ನನ್ನ ಪುಟಗಳು

28 ಏಪ್ರಿಲ್ 2020

"ಅಪ್ಪ"

ಅಪ್ಪ ಅಪ್ಪ ಮುದ್ದಿನ ಅಪ್ಪ ನೀನೆ ನನ್ನ ದೇವರಪ್ಪ ವಿದ್ಯಾ ಬುದ್ಧಿಯ ಕಲಿಸಿದ ಗುರುವು ನೀನೆ ನೀತಿಯ ಪಾಠವ ಕಲಿಸಿದ ಗುರುವು ನೀನೆ ಬಾಳಲಿ ದಾರಿಯ ದೀಪವು ನೀನೆ ತಪ್ಪಿನ ಅರಿವನು ತಿಳಿಸಿದ ಗೆಳೆಯನು ನೀನೆ ಕಣ್ಣಿಗೆ ಕಾಣುವ ಸಹನಾ ಮೂರ್ತಿಯು ನೀನೆ ನನ್ನಯ ಕೋಪಕೆ ಶಾಂತಿಯ ಹಾದಿಯ ತೋರಿದ ಬುದ್ಧನು ನೀನೇನೆ!!! ನನ್ನಯ ತಿಮಿರನು‌ ಕಳಚಿ ಬುದ್ಧಿಯ ಬೆಳೆಸಿದ ಸಾಧಕ ನೀನೆ ಹಗಲು ಇರುಳು ಬಿಸಿಲೆನ್ನದೆ ದುಡಿದು ದುಡಿದೂ ಬೆಳೆಸಿದೆ ನನ್ನನು ನೀನು ಬಡತನವಿದ್ದರೂ ಗುಣದಲಿ ತೋರಿದೆ ಸಿರಿತನವ ನಿನ್ನಯ ದುಃಖವ ನನ್ನಯ ನಗುವಲಿ ಮರೆಯುತ ಬದುಕಿದೆ ನನಗಾಗಿ, ನನ್ನ ಏಳಿಗೆಗಾಗಿ. ಇಂತಹ ಕರುಣಾಮೂರ್ತಿಯ ಋಣವ ತೀರಿಸಲು ಸಾಧ್ಯವೇ ಇಲ್ಲ ಮರುಜನ್ಮದಲ್ಲೂ ಹುಟ್ಟುವೆ ನಿನ್ನಯ ಮಗನಾಗಿ. ಮಾಸ್ತಿ ಬಾಬು
ಮಾಸ್ತಿ
ಮಾಲೂರು ತಾ.
ಕೋಲಾರ ಜಿಲ್ಲೆ
 8050181213



ಕ್ಲಾಸ್ ರೂಮಿನ ಕವಿತೆಗಳು

ಡಸ್ಟರ್ ರಬ್ಬರ್ ತರ ಏನಾದರೂ ಒಂದು ವಸ್ತುವಿರವಾರದಿತ್ತೆ ಸಂಭಂದಗಳಿಗೂ, ಕೋಪ ತಾಪವ ಕೆಟ್ಟ ಗಳಿಗೆಗಳ ಅಳಿಸಿ ಹೇಗಾದರೂ ಸರಿ ಮಾಡಿ‌ ಸಂಭಂಧ ಉಳಿಸಿಕೊಳ್ಳಲು. ಅಬ್ಬಬ್ಬ!!! ಕಪ್ಪು ಹಲಗೆಯೊಂದಿಗೆ ಬಳಪಗಳು ಅದೆಷ್ಟು ಮಾತನಾಡುತ್ತವೆಂದರೆ ಕೇಳುವವರಿರಬೇಕು ಅಷ್ಟೇ. ಕೇಳುವವರಿಗೆ ಬೇಕಾದ್ದು ಕಿವಿಯಂತು ಅಲ್ಲವೇ ಅಲ್ಲ!! ಹೃದಯ ಬೇಕು. ಹೃದಯ!!! ಶಾಲೆಯಲ್ಲಿ ಡೆಸ್ಕಿನಷ್ಟು ನೆರವಾದ ಗೆಳೆಯ ಮತ್ತೊಬ್ಬರಿಲ್ಲ. ಮಲಗಬೇಕೆಂದಾಗ ತೊಟ್ಟಿಲಾಗಿದೆ. ಬರೆಯಬೇಕೆಂದಾಗ ನಮ್ಮ ಮೊದಲ ಸ್ಲೇಟಾಗಿದೆ. ನಾವು ಶಿಲ್ಪಿಗಳಾಗಬೇಕೆಂದಾಗ ಕೆತ್ತಿದ್ದೂ ಇದೆ ಡೆಸ್ಕ್ ಮೇಲೆಯೇ! ಕಿಟಕಿಯ ತುಟಿಗಳು‌ ಅದೆಷ್ಟು ಕಂಪಿಸುತ್ತವೆ ಗಾಳಿಯೆಂಬ ಗೆಳೆಯನ ಕಂಡು. ಹೃದಯದ ಬಡಿತವೆ ತುಟಿಯಲಿ ತೋರಿಸುತ್ತಿವೆ ಡಬಡಬವೆಂದು. ಗೆಳೆಯನ ಬಾಚಿ ಬಾಚಿ ತಬ್ಬಿ ಇನ್ನೂ ಶಬ್ದ ಹೊರಡುಸುತ್ತಲಿದೆ ಮುತ್ತುಗಳ‌ ಡಬಡಬವೆಂದೆ ಕೊಟ್ಟು.

- 13. 1ನೇ ಅಡ್ಡ ರಸ್ತೆ.
1ನೇ ಮುಖ್ಯ ರಸ್ತೆ.
ಕಂಠೀರವ ನಗರ.
ನಂದಿನಿ ಬಡಾವಣೆ.
ಬೆಂಗಳೂರು-560096

"ನನ್ನಾಕೆ ವರ್ಣನೆಗೆ ಸಿಗದಾಕೆ"

ಕವನ ಬರೆಯವಾಸೆ ಬರೆದು ಕವಿಯಾಗುವಾಸೆ. ಬರಿಯಲ್ಹೆಗೆ ಕವಿತೆಯಾ ಗೆಳತಿ ಬರೆಯುವ ಪ್ರತಿ ಸಾಲೂ ನೀನಾಗಿರಲಿ ಅಪರಿಮಿತ ಎಂಬುವದು ನನ್ನಭಿಮತ ಕವನ ಬರೆಯವಾಸೆ ಬರೆದು ಕವಿಯಾಗುವಾಸೆ. ಹೋಗದಿರು ಗೆಳತಿ ಕುಸುಮದ ಬನವ ಸೋಕಿ ದುಂಬಿ ಎಂದೆನಿಸಿ ನಿನ್ನ ಕೆನ್ನೆಗೆ ಚಿಟ್ಟೆಗಳು ಸೋಕೀತೆಂಬ ಭಯ. ಕವನ ಬರೆಯವಾಸೆ ಬರೆದು ಕವಿಯಾಗುವಾಸೆ. ನೆಡೆಯದಿರು ಗೆಳತಿ ಮಯೂರ ದತ್ತ ನಿನ್ನ ನೆಡೆಗೆ ನಾಚಿ ನವಿಲು ನೀರಾಗಬಹುದು ಕವನ ಬರೆಯವಾಸೆ ಬರೆದು ಕವಿಯಾಗುವಾಸೆ. ತೋರದಿರು ಗೆಳತಿ ನಿನ್ನ ಮೊಗವ ನಂದೇ ನೋಟಕೆ ಮುತ್ತುಗಳಂತ ನಯನಗಳು ಸೊರಗಿ ಕರಗಿಯಾವು ಕವನ ಬರೆಯವಾಸೆ ಗೆಳತಿ ಬರೆದು ನಿನ್ನಂದವ ಹೋಗಳುವಾಸೆ. ✍️ ರಾಜು ಕೆ ಪ್ರಿನ್ಸ್
ಸಾ: ಹೋನ್ನಾಯಕನಹಳ್ಳಿ ,
ಪೋ: ಕೊಂಬಳಿ ,
ತಾ: ಹೂವಿನಹಡಗಲಿ ,
ಜಿ: ಬಳ್ಳಾರಿ

***********

ಬೆಲೆಗಗ್ನಕ್ಕೆ.?!! ನನ್ನುತ್ತರ..

ಅನ್ನಬ್ರಹ್ಮನ ಗೋಳು ಯಾರರಿಯರು.. ಬೆಲೆ ಏರಿದರೆ ಕಣ್ಣೀರಿನ ವಿಡಂಬನೆ. ಮುರ್ಕಾಸಿಗೆ ಮಾರುವಾಗ ಸ್ವರ್ಗವೇ??. ಪಾನಕ ಮಜ್ಜಿಗೆ ಸಂತಸವೇ.. ಗಗನದಲಿ ರಸಗೊಬ್ಬರ ಮೌಂಟ್ ಶಿಖರದಲಿ ಕ್ರಿಮಿನಾಶಕ. ಎತ್ತಿರುಗಿದರು ಸಾಲದ ಕುಣಿಕೆ. ಸಬ್ಸಿಡಿ ಗೊಬ್ಬರೆಕ್ಕುವ ಕ್ರಿಮಿಗಳು. ವರುಣನ ಮುನಿಸು ನಿಸರ್ಗದ ರಂಪಾಟ ಕೊಚ್ಚಿದ್ದೆಚ್ಚು!!! .ಸಿಕ್ಕಿದ್ದೇ ನಾಲ್ಕಾಣೆ. ಹಾವೇಣಿಯಂತೆ ಬೆಲೆಯಾಟ. ಎಂಟಾಣೆಗೆ ನೂರೆಂಟು ಸುತ್ತ ಅಲೆಸುವ ಅಲೆಮಾರಿಗಳು. ಸಿಕ್ಕಿದ್ದಕ್ಕಿಂತ ಹೆಸರಲ್ಲಿ ಬಾಚವರೆಚ್ಚು. ಕುಟುಂಬ ರೋಧನ ಕುಣಿಕೆಯಲಿ ಯಜಮಾನ. ಸಾವಿಗೂ ಇಲ್ಲ ಕನಿಕರ ..... ನನ್ನಿ ಗೋಳಿಗೆ ನಾನೇ ಕಾರಣ????. ಬೊಬ್ಬಿಡುವ ಜಾಣಕುರುಡರೇ.? ಆಲಿಸಿ ಪರಮಾನಂದವ.. ಹರಿದರು ಮೊಣಕಾಲು, ಬಸಿದರು ರಕ್ತ, ಸುಟ್ಟರು ಒಣಕಲು ದೇಹ ಮೂಳೆಮಾಂಸವತ್ತಿಟ್ಟರು ದಾಹ ತೀರದು. ಹರ್ಕಂಗಿ ಬೆಂತೋರ್ಸಿ ನಿಲಬಿದ್ದರು ಕೆಳವ್ರರ್ ಯಾರು?..ಕ್ಷಣದ ಅನುಕಂಪ ಸತ್ತಮನಸಿಗೆ ಮುಲಾಮಂತೆ. ಮೂಳೆಮಾಂಸವ ಸವೇಸಾರು... ಫಲದ ಫಲ ಭೂಒಡಲಿಗೆ. ಆಡುವದಲ್ಲ ಮಾಡುವುದೇಚ್ಚು ಕಾಯಕದಲಿ ಶೂನ್ಯವರವು. ಕೀಳ್ಬೇಡ ...ರೈತನೆಂದು ಚುಚ್ಚದಿರು ಬೆಲೇಚ್ಚೆ0ದು. ಹರಸಿ ಹಾರೈಸು ಅನ್ನದಾತನೆಂದು. ಸಗ್ಗವು ಉಸಿರಿಸಲಿ ಅನ್ನಬ್ರಹ್ಮನ ಅನ್ನಮಹಿಮೆಯ. ಚೌಡ್ಲಾಪುರ ಸೂರಿ.✍✍
GLPS ಕೋಟೆಹಾಳು

ಮನಸ್ಸಿಗೆ ಹೇಳಿ ! ನೀನೇಕೆ ಸ್ತಬ್ಧನಾಗಿರುವೆ?


ನಾವು ಪ್ರತಿದಿನ ಪ್ರತಿಕ್ಷಣ ಮಾಡುವ ಪ್ರತಿಯೊಂದು ಕಾರ್ಯಗಳಿಗೂ ನಮ್ಮ ಒಳಗೆ ಕೆಲಸ ಮಾಡುವ ಮನಸ್ಸೇ ವಾರಸುದಾರ. ಇಂತಹ ಮನಸ್ಸು ಎಷ್ಟೊಂದು ಅಗೋಚರ. ಇದನ್ನು ಅರಿತು ಕೆಲಸ ಮಾಡುವವನೇ ನಿಜವಾದ ಚರ. ಜಗತ್ತಿನ ಆಗುಹೋಗುಗಳಿಗೆ ದೇವರನ್ನೇ ದೂರುವ ನಾವು ನಮ್ಮೊಳಗಿನ ಜಯ ಅಪಜಯಗಳಿಗೂ ದೇವರನ್ನು ಹೊಣೆಗಾರನನ್ನಾಗಿಸುವುದು ಎಷ್ಟು ಸಮಂಜಸ. ನಾನೊಬ್ಬ ಉದ್ಯೋಗಿ ಎಂದಾದರೆ ಆ ಕ್ಷೇತ್ರದಲ್ಲಿ ಇಂದು ಇದ್ದಂತೆ ನನ್ನ ಮನಸ್ಸು ನಾಳೆ ಇರಬೇಕೆಂದಿಲ್ಲ. ಇಂದಿನ ಸಂತೋಷಕ್ಕೆ ನಾವೇ ಕಾರಣವಾದಂತೆ ನಾಳಿನ ದುಃಖಕ್ಕೂ ನಾವೇ ಕಾರಣ. ನಿದ್ದೆಯೊಂದು ಮಾನವನ ಅರ್ಧ ಸಾವು ಎನ್ನುತ್ತಾರೆ. ಅಂದರೆ ಪ್ರತಿನಿತ್ಯ ಸತ್ತು ಹುಟ್ಟುವ ನಮಗೆ ಪ್ರತಿದಿನವೂ ಹೊಸದಾಗಿಯೇ ಇರುವುದು. ಇದರೊಂದಿಗೆ ನಾವು ಎದುರಿಸಿದ್ದೆಲ್ಲವೂ ನಮಗೆ ಒದಗಿ ಬಂದ ಅನುಭವವೇ ಆಗಿದೆ. ಈ ವೈಪರಿತ್ಯಗಳ ನಡುವೆ ನಮ್ಮ ಮನಸ್ಸನ್ನು ಹದಗೊಳಿಸುವುದೇ ನಮ್ಮ ಆ ದಿನದ ಮೊದಲ ಕರ್ತವ್ಯವಾಗಿದೆ. ತಬಲ ವಾದಕ ಅದನ್ನು ನುಡಿಸುವ ಮುನ್ನ ಅದರ ಎಲ್ಲಾ ಆಯಾಮಗಳನ್ನು ಪರೀಕ್ಷಿಸಿ ಸಿದ್ಧಪಡಿಸುವಂತೆ, ಸಂಗೀತಗಾರ ತನ್ನ ಹಿನ್ನೆಲೆ ವಾದ್ಯಗಳನ್ನು ಶ್ರುತಿಮಾಡಿಕೊಳ್ಳುವಂತೆ ನಾವು ಇಂದಿನ ದಿನದ ಕಾಯಕ ವೇದಿಕೆಯಲ್ಲಿ ದೇಹದೊಂದಿಗೆ ಮನಸ್ಸನ್ನು ಶ್ರುತಿ ಮಾಡಿಕೊಳ್ಳಬೇಕಲ್ಲವೇ. ನೆನ್ನೆಯ ಕಾರ್ಯವೈಖರಿಗಿಂತ ಇಂದಿನ ಕಾರ್ಯ ಉತ್ತಮವಾಗಿದ್ದರೆ ಅದುವೇ ನಿಜವಾದ ಸಾಧನೆ ಎಂದಿದ್ದಾರೆ ಕ್ರಾಂತಿ ವೀರ ಚಂದ್ರಶೇಖರ್ ಆಜಾ಼ದ್. ಈ ಎಲ್ಲಾ ಅಂಶಗಳು ತಾತ್ವಿಕವಾಗಿ ಯೋಚಿಸಿದಾಗ ದಿಟವೆನಿಸಿದರೂ ; ಪ್ರಾಯೋಗಿಕವಾಗಿ ಕೆಲವೊಮ್ಮೆ ಜೀವನದಲ್ಲಿ ನಮ್ಮ ಮನಸ್ಸು ವಿಚಲಿತಗೊಂಡು ಸ್ತಬ್ಧರಾಗುತ್ತೇವೆ. ಆಗ ನಿಜವಾಗಿಯೂ ನಾವು ಮಾಡಬೇಕಾದುದೇನು ಎಂಬುದು ತೋಚದೆ ಯಾವುದೋ ತಪ್ಪು ನಿರ್ಧಾರಕ್ಕೆ ಮನಸ್ಸನ್ನು ಒಡ್ಡುತ್ತೇವೆ. ಆದರೆ ಇಲ್ಲಿ ಇರುವುದೇ ನಮ್ಮ ನಿಜವಾದ ಅಗ್ನಿಪರೀಕ್ಷೆ. ಅದುವೇ ನಮ್ಮ ಸತ್ವಪರೀಕ್ಷೆಯಾಗಿರುತ್ತದೆ. ಆಗ ಕೇಳಿ ಮನಸ್ಸಿಗೆ ನೀನೇಕೆ ಸ್ತಬ್ಧನಾಗಿರುವೆ? ಕರೆಯಿರಿ ನಿಮ್ಮೊಡನೆ. ಸಂಗೀತಗಾರ ಶ್ರುತಿ ಮಾಡಿದಂತೆ ಸರಿಯಾದ ‘ಸರಿಗಮಪದನಿ’ ರೂಪಿಸಿ; ಸಪ್ತ ಸ್ವರಗಳ ಸಂಗಮದೊಡನೆ ಸಂಗೀತದ ಇಂಪನ್ನು ಆಲಿಸಿ.ದೇಹ ಮನಸ್ಸು ಒಂದಾದಾಗ ಒಂದು ದಿವ್ಯವಾದ ಶಕ್ತಿ ನಿಮ್ಮಿಂದ ಹೊರಹೊಮ್ಮುವುದು. ಅದುವೇ ನಿಮ್ಮೊಳಗಿನ ಸಾತ್ವಿಕ ಪ್ರತಿಭೆ. ಇದುವೇ ಮುಂದೆ ಸ್ವಭಾವವಾದಾಗ ನಮ್ಮ ವ್ಯಕ್ತಿತ್ವವೇ ಸಾತ್ವಿಕ ಪ್ರಜ್ಞೆಯನ್ನು ರೂಪಿಸಿಕೊಳ್ಳುವುದು. ಸಮಾಜದಲ್ಲಿ ಸಾತ್ವಿಕರಾಗಿ ಬಾಳಿ ಉಜ್ವಲ ಭವಿಷ್ಯವನ್ನು ಬೆಳಗುವಿರಿ. ಇದಕ್ಕೆ ನಿಶ್ಚಿತವಾಗಿ ಬೇಕಿರುವುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಮಂಡಲ ಹಾಗೂ ಸಿಡಿಲಿನಂತಹ ಇಚ್ಚಾಶಕ್ತಿ. ಅಲ್ಲವೇ ……………
- ಚರಣ್ ರಾಜ್ ಯಡಾಡಿ ಶ್ಯಾನುಭೋಗರಬೆಟ್ಟು ಯಡಾಡಿ ಮತ್ಯಾಡಿ ಅಂಚೆ ಕುಂದಾಪುರ ತಾಲ್ಲೂಕು
ಉಡುಪಿ ಜಿಲ್ಲೆ 576222

'ಮಲೆನಾಡಿನ ಮಡಿಲು'

ಮಾಲೆಯಂತೆ ಪೋಣಿಸಿಹ ಮಲೆಗಳ ಸಾಲು, ಮುಗಿಲಿಗೆ ಮುತ್ತಿಡುತಿವೆ ಸಹ್ಯಾದ್ರಿಯ ಶಿಖರ, ಕವಿಗಳ ಕವಿತೆಯಲ್ಲೊಳೆವ ಮುತ್ತಿನ ಅಕ್ಷರ, ಇದುವೇ ನಮ್ಮ ಕರ್ನಾಟಕದ ಕಾಶ್ಮೀರ. ಅಚ್ಚ ಹಸಿರಿನ ನಾಡು, ವನ್ಯ ಜೀವಿಗಳ ಬೀಡು, ಬಗೆ ಬಗೆಯ ಬಾನಾಡಿಗಳ ಗೂಡು, ಇದುವೇ ನಮ್ಮ ಹೆಮ್ಮೆಯ ಮಲೆನಾಡು. ಗರಿ ಬಿಚ್ಚಿ ನಲಿಯುತಿದೆ ನವಿಲು, ಬಾನಂಗಳದಿ ಮಳೆಬಿಲ್ಲು ಮೂಡಿರಲು. ಹರುಷದಲಿ ಜಿಂಕೆಗಳು ಜಿಗಿಜಿಗಿಯುತಿರಲು, ಹಸಿರ ಗರಿಕೆಯು ಎಲ್ಲೆಲ್ಲೂ ಚಿಗುರಿರಲು. ಶರಾವತಿ ಜನಿಸಿಹಳು ಅಂಬುತೀರ್ಥದಿ, ಬಳುಕುತ ಧುಮುಕುತಿಹಳು ಜೋಗ ಜಲಪಾತದಿ. ಗಂಗಾಮೂಲದಿ ಹುಟ್ಟಿಹಳು ತುಂಗೆ, ನಗು ನಗುತಾ ಹರಿಯುತಿಹಳು, ಈ ಮಲೆನಾಡ ಮಡಿಲೊಳಗೆ, ಜೀವ ಜಲವಾಗಿರುವಳು ಸಹಸ್ರಾರು ಜೀವ ಕುಲಕೆ, ಎದೆ ಗೂಡಿನ ಉಸಿರಿವಳು ಅನ್ನಬ್ರಹ್ಮನಿಗೆ.

- ದರ್ಶನ್ ಕೆ
ಚಿಕ್ಕಮರಡಿ, ಶಿವಮೊಗ್ಗ.
೯೯೮೦೭೨೮೯೬೭

"ಭಕ್ತಿ ಭಾವ"

"ಭಕ್ತಿ ಭಾವ" ಭಗವಂತ ಭವ್ಯವಾದ ಭವಸಾಗರ ಆದರೆ, ಬಾಳಲ್ಲಿ ಬೆಟ್ಟದಷ್ಟು ಬವಣೆಯಿಟ್ಟ.! ಮಗದೊಮ್ಮೆ ಪರಿಹರಿಸಿಕೊಳ್ಳಲೆಂದು ತೋಳ್ಗಳಲ್ಲಿ ಬಲ ಕೊಟ್ಟು ಬದುಕುಳಿಸಿದ.! ಇವನ ನಾಮಾಂಕಿತ ಸಹಸ್ರಾರು ಆದರೆ, ಇದನ್ನರಿಯರು ಈ ನರಮಾನವರು ಅರಿಯರೇನು ಅರಿಯದಿದ್ದರೇನು ಮನುಕುಲವೆಲ್ಲಾ ಎಂದಿದ್ದರೂ ಒಂದೇ ಅಲ್ಲವೇ..? ಕ್ರಿಯಾಕರ್ತ ಸೃಜಿಸಿದ ಗೇಯದ ವರ್ಣವೊಂದೇ ವಿಭಿನ್ನ.! ಆದರೆ ಸರ್ವರಿಗೊಂದೇ ರೀತಿಯಲ್ಲಿ ಚೇತನಕ್ಕೆ ನೆತ್ತರು, ಉಸಿರಾಡಲು ಶ್ವಾಸಾಂಗವನ್ನು ಕೊಟ್ಟು ಭಿನ್ನತೆಯಲ್ಲಿ ಏಕತೆಯನ್ನು ಸಾರಿದ.! ಕಾಣದ ಸೃಷ್ಟಿಕರ್ತ ಮರೆಯಲ್ಲೆಲ್ಲೋ ನಿಂತು ಸುಖ-ದುಃಖ ಕೊಟ್ಟು ಸಂತೈಸಿದ.! ಅಧಮರನ್ನ ಅಂತ್ಯಗೊಳಿಸಿ ಪಾಮರ ಪರಮೋತ್ತಮರನ್ನ ಹಾರೈಸಿದ.! ಭಕ್ತಿ ಬೆಳಗಲಿ, ಯುಕ್ತಿ ಮೆರೆಯಲಿ ಜಾಢ್ಯ ತೊಲಗಲಿ, ಮೌಢ್ಯ ಮಣ್ಣಾಗಲಿ.! ಮಾನವೀಯತೆ ವಿಶ್ವವ್ಯಾಪಿಯಾಗಿ ಪಸರಿಸಲಿ ಸರ್ವಧರ್ಮ ಸಮನ್ವಯತೆ ವಿಶ್ವದೆಲ್ಲೆಡೆ ಮೇಳೈಸಿ ಮೊಳಗಲೀ.! ಮೊಳಗಲಿ.! ಮೊಳಗಲಿ..!
ರಚನೆ : ದೊಡ್ಡಬಸಪ್ಪ ಕರಿಗಾರ. ಬಿಗ್'ಬಿ ಇಟ್ಟಿಗಿ ಇಟ್ಟಿಗಿ (ಅಂಚೆ )
ಹೂವಿನ ಹಡಗಲಿ (ತಾಲೂಕು)
ಬಳ್ಳಾರಿ (ಜಿಲ್ಲೆ )



****************