತದೆ. ಗುಂಗಿನಲ್ಲಿದ್ದ ಅಂತರ್ಜೀವಿಗೆ ಪರರ ಹಂಗಿಲ್ಲ. ಹೀಗೆ ಜೀವನ ದೃಷ್ಟಿ ಗದ್ಯದಲ್ಲಿ ಅಂತರ್ಜೀವಿಯ ವ್ಯಕ್ತಿತ್ವ ವರ್ಣಿತವಾಗಿದೆ.
. ಸಮಾಜದಲ್ಲಿ ಕಲೋಪಾಸಕನ ಮಹತ್ವವನ್ನು ಲೇಖಕರು ಹೇಗೆ ವಿಶ್ಲೇಷಿಸಿದ್ದಾರೆ?
  ಉತ್ತರ- ಕಲೋಪಾಸಕನೂ ಒಬ್ಬ ವ್ಯಕ್ತಿ. ಸಮಾಜದ ಮನು ಕುಲದ ಒಂದು ಘಟಕ. ಮುಖ್ಯವಾಗಿ ಕಲೋಪಾಸಕನೆಂದು ಕಲಾಸೇವೆಯನ್ನು ಸಲ್ಲಿಸುವುದಲ್ಲದೆ ಓರ್ವ ವ್ಯಕ್ತಿಯೆಂದು ಅವನ ವ್ಯಕ್ತಿತ್ವ ವಿಕಾಸವೂ ಕಾಲನಿಯತಿಗನು ಸರಿಸಿ ಆಗಬೇಕು. ಪರಾಂತಃಕರಣಪ್ರವೇಶಿಯಾಗಿ ಜನತೆಯ ಮನವನ್ನೂ ಅಂತಃಕರಣವನ್ನೂ ಅವನು ತಿದ್ದಬಹುದು. ಆದರೆ ಯಾವ ವ್ಯಕ್ತಿಗಳೊಡನೆ ಅವನ ಸಂಬಂಧ ಬರುವುದೋ ಅವರ ಅಂತಃಕರಣವನ್ನು ನೋಯಿಸದಂತೆ ತನ್ನನ್ನು ಅಲಕ್ಷಿಸಿಯಾದರೂ ಉಳಿದವರ ಹಿತಚಿಂತನೆ ಹಾಗು ಹಿತ ಸಾಧನೆಯಲ್ಲಿ ತೊಡಗುವುದು ಎಲ್ಲ ವ್ಯಕ್ತಿಗಳಂತೆ ಅವನ ಕರ್ತವ್ಯವೂ ಆಗಿದೆ. ಅವನು ಯೋಗಸ್ಥನೂ, ಗೃಹಸ್ಥನೂ ಕೂಡಿಯೇ ಆಗಿ ಸಮಾಜದಲ್ಲಿ ಬಾಳಬೇಕಿದೆ. ಸಮ್ಯಕ್ ದರ್ಶನದ ಸಮತೂಕವನ್ನು ಅವನು ಪಡೆದಿರಬೇಕು.
**********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ