ನನ್ನ ಪುಟಗಳು

10 ನವೆಂಬರ್ 2020

10ನೇ ತರಗತಿ ಕನ್ನಡ-ಗದ್ಯ-6-ಯುದ್ಧ (10th_Kannada_Lesson_5-Yudha)

ಗದ್ಯ-6  ಯುದ್ಧ (ಸಣ್ಣಕತೆ)
ಈ ಕೆಳಗಿನ ವಿಷಯಗಳಲ್ಲಿ ನಿಮಗೆ ಬೇಕಾದ ವಿಷಯದ ಮೇಲೆ ಕ್ಲಿಕ್‌ಮಾಡಿ
************************


***********








******** ಕನ್ನಡ ದೀವಿಗೆ ******


10th-ಯುದ್ಧ_ಪ್ರಶ್ನೋತ್ತರ ವೀಕ್ಷಣೆ & ಡೌನ್‌ಲೋಡ್

೧-ಯುದ್ಧ_ಪ್ರಶ್ನೋತ್ತರ (Notes)     >> Download





10ನೇ ತರಗತಿ ಕನ್ನಡ-ಗದ್ಯ-6-ಯುದ್ಧ-ವ್ಯಾಕರಣಾಂಶಗಳು

 ಕನ್ನಡ ವರ್ಣಮಾಲೆ

        ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು.
  • ಸ್ವರಗಳು ಮತ್ತು ಸಂಧ್ಯಕ್ಷರಗಳು (13)
  • ಯೋಗವಾಹಕಗಳು (2)
  • ವ್ಯಂಜನಗಳು (34)
ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು' ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ.
ಅವುಗಳೆಂದರೆ:-  ಆ  ಈ ಉ ಊ   ಏ   ಓ 
      ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ' ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು.
* ಹ್ರಸ್ವಸ್ವರಗಳು:-  ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.  
-ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6)
* ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು. ಅವುಗಳೆಂದರೆ- ಆ ಈ ಊ ಏ  ಓ ಔ (ಒಟ್ಟು 7)
[ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವುದರಿಂದ ಇದು ಹ್ರಸ್ವಸ್ವರ ವಾಗಿದೆ. ಹಾಗೆಯೇ  ಎಂಬ ಅಕ್ಷರವನ್ನು ಉಚ್ಚರಿಸಲು ಹ್ರಸ್ವಸ್ವರದ ಎರಡರಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಇದು ಧೀರ್ಘಸ್ವರವಾಗಿದೆ]
* ಸಂಧ್ಯಕ್ಷರಗಳು:-  ಐ  ಔ (ಒಟ್ಟು 2)
[ಸೂಚನೆ:-  ಮತ್ತು  ಅಕ್ಷರಗಳು ಧೀರ್ಘಸ್ವರಗಳೂ ಸಂಧ್ಯಕ್ಷರಗಳೂ ಆಗಿವೆ ಎಂಬುದನ್ನು ಮರೆಯದಿರಿ]

ಯೋಗವಾಹಕಗಳು:(ಒಟ್ಟು-2) - ಸ್ವತಂತ್ರವಾದ ಉಚ್ಚಾರಣೆಯನ್ನು ಹೊಂದಿಲ್ಲದ ಹಾಗೂ 
ಸ್ವರ ಅಥವಾ ವ್ಯಂಜನಗಳ ಸಹಾಯದಿಂದ ಮಾತ್ರ ಉಚ್ಛರಿಸಲ್ಪಡುವ ಅಕ್ಷರಗಳನ್ನು 'ಯೋಗವಾಹಕಗಳು' ಎಂದು ಕರೆಯಲಾಗುತ್ತದೆ.
 ಯೋಗವಾಹ (ಂ, ಃ) ಗಳನ್ನು ಪ್ರತ್ಯೇಕವಾಗಿ (ಸ್ವತಃ) ಉಚ್ಚಾರ ಮಾಡಲಾಗುವುದಿಲ್ಲ. ಇನ್ನೊಂದು ಅಕ್ಷರದ ಸಂಬಂಧವನ್ನು ಇವು ಹೊಂದಿದಾಗಲೇ ಉಚ್ಚಾರ ಮಾಡಲು ಬರುತ್ತವೆ. ಯೋಗ ಎಂದರೆ ಸಂಬಂಧವನ್ನು, ವಾಹ ಎಂದರೆ ಹೊಂದಿದ, ಎಂದು ಅರ್ಥ. ಆದ್ದರಿಂದ ಒಂದು ಅಕ್ಷರದ ಸಂಬಂಧವನ್ನು ಹೊಂದಿದ ಮೇಲೆಯೇ ಉಚ್ಚಾರ ಮಾಡಲು ಬರುವ ಇವಕ್ಕೆ ಯೋಗವಾಹಗಳೆಂಬ ಹೆಸರು ಬಂದಿದೆ. ಮುಖ್ಯವಾಗಿ ಇವು ಸ್ವರದ ಸಂಬಂಧ ಪಡೆದ ಮೇಲೆ ಎಂದರೆ ಸ್ವರಾಕ್ಷರಗಳ ಮುಂದೆ ಬಂದಾಗ ಉಚ್ಚಾರವಾಗುತ್ತವೆ. ಅಂ, ಇಂ, ಎಂ, ಒಂ, ಓಂ, ಅಃ, ಇಃ, ಉಃ,__ ಹೀಗೆ ಇವನ್ನು ಸ್ವರದ ಸಂಬಂಧದಿಂದಲೇ ಉಚ್ಚರಿಸಬಹುದಲ್ಲದೆ, ಅದಿಲ್ಲದೆಯೇ ಂ ಃ ಹೀಗೆ ಯಾವ ಅಕ್ಷರ ಸಂಬಂಧವಿಲ್ಲದೆ ಬರೆದರೆ, ಉಚ್ಚಾರಮಾಡಲು ಬರುವುದೇ ಇಲ್ಲ.

    ಅಂ ಮತ್ತು ಅಃ  ಇವುಗಳನ್ನು ಕ್ರಮವಾಗಿ 'ಅನುಸ್ವರ' ಮತ್ತು 'ವಿಸರ್ಗ' ಎಂದು ಕರೆಯಲಾಗುತ್ತದೆ.
 1) ಅನುಸ್ವಾರ:- (ಅಂ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ '0' ಮಾತ್ರ ಅನುಸ್ವರವಾಗಿದೆ.
 2) ವಿಸರ್ಗ:- (ಅಃ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ ಎರಡು ಸೊನ್ನೆಗಳ ಸಂಕೇತ ಮಾತ್ರ ವಿಸರ್ಗವಾಗಿದೆ.

[ಯೋಗ ಎಂಬುದು ಯುಜ್ ಅಂದರೆ ಕೂಡು ಎಂದೂ, ವಾಹ ಇದು ವಹ್ ಎಂಬ ಧಾತುವಿನಿಂದ ಹುಟ್ಟಿ ಕೂಡಿಹೋಗು ಎಂಬ ಅರ್ಥವನ್ನೂ ಕೊಡುತ್ತವೆ.  ಆದ್ದರಿಂದ ಯೋಗವಾಹವೆಂದರೆ, ಯಾವುದಾದರೊಂದು ಅಕ್ಷರ ಸಂಬಂಧವಿಲ್ಲದೆ ಉಚ್ಚರಿಸಲಾಗದ ಅಕ್ಷರವೆಂದು ತಿಳಿಯಬೇಕು.]

ವ್ಯಂಜನಗಳು:- (ಒಟ್ಟು-34)  - ಸ್ವರಗಳ ಸಹಾಯದಿಂದ ಮಾತ್ರ ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗುವ 34 ಅಕ್ಷರಗಳ ಗುಂಪಿಗೆ 'ವ್ಯಂಜನಗಳು' ಎಂದು ಕರೆಯಲಾಗುತ್ತದೆ. 
         ಇವುಗಳನ್ನು 'ವರ್ಗೀಯವ್ಯಂಜನಗಳು' ಮತ್ತು 'ಅವರ್ಗೀಯ ವ್ಯಂಜನಗಳು' ಎಂದು ಎರಡು ಗುಂಪುಗಳಾಗಿ ವಿಭಾಗಿಸಲಾಗಿದೆ.
   1)  ವರ್ಗೀಯವ್ಯಂಜನಗಳು-(25):- ವ್ಯವಸ್ಥಿತವಾಗಿ ಜೋಡಿಸಿ, 5 ವರ್ಗಗಳಾಗಿ ವರ್ಗೀಕರಿಸಲಾಗಿರುವ 'ಕ' ಇಂದ 'ಮ' ವರೆಗಿನ 25 ಅಕ್ಷರಗಳನ್ನು 'ವರ್ಗೀಯ ವ್ಯಂಜನಗಳು' ಎಂದು ಕರೆಯಲಾಗುತ್ತದೆ. ಅವುಗಳೆಂದರೆ..
                           ಕ್ ಖ್ ಗ್ ಘ್ ಙ್
                           ಚ್ ಛ್ ಜ್ ಝ್ ಞ್
                           ಟ್ ಠ್ ಡ್ ಢ್ 
                           ತ್ ಥ್ ದ್ ಧ್ ನ್
                           ಪ್ ಫ್ ಬ್ ಭ್ ಮ್                           

        ಈ ಮೇಲಿನ ಅಕ್ಷರಗಳನ್ನು ನೋಡಿದಿರಲ್ಲ! ಇವುಗಳನ್ನು ಕ-ವರ್ಗಚ-ವರ್ಗಟ-ವರ್ಗತ-ವರ್ಗ  ಮತ್ತು ಪ-ವರ್ಗ ಎಂದು ಐದು ವರ್ಗಗಳಾಗಿ ವಿಂಗಡಿಸಲಾಗಿದೆ.  ಇಂದ  ವರೆಗಿನ ಅಕ್ಷರಗಳನ್ನು ಮತ್ತೆ ಮೂರು ಗುಂಪುಗಳಾಗಿ ವಿಂಗಡಿಸಬಹುದು. ಅವು ಈ ಕೆಳಗಿನಂತಿವೆ..
  • ಅಲ್ಪಪ್ರಾಣಾಕ್ಷರಗಳು  (10) :- ಕಡಿಮೆ ಉಸಿರಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಅಲ್ಪಪ್ರಾಣಾಕ್ಷರಗಳು'.   
       ಅವುಗಳೆಂದರೆ :    ಕ್, ಗ್, ಚ್, ಜ್, ಟ್, ಡ್, ತ್, ದ್, ಪ್, ಬ್
  • ಮಹಾಪ್ರಾಣಾಕ್ಷರಗಳು  (10) :- ಹೆಚ್ಚು ಉಸಿರಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಮಹಾಪ್ರಾಣಾಕ್ಷರಗಳು'. 
       ಅವುಗಳೆಂದರೆ:    ಖ್, ಘ್, ಛ್, ಝ್, ಠ್, ಢ್, ಥ್, ಧ್, ಫ್, ಭ್
  • ಅನುನಾಸಿಕಾಕ್ಷರಗಳು  (5) :- ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಅನುನಾಸಿಕಾಕ್ಷರಗಳು'. 
       ಅವುಗಳೆಂದರೆ:    ಙ್, ಞ್, ಣ್, ನ್, ಮ್
[ಟಿಪ್ಪಣಿ:- ಈ ಐದು ಅನುನಾಸಿಕಾಕ್ಷರಗಳು ಆಯಾ ವರ್ಗದ  ಅಕ್ಷರಗಳ ಹಿಂದೆ ನಿಂತು ಬಿಂದು (ಅನುಸ್ವಾರ) ವಾಗಿ  ಕಾರ್ಯನಿರ್ವಹಿಸುತ್ತವೆ.  
ಉದಾ:- 'ಕ' ವರ್ಗದಲ್ಲಿ :- ಅಙ್ಗಳ = ಅಂಗಳ,  ಪಙ್ಕಜ = ಪಂಕಜ,  ಸಙ್ಘ = ಸಂಘ
             'ಚ' ವರ್ಗದಲ್ಲಿ:- ಅಞ್ಚೆ = ಅಂಚೆ,  ಪಞ್ಜರ = ಪಂಜರ,  ಇಞ್ಚರ = ಇಂಚರ
             'ಟ' ವರ್ಗದಲ್ಲಿ:- ಗಣ್ಟೆ = ಗಂಟೆ,  ಹಿಣ್ಡು = ಹಿಂಡು,  ಅಣ್ಟು = ಅಂಟು
             'ತ' ವರ್ಗದಲ್ಲಿ:- ಸನ್ತಸ = ಸಂತಸ, ಆನನ್ದ = ಆನಂದ, ಬನ್ಧನ = ಬಂಧನ
             'ಪ' ವರ್ಗದಲ್ಲಿ:- ಪಮ್ಪ = ಪಂಪ,  ತಮ್ಬಾಕು = ತಂಬಾಕು,  ಶಮ್ಭು = ಶಂಭು, 
ನಿಮಗಿದು ವಿಚಿತ್ರ ಎನುಸುತ್ತಿದೆಯೆ. ಹೌದು, ಪೂರ್ವದ ಹಳೆಗನ್ನಡದಲ್ಲಿ (ಸು.6-7ನೇ ಶತಮಾನದಿಂದ  ಹಿಂದೆ) ಕನ್ನಡ ಭಾಷೆಯಲ್ಲಿ ಬಿಂದುವಿನ (ಅನುಸ್ವಾರ/ಸೊನ್ನೆ) ಬಳಕೆ ಇರಲಿಲ್ಲ. ಕನ್ನಡದ ಮೊಟ್ಟಮೊದಲ ಶಾಸನವಾದ 'ಹಲ್ಮಿಡಿ ಶಾಸನದಲ್ಲಿ  ನಾವು ಈ ರೂಪದ ಪದಗಳನ್ನು ಕಾಣಬಹುದು.
 
ತಡವೇಕೆ ನೀವೂ ಕೂಡ ಸೊನ್ನೆಯನ್ನು ಬಳಸದೆ ಪದಗಳನ್ನು ರಚಿಸಿ. ಆನಂದಿಸಿ........😊





****************

10ನೇ ತರಗತಿ ಕನ್ನಡ-ಗದ್ಯ-6-ಯುದ್ಧ-ಭಾಷಾಭ್ಯಾಸ

೧-ಯುದ್ಧ

 ಭಾಷಾ ಚಟುವಟಿಕೆ

೧. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.

    ವಿಜಾತೀಯ ಸಂಯುಕ್ತಾಕ್ಷರಗಳು: ಕಾರ್ಯ, ಶಸ್ತ್ರ, ಸ್ಫೋಟಿಸು, ಅದ್ಭುತ, ಡಾಕ್ಟರ್ (ರ್ಯ, ಸ್ತ್ರ, ಸ್ಫೋ, ದ್ಭು, ಕ್ಟ)

೨. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ.

    ಅವರ್ಗೀಯ ವ್ಯಂಜನಾಕ್ಷರಗಳು: ಸ, ಶ, ಯ, ರೊ, ಳಿ, ಲ, ವೆ, ಷ, ಹೊ, ಳ

೩. ಈ ಪಾಠದಲ್ಲಿ ಬರುವ ಇಂಗ್ಲಿಷ್ ಪದಗಳನ್ನು ಪಟ್ಟಿ ಮಾಡಿ.

    ಇಂಗ್ಲಿಷ್ ಪದಗಳು: ಡಾಕ್ಟರ್, ರೇಡಿಯೋ, ಗ್ರೌಂಡಿ, ಪೈಲಟ್, ಬ್ಲಾಕ್ ಔಟ್, ಪ್ಲೀಸ್

೪. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ.

    ಅ) ಕ್, ಗ್ : ಅಲ್ಪಪ್ರಾಣಾಕ್ಷರಗಳು : : ಛ್, ಝ್ : ಮಹಾಪ್ರಾಣಾಕ್ಷರಗಳು

    ಆ) ವರ್ಗೀಯ ವ್ಯಂಜನಾಕ್ಷರಗಳು : ೨೫ : : ಅವರ್ಗೀಯ ವ್ಯಂಜನಾಕ್ಷರಗಳು : ೩೪

    ಇ) ಆ, ಈ, ಊ : ದೀರ್ಘಸ್ವರಗಳು : : ಅ, ಇ, ಉ, ಋ : ಹ್ರಸ್ವಸ್ವರ

    ಈ) ಸ್ವರಗಳು : ೧೩ : : ಯೋಗವಾಹಗಳು :






10ನೇ ತರಗತಿ ಕನ್ನಡ-ಗದ್ಯ-6-ಯುದ್ಧ-ಚಿತ್ರಗಳ ಸಂಗ್ರಹ

ಯುದ್ಧ ಚಿತ್ರಗಳ ಸಂಗ್ರಹ











********************




















10ನೇ ತರಗತಿ ಕನ್ನಡ-ಗದ್ಯ-6-ಯುದ್ಧ-ಸಾರಾಂಶ

ಯುದ್ಧ ಪಾಠದ ಸಾರಾಂಶ

ಪೀಠೀಕೆ: ’ಯುದ್ಧ’ ಇತಿಹಾಸದ ಉದ್ದಕ್ಕೂ ಇರುವಂತಹದ್ದೇ ಆಗಿದೆ. ಸಾಮ್ರಾಜ್ಯ ವಿಸ್ತರಣೆ, ಲೋಭ, ಶಕ್ತಿಯ ಪ್ರದರ್ಶನ, ಕೌಟುಂಬಿಕ ಕಲಹಗಳು, ದ್ವೇಷ ಸಾಧನೆ ಮುಂತಾದವು ಯುದ್ಧಕ್ಕೆ ಕಾರಣವಾಗುತ್ತವೆ. ಈ ಯುದ್ಧದ ಭೀಕರತೆಯು ಧರ್ಮ, ದೇಶಗಳ ಭೇದವಿಲ್ಲದೆ ಭಾಗಿಯಾದ ಸೈನಿಕರಿಗೂ ಅವರ ಕುಟುಂಬ ವರ್ಗದವರಿಗೂ ಹಾಗೂ ದೇಶಕ್ಕೂ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಇದರ ನಡುವೆ ಯುದ್ಧದಲ್ಲಿ ನೊಂದವರು ಧರ್ಮಭಿನ್ನತೆ, ದೇಶಭಿನ್ನತೆ, ವೈರಿ-ಮಿತ್ರ ಎಂಬುದನ್ನೆಲ್ಲ ಪರಿಗಣಿಸದೆ ಪರಸ್ಪರರು ಸಂಕಷ್ಟ ಪರಿಹಾರಕ್ಕೆ, ರಕ್ಷಣೆಗೆ ತೊಡಗುವ ಮಾನವೀಯ ಮೌಲ್ಯಯುತ ನಡೆವಳಿಕೆಗಳು ಪ್ರಸ್ತುತ ಕಥೆಯಲ್ಲಿ ಮನೋಜ್ಞವಾಗಿ ಮೂಡಿಬಂದಿವೆ. 

ಸಾರಾಂಶ: ಎರಡು ದೇಶಗಳ ನಡುವೆ ಯುದ್ಧನಡೆಯುತ್ತಿತ್ತು. ದೇಶದ ಗಡಿ ಭಾಗದಲ್ಲಿ ಸಮುದ್ರದ ಮೇಲಿನ ಆಕಾಶದಲ್ಲಿ ಹಾರುತ್ತಿದ್ದ ಯುದ್ಧ ವಿಮಾನವು ಗ್ರೌಂಡ್ ನೊಂದಿಗೆ ಸಂಪರ್ಕ ಕಡಿದುಕೊಂಡಿತು. ಅವರಿಗೆ ತಾವು ಎಲ್ಲಿ ಹೋಗುತ್ತಿದ್ದೇವೆ ತಿಳಿಯಲಿಲ್ಲ. ಅದು ವೈರಿ ದೇಶದಲ್ಲಿ ಹಾರಾಡುತ್ತಿತ್ತು ಆಗ ರಾಹಿಲ ಎಂಬ ವೈದ್ಯ ಸೈನಿಕನು ತನ್ನ ಬಳಿ ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಹಿಡಿದುಕೊಂಡಿದ್ದನು. ಆ ಸಮಯದಲ್ಲಿ ವೈರಿಗಳ ವೈಮಾನಿಕ ದಾಳಿಯಿಂದಾಗಿ ವಿಮಾನವು ನುಚ್ಚುನೂರಾಗಿ ನದಿ ಮೇಲೆ ಬಿದ್ದಿತು. ಅದರಲ್ಲಿದ್ದ ವೈದ್ಯ ಸೈನಿಕನೊಬ್ಬನಿಗೆ ಕಾಲಿಗೆ ತೀವ್ರ ಪೆಟ್ಟಾಗಿದ್ದರೂ ಕಷ್ಟಪಟ್ಟು ನೀರಿನಲ್ಲಿ ಈಜಿ ದಡ ಸೇರಿದನು. ಅವನು ಹೇಗೋ ಕಷ್ಟಪಟ್ಟು ಹೊರಬಂದಾಗ ಮಿಂಚು ಮಿಂಚಿದಾಗ ಸಮೀಪದಲ್ಲಿ ಒಂದು ಒಂಟಿ ಮನೆ ಕಾಣಿಸಿತು. ಧಾರಾಕಾರವಾಗಿ ಸುರಿಯುತ್ತಿದ್ದ ಮಳ:ಎಯಿಂದ ರಕ್ಷಿಸಿಕೊಳ್ಳಲು ಹಾಗೂ ತನ್ನ ಕಾಲಿಗೆ ಆರೈಕೆ ಮಾಡಿಕೊಳ್ಳಬೇಕೆಂದು ತೆವಳಿಕೊಂಡು ಮನೆಯ ಬಳಿ ಹೋಗುತ್ತಿದ್ದಾಗ ಅಲ್ಲಿ ಒಂದು ಹೆಂಗಸಿನ ಆರ್ತನಾದ, ಚೀರಾಟ ಕೇಳಿಸಿತು. ಯುದ್ಧದ ಸಂದರ್ಭದಲ್ಲಿ ರಾತ್ರಿವೇಳೆ ಶತ್ರುಗಳ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ಬ್ಲಾಕ್‌ಔಟ್’ ನಿಯಮವನ್ನು ಪಾಲಿಸಲಾಗುತ್ತಿದ್ದ ಆ ಸಂದರ್ಭದಲ್ಲಿ ಆ ಮನೆಯಲ್ಲಿ ಏನಾಗುತ್ತಿರಬಹುದು ಎಂದು ಊಹಿಸುತ್ತಾ ತೆವಳಿಕೊಂಡು ಮನೆಯ ಹತ್ತಿರ ಹೋದನು. 

    “ಅಮ್ಮಾ ಬಾಗಿಲು ತೆಗೆಯಿರಿ” ಎಂದು ಅಂಗಲಾಚುತ್ತಾ ಬಾಗಿಲು ತಟ್ಟಿದಾಗ ವಯಸ್ಸಾದ ಮುದುಕಿಯೊಬ್ಬಳು ಬಾಗಿಲು ತೆಗೆದು ತನ್ನ ಕೈಲಿದ್ದ ದೀಪವನ್ನು ಆತನ ಮುಖದ ಬಳಿಗೆ ತಂದು ಅನುಮಾನ ದೃಷ್ಟಿಯಿಂದ “ಯಾರಪ್ಪಾ ನೀನು? ನಮ್ಮ ಕಡೆಯವನು ತಾನೇ? ಎಂದು ಕೇಳಿದಳು. ಆಗ ರಾಹಿಲನು “ ನಾನು ಯುದ್ಧ ಮಾಡುವ ಮೂರ್ಖರ ಕಡೆವನಲ್ಲ, ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು” ಎಂದು ಹೇಳುವಷ್ಟರಲ್ಲೆ ಒಳಗಿನಿಂದ ಮಹಿಳೆಯ ಚೀರಾಟವನ್ನು ಕೇಳಿ ಅವಳು ಯಾರೆಂದು ಕೇಳಿದಾಗ ಮುದುಕಿಯು ‘ಆಕೆ ತನ್ನ ಸೊಸೆ, ಹೆರಿಗೆ ಬೇನೆಯಿಂದ ನರಳುತ್ತಿದ್ದಾಳೆ, ಈ ಯುದ್ಧದ ಸಮಯದಲ್ಲಿ ಡಾಕ್ಟರನ್ನೋ ಸೂಲಗಿತ್ತಿಯನ್ನೋ ಕರೆದು ತರಲು ಸಾಧ್ಯವಿಲ್ಲವೆಂದು ನಿರಾಸೆ ವ್ಯಕ್ತಪಡಿಸಿದಾಗ ಅವನು ತಾನು ಸಹಾಯ ಮಾಡುವುದಾಗಿ ಹೇಳುತ್ತಾನೆ. 

ಅಂತೆಯೇ ರಾಹಿಲನು ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಯನ್ನು ಪರೀಕ್ಷಿಸಿದಾಗ ಅವಳಿಗೆ ಸುಲಭವಾಗಿ ಹೆರಿಗೆಯಾಗುವುದು ಸಾಧ್ಯವಿಲ್ಲವೆಂದು ದೃಢಪಟ್ಟಿತು. ಮಗು ಮತ್ತು ತಾಯಿಯನ್ನು ಬದುಕಿಸಬೇಕಾದರೆ ಆಸ್ಪತ್ರೆಗೆ ಹೋಗಬೇಕು ಆದರೆ ಅದು ಈಗ ಸಾಧ್ಯವಿಲ್ಲವಾದ್ದರಿಂದ ಬಹಳ ಪ್ರಯತ್ನಪಟ್ಟು ಹೇಗೋ ಮಗುವನ್ನು ಒರ ತೆಗೆದನು. ಆದರೆ ಮಗು ಬದುಕಿರಲಿಲ್ಲ. 

    ಆಗ ಮುದುಕಿ ಮತ್ತು ಆಕೆಯ ಸೊಸೆ ಬಹಳ ಗೋಳಾಡಿದರು. ಮುದುಕಿಯಿಂದ ಎರಡು ಪುಟ್ಟ ಹಲಗೆ ಹಾಗೂ ಬಟ್ಟೆಯನ್ನು ಪಡೆದುಕೊಂಡು ಮುರಿದಿದ್ದ ತನ್ನ ಕಾಲಿಗೆ ಕಟ್ಟಿಕೊಂಡನು. ಮೂಳೆ ಮುರಿದಿಲ್ಲವೆನಿಸಿತು. ತಾನು ಬರುವುದು ಸ್ವಲ್ಪ ತಡವಾಗಿದ್ದರೂ ಅವಳ ಸೊಸೆ ಬದುಕುತ್ತಿರಲಿಲ್ಲ ಎಂದು ಹೇಳುತ್ತಾ ತನಗೆ ಸುಸ್ತಾಗಿದ್ದು ಮಲಗಲು ಜಾಗ ನೀಡಬೇಕೆಂದು ಬೇಡಿದನು. 

ಅದೇ ಸಮಯಕ್ಕೆ ಆ ದೇಶದ ಸೈನಿಕರು ಶತ್ರು ಸೈನಿಕರನ್ನು ಹುಡುಕಿಕೊಂಡು ಅಲ್ಲಿಗೆ ಬಂದು ಬಾಗಿಲು ಬಡಿದಾಗ ರಾಹಿಲನು ದೈನ್ಯತೆಯಿಂದ ಮುದುಕಿಯನ್ನು ನೋಡಿದನು. ಅವನು ತಮ್ಮ ಕಡೆಯವನಲ್ಲ ಎಂದು ತಿಳಿಯಿತು. ಕೋಪ ಬಂದಿತು. ಆದರೆ ಅವಳಿಗೆ ಆತನ ಕಣ್ಣುಗಳು ಯುದ್ಧಕ್ಕೆ ಹೋದ ಅವಳ ಮಗನ ಕಣ್ಣುಗಳಂತೆಯೇ ಕಂಡಿತು. ಅವನು ಬಾಗಿಲು ತೆಗೆಯಬೇಡಿ ಎಂದು ಕೈಸನ್ನೆ ಮಾಡಿದನು. 

    ಹೊರಗೆ ಸೈನಿಕರು ಬಾಗಿಲು ತೆಗೆಯಿರಿ ಎಂದು ಗರ್ಜಿಸುತ್ತಿದ್ದರು. ಕೂಡಲೇ ಅವನ್ನು ಸೊಸೆಯ ಮಂಚದ ಕೆಳಗೆ ಅವತುಕೊಳ್ಳಲು ತಿಳಿಸಿ, ನಿರ್ಜೀವವಾಗಿದ್ದ ಮಗುವನ್ನು ಸೊಸೆಯ ಕೋಣೆಯ ಬಾಗಿಲಿನಲ್ಲಿ ಮಲಗಿಸಿ ಬಾಗಿಲು ತೆರೆದಳು. ಸೈನಿಕರ ಉಡುಪಿನಲ್ಲಿದ್ದ ನಾಲ್ಕೈದು ಜನರು, "ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ?" ಎಂದು ಕೇಳುತ್ತಾ ಒಳನುಗ್ಗಿದರು. 

    ಮುದುಕಿಯು ಯಾರೂ ಇಲ್ಲವೆಂದು ಹೇಳಿದರೂ ಕೇಳದೆ ಮನೆಯನ್ನು ಹುಡುಕಲು ಮುಂದಾದಾಗ “"ಹೂಂ...ನೋಡಿ; ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ! ಈ ಯುದ್ಧ ನನ್ನ ಮೊಮ್ಮಗುವನ್ನೂ ಉಳಿಸಲಿಲ್ಲವಲ್ಲ? ಯಾರಿಗಾಗಿ, ಯಾತಕ್ಕಾಗಿ ಈ ಯುದ್ಧ? ಅದನ್ನಾದರೂ ಹೇಳಿರಲ್ಲ?" ಎಂದು ಜೋರಾಗಿ ಅಳತೊಡಗಿದಳು. 

    ಮಗುವಿನ ಮೃತದೇಹ ನೋಡಿ ಅವರೆಲ್ಲಾ ಹೊರಟುಹೋದರು. ನಂತರ ಮುದುಕಿಯು ರಾಹಿಲನಿಗೆ ಆರಾತ್ರಿ ಉಳಿದುಕೊಳ್ಳಲು ಅವಕಾಶಮಾಡಿಕೊಟ್ಟಳು. ತಾನು ಮದುವೆಯಾಗಿ ಬಂದದ್ದು, ಆಗಲೂ ನಡೆದ ಯುದ್ಧ ಮತ್ತು ಅದರ ಅನಾಹುತಗಳನ್ನು ರಹೇಳಿಕೊಂಡು ವ್ಯಥೆಪಟ್ಟಳು. 

    ತನ್ನ ಮಗ ಇನ್ನೂ ಚಿಕ್ಕವನಿದ್ದಾಗ ಆತನ ತಂದೆ ಯುದ್ಧಕ್ಕೆ ಹೋದವನು ಹಿಂದಿರುಗಿ ಬರಲಿಲ್ಲ. ಅದೇ ರೀತಿ ಮಗನೂ ಈಗ ಯದ್ಧಕ್ಕೆ ಹೋಗಿದ್ದಾನೆ. ಐದಾರು ವರ್ಷಗಳ ಬಳಿಕ ಸೊಸೆ ಗರ್ಭಿಣಿಯಾಗಿದ್ದಳು. ಮಗುವನ್ನು ನೋಡಲು ಮಗನು ಕಾತರನಾಗಿದ್ದನು. ಅವನು ಹಿಂದಿರುಗಿ ಬಂದಿದ್ದರೆ ಸಾಕಾಗಿತ್ತು, ಮಗು ತೀರಿಹೋದ ವಿಷಯವನ್ನು ತಿಳಿದು ಆತನು ಎಷ್ಟು ಸಂಕಟ ಪಡುವನೋ ಎಂದು ದುಃಖಿಸಿದಳು.


**********ಕನ್ನಡ ದೀವಿಗೆ******