ಅಪ್ಪ ಅಪ್ಪ
ಮುದ್ದಿನ ಅಪ್ಪ
ನೀನೆ ನನ್ನ ದೇವರಪ್ಪ
ವಿದ್ಯಾ ಬುದ್ಧಿಯ ಕಲಿಸಿದ ಗುರುವು ನೀನೆ
ನೀತಿಯ ಪಾಠವ ಕಲಿಸಿದ ಗುರುವು ನೀನೆ
ಬಾಳಲಿ ದಾರಿಯ ದೀಪವು ನೀನೆ
ತಪ್ಪಿನ ಅರಿವನು ತಿಳಿಸಿದ ಗೆಳೆಯನು ನೀನೆ
ಕಣ್ಣಿಗೆ ಕಾಣುವ ಸಹನಾ ಮೂರ್ತಿಯು ನೀನೆ
ನನ್ನಯ ಕೋಪಕೆ ಶಾಂತಿಯ ಹಾದಿಯ
ತೋರಿದ ಬುದ್ಧನು ನೀನೇನೆ!!!
ನನ್ನಯ ತಿಮಿರನು ಕಳಚಿ
ಬುದ್ಧಿಯ ಬೆಳೆಸಿದ ಸಾಧಕ ನೀನೆ
ಹಗಲು ಇರುಳು ಬಿಸಿಲೆನ್ನದೆ
ದುಡಿದು ದುಡಿದೂ ಬೆಳೆಸಿದೆ ನನ್ನನು ನೀನು
ಬಡತನವಿದ್ದರೂ ಗುಣದಲಿ ತೋರಿದೆ ಸಿರಿತನವ
ನಿನ್ನಯ ದುಃಖವ ನನ್ನಯ ನಗುವಲಿ ಮರೆಯುತ
ಬದುಕಿದೆ ನನಗಾಗಿ, ನನ್ನ ಏಳಿಗೆಗಾಗಿ.
ಇಂತಹ ಕರುಣಾಮೂರ್ತಿಯ
ಋಣವ ತೀರಿಸಲು ಸಾಧ್ಯವೇ ಇಲ್ಲ
ಮರುಜನ್ಮದಲ್ಲೂ ಹುಟ್ಟುವೆ
ನಿನ್ನಯ ಮಗನಾಗಿ.
ಮಾಸ್ತಿ ಬಾಬು
ಮಾಸ್ತಿ
ಮಾಲೂರು ತಾ.
ಕೋಲಾರ ಜಿಲ್ಲೆ
8050181213
ಮಾಸ್ತಿ
ಮಾಲೂರು ತಾ.
ಕೋಲಾರ ಜಿಲ್ಲೆ
8050181213