ನನ್ನ ಪುಟಗಳು

10 ಏಪ್ರಿಲ್ 2018

ಪಂಪಭಾರತ : ಗದ್ಯಾನುವಾದ - ಅನುಬಂಧ

 ಅನುಬಂಧ
ಪಂಪನು ತನ್ನ ಭಾರತದ ಪ್ರಾರಂಭದಲ್ಲಿ ತನ್ನ ಪೋಷಕನಾದ ಅರಿಕೇಸರಿಯ ವಂಶವೃಕ್ಷವನ್ನು ವಿಸ್ತಾರವಾಗಿ ಕೊಟ್ಟಿದ್ದಾನೆ. ಇದು ಐತಿಹಾಸಿಕ ದೃಷ್ಟಿಯಿಂದ ಬಹು ಉಪಯುಕ್ತವಾಗಿದೆ. ಅದರ ವಿವರ ಈ ರೀತಿ ಇದೆ.

ಶ್ರೀಮಚ್ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನೆಂಬಂತೆ ಕಾಂತಿಯಿಂದ ಕೂಡಿ ಈ ಭೂಮಿಯಲ್ಲಿ ತನ್ನ ಕುಲಕ್ಕೆ ಶಿಖಾಮಣಿಯಾದ ಯುದ್ಧಮಲ್ಲನು ಪ್ರಸಿದ್ಧನಾದನು. ಪ್ರಬಲನಾದ ಆತನು ತೋಳಬಲದ ಖ್ಯಾತಿಯನ್ನು ಪಡೆದು ಅನೇಕ ರಾಜರ ರತ್ನಕಿರೀಟಗಳ ಕಾಂತಿಯಿಂದ ತನ್ನ ಪಾದಗಳು ಬೆಳಗುವಂತೆ ಮಾಡಿ ಸಪಾದ ಲಕ್ಷಕ್ಷಿತಿಯನ್ನು ಆಳಿದನು. ಇವನು ಬೋದನವೆಂಬ ತನ್ನ ರಾಜಧಾನಿಯಲ್ಲಿ ಪ್ರತಿದಿನವೂ ಬಾವಿಗಳಲ್ಲಿ ಎಣ್ಣೆಯನ್ನು ತುಂಬಿ ಐನೂರು ಆನೆಗಳನ್ನು ಸ್ನಾನಮಾಡಿಸುವನು. ಈ ಯುದ್ಧಮಲ್ಲ ಮಹೀಪತಿಗೆ ಸುಂದರಾಂಗನಾದ ಅರಿಕೇಸರಿಯು ರಾಜನಿಗೆ ಕೀರ್ತಿ ಹುಟ್ಟುವಂತೆ ಹುಟ್ಟಿ ಮಂತ್ರಿಗಳಿಂದ ಕೂಡಿ ತನ್ನ ಕಿತ್ತ ಕತ್ತಿಯಿಂದ ವಿರೋರಾಜರ ಅಮೂಲ್ಯವಾದ ವಸ್ತುಗಳನ್ನೂ ಆನೆ ಕುದುರೆಗಳನ್ನೂ ಗೆದ್ದು ನಿರುಪಮನೆಂಬ ರಾಜನ ಆಳ್ವಿಕೆಯಲ್ಲಿ ಮೂರು ಕಳಿಂಗ ದೇಶಗಳೊಡನೆ ವೆಂಗಿಮಂಡಲವನ್ನೂ ಗೆದ್ದು ದಿಗ್ಭಿತ್ತಿಗಳಲ್ಲಿ ಗರ್ವದಿಂದ ತನ್ನ ಹೆಸರನ್ನು ಬರೆಯಿಸಿದನು. ಕ್ಷತ್ರಿಯ ಗುಣಗಳು ಆ ಕುಲದಲ್ಲಿ ಈತನಿಂದಲೇ ನೆಲಸಿ ನಿಂದುವು, ಅಲ್ಲದೆ ಅರಿಕೇಸರಿಯು ಮಾಡಿದ ಕಾರ್ಯಗಳು ಮೂರು ಲೋಕದಲ್ಲಿಯೂ ಪ್ರಖ್ಯಾತರಾದ ಆದಿ ಕ್ಷತ್ರಿಯರಲ್ಲಿಯೂ ಇಲ್ಲವೆನ್ನುವಷ್ಟು ಪ್ರಸಿದ್ಧಿಯಾದುವು. ಅರಿಕೇಸರಿಗೆ ನರಸಿಂಹ, ಭದ್ರದೇವ ಎಂಬಿಬ್ಬರು ಮಕ್ಕಳಾದರು. ಶತ್ರುರಾಜರ ತಲೆಗಳನ್ನು ಸೀಳುವಷ್ಟು ಭಯಂಕರವಾದ ಕತ್ತಿಗಳನ್ನುಳ್ಳ ಬಾಹುಬಲವುಳ್ಳವರವರು. ಅವರಲ್ಲಿ ಹಿರಿಯನಾದ ನರಸಿಂಹನಿಗೆ ಯುದ್ಧಮಲ್ಲನೆಂಬುವನು ಹಿರಿಯ ಮಗ, ಭುವನಪ್ರದೀಪನೂ ಅವಾರ್ಯವೀರ್ಯನೂ ಆದ ಯುದ್ಧಮಲ್ಲನಿಗೆ ಬದ್ದೆಗನು ಹಿರಿಯ ಮಗ. ಇವನು ಹುಟ್ಟಿದೊಡನೆಯೇ ಜ್ಞಾನವೂ ಜ್ಞಾನದೊಡನೆ ಐಶ್ವರ್ಯವೂ ಅದರೊಡನೆ ಅತ್ಯತಿಶಯವಾದ ಪರಾಕ್ರಮವೂ ಹುಟ್ಟಿದುವು. ತನ್ನ ವಿಶೇಷ ಶಕ್ತಿಯಿಂದ ಶತ್ರುರಾಜರನ್ನು ಚದುರಿಸಿ ರಣರಂಗದಲ್ಲಿ ತನ್ನ ಪರಾಕ್ರಮವನ್ನು ಕೊಂಡಾಡುವ ಹಾಗೆ ನಲವತ್ತೆರಡು ಕಾಳಗಗಳಲ್ಲಿ ಜಯವನ್ನು ಸಂಪಾದಿಸಿದನು. ಸಮುದ್ರ ಮುದ್ರಿತವಾದ ಈ ಭೂಮಂಡಲದಲ್ಲಿ ಯಾರಿಗೂ ಸೋಲದವನು ಇವನೇ ಎಂಬ ಖ್ಯಾತಿಯನ್ನು ಸಂಪಾದಿಸಿದುದಲ್ಲದೆ ಬದ್ದೆಗನು ಭೀಮನೆಂಬ ರಾಜನನ್ನು ಬಹಳ ಗರ್ವದಿಂದ ನೀರಿನಲ್ಲಿ ಮೊಸಳೆಯನ್ನು ಹಿಡಿಯುವಂತೆ ಒತ್ತಿ ಹಿಡಿದನು, ಮುಗಿಲನ್ನು ಮುಟ್ಟಿದ ಪೆಂಪು, ಪೆಂಪನ್ನು ಒಳಕೊಂಡ ಉದ್ಯೋಗ, ಉದ್ಯೋಗದ ಫಲವಾದ ಆಜ್ಞಾಫಲ, ಆಜ್ಞೆಯಿಂದ ಭಯಪಟ್ಟು ಬಾಗಿ ನಿಂತ ಶತ್ರುರಾಜರ ಸಮೂಹ ಇವು ತನ್ನ ಕೀರ್ತಿ ಯಶಸ್ಸಿಗೆ ಆಶ್ರಯವಾಗಿರಲು ಬದ್ದೆಗನು ತನ್ನ ಹುಬ್ಬನ್ನು ಹಾರಿಸುವುದರಿಂದಲೇ ಕೋಟ್ಯಂತರ ಜನವನ್ನು ಅನಮಾಡಿಕೊಳ್ಳುವನು. ಅವನ ಭಂಡಾರದಲ್ಲಿ ಮೇರುಪರ್ವತದ ಚಿನ್ನವಿದೆ. ಕಲ್ಪವೃಕ್ಷಗಳ ತೋಟವಿದೆ, ಸಿದ್ಧರಸದ ಒರತೆಯಿದೆ, ಸ್ಪರ್ಶಶಿಲೆಯ ಗಣಿಯಿದೆ, ತಡೆಯಿಲ್ಲದೆ ದಾನಮಾಡುವವರಲ್ಲಿ ಬದ್ದೆಗನನ್ನು ಹೋಲುವವರಾದ್ದಾರೆ! ಆ ಭದ್ರದೇವನ ತ್ಯಾಗಕ್ಕೆ ಹೊರಗಾದುದಾವುದೂ ಇರಲಿಲ್ಲ.

ಆ ಬದ್ದೆಗನಿಗೆ ವೈರಿಗಳೆಂಬ ಕತ್ತಲೆಗೆ ಸೂರ್ಯನೂ ಭೂಮಿಯನ್ನು ಗೆಲ್ಲಲು ಸಮರ್ಥವಾದ ವಿಜಯ ಭುಜಬಲವುಳ್ಳವನೂ ಆದ ಯುದ್ಧಮಲ್ಲನು ಮಗ. ಇವನ ಮಗ ನರಸಿಂಹನು ನಹುಷ ಪೃಥು, ಭಗೀರಥ, ನಳರೆಂಬ ಮಹಾಪುರುಷರನ್ನು ಕಡೆಗಾಣಿಸಿದ ಮಹಿಮೆಯುಳ್ಳವನೂ ಜ್ಞಾನದಲ್ಲಿ ಪರಮಾತ್ಮನಂತಿದ್ದವನೂ ಆಗಿ ಹಿರಿಯರ ಆಜ್ಞೆಯನ್ನು ಉಲ್ಲಂಘನೆ ಮಾಡದೆ ಶತ್ರುಸೈನ್ಯವನ್ನು ಅಡಗಿಸಿಕೊಳ್ಳುವುದರಲ್ಲಿ ಅವನ ಕೋಪವು ತಡೆಯಿಲ್ಲದುದಾಗಿದ್ದಿತು. ನರಸಿಂಹನು ಲಾಟದೇಶದ ಮೇಲೆ ನುಗ್ಗಿ ಯುದ್ಧಮಾಡಿದ ವಿಷಯವನ್ನು ಕೇಳಿ ಆ ದೇಶದವರು ಆಗ ಸತ್ತವರಿಗೆ ಈಗಲೂ ತರ್ಪಣವನ್ನು ಕೊಡುತ್ತಿರುವರು. ಸಿಂಹದಂತೆ ಕೆರಳಿ ನರಸಿಂಹನು ಯುದ್ಧಮಾಡಿದಾಗ ಚಿಮ್ಮಿದ ರಕ್ತವು ಈಗಲೂ ಆಕಾಶದಲ್ಲಿ ಕೆಂಗುಡಿಯು ಮುಸುಕಿದಂತಿದೆ, ಸಪ್ತ ಮಾಲವಗಳನ್ನು ಸುಟ್ಟು ಕರಿಕೇರಿಸಿದ ಜ್ವಾಲೆಗಳು ಅವನ ತೇಜಸ್ಸಿನ ಬಿಳಲುಗಳನ್ನು ಅನುಕರಿಸಿದವು. ವಿಜಯಗಜಗಳೊಡನೆ ಘೂರ್ಜರ ರಾಜ್ಯವನ್ನು ಮುತ್ತಿ ಅದನ್ನು ಗೆದ್ದು ವಿಜಯನನ್ನು ತಿರಸ್ಕರಿಸಿದ್ದಾನೆ. ಸಿಡಿಲೆರಗುವಂತೆ ಹಾಗೆ ಎರಗಿದ ನರಸಿಂಹನ ಸೈನ್ಯಕ್ಕೆ ಹೆದರಿ ಮಹಿಪಾಲನೆಂಬ ರಾಜನು ಉಂಡೆಡೆಯಲ್ಲಿ ಉಣ್ಣದೆ ಕೆಡೆದೆಡೆಯಲ್ಲಿ ಕೆಡೆಯದೆ ಓಡಿಹೋದನು. ಅಲ್ಲದೆ ನರಸಿಂಹನು ತನ್ನ ಕುದುರೆಯನ್ನು ಗಂಗಾನದಿಯಲ್ಲಿ ಮೀಯಿಸಿ ಕಾಳಪ್ರಿಯದಲ್ಲಿ ತನ್ನ ಭುಜವಿಜಯಗರ್ವದಿಂದ ವಿಜಯಸ್ತಂಭವನ್ನು ಸ್ಥಾಪಿಸಿದನು.

ಈ ನರಸಿಂಹ ಮನೋನಯನಪ್ರಿಯೆ ಜಾಕವ್ವೆ, ಚಂಚಲವಾದ ಕರಿಯ ಮುಂಗುರುಳುಳ್ಳವಳೂ ಚಂದ್ರನಂತೆ ಮುಖವುಳ್ಳವಳೂ ಆದ ಇವಳು ಕುಲದಲ್ಲಿಯೂ ಶೀಲದಲ್ಲಿಯೂ ಸೀತಾದೇವಿಗಿಂತ ಸೀತಾದೇವಿಗಿಂತ ಅಗ್ಗಳವಾದವಳು. ಹೊಸದಾಗಿ ಅರಳಿತ ತಾವರೆಯೆಸಳ

ಮೇಲಿರುವ ಲಕ್ಷ್ಮಿಯೂ ಈ ಜಾಕವ್ವೆಯ ಪಕ್ಕದಲ್ಲಿ ಕಾಂತಿಹೀನಳಾಗುತ್ತಾಳೆ ಎಂದ ಮೇಲೆ ಉಳಿದ ಸಾಮಾನ್ಯಸ್ತ್ರೀಯರು ಈಕೆಗೆ ಸಮನಾಗುತ್ತಾರೆಯೇ.

ಆ ಜಾಕವ್ವೆಗೂ ಆ ಭೂವಲ್ಲಭ ನರಸಿಂಹನಿಗೂ ಅತಿವಿಶದ ಯಶೋವಿತಾನನಾದ ಅರಿಕೇಸರಿ ತನ್ನ ತೇಜೋಗ್ನಿಯಲ್ಲಿ ಮಗ್ನರಾದ ರಿಪುಶಲಭವನ್ನುಳ್ಳವನಾಗಿ ಮಗನಾಗಿ ಹುಟ್ಟಿದನು. ಅವನು ಹುಟ್ಟಿದಾಗ ಆನೆಯ ಮದೋದಕವನ್ನೇ ಬೆಚ್ಚುನೀರಾಗಿ ತಳಿದರು. ಆನೆಯ ಅಂಕುಶದಿಂದ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದರು, ಆನೆಯ ದಂತದ ತೊಟ್ಟಿಲಿನಲ್ಲಿಟ್ಟು ತೂಗಿದರು. ಆದುದರಿಂದ ಈ ಬಾಲ್ಯದಿಂದಲೇ ಅರಿಕೇಸರಿಯು ಗಜಪ್ರಿಯನೆಂಬುದನ್ನು ತೋರಿಸಿದನು. ತಾನೇ ಪ್ರತ್ಯಕ್ಷ ಇಂದ್ರನೆಂಬಂತೆ ಪ್ರಕಾಶಿಸಿದ ಇಂದ್ರನ ತೋಳೇ ತೊಟ್ಟಿಲಾಗಿ ಬೆಳೆದನು, ಅಮೇಯ ಬಲಶಾಲಿಯೂ ಮನುಜಮಾರ್ತಾಂಡನೂ ಆದ ಇವನಿಗೆ ಬುದ್ಧಿಶಕ್ತಿಯಿಂದಲೂ ಪೌರುಷ ಶಕ್ತಿಯಿಂದಲೂ ಶಾಸ್ತ್ರಪಾರವೂ ಶತ್ರುಸೈನ್ಯಪಾರವೂ ಜೊತೆಯಲ್ಲಿಯೇ ಸಿದ್ಧಿಸಿದುವು. (ನಡುವಿನ) ಉಡುವಣಿ ಹರಿಯುವುದಕ್ಕೆ ಮುಂಚೆಯೇ ಛಲದಿಂದ ಶತ್ರುಸೈನ್ಯವನ್ನು ಚದುರಿಸಿ ಶತ್ರುಸೈನ್ಯದ ರಕ್ತ ಸಮುದ್ರದಲ್ಲಿ ಜಿಗುಳೆ ಬೆಳೆಯುವ ತೆರದಲ್ಲಿ ಬೆಳೆದನು. ಪ್ರತಿಭಟಿಸಿದ ಸೈನ್ಯವು ಕೋಟಿಸಂಖ್ಯೆಯನ್ನು ಮೀರಿರಲು ಪರಸ್ತ್ರೀಯು ಊರ್ವಶಿಗಿಂತ ಮೇಲಾಗಿದ್ದರೂ ಎಂದು ಅವನ ಕಣ್ಣು ಸೋಲುವುದಿಲ್ಲ. ಯುದ್ಧದಲ್ಲಿ ಮೂರುಲೋಕವು ನಿಂತಿದ್ದರೂ ದಾನಮಾಡುವಾಗ ಮೇರುಪರ್ವತವೇ ಎದುರಿಗಿದ್ದರೂ ತನ್ನ ಶೌರ್ಯಕ್ಕೂ ಔದಾರ್ಯಕ್ಕೂ ಇದು ಸಾಲದೆಂದು ಪ್ರಿಯಗಳ್ಳನು ಚಿಂತಿಸುವನು. ಇತರ ಮಹಾಸಾಮಂತರು ಸ್ವಸ್ತ್ಯಾದಿ ಬಿರುದುಗಳನ್ನು ಹೊಗಳಿಸಿಕೊಳ್ಳುವುದರಲ್ಲಿ ಸಮಾನರಾಗುತ್ತಾರೆಯೇ ವಿನಾ ಗುಣದಲ್ಲಿ ಸಮಾನರಾಗಲಾರರು.

ಈ ಗುಣಾರ್ಣವನು ತ್ಯಾಗದ ಕಂಭವನ್ನು ನಿಲ್ಲಿಸಿ ವೀರದ ಶಾಸನವನ್ನು ಸ್ಥಾಪಿಸಿ ಅನರಾಗದ ರಾಜರನ್ನು ವಶಪಡಿಸಿಕೊಂಡು ಮೂರು ಲೋಕಗಳಲ್ಲಿ ಯಶಸ್ಸಿಗೆ ಆಕರರಾಗಿದ್ದ ಬದ್ದೆಗದೇವ ಮತ್ತು ನರಸಿಂಹರಿಗಿಂತ ತ್ಯಾಗದಲ್ಲಿಯೂ ವೀರದಲ್ಲಿಯೂ ನಾಲ್ಕು ಬೆರಳಷ್ಟು ಉನ್ನತನಾಗಿದ್ದಾನೆ. ಪಂಪನ ಪ್ರಕಾರ ಚಾಳುಕ್ಯ ವಂಶವೃಕ್ಷವನ್ನು ಈ ರೀತಿ ಗುರುತಿಸಬಹುದು.

೧. ಯುದ್ಧಮಲ್ಲ-ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು, ಪ್ರತಿದಿನವೂ ಐನೂರು ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.

೨. ಅರಿಕೇಸರಿ, ವೆಂಗಿಯ ಪ್ರಧಾನನೊಡನೆ ನಿರುಪಮರಾಜ್ಯವನ್ನು ಮುತ್ತಿದನು.

೩. ನರಸಿಂಹ

೪. ಭದ್ರದೇವ

೫. ದುಗ್ಧಮಲ್ಲ- ಯುದ್ಧಮಲ್ಲ

೬. ಬದ್ದೆಗ-ಭದ್ರದೇವ
೪೨ ಕಾಳಗಗಳನ್ನು ಜಯಿಸಿದನು.
ಸೋಲದ ಗಂಡನೆಂಬ ಬಿರುದನ್ನುಳ್ಳವನು.
ಭೀಮನನ್ನು ನೀರಿನಲ್ಲಿ ನುಗ್ಗಿ ಹಿಡಿದನು.

೭. ದುಗ್ಧಮಲ್ಲ (ಯುದ್ಧಮಲ್ಲ.)

೮. ನರಸಿಂಹ- ಕಲಿನರಸಿಂಹ- ನರಸಿಂಹ- ನರಗ.
ಸುಭದ್ರ ಮುನಿಯ ಪ್ರತಿಬಿಂಬ
ಲಾಳನನ್ನು ಅಡಿಗೆರಗಿಸಿದನು
ಸಪ್ತಮಾಲದ ಮುಖ್ಯರನ್ನು ಸೋಲಿಸಿದನು
ಘೂರ್ಜರ ರಾಜ ಸೈನ್ಯವನ್ನು ಸೋಲಿಸಿ ಗಂಗಾ ಜಲದಲ್ಲಿ ಕುದುರೆಯನ್ನು ಮೀಯಿಸಿದನು.
ಮಹೀಪಾಲನನ್ನು ಓಡಿಸಿದನು
ಇವನ ಮಿತ್ರನಾದ ಸಂಗನನ್ನು ನಾಶಪಡಿಸಿದನು.
ಇವನ ಹೆಂಡತಿ ಜಾಕವ್ವೆ

೯. ಅರಿಕೇಸರಿ- ಅರಿಗ- ಗೊಜ್ಜಿಗನಿಂದ ವಿಜಯಾದಿತ್ಯನನ್ನು ರಕ್ಷಿಸಿದ

೧೦. ಬದ್ದೆಗ- ಅರಿಕೇಸರಿಯ ಹಿರಿಯ ಮಗ, ರಾಜಧಾನಿ ಗಂಗಾಧಾರಾ (ಯಶಸ್ತಿಲಕದಿಂದ) ಫ್ಲೀಟರು ಇದರಲ್ಲಿ ಉಕ್ತವಾಗಿರುವ ಕೆಲವು ಸಂಗತಿಗಳಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಸೂಚಿಸಿದ್ದಾರೆ. (vIಒಟಿoಔಓಟಿ ಈS oWಓ ಒIಒಟಓಟಿಓ ಔಟಿoಟಔoಟಿ) ಎಂಬ ಗ್ರಂಥದಲ್ಲಿ. ಅವುಗಳನ್ನು ಹೀಗೆ ಸಂಗ್ರಹಿಸಬಹುದು: ನರಸಿಂಹ ಭದ್ರದೇವರು ಏಕವ್ಯಕ್ತಿಗಳು- (ಮುಂದಿನ ಶಂಶೋಧನೆಯಿಂದ ಇದು ಸರಿಯಲ್ಲವೆಂದು ಸಿದ್ಧಾಂತವಾಗಿದೆ) ವಂಶವೃಕ್ಷದಲ್ಲಿ ಬರುವ ನರಸಿಂಹನು ಲಾಳನನ್ನು ಸೋಲಿಸಿದುದನ್ನು ಅವರು ಹೇಳಿಲ್ಲ. ಸಂಗನನ್ನು ಸೋಲಿಸಿದುದೂ ಅವರಿಂದ ಉಕ್ತವಾಗಿಲ್ಲ. ಆದರೆ ರೈಸರು ತಮ್ಮ ಪಂಪಭಾರತದ ಪೀಠಿಕೆಯ ನಾಲ್ಕನೆಯ ಪುಟದ ಅಡಿಟಿಪ್ಪಣಿಯಲ್ಲಿ ಇದನ್ನು ನಮೂದಿಸಿದ್ದಾರೆ. ಫ್ಲೀಟರು ಇವನ ಹೆಂಡತಿಯು ‘ಚಂದ್ರಾನನೆ’ ಎಂದು ಹೇಳುತ್ತಾರೆ. ರೈಸರು ‘ಜಾತವ್ವೆ’ ಎಂದಿದ್ದಾರೆ (ಪಂ.ಭಾ.ಪೀಠಿಕೆ). ರಾ. ನರಸಿಂಹಾಚಾರ್ಯರು ಜಾಕವ್ವೆ ಎಂದೇ ಹೇಳಿದ್ದಾರೆ. ಮೂಲದಲ್ಲಿ ಆ ಭಾಗವು ಉಕ್ತವಾಗಿದೆ. ಚಂದ್ರಾನನಾ ಎಂಬುದು ವಿಶೇಷಣವಿರಬಹುದು. ಅರಿಕೇಸರಿಯ ತಂದೆಯ ಹೆಸರು ಯುದ್ಧಮಲ್ಲನೆಂದು ಫ್ಲೀಟರು ಹೇಳುತ್ತಾರೆ. ಇದು ಸರಿಯಲ್ಲ. ಏಕೆಂದರೆ ಪಂಪಭಾರತ, ಪರಭಣಿ ತಾಮ್ರಶಾಸನ ವೇಮಲುವಾಡಶಾಸನಗಳಲ್ಲಿ ‘ನರಸಿಂಹ’ ಎಂದೇ ಹೇಳಿದೆ- ಬದ್ದೆಗನು ಅರಿಕೇಸರಿಯ ಮೊದಲನೆಯ ಮಗನೆಂದು ಸೋಮದೇವನು ತನ್ನ ‘ಯಶಸ್ತಿಲಕಚಂಪು’ವಿನಲ್ಲಿ ತಿಳಿಸಿದ್ದಾನೆ. ಆದುದರಿಂದ ಇವನಿಗೆ ಇನ್ನೂ ಇತರ ಮಕ್ಕಳಿದ್ದಿರಬಹುದೆಂದು ಊಹಿಸಲು ಅವಕಾಶವಿದೆ. ಆದರೆ ಪರಭಣಿಯ ತಾಮ್ರ ಶಾಸನದಲ್ಲಿ ಭದ್ರದೇವನು ಅರಿಕೇಸರಿಯ ಒಬ್ಬನೇ ಮಗನೆಂದು ಉಕ್ತವಾಗಿದೆ.

ಪಂಪಭಾರತದಲ್ಲಿ ಬರುವ ಚಾಳುಕ್ಯವಂಶವೃಕ್ಷಕ್ಕೆ ಒಂದನೇ ಅರಿಕೇಸರಿಯ ಕೊಲ್ಲೇಪಾರಾ ದಾನಪತ್ರವೂ ಎರಡನೆಯ ಅರಿಕೇಸರಿಯ ವೇಮಲವಾಡ ಶಿಲಾ ಲೇಖನವೂ ಮೂರನೆಯ ಅರಿಕೇಸರಿಯ ಪರಭಣಿ ತಾಮ್ರಶಾಸನವೂ ಉಪಷ್ಟಂಭಕವಾಗಿವೆ. ಇವುಗಳಲ್ಲಿರುವ ಈ ಭಾಗವನ್ನು ಮುಂದಿನ ರೀತಿಯಲ್ಲಿ ಚಿತ್ರಿಸಬಹುದು.

ಪರಭಣಿಯ ತಾಮ್ರಶಾಸನ
ಚಾಳುಕ್ಯವಂಶ (ಆದಿತ್ಯಭವ)

೧. ಯುದ್ಧಮಲ್ಲ
ಸಪಾದಲಕ್ಷ ರಾಜ್ಯವನ್ನು ಆಳುತ್ತಿದ್ದನು.
ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
ಕಲಿಂಗತ್ರಯದೊಡನೆ ವೆಂಗಿಯನ್ನು ಸಂರಕ್ಷಿಸಿದನು.

೨. ಅರಿಕೇಸರಿ

೩. ನರಸಿಂಹ

೪. ಭದ್ರದೇವ

೫. ಯುದ್ಧಮಲ್ಲ

೬. ಬದ್ದೆಗ
ಸಂಗಮನಿಗೆ ತೊಂದರೆ ಕೊಟ್ಟನು
ಭೀಮನನ್ನು ಜಲಯುದ್ಧದಲ್ಲಿ ಸೋಲಿಸಿದನು

೭. ಯುದ್ಧಮಲ್ಲ

೮. ನರಸಿಂಹ

೯. ಅರಿಕೇಸರಿ- ಇವನ ಹೆಂಡತಿ ಪ್ರಖ್ಯಾತ ರಾಷ್ಟ್ರಕೂಟರ ಲೋಕಾಂಬಿಕೆ

೧೦. ಭದ್ರದೇವ-ಬದ್ದೆಗ-ಶುಭದಾಮ ಜಿನಾಲಯವನ್ನು ಕಟ್ಟಿಸಿದನು

೧೧. ಅರಿಕೇಸರಿ
ರಾಜಧಾನಿ ಲೆಂಬುಳಪಾಟಕ
ಸೋಮದೇವಸೂರಿಗೆ ದಾನ ಕೊಟ್ಟನು

ವೇಮಲವಾಡ ಶಿಲಾಶಾಸನ
ಚಾಲುಕ್ಯಕುಲ

೧. ವಿನಯಾದಿತ್ಯ ಅಥವಾ ಯುದ್ಧಮಲ್ಲ
ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು
ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
ಚಿತ್ರಕೂಟವನು ವಶಮಾಡಿಕೊಂಡನು.

೨. ಅರಿಕೇಸರೀಶ-ಬಲದಿಂದ ವೆಂಗಿ ದೇಶವನ್ನು ತೆಗೆದುಕೊಂಡನು

೩. ನರಸಿಂಹವರ್ಮ- ಅಥವಾ ರಾಜಾದಿತ್ಯ (?)

೪. ಯುದ್ಧಮಲ್ಲ

೫. ನರಸಿಂಹ ದೇವ-ಗುರ್ಜರಾಜ ಸೈನ್ಯವನ್ನು ಜಯಿಸಿದನು, ಏಳು ರಾಜರನ್ನು ಜಯಿಸಿದನು

೬. ಅರಿಕೇಸರಿ-ಗೋವಿಂದ (ಗೊಜ್ಜಿಗ) ನಿಂದ ಬಿಜ್ಜನನ್ನು ರಕ್ಷಿಸಿದನು. ಹೆಂಡತಿ ರೇವಕ್ಕ (?)

ಕೊಲ್ಲೋಪಾರಾ ದಾನಪತ್ರ
ಚಾಳುಕ್ಯ ವಂಶ

ರಣವಿಕ್ರಮಸತ್ಯಾಶ್ರಯ ಪೃಥ್ವೀಪತಿ ಮಹಾರಾಜ ವಿನಯಾದಿತ್ಯ ಯುದ್ಧಮಲ್ಲ ಅರಿಕೇಸರಿ

ಮಧ್ಯಯುಗದ ಇತಿಹಾಸದಲ್ಲಿ ನಾಲ್ಕು ಚಾಲುಕ್ಯ ಕುಲಗಳಿದ್ದವು. ಒಂದನೆಯದು ಬಾದಾಮಿಯದು. ಎರಡನೆಯದು ಕಲ್ಯಾಣಿಯದು. ಮೂರನೆಯದು ವೆಂಗಿಯದು. ನಾಲ್ಕನೆಯದು ಪಂಪ ಮತ್ತು ಸೋಮದೇವರಿಂದ ಉಕ್ತವಾದುದು. ಇವುಗಳಲ್ಲಿ ಬಾದಾಮಿಯ ಚಾಳುಕ್ಯಕುಲದಿಂದ ವೆಂಗಿಯ ಚಾಳುಕ್ಯಕುಲವು ಉತ್ಪನ್ನವಾಯಿತು. ಕಲ್ಯಾಣಿಯ ಚಾಲುಕ್ಯರು ಬಾದಾಮಿಯ ಚಾಲುಕ್ಯರ ವಂಶಜರೆಂದು ತಾವೇ ಹೇಳಿಕೊಂಡಿದ್ದಾರೆ. ಬಾದಾಮಿಯ ಚಾಲುಕ್ಯರ ಕಾಲ ಮತ್ತು ಕಲ್ಯಾಣಿಯ ಚಾಲುಕ್ಯರ ಕಾಲಗಳಿಗೆ ಮಧ್ಯೆ ರಾಷ್ಟ್ರಕೂಟರು ಆಳಿದರು. ಈ ಎರಡು ಕುಲಗಳನ್ನು ಜೋಡಿಸಿದವನು ಯಾರು ಎಂಬುದು ನಿಶ್ಚಿತವಾಗಿ ತಿಳಿಯದಿದ್ದರೂ ಈ ಎರಡು ಕುಲಗಳಿಗೂ ಸಂಬಂಧವಿತ್ತೆಂದು ಹೇಳುವುದಕ್ಕೆ ಆಧಾರ ಸಿಗುತ್ತದೆ. ವೆಂಗಿಯೂ ಇವುಗಳ ಶಾಖೆಗೇ ಸೇರಿರಬಹುದು. ಇವರ ಸ್ಥಳವೂ ಲಕ್ಷ್ಮೀಶ್ವರಕ್ಕೆ ಅಕ್ಕಪಕ್ಕದಲ್ಲಿದ್ದಿರಬಹುದು.
***********

ಪಂಪಭಾರತ : ಗದ್ಯಾನುವಾದ - ದ್ವಾದಶಾಶ್ವಾಸಂ

ದ್ವಾದಶಾಶ್ವಾಸಂ
ಕಂ|| ಶ್ರೀ ಶ್ರೀಕಾಂತಾಕಾಂತನಿಳಾ
ಲೋಕೈಕಲಲಾಮನಾ ಮಹೋಗ್ರಾರಿ ನೃಪಾ|
ನೀಕಮನನೇಕಮಂ ಗೆ
ಲ್ದಾ ಕಲಹದೊಳರಿಗನುಱದೆ ನಿಲ್ವುದುಮಾಗಳ್|| ೧

ನಂಬಿ ನೃಪನೆನಗೆ ಸೈಂಧವ
ನಂ ಬಂದಪ್ಪೈಸೆ ಪೂಣ್ದೆನಾದುದನಾಗ|
ಲ್ಕಿಂಬಱದನುವರದೊಳಮಂ
ಮುಂಬಯಣಂಬೋದನೆನಗೆ ಮಾಣ್ಬುದು ದೊರೆಯೇ|| ೨

ಬವರದಳೇಂ ಬಲ್ಲಂ ಕರ
ಮೊವಜುಗೆಯಲ್ ಪೆಱರ್ಗೆ ಕಂಡು ತನಗಱಯನದೆಂ|
ತುವೊ ನುಡಿ ತಪ್ಪದು ಕಮ್ಮಱ
ಯೊವಜಂ ಬಿಲ್ಲೊವಜನೆಂಬುದಂ ಮಾಡುವೆನೇ|| ೩

ಒಪ್ಪೆ ಜಯದ್ರಥನಾದುದ
ನಪ್ಪೆಂ ಪೋಗೆಂದು ಮುನ್ನೆ ನುಡಿದುದನೀಗಳ್|
ತಪ್ಪುವೆನೆ ಧರೆಯೊಳೆಂತುಂ
ತಪ್ಪದು ವಲಮೆನ್ನ ನುಡಿಯುಮೆನ್ನೆಚ್ಚಂಬುಂ|| ೪

ವ|| ಎಂದು ಕುಂಭಸಂಭವಂ ಜಳನಿಯಂ ಕುಡಿದ ಕುಂಭಸಂಭವನಂತೆ ಪಾಂಡವ ಬಳ ಜಳನಿಯನಳುರಲ್ ಬಗೆದು ನೇಸಱ್ ಪಟ್ಟೊಡಂ ಪೋಗದೆ ಪಗಲಿನನುವರ ದೊಳಳ್ಳೆವಿಳ್ಳೆಯಾದ ಪಾಂಡವರನಿರುಳೊಳೆ ಗೆಲ್ವೆನೆಂದು ಚತುರ್ಬಲಂಗಳನೊಂದುಮಾಡಿ

ಉ|| ತಕ್ಕಿನ ವಿಕ್ರಮಾರ್ಜುನನ ಕೋಪದ ದಳ್ಳುರಿಗಳ್ ವಿರೋಯಂ|
ಮುಕ್ಕಲೆ ಮುತ್ತಿದಂತೆ ಕರಿಗೆಂಟು ರಥಕ್ಕನುವಾಗ ನಾಲ್ಕು ವಾ|
ಹಕ್ಕೆರಡಲ್ಲಿ ಪಾದಚರರ್ಗೊಂದೆನೆ ದೀವಿಗೆಗಳ್ ಜಲಕ್ಕನೆ
ಕ್ಕೆಕ್ಕೆಯಿನಿಟ್ಟಳಂ ಬೆಳಗುತಿರ್ದುವೆರೞ್ದೆಸೆಯೊಡ್ಡಣಂಗಳೊಳ್|| ೫

೧. ಜಯಲಕ್ಷ್ಮಿಯೆಂಬ ಸ್ತ್ರೀಗೆ ಒಡೆಯನಾದವನೂ ಭೂಮಂಡಲದಲ್ಲೆಲ್ಲ ಏಕಮಾತ್ರ ಶ್ರೇಷ್ಠನಾದವನೂ ವಿಶೇಷಭಯಂಕರವಾದ ಅನೇಕ ಶತ್ರುರಾಜರುಗಳ ಸಮೂಹವನ್ನು ಗೆದ್ದಿರುವವನೂ ಆದ ಅರ್ಜುನನು ಆ ಯುದ್ಧದಲ್ಲಿ ವೇಗವಾಗಿ ಬಂದು ನಿಂತನು.

೨. ರಾಜನಾದ ದುರ್ಯೋಧನನು ನನ್ನನ್ನು ನಂಬಿ ಸೈಂಧವನನ್ನು ತಂದು ನನಗೆ ಒಪ್ಪಿಸಿದನು. ಅವನಾದುದನ್ನಾಗುತ್ತೇನೆಂದು ನಾನು ಪ್ರತಿಜ್ಞೆ ಮಾಡಿದೆನು. ಆಶ್ರಯವಿಲ್ಲದೆ (ಕ್ರಮ ತಪ್ಪಿ) ಅವನು ಯುದ್ಧದಲ್ಲಿ ಮೊದಲು ಮಡಿದನು. ನಾನು ತಡೆದಿರುವುದು (ಹಾಗಾಗದಿರುವುದು) ಉಚಿತವೇ?- ೩. ಇತರರಿಗೆ ಉಪದೇಶ ಮಾಡುವುದಕ್ಕೆ ಬಲ್ಲನೇ ವಿನಾ ಯುದ್ಧದಲ್ಲಿ ತಾನು ಏನು ಮಾಡಬಲ್ಲ? (ಯುದ್ಧದಲ್ಲಿ) ತಾನು ಏನು ಮಾಡಬೇಕೆಂಬುದು ಅವನಿಗೇನು ಗೊತ್ತು?) ಎಂತಹುದೋ ಈ ಮಾತು. ಈ ಅಪಪ್ರಥೆ ನನಗೆ ತಪ್ಪುವುದಿಲ್ಲ. ಚಾಪಾಚಾರ್ಯನಾದ ನಾನು (ಸಾಮಾನ್ಯವಾದ ಮರಗೆಲಸದ ಓಜಿಯಂತೆ) ಆಡಿದಂತೆ ಮಾಡುವವನಲ್ಲ ಎಂಬ ಲೋಕಾಪವಾದಕ್ಕೆ ಗುರಿಯಾಗಲೆ ! ೪. ಎಲ್ಲರಿಗೂ ಗೊತ್ತಿರುವ ಹಾಗೆ ಜಯದ್ರಥನಾದುದನ್ನು ನಾನು ಆಗುತ್ತೇನೆ ಹೋಗು ಎಂದು ಮೊದಲಾಡಿದ ಮಾತನ್ನು ಈಗ ತಪ್ಪುತ್ತೇನೆಯೇ? ಭೂಮಿಯಲ್ಲಿ ನಿಶ್ಚಯವಾಗಿಯೂ ನನ್ನ ಮಾತೂ ನಾನು ಪ್ರಯೋಗಿಸಿದ ಬಾಣವೂ ಹೇಗೂ ವ್ಯರ್ಥವಾಗುವುದಿಲ್ಲವಲ್ಲವೇ? ವ|| ಎಂದು ದ್ರೋಣಾಚಾರ್ಯನು ಸಮುದ್ರಪಾನಮಾಡಿದ ಅಗಸ್ತ್ಯರಂತೆ ಪಾಂಡವ ಸೇನಾಸಮುದ್ರವನ್ನು ಸುಟ್ಟು ಹಾಕಲು ಯೋಚಿಸಿ ಸೂರ್ಯಾಸ್ತಮಾನವಾದರೂ ಪಾಳೆಯಕ್ಕೆ ಹೋಗದೆ ಹಗಲಿನ ಯುದ್ಧದಲ್ಲಿ ಅತ್ಯಾಯಾಸಗೊಂಡಿರುವ ಪಾಂಡವರನ್ನು ರಾತ್ರಿಯಲ್ಲಿ ಗೆಲ್ಲುತ್ತೇನೆ ಎಂದು ಚತುರಂಗಸೈನ್ಯವನ್ನು ಒಟ್ಟುಗೂಡಿಸಿದನು. ೫. ಯೋಗ್ಯನಾದ ವಿಕ್ರಮಾರ್ಜುನನ ಕೋಪದ ಮಹಾಜ್ವಾಲೆಗಳು ಶತ್ರುವನ್ನು ಮುತ್ತುವುದಕ್ಕಾಗಿಯೇ ಮುತ್ತಿದೆಯೋ ಎನ್ನುವಂತೆ ಒಂದು ಆನೆಗೆ ಎಂಟು, ರಥಕ್ಕೆ ನಾಲ್ಕು, ಕುದುರೆಗೆ ಎರಡು, ಪಾದಚರರಿಗೆ ಒಂದು ಎನ್ನುವ ಕ್ರಮದಲ್ಲಿ ದೀವಿಟಿಗೆಗಳು ಜಲಕ್ಕನೆ ಪಕ್ಕಪಕ್ಕದಲ್ಲಿಯೇ ಎರಡುಸೈನ್ಯಗಳಲ್ಲಿಯೂ ಮನೋಹರವಾಗಿ

ವ|| ಅಂತು ಪಗಲಿಱದು ತಣಿಯದಿರುಳಂ ಪಗಲ್ಮಾಡಿ ಕಾದುವೆರೞ್ಪಡೆಗಳೇರ್ವೆಸನಂ ಕಣ್ಣಾರೆ ನೋಡಲೆಂದು ವೈಮಾನಿಕ ದೇವರಂಬರತಳದೊಳಿರ್ದು ಕಿರ್ಚೆೞ್ದ ಲಂಕೆಯಂ ನೋೞ್ಪಂತೆ ನೋಡೆ ಧರ್ಮಪುತ್ರನನಧೋಕ್ಷಜನಿಂತೆಂದಂ-

ಚಿಂ|| ಇರುಳೊಳುಮಿಂತು ಪೊಗದಿಱಯಲ್ ಘಟಸಂಭವನಿರ್ದನೆಂತು ನಿ
ತ್ತರಿಸುವಮಿ ಮಹಾಹವಮನೆಂಬುದುಮಿನ್ನಿರುಳೊಳ್ ಬಲಂ ನಿಶಾ|
ಚರ ಬಲಕುಂಟು ಮಾಣದೆ ಘಟೋತ್ಕಚನಂ ಬೆಸವೇೞ್ವುದೆಂದೊಡಾ
ದರದೊಳೆ ಭೀಮನಂದನನನಾ ಪದದೊಳ್ ಯಮರಾಜನಂದನಂ|| ೬

ವ|| ಕರೆದು ಮಗನೆ ನೀನಿಂದಿರುಳಿನನುವರಮನೆನಗೆ ಗೆಲ್ದೀಯಲ್ವೇೞ್ಕುಮೆಂದೊಡಿ ದಾವುದರಿದುಂ ಪಿರಿದುಮಾಗಿ ಬೆಸಸಿದರಂತೆಗೆಯ್ವೆನೆನ್ನ ತೊೞ್ತುವೆಸನನೀ ವಿಶಸನರಂಗದೊಳ್ ತೋರ್ಪೆನೆಂದು-

ಚಂ|| ಪರೆದುರಿಗೇಸಮವ್ವಳಿಪ ನಾಲಗೆ ಮಿಂಚುವ ದಾಟೆ ಬಿಟ್ಟ ಕಣ್
ತಿರುಪಿದ ಮೀಸೆ ಕೊಂಕಿದ ಸಟಂ ಕಱದಪ್ಪ ಕದಂಪು ನೀೞ್ದ ತಾ|
ೞ್ಮರದವೊಲಪ್ಪೊಡಲ್ ಕಹ ಕಹ ಧ್ವನಿ ಕೌಳಿಕ ನಾದಮಾದಮಾ
ಸುರತರಮಾಗೆ ಬಂದು ಕವಿದತ್ತು ಘಟೋತ್ಕಚ ರೌದ್ರ ಸಾಧನಂ|| ೭

ವ|| ಅಂತು ನಿಶಾಚರ ಬಲಮಱವಱಗಾದ ಕಾಡನಳುರ್ವ ಬೇಗೆಯ ದಳ್ಳುರಿಯಂತೆ ದಳ್ಳಿಸಿ ಕೊಳ್ಳೆಂದರಾತಿ ಬಲಮನಳುರೆ ಕರಡಿಯ ತೊವಲೊಳ್ ಪುದಿದ ಕರ್ಬೊನ್ನ ರಥಮುಮಾ ರಥದೊಳೆಡಂಬಡೆ ಪೂಡಿದ ನಾಲ್ನೂಱು ಗೊಂಕುಱುಗೞ್ತೆಯಮಂಬರಸ್ಥಲಮನಡರ್ವ ಗ್ಯಧ್ರಧ್ವಜ ಮುಮಂಜನ ಪುಂಜದಂತಾಗಿ ಬ್ರಹ್ಮಾಂಡಮಂ ತಾಗಿದ ವಿಕಟಾಂಗಮುಮೆಳವೆಳವೆ ಯನಡಸಿದಂತಪ್ಪ ದಾಡೆಯುಮಗುರ್ವಾಗೆ ಬಂದು ತಾಗಿದಾಗಳ್

ಚಂ|| ಕುದುರೆಯ ಬಿಲ್ಲ ಬಲ್ಲಣಿಯ ಕೇಣಿಯನಲ್ಲಿ ಕೆಲರ್ ನಿಶಾಟರು
ಣ್ಮಿದ ಬಿಸುನೆತ್ತರೊಳ್ ಮಿದಿದು ನುಣ್ಣನೆ ನುಂಗಿದರೆಲ್ಲಿಯುಂ ಕೆಲರ್|
ಕುದುಗುಳಿ ರಕ್ಕಸರ್ ಬಿಸುಗೆಗಳ್ವೆರಸುಗ್ರ ಮಹಾಗಜಂಗಳಂ
ಚದುರ್ಗಿಡೆ ನುಂಗಿ ಬಿಕ್ಕಿ ಕುಡಿದರ್ ಬಿಸುನೆತ್ತರ ಕಾೞ್ಪುರಂಗಳಂ|| ೮

ಬೆಳಗುತ್ತಿದ್ದುವು. ವ|| ಹಾಗೆ ಹಗಲು ಯುದ್ಧಮಾಡಿ ತೃಪ್ತಿಯಾಗದೆ ರಾತ್ರಿಯನ್ನೇ ಹಗಲುಮಾಡಿಕೊಂಡು ಕಾದುವ ಎರಡೂ ಸೈನ್ಯಗಳ ಯುದ್ಧಕಾರ್ಯವನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ಮೈಮಾನಿಕ ದೇವರುಗಳು ಆಕಾಶ ಪ್ರದೇಶದಲ್ಲಿದ್ದುಕೊಂಡು ಉರಿಯುತ್ತಿದ್ದ ಲಂಕಾಪಟ್ಟಣವನ್ನು ನೋಡುವಂತೆ ನೋಡಲು ಧರ್ಮರಾಯನು ಕೃಷ್ಣನನ್ನು ಕುರಿತು ಹೀಗೆಂದನು. ೬. ದ್ರೋಣನು ರಾತ್ರಿಯಲ್ಲಿಯೂ ಹಿಂತಿರುಗದೆ ಯುದ್ಧಮಾಡಲಿದ್ದಾನೆ. ಈ ಮಹಾಯುದ್ಧವನ್ನು ನಾವು ಹೇಗೆ ನಿರ್ವಹಿಸೋಣ ಎನ್ನಲು ರಾಕ್ಷಸರು ರಾತ್ರಿಯಲ್ಲಿ ಶಕ್ತಿಯುಕ್ತರು. ಸಾವಕಾಶ ಮಾಡದೆ ಘಟೋತ್ಕಚನಿಗೆ ಆಜ್ಞೆ ಮಾಡು ಎಂದು ಕೃಷ್ಣನು ಹೇಳಿದನು. ಅದರಂತೆ ಧರ್ಮರಾಯನು ಘಟೋತ್ಕಚನನ್ನು ವ|| ಕರೆದು, ಮಗನೆ ನೀನು ಈ ದಿನ ರಾತ್ರಿಯುದ್ಧವನ್ನು ನನಗೆ ಗೆದ್ದುಕೊಡಬೇಕು ಎಂದನು. ಅದಕ್ಕೆ ಘಟೋತ್ಕಚನು ಇದೇನಸಾಧ್ಯವೂ ಹಿರಿದೂ ಎನ್ನುವ ಹಾಗೆ ಅಪ್ಪಣೆಕೊಡುತ್ತೀರಿ; ಹಾಗೆಯೇ ಮಾಡುತ್ತೇನೆ; ನನ್ನ ಸೇವಕಾರ್ಯವನ್ನು ಯುದ್ಧರಂಗದಲ್ಲಿ ತೋರಿಸುತ್ತೇನೆ ಎಂದನು. ೭. ಉರಿಯಂತೆ ಕೆಂಪಗಿರುವ ಕೆದರಿದ ಕೂದಲು ಮುಂದಕ್ಕೆ ಚಾಚಿಕೊಂಡಿರುವ ನಾಲಿಗೆ, ಮಿಂಚುವ ಕೋರೆಹಲ್ಲು, ತೆರೆದ ಕಣ್ಣ, ಹುರಿಮಾಡಿರುವ ಮೀಸೆ, ವಕ್ರವಾದ ಕೇಸರಗಳು, ಕರ್ರಗಿರುವ ಕೆನ್ನೆ, ಉದ್ದವಾದ ತಾಳೆಯ ಮರದಂತಿರುವ ಶರೀರ, ಕಹಕಹವೆಂಬ ಧ್ವನಿ, ಭಯಂಕರವಾದ ಶಬ್ದ-ಇವೆಲ್ಲ ಅತ್ಯಂತ ಭೆಯಂಕರವಾಗಿರಲು ಘಟೋತ್ಕಚನ ಭಯಂಕರವಾದ ಸೈನ್ಯವು ಬಂದು ಮುತ್ತಿಕೊಂಡಿತು. ವ|| ರಾಕ್ಷಸ ಪಡೆಯು ಚೆನ್ನಾಗಿ ಒಣಗಿರುವ ಕಾಡನ್ನು ಸುಡುವ ಬೇಸಿಗೆಯ ಮಹಾಜ್ವಾಲೆಯಂತೆ ಪ್ರಜ್ವಲಿಸಿ ‘ತೆಕೊ’ ಎಂದು ಶತ್ರುಸೈನ್ಯವನ್ನು ಸುಡುತ್ತಿರಲು ಕರಡಿಯ ಚರ್ಮದಿಂದ ಆವರಿಸಲ್ಪಟ್ಟ ಕಬ್ಬಿಣದ ತೇರು, ಆ ರಥಕ್ಕೆ ಒಪ್ಪುವ ಹಾಗೆ ಹೂಡಿದ್ದ ಹೇಸರಕತ್ತೆ, ಆಕಾಶ ಪ್ರದೇಶವನ್ನು ಹತ್ತುವ ಹದ್ದಿನ ಬಾವುಟಗಳು, ಕಾಡಿಗೆಯ ರಾಶಿಯಂತಾಗಿ ಬ್ರಹ್ಮಾಂಡವನ್ನೂ ತಾಗಿದ ವಿಕಾರವಾದ ದೇಹ, ಬಾಲಚಂದ್ರನನ್ನು ಜೋಡಿಸಿದ ಹಾಗಿದ್ದ ದಾಡೆ ಇವುಗಳಿಂದ ಭಯಂಕರವಾಗಿ ಬಂದು ತಾಗಿತು.

೮. ಕುದುರೆಗಳನ್ನು ಬಿಲ್ಗಾರರನ್ನು ಬಲಿಷ್ಠರಾದ ಕಾಲಾಳುಗಳ ಸಾಲುಗಳನ್ನು ಅಲ್ಲಿ ಕೆಲವು ರಾಕ್ಷಸರು ಚಿಮ್ಮಿದ ಬಿಸಿರಕ್ತದಲ್ಲಿ ಮರ್ದನ ಮಾಡಿ (ಕುಟ್ಟಿ) ನಯವಾಗಿ ನುಂಗಿದರು. ಮತ್ತೆ ಕೆಲವು ಬಹಳ ಉತ್ಸಾಹಶಾಲಿಗಳಾದ (ಕುಡಿಯುವ ಸ್ವಭಾವವುಳ್ಳ?) ರಾಕ್ಷಸರು ಅಂಬಾರಿ ಸಹಿತವಾಗಿ ಭಯಂಕರವಾದ ಆನೆಗಳನ್ನು ವಿಕಾರವಾದ ರೀತಿಯಲ್ಲಿ ನುಂಗಿ ಬಿಸಿರಕ್ತದ ಪ್ರವಾಹಗಳನ್ನು ಹೀರಿ ಕುಡಿದರು.

ವ|| ಅಂತು ರಕ್ಕಸವಡೆ ತನ್ನ ಪಡೆಯೆಲ್ಲಮಂ ತೆರಳ್ಚಿ ತೇರಯಿಸಿ ನುಂಗಿದೊಡೆ ಬೆಱಗಾದ ಸುಯೋಧನನಂ ಬಕಾಸುರ ಜಟಾಸುರರ ಮಕ್ಕಳಪ್ಪಳಂಭೂಪ ಹಲಾಯುಧ ಮುಸಲಾಯುಧ ಕಾಳ ನೀಳ ರೂಕ್ಷರಾಕ್ಷಸರ್ ಮುನ್ನೆ ತಮ್ಮಣ್ಣನ ತಂದೆಯ ಪಗೆಯಂ ನೆಱಪಲೆಂದು ಬೆಸನಂ ಬೇಡಿದಾಗಳ್-

ಚಂ|| ಪ್ರತಿ ವಿಷಮಗ್ನಿಗಗ್ನಿ ವಿಷಕಂ ವಿಷಮೆಂಬವೊಲಾ ನಿಶಾಚರಂ
ಗತಿ ಬಲರೀ ನಿಶಾಟರಿವರಕ್ಕೆನುತುಂ ಬೆಸವೇೞೆ ತಾಗಿದಾ|
ದಿತಿಸುತರಂ ಘಟೋತ್ಕಚನಸುಂಗೊಳೆ ಕಾದಿ ನಿಶಾಟಕೋಟಿ ಸಂ
ತತಿಗಳನಿಕ್ಕಿ ಪಾಂಡವಬಲಕ್ಕನುರಾಗಮನುಂಟುಮಾಡಿದಂ|| ೯

ವ|| ಅಂತು ಕುರುಬಲಮೆಲ್ಲಮಂ ಜೀರಗೆಯೊಕ್ಕಲ್ಮಾಡಿ ತುೞದು ಕೊಲೆ ರಾಜರಾಜಂ ಬೆಸದೊಳಂರಾಜಂ ಬಂದು ತಾಗೆ-

ಮ|| ಸಮದೇಭೇಂದ್ರ ಸಮೂಹದಿಂದಮಿಡುತುಂ ಕಂಠೀರವಧ್ವಾನದಿಂ
ದಮಗುರ್ವಪ್ಪಿನಮಾರುತುಂ ಪೆಣಗಳಂ ನುಂಗುತ್ತುಮಾಕಾಶದಂ|
ತಮನೆಯ್ದುತ್ತುಮಿದಿರ್ಚಿ ಕಾದುವೆಡೆಯೊಳ್ ಕಾಣುತ್ತೆ ದೇವರ್ಕಳಿ
ನ್ನುಮೊಳಂ ರಾವಣನೆಂಬಿನಂ ನೆಗೞ್ದುದಾ ಹೈಡಿಂಬನಾಡಂಬರಂ|| ೧೦

ಕಂ|| ಸರಿದಪತಿ ಮೊೞಕಾಲ್ವರ
ಮುರಂಬರಂ ಮೇರು ಮುಯ್ವುವರೆಗಮಜಾಂಡಂ|
ಬರೆ ತಲೆಯ ನೆಲೆಗೆ ಲೋಕಾಂ
ತರಮೆಡೆಯಿಲ್ಲೆನಿಸೆ ಪೆರ್ಚಿದಂ ದನುತನಯಂ|| ೧೧

ಬೆಳ್ಳಾಳ್ಗೆ ಪೊಳೆಪುದೋಱುವು
ದೊಳ್ಳಾಳ್ಗೆ ಪೊಡರ್ಪುದೋರ್ಪುದಿರದಣ್ಮಣ್ಮೊಣ್ಮೆಂ|
ದೊಳ್ಳಲಗಿನ ಶರತತಿಯಿಂ
ಕೊಳ್ಳ ಕೊಳೆಂದಂಗರಾಜನಸುರನನೆಚ್ಚಂ|| ೧೨

ಉತ್ಸಾಹ|| ಎಚ್ಚೊಡಸುರನಿಟ್ಟ ಬೆಟ್ಟನೊಂದು ವಜ್ರಶರದಿನಾ
ರ್ದೆಚ್ಚು ದಿತಜನೆಚ್ಚ ಸಿಡಿಲ ಶರಮನುದಕಬಾಣದಿಂ|
ದೆಚ್ಚು ದನುತನೂಜನೆಚ್ಚ ರ್ವಾಗನಲಬಾಣದಿಂ
ದೆಚ್ಚು ನಚ್ಚುಗಿಡಿಸೆ ಕೊಂಡು ಶೂಲಮಂ ಘಟೋತ್ಕಚಂ|| ೧೩

ವ|| ರಾಕ್ಷಸಸೈನ್ಯವು ತನ್ನ ಸೈನ್ಯವನ್ನೆಲ್ಲ ಉಂಡೆಮಾಡಿ ಆತುರದಿಂದ ನುಂಗಲು ಆಶ್ಚರ್ಯಪಡುತ್ತಿದ್ದ ದುರ್ಯೋಧನನ್ನನ್ನು ಬಕಾಸುರ ಮತ್ತು ಜಟಾಸುರರ ಮಕ್ಕಳಾದ ಅಳಂಭೂಷ, ಹಲಾಯುಧ, ಮುಸಲಾಯುಧ, ಕಾಳ ನೀಳರೆಂಬ ರೂಕ್ಷರಕ್ಷಸರು ತಮ್ಮಣ್ಣನ ಮತ್ತು ತಂದೆಯ ಹಿಂದಿನ ದ್ವೇಷವನ್ನು ತೀರಿಸಿಕೊಳ್ಳುವುದಕ್ಕಾಗಿ, ತಮಗೆ ಆ ಕಾರ್ಯದಲ್ಲಿ ಭಾಗವಹಿಸಲು ಅಪ್ಪಣೆಯಾಗಬೇಕೆಂದು ಕೇಳಿಕೊಂಡರು. ೯. ವಿಷಕ್ಕೆ ವಿಷವೂ ಅಗ್ನಿಗೆ ಅಗ್ನಿಯೂ ಪ್ರತಿವಿಷವೆನ್ನುವ ಹಾಗೆ ಆ ಘಟೋತ್ಕಚನೆಂಬ ರಾಕ್ಷಸನಿಗೆ ಅತಿ ಬಲಿಷ್ಠರಾದ ಈ ರಾಕ್ಷಸರು ಪ್ರತಿಶಕ್ತಿಯಾಗಲಿ ಎನ್ನುತ್ತ ದುರ್ಯೋಧನನು ಆಗಬಹುದೆಂದು ಅವರಿಗೆ ಆಜ್ಞೆಮಾಡಿದನು. ಬಂದು ತಗುಲಿದ ಆ ರಾಕ್ಷಸರನ್ನು ಘಟೋತ್ಕಚನು ಪ್ರಾಣಾಪಹಾರ ಮಾಡುವ ಹಾಗೆ ಕಾದಿ ಆ ರಾಕ್ಷಸಸಮೂಹವನ್ನು ಸಂಹರಿಸಿ ಪಾಂಡವಸೈನ್ಯಕ್ಕೆ ಪ್ರೀತಿಯನ್ನುಂಟುಮಾಡಿದನು. ವ|| ಕೌರವಸೈನ್ಯವನ್ನೆಲ್ಲ ಜೀರಿಗೆಯನ್ನು ಒಕ್ಕಣೆಮಾಡುವಂತೆ ಮಾಡಿ ತುಳಿದು ಕೊಲ್ಲಲು ದುರ್ಯೋಧನನ ಆಜ್ಞೆಯ ಪ್ರಕಾರ ಕರ್ಣನು ಬಂದು ತಾಗಿದನು. ೧೦. ಶ್ರೇಷ್ಠವಾದ ಮದ್ದಾನೆಗಳ ಸಮೂಹದಿಂದ ಹೊಡೆಯುತ್ತಲೂ ಸಿಂಹದ ಧ್ವನಿಯಿಂದ ಭಯವುಂಟಾಗುವ ಹಾಗೆ ಆರ್ಭಟಿಸುತ್ತಲೂ ಹೆಣಗಳನ್ನು ನುಂಗುತ್ತಲೂ ಆಕಾಶದ ಕೊನೆಗೂ ಹೋಗಿ ಎದುರಿಸಿ ಕಾದುವ ಸನ್ನಿವೇಶವನ್ನು ನೋಡಿ ದೇವತೆಗಳು ರಾವಣನೆಂಬುವನು ಇನ್ನೂ ಇದ್ದಾನೆ ಎನ್ನುವಷ್ಟು ಆ ಘಟೋತ್ಕಚನ ಆಡಂಬರವು ಪ್ರಸಿದ್ಧವಾಯಿತು. ೧೧. ಸಮುದ್ರವು ಮೊಣಕಾಲಿನವರೆಗೂ ಮೇರುಪರ್ವತವು ಎದೆಯವರೆಗೂ ಬ್ರಹ್ಮಾಂಡವು ಭುಜದವರೆಗೂ ಬರಲು ತಲೆಯವರೆಗೆ ಲೋಕಾಂತರದಲ್ಲಿಯೂ ಸ್ಥಳವಿಲ್ಲವೆನ್ನುವಷ್ಟು ದೀರ್ಘವಾಗಿ ರಾಕ್ಷಸನಾದ ಘಟೋತ್ಕಚನು ಬೆಳೆದನು. ೧೨. ಅಂಜುಪುರಕನಿಗೆ ಆಯುಧದ ಹೊಳಪನ್ನು ತೋರಿಸತಕ್ಕದ್ದು, ಸುಪ್ರಸಿದ್ಧ ವೀರಭಟನಿಗೆ ಪರಾಕ್ರಮವನ್ನು ತೋರಿಸತಕ್ಕದ್ದು; ಆದುದರಿಂದ ಈಗ ನೀನು ನನಗೆ ಸಾವಕಾಶಮಾಡದೆ ನಿನ್ನ ಪರಾಕ್ರಮವನ್ನು ತೋರು, ತೆಕೊ ತೆಕೊ ಎಂದು ಕರ್ಣನು ಒಳ್ಳೆಯ ಅಲಗಿನಿಂದ ಕೂಡಿದ ಬಾಣಗಳ ಸಮೂಹದಿಂದ ರಾಕ್ಷಸನನ್ನು ಹೊಡೆದನು. ೧೩. ರಾಕ್ಷಸನು ಎಸೆದ ಒಂದು ಬೆಟ್ಟವನ್ನು ವಜ್ರಾಸ್ತ್ರದಿಂದಲೂ

ಕಂ|| ನೆಲನದಿರ್ವಿನಮಿದಿರಂ ಬರೆ
ಕುಲಿಶಾಯುಧನಿತ್ತ ಶಕ್ತಿಯಿಂದಾತನುರ|
ಸ್ಥಲಮನಿಡೆ ವಜ್ರಹತಿಯಿಂ
ಕುಲಗಿರಿ ಕೆಡೆವಂತೆ ಕೆಡೆದನಾ ದನುತನಯಂ| ೧೪

ಒಂದಕ್ಷೋಹಿಣಿ ನುರ್ಗಿದು
ದಿಂದಿವನ ಕಬಂಧಘಾತದಿಂ ಸತ್ತಿನಿತಂ|
ಕೊಂದನಿವನಿವನನಳ್ಕು
ಕೊಂದಳವಿನತನಯನಲ್ಲದಂಗೊಪ್ಪುಗುಮೇ|| ೧೫

ವ|| ಎಂದೆರಡುಂ ಪಡೆಗಳುಂ ದೇವರ ಪಡೆಗಳುಂ ಕರ್ಣನನೆ ಪೊಗೞೆ ಕಾದಲ್ವೇಡೆಂಬಂತುಭಯಸೈನ್ಯಂಗಳ್ಗಡ್ಡಮಾಗಿ ಕುಲಗಿರಿ ಕೆಡೆಮಂತಯ್ಗಾವುದು ನೆಲನೊಡಲಳವಿ ಯಾಗೆ ಬಿೞರ್ದ ಘಟೋತ್ಕಚನ ಕರಮೞಲ್ದು ಕಣ್ಣ ನೀರಂ ಸಿಡಿವಂತಕಾತ್ಮಜನನನಂತ ನಿಂತೆಂದಂ-

ಮ|| ದಿವಿಜಾಶನ ಕೊಟ್ಟ ಶಕ್ತಿಯನದಂ ಕರ್ಣಾಂ ನರಂಗೆಂದು ಬ
ಯ್ತಿವನಿಂದಿಂದಱವೆಯ್ದು ವಂದೊಡದಱಂದಿಂದಾತನಂ ಕೊಂದನಿ|
ನಿವನಂ ಕೊಲ್ವುದು ಮೊಗ್ಗದರ್ಕೞಲವೇಡೆಂಬನ್ನಮತ್ತೇಱದಂ
ರವಿ ಪೂರ್ವಾಚಲಮಂ ನಿಜಾತ್ಮಜನ ಗೆಲ್ದುಗ್ರಾಜಿಯಂ ನೋೞ್ಪವೋಲ್|| ೧೬

ವ|| ಆಗಳ್ ಕುಂಭಸಂಭವಂ ಶೋಣಾಶ್ವಂಗಳೊಳ್ ಪೂಡಿದ ಕನಕ ಕಳಶದ್ವಜ ವಿರಾಜಿತಮಪ್ಪ ತನ್ನ ರಥಮನೇಱ ಘಟೋತ್ಕಚನ ಕಳೇಬರ ಗಿರಿ ದುರ್ಗಮಲ್ಲದ ಸಮಭೂಮಿಯೊಳ್ ಚತುರ್ಬಲಂಗಳನೊಂದುಮಾಡಿ ಶೃಂಗಾಟಕವ್ಯೂಹಮನೊಡ್ಡಿ ನಿಂದಾಗಳ್ ಧೃಷ್ಟದ್ಯುಮ್ನನಂ ಪಾಂಡವ ಪತಾಕಿನಿಯುಮಂ ವಜ್ರವ್ಯೂಹಮನೊಡ್ಡಿ ನಿಲೆ ಧರ್ಮಪುತ್ರನುಂ ಸುಯೋಧನನುಮೊಡನೊಡನೆ ಕೆಯ್ವೀಸಿದಾಗಳ್-

ಮ|| ಸ್ರ|| ಎಳೆಯುಂ ಬ್ರಹ್ಮಾಂಡಮುಂ ತಾಗುವವೊಲುಭಯಸೈನ್ಯಾಭ್ಧಿಗಳ್ ತಾಗಿ ಬಿಲ್ ಬಿ
ಲ್ಲೊಳುದಗ್ರಾಶ್ವಂಗಳೊಳಣಿಯಣಿಯೊಳ್ ಸ್ಯಂದನಂ ಸ್ಯಂದನೌಘಂ|
ಗಳೊಳುಗ್ರೇಭಂ ಮದೇಭಂಗಳೊಱಯೆ ತೆರಳ್ತರ್ಪ ಕೆನ್ನೆತ್ತರಿಂದೋ
ಕುಳಿಯಂ ಖಂಡಂಗಳೊಂದಿಂಡೆಯೊಳೆ ಜವನಡುರ್ತಾಡಿದಂತಾದುದಾಗಳ್|| ೧೭

ಅವನಿಟ್ಟ ಸಿಡಿಲ ಬಾಣವನ್ನು ಉದಕಾಸ್ತ್ರದಿಂದಲೂ ಅವನು ಇಟ್ಟ ಸಮುದ್ರಾಸ್ತ್ರವನ್ನು ಆಗ್ನೇಯಾಸ್ತ್ರದಿಂದಲೂ ಕರ್ಣನು ಹೊಡೆದು ಅವನ ಆತ್ಮಪ್ರತ್ಯಯವನ್ನು ಹಾಳುಮಾಡಲಾಗಿ ಘಟೋತ್ಕಚನು ಶೂಲಾಯಧವನ್ನು ತೆಗೆದುಕೊಂಡು- ೧೪. ನೆಲವು ನಡುಗುವಂತೆ ಎದುರಾಗಿ ಬರಲು ಕರ್ಣನು ಇಂದ್ರನು ಕೊಟ್ಟಿದ್ದ ಶಕ್ತ್ಯಾಯುಧದಿಂದ ಆತನ ಹೃದಯಸ್ಥಳವನ್ನು ಹೊಡೆದನು. ವಜ್ರಾಯುಧದ ಪೆಟ್ಟಿನಿಂದ ಕುಲಪರ್ವತಗಳುರುಳುವಂತೆ ಆ ರಾಕ್ಷಸಕುಮಾರನು ಕೆಳಗುರುಳಿದನು. ೧೫. ಇವನ ಶರೀರವು (ಮುಂಡ) ಕೆಳಗೆ ಬಿದ್ದುದರಿಂದ ಒಂದಕ್ಷೋಹಿಣೀ ಸೆನ್ಯವು ಪುಡಿಪುಡಿಯಾಯಿತು. ತಾನು ಸತ್ತೂ ಇವನು ಇಷ್ಟನ್ನು ಕೊಂದನು. ಇಂತಹವನನ್ನು ಭಯವುಂಟಾಗುವ ಹಾಗೆ ಕೊಂದ ಪರಾಕ್ರಮವು ಕರ್ಣನಲ್ಲದವನಿಗೆ ಒಪ್ಪುತ್ತದೆಯೇ? ವ|| ಎಂದು ಎರಡು ಸೈನ್ಯಗಳೂ ದೇವಸಮೂಹವೂ ಕರ್ಣನನ್ನೇ ಹೊಗಳಿದವು. ಇನ್ನು ಕಾದಬೇಡಿ ಎನ್ನುವ ಹಾಗೆ ಎರಡು ಸೈನ್ಯಗಳಿಗೆ ಅಡ್ಡಲಾಗಿ ಕುಲಗಿರಿ ಕೆಡೆಯುವಂತೆ ಅಯ್ದುಗಾವುದ ಭೂಮಿಯನ್ನು ಆಕ್ರಮಿಸುವ ಶರೀರದ ಆಳತೆಯನ್ನುಳ್ಳವನಾಗಿ ಬಿದ್ದಿದ್ದ ಘಟೋತ್ಕಚನ ಸಾವಿಗೆ ವಿಶೇಷವಾಗಿ ಧರ್ಮರಾಯನು ದುಖಪಟ್ಟು ಕಣ್ಣೀರನ್ನು ಚಿಮ್ಮಿಸಿದನು. ಅವನನ್ನು ಕೃಷ್ಣನು ಹೀಗೆ ಸಮಾಧಾನಪಡಿಸಿದನು. ೧೬. “ಇಂದ್ರನು ವರವಾಗಿ ಕೊಟ್ಟ ಶಕ್ತ್ಯಾಯುಧವನ್ನು ಕರ್ಣನು ಅರ್ಜುನಿಗೆಂದು ಮುಚ್ಚಿಟ್ಟಿದ್ದನು. ಈ ದಿನ (ತನಗೆ) ಸಾವು ಸಮೀಪಿಸಿದ್ದರಿಂದ ಆ ಜಶಕ್ತ್ಯಾಯುಧದಿಂದ ಘಟೋತ್ಕಚನನ್ನು ಕೊಂದನು. ಇನ್ನು ಈ ಕರ್ಣನನ್ನು ಗೆಲ್ಲುವುದು ಸುಲಭ ಸಾಧ್ಯ; ಅದಕ್ಕಾಗಿ ನೀನು ದುಖಪಡಬೇಡ” ಎನ್ನುವಷ್ಟರಲ್ಲಿ ಆ ಕಡೆ ಸೂರ್ಯನು ತನ್ನ ಮಗನು ಗೆದ್ದ ಭಯಂಕರವಾದ ಯುದ್ಧವನ್ನು ನೋಡುವ ಹಾಗೆ ಉದಯಪರ್ವತವನ್ನೇರಿದನು. (ಸೂರ್ಯೋದಯವಾಯಿತು). ವ|| ಆಗ ದ್ರೋಣಾಚಾರ್ಯನು ಕೆಂಪುಕುದುರೆಗಳನ್ನು ಹೂಡಿದ್ದ ಚಿನ್ನದ ಕಳಶಧ್ವಜದಿಂದ ವಿರಾಜಿತವಾಗಿರುವ ತನ್ನ ರಥವನ್ನು ಹತ್ತಿ ಘಟೋತ್ಕಚನ ಶರೀರವೆಂಬ ಬೆಟ್ಟದುರ್ಗವಿಲ್ಲದೆ ಸಮಭೂಮಿಯಲ್ಲಿ ಚತುರಂಗಸೈನ್ಯವನ್ನು ಒಟ್ಟುಗೂಡಿಸಿ (ನಾಲ್ಕು ಬೀದಿಗಳು ಕೂಡುವ ಸ್ಥಳದಂತಿರುವ ಒಂದು ಸೇನಾರಚನೆಯನ್ನು, ಶೃಂಗಾಟಕವ್ಯೊಹವನ್ನು) ಒಡ್ಡಿ ನಿಂತನು. ಧ್ವಷ್ಟದ್ಯುಮ್ನನು ಪಾಂಡವಸೈನ್ಯವನ್ನು ವಜ್ರವ್ಯೂಹವನ್ನಾಗಿ ಒಡ್ಡಿನಿಂತನು, ಧರ್ಮರಾಜನೂ ದುರ್ಯೋಧನನೂ (ಯುದ್ಧಪ್ರಾರಂಭಸೂಚಕವಾಗಿ) ಕೈ ಬೀಸಿದಾಗ ಪುನ ಯುದ್ಧ ಪ್ರಾರಂಭವಾಯಿತು. ೧೭. ಭೂಮಿಯೂ ಬ್ರಹ್ಮಾಂಡವೂ ತಾಗುವ ಹಾಗೆ ಎರಡು ಸೇನಾಸಮುದ್ರಗಳೂ ತಾಗಿದುವು. ಬಿಲ್ಗಾರರು

ವ|| ಅಂತು ವೀರರಸದ ತೊಯುಂ ತೊಯುಂ ನೆತ್ತರ ತೊಯುಮೊಡನೊಡನೆ ಬೆಳ್ಳಂಗೆಡೆದು ಪರಿಯೆ ಚತುರ್ಬಲಂಗಳ್ ಕಾದಿ ಬಸವೞದು ಪೆಱಪಿಂಗಿ ನಿಂದಾಗಳ್ ವಿರಾಟಂ ತನ್ನ ಚತುರ್ಬಲಂಗಳನೊಂದುಮಾಡಿಕೊಂಡು ಪಾಂಡವರ್ ತನ್ನ ಮಾನಸಿಕೆಯಂ ನಚ್ಚಿ ತನ್ನ ಪೊೞಲೊಳಜ್ಞಾತವಾಸಂ ಮಾಡಿದುದುಮಂ ದಕ್ಷಿಣೋತ್ತರ ಗೋಗ್ರಹಣದೊಳ್ ತನಗಾಗಿ ಕಾದಿ ತುಱುವಂ ಮಗುೞದುದುಮಂ ನೆನೆದು-

ಮ||ಸ್ರ|| ಮಗಳಂ ಪಾರ್ಥಾತ್ಮಜಂಗಂ ತಲೆ ಬೞವೆೞಯೆಂದಿತ್ತುದಂ ತನ್ನ ಮಕ್ಕಳ್
ನೆಗೞi ಸಂಗ್ರಾಮದೊಳ್ ಸತ್ತುದುಮನೆ ಮನದೊಳ್ ತಾಳ್ದಿ ತಾಪಾಗಳಾ ಜೆ|
ಟ್ಟಿಗನಂ ಕುಂಭೋದ್ಭವಂ ಬಂದದಿರದಿದಿರನಾಂತೊಂದೆ ಕೆಲ್ಲಂಬಿನಿಂ ಮೆ
ಲ್ಲಗೆ ಪಾರ್ದಾದೆಚ್ಚನೇಸಿಂ ತಲೆಪಱದು ಸಿಡಿಲ್ದತ್ತ ಬೀೞ್ವನ್ನಮಾಗಳ್|| ೧೮

ವ|| ಅಂತು ವಿರಾಟವನಿಕ್ಕಿ ಮನದೊಳಳ್ಳಾಟಮಿಲ್ಲದರಿನ್ನಪಕೋಟಿಯನಾಟರಲೆಂದಾ ಸೋಟಸಿ ನಿಶಿತ ಶರಕೋಟಿಯೊಳ್ ತಳಿಗೋಂಟೆಯನಿಕ್ಕಿ ವೀರರಸನಿಕೇತನನಾಗಿರ್ದ ಕಳಶಕೇತನನಂ ನೋಡಿ ದ್ರುಪದಂ ಸೈರಿಸದೆ-

ಹರಿಣೀಪ್ಲುತಂ|| ಗುರುಗಳೆನಗಂ ಭಾರದ್ವಾಜಂಗಮೊರ್ವರೆ ವಿದ್ದೆಯೊಳ್
ಪುರುಡ ಪಿರಿದುಂಟೆನ್ನಂ ಬಿಲ್ಬಲ್ಮೆಯೊಳ್ ಮಿಗಲೆಯ್ದೆ ಬೇ|
ರ್ವರಿದ ಪಗೆಯುಂ ಬನ್ನಂಬಟ್ಟೆನ್ನ ಮುನ್ನಿನ ಬನ್ನಮುಂ
ಪಿರಿದದೆ ನೆವಂಗೊಂಡಾನಿಂದಿಲ್ಲಿ ನೀಗದೆ ಮಾಣ್ಬೆನೇ|| ೧೯

ವ|| ಎಂದೊಂದಕ್ಷೋಹಿಣೀ ಬಲಂಬೆರಸು ಪ್ರಳಯದ ಮಾರಿಯುಮಾಕಾಶದ ಕವಿಯುಂ ನೆಲದ ಕಲ್ಲೆಯುಂ ಮುನ್ನಮೆ ಮೇರೆದಪ್ಪುವುದುಮಂ ತನ್ನೋಳಳವಡಿಸಿಕೊಂಡು ತಾಗಿದಾಗಳ್ ಶಲ್ಯನೊಳ್ ಸಾತ್ಯಕಿ ಶಾರದ್ವತನೊಳ್ ಕೃತಾಂತನಂದನಂ ಕೃತವರ್ಮನೊಳ್ ನಕುಳಂ ಶಕುನಿಯೊಳ್ ಸಹದೇವಂ ಕರ್ಣನೊಳ್ ಬೀಮಸೇನನಶ್ವತ್ಥಾಮನೊಳಕಳಂಕ ರಾಮಂ ದ್ವಂದ್ವಯುದ್ಧದೊಳ್ ತಾಗಿದಾಗಳ್-

ಮ|| ಸ್ರ|| ದೆಸೆಯೆಲ್ಲಂ ತೀವ್ರ ಬಾಣಾಳಿಯೊಳೆ ಮೆಡಱದಂತಂಬರಂ ಬಾಣದಿಂದಂ
ಮುಸುಕಿಟ್ಟಂತಾಗೆ ಬೇಗಂ ತುಡುವ ಬಿಡುವ ಸೂೞ್ಗೆಯ್ಯ ಬೇಗಂಗಳಂ ನಿ|
ಟ್ಟಿಸಲಾರ್ಗಂ ಬಾರದಂತಾಗಸದಳಮಿಸೆ ತದ್ರಾಜಚಕ್ರಂ ಪೊದೞ್ದ
ರ್ಬಿಸಿದತ್ತುದ್ದಾಮ ಮೌರ್ವೀ ರವ ಮುಖರ ಮಹಾಚಾಪ ಚಕ್ರಾಂಧಕಾರಂ|| ೨೦

ಬಿಲ್ಗಾರರಲ್ಲಿಯೂ ಅತ್ಯುತ್ತಮವಾದ ಅಶ್ವಾರೋಹಕರು ಅಶ್ವಾರೋಹಕರಲ್ಲಿಯೂ ಕಾಲುಬಲದವರು ಹಾಲುಬಲದವರಲ್ಲಿಯೂ ತೇರು ತೇರುಗಳ ಸಮೂಹದಲ್ಲಿಯೂ ಶ್ರೇಷ್ಠವಧಾ ಅನೆಗಳು ಮದ್ದಾನೆಗಳಲ್ಲಿಯೂ ಸೇರಿಕೊಂಡು ಯುದ್ಧಮಾಡಿದುವು. ಅಲ್ಲಿ ಹರಿದು ಬರುತ್ತಿರುವ ರಕ್ತದಿಂದಲೂ ಮಾಂಸಖಂಡಗಳ ರಾಶಿಯಿಂದಲೂ ಯಮನು ಮೇಲೆ ಬಿದ್ದು ಓಕುಳಿಯಾಟವನ್ನಾಡಿದಂತಾಯಿತು. ವ|| ವೀರರಸದ ಪ್ರವಾಹವೂ ರಕ್ತಪ್ರವಾಹವೂ ಜೊತೆ ಜೊತೆಯಲ್ಲಿಯೇ ಹುಚ್ಚುಹೊಳೆಯಾಗಿ ಹರಿದುವು. ಚತುರಂಗಸೈನ್ಯವೂ ಕಾದಿ ಶಕ್ತಿಗುಂದಿ ಹಿಂದಕ್ಕೆ ಹೋಗಿ ನಿಂತವು. ವಿರಾಟನು ತನ್ನ ನಾಲ್ಕು ತೆರನಾದ ಸೈನ್ಯವನ್ನೂ ಒಟ್ಟುಗೂಡಿಸಿ ಪಾಂಡವರು ತನ್ನ ಪೌರುಷವನ್ನು ತನಗಾಗಿ ಯುದ್ಧಮಾಡಿ ಗೋವುಗಳನ್ನು ಹಿಂತಿರುಗಿಸಿದುದನ್ನೂ ಜ್ಞಾಪಿಸಿಕೊಂಡು ೧೮. ತನ್ನ ಮಗಳಾದ ಉತ್ತರೆಯನ್ನು ಅರ್ಜುನನ ಮಗನಾದ ಅಭಿಮಾನ್ಯುವಿಗೆ ಬಳುವಳಿಯಾಗಿ ಕೊಟ್ಟುದನ್ನೂ ಆ ಪ್ರಸಿದ್ಧವಾದ ಯುದ್ಧದಲ್ಲಿ ತನ್ನ ಮಕ್ಕಳು ಸತ್ತುದನ್ನೂ ಮನಸ್ಸಿನಲ್ಲಿ ಜ್ಞಾಪಿಸಿಕೊಂಡು ತಾಗಿದನು. ದ್ರೋಣನು ಹೆದರದೆ ಒಂದು ಪ್ರತಿಭಟಿಸಿ ಒಂದೆ ಕೆಲ್ಲಂಬಿ(?) ನಿಂದ ಮೆಲ್ಲಗೆ ಗುರಿಯಿಟ್ಟು ಆರ್ಭಟಮಾಡಿ ತಲೆಹರಿದು ಸಿಡಿದು ಅತ್ತ ಕಡೆ ಬೀಳುವ ಹಾಗೆ ಹೊಡೆದನು. ವ|| ಹಾಗೆ ವಿರಾಟನನ್ನು ಹೊಡೆದು ಮನಸ್ಸಿನಲ್ಲಿ ಸಂಶಯವೇ ಇಲ್ಲದೇ ಶತ್ರುರಾಜಸಮೂಹದ ಮೇಲೆ ಬೀಳಬೇಕೆಂದು ತೋಳನ್ನು ತಟ್ಟಿ ಶಬ್ದಮಾಡಿ ಹರಿತವಾದ ಬಾಣರಾಶಿಯಿಂದ ಬೇಲಿಯನ್ನು ಹಾಕಿ ವೀರರಸಕ್ಕೆ ಆವಾಸಸ್ಥಾನನಾಗಿದ್ದ ದ್ರೋಣಾಚಾರ್ಯನನ್ನು ದ್ರುಪದನು ನೋಡಿ ಸೈರಿಸಲಾರದೆ ಮುಂದೆ ಬಂದು ೧೯. ನನಗೂ ದ್ರೋಣನಿಗೂ ವಿದ್ಯಾಭ್ಯಾಸದಲ್ಲಿ ಒಬ್ಬರೇ ಗುರು. ನನ್ನನ್ನು ಧನುರ್ವಿಧ್ಯೆಯಲ್ಲಿ ಮೀರಿಸಬೇಕೆಂಬ ಸ್ಪರ್ಧೆಯೂ ಅವನಲ್ಲಿ ಉಂಟು. ನನಗೆ ರೂಢಮೂಲವಾದ ಶತ್ರುತ್ವವೂ ತಿರಸ್ಕೃತವಾದ ಮೊದಲಿನ ಅವಮಾನವೂ ಹಿರಿದಾಗಿಯೇ ಇದೆ. ಅದನ್ನೇ ಕಾರಣವನ್ನಾಗಿ ಮಾಡಿಕೊಂಡು ಇಂದು ಇಲ್ಲಿ ಅವುಗಳನ್ನು ಪರಿಹರಿಸದೆ ಬಿಡುತ್ತೇನೆಯೇ? ವ|| ಎಂದು ಒಂದಕ್ಷೋಹಿಣಿ ಸೈನ್ಯದಿಂದ ಕೂಡಿ ಪ್ರಳಯಕಾಲದ ಮಾರಿದೇವತೆಯೂ ಆಕಾಶದ ಮುಚ್ಚಳವೂ ನೆಲದ ಮೇರೆಯಾದ ಸಮುದ್ರವೂ ಮೊದಲೇ ತಮ್ಮ ಎಲ್ಲೆಯನ್ನು ಮೀರುವಂತೆ ತಾಗಿದನು. ಶಲ್ಯನೊಡನೆ ಸಾತ್ಯಕಿಯೂ ಕೃಪನೊಡನೆ ಧರ್ಮರಾಯನೂ ಕೃತವರ್ಮನೊಡನೆ ನಕುಳನೂ ಶಕುನಿಯೊಡನೆ ಸಹದೇವನೂ ಕರ್ಣನೊಡನೆ ಭೀಮನೂ ಅಶ್ವತ್ಥಾಮನೊಡನೆ ಅಕಳಂಕರಾಮನಾದ ಅರ್ಜುನನೂ ದ್ವಂದ್ವ ಯುದ್ಧದಲ್ಲಿ (ಇಬ್ಬರು ಜೊತೆಜೊತೆಯಾಗಿ ಮಾಡುವ ಯುದ್ಧ) ಸಂಸಿದರು. ೨೦. ದಿಕ್ಕುಗಳೆಲ್ಲವೂ ತೀಕ್ಷ್ಣವಾದ

ವ|| ಅನ್ನೆಗಂ ಕಪ್ಪಂಗವಿಯಾಗಿ ಕವಿದ ದ್ರುಪದ ವಿಳಯಾನಳನಂ ದ್ರೋಣಂ ಮಹಾದ್ರೋಣ ಪುಷ್ಕಳಾವರ್ತಕಂಗಳೆಂಬ ವಿಳಯ ಕಾಳ ನೀಳ ಜಳಧರವರ್ಷಂಗಳಿಂ ನಂದಿಸೆಯುಂ ನಂದದೆ ಮುಟ್ಟಿವರೆ ದುರ್ಯೋಧನನನೇಕಾಯುಧ ಶರಭರಿತಂಗಳಪ್ಪ ರಥಂಗಳಂ ದ್ರೋಣಾಚಾರ್ಯರ ಪೆಱಗೆ ನಿಱಸಿಯಾಯುಧಾಧ್ಯಕ್ಷರಂ ಪೇೞ್ದು ಚಕ್ರರಕ್ಷೆಗೆ ದುಶ್ಶಾಸನಾದಿಗಳ್ವೆರಸು ತಾನೆ ಬಂದಿರ್ದಾಗಳ್-

ಚಂ|| ದ್ರುಪದ ಬಳಾಂಬುರಾಶಿಯನಗುರ್ವಿಸೆ ಪರ್ವಿಪ ಬಾಡಬಾಗ್ನಿಯಾ
ಯ್ತುಪಚಯಮಪ್ಪ ಬಿಲ್ಲೊವಜನಂಬಿನ ಬೆಳ್ಸರಿಯಾದಮಾ ರಥ|
ದ್ವಿಪಘಟೆಯೆಂಬಿವನಂಬಿನೊಳೆ ಪೂೞ್ದು ಪಡಲ್ವಡೆ ತಿಣ್ಣಮೆಚ್ಚನಾ
ತ್ರಿಪುರಮನೆಚ್ಚ ರುದ್ರನ ನೆಗೞ್ತೆಯುಮಂ ಗೆಲೆ ಕುಂಭಸಂಭವಂ|| ೨೧

ವ|| ಅಂತು ತನ್ನ ಬಲಮೆಲ್ಲಮಂ ಜವನಂತೊಕ್ಕಲಿಕ್ಕೆ ಕೊಲ್ವ ಕಳಶಕೇತನಂ ಯಜ್ಞಸೇನನೇನುಂ ಮಾಣದಾತನ ಮೇಲೆ ಬಟ್ಟಿನಂಬಿನ ಬೆಳ್ಸರಿಯುಮಂ ಕೆಲ್ಲಂಬಿನ ತಂದಲುಮಂ ಪಾರೆಯಂಬಿನ ಸೋನೆಯುಮಂ ಸುರಿಯೆ ಕಳಶಯೋನಿ ಮುಳಿದು-

ಮ|| ಪದಿನೆಂಟಂಬಿನೊಳೆಚ್ಚೊಡೆಚ್ಚು ಪದಿನೆಂಟಸ್ತ್ರಂಗಳಿಂ ಸೀಳ್ದು ಕೋ
ಪದಿನೆಂಬತ್ತು ಸರಂಗಳಿಂ ಗುರು ಭರಂಗೆಯ್ದೆಚ್ಚೊಡೆಂಬತ್ತು ಬಾ|
ಣದಿನಾಗಳ್ ಕಡಿದುಗ್ರ ಸೂತ ಹಯ ಸಂಘಾತಂಗಳಂ ತಿಣ್ಣಮೆ
ಚ್ಚಿದಿರೊಳ್ ನಿಲ್ಲದಿರೋಡು ಸತ್ತೆಯೆನುತುಂ ಪಾಂಚಾಳರಾಜಾಪಂ|| ೨೨

ವ|| ಮೆಯ್ವೆರ್ಚಿ ಪೆರ್ಚಿದುಮ್ಮಚ್ಚರದೊಳಚ್ಚರಿಯಾಗೆಚ್ಚೊಡೆ ಪೂಣ್ಗೂರ್ತು-

ಉ|| ಎನ್ನೊಳೆ ಮುನ್ನೆ ಮುಚ್ಚರಿಪನೇ ಒಡನೋದಿದೆನೆಂಬ ಮೇಳದಿಂ
ದೆನ್ನನೆ ಮೆಚ್ಚನೆನ್ನೊಳಮಿವಂ ಸಮನೆಚ್ಚಪನಕ್ಕುಮಾದೊಡೇ|
ನಿನ್ನವನಂ ಪಡಲ್ವಡಿನೆಂದಿರದಾಗಳೆ ಭಾರ್ಗವಾಸ್ತ್ರದಿಂ
ದನ್ನೆದೆಚ್ಚನಾ ದ್ರುಪದರಾಜಶಿರೋಂಬುಜಮಂ ಘಟೋದ್ಭವಂ|| ೨೩

ಬಾಣಸಮೂಹದಿಂದ ಹೆಣೆದ ಹಾಗಾದುವು. ಆಕಾಶವು ಬಾಣದಿಂದ ಮುಸುಕಿಕ್ಕಿದಂತಾಯಿತು. ಬಾಣಗಳನ್ನು ಬಿಲ್ಲಿಗೆ ಹೂಡುವ ಮತ್ತು ಅದನ್ನು ಪ್ರಯೋಗಿಸುವ ಸರದಿಯ ಕೈಗಳ ವೇಗವನ್ನು ನೋಡುವುದಕ್ಕೆ ಯಾರಿಗೂ ಸಾಧ್ಯವಿಲ್ಲದ ಹಾಗಾಯಿತು. ಆ ರಾಜಸಮೂಹವು ವಿಶೇಷವಾಗಿ ಬಾಣಪ್ರಯೋಗ ಮಾಡುವುದಕ್ಕಾಗಿ (ಮೊದಲು) ಮಾಡಿದ ಹೆದೆಯ ಟಂಕಾರ ಶಬ್ದದಿಂದ ಶಬ್ದಾಯಮಾನವಾಗಿರುವ ಬಿಲ್ಲುಗಳ ಸಮೂಹದ ಕತ್ತಲೆಯು ವ್ಯಾಪಿಸಿ ಹೆದರಿಸಿತು. ವ|| ಅಷ್ಟರಲ್ಲಿ ಆನೆಯನ್ನು ಹಿಡಿಯುವ ಗುಳಿಯ ಮುಚ್ಚಳದಂತೆ ಸಾಂದ್ರವಾಗಿ ಮುತ್ತಿಕೊಳ್ಳುತ್ತಿರುವ ದ್ರುಪದನೆಂಬ ಪ್ರಳಯಾಗ್ನಿಯನ್ನು ದ್ರೋಣನು ಮಹಾದ್ರೋಣ ಮತ್ತು ಪುಷ್ಕಳಾವರ್ತಕಗಳೆಂಬ ಪ್ರಳಯಕಾಲದ ಕರಿಯ ಮೋಡಗಳ ಮಳೆಯಿಂದ ಆರಿಸಿದರೂ ಆರದೆ ಮುಟ್ಟುವ ಹಾಗೆ ಹತ್ತಿರಕ್ಕೆ ಬರಲು ದುರ್ಯೋಧನನು ಅನೇಕ ಆಯುಧ ಮತ್ತು ಬಾಣಗಳಿಂದ ತುಂಬಿರುವ ತೇರುಗಳನ್ನು ದ್ರೋಣಾಚಾರ್ಯರ ಹಿಂದೆ ಸ್ಥಾಪಿಸಿ ಆಯುಧಾಧ್ಯಕ್ಷರನ್ನು ನೇಮಿಸಿ ಚಕ್ರವ್ಯೂಹದ ರಕ್ಷೆಗೆ ದುಶ್ಶಾಸನಾದಿಗಳೊಡನೆ ತಾನೆ ಬಂದು ನಿಂತನು. ೨೧. ಅಭಿವೃದ್ಧಿಯಾಗುತ್ತಿರುವ ದ್ರೋಣಾಚಾರ್ಯರ ಬಾಣಗಳ ಬಿಳಿಯ ಸೋನೆಯ ಮಳೆಯು ದ್ರುಪದನ ಸೈನ್ಯಸಾಗರವನ್ನು ಹೆದರಿಸುವ ಮತ್ತು ಬೆದರಿಸುವ ಬಡಬಾಗ್ನಿಯಾಯಿತು. ಆ ರಥಗಳೂ ಆನೆಯ ಸಮೂಹವೂ ಬಾಣಗಳಲ್ಲಿ ಹೂತುಹೋಗಿ ಚೆದುರಿಹೋಗುತ್ತಿರಲು ದ್ರೋಣನು ಆ ತ್ರಿಪುರವನ್ನು ಹೊಡೆದ ಈಶ್ವರನ ಕಾರ್ಯವನ್ನೂ ಮೀರಿಸಿ ತೀಕ್ಷ್ಣವಾಗಿ ಹೊಡೆದನು. ವ|| ಹಾಗೆ ತನ್ನ ಸೈನ್ಯವೆಲ್ಲವನ್ನೂ ಯಮನಂತೆ ಒಕ್ಕಣೆ ಮಾಡಿ ಕೊಲ್ಲುತ್ತಿರುವ ದ್ರೋಣನನ್ನು ದ್ರುಪದನು ಹೇಗೂ ತಡೆಯಲಾರದೆ ಅವನ ಮೇಲೆ ಗುಂಡಾದ ಅಲಗುಳ್ಳ ಬಾಣಗಳ ಬಲವಾದ ಸೋನೆಮಳೆಯನ್ನೂ ಕೆಲ್ಲಂಬುಬಾಣಗಳ ತುಂತುರು ಮಳೆಯನ್ನೂ ಹಾರೆಯಾಕಾರದ ಬಾಣಗಳ ಜಡಿಮಳೆಯನ್ನೂ ಸುರಿಯಲು ದ್ರೋಣನು ಕೋಪಗೊಂಡನು. ೨೨. ಹದಿನೆಂಟು ಬಾಣಗಳಿಂದ ಹೊಡೆದರೆ ಹದಿನೆಂಟಸ್ತ್ರಗಳಿಂದ ಅವನ್ನು ಸೀಳಿದನು. ದ್ರೋಣನು ಕೋಪದಿಂದ ಎಂಬತ್ತು ಬಾಣಗಳಿಂದ ಆರ್ಭಟ ಮಾಡಿ ಹೊಡೆದರೆ ದ್ರುಪದನು ಎಂಬತ್ತು ಬಾಣಗಳಿಂದ ಆಗಲೇ ಕತ್ತರಿಸಿ ಹಾಕಿದನು. ದ್ರೋಣನ ಸಾರಥಿ ಮತ್ತು ಭಯಂಕರವಾದ ಕುದುರೆಗಳ ಸಮೂಹಗಳನ್ನು ತೀಕ್ಷ್ಣವಾಗಿ ಹೊಡೆದು ಎದುರಿಗೆ ನಿಲ್ಲಬೇಡ ಓಡು ಸತ್ತೆ ಎನ್ನುತ್ತ ಪಾಂಚಾಳರಾಜಾಶ್ವರನಾದ ದ್ರುಪದನು ವ|| ಕೊಬ್ಬಿ ಹೆಚ್ಚಿದ ಕೋಪದಲ್ಲಿ ಆಶ್ಚರ್ಯವಾಗುವಂತೆ ಹೊಡೆಯಲು ದ್ರೋಣನು ಗಾಯಗೊಂಡು ೨೩. ಇವನು ಮೊದಲಿನಿಂದಲೂ ನನ್ನಲ್ಲಿ ಮತ್ಸರಿಸುತ್ತಾನೆ. ಜೊತೆಯಲ್ಲಿ ಓದಿದೆನು ಎಂಬ ಸಲಿಗೆಯಿಂದ ನನ್ನನ್ನು ಮೆಚ್ಚಲಾರ; ನನ್ನ ಸಮಾನನಾಗಿಯೇ

ವ|| ಅಂತು ದ್ರುಪದನೞವಂ ಕಂಡಾತನ ತಮ್ಮಂದಿರಪ್ಪ ಶತಾನೀಕ ಶತಚಂದ್ರರ್ ಮೊದಲಾಗೆ ಪನ್ನೊರ್ವರುಮಯ್ವರ್ ಕೈಕಯರುಂ ಕುಂತಿಯ ಮಾವನಪ್ಪ ಕುಂತಿಭೋಜನುಂಬೆರಸು ಪದಿನಾಲ್ಸಾಸಿರ ರಥಂಬೆರಸು ಬಂದು ತಾಗಿದೊಡೆ-

ಮ|| ಶಕಟಂಗಳ್ ಪದಿನೆಂಟು ಕೋಟಿವರೆಗಂ ತೀವಿರ್ದನೇಕೋಗ್ರ ಸಾ
ಯಕದಿಂದಂ ಚತುರಂಗ ಸಾಧನದ ಮೆಯ್ಮೆಯ್ಯೊಳ್ ಜಿಗಿಲ್ತಾಂತ ನಾ|
ಯಕರಂ ಸುಂಟಗೆಯಾಱದಂತೆ ರಥದೊಳ್ ಜೋಲ್ವನ್ನೆಗಂ ಕೋದು ಚಾ
ಪ ಕಳಾಕೌಶಳಮಂ ಜಗಕ್ಕೆ ಮೆದಂ ಮೆಯ್ವೆರ್ಚಿ ಕುಂಭೋದ್ಭವಂ|| ೨೪

ವ|| ಅಂತು ದ್ರುಪದ ದ್ರುಪದಾನುಜ ವಿರಾಟ ವಿರಾಟಾನುಜ ಕೈಕಯ ಕುಂತಿ ಭೋಜಾದಿಗಳಪ್ಪ ನಾಯಕರೆಲ್ಲರುಮಂ ಪೇೞೆ ಪೆಸರಿಲ್ಲದಂತೆ ಕೊಂದು ಮುಂದಾಂಪರಾರುಮಿಲ್ಲದಿಕ್ಕಿ ಗೆಲ್ದ ಮಲ್ಲನಿರ್ದಂತಿರ್ದಾಗಳ್-

ಮ|| ಸಕಲಾರಾತಿ ನರೇಂದ್ರಮೌಳಿಗಳುರುಳ್ದಾ ದೀಪ್ತ ರತ್ನಾಂಶು ಮಾ
ಳಿಕೆಯಿಂದಾ ರಣರಂಗಮಂ ಬೆಳಗೆ ಕಾೞರ್ಚೆಂದು ಭೂತಾಂಗನಾ|
ನಿಕರಂ ಶೋಣಿತವಾರಿಯಂ ಕುಡಿದಗುರ್ವಪ್ಪನ್ನೆಗಂ ಸೂಸೆ ನೋ
ಡ ಕವಿಲ್ತಿರ್ದುದು ಕೂಡೆ ಸಂಜೆಗವಿದಂತಾ ದ್ರೋಣನಿಂ ಕೊಳ್ಗುಳಂ|| ೨೫

ವ|| ಆಗಳ್ ಯುಷ್ಠಿರಂ ನಾರಾಯಣಂ ಪೇೞ್ದ ಕಪಟೋಪದೇಶದಿಂ ದ್ರೋಣನಂ ಕೆಯ್ದೆ ಮಾಡಲೆಂದು ಪಾಂಡ್ಯ ಗಜಘಟೆಗಳನಿದಿರೊಳ್ ತಂದೊಡ್ಡಿದಾಗಳ್-

ಕಂ|| ನಿಶಿತ ವಿಶಿಖಂಗಳಿಂದೊಂ
ದಶನಿಯೆ ಗಿರಿಕುಲಮನಳಱುವಂತೆ ಮದೇಭ|
ಪ್ರಸರ ಸಹಸ್ರಂ ಕೆಡೆದುವು
ವಿಸಸನದೊಳ್ ದ್ರೋಣನಿದಿರ್ಗೆ ಮಾರ್ವಲಮೊಳವೇ|| ೨೬

ವ|| ಅಂತು ತನಗೆ ಮಾಱುಂತ ಮದಾಂಧಸಿಂಧುರಂಗಳಂ ಸಿಂಧುರಂಗಳಂ ಸಿಂಧುರಾರಾತಿಯೆ ಕೊಲ್ವಂತೆ ಕೊಲೆ-

ಕಂ|| ಸಾಮಜಮಶ್ವತ್ಥಾಮಂ
ನಾಮದಿ ನೊಂದೞದೊಡಲ್ಲಿ ಕಂಡು ಹತೋಶ್ವ|
ತ್ಥಾಮಾ ಎನೆ ನೃಪನಶ್ವ
ತ್ಥಾಮನೆ ಗೆತ್ತೊಣರ್ದನೊವಜನೊರ್ವೆಸರಿಭಮಂ|| ೨೭

ಯುದ್ಧಮಾಡುವ ಶಕ್ತಿಯುಳ್ಳವನೇನೋ ಹೌದು; ಆದರೇನು? ಇನ್ನಿವನನ್ನು ಕೆಳಗುರುಳಿಸುತ್ತೇನೆಂದು ಸಾವಕಾಶಮಾಡದೆ ಭಾರ್ಗವಾಸ್ತ್ರದಿಂದ ಕೂಡಿಕೊಂಡು ದ್ರುಪದ ರಾಜನ ತಲೆಯೆಂಬ ಕಮಲವನ್ನು ದ್ರೋಣನು ಕತ್ತರಿಸಿದನು. ವ|| ಹಾಗೆ ದ್ರುಪದನ ಸಾವನ್ನು ನೋಡಿದ ಆತನ ತಮ್ಮಂದಿರಾದ ಶತಾನೀಕ ಶತಚಂದ್ರರೇ ಮೊದಲಾದ ಹನ್ನೊಂದು ಜನವೂ ಅಯ್ದು ಮಂದಿ ಕೈಕೆಯರೂ ಕುಂತಿಯ ಮಾವನಾದ ಕುಂತಿಭೋಜನೂ ಕೂಡಿ ಹದಿನಾಲ್ಕು ಸಾವಿರರಥದೊಡನೆ ಬಂದು ತಾಗಿದರು. ೨೪. ಹದಿನೆಂಟು ಕೋಟಿಯವರೆಗೂ ತುಂಬಿದ ಗಾಡಿಗಳ ಅತಿಭಯಂಕರವಾದ ಬಾಣಗಳಿಂದ ಒಂದೊಂದು ಮೈಯ್ಯಲ್ಲಿಯೂ ಅಂಟಿಕೊಂಡು, ಪ್ರತಿಭಟಿಸಿದ ನಾಯಕರ, ಸೇನಾಪತಿಗಳ ಸುಟ್ಟ ಮಾಂಸವನ್ನು ಆರಲಿಟ್ಟಿರುವ ಹಾಗೆ ಜೋತು ಬೀಳುತ್ತಿರುವಂತೆ ರಥದಲ್ಲಿ ಪೋಣಿಸಿ (ನೇತುಹಾಕಿ-ಜೋಲುಬಿಟ್ಟು) ದ್ರೋಣನು ಮಯ್ಯುಬ್ಬಿ ತನ್ನ ವಿದ್ಯಾಕೌಶಲವನ್ನು ಪ್ರದರ್ಶಿಸಿದನು. ವ|| ಹೀಗೆ ದ್ರುಪದ, ದ್ರುಪದನ ತಮ್ಮ, ವಿರಾಟ, ವಿರಾಟನ ತಮ್ಮ ಕೈಕೆಯ, ಕುಂತೀಭೋಜನೇ ಮೊದಲಾದ ನಾಯಕರೆಲ್ಲರನ್ನೂ ಹೇಳುವುದಕ್ಕೂ ಒಂದು ಹೆಸರಿಲ್ಲದಂತೆ ಕೊಂದು ಪ್ರತಿಭಟಿಸುವವರಾರೂ ಇಲ್ಲದಂತೆ ಸಂಹರಿಸಿ ಗೆದ್ದ ಜಟ್ಟಿಯಿದ್ದಂತೆ ಇದ್ದನು. ೨೫. ಸಮಸ್ತ ಶತ್ರುರಾಜರ ಕಿರೀಟಗಳುರುಳಿ ಆ ರತ್ನಕಿರಣಗಳ ಸಮೂಹದಿಂದ ಆ ರಣರಂಗವು ಕೆಂಪಗೆ ಪ್ರಕಾಶಮಾನವಾಯಿತು. ಅದು ಕಾಡ್ಗಿಚ್ಚೆಂದು ಪಿಶಾಚಸ್ತ್ರೀಯರ ಸಮೂಹವು ಬಂದು ರಕ್ತಜಲವನ್ನು ಕುಡಿದು ಭಯಂಕರವಾಗುವ ಹಾಗೆ ಚೆಲ್ಲಾಡಿತು. ಆ ದ್ರೋಣನಿಂದ ಆ ಯುದ್ಧಭೂಮಿಯು ಸಂಜೆಕವಿದಂತೆ ಮಾಸಲು ಕೆಂಪುಬಣ್ಣದಿಂದ ಕೂಡಿದ್ದಿತು. ವ|| ಆಗ ಧರ್ಮರಾಜನು ಕೃಷ್ಣನು ಹೇಳಿದ ಕಪಟೋಪದೇಶದಿಂದ ದ್ರೋಣನನ್ನು ವಶಪಡಿಸಿಕೊಳ್ಳಬೇಕೆಂದು ಪಾಂಡ್ಯರ ಆನೆಗಳ ಸಮೂಹವನ್ನು ಎದುರಾಗಿ ತಂದೊಡ್ಡಿದನು. ೨೬. ಹರಿತವಾದ ಬಾಣಗಳಿಂದ ಒಂದು ವಜ್ರಾಯುಧವೇ ಪರ್ವತಗಳ ಸಮೂಹವನ್ನು ನಾಶಮಾಡುವ ಹಾಗೆ ಸಾವಿರ ಮದ್ದಾನೆಯ ಗುಂಪು ಯುದ್ಧರಂಗದಲ್ಲಿ ಕೆಡೆದುಬಿದ್ದುವು. ದ್ರೋಣನಿಗಿದಿರಾಗುವ ಪ್ರತಿಬಲವುಂಟೇ? ವ|| ಹಾಗೆ ತನಗೆ ಪ್ರತಿಭಟಿಸಿದ ಮದ್ದಾನೆಗಳನ್ನು ಸಿಂಹವು ಕೊಲ್ಲುವ ಹಾಗೆ ಕೊಂದನು. ೨೭. ಅಶ್ವತ್ಥಾಮನೆಂಬ

ಒಗೆದ ಸುತಶೋಕದಿಂದಾ
ವಗೆಯಂತೊಳಗುರಿಯೆ ಭೋಂಕನೆರ್ದೆ ತೆಯಲ್ ಹಾ|
ಮಗನೇ ಎಂದಶ್ರುಜಲಾ
ರ್ದ್ರಗಂಡನಾ ಗಂಡಿನೊಡನೆ ಬಿಸುಟಂ ಬಿಲ್ಲಂ ೨೮

ವ|| ಅಂತು ಬಿಸುಟು ವಿಚ್ಛಿನ್ನ ವೀರರಸನುಮುತ್ಪನ್ನ ಶೋಕರಸನುಮಾಗಿ ನಿಜ ವರೂಥಮಂ ಧರ್ಮಪುತ್ರನ ಸಮೀಪಕ್ಕುಯ್ದು ಮಗನ ಮಾತಂ-

ಚಂ|| ಬೆಸಗೊಳೆ ಕುಂಜರಂ ಮಡಿದುದೆಂದು ಮಹೀಭುಜನುಳ್ಳ ಮಾೞ್ಕೆಯಿಂ
ಪುಸಿಯದೆ ಪೇೞ್ದೊಡಂ ಕಿಱದು ನಂಬದೆಯುಂ ರಣದಲ್ಲಿ ಮುನ್ನೆ ಬಿ|
ಲ್ವಿಸುಟೆನಿದೆಂತು ಪೇೞ್ ಪಿಡಿವೆನಿನ್ನಿದನೆಂದಿರದಾತ್ಮಯೋಗಿ ತ
ನ್ನಸುವನುದಾತ್ತಯೋಗದೊಳೆ ಬಿಲ್ಲೊವಜಂ ಕಳೆದಂ ರಣಾಗ್ರದೊಳ್ ||೨೯

ವ|| ಅಂತು ಭಾವಿತಾತ್ಮನಧ್ಯಾತ್ಮ ವಿಶಾರದನಾಗಿ ಪರಮಾತ್ಮನೊಳ್ ಕೂಡಿದನಾಗಳ್ ಪೆಣನನಿಱದು ಪಗೆಗೊಂಡರೆಂಬ ನಾಣ್ಣುಡಿಯಂ ನನ್ನಿ ಮಾಡಿ ತಮ್ಮಯ್ಯಂ ಸತ್ತ ಮುಳಿಸಿನೊಳ್ ಕಣ್ಗಾಣದೆ ಧೃಷ್ಟದ್ಯುಮ್ನಂ ಧರ್ಮತನೂಜಂ ಬಾರಿಸೆ ವಾರಿಸೆ-

ಕಂ|| ಕರವಾಳಂ ಘರಮಟ್ಟಿಸಿ
ಶಿರೋಜಮಂ ಪಿಡಿದು ತೆಗೆದು ಗುರುವಂ ಪಚ್ಚಂ|
ತಿರೆ ಪಿರಿದು ಪೊಯ್ದನೆಂತ
ಪ್ಪರೊಳಂ ಮುಳಿಸಱವನಾಗಲೇನಿತ್ತಪುದೇ|| ೩೦

ವ|| ಅಂತು ದ್ರೋಣನೆಳೆಗೋಣ ಸಾವಂ ಸಾವುದುಂ ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮನೊಂದು ತಲೆಯಾಗೋಡುವ ಕೌರವಧ್ವಜಿನಿಯುಮಂ ಬೇಂದು ಮೊನೆಯೊಳ್ ಕಾದುತಿರ್ದಶ್ವತ್ಥಾಮಂ ಕಂಡು ಮುಟ್ಟೆವರ್ಪನ್ನೆಗಂ ಶೋಣಾಶ್ವೋಪಲಕ್ಷಿತ ನಿಜಪಿತೃ ಸೂತ ಕೇತನ ಕಥಿತಮಾಗಿರ್ದ ರಥಮನುಪಲಕ್ಷಿಸಿ ನೋಡಿ ತಮ್ಮಯ್ಯನತೀತನಾದುದನಱದು-

ಚಂ|| ಒತುಗುತರ್ಪ ಕಣ್ಬನಿಗಳಂ ಬರಲೀಯದೆ ಕೋಪ ಪಾವಕಂ
ನಿಱಸೆ ಕನಲ್ದು ರೋಷದಿನಪಾಂಡವಮಾಗಿರೆ ಮಾಡದಂದು ಬಿ|
ಲ್ಲೆಯನ ಪುತ್ರನಲ್ಲೆನೆನುತುಂ ಗುರುಪುತ್ರನಿದಿರ್ಚೆ ಭೀತಿಯಿಂ
ಮಱುಗಿ ತೆರಳ್ದು ತೂಳ್ದಿ ಸುೞಗೊಂಡುದು ಪಾಂಡವ ಸೈನ್ಯಸಾಗರಂ|| ೩೧

ಹೆಸರಿನ ಆನೆಯೊಂದು ಯುದ್ಧರಂಗದಲ್ಲಿ ಸಾಯಲು ಧರ್ಮರಾಯನು ನೋಡಿ ‘ಹತೋಶ್ವತ್ಥಾಮ’ (ಅಶ್ವತ್ಥಾಮ ಹತನಾದನು) ಎಂದು ಘೋಷಿಸಿದನು. ಗುರುವಾದ ದ್ರೋಣನು ಒಂದೇ ಹೆಸರಿನ ಆನೆಯನ್ನು (ನಾಮಸಾದೃಶ್ಯದಿಂದ) ಮಗನಾದ ಅಶ್ವತ್ಥಾಮನೆಂದೇ ಭಾವಿಸಿ ದುಖಿಸಿದನು. ೨೮. ಉಂಟಾದ ಪುತ್ರಶೋಕದಿಂದ ಕುಂಬಾರರ ಆವುಗೆಯ ಒಲೆಯಂತೆ ಮನಸ್ಸು ಉರಿಯಲು ಇದ್ದಕ್ಕಿದ್ದ ಹಾಗೆ ಎದೆಯು ಬಿರಿಯಲು ‘ಅಯ್ಯೋ ಮಗನೆ’ ಎಂದು ಕಣ್ಣೀರಿನಿಂದ ತೊಯ್ದ ಕೆನ್ನೆಯುಳ್ಳವನಾಗಿ ತನ್ನ ಪೌರುಷದೊಡನೆ ಬಿಲ್ಲನ್ನೂ ಬಿಸಾಡಿದನು. ವ|| ಕತ್ತಿಯನ್ನೆಸೆದು ವೀರರಸವಿರಹಿತನಾಗಿ ದುಖರಸದಿಂದ ಕೂಡಿ ತನ್ನ ತೇರನ್ನು ಧರ್ಮರಾಯನ ಸಮೀಪಕ್ಕೆ ತೆಗೆದುಕೊಂಡುಹೋಗಿ ಮಗನ ಮಾತನ್ನು ೨೯. (ವಾಸ್ತವಾಂಶವೇನೆಂದು) ಪ್ರಶ್ನೆಮಾಡಲು ಆನೆಯು ಸತ್ತಿತೆಂದು ರಾಜನು (ಸತ್ಯವಾಗಿ) ಇರುವ ರೀತಿಯಲ್ಲಿಯೇ ಹುಸಿಯದೆ ಹೇಳಿದರೂ ಸ್ವಲ್ಪವೂ ನಂಬದೆ “ಯುದ್ಧದಲ್ಲಿ ಈ ಮೊದಲು ಬಿಲ್ಲನ್ನು ಬಿಸಾಡಿದ್ದೇನೆ. ಪುನ ಅದನ್ನು ಹೇಗೆ ಹಿಡಿಯಲಿ ಹೇಳು” ಎಂದು ಆತ್ಮಯೋಗಿಯಾದ ದ್ರೋಣನು ಸಾವಕಾಶಮಾಡದೆ ತನ್ನ ಪ್ರಾಣವನ್ನು ಉದಾತ್ತವಾದ ಯೋಗಮಾರ್ಗದಲ್ಲಿ ಯುದ್ಧಮುಖದಲ್ಲಿ ನೀಗಿದನು. ವ|| ಹಾಗೆ ಆತ್ಮಧ್ಯಾನಪರನಾದ ದ್ರೋಣನು ಆಧ್ಯಾತ್ಮಪರಾಯಣನಾಗಿ ಪರಮಾತ್ಮನಲ್ಲಿ ಕೂಡಿದನು. ಆಗ ‘ಹೆಣವನ್ನು ಕತ್ತರಿಸಿ ಹಗೆಯನ್ನು ತೀರಿಸಿಕೊಂಡರು’ ಎಂಬ ಗಾದೆಯ ಮಾತನ್ನು ಸತ್ಯವನ್ನಾಗಿ ಮಾಡಿ ತಮ್ಮಯ್ಯನಾದ ದ್ರುಪದನು ಸತ್ತ ಕೋಪದಿಂದ ಬುದ್ಧಿಶೂನ್ಯನಾಗಿ ದೃಷ್ಟದ್ಯುಮ್ನನು ಧರ್ಮರಾಜನು ಬೇಡವೆಂದು ತಡೆದರೂ- ೩೦. ಕತ್ತಿಯನ್ನು ಬೀಸಿ ಕದಲನ್ನು ಹಿಡಿದೆಳೆದು ಗುರುವನ್ನು ಎರಡುಭಾಗ ಮಾಡಿದ ಹಾಗೆ ಘಟ್ಟಿಯಾಗಿ ಹೊಡೆದನು. ಕೋಪವು ಎಂತಹವರಲ್ಲಿಯೂ ವಿವೇಕವುಂಟಾಗಲು ಅವಕಾಶ ಕೊಡುತ್ತದೆಯೇ ಏನು? ವ|| ಹಾಗೆ ದ್ರೋಣನು ಎಳೆದು ತಂದು ಕೋಣನ ಸಾವಿನ ಮಾದರಿಯ ಸಾವನ್ನು (ಎಳಗೋಣಸಾವು) ಸಾಯಲಾಗಿ ಶಬ್ದಮಾಡಿ ಆರ್ಭಟ ಮಾಡುವ ಪಾಂಡವಸೈನ್ಯವನ್ನೂ ಒಂದೇದಿಕ್ಕಿಗೆ ತಲೆತಿರುಗಿಸಿಕೊಂಡು ಓಡುವ ಕೌರವ ಸೈನ್ಯವನ್ನೂ ಯುದ್ಧಭೂಮಿಯ ಮತ್ತೊಂದೆಡೆಯಲ್ಲಿ ಕಾದುತ್ತಿದ್ದ ಅಶ್ವತ್ಥಾಮನು ನೋಡಿದನು. ಹತ್ತಿರ ಬರುವಷ್ಟರಲ್ಲಿ ಕೆಂಪುಕುದುರೆಗಳಿಂದ ಗುರುತಿಸಲ್ಪಟ್ಟ ತನ್ನ ತಂದೆ, ಸಾರಥಿ, ಧ್ವಜಗಳಿಂದ ಕೂಡಿದ್ದ ತೇರನ್ನು ದೃಷ್ಟಿಸಿ ನೋಡಿ ತಮ್ಮ ತಂದೆಯು ಸತ್ತು ಹೋಗಿದ್ದುದನ್ನು ತಿಳಿದನು. ೩೧. ಜಿನುಗಿ ಸೋರುತ್ತಿದ್ದ ಕಣ್ಣೀರಿನ ಹನಿಗಳನ್ನು ತಡೆದುಕೊಂಡು ಕೋಪಾಗ್ನಿಯು

ವ|| ಆಗಳುರಿಯುರುಳಿಯಂತಪ್ಪ ತನ್ನ ನೊಸಲ ಕಣ್ಣಂ ತೋಱ ತನ್ನ ಸಾಹಸಮಂ ತೋಱಲೆಂದು ನಾರಾಯಣಾಸ್ತ್ರಮಂ ತೊಟ್ಟೆಚ್ಚಾಗಳ್-

ಚಂ|| ದೆಸೆ ಮಸುಳ್ದತ್ತು ರ್ವಾ ತಳರ್ದತ್ತು ನೆಲಂ ಪಿಡಿಗಿತ್ತು ತೊಟ್ಟನಾ
ಗಸಮೊಡೆದತ್ತಜಾಂಡಮಳಱತ್ತೆನುತಿರ್ದೆಡೆಯಲ್ಲಿ ಲೋಕಮಂ|
ಬಿಸಿಳಗಿಟ್ಟು ಕಾದಳವನಾರಳವೊಡ್ಡಿಸೆ ಕಾದನಾಗಳ
ರ್ವಿಸೆ ತೆಗೆದೆಚ್ಚ ವೈಷ್ಣವಮನೊಡ್ಡಿಸಿ ವೈಷ್ಣವದಿಂ ಮುರಾಂತಂಕಂ|| ೩೨

ವ|| ಅಂತಶ್ವತ್ಥಾಮನೆಚ್ಚ ನಾರಾಯಣಾಸ್ತ್ರಮಂ ನಾರಾಯಣನುಪಾಯದೊಳೆ ಗೆಲ್ದನನ್ನೆಗಂ-

ಚಂ|| ಕವಿದೆರಡುಂ ಪತಾಕಿನಿಗಳಾಗಡುಮೆನ್ನಮೆ ಸಕ್ಕಿ ಮಾಡಿ ಕಾ
ದುವುದಱನಲ್ಲಿ ಸತ್ತರಸುಮಕ್ಕಳ ಪಾಪಮಿದೆಲ್ಲಮೆನ್ನನೆ|
ಯ್ದುವುದುಪವಾಸದಿಂ ಜಪದಿನಾನದನೋಡಿಸಿ ಶುದ್ಧನಪ್ಪೆನೆಂ
ಬವೊಲಪರಾಂಬುರಾಶಿಗಿೞದಂ ನಳಿನೀವರಜೀವಿತೇಶ್ವರಂ|| ೩೩

ವ|| ಅಂತೆರಡುಂ ಪಡೆಗಳೊಂದಿರುಳುಮೆರಡುಂ ಪಗಲುಮೋರಂತೆ ಕಾದಿ ಚಳಿತಪಹಾರ ತೂರ್ಯಂಗಳು ಬಾಜಿಸೆ ತಂತಮ್ಮ ಬೀಡುಗಳ್ಗೆ ಪೋದರಾಗಳ್-

ಚಂ|| ಗುರುವಿನ ಶೋಕದಿಂದೆ ರಥಮಧ್ಯದೊಳೊಯ್ಯನೆ ಜೋಲ್ದು ಬಿೞ್ದನಂ
ಗುರುಸುತನಂ ಕೃಪಂ ಕೃಪೆಯಿನಾತ್ಮವಿಲಾಸದೊಳಾಱಸುತ್ತುಮಂ|
ತಿರೆ ಗುರುಶೋಕಮಗ್ಗಳಿಸೆ ತಾತವಿಯೋಗಮುಮಕ್ಕುಮಾಗಡುಂ
ಗುರುವೆನೆ ಪೇೞಮಾ ಗುರುವಿಯೋಗಭರಂ ಗುರುವಾಗದಿರ್ಕುಮೇ|| ೩೪

ವ|| ಅನ್ನೆಗಂ ಪನ್ನಗಕೇತನಂ ಶೋಕಮನಾಱಸಲೆಂದು ಕರ್ಣ ಶಲ್ಯ ಸೌಬಲ ಸಮೇತಂ ಬಂದಶ್ವತ್ಥಾಮನನಿಂತೆಂದಂ-

ಮ|| ಪುದಿದೌರ್ವಾನಳನಬ್ಧಿಯಂ ಸುಡುವವೋಲ್ ಶಸ್ತ್ರಾಗ್ನಿಯಿಂ ತೀವ್ರ ಕೋ
ಪದಿನುದ್ವೃತ್ತ ಬಳಾಬ್ಧಿಯಂ ಸುಡೆ ಕರಂ ಬೆಂಬಿೞ್ದು ದುರ್ಯುಕ್ತಿಯಿಂ|
ದದಯಂ ಧರ್ಮಜನಿಕ್ಕಿದಂ ಗುರುವನಿನ್ನೀನಾತನಂ ಬೇಗಮಿ
ಕ್ಕದೆ ಕಣ್ಣೀರ್ಗಳನಿಕ್ಕೆ ಚಂದ್ರಧವಳಂ ನಿನ್ನನ್ವಯಂ ಮಾಸದೇ|| ೩೫

ಉಜ್ವಲವಾಗುತ್ತಿರಲು ರೇಗಿ ಕೋಪದಿಂದ ‘ಪ್ರಪಂಚವನ್ನು ಪಾಂಡವರಿಲ್ಲದಂತೆ ಮಾಡದಿರುವಾಗ ನಾನು ಚಾಪಾಚಾರ್ಯನ ಮಗನೇ ಅಲ್ಲ’ ಎನ್ನುತ್ತ ಅಶ್ವತ್ಥಾಮನು ಎದುರಿಸಲು ಪಾಂಡವಸೇನಾಸಮುದ್ರವು ಭಯದಿಂದ ದುಖಪಟ್ಟು ಚಲಿಸಿ ತಳ್ಳಲ್ಪಟ್ಟು ಸುಳಿಸುಳಿಯಾಗಿ ತಿರುಗಿತು. ವ|| ಆಗ ಉರಿಯ ಉಂಡೆಯ ಹಾಗಿದ್ದ ತನ್ನ ಹಣೆಗಣ್ಣನ್ನು ತೋರಿ ತನ್ನ ಸಾಹಸವನ್ನು ಪ್ರದರ್ಶಿಸಬೇಕೆಂದು ನಾರಾಯಾಣಾಸ್ತ್ರವನ್ನು ಪ್ರಯೋಗಿಸಿದನು. ೩೨. ದಿಕ್ಕುಗಳು ಮಾಸಲಾದುವು, ಸಮುದ್ರಗಳು ಚಲಿಸಿದುವು, ಭೂಮಿಯು ಸಿಡಿಯಿತು, ಇದ್ದಕ್ಕಿದ್ದ ಹಾಗೆ ಆಕಾಶವು ಒಡೆದುಹೋಯಿತು ಎನ್ನುತ್ತಿದ್ದ ಸಮಯದಲ್ಲಿ ಇರುವ ಸ್ಥಳದಲ್ಲಿಯೇ ಲೋಕವನ್ನು ತನ್ನ ಹೊಟ್ಟೆಯೊಳಗಿಟ್ಟು ಯಾವ ಶಕ್ತಿಯನ್ನಾದರೂ ಪ್ರತಿಭಟಿಸಿ ರಕ್ಷಿಸುವ ಶಕ್ತಿಯುಳ್ಳ ಶ್ರೀಕೃಷ್ಣನು, ಭಯಂಕರವಾಗಿ ಸೆಳೆದು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು ವೈಷ್ಣವಾಸ್ತ್ರದಿಂದ ಎದುರಿಸಿ ಲೋಕವನ್ನು ರಕ್ಷಿಸಿದನು- ವ|| ಹಾಗೆ ಅಶ್ವತ್ಥಾಮನು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು ನಾರಾಯಣನಾದ ಕೃಷ್ಣನು ಉಪಾಯದಿಂದಲೇ ಗೆದ್ದನು. ಅಷ್ಟರಲ್ಲಿ ೩೩. ಎರಡು ಸೈನ್ಯಗಳೂ ಮೇಲೆಬಿದ್ದು ಯಾವಾಗಲೂ ನನ್ನನ್ನೇ ಸಾಕ್ಷಿಯನ್ನಾಗಿ ಮಾಡಿ ಯುದ್ಧಮಾಡುವುದರಿಂದ ಸತ್ತ ರಾಜಕುಮಾರರ ಈ ಪಾಪವೆಲ್ಲ ನನ್ನನ್ನೇ ಸೇರುವುದು. ಆ ಪಾಪವನ್ನು ಉಪವಾಸದಿಂದಲೂ ಜಪದಿಂದಲೂ ಓಡಿಸಿ ಶುದ್ಧನಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಪಶ್ಚಿಮಸಮುದ್ರಕ್ಕಿಳಿದನು. ವ|| ಒಂದು ರಾತ್ರಿ ಮತ್ತು ಎರಡು ಹಗಲು ಒಂದೇ ಸಮನಾಗಿ ಕಾದಿ ಬಲಗುಂದಿದ್ದ ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವ ವಾದ್ಯಗಳನ್ನು ಬಾಜಿಸಲು ತನ್ನ ತಮ್ಮ ನಿವಾಸಗಳಿಗೆ (ಬೀಡುಗಳಿಗೆ) ಹೋದುವು; ಆಗ ೩೪. ತಂದೆಯು ಸತ್ತ ದುಖದಿಂದ ರಥದ ಮಧ್ಯಭಾಗದಲ್ಲಿಯೇ ನಿಧಾನವಾಗಿ ಜೋತು ಬಿದ್ದಿದ್ದ ಅಶ್ವತ್ಥಾಮನನ್ನು ಕೃಪನು ಮೃದುವಾದ ಮಾತುಗಳಿಂದಲೂ; ತನ್ನ ಸಮಾಧಾನೋಕ್ತಿಯಿಂದಲೂ ಬೀಡಿಗೆ ಕರೆದು ತಂದನು. ತಂದೆಯ ಸಾವೇ (ಅಗಲಿಕೆಯೇ) ಹೆಚ್ಚಿನ ದುಖಕ್ಕೆ ಕಾರಣವಾಗಿರುವಾಗ ಆ ತಂದೆಯು ಗುರುವೂ ಆಗಿದ್ದಾಗ ಆ ಗುರುವಿಯೋಗ ದುಖವು ಗುರುತರವಾಗಿರುವುದಿಲ್ಲವೇ? ವ|| ಅಷ್ಟರಲ್ಲಿ ದುರ್ಯೋಧನನು ಅಶ್ವತ್ಥಾಮನ ದುಖವನ್ನು ಆರಿಸಬೇಕೆಂದು ಕರ್ಣ, ಶಲ್ಯ, ಶಕುನಿಯರೊಡನೆ ಬಂದು ಅವನಿಗೆ ಹೀಗೆ ಹೇಳಿದನು. ೩೫. ಆಚಾರ್ಯರು ಆವರಿಸಿಕೊಂಡಿರುವ ಲ

ದ್ರುತವಿಲಂಬಿತಂ|| ಎನಗೆ ಕೂರ್ಪುದನಾ ಘಟಸಂಭವಂ
ನಿನಗೆ ಕೂರನೞಲ್ ನಿನತಲ್ತು ಕೇ||
ಳೆನತುಮಾಱದ ಶೋಕಮನಿರ್ವರುಂ
ಮುನಿವರಂ ತವೆ ಕೊಂದೊಡನೀಗುವಂ|| ೩೬

ವ|| ಎಂಬುದುಮಶ್ವತ್ಥಾಮನಿಂತೆಂದಂ-

ತರಳಂ|| ಗುರು ಮದೀಯ ವಿಮೋಹದಿಂ ಕೃಪೆಯಂ ಜವಂ ಬಿಸುಟಂತೆ ಕೊ
ಕ್ಕರಿಸಿ ಬಿಲ್ವಿಸುಟಿರ್ದೊಡಾ ಪದದೊಳ್ ಗಡಂ ದ್ರುಪದಾತ್ಮಜಂ|
ಗುರುವ ಕೇಶಕಳಾಪಮಂ ತೆಗೆದಂತೆ ಗಂಡನುಮಾದನೀ
ಪರಿಭವಕ್ಕನುರೂಪಮಿಂ ಪೆಱತೊಂದುಮಿಲ್ಲಹಿಕೇತನಾ|| ೩೭

ಶಾ|| ರಾಯೆಂಬೀ ಪೆಸರಿಲ್ಲದಂತು ಮುೞಸಿಂ ಮುಯ್ಯೋೞು ಸೂೞೆಂತು ಕ
ಟ್ಟಾಯಂ ಪೊಂಪುೞವೋಗೆ ತಂದೆಯೞವಿಂಗಾ ಭಾರ್ಗವಂ ಕೊಂದನಂ|
ತೀಯೆಮ್ಮಯ್ಯನಿನಾದುದೊಂದು ಪಗೆಯಿಂ ಸೀಳ್ದುಗ್ರಪಾಂಚಾಳರಾ
ಜಾಯುಪಾರಮನನ್ಯಭೂಪಬಲಮಂ ಪರ್ದಿಂಗೆ ಬಿರ್ದಿಕ್ಕುವೆಂ|| ೩೮

ಕಂ|| ಪಗೆಯಂದಮುಮಾ ರಾಮರ
ಪಗೆಯೊಳ್ ಸಮಮವರ ಪಿಡಿವ ಬಿಲ್ ಬಿಲ್ಲೆಮ್ಮಂ|
ಬುಗಳುಮವರಿತ್ತ ನಲ್ಲಂ
ಬುಗಳೆನೆ ಬೞಗಾಯದಂತು ಚಲಮನೆ ಕಾವೆಂ|| ೩೯

ವ|| ಎಂಬುದುಂ ತನ್ನಳಿಯನ ನುಡಿಗೆ ಶಾರದ್ವತಂ ಸಂತೋಷಂಬಟ್ಟು ಕೌರವೇಶ್ವರನ ನಿಂತೆಂದಂ ನೀನೀತಂಗೆ ವೀರವಟ್ಟಮಂ ಕಟ್ಟಿ ರಿಪುನೃಪಬಲಕ್ಕೆ ತೋಱ ಬಿಡುವುದೆನೆ ಕಳಶಜನಿಂ ಬಿೞಕ್ಕೆ ಕರ್ಣಂಗೆಂದು ನುಡಿದ ಬೀರಮಟ್ಟಮನೆಂತು ಕಟ್ಟುವೆನೆಂದೊಡಶ್ವರತ್ಥಾಮ ನಿಂತೆಂದಂ-

ಬಡಬಾಗ್ನಿಯು ಕಡಲನ್ನು ಸುಡುವಂತೆ ಶಸ್ತ್ರಾಗ್ನಿಯಿಂದಲೂ ತೀಕ್ಷ್ಣವಾದ ಕೋಪಾಗ್ನಿಯಿಂದಲೂ ಕೊಬ್ಬಿದ ಶತ್ರು ಸೈನ್ಯಸಾಗರವನ್ನು ಸುಡುತ್ತಿರಲು ವಿಶೇಷವಾದ ಉಪಸರ್ಪಣೆಯಿಂದಲೂ ಹೀನೋಪಾಯಗಳಿಂದಲೂ ದಯಾಹೀನನಾದ ಧರ್ಮರಾಯನು ಗುರುವನ್ನು ಕೊಂದನು. ಇನ್ನು ನೀನು ಅವನನ್ನು ಬೇಗನೆ ಕೊಲ್ಲದೆ ಕಣ್ಣೀರನ್ನು ಸುರಿಸುತ್ತಿದ್ದರೆ ಚಂದ್ರನಷ್ಟು ಬೆಳ್ಳಗಿರುವ ನಿನ್ನ ವಂಶವು ಮಲಿನವಾಗದೆ ಇರುತ್ತದೆಯೇ? ೩೬. ದ್ರೋಣಾಚಾರ್ಯನು ನನ್ನನ್ನು ಪ್ರೀತಿಸುತ್ತಿದಷ್ಟು ನಿನ್ನನ್ನು ಪ್ರೀತಿಸುತ್ತಿರಲಿಲ್ಲ. ಈ ದುಖವು ನಿನ್ನದು ಮಾತ್ರವಲ್ಲ; ಕೇಳು, ನನ್ನದೂ ಅಹುದು. ಕಡಿಮೆಯಾಗದ ಈ ದುಖವನ್ನು, ನಾವಿಬ್ಬರೂ ನಮಗೆ ಸಮಾನ ಶತ್ರುಗಳಾದ ಪಾಂಡವರನ್ನು ಪೂರ್ಣವಾಗಿ ಕೊಂದು, ಜೊತೆಯಲ್ಲಿಯೇ ಪರಿಹಾರ ಮಾಡಿಕೊಳ್ಳೋಣ. ವ|| ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೩೭. ಆಚಾರ್ಯನಾದ ನನ್ನ ತಂದೆಯು ನನ್ನ ಮೇಲಿನ ಪ್ರೀತಿಯಿಂದ ಯಮನು ಕರುಣವನ್ನು ಬಿಸಾಡುವ ಹಾಗೆ ಅಸಹ್ಯಪಟ್ಟು ಬಿಲ್ಲನ್ನು ಬಿಸುಟಿದ್ದ ಆ ಸಮಯದಲ್ಲಿಯೇ ಅಲ್ಲವೇ ಧೃಷ್ಟದ್ಯುಮ್ನನು ಗುರುವಿನ ಕೂದಲ ಗಂಟನ್ನು ಎಳೆದು ಮಹಾಶೂರನಾದುದು. ದುರ್ಯೋಧನಾ! ಈ ಅವಮಾನಕ್ಕೆ ಸಮಾನವಾದುದು ಬೇರೊಂದಿಲ್ಲ. ೩೮. ಪರಶುರಾಮನು ತಂದೆಯ ಸಾವಿಗಾಗಿ ಕೋಪದಿಂದ ‘ರಾಜ’ ಎಂಬ ಹೆಸರೇ ಇಲ್ಲದಿರುವ ಹಾಗೆ ಇಪ್ಪತ್ತೊಂದು ಸಲ ತನ್ನ ಪೌರುಷವು ಅತ್ಯಂತ ಅಕವಾಗುತ್ತಿರಲು (ರಾಜಕುಲವನ್ನೆ) ಹೇಗೆ ಕೊಂದನೋ ಹಾಗೆಯೇ ಈಗ ನಮ್ಮ ತಂದೆಯ ಕಾರಣದಿಂದಾದ ದ್ವೇಷದಿಂದ ಭಯಂಕರವಾದ ಪಾಂಚಾಲರಾಜರ ಆಯಸ್ಸಿನ ದಡವನ್ನು ಸೀಳಿ ಶತ್ರುರಾಜರ ಸೈನ್ಯವನ್ನು ಹದ್ದುಗಳಿಗೆ ಔತಣಮಾಡಿಸುತ್ತೇನೆ. ೩೯. ‘ನಮ್ಮ ಶತ್ರುತ್ವದ ರೀತಿಯೂ ರಾಮರ ಶತ್ರುತ್ವಕ್ಕೆ ಸಮಾನವಾದುದು. ಅವರು ಹಿಡಿಯುತ್ತಿದ್ದ ಬಿಲ್ಲೇ ನನ್ನ ಬಿಲ್ಲು ನಮ್ಮಬಾಣಗಳೂ ಅವರು ಕೊಟ್ಟ ಒಳ್ಳೆಯ ಬಾಣಗಳೇ ಆಗಿರಲು ವಂಶವನ್ನು (ಕ್ಷತ್ರಿಯ ವಂಶವನ್ನು) ರಕ್ಷಿಸದೆ (ಹಾಗೆಯೇ) ಹಟವನ್ನೇ ಸಾಸುತ್ತೇನೆ’ ವ|| ಎಂದ ತನ್ನಳಿಯನ ಮಾತಿಗೆ ಕೃಪನು ಸಂತೋಷಪಟ್ಟು ದುರ್ಯೋಧನನಿಗೆ ಹೀಗೆ ಹೇಳಿದನು- ‘ನೀನು ಇವನಿಗೆ ವೀರಪಟ್ಟವನ್ನು ಕಟ್ಟಿ ಶತ್ರುಸೈನ್ಯದ ಕಡೆಗೆ ತೋರಿಸಿ ಬಿಡತಕ್ಕದ್ದು’ ಎನ್ನುಲು ‘ದ್ರೋಣನ ಬಳಿಕ

ಚಂ|| ನಿಜದೊಳೆ ಭೂಪರೆಂಬರವಿವೇಕಿಗಳಪ್ಪರದಕ್ಕೆ ನೀಂ ಫಣಿ
ಧ್ವಜ ಕಡುಕೆಯ್ದು ಕರ್ಣನನೆ ನಚ್ಚುವೆಯಪ್ಪೊಡೆ ಯುದ್ಧದೊಳ್ ವೃಷ|
ಧ್ವಜನುಮನಿಕ್ಕಿ ಗೆಲ್ದರಿಗನೊಳ್ ತಲೆವಟ್ಟಿದಿರಾಗಿ ನಿಂದು ಸೂ
ತಜನಿಱವಂ ಗಡಂ ಪಗೆಯನೇಂ ಗಳ ಪಟ್ಟಮೆ ಪಾಱ ತಿಂಬದೇ || ೪೦

ವ|| ಎಂಬುದುಮಂಗರಾಜಂ ಗುರುತನೂಜನನಿಂತೆಂದಂ-

ಚಂ|| ಎನಿತಳವುಳ್ಳೊಡಂ ದ್ವಿಜನ ಗಂಡಗುಣಕ್ಕಗಿವನ್ನರಾರೊ ನೆ
ಟ್ಟನೆ ವಿಷಮೊಳ್ಳೆಗುಳ್ಳೊಡಮದೊಳ್ಳೆಯೆ ಕಾಳಿಯ ನಾಗನಾಗದ|
ಣ್ಮಿನ ಪಡೆಮಾತದೊಂದೆ ನೆವಮಾಗಿರೆ ಕೆಯ್ದುವನಿಕ್ಕಿ ಸತ್ತ ಸಾ
ವಿನ ಪಡಿಚಂದಮಾಗಿಯುಮಿದೇಂ ನಿಮಗೞಯೊ ಗಂಡುವಾತುಗಳ್ || ೪೧

ವ|| ಎಂಬುದುಂ ತ್ರೈಲೋಕ್ಯ ಧನುರ್ಧರನಪ್ಪೆಮ್ಯಯ್ಯನ ಗಂಡವಾತನೀ ಮೀಂಗುಗಲಿಗಂ ಮೆಚ್ಚನಿವನಂ ಮುಂ ಕೊಂದು ಬೞಯಂ ಪಾಂಡವರಂ ಕೊಲ್ವೆನೆಂದು ಬಾಳಂ ಕಿೞ್ತು ಕರ್ಣನ ಮೇಲೆವಾಯ್ವುದುಂ ಕೃಪನೆಡೆವೊಕ್ಕಿದಾಗದೆಂದು ಬಾರಿಸಿ-

ಕಂ|| ಅಸದಳಮಾಗಿಯುಮೀ ನ
ಮ್ಮ ಸೈನ್ಯಮಿಂತೊರ್ವರೊರ್ವರೊಳ್ ಸೆಣಸಿ ಖಳ|
ವ್ಯಸನದೊಳೆ ಕೆಟ್ಟುದಲ್ಲದೊ
ಡೆ ಸುಯೋಧನ ನಿನಗೆ ಮಲೆವ ಮಾರ್ವಲಮೊಳವೇ|| ೪೨

ವ|| ಎಂಬುದುಮಶ್ವತ್ಥಾಮಂ ಕರ್ಣನೊಳಾದ ಮುಳಿಸನವಧಾರಿಸಲಾಱದೆ ಸುಯೋಧನನ ನಿಂತೆಂದಂ-

ಖಚರಪ್ಲುತಂ|| ಬೀರವಟ್ಟಮನಾನಿರೆ ನೀನೀ ಸೂತಸುತಂಗೆಡೆಗೊಂಡು ಕೈ
ವಾರದಿಂದೊಸೆದಿತ್ತೊಡಮೇನಾಯ್ತೀ ಖಳನಿಲ್ಲಿ ಧನಂಜಯ|
ಕ್ರೂರಬಾಣಗಣಾವಳಿಯಿಂದೞiಡಿದೊಡಲ್ಲದೆ ವೈರಿ ಸಂ
ಹಾರ ಕಾರಣ ಚಾಪಮನಾನೀ ಸಂಗರದೊಳ್ ಪಿಡಿಯೆಂ ಗಡಾ|| ೪೩

ವ|| ಎಂಬುದುಂ ಮುಳಿಸುವೆರಸಿದ ಮುಗುಳ್ನಗೆಯಿಂ ಕರ್ಣನಿಂತೆಂದಂ-

ಮ|| ಭುವನಂಗಳ್ ಪದಿನಾಲ್ಕುಮಂ ನಡುಗಿಸಲ್ ಸಾಮರ್ಥ್ಯಮುಳ್ಳೆನ್ನ ಕೆ
ಯ್ದುವಿನೊಳ್ ತೀರದುದಾವ ಕೆಯ್ದುವಿನೊಳಂ ತೀರ್ದಪುದೇ ನಿನ್ನ ಕೆ|
ಯ್ದುವನೆಂತುಂ ಬಿಸುಟಿರ್ದ ಲೆಕ್ಕಮೆ ವಲಂ ನಿಷ್ಕಾರಣಂ ಕೆಯ್ದುವಿ
ಕ್ಕುವ ಕಣ್ಣೀರ್ಗಳನಿಕ್ಕುವೀಯೆರಡುಮಂ ನಿಮ್ಮಯ್ಯನೊಳ್ ಕಲ್ತಿರೇ|| ೪೪

ಕರ್ಣನಿಗೆ’ ಎಂದು ಹೇಳಿದ ವೀರಪಟ್ಟವನ್ನು ಈಗ ಇವನಿಗೆ ಹೇಗೆ ಕಟ್ಟಲಿ ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೪೦. ರಾಜರೆನ್ನುವವರು ವಾಸ್ತವವಾಗಿಯೂ ಬುದ್ಧಿಯಿಲ್ಲದವ ರೆಂಬುದು ಸತ್ಯ. ಅದು ಹಾಗಿರಲಿ; ಎಲೈ ದುರ್ಯೋಧನನೇ, ಬಹಳವಾಗಿ ಪ್ರೀತಿಸಿ ಕರ್ಣನನ್ನೇ ನಂಬುವೆಯಾದರೆ ಯುದ್ಧದಲ್ಲಿ ಈಶ್ವರನನ್ನೇ ಇಕ್ಕಿ ಗೆದ್ದ ಅರ್ಜುನನಿಗೆ ಅಭಿಮುಖವಾಗಿ ನಿಂತು ಕರ್ಣನು ಯುದ್ಧಮಾಡುತ್ತಾನಲ್ಲವೇ? ತಟ್ಟುವ ವೀರಪಟ್ಟವೇ ಹಾರಿ ಮೇಲೆ ಬಿದ್ದು ಶತ್ರುವನ್ನು ತಿನ್ನವುದೇ ಏನು? ವ|| ಎನ್ನಲು ಕರ್ಣನು ಅಶ್ವತ್ಥಾಮನನ್ನು ಕುರಿತು ಹೀಗೆಂದನು ೪೧. ‘ಎಷ್ಟು ಶಕ್ತಿಯಿದ್ದರೂ ಬ್ರಾಹ್ಮಣನ ಪೌರುಷಕ್ಕೆ ಹೆದರುವವರಾರಿದ್ದಾರೋ? ಕೇರೆ ಹಾವಿಗೆ ನೇರವಾಗಿ ವಿಷವಿದ್ದರೂ ಅದು ಒಳ್ಳೆಯೇ (ಕೇರೆಯ ಹಾವೇ); ಕೃಷ್ಣಸರ್ಪವಾಗಲಾರದು. ಪೌರುಷದ ಸುದ್ದಿಯೊಂದಿದೆ! ಯಾವುದೋ ಒಂದು ನೆಪದಿಂದ ಆಯುಧವನ್ನು ಬಿಸಾಡಿ ಸತ್ತ ಸಾವಿನ ಪ್ರತಿಬಿಂಬ ಕಣ್ಣಮುಂದಿದ್ದರೂ ನಿಮಗೆ ಪೌರುಷದ ಮಾತುಗಳಲ್ಲಿ ಇನ್ನೂ ಪ್ರೀತಿಯಿದೆಯೇನು?’ (ಎಷ್ಟು ಪ್ರೀತಿಯೋ) ವ|| ಎನ್ನುಲು ‘ಮೂರುಲೋಕಗಳಲ್ಲಿಯೂ ಬಿಲ್ವಿದ್ಯೆಯಲ್ಲಿ ಪ್ರಸಿದ್ಧನಾದ ನನ್ನ ತಂದೆಯನ್ನು ಈ ಬೆಸ್ತರವನು (ಮೀನನ್ನು ಕೊಲ್ಲುವ ಸ್ವಭಾವವುಳ್ಳವನು) ಮೆಚ್ಚುವುದಿಲ್ಲ. ಇವನನ್ನು ಮೊದಲು ಕೊಂದು ಬಳಿಕ ಪಾಂಡವರನ್ನು ಕೊಲ್ಲುತ್ತೇನೆ’ ಎಂದು ಕತ್ತಿಯನ್ನು ಒರೆಯಿಂದ ಹೊರಕ್ಕೆ ಸೆಳೆದು ಕರ್ಣನ ಮೇಲೆ ಹಾಯ್ದನು. ಕೃಪನು ಮಧ್ಯೆ ಪ್ರವೇಶಿಸಿ ಹೀಗೆ ಮಾಡಬಾರದು ಎಂದು ತಡೆದನು- ೪೨. ‘ದುರ್ಯೋಧನಾ, ಈ ನಮ್ಮ ಸೈನ್ಯವು ಅಸದೃಶವಾಗಿದ್ದರೂ ಹೀಗೆ ಒಬ್ಬೊಬ್ಬರಲ್ಲಿಯೂ ಜಗಳವಾಡಿ (ಮತ್ಸರಿಸಿ) ಒಳಜಗಳದಿಂದಲೇ ಕೆಟ್ಟುಹೋಯಿತು. ಹಾಗಲ್ಲದಿದ್ದರೆ ನಿನಗೆ ಪ್ರತಿಭಟಿಸುವ ಪ್ರತಿಸೈನ್ಯವಿರುತ್ತಿದ್ದಿತೆ?’ ವ|| ಎನ್ನಲು ಅಶ್ವತ್ಥಾಮನು ಕರ್ಣನಲ್ಲುಂಟಾದ ಕೋಪವನ್ನು ತಡೆಯಲಾರದೆ ದುರ್ಯೋಧನನಿಗೆ ಹೀಗೆ ಹೇಳಿದನು- ೪೩. ‘ನಾನಿರುವಾಗ ನೀನು ಸ್ನೇಹದಿಂದ ವೀರಪಟ್ಟವನ್ನು ಈ ಸೂತನ ಮಗನಿಗೆ ಮೋಸದಿಂದ ಕೊಟ್ಟರೆ ತಾನೇ ಏನಾಯ್ತು? ಈ ದುಷ್ಟನು ಅರ್ಜುನನ ಕ್ರೂರವಾದ ಬಾಣಗಳ ಸಮೂಹದಿಂದ ನಾಶವಾಗದ ಹೊರತು ನಾನು ಶತ್ರುನಾಶಕ್ಕೆ ಕಾರಣವಾದ ಈ ಬಿಲ್ಲನ್ನು ಯುದ್ಧರಂಗದಲ್ಲಿ ಹಿಡಿಯುವುದೇ ಇಲ್ಲ.’ ವ|| ಎನ್ನಲು ಕರ್ಣನು ಕೋಪಮಿಶ್ರಿತವಾದ ಹುಸಿನಗೆಯಿಂದ ಹೀಗೆ ಹೇಳಿದನು- ೪೪. ‘ಹದಿನಾಲ್ಕು ಲೋಕಗಳನ್ನೂ ನಡುಗಿಸುವ ಲ

ವ|| ಎಂಬುದುಮಶ್ವತ್ಥಾಮಂ ಕರ್ಣನ ನುಡಿಗೆ ಸಿಗ್ಗಾಗಿ-

ಮ|| ಸ್ರ|| ಮುನಿಸಂ ಮುಂದಿಟ್ಟು ಬಿಲ್ಲಂ ಬಿಸುಡದೆ ಬಗೆದೆಂ ಮುನ್ನಮಿನ್ನುರ್ಕ್ಕಿನಿಂ ನಿ
ನ್ನನೆ ಪೀನಂ ನಚ್ಚಿ ನಿನ್ನಾಳ್ದನೆ ನುಡಿಯಿಸೆ ನೀನಾಡಿದೈ ಮಾತನಾಡ|
ಲ್ಕೆನಗೀ ಸೂೞಲ್ತು ಸೇನಾಪ ಪದವಿಯೊಳಿಂ ನೀನೆ ನಿಲ್ ನಾಳೆ ದುರ್ಯೋ
ಧನನಂ ಸಕ್ಕಿಟ್ಟು ಮಾಱiಂತದಟರೊಳಳವಂ ತೋಱುವಂ ನೀನುಮಾನುಂ|| ೪೫

ಕಂ|| ಸಾರಂಗಳ್ ನಿನ್ನ ಶರಾ
ಸಾರಂಗಳಸಾರಮುೞದ ಕೆಯ್ದುಗಳೆಂತುಂ|
ಸಾರಾಸಾರತೆಯಂ ನಾ
ಮಾರಯ್ವಮಿದಿರ್ಚಿದರಿನೃಪಧ್ವಜಿನಿಗಳೊಳ್|| ೪೬

ವ|| ಎಂಬುದುಂ ದುರ್ಯೋಧನ ಕರ್ಣನುಮನಶ್ವತ್ಥಾಮನುಮಂ ನಿಮ್ಮೊಳಗೆ ನೀಂ ಮುಳಿಯಲ್ವೇಡ ನಿಮ್ಮ ಪುರುಷಕಾರಮನೆ ಬಗೆದು ನೆಗೞ್ವುದಾನುಮೆನ್ನೆತ್ತಿ ಕೊಂಡ ಕಜ್ಮಮಂ ನೆಗೞ್ದಲ್ಲದಿರೆನೆಂದಾಯೆಡೆಯಿನೆೞ್ದು ನಾಯಕರಂ ಬೀಡಿಂಗೆ ಪೋಗಲ್ವೇೞ್ದಂಮನೆಯಂ ಪೊಕ್ಕು ಮಜ್ಜನ ಭೋಜನ ತಾಂಬೂಲಾನುಲೇಪನಂಗಳಿಂ ಸಂಗರ ಪರಿಶ್ರಮಮನಾಱಸಿ ಮಂತ್ರಶಾಲೆಗೆವಂದು ಶಲ್ಯ ಶಾರದ್ವತ ಕೃತವರ್ಮ ದುಶ್ಶಾಸನಾದಿಗಳು ಬರಿಸಿ ಯಥೋಚಿತ ಪ್ರತಿಪತ್ತಿಗಳಿಂದಿರಿಸಿ-

ಶಾ|| ಅಂತರ್ಭೇದದೊಳಂತು ಛಿದ್ರಿಸಿದರಾ ಗಾಂಗೇಯರಂ ಕೊಂದರಿಂ
ದಿಂತೀಗಳ್ ಪುಸಿದೀ ಘಟೋದ್ಭವನನಾ ಕೌಂತೇಯರಾಯಕ್ಕೆ ಗೆಂ|
ಟೆಂತೆಂತಕ್ಕುಮದುಂ ಮದುದ್ಯಮಮೆ ಪೇೞ್ಗಾ ವೈರಿಗಳ್ಗೊಲ್ವೆನಾ
ನೆಂತೊಳ್ಪಂ ತಳೆವಂತು ತೇಜಮೆನಗಿನ್ನೆಂತಕ್ಕುಮಿಂ ಪೇೞರೇ|| ೪೭

ವ|| ಎನೆ ಶಾರದ್ವತನಿಂತೆಂದಂ-

ಚಂ|| ಚಲಮನೆ ಪೇೞ್ವೊಡಯ್ವರುಮನಯ್ದೞಯೂರೊಳೆ ಬಾೞಸೆಂದು ಮುಂ
ಬಲಿಬಲಸೂದನಂ ನುಡಿಯೆಯುಂ ಕುಡದಿರ್ದುದೆ ಪೇೞ್ಗುಮೆಯ್ದೆ ಮೆ|
ಯ್ಗಲಿತನಮಂ ಸರಿತ್ಸುತ ಘಟೋದ್ಭವರಂ ಪೊಣರ್ದಿಕ್ಕಿ ಗೆಲ್ದರೊಳ್
ಕಲಹಮೆ ಪೇೞ್ಗುಮಿಂ ಪೆಱತು ಪೇೞ್ವೆಡೆಯಾವುದೊ ಕೌರವೇಶ್ವರಾ|| ೪೮

ಸಾಮರ್ಥ್ಯವುಳ್ಳ ನನ್ನ ಆಯುಧಗಳಿಂದ ಸಾಧ್ಯವಾಗದೇ ಇರುವುದು ಮತ್ತಾವ ಆಯುಧದಿಂದಾಗಲಿ ಸಾಧ್ಯವಾಗುತ್ತದೆಯೇ? ನಿನ್ನ ಆಯುಧಗಳು ಯಾವಾಗಲೂ ಬಿಸಾಡಿರುವ ಲೆಕ್ಕವೇ (ಅಪ್ರಯೋಜಕವೇ). ಕಾರಣವಿಲ್ಲದೇ ಬಿಲ್ಲನ್ನು ಬಿಸಾಡುವ ಮತ್ತು ಕಣ್ಣೀರನ್ನು ಸುರಿಸುವ ಈ ಎರಡನ್ನೂ ನಿಮ್ಮಯ್ಯನಿಂದ ಕಲಿತಿದ್ದೀರಾ?’ ವ|| ಎನ್ನಲು ಅಶ್ವತ್ಥಾಮನು ಕರ್ಣನ ಮಾತಿಗೆ ಲಜ್ಜಿತನಾಗಿ ೪೫. ನಾನು ಮೊದಲು ಕೋಪವನ್ನು ಮುಂದಿಟ್ಟು ಬಿಲ್ಲನ್ನು ಬಿಸುಡಲು ನಿರ್ಧರಿಸಿದೆನು. ಇನ್ನು ನಿನ್ನನ್ನು ನಿನ್ನ ಯಜಮಾನನು ಪೂರ್ಣವಾಗಿ ನಂಬಿ ಮಾತನಾಡಿಸಲು ನೀನು ಗರ್ವದಿಂದ ಮಾತನಾಡಿದೆ. ನಾನು ಮಾತನಾಡುವುದಕ್ಕೆ ಇದು ನನಗೆ ಸಮಯವಲ್ಲ. ಸೇನಾಪತಿಯ ಸ್ಥಾನದಲ್ಲಿ ನೀನೇ ನಿಲ್ಲು; ನಾಳೆ ದುರ್ಯೋಧನನನ್ನೇ ಸಾಕ್ಷಿಯಾಗಿಟ್ಟುಕೊಂಡು ಪ್ರತಿಭಟಿಸಿದ ಶೂರರಲ್ಲಿ ನೀನೂ ನಾನೂ ನಮ್ಮ ಪರಾಕ್ರಮವನ್ನು ತೋರಿಸೋಣ. ೪೬. ನಿನ್ನ ಬಾಣದ ಮಳೆಯು ಶಕ್ತಿಯುಕ್ತವಾದುದು ಉಳಿದ ಆಯುಧಗಳು ಹೇಗೂ ಅಸಾರವಾದುವು. (ಶಕ್ತಿಯಿಲ್ಲದುವು) ಈ ಸಾರಾಸಾರತೆಯನ್ನು ನಮ್ಮನ್ನು ಎದುರಿಸಿದ ಶತ್ರುರಾಜರ ಸೈನ್ಯದಲ್ಲಿ ವಿಚಾರ ಮಾಡೋಣ’. ವ|| ಎನ್ನಲು ದುರ್ಯೋಧನನು ಕರ್ಣನನ್ನೂ ಅಶ್ವತ್ಥಾಮನನ್ನೂ ಕುರಿತು ‘ನೀವು ನಿಮ್ಮನಿಮ್ಮಲ್ಲಿ ಕೋಪಿಸಬೇಡಿ; ನಿಮ್ಮ ಪೌರುಷವನ್ನು ಯೋಚಿಸಿ ಕೆಲಸಮಾಡುವುದು. ನಾನೂ ಅಂಗೀಕಾರಮಾಡಿದ ಕೆಲಸವನ್ನು ಮಾಡದೇ ಇರುವುದಿಲ್ಲ’ ಎಂದು ಆ ಸ್ಥಳದಿಂದೆದ್ದು ನಾಯಕರನ್ನು ಬೀಡಿಗೆ ಹೋಗಲು ಹೇಳಿ ತಾನು ಅರಮನೆಯನ್ನು ಪ್ರವೇಶಿಸಿ ಸಾನ್ನ ಭೋಜನ ತಾಂಬೂಲ ಅನುಲೇಪನಗಳಿಂದ ಯುದ್ಧಾಯಾಸವನ್ನು ಹೋಗಲಾಡಿಸಿಕೊಂಡು ಮಂತ್ರಶಾಲೆಗೆ ಬಂದು ಶಲ್ಯ, ಶಕುನಿ, ಶಾರದ್ವತ, ಕೃತವರ್ಮ, ದುಶ್ಶ್ಶಾಸನನೇ ಮೊದಲಾದವರನ್ನು ಬರಮಾಡಿ ಯೋಗ್ಯವಾದ ಸತ್ಕಾರಗಳಿಂದ ಕುಳ್ಳಿರಿಸಿ ೪೭. ರಹಸ್ಯವಾದ ಭೇದೋಪಾಯದಿಂದ ಹಾಗೆ ಆ ಭೀಷ್ಮರನ್ನು ಒಡೆದು ಹಾಕಿದರು. ಈ ದಿನ ಹೀಗೆ ಸುಳ್ಳು ಹೇಳಿ ದ್ರೋಣಾಚಾರ್ಯರನ್ನು ಕೊಂದರು. ಈಗ ಆ ಪಾಂಡವರಿಗೆ ಜಯವಾಗದಿರುವ ರೀತಿ ಯಾವುದು ಎಂಬುದನ್ನು ತಿಳಿಸಿ. ಆ ಶತ್ರುಗಳಲ್ಲಿ ನನಗೆ ಹೇಗೆ ಸ್ನೇಹವುಂಟಾದೀತು. ಪಾಂಡವರ ವಿಷಯದಲ್ಲಿ ಒಳ್ಳೆಯ ಭಾವವು ಬರುವುದು ಹೇಗೆ ಸಾಧ್ಯ? ನೀವೇ ಹೇಳಿರಿ. ವ|| ಎನ್ನಲು ಕೃಪನು ಹೀಗೆಂದನು- ೪೮. ಬಲವನ್ನು ಹೇಳುವುದಾದರೆ ಮೊದಲು ಕೃಷ್ಣನು ಬಂದು

ವ|| ಅದಱಂದಮಿಂ ಪೆಱತು ಮಂತಣಕ್ಕೆಡೆಯಿಲ್ಲ ಮುನ್ನೆ ಚಕ್ಷುಷ್ಮನೆಂಬ ಮನುವಾದ ಕಾಲದೊಳ್ ಧರಾತಳಮನೋಲ್ಲಣಿಗೆಯಿಂ ಪಿೞವಂತೆ ತಳಮೆಯ್ದೆ ಸುರುಳ್ವಿನಂ ಮುಯ್ಯೇೞ್ ಸೂೞ್ ಪಿೞದ ಸಾಹಸಮುಮನಿಂದ್ರಂಗೆ ತನ್ನ ಸಹಜ ಕವಚಮಂ ತಿದಿಯುಗಿದು ಕೊಟ್ಟ ಚಾಗದ ಪೆಂಪುಮಂ ದಿಗ್ವಿಜಯಂಗೆಯ್ದು ಮಿಡಿದನಿತು ಬೇಗದಿಂ ಜರಾಸಂಧನಂ ನೆಲಕ್ಕಿಕ್ಕಿ ಪುಡಿಯೊಳ್ ಪೊರಳ್ಳಿ ಮಲ್ಲಯುದ್ಧದೊಳ್ ಪಿಡಿದಡಿಗೊತ್ತಿದ ಭುಜಬಲಭೀಮನಂ ಗೆಲ್ದ ಸಹಾಸಮುಮಂ ನಮ್ಮ ಪಡೆಯೆಲ್ಲಮಂ ತೊತ್ತೞದುೞದು ಕೊಲ್ವ ಘಟೋತ್ಕಚನೆಂಬ ರೂಕ್ಷ ರಾಕ್ಷಸನಂ ಕೊಂದ ಬೀರಮುಮನಾಲೋಕಾಂತರಂ ನೆಗೞೆ-

ವ|| ಅಂತು ದ್ರುಪದನೞವಂ ಕಂಡಾತನ ತಮ್ಮಂದಿರಪ್ಪ ಶತಾನೀಕ ಶತಚಂದ್ರರ್ ಮೊದಲಾಗೆ ಪನ್ನೊರ್ವರುಮಯ್ವರ್ ಕೈಕಯರುಂ ಕುಂತಿಯ ಮಾವನಪ್ಪ ಕುಂತಿಭೋಜನುಂಬೆರಸು ಪದಿನಾಲ್ಸಾಸಿರ ರಥಂಬೆರಸು ಬಂದು ತಾಗಿದೊಡೆ-

ಮ|| ಶಕಟಂಗಳ್ ಪದಿನೆಂಟು ಕೋಟಿವರೆಗಂ ತೀವಿರ್ದನೇಕೋಗ್ರ ಸಾ
ಯಕದಿಂದಂ ಚತುರಂಗ ಸಾಧನದ ಮೆಯ್ಮೆಯ್ಯೊಳ್ ಜಿಗಿಲ್ತಾಂತ ನಾ|
ಯಕರಂ ಸುಂಟಗೆಯಾಱದಂತೆ ರಥದೊಳ್ ಜೋಲ್ವನ್ನೆಗಂ ಕೋದು ಚಾ
ಪ ಕಳಾಕೌಶಳಮಂ ಜಗಕ್ಕೆ ಮೆದಂ ಮೆಯ್ವೆರ್ಚಿ ಕುಂಭೋದ್ಭವಂ|| ೨೪

ವ|| ಅಂತು ದ್ರುಪದ ದ್ರುಪದಾನುಜ ವಿರಾಟ ವಿರಾಟಾನುಜ ಕೈಕಯ ಕುಂತಿ ಭೋಜಾದಿಗಳಪ್ಪ ನಾಯಕರೆಲ್ಲರುಮಂ ಪೇೞೆ ಪೆಸರಿಲ್ಲದಂತೆ ಕೊಂದು ಮುಂದಾಂಪರಾರುಮಿಲ್ಲದಿಕ್ಕಿ ಗೆಲ್ದ ಮಲ್ಲನಿರ್ದಂತಿರ್ದಾಗಳ್-

ಮ|| ಸಕಲಾರಾತಿ ನರೇಂದ್ರಮೌಳಿಗಳುರುಳ್ದಾ ದೀಪ್ತ ರತ್ನಾಂಶು ಮಾ
ಳಿಕೆಯಿಂದಾ ರಣರಂಗಮಂ ಬೆಳಗೆ ಕಾೞರ್ಚೆಂದು ಭೂತಾಂಗನಾ|
ನಿಕರಂ ಶೋಣಿತವಾರಿಯಂ ಕುಡಿದಗುರ್ವಪ್ಪನ್ನೆಗಂ ಸೂಸೆ ನೋ
ಡ ಕವಿಲ್ತಿರ್ದುದು ಕೂಡೆ ಸಂಜೆಗವಿದಂತಾ ದ್ರೋಣನಿಂ ಕೊಳ್ಗುಳಂ|| ೨೫

ವ|| ಆಗಳ್ ಯುಷ್ಠಿರಂ ನಾರಾಯಣಂ ಪೇೞ್ದ ಕಪಟೋಪದೇಶದಿಂ ದ್ರೋಣನಂ ಕೆಯ್ದೆ ಮಾಡಲೆಂದು ಪಾಂಡ್ಯ ಗಜಘಟೆಗಳನಿದಿರೊಳ್ ತಂದೊಡ್ಡಿದಾಗಳ್-

ಕಂ|| ನಿಶಿತ ವಿಶಿಖಂಗಳಿಂದೊಂ
ದಶನಿಯೆ ಗಿರಿಕುಲಮನಳಱುವಂತೆ ಮದೇಭ|
ಪ್ರಸರ ಸಹಸ್ರಂ ಕೆಡೆದುವು
ವಿಸಸನದೊಳ್ ದ್ರೋಣನಿದಿರ್ಗೆ ಮಾರ್ವಲಮೊಳವೇ|| ೨೬

ವ|| ಅಂತು ತನಗೆ ಮಾಱುಂತ ಮದಾಂಧಸಿಂಧುರಂಗಳಂ ಸಿಂಧುರಂಗಳಂ ಸಿಂಧುರಾರಾತಿಯೆ ಕೊಲ್ವಂತೆ ಕೊಲೆ-

ಕಂ|| ಸಾಮಜಮಶ್ವತ್ಥಾಮಂ
ನಾಮದಿ ನೊಂದೞದೊಡಲ್ಲಿ ಕಂಡು ಹತೋಶ್ವ|
ತ್ಥಾಮಾ ಎನೆ ನೃಪನಶ್ವ
ತ್ಥಾಮನೆ ಗೆತ್ತೊಣರ್ದನೊವಜನೊರ್ವೆಸರಿಭಮಂ|| ೨೭

ಯುದ್ಧಮಾಡುವ ಶಕ್ತಿಯುಳ್ಳವನೇನೋ ಹೌದು; ಆದರೇನು? ಇನ್ನಿವನನ್ನು ಕೆಳಗುರುಳಿಸುತ್ತೇನೆಂದು ಸಾವಕಾಶಮಾಡದೆ ಭಾರ್ಗವಾಸ್ತ್ರದಿಂದ ಕೂಡಿಕೊಂಡು ದ್ರುಪದ ರಾಜನ ತಲೆಯೆಂಬ ಕಮಲವನ್ನು ದ್ರೋಣನು ಕತ್ತರಿಸಿದನು. ವ|| ಹಾಗೆ ದ್ರುಪದನ ಸಾವನ್ನು ನೋಡಿದ ಆತನ ತಮ್ಮಂದಿರಾದ ಶತಾನೀಕ ಶತಚಂದ್ರರೇ ಮೊದಲಾದ ಹನ್ನೊಂದು ಜನವೂ ಅಯ್ದು ಮಂದಿ ಕೈಕೆಯರೂ ಕುಂತಿಯ ಮಾವನಾದ ಕುಂತಿಭೋಜನೂ ಕೂಡಿ ಹದಿನಾಲ್ಕು ಸಾವಿರರಥದೊಡನೆ ಬಂದು ತಾಗಿದರು. ೨೪. ಹದಿನೆಂಟು ಕೋಟಿಯವರೆಗೂ ತುಂಬಿದ ಗಾಡಿಗಳ ಅತಿಭಯಂಕರವಾದ ಬಾಣಗಳಿಂದ ಒಂದೊಂದು ಮೈಯ್ಯಲ್ಲಿಯೂ ಅಂಟಿಕೊಂಡು, ಪ್ರತಿಭಟಿಸಿದ ನಾಯಕರ, ಸೇನಾಪತಿಗಳ ಸುಟ್ಟ ಮಾಂಸವನ್ನು ಆರಲಿಟ್ಟಿರುವ ಹಾಗೆ ಜೋತು ಬೀಳುತ್ತಿರುವಂತೆ ರಥದಲ್ಲಿ ಪೋಣಿಸಿ (ನೇತುಹಾಕಿ-ಜೋಲುಬಿಟ್ಟು) ದ್ರೋಣನು ಮಯ್ಯುಬ್ಬಿ ತನ್ನ ವಿದ್ಯಾಕೌಶಲವನ್ನು ಪ್ರದರ್ಶಿಸಿದನು. ವ|| ಹೀಗೆ ದ್ರುಪದ, ದ್ರುಪದನ ತಮ್ಮ, ವಿರಾಟ, ವಿರಾಟನ ತಮ್ಮ ಕೈಕೆಯ, ಕುಂತೀಭೋಜನೇ ಮೊದಲಾದ ನಾಯಕರೆಲ್ಲರನ್ನೂ ಹೇಳುವುದಕ್ಕೂ ಒಂದು ಹೆಸರಿಲ್ಲದಂತೆ ಕೊಂದು ಪ್ರತಿಭಟಿಸುವವರಾರೂ ಇಲ್ಲದಂತೆ ಸಂಹರಿಸಿ ಗೆದ್ದ ಜಟ್ಟಿಯಿದ್ದಂತೆ ಇದ್ದನು. ೨೫. ಸಮಸ್ತ ಶತ್ರುರಾಜರ ಕಿರೀಟಗಳುರುಳಿ ಆ ರತ್ನಕಿರಣಗಳ ಸಮೂಹದಿಂದ ಆ ರಣರಂಗವು ಕೆಂಪಗೆ ಪ್ರಕಾಶಮಾನವಾಯಿತು. ಅದು ಕಾಡ್ಗಿಚ್ಚೆಂದು ಪಿಶಾಚಸ್ತ್ರೀಯರ ಸಮೂಹವು ಬಂದು ರಕ್ತಜಲವನ್ನು ಕುಡಿದು ಭಯಂಕರವಾಗುವ ಹಾಗೆ ಚೆಲ್ಲಾಡಿತು. ಆ ದ್ರೋಣನಿಂದ ಆ ಯುದ್ಧಭೂಮಿಯು ಸಂಜೆಕವಿದಂತೆ ಮಾಸಲು ಕೆಂಪುಬಣ್ಣದಿಂದ ಕೂಡಿದ್ದಿತು. ವ|| ಆಗ ಧರ್ಮರಾಜನು ಕೃಷ್ಣನು ಹೇಳಿದ ಕಪಟೋಪದೇಶದಿಂದ ದ್ರೋಣನನ್ನು ವಶಪಡಿಸಿಕೊಳ್ಳಬೇಕೆಂದು ಪಾಂಡ್ಯರ ಆನೆಗಳ ಸಮೂಹವನ್ನು ಎದುರಾಗಿ ತಂದೊಡ್ಡಿದನು. ೨೬. ಹರಿತವಾದ ಬಾಣಗಳಿಂದ ಒಂದು ವಜ್ರಾಯುಧವೇ ಪರ್ವತಗಳ ಸಮೂಹವನ್ನು ನಾಶಮಾಡುವ ಹಾಗೆ ಸಾವಿರ ಮದ್ದಾನೆಯ ಗುಂಪು ಯುದ್ಧರಂಗದಲ್ಲಿ ಕೆಡೆದುಬಿದ್ದುವು. ದ್ರೋಣನಿಗಿದಿರಾಗುವ ಪ್ರತಿಬಲವುಂಟೇ? ವ|| ಹಾಗೆ ತನಗೆ ಪ್ರತಿಭಟಿಸಿದ ಮದ್ದಾನೆಗಳನ್ನು ಸಿಂಹವು ಕೊಲ್ಲುವ ಹಾಗೆ ಕೊಂದನು. ೨೭. ಅಶ್ವತ್ಥಾಮನೆಂಬ

ಒಗೆದ ಸುತಶೋಕದಿಂದಾ
ವಗೆಯಂತೊಳಗುರಿಯೆ ಭೋಂಕನೆರ್ದೆ ತೆಯಲ್ ಹಾ|
ಮಗನೇ ಎಂದಶ್ರುಜಲಾ
ರ್ದ್ರಗಂಡನಾ ಗಂಡಿನೊಡನೆ ಬಿಸುಟಂ ಬಿಲ್ಲಂ ೨೮

ವ|| ಅಂತು ಬಿಸುಟು ವಿಚ್ಛಿನ್ನ ವೀರರಸನುಮುತ್ಪನ್ನ ಶೋಕರಸನುಮಾಗಿ ನಿಜ ವರೂಥಮಂ ಧರ್ಮಪುತ್ರನ ಸಮೀಪಕ್ಕುಯ್ದು ಮಗನ ಮಾತಂ-

ಚಂ|| ಬೆಸಗೊಳೆ ಕುಂಜರಂ ಮಡಿದುದೆಂದು ಮಹೀಭುಜನುಳ್ಳ ಮಾೞ್ಕೆಯಿಂ
ಪುಸಿಯದೆ ಪೇೞ್ದೊಡಂ ಕಿಱದು ನಂಬದೆಯುಂ ರಣದಲ್ಲಿ ಮುನ್ನೆ ಬಿ|
ಲ್ವಿಸುಟೆನಿದೆಂತು ಪೇೞ್ ಪಿಡಿವೆನಿನ್ನಿದನೆಂದಿರದಾತ್ಮಯೋಗಿ ತ
ನ್ನಸುವನುದಾತ್ತಯೋಗದೊಳೆ ಬಿಲ್ಲೊವಜಂ ಕಳೆದಂ ರಣಾಗ್ರದೊಳ್ ||೨೯

ವ|| ಅಂತು ಭಾವಿತಾತ್ಮನಧ್ಯಾತ್ಮ ವಿಶಾರದನಾಗಿ ಪರಮಾತ್ಮನೊಳ್ ಕೂಡಿದನಾಗಳ್ ಪೆಣನನಿಱದು ಪಗೆಗೊಂಡರೆಂಬ ನಾಣ್ಣುಡಿಯಂ ನನ್ನಿ ಮಾಡಿ ತಮ್ಮಯ್ಯಂ ಸತ್ತ ಮುಳಿಸಿನೊಳ್ ಕಣ್ಗಾಣದೆ ಧೃಷ್ಟದ್ಯುಮ್ನಂ ಧರ್ಮತನೂಜಂ ಬಾರಿಸೆ ವಾರಿಸೆ-

ಕಂ|| ಕರವಾಳಂ ಘರಮಟ್ಟಿಸಿ
ಶಿರೋಜಮಂ ಪಿಡಿದು ತೆಗೆದು ಗುರುವಂ ಪಚ್ಚಂ|
ತಿರೆ ಪಿರಿದು ಪೊಯ್ದನೆಂತ
ಪ್ಪರೊಳಂ ಮುಳಿಸಱವನಾಗಲೇನಿತ್ತಪುದೇ|| ೩೦

ವ|| ಅಂತು ದ್ರೋಣನೆಳೆಗೋಣ ಸಾವಂ ಸಾವುದುಂ ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮನೊಂದು ತಲೆಯಾಗೋಡುವ ಕೌರವಧ್ವಜಿನಿಯುಮಂ ಬೇಂದು ಮೊನೆಯೊಳ್ ಕಾದುತಿರ್ದಶ್ವತ್ಥಾಮಂ ಕಂಡು ಮುಟ್ಟೆವರ್ಪನ್ನೆಗಂ ಶೋಣಾಶ್ವೋಪಲಕ್ಷಿತ ನಿಜಪಿತೃ ಸೂತ ಕೇತನ ಕಥಿತಮಾಗಿರ್ದ ರಥಮನುಪಲಕ್ಷಿಸಿ ನೋಡಿ ತಮ್ಮಯ್ಯನತೀತನಾದುದನಱದು-

ಚಂ|| ಒತುಗುತರ್ಪ ಕಣ್ಬನಿಗಳಂ ಬರಲೀಯದೆ ಕೋಪ ಪಾವಕಂ
ನಿಱಸೆ ಕನಲ್ದು ರೋಷದಿನಪಾಂಡವಮಾಗಿರೆ ಮಾಡದಂದು ಬಿ|
ಲ್ಲೆಯನ ಪುತ್ರನಲ್ಲೆನೆನುತುಂ ಗುರುಪುತ್ರನಿದಿರ್ಚೆ ಭೀತಿಯಿಂ
ಮಱುಗಿ ತೆರಳ್ದು ತೂಳ್ದಿ ಸುೞಗೊಂಡುದು ಪಾಂಡವ ಸೈನ್ಯಸಾಗರಂ|| ೩೧

ಹೆಸರಿನ ಆನೆಯೊಂದು ಯುದ್ಧರಂಗದಲ್ಲಿ ಸಾಯಲು ಧರ್ಮರಾಯನು ನೋಡಿ ‘ಹತೋಶ್ವತ್ಥಾಮ’ (ಅಶ್ವತ್ಥಾಮ ಹತನಾದನು) ಎಂದು ಘೋಷಿಸಿದನು. ಗುರುವಾದ ದ್ರೋಣನು ಒಂದೇ ಹೆಸರಿನ ಆನೆಯನ್ನು (ನಾಮಸಾದೃಶ್ಯದಿಂದ) ಮಗನಾದ ಅಶ್ವತ್ಥಾಮನೆಂದೇ ಭಾವಿಸಿ ದುಖಿಸಿದನು. ೨೮. ಉಂಟಾದ ಪುತ್ರಶೋಕದಿಂದ ಕುಂಬಾರರ ಆವುಗೆಯ ಒಲೆಯಂತೆ ಮನಸ್ಸು ಉರಿಯಲು ಇದ್ದಕ್ಕಿದ್ದ ಹಾಗೆ ಎದೆಯು ಬಿರಿಯಲು ‘ಅಯ್ಯೋ ಮಗನೆ’ ಎಂದು ಕಣ್ಣೀರಿನಿಂದ ತೊಯ್ದ ಕೆನ್ನೆಯುಳ್ಳವನಾಗಿ ತನ್ನ ಪೌರುಷದೊಡನೆ ಬಿಲ್ಲನ್ನೂ ಬಿಸಾಡಿದನು. ವ|| ಕತ್ತಿಯನ್ನೆಸೆದು ವೀರರಸವಿರಹಿತನಾಗಿ ದುಖರಸದಿಂದ ಕೂಡಿ ತನ್ನ ತೇರನ್ನು ಧರ್ಮರಾಯನ ಸಮೀಪಕ್ಕೆ ತೆಗೆದುಕೊಂಡುಹೋಗಿ ಮಗನ ಮಾತನ್ನು ೨೯. (ವಾಸ್ತವಾಂಶವೇನೆಂದು) ಪ್ರಶ್ನೆಮಾಡಲು ಆನೆಯು ಸತ್ತಿತೆಂದು ರಾಜನು (ಸತ್ಯವಾಗಿ) ಇರುವ ರೀತಿಯಲ್ಲಿಯೇ ಹುಸಿಯದೆ ಹೇಳಿದರೂ ಸ್ವಲ್ಪವೂ ನಂಬದೆ “ಯುದ್ಧದಲ್ಲಿ ಈ ಮೊದಲು ಬಿಲ್ಲನ್ನು ಬಿಸಾಡಿದ್ದೇನೆ. ಪುನ ಅದನ್ನು ಹೇಗೆ ಹಿಡಿಯಲಿ ಹೇಳು” ಎಂದು ಆತ್ಮಯೋಗಿಯಾದ ದ್ರೋಣನು ಸಾವಕಾಶಮಾಡದೆ ತನ್ನ ಪ್ರಾಣವನ್ನು ಉದಾತ್ತವಾದ ಯೋಗಮಾರ್ಗದಲ್ಲಿ ಯುದ್ಧಮುಖದಲ್ಲಿ ನೀಗಿದನು. ವ|| ಹಾಗೆ ಆತ್ಮಧ್ಯಾನಪರನಾದ ದ್ರೋಣನು ಆಧ್ಯಾತ್ಮಪರಾಯಣನಾಗಿ ಪರಮಾತ್ಮನಲ್ಲಿ ಕೂಡಿದನು. ಆಗ ‘ಹೆಣವನ್ನು ಕತ್ತರಿಸಿ ಹಗೆಯನ್ನು ತೀರಿಸಿಕೊಂಡರು’ ಎಂಬ ಗಾದೆಯ ಮಾತನ್ನು ಸತ್ಯವನ್ನಾಗಿ ಮಾಡಿ ತಮ್ಮಯ್ಯನಾದ ದ್ರುಪದನು ಸತ್ತ ಕೋಪದಿಂದ ಬುದ್ಧಿಶೂನ್ಯನಾಗಿ ದೃಷ್ಟದ್ಯುಮ್ನನು ಧರ್ಮರಾಜನು ಬೇಡವೆಂದು ತಡೆದರೂ- ೩೦. ಕತ್ತಿಯನ್ನು ಬೀಸಿ ಕದಲನ್ನು ಹಿಡಿದೆಳೆದು ಗುರುವನ್ನು ಎರಡುಭಾಗ ಮಾಡಿದ ಹಾಗೆ ಘಟ್ಟಿಯಾಗಿ ಹೊಡೆದನು. ಕೋಪವು ಎಂತಹವರಲ್ಲಿಯೂ ವಿವೇಕವುಂಟಾಗಲು ಅವಕಾಶ ಕೊಡುತ್ತದೆಯೇ ಏನು? ವ|| ಹಾಗೆ ದ್ರೋಣನು ಎಳೆದು ತಂದು ಕೋಣನ ಸಾವಿನ ಮಾದರಿಯ ಸಾವನ್ನು (ಎಳಗೋಣಸಾವು) ಸಾಯಲಾಗಿ ಶಬ್ದಮಾಡಿ ಆರ್ಭಟ ಮಾಡುವ ಪಾಂಡವಸೈನ್ಯವನ್ನೂ ಒಂದೇದಿಕ್ಕಿಗೆ ತಲೆತಿರುಗಿಸಿಕೊಂಡು ಓಡುವ ಕೌರವ ಸೈನ್ಯವನ್ನೂ ಯುದ್ಧಭೂಮಿಯ ಮತ್ತೊಂದೆಡೆಯಲ್ಲಿ ಕಾದುತ್ತಿದ್ದ ಅಶ್ವತ್ಥಾಮನು ನೋಡಿದನು. ಹತ್ತಿರ ಬರುವಷ್ಟರಲ್ಲಿ ಕೆಂಪುಕುದುರೆಗಳಿಂದ ಗುರುತಿಸಲ್ಪಟ್ಟ ತನ್ನ ತಂದೆ, ಸಾರಥಿ, ಧ್ವಜಗಳಿಂದ ಕೂಡಿದ್ದ ತೇರನ್ನು ದೃಷ್ಟಿಸಿ ನೋಡಿ ತಮ್ಮ ತಂದೆಯು ಸತ್ತು ಹೋಗಿದ್ದುದನ್ನು ತಿಳಿದನು. ೩೧. ಜಿನುಗಿ ಸೋರುತ್ತಿದ್ದ ಕಣ್ಣೀರಿನ ಹನಿಗಳನ್ನು ತಡೆದುಕೊಂಡು ಕೋಪಾಗ್ನಿಯು

ವ|| ಆಗಳುರಿಯುರುಳಿಯಂತಪ್ಪ ತನ್ನ ನೊಸಲ ಕಣ್ಣಂ ತೋಱ ತನ್ನ ಸಾಹಸಮಂ ತೋಱಲೆಂದು ನಾರಾಯಣಾಸ್ತ್ರಮಂ ತೊಟ್ಟೆಚ್ಚಾಗಳ್-

ಚಂ|| ದೆಸೆ ಮಸುಳ್ದತ್ತು ರ್ವಾ ತಳರ್ದತ್ತು ನೆಲಂ ಪಿಡಿಗಿತ್ತು ತೊಟ್ಟನಾ
ಗಸಮೊಡೆದತ್ತಜಾಂಡಮಳಱತ್ತೆನುತಿರ್ದೆಡೆಯಲ್ಲಿ ಲೋಕಮಂ|
ಬಿಸಿಳಗಿಟ್ಟು ಕಾದಳವನಾರಳವೊಡ್ಡಿಸೆ ಕಾದನಾಗಳ
ರ್ವಿಸೆ ತೆಗೆದೆಚ್ಚ ವೈಷ್ಣವಮನೊಡ್ಡಿಸಿ ವೈಷ್ಣವದಿಂ ಮುರಾಂತಂಕಂ|| ೩೨

ವ|| ಅಂತಶ್ವತ್ಥಾಮನೆಚ್ಚ ನಾರಾಯಣಾಸ್ತ್ರಮಂ ನಾರಾಯಣನುಪಾಯದೊಳೆ ಗೆಲ್ದನನ್ನೆಗಂ-

ಚಂ|| ಕವಿದೆರಡುಂ ಪತಾಕಿನಿಗಳಾಗಡುಮೆನ್ನಮೆ ಸಕ್ಕಿ ಮಾಡಿ ಕಾ
ದುವುದಱನಲ್ಲಿ ಸತ್ತರಸುಮಕ್ಕಳ ಪಾಪಮಿದೆಲ್ಲಮೆನ್ನನೆ|
ಯ್ದುವುದುಪವಾಸದಿಂ ಜಪದಿನಾನದನೋಡಿಸಿ ಶುದ್ಧನಪ್ಪೆನೆಂ
ಬವೊಲಪರಾಂಬುರಾಶಿಗಿೞದಂ ನಳಿನೀವರಜೀವಿತೇಶ್ವರಂ|| ೩೩

ವ|| ಅಂತೆರಡುಂ ಪಡೆಗಳೊಂದಿರುಳುಮೆರಡುಂ ಪಗಲುಮೋರಂತೆ ಕಾದಿ ಚಳಿತಪಹಾರ ತೂರ್ಯಂಗಳು ಬಾಜಿಸೆ ತಂತಮ್ಮ ಬೀಡುಗಳ್ಗೆ ಪೋದರಾಗಳ್-

ಚಂ|| ಗುರುವಿನ ಶೋಕದಿಂದೆ ರಥಮಧ್ಯದೊಳೊಯ್ಯನೆ ಜೋಲ್ದು ಬಿೞ್ದನಂ
ಗುರುಸುತನಂ ಕೃಪಂ ಕೃಪೆಯಿನಾತ್ಮವಿಲಾಸದೊಳಾಱಸುತ್ತುಮಂ|
ತಿರೆ ಗುರುಶೋಕಮಗ್ಗಳಿಸೆ ತಾತವಿಯೋಗಮುಮಕ್ಕುಮಾಗಡುಂ
ಗುರುವೆನೆ ಪೇೞಮಾ ಗುರುವಿಯೋಗಭರಂ ಗುರುವಾಗದಿರ್ಕುಮೇ|| ೩೪

ವ|| ಅನ್ನೆಗಂ ಪನ್ನಗಕೇತನಂ ಶೋಕಮನಾಱಸಲೆಂದು ಕರ್ಣ ಶಲ್ಯ ಸೌಬಲ ಸಮೇತಂ ಬಂದಶ್ವತ್ಥಾಮನನಿಂತೆಂದಂ-

ಮ|| ಪುದಿದೌರ್ವಾನಳನಬ್ಧಿಯಂ ಸುಡುವವೋಲ್ ಶಸ್ತ್ರಾಗ್ನಿಯಿಂ ತೀವ್ರ ಕೋ
ಪದಿನುದ್ವೃತ್ತ ಬಳಾಬ್ಧಿಯಂ ಸುಡೆ ಕರಂ ಬೆಂಬಿೞ್ದು ದುರ್ಯುಕ್ತಿಯಿಂ|
ದದಯಂ ಧರ್ಮಜನಿಕ್ಕಿದಂ ಗುರುವನಿನ್ನೀನಾತನಂ ಬೇಗಮಿ
ಕ್ಕದೆ ಕಣ್ಣೀರ್ಗಳನಿಕ್ಕೆ ಚಂದ್ರಧವಳಂ ನಿನ್ನನ್ವಯಂ ಮಾಸದೇ|| ೩೫

ಉಜ್ವಲವಾಗುತ್ತಿರಲು ರೇಗಿ ಕೋಪದಿಂದ ‘ಪ್ರಪಂಚವನ್ನು ಪಾಂಡವರಿಲ್ಲದಂತೆ ಮಾಡದಿರುವಾಗ ನಾನು ಚಾಪಾಚಾರ್ಯನ ಮಗನೇ ಅಲ್ಲ’ ಎನ್ನುತ್ತ ಅಶ್ವತ್ಥಾಮನು ಎದುರಿಸಲು ಪಾಂಡವಸೇನಾಸಮುದ್ರವು ಭಯದಿಂದ ದುಖಪಟ್ಟು ಚಲಿಸಿ ತಳ್ಳಲ್ಪಟ್ಟು ಸುಳಿಸುಳಿಯಾಗಿ ತಿರುಗಿತು. ವ|| ಆಗ ಉರಿಯ ಉಂಡೆಯ ಹಾಗಿದ್ದ ತನ್ನ ಹಣೆಗಣ್ಣನ್ನು ತೋರಿ ತನ್ನ ಸಾಹಸವನ್ನು ಪ್ರದರ್ಶಿಸಬೇಕೆಂದು ನಾರಾಯಾಣಾಸ್ತ್ರವನ್ನು ಪ್ರಯೋಗಿಸಿದನು. ೩೨. ದಿಕ್ಕುಗಳು ಮಾಸಲಾದುವು, ಸಮುದ್ರಗಳು ಚಲಿಸಿದುವು, ಭೂಮಿಯು ಸಿಡಿಯಿತು, ಇದ್ದಕ್ಕಿದ್ದ ಹಾಗೆ ಆಕಾಶವು ಒಡೆದುಹೋಯಿತು ಎನ್ನುತ್ತಿದ್ದ ಸಮಯದಲ್ಲಿ ಇರುವ ಸ್ಥಳದಲ್ಲಿಯೇ ಲೋಕವನ್ನು ತನ್ನ ಹೊಟ್ಟೆಯೊಳಗಿಟ್ಟು ಯಾವ ಶಕ್ತಿಯನ್ನಾದರೂ ಪ್ರತಿಭಟಿಸಿ ರಕ್ಷಿಸುವ ಶಕ್ತಿಯುಳ್ಳ ಶ್ರೀಕೃಷ್ಣನು, ಭಯಂಕರವಾಗಿ ಸೆಳೆದು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು ವೈಷ್ಣವಾಸ್ತ್ರದಿಂದ ಎದುರಿಸಿ ಲೋಕವನ್ನು ರಕ್ಷಿಸಿದನು- ವ|| ಹಾಗೆ ಅಶ್ವತ್ಥಾಮನು ಪ್ರಯೋಗಿಸಿದ ನಾರಾಯಣಾಸ್ತ್ರವನ್ನು ನಾರಾಯಣನಾದ ಕೃಷ್ಣನು ಉಪಾಯದಿಂದಲೇ ಗೆದ್ದನು. ಅಷ್ಟರಲ್ಲಿ ೩೩. ಎರಡು ಸೈನ್ಯಗಳೂ ಮೇಲೆಬಿದ್ದು ಯಾವಾಗಲೂ ನನ್ನನ್ನೇ ಸಾಕ್ಷಿಯನ್ನಾಗಿ ಮಾಡಿ ಯುದ್ಧಮಾಡುವುದರಿಂದ ಸತ್ತ ರಾಜಕುಮಾರರ ಈ ಪಾಪವೆಲ್ಲ ನನ್ನನ್ನೇ ಸೇರುವುದು. ಆ ಪಾಪವನ್ನು ಉಪವಾಸದಿಂದಲೂ ಜಪದಿಂದಲೂ ಓಡಿಸಿ ಶುದ್ಧನಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಪಶ್ಚಿಮಸಮುದ್ರಕ್ಕಿಳಿದನು. ವ|| ಒಂದು ರಾತ್ರಿ ಮತ್ತು ಎರಡು ಹಗಲು ಒಂದೇ ಸಮನಾಗಿ ಕಾದಿ ಬಲಗುಂದಿದ್ದ ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವ ವಾದ್ಯಗಳನ್ನು ಬಾಜಿಸಲು ತನ್ನ ತಮ್ಮ ನಿವಾಸಗಳಿಗೆ (ಬೀಡುಗಳಿಗೆ) ಹೋದುವು; ಆಗ ೩೪. ತಂದೆಯು ಸತ್ತ ದುಖದಿಂದ ರಥದ ಮಧ್ಯಭಾಗದಲ್ಲಿಯೇ ನಿಧಾನವಾಗಿ ಜೋತು ಬಿದ್ದಿದ್ದ ಅಶ್ವತ್ಥಾಮನನ್ನು ಕೃಪನು ಮೃದುವಾದ ಮಾತುಗಳಿಂದಲೂ; ತನ್ನ ಸಮಾಧಾನೋಕ್ತಿಯಿಂದಲೂ ಬೀಡಿಗೆ ಕರೆದು ತಂದನು. ತಂದೆಯ ಸಾವೇ (ಅಗಲಿಕೆಯೇ) ಹೆಚ್ಚಿನ ದುಖಕ್ಕೆ ಕಾರಣವಾಗಿರುವಾಗ ಆ ತಂದೆಯು ಗುರುವೂ ಆಗಿದ್ದಾಗ ಆ ಗುರುವಿಯೋಗ ದುಖವು ಗುರುತರವಾಗಿರುವುದಿಲ್ಲವೇ? ವ|| ಅಷ್ಟರಲ್ಲಿ ದುರ್ಯೋಧನನು ಅಶ್ವತ್ಥಾಮನ ದುಖವನ್ನು ಆರಿಸಬೇಕೆಂದು ಕರ್ಣ, ಶಲ್ಯ, ಶಕುನಿಯರೊಡನೆ ಬಂದು ಅವನಿಗೆ ಹೀಗೆ ಹೇಳಿದನು. ೩೫. ಆಚಾರ್ಯರು ಆವರಿಸಿಕೊಂಡಿರುವ ಲ

ದ್ರುತವಿಲಂಬಿತಂ|| ಎನಗೆ ಕೂರ್ಪುದನಾ ಘಟಸಂಭವಂ
ನಿನಗೆ ಕೂರನೞಲ್ ನಿನತಲ್ತು ಕೇ||
ಳೆನತುಮಾಱದ ಶೋಕಮನಿರ್ವರುಂ
ಮುನಿವರಂ ತವೆ ಕೊಂದೊಡನೀಗುವಂ|| ೩೬

ವ|| ಎಂಬುದುಮಶ್ವತ್ಥಾಮನಿಂತೆಂದಂ-

ತರಳಂ|| ಗುರು ಮದೀಯ ವಿಮೋಹದಿಂ ಕೃಪೆಯಂ ಜವಂ ಬಿಸುಟಂತೆ ಕೊ
ಕ್ಕರಿಸಿ ಬಿಲ್ವಿಸುಟಿರ್ದೊಡಾ ಪದದೊಳ್ ಗಡಂ ದ್ರುಪದಾತ್ಮಜಂ|
ಗುರುವ ಕೇಶಕಳಾಪಮಂ ತೆಗೆದಂತೆ ಗಂಡನುಮಾದನೀ
ಪರಿಭವಕ್ಕನುರೂಪಮಿಂ ಪೆಱತೊಂದುಮಿಲ್ಲಹಿಕೇತನಾ|| ೩೭

ಶಾ|| ರಾಯೆಂಬೀ ಪೆಸರಿಲ್ಲದಂತು ಮುೞಸಿಂ ಮುಯ್ಯೋೞು ಸೂೞೆಂತು ಕ
ಟ್ಟಾಯಂ ಪೊಂಪುೞವೋಗೆ ತಂದೆಯೞವಿಂಗಾ ಭಾರ್ಗವಂ ಕೊಂದನಂ|
ತೀಯೆಮ್ಮಯ್ಯನಿನಾದುದೊಂದು ಪಗೆಯಿಂ ಸೀಳ್ದುಗ್ರಪಾಂಚಾಳರಾ
ಜಾಯುಪಾರಮನನ್ಯಭೂಪಬಲಮಂ ಪರ್ದಿಂಗೆ ಬಿರ್ದಿಕ್ಕುವೆಂ|| ೩೮

ಕಂ|| ಪಗೆಯಂದಮುಮಾ ರಾಮರ
ಪಗೆಯೊಳ್ ಸಮಮವರ ಪಿಡಿವ ಬಿಲ್ ಬಿಲ್ಲೆಮ್ಮಂ|
ಬುಗಳುಮವರಿತ್ತ ನಲ್ಲಂ
ಬುಗಳೆನೆ ಬೞಗಾಯದಂತು ಚಲಮನೆ ಕಾವೆಂ|| ೩೯

ವ|| ಎಂಬುದುಂ ತನ್ನಳಿಯನ ನುಡಿಗೆ ಶಾರದ್ವತಂ ಸಂತೋಷಂಬಟ್ಟು ಕೌರವೇಶ್ವರನ ನಿಂತೆಂದಂ ನೀನೀತಂಗೆ ವೀರವಟ್ಟಮಂ ಕಟ್ಟಿ ರಿಪುನೃಪಬಲಕ್ಕೆ ತೋಱ ಬಿಡುವುದೆನೆ ಕಳಶಜನಿಂ ಬಿೞಕ್ಕೆ ಕರ್ಣಂಗೆಂದು ನುಡಿದ ಬೀರಮಟ್ಟಮನೆಂತು ಕಟ್ಟುವೆನೆಂದೊಡಶ್ವರತ್ಥಾಮ ನಿಂತೆಂದಂ-

ಬಡಬಾಗ್ನಿಯು ಕಡಲನ್ನು ಸುಡುವಂತೆ ಶಸ್ತ್ರಾಗ್ನಿಯಿಂದಲೂ ತೀಕ್ಷ್ಣವಾದ ಕೋಪಾಗ್ನಿಯಿಂದಲೂ ಕೊಬ್ಬಿದ ಶತ್ರು ಸೈನ್ಯಸಾಗರವನ್ನು ಸುಡುತ್ತಿರಲು ವಿಶೇಷವಾದ ಉಪಸರ್ಪಣೆಯಿಂದಲೂ ಹೀನೋಪಾಯಗಳಿಂದಲೂ ದಯಾಹೀನನಾದ ಧರ್ಮರಾಯನು ಗುರುವನ್ನು ಕೊಂದನು. ಇನ್ನು ನೀನು ಅವನನ್ನು ಬೇಗನೆ ಕೊಲ್ಲದೆ ಕಣ್ಣೀರನ್ನು ಸುರಿಸುತ್ತಿದ್ದರೆ ಚಂದ್ರನಷ್ಟು ಬೆಳ್ಳಗಿರುವ ನಿನ್ನ ವಂಶವು ಮಲಿನವಾಗದೆ ಇರುತ್ತದೆಯೇ? ೩೬. ದ್ರೋಣಾಚಾರ್ಯನು ನನ್ನನ್ನು ಪ್ರೀತಿಸುತ್ತಿದಷ್ಟು ನಿನ್ನನ್ನು ಪ್ರೀತಿಸುತ್ತಿರಲಿಲ್ಲ. ಈ ದುಖವು ನಿನ್ನದು ಮಾತ್ರವಲ್ಲ; ಕೇಳು, ನನ್ನದೂ ಅಹುದು. ಕಡಿಮೆಯಾಗದ ಈ ದುಖವನ್ನು, ನಾವಿಬ್ಬರೂ ನಮಗೆ ಸಮಾನ ಶತ್ರುಗಳಾದ ಪಾಂಡವರನ್ನು ಪೂರ್ಣವಾಗಿ ಕೊಂದು, ಜೊತೆಯಲ್ಲಿಯೇ ಪರಿಹಾರ ಮಾಡಿಕೊಳ್ಳೋಣ. ವ|| ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೩೭. ಆಚಾರ್ಯನಾದ ನನ್ನ ತಂದೆಯು ನನ್ನ ಮೇಲಿನ ಪ್ರೀತಿಯಿಂದ ಯಮನು ಕರುಣವನ್ನು ಬಿಸಾಡುವ ಹಾಗೆ ಅಸಹ್ಯಪಟ್ಟು ಬಿಲ್ಲನ್ನು ಬಿಸುಟಿದ್ದ ಆ ಸಮಯದಲ್ಲಿಯೇ ಅಲ್ಲವೇ ಧೃಷ್ಟದ್ಯುಮ್ನನು ಗುರುವಿನ ಕೂದಲ ಗಂಟನ್ನು ಎಳೆದು ಮಹಾಶೂರನಾದುದು. ದುರ್ಯೋಧನಾ! ಈ ಅವಮಾನಕ್ಕೆ ಸಮಾನವಾದುದು ಬೇರೊಂದಿಲ್ಲ. ೩೮. ಪರಶುರಾಮನು ತಂದೆಯ ಸಾವಿಗಾಗಿ ಕೋಪದಿಂದ ‘ರಾಜ’ ಎಂಬ ಹೆಸರೇ ಇಲ್ಲದಿರುವ ಹಾಗೆ ಇಪ್ಪತ್ತೊಂದು ಸಲ ತನ್ನ ಪೌರುಷವು ಅತ್ಯಂತ ಅಕವಾಗುತ್ತಿರಲು (ರಾಜಕುಲವನ್ನೆ) ಹೇಗೆ ಕೊಂದನೋ ಹಾಗೆಯೇ ಈಗ ನಮ್ಮ ತಂದೆಯ ಕಾರಣದಿಂದಾದ ದ್ವೇಷದಿಂದ ಭಯಂಕರವಾದ ಪಾಂಚಾಲರಾಜರ ಆಯಸ್ಸಿನ ದಡವನ್ನು ಸೀಳಿ ಶತ್ರುರಾಜರ ಸೈನ್ಯವನ್ನು ಹದ್ದುಗಳಿಗೆ ಔತಣಮಾಡಿಸುತ್ತೇನೆ. ೩೯. ‘ನಮ್ಮ ಶತ್ರುತ್ವದ ರೀತಿಯೂ ರಾಮರ ಶತ್ರುತ್ವಕ್ಕೆ ಸಮಾನವಾದುದು. ಅವರು ಹಿಡಿಯುತ್ತಿದ್ದ ಬಿಲ್ಲೇ ನನ್ನ ಬಿಲ್ಲು ನಮ್ಮಬಾಣಗಳೂ ಅವರು ಕೊಟ್ಟ ಒಳ್ಳೆಯ ಬಾಣಗಳೇ ಆಗಿರಲು ವಂಶವನ್ನು (ಕ್ಷತ್ರಿಯ ವಂಶವನ್ನು) ರಕ್ಷಿಸದೆ (ಹಾಗೆಯೇ) ಹಟವನ್ನೇ ಸಾಸುತ್ತೇನೆ’ ವ|| ಎಂದ ತನ್ನಳಿಯನ ಮಾತಿಗೆ ಕೃಪನು ಸಂತೋಷಪಟ್ಟು ದುರ್ಯೋಧನನಿಗೆ ಹೀಗೆ ಹೇಳಿದನು- ‘ನೀನು ಇವನಿಗೆ ವೀರಪಟ್ಟವನ್ನು ಕಟ್ಟಿ ಶತ್ರುಸೈನ್ಯದ ಕಡೆಗೆ ತೋರಿಸಿ ಬಿಡತಕ್ಕದ್ದು’ ಎನ್ನುಲು ‘ದ್ರೋಣನ ಬಳಿಕ

ಚಂ|| ನಿಜದೊಳೆ ಭೂಪರೆಂಬರವಿವೇಕಿಗಳಪ್ಪರದಕ್ಕೆ ನೀಂ ಫಣಿ
ಧ್ವಜ ಕಡುಕೆಯ್ದು ಕರ್ಣನನೆ ನಚ್ಚುವೆಯಪ್ಪೊಡೆ ಯುದ್ಧದೊಳ್ ವೃಷ|
ಧ್ವಜನುಮನಿಕ್ಕಿ ಗೆಲ್ದರಿಗನೊಳ್ ತಲೆವಟ್ಟಿದಿರಾಗಿ ನಿಂದು ಸೂ
ತಜನಿಱವಂ ಗಡಂ ಪಗೆಯನೇಂ ಗಳ ಪಟ್ಟಮೆ ಪಾಱ ತಿಂಬದೇ || ೪೦

ವ|| ಎಂಬುದುಮಂಗರಾಜಂ ಗುರುತನೂಜನನಿಂತೆಂದಂ-

ಚಂ|| ಎನಿತಳವುಳ್ಳೊಡಂ ದ್ವಿಜನ ಗಂಡಗುಣಕ್ಕಗಿವನ್ನರಾರೊ ನೆ
ಟ್ಟನೆ ವಿಷಮೊಳ್ಳೆಗುಳ್ಳೊಡಮದೊಳ್ಳೆಯೆ ಕಾಳಿಯ ನಾಗನಾಗದ|
ಣ್ಮಿನ ಪಡೆಮಾತದೊಂದೆ ನೆವಮಾಗಿರೆ ಕೆಯ್ದುವನಿಕ್ಕಿ ಸತ್ತ ಸಾ
ವಿನ ಪಡಿಚಂದಮಾಗಿಯುಮಿದೇಂ ನಿಮಗೞಯೊ ಗಂಡುವಾತುಗಳ್ || ೪೧

ವ|| ಎಂಬುದುಂ ತ್ರೈಲೋಕ್ಯ ಧನುರ್ಧರನಪ್ಪೆಮ್ಯಯ್ಯನ ಗಂಡವಾತನೀ ಮೀಂಗುಗಲಿಗಂ ಮೆಚ್ಚನಿವನಂ ಮುಂ ಕೊಂದು ಬೞಯಂ ಪಾಂಡವರಂ ಕೊಲ್ವೆನೆಂದು ಬಾಳಂ ಕಿೞ್ತು ಕರ್ಣನ ಮೇಲೆವಾಯ್ವುದುಂ ಕೃಪನೆಡೆವೊಕ್ಕಿದಾಗದೆಂದು ಬಾರಿಸಿ-

ಕಂ|| ಅಸದಳಮಾಗಿಯುಮೀ ನ
ಮ್ಮ ಸೈನ್ಯಮಿಂತೊರ್ವರೊರ್ವರೊಳ್ ಸೆಣಸಿ ಖಳ|
ವ್ಯಸನದೊಳೆ ಕೆಟ್ಟುದಲ್ಲದೊ
ಡೆ ಸುಯೋಧನ ನಿನಗೆ ಮಲೆವ ಮಾರ್ವಲಮೊಳವೇ|| ೪೨

ವ|| ಎಂಬುದುಮಶ್ವತ್ಥಾಮಂ ಕರ್ಣನೊಳಾದ ಮುಳಿಸನವಧಾರಿಸಲಾಱದೆ ಸುಯೋಧನನ ನಿಂತೆಂದಂ-

ಖಚರಪ್ಲುತಂ|| ಬೀರವಟ್ಟಮನಾನಿರೆ ನೀನೀ ಸೂತಸುತಂಗೆಡೆಗೊಂಡು ಕೈ
ವಾರದಿಂದೊಸೆದಿತ್ತೊಡಮೇನಾಯ್ತೀ ಖಳನಿಲ್ಲಿ ಧನಂಜಯ|
ಕ್ರೂರಬಾಣಗಣಾವಳಿಯಿಂದೞiಡಿದೊಡಲ್ಲದೆ ವೈರಿ ಸಂ
ಹಾರ ಕಾರಣ ಚಾಪಮನಾನೀ ಸಂಗರದೊಳ್ ಪಿಡಿಯೆಂ ಗಡಾ|| ೪೩

ವ|| ಎಂಬುದುಂ ಮುಳಿಸುವೆರಸಿದ ಮುಗುಳ್ನಗೆಯಿಂ ಕರ್ಣನಿಂತೆಂದಂ-

ಮ|| ಭುವನಂಗಳ್ ಪದಿನಾಲ್ಕುಮಂ ನಡುಗಿಸಲ್ ಸಾಮರ್ಥ್ಯಮುಳ್ಳೆನ್ನ ಕೆ
ಯ್ದುವಿನೊಳ್ ತೀರದುದಾವ ಕೆಯ್ದುವಿನೊಳಂ ತೀರ್ದಪುದೇ ನಿನ್ನ ಕೆ|
ಯ್ದುವನೆಂತುಂ ಬಿಸುಟಿರ್ದ ಲೆಕ್ಕಮೆ ವಲಂ ನಿಷ್ಕಾರಣಂ ಕೆಯ್ದುವಿ
ಕ್ಕುವ ಕಣ್ಣೀರ್ಗಳನಿಕ್ಕುವೀಯೆರಡುಮಂ ನಿಮ್ಮಯ್ಯನೊಳ್ ಕಲ್ತಿರೇ|| ೪೪

ಕರ್ಣನಿಗೆ’ ಎಂದು ಹೇಳಿದ ವೀರಪಟ್ಟವನ್ನು ಈಗ ಇವನಿಗೆ ಹೇಗೆ ಕಟ್ಟಲಿ ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೪೦. ರಾಜರೆನ್ನುವವರು ವಾಸ್ತವವಾಗಿಯೂ ಬುದ್ಧಿಯಿಲ್ಲದವ ರೆಂಬುದು ಸತ್ಯ. ಅದು ಹಾಗಿರಲಿ; ಎಲೈ ದುರ್ಯೋಧನನೇ, ಬಹಳವಾಗಿ ಪ್ರೀತಿಸಿ ಕರ್ಣನನ್ನೇ ನಂಬುವೆಯಾದರೆ ಯುದ್ಧದಲ್ಲಿ ಈಶ್ವರನನ್ನೇ ಇಕ್ಕಿ ಗೆದ್ದ ಅರ್ಜುನನಿಗೆ ಅಭಿಮುಖವಾಗಿ ನಿಂತು ಕರ್ಣನು ಯುದ್ಧಮಾಡುತ್ತಾನಲ್ಲವೇ? ತಟ್ಟುವ ವೀರಪಟ್ಟವೇ ಹಾರಿ ಮೇಲೆ ಬಿದ್ದು ಶತ್ರುವನ್ನು ತಿನ್ನವುದೇ ಏನು? ವ|| ಎನ್ನಲು ಕರ್ಣನು ಅಶ್ವತ್ಥಾಮನನ್ನು ಕುರಿತು ಹೀಗೆಂದನು ೪೧. ‘ಎಷ್ಟು ಶಕ್ತಿಯಿದ್ದರೂ ಬ್ರಾಹ್ಮಣನ ಪೌರುಷಕ್ಕೆ ಹೆದರುವವರಾರಿದ್ದಾರೋ? ಕೇರೆ ಹಾವಿಗೆ ನೇರವಾಗಿ ವಿಷವಿದ್ದರೂ ಅದು ಒಳ್ಳೆಯೇ (ಕೇರೆಯ ಹಾವೇ); ಕೃಷ್ಣಸರ್ಪವಾಗಲಾರದು. ಪೌರುಷದ ಸುದ್ದಿಯೊಂದಿದೆ! ಯಾವುದೋ ಒಂದು ನೆಪದಿಂದ ಆಯುಧವನ್ನು ಬಿಸಾಡಿ ಸತ್ತ ಸಾವಿನ ಪ್ರತಿಬಿಂಬ ಕಣ್ಣಮುಂದಿದ್ದರೂ ನಿಮಗೆ ಪೌರುಷದ ಮಾತುಗಳಲ್ಲಿ ಇನ್ನೂ ಪ್ರೀತಿಯಿದೆಯೇನು?’ (ಎಷ್ಟು ಪ್ರೀತಿಯೋ) ವ|| ಎನ್ನುಲು ‘ಮೂರುಲೋಕಗಳಲ್ಲಿಯೂ ಬಿಲ್ವಿದ್ಯೆಯಲ್ಲಿ ಪ್ರಸಿದ್ಧನಾದ ನನ್ನ ತಂದೆಯನ್ನು ಈ ಬೆಸ್ತರವನು (ಮೀನನ್ನು ಕೊಲ್ಲುವ ಸ್ವಭಾವವುಳ್ಳವನು) ಮೆಚ್ಚುವುದಿಲ್ಲ. ಇವನನ್ನು ಮೊದಲು ಕೊಂದು ಬಳಿಕ ಪಾಂಡವರನ್ನು ಕೊಲ್ಲುತ್ತೇನೆ’ ಎಂದು ಕತ್ತಿಯನ್ನು ಒರೆಯಿಂದ ಹೊರಕ್ಕೆ ಸೆಳೆದು ಕರ್ಣನ ಮೇಲೆ ಹಾಯ್ದನು. ಕೃಪನು ಮಧ್ಯೆ ಪ್ರವೇಶಿಸಿ ಹೀಗೆ ಮಾಡಬಾರದು ಎಂದು ತಡೆದನು- ೪೨. ‘ದುರ್ಯೋಧನಾ, ಈ ನಮ್ಮ ಸೈನ್ಯವು ಅಸದೃಶವಾಗಿದ್ದರೂ ಹೀಗೆ ಒಬ್ಬೊಬ್ಬರಲ್ಲಿಯೂ ಜಗಳವಾಡಿ (ಮತ್ಸರಿಸಿ) ಒಳಜಗಳದಿಂದಲೇ ಕೆಟ್ಟುಹೋಯಿತು. ಹಾಗಲ್ಲದಿದ್ದರೆ ನಿನಗೆ ಪ್ರತಿಭಟಿಸುವ ಪ್ರತಿಸೈನ್ಯವಿರುತ್ತಿದ್ದಿತೆ?’ ವ|| ಎನ್ನಲು ಅಶ್ವತ್ಥಾಮನು ಕರ್ಣನಲ್ಲುಂಟಾದ ಕೋಪವನ್ನು ತಡೆಯಲಾರದೆ ದುರ್ಯೋಧನನಿಗೆ ಹೀಗೆ ಹೇಳಿದನು- ೪೩. ‘ನಾನಿರುವಾಗ ನೀನು ಸ್ನೇಹದಿಂದ ವೀರಪಟ್ಟವನ್ನು ಈ ಸೂತನ ಮಗನಿಗೆ ಮೋಸದಿಂದ ಕೊಟ್ಟರೆ ತಾನೇ ಏನಾಯ್ತು? ಈ ದುಷ್ಟನು ಅರ್ಜುನನ ಕ್ರೂರವಾದ ಬಾಣಗಳ ಸಮೂಹದಿಂದ ನಾಶವಾಗದ ಹೊರತು ನಾನು ಶತ್ರುನಾಶಕ್ಕೆ ಕಾರಣವಾದ ಈ ಬಿಲ್ಲನ್ನು ಯುದ್ಧರಂಗದಲ್ಲಿ ಹಿಡಿಯುವುದೇ ಇಲ್ಲ.’ ವ|| ಎನ್ನಲು ಕರ್ಣನು ಕೋಪಮಿಶ್ರಿತವಾದ ಹುಸಿನಗೆಯಿಂದ ಹೀಗೆ ಹೇಳಿದನು- ೪೪. ‘ಹದಿನಾಲ್ಕು ಲೋಕಗಳನ್ನೂ ನಡುಗಿಸುವ ಲ

ವ|| ಎಂಬುದುಮಶ್ವತ್ಥಾಮಂ ಕರ್ಣನ ನುಡಿಗೆ ಸಿಗ್ಗಾಗಿ-

ಮ|| ಸ್ರ|| ಮುನಿಸಂ ಮುಂದಿಟ್ಟು ಬಿಲ್ಲಂ ಬಿಸುಡದೆ ಬಗೆದೆಂ ಮುನ್ನಮಿನ್ನುರ್ಕ್ಕಿನಿಂ ನಿ
ನ್ನನೆ ಪೀನಂ ನಚ್ಚಿ ನಿನ್ನಾಳ್ದನೆ ನುಡಿಯಿಸೆ ನೀನಾಡಿದೈ ಮಾತನಾಡ|
ಲ್ಕೆನಗೀ ಸೂೞಲ್ತು ಸೇನಾಪ ಪದವಿಯೊಳಿಂ ನೀನೆ ನಿಲ್ ನಾಳೆ ದುರ್ಯೋ
ಧನನಂ ಸಕ್ಕಿಟ್ಟು ಮಾಱiಂತದಟರೊಳಳವಂ ತೋಱುವಂ ನೀನುಮಾನುಂ|| ೪೫

ಕಂ|| ಸಾರಂಗಳ್ ನಿನ್ನ ಶರಾ
ಸಾರಂಗಳಸಾರಮುೞದ ಕೆಯ್ದುಗಳೆಂತುಂ|
ಸಾರಾಸಾರತೆಯಂ ನಾ
ಮಾರಯ್ವಮಿದಿರ್ಚಿದರಿನೃಪಧ್ವಜಿನಿಗಳೊಳ್|| ೪೬

ವ|| ಎಂಬುದುಂ ದುರ್ಯೋಧನ ಕರ್ಣನುಮನಶ್ವತ್ಥಾಮನುಮಂ ನಿಮ್ಮೊಳಗೆ ನೀಂ ಮುಳಿಯಲ್ವೇಡ ನಿಮ್ಮ ಪುರುಷಕಾರಮನೆ ಬಗೆದು ನೆಗೞ್ವುದಾನುಮೆನ್ನೆತ್ತಿ ಕೊಂಡ ಕಜ್ಮಮಂ ನೆಗೞ್ದಲ್ಲದಿರೆನೆಂದಾಯೆಡೆಯಿನೆೞ್ದು ನಾಯಕರಂ ಬೀಡಿಂಗೆ ಪೋಗಲ್ವೇೞ್ದಂಮನೆಯಂ ಪೊಕ್ಕು ಮಜ್ಜನ ಭೋಜನ ತಾಂಬೂಲಾನುಲೇಪನಂಗಳಿಂ ಸಂಗರ ಪರಿಶ್ರಮಮನಾಱಸಿ ಮಂತ್ರಶಾಲೆಗೆವಂದು ಶಲ್ಯ ಶಾರದ್ವತ ಕೃತವರ್ಮ ದುಶ್ಶಾಸನಾದಿಗಳು ಬರಿಸಿ ಯಥೋಚಿತ ಪ್ರತಿಪತ್ತಿಗಳಿಂದಿರಿಸಿ-

ಶಾ|| ಅಂತರ್ಭೇದದೊಳಂತು ಛಿದ್ರಿಸಿದರಾ ಗಾಂಗೇಯರಂ ಕೊಂದರಿಂ
ದಿಂತೀಗಳ್ ಪುಸಿದೀ ಘಟೋದ್ಭವನನಾ ಕೌಂತೇಯರಾಯಕ್ಕೆ ಗೆಂ|
ಟೆಂತೆಂತಕ್ಕುಮದುಂ ಮದುದ್ಯಮಮೆ ಪೇೞ್ಗಾ ವೈರಿಗಳ್ಗೊಲ್ವೆನಾ
ನೆಂತೊಳ್ಪಂ ತಳೆವಂತು ತೇಜಮೆನಗಿನ್ನೆಂತಕ್ಕುಮಿಂ ಪೇೞರೇ|| ೪೭

ವ|| ಎನೆ ಶಾರದ್ವತನಿಂತೆಂದಂ-

ಚಂ|| ಚಲಮನೆ ಪೇೞ್ವೊಡಯ್ವರುಮನಯ್ದೞಯೂರೊಳೆ ಬಾೞಸೆಂದು ಮುಂ
ಬಲಿಬಲಸೂದನಂ ನುಡಿಯೆಯುಂ ಕುಡದಿರ್ದುದೆ ಪೇೞ್ಗುಮೆಯ್ದೆ ಮೆ|
ಯ್ಗಲಿತನಮಂ ಸರಿತ್ಸುತ ಘಟೋದ್ಭವರಂ ಪೊಣರ್ದಿಕ್ಕಿ ಗೆಲ್ದರೊಳ್
ಕಲಹಮೆ ಪೇೞ್ಗುಮಿಂ ಪೆಱತು ಪೇೞ್ವೆಡೆಯಾವುದೊ ಕೌರವೇಶ್ವರಾ|| ೪೮

ಸಾಮರ್ಥ್ಯವುಳ್ಳ ನನ್ನ ಆಯುಧಗಳಿಂದ ಸಾಧ್ಯವಾಗದೇ ಇರುವುದು ಮತ್ತಾವ ಆಯುಧದಿಂದಾಗಲಿ ಸಾಧ್ಯವಾಗುತ್ತದೆಯೇ? ನಿನ್ನ ಆಯುಧಗಳು ಯಾವಾಗಲೂ ಬಿಸಾಡಿರುವ ಲೆಕ್ಕವೇ (ಅಪ್ರಯೋಜಕವೇ). ಕಾರಣವಿಲ್ಲದೇ ಬಿಲ್ಲನ್ನು ಬಿಸಾಡುವ ಮತ್ತು ಕಣ್ಣೀರನ್ನು ಸುರಿಸುವ ಈ ಎರಡನ್ನೂ ನಿಮ್ಮಯ್ಯನಿಂದ ಕಲಿತಿದ್ದೀರಾ?’ ವ|| ಎನ್ನಲು ಅಶ್ವತ್ಥಾಮನು ಕರ್ಣನ ಮಾತಿಗೆ ಲಜ್ಜಿತನಾಗಿ ೪೫. ನಾನು ಮೊದಲು ಕೋಪವನ್ನು ಮುಂದಿಟ್ಟು ಬಿಲ್ಲನ್ನು ಬಿಸುಡಲು ನಿರ್ಧರಿಸಿದೆನು. ಇನ್ನು ನಿನ್ನನ್ನು ನಿನ್ನ ಯಜಮಾನನು ಪೂರ್ಣವಾಗಿ ನಂಬಿ ಮಾತನಾಡಿಸಲು ನೀನು ಗರ್ವದಿಂದ ಮಾತನಾಡಿದೆ. ನಾನು ಮಾತನಾಡುವುದಕ್ಕೆ ಇದು ನನಗೆ ಸಮಯವಲ್ಲ. ಸೇನಾಪತಿಯ ಸ್ಥಾನದಲ್ಲಿ ನೀನೇ ನಿಲ್ಲು; ನಾಳೆ ದುರ್ಯೋಧನನನ್ನೇ ಸಾಕ್ಷಿಯಾಗಿಟ್ಟುಕೊಂಡು ಪ್ರತಿಭಟಿಸಿದ ಶೂರರಲ್ಲಿ ನೀನೂ ನಾನೂ ನಮ್ಮ ಪರಾಕ್ರಮವನ್ನು ತೋರಿಸೋಣ. ೪೬. ನಿನ್ನ ಬಾಣದ ಮಳೆಯು ಶಕ್ತಿಯುಕ್ತವಾದುದು ಉಳಿದ ಆಯುಧಗಳು ಹೇಗೂ ಅಸಾರವಾದುವು. (ಶಕ್ತಿಯಿಲ್ಲದುವು) ಈ ಸಾರಾಸಾರತೆಯನ್ನು ನಮ್ಮನ್ನು ಎದುರಿಸಿದ ಶತ್ರುರಾಜರ ಸೈನ್ಯದಲ್ಲಿ ವಿಚಾರ ಮಾಡೋಣ’. ವ|| ಎನ್ನಲು ದುರ್ಯೋಧನನು ಕರ್ಣನನ್ನೂ ಅಶ್ವತ್ಥಾಮನನ್ನೂ ಕುರಿತು ‘ನೀವು ನಿಮ್ಮನಿಮ್ಮಲ್ಲಿ ಕೋಪಿಸಬೇಡಿ; ನಿಮ್ಮ ಪೌರುಷವನ್ನು ಯೋಚಿಸಿ ಕೆಲಸಮಾಡುವುದು. ನಾನೂ ಅಂಗೀಕಾರಮಾಡಿದ ಕೆಲಸವನ್ನು ಮಾಡದೇ ಇರುವುದಿಲ್ಲ’ ಎಂದು ಆ ಸ್ಥಳದಿಂದೆದ್ದು ನಾಯಕರನ್ನು ಬೀಡಿಗೆ ಹೋಗಲು ಹೇಳಿ ತಾನು ಅರಮನೆಯನ್ನು ಪ್ರವೇಶಿಸಿ ಸಾನ್ನ ಭೋಜನ ತಾಂಬೂಲ ಅನುಲೇಪನಗಳಿಂದ ಯುದ್ಧಾಯಾಸವನ್ನು ಹೋಗಲಾಡಿಸಿಕೊಂಡು ಮಂತ್ರಶಾಲೆಗೆ ಬಂದು ಶಲ್ಯ, ಶಕುನಿ, ಶಾರದ್ವತ, ಕೃತವರ್ಮ, ದುಶ್ಶ್ಶಾಸನನೇ ಮೊದಲಾದವರನ್ನು ಬರಮಾಡಿ ಯೋಗ್ಯವಾದ ಸತ್ಕಾರಗಳಿಂದ ಕುಳ್ಳಿರಿಸಿ ೪೭. ರಹಸ್ಯವಾದ ಭೇದೋಪಾಯದಿಂದ ಹಾಗೆ ಆ ಭೀಷ್ಮರನ್ನು ಒಡೆದು ಹಾಕಿದರು. ಈ ದಿನ ಹೀಗೆ ಸುಳ್ಳು ಹೇಳಿ ದ್ರೋಣಾಚಾರ್ಯರನ್ನು ಕೊಂದರು. ಈಗ ಆ ಪಾಂಡವರಿಗೆ ಜಯವಾಗದಿರುವ ರೀತಿ ಯಾವುದು ಎಂಬುದನ್ನು ತಿಳಿಸಿ. ಆ ಶತ್ರುಗಳಲ್ಲಿ ನನಗೆ ಹೇಗೆ ಸ್ನೇಹವುಂಟಾದೀತು. ಪಾಂಡವರ ವಿಷಯದಲ್ಲಿ ಒಳ್ಳೆಯ ಭಾವವು ಬರುವುದು ಹೇಗೆ ಸಾಧ್ಯ? ನೀವೇ ಹೇಳಿರಿ. ವ|| ಎನ್ನಲು ಕೃಪನು ಹೀಗೆಂದನು- ೪೮. ಬಲವನ್ನು ಹೇಳುವುದಾದರೆ ಮೊದಲು ಕೃಷ್ಣನು ಬಂದು

ವ|| ಅದಱಂದಮಿಂ ಪೆಱತು ಮಂತಣಕ್ಕೆಡೆಯಿಲ್ಲ ಮುನ್ನೆ ಚಕ್ಷುಷ್ಮನೆಂಬ ಮನುವಾದ ಕಾಲದೊಳ್ ಧರಾತಳಮನೋಲ್ಲಣಿಗೆಯಿಂ ಪಿೞವಂತೆ ತಳಮೆಯ್ದೆ ಸುರುಳ್ವಿನಂ ಮುಯ್ಯೇೞ್ ಸೂೞ್ ಪಿೞದ ಸಾಹಸಮುಮನಿಂದ್ರಂಗೆ ತನ್ನ ಸಹಜ ಕವಚಮಂ ತಿದಿಯುಗಿದು ಕೊಟ್ಟ ಚಾಗದ ಪೆಂಪುಮಂ ದಿಗ್ವಿಜಯಂಗೆಯ್ದು ಮಿಡಿದನಿತು ಬೇಗದಿಂ ಜರಾಸಂಧನಂ ನೆಲಕ್ಕಿಕ್ಕಿ ಪುಡಿಯೊಳ್ ಪೊರಳ್ಳಿ ಮಲ್ಲಯುದ್ಧದೊಳ್ ಪಿಡಿದಡಿಗೊತ್ತಿದ ಭುಜಬಲಭೀಮನಂ ಗೆಲ್ದ ಸಹಾಸಮುಮಂ ನಮ್ಮ ಪಡೆಯೆಲ್ಲಮಂ ತೊತ್ತೞದುೞದು ಕೊಲ್ವ ಘಟೋತ್ಕಚನೆಂಬ ರೂಕ್ಷ ರಾಕ್ಷಸನಂ ಕೊಂದ ಬೀರಮುಮನಾಲೋಕಾಂತರಂ ನೆಗೞೆ-

ಬಾಣವು ಭೀಮನ ಮುಖಕಮಲದ ವಾಸನೆಯಿಂದ ಆಕರ್ಷಿತವಾದ ದುಂಬಿಗಳ ಸಮೂಹದ ಆಕಾರದಿಂದ ವಿಶೇಷ ಸುಂದರವಾಗಿದ್ದಿತು. ೭೧. ಬಾಣದ ನೋವಿನ ತುಡಿತವು ಹೆಚ್ಚಾಯಿತು. ವಿಸರ್ಪಿಣಿಯೆಂಬ ರೋಗವುಳ್ಳವನ ರಕ್ತನಾಳವನ್ನು ಕತ್ತರಿಸಿದಂತೆ ಸ್ವಲ್ಪ ಬೆಚ್ಚಗಿರುವ ಕಪ್ಪಾದ ರಕ್ತಸಮೂಹವು ಒಡನೆಯೇ ಸೂಸಿ ಹರಿಯಿತು. ೭೨. ಆ ಬಾಣದಿಂದ (ಭೀಮನ) ಎದೆ ನಡುಗುವುದಕ್ಕೂ ಮೈ ಬೆವರುವುದಕ್ಕೂ ನಾಲಗೆ ತೊಡರುವುದಕ್ಕೂ ಪ್ರಾರಂಭವಾಯಿತು. (ಎಂದ ಮೇಲೆ) ಅಶ್ವತ್ಥಾಮನು ಪ್ರಯೋಗಿಸಿದ ಹರಿತವಾದ ಬಾಣವು ಇನ್ನುಳಿದವರನ್ನು ಕೊಲ್ಲದಿರುತ್ತದೆಯೇ? ವ|| ಭೀಮಸೇನನು ಬಾಣದ ಪೆಟ್ಟಿನಿಂದ ಗಾಯಗೊಂಡು ಶಕ್ತಿಗುಂದಿ ಉಸಿರಾಡುವುದಕ್ಕೂ ಆಗದೆ ಬಿಲ್ಲಿನ ತುದಿಯನ್ನು ಹಿಡಿದು ಊರಿಕೊಂಡು ಸ್ವಲ್ಪ ಕಾಲವಿದ್ದು ಹಣೆಯಲ್ಲಿ ನಾಟಿದ್ದ ಬಾಣವನ್ನು ಹೇಗೋ ಕಿತ್ತು ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು ಸಿಂಹಧ್ವನಿಯಿಂದ ಆರ್ಭಟಿಸಿದನು. ೭೩. ಸೂರ್ಯಬಿಂಬದಿಂದ ಕಿರಣಗಳು ಹೊರಕ್ಕೆ ಹೊರಟು ಬರುತ್ತಿರುವ ಹಾಗೆ ಬತ್ತಳಿಕೆಯಿಂದ ಪ್ರಕಾಶಮಾನವಾದ ಎಂಟುಬಾಣಗಳನ್ನು ಸೆಳೆದುಕೊಂಡು ಅವುಗಳಲ್ಲಿ ಹೊಳೆಯುತ್ತಿರುವ ಅಯ್ದುಬಾಣಗಳಿಂದ ಆ ಬ್ರಾಹ್ಮಣನಾದ ಅಶ್ವತ್ಥಾಮನ ಸಾರಥಿ, ತೇರು ಮತ್ತು ಕುದುರೆಗಳು ಸುರುಳಿಕೊಂಡು ಉರುಳುವ ಹಾಗೆ ಹೊಡೆದನು. ೭೪. ಇನ್ನುಳಿದ ಮೂರು ಮಿರುಮಿರುಗುವ ಹರಿತವಾದ ಬಾಣಗಳಿಂದ ಬ್ರಾಹ್ಮಣನ ಹಣೆಗೆ ಮರ್ಮವನ್ನು ಭೇದಿಸುವಂತೆ ಹೊಡೆಯಲು ಆ ಭೀಮಸೇನನ ಪರಾಕ್ರಮವೂ ಶಕ್ತಿಯೂ ಕಣ್ಣು ಬಿಟ್ಟಂತಾಯಿತು. ವ|| ಆಗ ಅಶ್ವತ್ಥಾಮನು ಚಿನ್ನದ ಗರಿಗಳಿಂದ ಗುರುತುಮಾಡಲ್ಪಟ್ಟ ಹಿಂಭಾಗವನ್ನುಳ್ಳ ಭೀಮನ ಬಾಣಗಳ ಪೆಟ್ಟಿನಿಂದ ಸಾಯುವಷ್ಟು ವ್ಯಥೆಪಟ್ಟು ಭೋರೆಂದು ಸುರಿಯುತ್ತಿರುವ ಬಿಸಿರಕ್ತವು ಕಣ್ಣನ್ನು ಆವರಿಸಲು ಅದನ್ನು (ಬೆರಳಿನಿಂದ) ಸೀಂಟಿ ಕಳೆದು ಬಾಣದ ಮಧ್ಯದವರೆಗೂ ನಾಟಿಕೊಂಡಿದ್ದ ಹರಿತವಾದ ಬಾಣಗಳನ್ನು ಗರಿಗಳೊಡನೆ ಕಿತ್ತು ಬಿಸಾಡಿದನು. ೭೫. ತನ್ನ ಶಕ್ತಿಯೆಷ್ಟಿದೆ, ಬಿಲ್ವಿದ್ಯೆಯ ಬಲವೆಷ್ಟಿದೆ ಅಷ್ಟನ್ನೂ ಇಲ್ಲಿ ಸಂಪೂರ್ಣವಾಗಿ ಹೊಂದಾಣಿಕೆಯಾಗುವ ಹಾಗೆ ಸೇರಿಸಿದೆ

ವ|| ಆಗಳ್ ಸವ್ಯಾಪಸವ್ಯ ಭ್ರಾಂತೋದ್ಭ್ರಾಂತಂಗಳೆಂಬ ರಥಕಲ್ಪ ವಿಶೇಷ ವಿನ್ಯಾಸಂಗಳ ನಱದು ಸಾರಥಿಗಳ್ ಚೋದಿಸುವಾಗಳಿರ್ವರ ರಥಂಗಳುಂ ಸುಟ್ಟುರೆಯೊಳಗಣ ತಱಗೆಲೆಯಂತೆ ತಿಱ್ರನೆ ತಿರಿಯೆ-

ಚಂ|| ಮುಳಿಸಳುರ್ದೆಯ್ದೆ ಕಣ್ಗಳೊಳೆ ಪೀರ್ವವೊಲುಗ್ರಶರಾನಲಾರ್ಚಿಯಿಂ
ದಗುರ್ವವೊಲೆಯ್ದೆ ಚೋದಿಸಿ ವರೂಥಮನಿಂ ಬಿರ್ದುಕಾಡೆಯೆಂದಸುಂ|
ಗೊಳೆ ಮೊನೆಯಂಬುಗಳ್ ತನುವನಳ್ದಳಿವೋಪಿನಮೆಚ್ಚು ನೆತ್ತರು
ಚ್ಚಳಿಸಿ ರಥಂಗಳೊಳ್ ಕೊಳಗೊಳುತ್ತಿರೆ ಕಾದಿದರೊರ್ವರೊರ್ವರೊಳ್|| ೭೬

ವ|| ಅಂತು ಮುಳಿಸಿನ ಮೋಪಿನ ಗಂಡಮಚ್ಚರದ ಮೆಚ್ಚುವಣಿಗೆಯಂಕಕಾಱರೆಕ್ಕತುಳ ಕ್ಕೆಕ್ಕೆಯಿಂ ಸೂೞೇಱೞವಂತೊರ್ವರೊರ್ವರೋಳ್ ಕಾದೆ-

ಉ|| ಸೂತರುರುಳ್ವಿನಂ ರಥ ತುರಂಗಮರಾಜಿ ಸುರುಳ್ವಿನಂ ಚಳ
ತ್ಕೇತುಗಳೆತ್ತಮವ್ವಳಿಸಿ ಬೀೞನಮಳ್ಕು ಕಾದಿ ಬಾಣ ಸಂ|
ಘಾತದ ಕೋಳೊಳುಚ್ಚಳಿಪ ನೆತ್ತರೊಳಿಚ್ಚಿಯೆ ಕೆಟ್ಪೊಡಾತನ
ತ್ತೀತನುಮಿತ್ತ ಜೋಲ್ದ ರಣಮಂ ಪೊಗೞುತ್ತಿರೆ ದೇವಕೋಟಿಗಳ್|| ೭೭

ವ|| ಆಗಳ್ ಧರ್ಮರಾಜನುಮಿತ್ತ ರಾಜರಾಜನುಮೊಂದೊರ್ವರಂ ಕೆಯ್ಕೊಂಡು ತಂತಮ್ಮ ರಥಂಗಳನೇಱಸಿಕೊಂಡುಯ್ದರಿತ್ತ ಕರ್ಣನುಂ ಪಾಂಡವಬಳ ಜಳನಿಯಂ ಬಡಬಾನಳನಳುರ್ವಂತಳುರ್ದು ತನ್ನೊಳ್ ಪೋಗದೆ ಪೆಣೆದ ಪ್ರಭದ್ರಕ ಬಲಮೆಲ್ಲಮಂ ಕೊಂದನನ್ನೆಗಮಿತ್ತ ಭೀಮಾಶ್ವತ್ಥಾಮರಿರ್ವರುಂ ಚೇತರಿಸಿ ಸೂತ ಪತಾಕಾ ತುರಂಗಮೋಪೇತ ರಥಂಗಳನೇಱಕೊಂಡು ಮತ್ತಮೊರ್ವರೊರ್ವರನಱಸುತ್ತುಂ ಸಂಗ್ರಾಮಭೂಮಿಯೊಳಗನೆ ಬರೆ ಜರಾಸಂಧನ ಮಗಂ ಕ್ಷೇಮಧೂರ್ತಿ ತಮ್ಮಯ್ಯನಂ ಕೊಂದ ಪಗೆಯಂ ನೆನೆದು ತನ್ನೇಱದ ಮತ್ತಹಸ್ತಿಯಂ ಭೀಮಸೇನಂಗೆ ತೋಱ ಕೊಟ್ಟಾಗಳ್-

ಕಂ|| ಬಡಿಗೊಂಡು ಮಸಗಿ ಬೈತ್ರಮ
ನೊಡೆವ ಮಹಾ ಮಕರದಂತೆ ಕರಿಘಟೆಗಳನಾ|
ರ್ದುಡಿಯೆ ಬಡಿದಾನೆವೆರಸಾ
ಗಡೆ ಕೊಂದಂ ಕ್ಷೇಮಧೂರ್ತಿಯಂ ಪವನಸುತಂ| ೭೮

ಎನ್ನುವ ಹಾಗೆ ಅಶ್ವತ್ಥಾಮನು ಪ್ರಳಯಾಗ್ನಿಯ ಮತ್ತು ಪ್ರಳಯಕಾಲದ ಯಮನ ರೂಪವುಳ್ಳವನಾದನು. ವ|| ಆಗ ಸವ್ಯ, ಅಪಸವ್ಯ, ಭ್ರಾಂತ ಮ್ತತು ಅದ್ಭ್ರಾಂತಗಳೆಂಬ ರಥವಿದ್ಯೆಯ ನಾನಾರೀತಿಗಳನ್ನು ತಿಳಿದು ಸಾರಥಿಗಳು ನಡೆಸುತ್ತಿರಲು ಇಬ್ಬರ ತೇರುಗಳೂ ಸುಂಟರುಗಾಳಿಯ ಮಧ್ಯದಲ್ಲಿರುವ ತರಗೆಲೆಯ ಹಾಗೆ ತಿರ್ರನೆ ಸುತ್ತುತ್ತಿದ್ದುವು. ೭೬. ಕೋಪವು ಹರಡಿ ಕಣ್ಣುಗಳಿಂದಲೇ ಕುಡಿಯುವ ಹಾಗೆ ಭಯಂಕರವಾದ ಬಾಣಾಗ್ನಿಯ ಜ್ವಾಲೆಯಿಂದ ಸುಡುವ ಹಾಗೆ ರಥವನ್ನು ಹತ್ತಿರಕ್ಕೆ ನಡೆಸಿ ‘ಇನ್ನು ನೀನು ಬದುಕಲಾರೆ’ ಎಂದು ಮೊನಚಾದ ಬಾಣಗಳು ಪ್ರಾಣಾಪಹಾರಮಾಡುವಂತೆ ಶರೀರವನ್ನು ನಾಟಿ ನಾಶವಾಗುತ್ತಿರಲು ಬಾಣ ಪ್ರಯೋಗಮಾಡಿ ರಕ್ತವು ಚಿಮ್ಮಿ ರಥದಲ್ಲಿಯೇ ಕೊಳವಾಗುತ್ತಿರಲು ಒಬ್ಬರೊಡನೊಬ್ಬರು ಕಾದಿದರು. ವ|| ಹಾಗೆ ಕೋಪದ, ಆಸಕ್ತಿಯ, ಪೌರುಷದ, ಮಾತ್ಸರ್ಯದ, ಪರಸ್ಪರ ಮೆಚ್ಚಿಗೆಯುಳ್ಳ ಜಟ್ಟಿಗಳು ಮಲ್ಲಯುದ್ಧಕ್ಕೆ ಅಂಕಕಾರರು ಮೇಲಿಂದ ಮೇಲಕ್ಕೆ ಸರದಿಯ ಪ್ರಕಾರ ಹತ್ತಿ ಇಳಿದು ಯುದ್ಧಮಾಡುವ ಹಾಗೆ ಒಬ್ಬರೊಡನೊಬ್ಬರು ಕಾದಿದರು ೭೭. ಸಾರಥಿಗಳು ಉರುಳಿ ಬೀಳುವ ಹಾಗೆಯೂ ರಥಕುದುರೆಗಳ ಗುಂಪು ಸುರುಳಿಕೊಳ್ಳುವ ಹಾಗೆಯೂ ಚಲಿಸುತ್ತಿರುವ ಧ್ವಜಗಳು ಎಲ್ಲ ಕಡೆಗೂ ಹಾರಿ ಬೀಳುತ್ತಿರುವಂತೆಯೂ ಉಗ್ರವಾಗಿ ಕಾದಿ ಬಾಣಸಮೂಹದ ತಿವಿತದಿಂದ ಚಿಮ್ಮಿದ ರಕ್ತದಲ್ಲಿ ಇಚ್ಛಾಶಕ್ತಿಯೇ ನಷ್ಟವಾಗಲು ಆ ಭೀಮನು ಆ ಕಡೆ, ಈ ಅಶ್ವತ್ಥಾಮನು ಈ ಕಡೆ ಜೋತುಬಿದ್ದ ಯುದ್ಧವನ್ನು ದೇವತೆಗಳ ಸಮೂಹವು ಹೊಗಳುತ್ತಿದ್ದಿತು. ವ|| ಆ ಕಡೆ ಧರ್ಮರಾಜನೂ ಈ ಕಡೆ ಕೌರವನೂ ಒಬ್ಬೊಬ್ಬರನ್ನೂ ಕರೆದುಕೊಂಡು ತಮ್ಮ ರಥವನ್ನು ಹತ್ತಿಸಿಕೊಂಡು ಹೋದರು. ಕರ್ಣನು ಪಾಂಡವಸಮುದ್ರವನ್ನು ಬಡಬಾಗ್ನಿಯು ಸುಡುವಂತೆ ಸುಟ್ಟು ತನ್ನನ್ನು ಬಿಟ್ಟುಹೋಗದೆ ತನ್ನಲ್ಲಿಯೇ ಹೆಣೆದುಕೊಂಡಿದ್ದ ಪ್ರಭದ್ರಕಬಲವೆಲ್ಲವನ್ನೂ ಕೊಂದನು. ಅಷ್ಟರಲ್ಲಿ ಈ ಕಡೆ ಭೀಮಾಶ್ವತ್ಥಾಮರು ಚೇತರಿಸಿ ಸಾರಥಿ ಧ್ವಜ ಮತ್ತು ಕುದುರೆಗಳಿಂದ ಕೂಡಿದ ರಥಗಳನ್ನು ಹತ್ತಿಕೊಂಡು ಪುನ ಒಬ್ಬರು ಮತ್ತೊಬ್ಬರನ್ನು ಹುಡುಕುತ್ತ ಯುದ್ಧಭೂಮಿಯಲ್ಲಿ ಬರುತ್ತಿರಲು ಜರಾಸಂಧನ ಮಗನಾದ ಕ್ಷೇಮಧೂರ್ತಿಯು ತಮ್ಮ ತಂದೆಯನ್ನು ಕೊಂದ ಶತ್ರುತ್ವವನ್ನು ಜ್ಞಾಪಿಸಿಕೊಂಡು ತಾನು ಹತ್ತಿದ್ದ ಮದ್ದಾನೆಯನ್ನು ಭೀಮನ ಕಡೆ ಛೂಬಿಟ್ಟನು. ೭೮. ಪೆಟ್ಟುತಿಂದು ರೇಗಿ ಹಡಗನ್ನು ಮುರಿಯುವ ದೊಡ್ಡ ಮೊಸಳೆಯ ಹಾಗೆ ಭೀಮಸೇನನು ಆನೆಯ ಸಮೂಹವನ್ನು ನಾಶಮಾಡುವಂತೆ ಹೊಡೆದು, ಆರ್ಭಟಮಾಡಿ, ಕ್ಷೇಮಧೂರ್ತಿಯನ್ನು ಆಗಲೇ ಕೊಂದು

ವ|| ಅಂತು ಕ್ಷೇಮಧೂರ್ತಿಯಂ ಕ್ಷೇಮದಿಂ ಕೊಂದನನ್ನೆಗಮತ್ತ ಮರುನ್ನಂದನನ ನಱಸುತ್ತುಂ ಬರ್ಪಶ್ವತ್ಥಾಮನಂ ಪಾಂಡ್ಯನೆಡೆಗೊಂಡು ಬಂದು ಮಾರ್ಕೊಂಡು-

ಕಂ|| ನೀನಲ್ಲದೆನ್ನ ಶರಸಂ
ಧನಮನಾನಲ್ಕೆ ನೆಱಮರಿಲ್ಲೀ ಪಡೆಯೊಳ್|
ನೀನಿಸನಾಂಪುದೆಂಬುದು
ಮಾನಲ್ಲದೆ ನಿನ್ನನಾಂಪ ಗಂಡರುಮೊಳರೇ|| ೭೯

ಎನೆ ಬೆಳ್ಮಸೆಯಂಬಿನ ಸರಿ
ಮೊನೆಯಂಬಿನ ಸೋನೆ ಪಾಯಂಬಿನ ತಂದಲ್|
ಘನಮಾದುದಲ್ಲಿ ಕಿತ್ತಂ
ಬಿನ ಬಡಪಮಿದೆನಿಸಿ ಪಾಂಡ್ಯನಂಬಂ ಕದಂ|| ೮೦

ಕದೊಡವನಿತುಮನಂತಂ
ತುಱದೆಚ್ಚು ಕಡಂಗಿ ತಱದು ಶರವರ್ಷದಿನಂ|
ದಱಯೆ ಕಡಿಕೆಯ್ದು ಬಿಡದೆಡೆ
ಮಱನಂ ಮಾಡಿದುವು ಗುರುತನೂಜನ ಕಣೆಗಳ್|| ೮೧

ಎಡೆವಱದೊಳೆಱಗಿ ಬಱಸಿಡಿ
ಲಿಡುಮುಡುಕನೆ ಪೊಡೆದುದೆನಿಸಿ ಪಾಂಡ್ಯನ ರಥದ|
ಚ್ಚುಡಿದೞ್ಗೆ ತೞ್ಗೆ ಕೊಂಡುವು
ಕಡುಗೂರಿದುವೆನಿಪ ಗುರುತನೂಜನ ಕಣೆಗಳ್|| ೮೨

ವಿರಥಂ ಪಾಂಡ್ಯಂ ಕೋಪ
ಸ್ಪುರಿತಾಧರನುಡಿದು ಕೆಡೆಯೆ ಪೞಯಿಗೆಯುಂ ಬಿ|
ಬ್ಬರ ಬಿರಿಯೆ ಗುರುತನೂಭವ
ನುರಮಂ ಬಿರಿಯೆಚ್ಚು ಬೆಂಗೆವಂದಂ ಗಜದಾ|| ೮೩

ವ|| ಅಂತು ತನ್ನ ನಚ್ಚುವ ಕೆಯ್ದುಗಳನಿತು ಪೊಳೆಯೆ ಮಸೆದೊಟ್ಟಿ ಮತ್ತಹಸ್ತಿಯನಣೆದು ತೋಱಕೊಟ್ಟಾಗಳ್-

ಉ|| ಈ ಮದದಂತಿಯೆೞ್ತರವುಮೀತನ ಶೌರ್ಯಮುಮೀ ಮಹೋಗ್ರ ಸಂ
ಗ್ರಾಮದೊಳೆನ್ನುಮಂ ಚಳಿಯಿಸಲ್ ಬಗೆದಪ್ಪುದು ಪಾಂಡ್ಯನನ್ನನಿ|
ನ್ನೀ ಮಹಿಯೊಳ್ ಪೆಱಂ ಕಲಿಯೆ ನೆಟ್ಟನಿದಿರ್ಚುವ ನಿಚ್ಚಟಿಕ್ಕೆಯೊಳ್
ಭೀಮನುಮಿನ್ನನಲ್ಲನೆನೆ ಪೋಲ್ವೆಗಿವಂಗೆಣೆ ಗಂಡರೆಂಬರಾರ್|| ೮೪

ಹಾಕಿದನು. ವ|| ಅಷ್ಟರಲ್ಲಿ ಆ ಕಡೆ ಭೀಮನನ್ನು ಹುಡುಕುತ್ತ ಬರುತ್ತಿದ್ದ ಅಶ್ವತ್ಥಾಮನನ್ನು ಪಾಂಡ್ಯನು ಮಧ್ಯೆ ಬಂದು ಎದುರಿಸಿ

೭೯. ನನ್ನ ಬಾಣಪ್ರಯೋಗವನ್ನು ಎದುರಿಸುವುದಕ್ಕೆ ನಿನ್ನನ್ನು ಬಿಟ್ಟು ಈ ಸೈನ್ಯದಲ್ಲಿ ಸಮರ್ಥರಾದವರು ಬೇರೆ ಯಾರೂ ಇಲ್ಲ, ನೀನೇ ಒಂದಿಷ್ಟು ತಾಳುವುದು ಎನ್ನಲು ನಾನಲ್ಲದೇ ನಿನ್ನನ್ನು ಪ್ರತಿಭಟಿ ತಕ್ಕ ಶೂರರೂ ಇದ್ದಾರೆಯೇ? ೮೦. ಎನ್ನಲು ಬೆಳ್ಳಗೆ ಮಸೆದಿರುವ ಬಾಣದ ಮಳೆ, ಮೊನಚಾದ ಬಾಣಗಳ ತುಂತುರುಮಳೆ ಇವು ಇತ್ಶಯವಾದವು. ಅಲ್ಲಿಯ ಕಿರಿಯಬಾಣಗಳ ನಿರಂತರವಾದ ಮಳೆ ಇದು ಎನಿಸಿ ಪಾಂಡ್ಯನು ಬಾಣಗಳನ್ನು ಕರೆದನು. ೮೧. ಅವಷ್ಟನ್ನೂ ಹಾಗೆ ಹಾಗೆಯೇ ಉತ್ಸಾಹಗೊಂಡು ಜಾಗ್ರತೆಯಾಗಿ ಕತ್ತರಿಸಿ ಬಾಣದ ಮಳೆಯಿಂದ (ಶರವರ್ಷ) ಸಂಪೂರ್ಣವಾಗಿ ತುಂಡರಿಸಿ, ನಿಲ್ಲದೆ ಅಶ್ವತ್ಥಾಮನ ಬಾಣಗಳು ನಡುವೆ ಬರಗಾಲವನ್ನು ಉಂಟುಮಾಡಿದುವು. ೮೨. ಬರಗಾಲದ ಮಧ್ಯದಲ್ಲಿ ಬರಸಿಡಿಲು ಇಡುಕುಮುಡುಕುಗಳಲ್ಲಿಯೇ ಶಬ್ದಮಾಡಿ ಹೋಯಿತು ಎನ್ನಿಸಿ ಅಶ್ವತ್ಥಾಮನ ಬಹಳ ಹರಿತವಾದ ಬಾಣಗಳು ಪಾಂಡ್ಯನ ರಥದ ಅಚ್ಚುಮುರಿದು ನಾಶವಾಗಿ ಕುಸಿಯುವಂತೆ ಹೊಡೆದುವು.

೮೩. ರಥವಿಲ್ಲದ ಕೋಪದಿಂದ ನಡುಗುತ್ತಿರುವ ತುಟಿಯಳ್ಳ ಪಾಂಡ್ಯನು ಮುರಿದು ಬೀಳಲು ಬಾವುಟವೂ ಪೂರ್ಣವಾಗಿ ಬಿರಿಯಲು (ಪಾಂಡ್ಯನು) ಅಶ್ವತ್ಥಾಮನ ಎದೆಯನ್ನೂ ಬಿರಿದುಹೋಗುವಂತೆ ಹೊಡೆದು ಆನೆಯ ಬೆನ್ನಿಗೆ ಬಂದನು. ವ|| ತಾನು ನಂಬಿದ್ದ ಆಯುಧಗಳೆಲ್ಲ ಹೊಸತಾಗಿ ಮಸೆಯಲ್ಪಟ್ಟು ರಾಶಿಯಾಗಿ ಹೊಳೆಯುತ್ತಿರಲು ಮದ್ದಾನೆಯನ್ನು ಅಂಕುಶದಿಂದ ತಿವಿದು ಪಾಂಡ್ಯನು ಅಶ್ವತ್ಥಾಮನ ಮೇಲೆ ಛೂಬಿಟ್ಟನು. ೮೪. ಈ ಮದ್ದಾನೆಯ ಬರುವಿಕೆಯೂ ಈತನ ಪರಾಕ್ರಮವೂ ಈ ಘೋರಯುದ್ಧದಲ್ಲಿ ನನ್ನನ್ನು ಶಕ್ತಿಹೀನನನ್ನಾಗಿ

ವ|| ಎಂಬಿನ್ನೆಗಂ ಪಾಂಡ್ಯನಶ್ವತ್ಥಾಮನ ರಥಮಂ ಮುಟ್ಟೆವಂದು-

ಕಂ|| ವಿಳಯಾನಳ ವಿಳಸನ ವಿ
ಸುಳಿಂಗ ಸಂಘಾತದಿಂ ತಗುಳ್ದಡರ್ವನಿತೊಂ|
ದಳವಿಯ ತೋಮರದಿಂದಿಡೆ
ಪೊಳೆವಸ್ತ್ರದೆ ಗುರುತನೂಜನೆಡೆಯೊಳೆ ಕಡಿದಂ|| ೮೫

ವ|| ಅಂತದಂ ಕಡಿದು ಕೂರಿದುವುಂ ನೇರಿದುವುದಮಪ್ಪಯ್ದಮೋಘಾಸ್ತ್ರಂಗಳಂ ಬಾಣಯಿಂದುರ್ಚಿಕೊಂಡು ತನ್ನ ಮನದೊಳೆ ಸಮಕಟ್ಟಿಕೊಂಡೆಚ್ಚಾಗಳ್-

ಕಂ|| ಕರಿಕರಮುಂ ಮಾವಂತನ
ಕರಮುಂ ತತ್ಪಾಂಡ್ಯಶಿರಮುಮೊಡನುರುಳೆ ಭಯಂ|
ಕರಮುಮನುರ್ವಿಗಗುರ್ವುಮ
ನೆರಡುಂ ಪಡೆಗಳ್ಗೆ ತೋಱದಂ ಗುರುತನಯಂ|| ೮೬

ವ|| ಅನ್ನೆಗಂ ಸಂಸಪ್ತಕನಿಕಾಯಮನತಿ ನಿಶಿತ ಸಾಯಕನಿಕಾಯದಿಂ ನಿಶ್ಯೇಷಮಾಗೆ ಮಾೞ್ಪ ಸಾಮಂತಚೂಡಾಮಣಿ ಕೌರವಬಲದ ಕಳಕಳಮಂ ಕೇಳ್ದು ಮನಪವನವೇಗದಿಂ ಜವನೆ ಬರ್ಪಂತೆ ಬಂದು ತಾಗಿದಾಗಳಕ್ಷೋಹಿಣೀ ನಾಯಕಂ ದಂಡಧಾರಂ ಗಂಡಗುಣಕ್ಕಾಧಾರಮಾಗಿ ಮದಗಳಿತ ಗಂಡ ಪ್ರಚಂಡ ಮದವೇತಂಡಮನಣೆದು ಬಿಟ್ಟಿಕ್ಕಿದಾಗಳ್-

ಉ|| ಕಾದಲಿದಿರ್ಚಿ ಬಂದ ಪಗೆ ಸಂಪಗೆಯಂತೆ ಶಿಳೀಮುಖಕ್ಕೆ ಗೆಂ
ಟಾದುದಿದೊಂದೆ ಸಿಂಧುರದೊಳಿಂತಿವನೊರ್ವನೆ ತಳ್ತನಾದೊಡೇ|
ನಾದುದೋ ಬಲ್ಲೆನೆಂದು ಮುಳಿದೆಚ್ಚೊಡೆ ಸೌಳನೆ ಸೀಳ್ದು ಪಚ್ಚವೋ
ಲಾದುದು ದಂಡಧಾರ ಗಜಮಾತನೊಡಲ್ವೆರಸಂದು ಪಾರ್ಥನಿಂ|| ೮೭

ವ|| ಅಂತಾತಂ ಕೃತಾಂತನಿವಾಸಮನೆಯ್ದುವುದುಂ-

ಕಂ|| ಇನ್ನಿನಿಸನಿರ್ದೇಡಾಜಿಯೊ
ಳೆನ್ನ ತನೂಜನುಮನೞಪಂ ನರನದನಿ|
ನ್ನಾನ್ನೋಡಲಾನೆಂಬವೊ
ಲನ್ನೆಗಮಸ್ತಾಚಳಸ್ಥನಾದಂ ದಿನಪಂ|| ೮೮

ಮಾಡಲು ಯೋಚನೆ ಮಾಡುತ್ತಿದೆಯಲ್ಲವೇ? ಪಾಂಡ್ಯನಂತಹವನೂ ಈ ಭೂಮಿಯಲ್ಲಿ ಇನ್ನೊಬ್ಬ ಶೂರನಿರುವನೇ? ನೇರವಾಗಿ ವೈರಿಯನ್ನು ಎದುರಿಸುವ ಸ್ಥೆ ರ್ಯದಲ್ಲಿ ಭೀಮನು ಕೂಡ ಇಂತಹ ಶಕ್ತಿಯುಳ್ಳವನಲ್ಲ, ಎನ್ನುವಾಗ ಹೋಲಿಕೆಮಾಡಲು ಇವನಿಗೆ ಸಮಾನರಾದವರು ಯಾರು ಇದ್ದಾರೆ? ವ|| ಎನ್ನುವಷ್ಟರಲ್ಲಿ ಪಾಂಡ್ಯನು ಅಶ್ವತ್ಥಾಮನ ತೇರಿನ ಸಮೀಪಕ್ಕೆ ಬಂದು ೮೫. ಪ್ರಳಯಾಗ್ನಿಯ ಪ್ರಕಾಶಮಾನವಾದ ಕಿಡಿಗಳ ಸಮೂಹದಿಂದ ಹಿಂಬಾಲಿಸಿ ಮೇಲೇರುವಷ್ಟು ಶಕ್ತಿಯುಳ್ಳ ತೋಮರವೆಂಬ ಆಯುಧ (ದೊಡ್ಡಗದೆ) ಹೊಡೆಯಲು ಅಶ್ವತ್ಥಾಮನು ಮಧ್ಯಮಾರ್ಗದಲ್ಲಿಯೇ ಅದನ್ನು ಕತ್ತರಿಸಿದನು. ವ|| ಹಾಗೆ ಅದನ್ನು ಕತ್ತರಿಸಿ ಹರಿತವೂ ಸರಳವೂ ಆದ ಬೆಲೆಯೇ ಇಲ್ಲದ ಅಯ್ದು ಬಾಣಗಳನ್ನು ಬತ್ತಳಿಕೆಯಿಂದ ಸೆಳೆದುಕೊಂಡು ತನ್ನ ಮನಸ್ಸಿನಲ್ಲಿಯೇ ಹೇಗೆ ಪ್ರಯೋಗಮಾಡಬೇಕೆಂದು ಸಿದ್ಧಾಂತಮಾಡಿಕೊಂಡು ಹೊಡೆದನು. ೮೬. ಆನೆಯ ಸೊಂಡಿಲೂ ಮಾವಟಿಗನ ಕೈಯೂ ಆ ಪಾಂಡ್ಯನ ತಲೆಯೂ ಜೊತೆಯಾಗಿಯೇ ಉರುಳಲು ಅಶ್ವತ್ಥಾಮನು ಲೋಕಕ್ಕೆ ಭಯಂಕರತ್ವವನ್ನೂ ಅದ್ಭುತವನ್ನೂ ಜೊತೆಯಲ್ಲಿಯೇ ತೋರಿದನು. ವ|| ಅಷ್ಟರಲ್ಲಿ ಸಂಸಪ್ತಕಸಮೂಹವನ್ನು ಬಹಳ ಹರಿತವಾದ ಬಾಣಗಳ ಸಮೂಹದಿಂದ ಸ್ವಲ್ಪವೂ ಉಳಿಯದ ಹಾಗೆ ಮಾಡುವ ಸಾಮಂತ ಚೂಡಾಮಣಿಯಾದ ಅರ್ಜುನನು, ಕೌರವಸೈನ್ಯದ ಕಳಕಳಶಬ್ದವನ್ನು ಕೇಳಿ ಮನೋವೇಗ ವಾಯುವೇಗದಿಂದ ಯಮನೇ ಬರುವ ಹಾಗೆ ಬಂದು ತಾಗಿದನು. ಅಕ್ಷೋಹಿಣೀಸೈನ್ಯದ ಒಡೆಯನಾದ ದಂಡಧಾರನು ಪೌರುಷಗುಣಕ್ಕೆ ಆಶ್ರಯವಾಗಿ ಮದೋದಕವು ಸುರಿಯುತ್ತಿರುವ ಕಪೋಲವುಳ್ಳ ಮದ್ದಾನೆಯನ್ನು ತಿವಿದು ಛೂಬಿಟ್ಟನು. ೮೭. ಅರ್ಜುನನೊಡನೆ ಕಾದಲು ಎದುರಸಿ ಬಂದ ಶತ್ರುವು ದುಂಬಿಗೆ ಎದುರಾದ ಸಂಪಗೆಯ ಹೂವಿನಂತೆ ದೂರವಾಯಿತು. ಇದೊಂದೇ ಆನೆಯೊಡನೆ ಇವನೊಬ್ಬನೆ ಪ್ರತಿಭಟಿಸಿದರೇನಾಯಿತು. ಇದಕ್ಕೆ ಪರಿಹಾರವನ್ನು ನಾನು ತಿಳಿದಿದ್ದೇನೆ. ಎಂದು ಕೋಪಿಸಿ ಹೊಡೆಯಲು ಅರ್ಜುನನಿಂದ ದಂಡಧಾರನ ಶರೀರದೊಡನೆ ಆ ಆನೆಯು ಸೌಳೆಂದು ಸೀಳಿ ವಿಭಾಗಿಸಿದ ಹಾಗಾಯಿತು. ವ|| ಹಾಗೆ ಅವನು ಯಮನ ಮನೆಯನ್ನು ಸೇರಲಾಗಿ ೮೮. ಇನ್ನು ಸ್ವಲ್ಪ

ವ|| ಅಂತು ಪತಂಗಮಂಡಲಮಪರಗಿರಿತಟಮನೆಯ್ದುವುದುಮೆರಡುಂ ಪಡೆಗಳಪಹಾರ ತೂರ್ಯಂಗಳಂ ಬಾಜಿಸಿ ತಂತಮ್ಮ ಬೀಡುಗಳ್ಗೆ ಪೋದುವಾಗಳ್ ರಾಜರಾಜನಲ್ಲಿಗಂಗರಾಜಂ ಬಂದು ಹಯೋಪಾಯಕುಶಲರಪ್ಪ ಗಾಂಗೇಯರಱಪಿದ ಮಾತನೇಕಾಂತ ದೊಳಱಪುವುದುಂ ತ್ರಿಣೇತ್ರನೊಳ್ ಕಲ್ತಶ್ವಹೃದಯದೊಳಂ ರಥಕಲ್ಪದೊಳಂ ಶಲ್ಯಂ ಮುಂರಾಂತಕಂಗಂ ಪ್ರವೀಣನಪ್ಪುದಱಂದಾತನ ನೆಂತಾನುಮೊಡಂಬಡೆ ನುಡಿದು ನಿನಗೆ ಸಾರಥಿ ಮಾಡುವೆನೆಂದು ದಿನಕರತನೂಜನಂ ಬೀಡಿಂಗೆ ಪೋಗಲ್ವೇೞ್ದು ಪೊನ್ನ ಪಣ್ಣುಗೆಯ ಪಿಡಿಯನೇಱ ದಿನಕರನ ಬೞದಪ್ಪಿದ ಕಿರಣಂಗಳ್ ಕೞ್ತಲೆಯಂ ಕಂಡಳ್ಕಿ ತನ್ನ ಮಯಂ ಪೊಕ್ಕಂತೆ ಕೆಯ್ದೀವಿಗೆಗಳ್ ಬೆಳಗೆ ಕಿಱದಾನುಂ ಮಾನಸರ್ವೆರಸು ರಾಜರಾಜಂ ಮದ್ರರಾಜನ ಮನೆಗೆ ಬರ್ಪುದುಮಾತನತ್ಯಂತ ಸಂಭ್ರಮಾಕ್ರಾಂತಹೃದಯನಾಗಿ ಬೇಗಮಿದಿರೇೞೆ-

ಮಲ್ಲಿಕಾಮಾಲೆ|| ಅಂತೆ ಕುಳ್ಳಿರಿರಪ್ಪೊಡಿಂ ನಿಮಗಾಣೆಯೆಂದಿರವೇೞಳಾ
ಕಾಂತನುಂ ತೊಡೆಸೋಂಕಿ ಕುಳ್ಳಿರೆ ಬಾೞ್ತೆಯುಳ್ಳೊಡೆ ನೀನೆ ಬ
ರ್ಪಂತುಟಾದುದೆ ಪೇೞ ನೀಂ ಬಿೞಯಟ್ಟಲಾಗದೆ ಕೆಮ್ಮನಿ
ನ್ನೆಂತುಮೇಂ ಮನೆವಾೞ್ತೆಯಂ ಬೆಸಸಲ್ಕೆ ಬಂದೆಯಿಳಾಪಾ.. ೮೯

ಕಂ|| ಬೆಸಸೆನೆಯುಂ ನುಡಿಯಲ್ ಶಂ
ಕಿಸಿದಪೆ ನಾನೆಂದೊಡೇಕೆ ಶಂಕಿಸುವೈ ನೀಂ|
ಬೆಸವೇೞೆನೆ ಜಯವಧು ಕೂ
ರ್ತೊಸೆದಿರ್ಕುಂ ಮಾವ ನಿಮ್ಮ ದಯೆಯಿಂದೆಮ್ಮಂ|| ೯೦

ಕಂ|| ಪುಸಿಯೆನೆ ರಥಮಂ ಹರಿ ಚೋ
ದಿಸುವಂತೆವೊಲಿರ್ದದೆಂತು ನರನಂ ಗೆಲಿಪಂ|
ವಿಸಸನದೊಳಂತೆ ನೀಮುಂ
ಪೆಸರಂ ಕರ್ಣಂಗೆ ಮಾಡಿ ಗೆಲ್ಲಂಗೊಳ್ಳಿಂ|| ೯೧

ವ|| ಎಂಬುದುಂ ಮದ್ರರಾಜನುಮ್ಮಚ್ಚರದೊಳುಮ್ಮನೆ ಬೆಮರ್ತು ಕಿನಿಸಿ ಕಿಂಕಿಱವೋಗಿ-

ಚಂ|| ಕಲಿಯನೆ ಪಂದೆ ಮಾೞ್ಪ ಕಡುವಂದೆಯನೊಳ್ಗಲಿ ಮಾೞ್ಪ ತಕ್ಕನಂ
ಪೊಲೆಯನೆ ಮಾೞ್ಪ ಮುಂ ಪೊಲೆಯನಂ ನೆ ತಕ್ಕನೆ ಮಾೞ್ಪ ತಮ್ಮೊಳ|
ಗ್ಗಲಿಸಿ ಪೊದೞ್ದು ಪರ್ವಿದವಿವೇಕತೆಯಿಂ ನೃಪಚಿತ್ತವೃತ್ತಿ ಸಂ
ಚಲಮದಱಂದಮೋಲಗಿಸಿ ಬಾೞ್ವುದೆ ಕಷ್ಟಮಿಳಾನಾಥರಂ|| ೯೨

ಕಾಲವಿದ್ದರೆ ಯುದ್ಧದಲ್ಲಿ ಅರ್ಜುನನು ನನ್ನ ಮಗನಾದ ಕರ್ಣನನ್ನೂ ಸಾಯಿಸುತ್ತಾನೆ. ಇದನ್ನು ನಾನು ನೋಡಲಾರೆ ಎನ್ನುವ ಹಾಗೆ ಅಷ್ಟರಲ್ಲಿ ಸೂರ್ಯನು ಮುಳುಗಿದನು. ವ|| ಯುದ್ಧವನ್ನು ನಿಲ್ಲಿಸಲು ಸೂಚನೆಕೊಡುವ ವಾದ್ಯವನ್ನು ಬಾಜಿಸಲು ಎರಡು ಸೈನ್ಯಗಳೂ ತಮ್ಮ ತಮ್ಮ ಬೀಡುಗಳಿಗೆ ತೆರಳಿದುವು. ಆಗ ದುರ್ಯೋಧನನಲ್ಲಿಗೆ ಕರ್ಣನು ಬಂದು ಅಶ್ವಶಾಸ್ತ್ರವನ್ನು ಚೆನ್ನಾಗಿ ತಿಳಿದ ಭೀಷ್ಮರು ತಿಳಿಸಿದ ಮಾತನ್ನು ರಹಸ್ಯವಾಗಿ ತಿಳಿಸಿದನು. ಮುಕ್ಕಣ್ಣನಾದ ಈಶ್ವರನಲ್ಲಿ ಕಲಿತ ಅಶ್ವಹೃದಯದಲ್ಲಿಯೂ ರಥಕಲ್ಪದಲ್ಲಿಯೂ ಶಲ್ಯನು ಶ್ರೀಕೃಷ್ಣನಿಗಿಂತಲೂ ಹೆಚ್ಚು ತಿಳಿದವನಾದುದರಿಂದ ಅವನನ್ನು ಹೇಗಾದರೂ ಮಾಡಿ ಒಪ್ಪುವ ಹಾಗೆ ಮಾಡಿ ನಿನಗೆ ಸಾರಥಿಯನ್ನಾಗಿ ಮಾಡುತ್ತೇನೆ ಎಂದು ಕರ್ಣನನ್ನು ಬೀಡಿಗೆ ಹೋಗಹೇಳಿದನು. ಚಿನ್ನದಿಂದ ಅಲಂಕಾರಮಾಡಿದ ಹೆಣ್ಣಾನೆಯನ್ನು ಹತ್ತಿಕೊಂಡು ಸೂರ್ಯನ ದಾರಿಯನ್ನು ತಪ್ಪಿದ ಕಿರಣಗಳು ಕತ್ತಲೆಯನ್ನು ಕಂಡು ಹೆದರಿ ತನ್ನ ಆಶ್ರಯವನ್ನು ಪ್ರವೇಶಿಸಿದ ಹಾಗೆ ಕೈದೀವಟಿಗೆಗಳು ಪ್ರಕಾಶಿಸಲು ಕೆಲವೇ ಪರಿಜನರೊಡನೆ ದುರ್ಯೋಧನನು ಮದ್ರರಾಜನಾದ ಶಲ್ಯನ ಮನೆಗೆ ಬಂದನು. ಅವನು ಅತ್ಯಂತ ಸಂಭ್ರಮದಿಂದ ಕೂಡಿದ ಮನಸ್ಸುಳ್ಳವನಾಗಿ ವೇಗದಿಂದ ಇದಿರಾಗಿ ಎದ್ದು ಬಂದನು- ೮೯. ಹಾಗೆಯೇ ಕುಳಿತುಕೊಳ್ಳಿ; ಇರದಿದ್ದರೆ ನಿಮ್ಮ ಮೇಲಾಣೆಯೆಂದು ಕುಳಿತುಕೊಂಡೇ ಇರಬೇಕೆಂದು ಹೇಳಿ ರಾಜನ ತೊಡೆಸೋಂಕಿನಷ್ಟು ಹತ್ತಿರ ಕುಳಿತುಕೊಂಡನು. “ಕಾರ್ಯವಿದ್ದರೆ ನೀನೇ ಬರುವ ಹಾಗಾಯಿತೇ ಹೇಳು, ನೀನು ದೂತರ ಮೂಲಕ ಹೇಳಿ ಕಳುಹಿಸ ಬಾರದಾಗಿತ್ತೇ? ಸುಮ್ಮನೆ ಇನ್ನು ನೀನೇ ಬಂದಮೇಲೆ ಹೇಗೆ? ರಾಜನೇ ಯಾವ ಗೃಹಕೃತ್ಯದ ಮಾತನ್ನು ತಿಳಿಸುವುದಕ್ಕೆ, ಆಜ್ಞೆ ಮಾಡುವುದಕ್ಕೆ ಬಂದಿರುವೆ” ೯೦. ಹೇಳು, ಎಂದರೂ ‘ನುಡಿಯುವುದಕ್ಕೆ ನಾನು ಸಂದೇಹಪಡುತ್ತೇನೆ’ ಎನ್ನಲು ‘ಏಕೆ ಸಂಕಿಸುತ್ತೀಯೆ. ಆಜ್ಞೆ ಮಾಡು’ ಎನ್ನಲು, ‘ಮಾವ, ಜಯಲಕ್ಷ್ಮಿಯ ನಿಮ್ಮದೆಯಯಿಂದ ನಮ್ಮನ್ನು ಪ್ರೀತಿಸಿ ಅನುರಾಗದಿಂದಿರುತ್ತಾಳೆ’ ೯೧. ಕೃಷ್ಣನು ಅರ್ಜುನನ ತೇರನ್ನು ನಡೆಸುವವನಂತೆ ನಟಿಸಿಕೊಂಡಿದ್ದು ಅರ್ಜುನನು ಗೆಲ್ಲುವಂತೆ ಹೇಗೆಮಾಡುವನೋ ಹಾಗೆಯೇ ಯುದ್ಧರಂಗದಲ್ಲಿ ನೀವೂ ಕೂಡ ಕರ್ಣನಿಗೆ ಹೆಸರನ್ನುಂಟುಮಾಡಿ ಗೆಲುವನ್ನು ಸಂಪಾದಿಸಿ ಕೊಡಬೇಕು’ ವ|| ಎನ್ನಲು ಶಲ್ಯನು ಕೋಪದಿಂದ ಬಿಸಿಬಿಸಿಯಾಗಿ ಬೆವರಿ ಕೆರಳಿ ಕಿಡಿ ಕಿಡಿಯಾದನು. ೯೨. ಶೂರನನ್ನು ಹೇಡಿಯಾಗಿ

ಅನುಪಮ ವಿಕ್ರಕ್ರಮಮುದಾರಗುಣಂ ಋತವಾಕ್ಯಮೆಂಬ ಪೆಂ
ಪೆನಲಿವು ಮೂ ನಾಲ್ಕೆ ಗುಣಮತ್ತ ಮದಾನ್ವಿತರಾಜಬೀಜಸಂ|
ಜನಿತಗುಣಂ ಮದಂ ಮದಮನಾಳ್ದವಿವೇಕತೆಯಿಂದಮಲ್ತೆ ತೊ
ೞನ ಮೊಲೆವಾಲನುಂಡ ಗುಣಮಿಂತಿವನಾರ್ ಕಿಡಿಪರ್ ನರೇಂದ್ರರೊಳ್|| ೯೩

ಉ|| ಪಿಂದೆ ಕಡಂಗಿ ತೇರನೆಸಗೆಂಬವನಂಬಿಗನಾಜಿ ರಂಗದೊಳ್
ಮುಂದೆ ಸಮಾನನಾಗಿ ಬೆಸದಿರ್ಪವನುಂ ತುಱುಕಾಱನಾಗೆ ಮ|
ತ್ಸ್ಯಂದನಚೋದನಕ್ರಮಮದುಂ ಪೊಲೆಯಂಗಮರ್ದಿಕುಮಂತುಟಂ
ನೀಂ ದಯೆಗೆಯ್ದು ಪೇೞ್ದೆಯಿದನಾರ್ ಪಡೆವರ್ ಫಣಿರಾಜಕೇತನಾ| ೯೪

ಕಂ|| ಎನಿತೊಲ್ಲದಿರ್ದೊಡಂ ಸ
ಜ್ಜನರುಂ ಪತಿಹಿತರುಮಱಯಮೇೞ್ಕುಂ ನೀನಿ|
ನ್ನೆನಿತಂ ಕೂರದೊಡಂ ನಿ
ನ್ನ ನುಡಿಯನಾನಾಜಿರಂಗದೊಳ್ ಮೀಱುವೆನೇ|| ೯೫

ವ|| ಎಂದು ನೊಂದು ನುಡಿದ ಮದ್ರರಾಜನ ನುಡಿಗೆ ಫಣಿರಾಜಕೇತನನಿಂತೆಂದಂ-

ಕಂ|| ನೀಮೆನಗಿನಿತಂ ಕೆಮ್ಮನೆ
ಮಾಮ ಮನಂ ನೊಂದು ಬೆಸಸಿದಿರ್ ಬಿನ್ನಪಮಂ|
ನೀಮವಧಾರಿಸಿಮೆಂತೆನೆ
ಸಾಮಾನ್ಯದ ಮನುಜನಲ್ಲನಂಗಮಹೀಶಂ|| ೯೬

ಕುಲಹೀನನೆ ಅಪ್ಪೊಡೆ ಕೇ
ವಲಬೋಧಂ ಪರಶುರಾಮನೇನೀಗುಮೆ ನಿ|
ರ್ಮಲಿಕುಲಂಗಲ್ಲದೆ ಪಿಡಿ
ಯಲ್ಲಲ್ಲದಂತಪ್ಪ ದಿವ್ಯಬಾಣಾವಳಿಯಂ|| ೯೭

ಮಣಿಕುಂಡಲಮುಂ ಕವಚಂ
ಮಣಿಯದ ಚಾರಿತ್ರಮುಗ್ರತೇಜಮುಮೀಯೊ|
ಳ್ಗುಣಮುಂ ಕಲಿತನಮುಮವೇಂ
ಪ್ರಣತಾರೀ ಸೂತಸುತನೊಳೊಡವುಟ್ಟುಗುಮೇ ೯೮

ಮಾಡುವ, ಪೂರ್ಣಹೇಡಿಯನ್ನು ಉತ್ತಮಶೂರನನ್ನಾಗಿ ಮಾಡುವ, ಯೋಗ್ಯನನ್ನು ಹೊಲೆಯನನ್ನಾಗಿ ಮಾಡುವ, ಮೊದಲು ಹೊಲೆಯನಾಗಿದ್ದವನನ್ನು ಪೂರ್ಣಯೋಗ್ಯನನ್ನಾಗಿ ಮಾಡುವ, ತಮ್ಮಲ್ಲಿ ಅತ್ಯಕವಾಗಿ ಹಬ್ಬಿರುವ ಅವಿವೇಕತೆಯಿಂದ ರಾಜರ ಮನಸ್ಸಿನ ಸ್ಥಿತಿ ಬಹಳ ಚಂಚಲವಾದುದು. ಆದುದರಿಂದ ರಾಜರನ್ನು ಸೇವೆ ಮಾಡಿ ಬಾಳುವುದೇ ಕಷ್ಟ. ೯೩. ಅಸಮಾನವಾದ ಪರಾಕ್ರಮದ ರೀತಿ, ಔದಾರ್ಯಗುಣ, ನೇರವಾದ ಸತ್ಯವಾಕ್ಕು, ಇವು ಮೂರು ನಾಲ್ಕೇ ಗುಣಗಳು. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ರಾಜವಂಶದಲ್ಲಿ ಹುಟ್ಟಿದ ಗುಣ (ವಂಶಮದ) ಅಹಂಕಾರ, ಅಹಂಕಾರದಿಂದ ಕೂಡಿದ ಅವಿವೇಕತೆ, ಇದರೊಡನೆ ಕೂಡಿದ ದಾದಿಯ ಮೊಲೆಹಾಲನ್ನು ಕುಡಿದ ಗುಣ ಇವುಗಳಲ್ಲವೇ? ೯೪. ಹಿಂದುಗಡೆ ಉತ್ಸಾಹದಿಂದ ಕೂಡಿ ತೇರನ್ನು ನಡೆಸು ಎನ್ನುವವನು ಅಂಬಿಗ, ಯುದ್ಧದಲ್ಲಿ ಮುಂಭಾಗದಲ್ಲಿ ನನಗೆ ಸಮಾನನಾಗಿ (ಸಾರಥಿಯಾಗಿ) ಕೆಲಸದಲ್ಲಿರುವವನು ದನಕಾಯವವನು (ಗೋವಳಿಗ). ರಥವನ್ನು ನಡೆಸುವ ನನ್ನ ರೀತಿಯದು ಹೊಲೆಯನಿಗೆ ಸರಿಯಾದುದಾಗಿ ಒಪ್ಪಿರಲು ಅಷ್ಟನ್ನು ನೀನು ದಯಮಾಡಿ ಹೇಳಿದೆಯಲ್ಲ ದುರ್ಯೋಧನ ಇಂತಹ ಅದೃಷ್ಟವನ್ನು ಯಾರು ತಾನೆ ಪಡೆಯುತ್ತಾರೆ? ೯೫. ಎಷ್ಟು ಮನಸ್ಸಿಗೆ ಒಪ್ಪದಿದ್ದರೂ ಸತ್ಪುರುಷರೂ ಪತಿಗೆ ಹಿತರಾದವರೂ ಒಪ್ಪಬೇಕು ತಾನೇ? ನೀನು ಇನ್ನೆಷ್ಟು ಪ್ರೀತಿಸದಿದ್ದರೂ ನಿನ್ನ ಮಾತನ್ನು ನಾನು ಯುದ್ಧರಂಗದಲ್ಲಿ ಮೀರುತ್ತೇನೆಯೇ? ವ|| ಎಂದು ವ್ಯಥೆಯಿಂದ ಆಡಿದ ಶಲ್ಯನ ಮಾತಿಗೆ ದುರ್ಯೋಧನನು ಹೀಗೆಂದನು. ೯೬. ಮಾವ ನೀವು ನನಗೆ ಇಷ್ಟನ್ನು ಮನಸ್ಸಿನಲ್ಲಿ ವೃಥಾ ವ್ಯಥೆಪಟ್ಟು ಹೇಳಿದಿರಿ, ನನ್ನ ವಿಜ್ಞಾಪನೆಯನ್ನು ನೀವು ಲಾಲಿಸಿ. ಹೇಗೆಂದರೆ ಕರ್ಣನು ಸಾಮಾನ್ಯ ಮನುಷ್ಯನಲ್ಲ. ೯೭. ಕುಲಹೀನನೇ ಆಗಿದ್ದರೆ ಆಧ್ಯಾತ್ಮಜ್ಞಾನಿಯಾದ ಪರಶುರಾಮನು ಪರಿಶುದ್ಧವಾದ ಕುಲದವರಲ್ಲದವರು ಹಿಡಿಯಲಾಗದ ದಿವ್ಯಾಸ್ತ್ರಸಮೂಹವನ್ನು ಅವನಿಗೆ ಕೊಡುತ್ತಿದ್ದನೇ? ೯೮. ವಿಧೇಯರಾದ ಶತ್ರುಗಳನ್ನುಳ್ಳ ಎಲೈ ಶಲ್ಯನೇಮಣಿಕುಂಡಲವೂ ಕವಚವೂ ಬಗ್ಗದ ನಡತೆಯೂ

ಕಲಿತನದ ನೆಗೞ್ದ ಕಸವರ
ಗಲಿತನದ ಪೊದೞ್ದ ಪರಮಕೋಟಿಗೆ ಪೆಱರಾರ್|
ಸಲೆ ಕರ್ಣನಲ್ಲದೆನಿಸುವ
ಕಲಿತನಮಂ ಹರಿಗೆ ಕವಚಮಿತ್ತುದೆ ಪೇೞ್ಗುಂ|| ೯೯

ವ|| ಎಂದು ಕುರುಕುಲಚೂಡಾಮಣಿ ಶಲ್ಯನ ಹೃಚ್ಛಲ್ಯಮೆಲ್ಲಮುಂ ಕೞಲೆ ನುಡಿದೊಡಾತ ನಿಂತೆಂದಂ-

ಚಂ|| ಅಱಯದೆಯುಂ ವಿಚಾರಸದೆಯುಂ ನೃಪ ನೀಂ ನೆಗೞ್ವನ್ನೆಯಲ್ಲೆಯಾ
ನಱವೆನದಂತೆ ಕರ್ಣನೆಣೆಗಂ ತೊಣೆಗಂ ನೃಪರಾರುಮಿಲ್ಲ ಬೆ|
ಳ್ಕು ರಿಪುಸೇನೆ ತೇರನೊಸೆದಾನೆಸಗುತ್ತಿರೆ ಕರ್ಣನಂ ಗೆಲಲ್
ನೆವರೆ ನಾಳೆ ಫಲ್ಗುಣನುಮಚ್ಯುತನುಂ ರಣರಂಗಭೂಮಿಯೊಳ್|| ೧೦೦

ಕಂ|| ಒಂದೆ ಗಡ ಹರಿಯ ಪೇೞೊಂ
ದಂದದೆ ನರನೆಸಗುವಂತೆ ಕರ್ಣನುಮೆನ್ನೆಂ|
ದೊಂದೋಜೆಯೊಳೆಸಗದೊಡಾಂ
ಸ್ಯಂದನದಿಂದಿೞದು ಪೋಪೆನೆಸಗೆಂ ತೇರಂ|| ೧೦೧

ಎಂಬುದುಮಂಗಮಹೀಪತಿ
ಯಂ ಬರಿಸಿ ಮಹಾಜಿಯಲ್ಲಿ ಮಾವಂ ತಾನೇ|
ನೆಂಬನದನಂತೆ ಮೀಱದೊ
ಡಂಬಡು ನೀನೆಂದು ಭೂಭುಜಂ ಪ್ರಾರ್ಥಿಸಿದಂ|| ೧೦೨

ವ|| ಅಂತಿರ್ವರುಮನೊರ್ವರೊರ್ವರೊಳೊಡಂಬಡಿಸಿ ತನ್ನೊಡನೆೞ್ದು ನಿಂದಿರ್ದ ಮದ್ರರಾಜನನಿರಲ್ವೇೞ್ದು ಕರ್ಣನುಂ ತಾನುಂ ನಿಜನಿವಾಸಂಗಳ್ಗೆ ಪೋದರಾಗಳಾ ಪಡೆಮಾತನಜಾತಶತ್ರು ಕೇಳ್ದು ಮುರಾಂತಕಂಗೆ ಬಿೞಯನಟ್ಟಿ ಬರಿಸಿ-

ಚಂ|| ಗೆಲಲರಿದುಂತೆ ಸೂತಸುತನಂ ರಣರಂಗದೊಳೆಂಬುದೊಂದು ಪಂ
ಬಲೆ ಪಿರಿದಂತವಂಗೊಸೆದು ತೇರೆಸಪಂ ಗಡ ನಾಳೆ ಶಲ್ಯನೀ|
ಕಲಹಮಿದೆಂತು ದಲ್ ಬಿದಿರ ಗಂಟುಗಳಂ ಕಳೆವಂತೆ ಮನ್ಮನ
ಸ್ಖಲನೆಯನುಂಟುಮಾಡಿದಪುದಿಲ್ಲಿಗೆ ಕಜ್ಜಮದಾವುದಚ್ಯುತಾ|| ೧೦೩

ಉಗ್ರವಾದ ತೇಜಸ್ಸೂ- ಈ ಒಳ್ಳೆಯ ಗುಣ ಮತ್ತು ತೇಜಸ್ಸು ಇವು ಸೂತಪುತ್ರನಲ್ಲಿ ಜೊತೆಯಾಗಿ ಹುಟ್ಟುತ್ತವೆಯೇ? ೯೯. ಶೌರ್ಯದ ಮತ್ತು ಪ್ರಸಿದ್ಧವಾದ ಔದಾರ್ಯದ ಪರಾಕಾಷ್ಠತೆಗೆ ಸಲ್ಲಲು ಕರ್ಣನಲ್ಲದೆ ಮತ್ತಾರಿದ್ದಾರೆ ಎನ್ನಿಸುವ ಶೌರ್ಯವನ್ನು ಇಂದ್ರನಿಗೆ ಕವಚವನ್ನು ಕೊಟ್ಟಿದ್ದೇ ಹೇಳುತ್ತದೆ. ವ|| ಎಂದು ಕುರುಕುಲಚೂಡಾಮಣಿಯಾದ ದುರ್ಯೋಧನನು ಶಲ್ಯನ ಹೃದಯದ ನೋವೆಲ್ಲವೂ ಸಡಿಲವಾಗುವಂತೆ ಹೇಳಲು ಅವನು ಹೀಗೆಂದನು. ೧೦೦. ರಾಜನೇ ನೀನು ತಿಳಿಯದೆಯೂ ವಿಚಾರಮಾಡದೆಯೂ ಕಾರ್ಯ ಮಾಡುವಂಥವನಲ್ಲ. ಅದನ್ನು ನಾನು ಬಲ್ಲೆ. ಕರ್ಣನಿಗೆ ಸಮಾನರಾದ ರಾಜರಾರೂ ಇಲ್ಲ. ಶತ್ರುಸೈನ್ಯಕ್ಕೆ ಭಯವಾಗುವ ರೀತಿಯಲ್ಲಿ ನಾನು ಪ್ರೀತಿಯಿಂದ (ಮನಪೂರ್ವಕವಾಗಿ) ತೇರನ್ನು ನಡೆಸುತ್ತಿದ್ದರೆ ನಾಳೆ ಕೃಷ್ಣನೂ ಅರ್ಜುನನೂ ಯುದ್ಧಭೂಮಿಯಲ್ಲಿ ಕರ್ಣನನ್ನು ಗೆಲ್ಲಲು ಸಮಥರಾಗುತ್ತಾರೆಯೇ? ೧೦೧. ಆದರೆ ಒಂದು ವಿಷಯ, ಕೃಷ್ಣನು ಹೇಳಿದ ರೀತಿಯಲ್ಲಿ ಅರ್ಜುನನು ಮಾಡುವಂತೆ ಕರ್ಣನೂ ನಾನು ಹೇಳಿದ ಕ್ರಮದಲ್ಲಿ ಮಾಡದೇ ಹೋದರೆ ತೇರನ್ನು ಇಳಿದು ಹೋಗುತ್ತೇನೆ. ತೇರನ್ನು ನಡೆಸುವುದಿಲ್ಲ. ೧೦೨. ಎನ್ನಲು ಕರ್ಣನನ್ನು ಬರಮಾಡಿ ಈ ಮಹಾಯುದ್ಧದಲ್ಲಿ ಮಾವನು ತಾನೇನು ಹೇಳುತ್ತಾನೆಯೋ ನೀನು ಅದನ್ನು ಹಾಗೆಯೇ ಮೀರದೆ ಒಪ್ಪಿಕೊ ಎಂದು ಮಹಾರಾಜನು ಪ್ರಾರ್ಥಿಸಿದನು. ವ|| ಹಾಗೆ ಇಬ್ಬರನ್ನೂ ಒಬ್ಬರನ್ನೊಬ್ಬರು ಒಪ್ಪುದ ಹಾಗೆ ಮಾಡಿ ತನ್ನೊಡನೆ ಎದ್ದು ನಿಂತಿದ್ದ ಶಲ್ಯನನ್ನು ಅಲ್ಲಿಯೇ ಇರಲು ಹೇಳಿ ಕರ್ಣನೂ ತಾನೂ ತಮ್ಮ ಮನೆಗಳಿಗೆ ಹೋದರು. ಈ ಸಮಾಚಾರವನ್ನು ಧರ್ಮರಾಯನು ಕೇಳಿ ಕೃಷ್ಣನಲ್ಲಿಗೆ ದೂತರನ್ನು ಕಳುಹಿಸಿ ಬರಮಾಡಿ ೧೦೩. ಯುದ್ಧರಂಗದಲ್ಲಿ ಕರ್ಣನನ್ನು ಸುಮ್ಮನೆ (ಯಾರ ಸಹಾಯವಿಲ್ಲದೆ ಏಕಾಕಿಯಾಗಿರುವಾಗಲೇ)ಗೆಲ್ಲಲು ಸಾಧ್ಯವಿಲ್ಲವೆಂಬ ಚಿಂತೆಯೇ ಹಿರಿದಾಗಿದೆ. ಅಂತಹ ಅವನಿಗೆ ನಾಳೆ ಪ್ರೀತಿಯಿಂದ ಶಲ್ಯನು ತೇರನ್ನು ನಡೆಸುತ್ತಾನಂತೆ. ಈ ಯುದ್ಧದಲ್ಲಿ ನಾವು ಹೇಗೆ ಗೆಲ್ಲುವುದು? ಬಿದಿರಿನ ಗಿಣ್ಣುಗಳನ್ನು ಒಡೆಯುವಂತೆ ನನ್ನ ಮನಸ್ಥೆ ರ್ಯವನ್ನು

ವ|| ಎಂಬುದುಂ ನೀನೆಂದಂತೆ ರಥಕಲ್ಪಮೆಂಬುದು ಶಲ್ಯಂಗೊಡವುಟ್ಟಿದುದಾದೊಡ ಮವರಿರ್ವರ್ಗಮೊರ್ವರೊರ್ವರೊಳ್ ಮೂಗುದುಱಸಲಾಗದ ಕಡ್ಡಮವರ್ಗೆಂತುಮೊಡಂಬಡಾಗದ ದಲ್ಲದೆಯುಂ-

ಸ್ರ|| ಕರ್ಣಂಗಂಡಲ್ತೆ ಕಲ್ತರ್ ನುಡಿವ ಪಸುಗೆಯಂ ಗಂಡರಾ ಗಂಡವಾತುಂ
ಕರ್ಣಂ ಮುಂ ಪುಟ್ಟೆ ಪುಟ್ಟಿತ್ತಳವಮರ್ದೊಡವುಟ್ಟಿತ್ತು ಪೂಣ್ದೀವ ಚಾಗಂ|
ಕರ್ಣಂಗೊಡ್ಡಿತ್ತು ದಲ್ ಭಾರತಮೆನೆ ಜಗದೊಳ್ ಸಂದನೇಂ ಸಂದೊಡಾಂತಾ
ಕರ್ಣಾಂತಾಕೃಷ್ಟ ಬಾಣಾವಳಿಯೊಳೆ ಹರಿಗಂ ಕರ್ಣನಂ ನಾಳೆ ಕೊಲ್ಗುಂ| ೧೦೪

ಕಂ|| ಎಂಬಿನೆಗಮಾಗಳಾ ವಿಕ
ಚಾಂಬುಜಸೌರಭಮನೊಸೆದು ಸೇವಿಸುವಾ ಪೆ
ಣ್ದುಂಬಿಗಳ ಸರಮನೆತ್ತಿ ತ
ಱುಂಬುತ್ತುಂ ಬಂದುದಾ ಪ್ರಭಾತಸಮೀರಂ|| ೧೦೫

ಸೂತ ನಟ ವಂದಿ ಮಾಗಧ
ವೈತಾಳಿಕ ಕಥಕ ಪುಣ್ಯಪಾಠಕ ವಿಪ್ರೋ|
ದ್ಭೂತರವಮೆಸೆಯೆ ಜಯ ಜಯ
ಗೀತಿಗಳೊರ್ಮೊದಲೆ ತಡೆಯದೆರಡುಂ ಪಡೆಯೊಳ್|| ೧೦೬

ಎರಡುಂಪಕ್ಕಮನೆಱಗಿದ
ಕರಿಗಳ್ ಪಾರ್ದೆಯ್ದೆ ವೇಱ್ದ ಕೊರಲ ಸರಂಬೆ|
ತ್ತಿರೆ ಮುರಿವಿಟ್ಟೀಹೇಷಾ
ಸ್ವರಮಂ ತೋಱದಪುವಲ್ಲಿ ನೃಪ ತುರಗಂಗಳ್|| ೧೦೭

ಇಂದೆನ್ನ ಮಗನನರ್ಜುನ
ನೊಂದುಂ ತಳ್ವಿಲ್ಲದೞವನವನಂ ನೀಂ ಕಾ||
ಯೆಂದು ಸುರಪತಿಯ ಕಾಲ್ವಿಡಿ
ವಂದಮನಿೞಸಿದುವು ಪಸರಿಪಿನಕಿರಣಂಗಳ್|| ೧೦೮

ವ|| ಆಗಳಂಗರಾಜಂ ತನ್ನಂ ಪರಿಚ್ಛೇದಿಸಿ ನೇಸಱ್ ಮೂಡೆಯಾಜ್ಯಾವೇಕ್ಷಣಂಗೆಯ್ದು ಸವತ್ಸ ಸುರಭಿಯನಭಿವಂದಿಸಿ ನಿಜ ರಥ ತುರಗ ದಿವಾಸ್ತ್ರಂಗಳುೞಯೆ ಪಸುರ್ಮಣಿಯನಪ್ಪೊಡ ಮುೞಯದಂತು ಚಾಗಂಗೆಯ್ದು ಚಾಗ ಬೀರದ ಪೞಯಿಗೆಯನೆತ್ತಿಸಿ ಪಂಚರತ್ನ

ಕದಲಿಸುತ್ತಿದೆ. ಕೃಷ್ಣ, ಈ ಸಮಯದಲ್ಲಿ ಮಾಡಬೇಕಾದ ಕಾರ್ಯವಾವುದು? ವ|| ಎನ್ನಲು ನೀನು ಹೇಳಿದಂತೆ ರಥವಿದ್ಯೆಯೆಂಬುದು ಶಲ್ಯನ ಜೊತೆಯಲ್ಲಿ ಹುಟ್ಟಿದುದಾದರೂ ಅವರಿಬ್ಬರಿಗೂ ಒಬ್ಬೊಬ್ಬರಲ್ಲಿ ಮೂಗುತುರಿಸಿ ಕೊಳ್ಳುವುದಕ್ಕಾಗದ ದ್ವೇಷಾಸೂಯೆಗಳಿವೆ. ಅವರಿಗೆ ಯಾವತ್ತೂ ಒಪ್ಪಿಗೆ ಯೆಂಬುವುದಾಗುವುದಿಲ್ಲ. ಅಲ್ಲದೆಯೂ ೧೦೪. ಶೂರರಾದವರು ಕರ್ಣನನ್ನು ನೋಡಿಯಲ್ಲವೇ ಮಾತನಾಡುವ ವಿವೇಕವನ್ನು ಕಲಿತರು. ಆ ಪೌರುಷಯುಕ್ತವಾದ ಮಾತುಗಳು ಕರ್ಣನು ಹುಟ್ಟಿದ ಮೇಲೆಯೇ ಹುಟ್ಟಿದುವು. ಪ್ರತಾಪಹಿತವಾದ ತ್ಯಾಗವೂ ಅವನೊಡನೆಯೇ ಸೇರಿಕೊಂಡು ಹುಟ್ಟಿದುವು. ಭಾರತಯುದ್ಧವೂ ಕರ್ಣನಿಗಾಗಿಯೇ ಒಡ್ಡಿದೆ ಎಂಬ ಜಗತ್ಪ್ರಸಿದ್ಧಿಯನ್ನು ಪಡೆದಿದ್ದಾನೆ. ಏನು ಪಡೆದಿದ್ದರೇನು? ಹರಿಗನಾದ ಅರ್ಜುನನು ನಾಳೆ ಕಿವಿಯವರೆಗೆ ಸೆಳೆದ ತನ್ನ ಬಾಣಸಮೂಹದಿಂದಲೇ ಕರ್ಣನನ್ನು ಕೊಲ್ಲುವನು. ೧೦೫. ಎನ್ನುವಷ್ಟರಲ್ಲಿ ಆ ಅರಳಿದ ಕಮಲದ ಸುವಾಸನೆಯನ್ನು ಸಂತೋಷದಿಂದ ಸೇವಿಸುವ (ಆಘ್ರಾಣಿಸುವ) ಪೆಣ್ದುಂಬಿಗಳ ಸ್ವರವನ್ನು ಎಬ್ಬಿಸಿ ಅಟ್ಟುತ್ತಾ ಪ್ರಾತಕಾಲದ ಮಾರುತವು ಬೀಸಿತು. ೧೦೬. ಪೌರಾಣಿಕರು, ನಟುವರು, ಹೊಗಳುಭಟರು, ಸ್ತುತಿಪಾಠಕರು, ಹಾಡುವವರು, ಕತೆಹೇಳುವವರು, ಮಂಗಳಪಾಠಕರು, ಬ್ರಾಹ್ಮಣರು ಮೊದಲಾದವರಿಂದ ಎದ್ದ ಜಯಜಯಮಿಶ್ರವಾದ ಗೀತೆಗಳು ಎರಡು ಸೈನ್ಯದಲ್ಲಿಯೂ ಸಾವಕಾಶಮಾಡದೆ ಒಟ್ಟಿಗೆ ಪ್ರಕಾಶಿಸಿದುವು. ೧೦೭. ಎರಡು ಪಕ್ಷದಲ್ಲಿಯೂ ಮೇಲೆಬಿದ್ದ (ಮುತ್ತಿದ) ಆನೆಗಳು ನಿಟ್ಟಿಸಿ ಕುಗ್ಗಿದ ಕೊರಳಸ್ವರದಿಂದ ಕೂಡಿರಲು ರಾಜಾಶ್ವಗಳು ಆಹಾರವನ್ನು ಬಿಟ್ಟು ಕೆನೆಯುತ್ತಿರುವುವು. (ಇವು ಅಪಶಕುನದ ಸೂಚನೆಗಳು). ೧೦೮ ಈ ದಿನ ನನ್ನ ಮಗನಾದ ಕರ್ಣನನ್ನು ಅರ್ಜುನನು ಸ್ವಲ್ಪವೂ ಸಾವಕಾಶವಿಲ್ಲದೆ ನಾಶಮಾಡುವನು. ಅವನನ್ನು ನೀನು ಕಾಪಾಡು ಎಂದು ಇಂದ್ರನ ಕಾಲನ್ನು ಹಿರಿಯುವ ರೀತಿಯನ್ನು ಪ್ರಸರಿಸುತ್ತಿರುವ ಸೂರ್ಯನ ಕಿರಣಗಳು ಕೀಳ್ಮಾಡಿದುವು. ವ|| ಆಗ ಕರ್ಣನು ತಾನು ನಿಶ್ಚೆ ಸಿಕೊಂಡು ಸೂರ್ಯೋದಯವಾಗಲು ತುಪ್ಪದಲ್ಲಿ ತನ್ನ ಮುಖಬಿಂಬವನ್ನು ನೋಡಿ ಕರುವಿನಿಂದ ಕೂಡಿದ ಗೋವನ್ನು ಪೂಜಿಸಿದನು. ತನ್ನ ತೇರು, ಕುದುರೆ, ದಿವ್ಯಾಸ್ತ್ರಗಳನ್ನು ಬಿಟ್ಟು ಒಂದು ಹಸಿರು ಮಣಿಯೂ ಉಳಿಯದಂತೆ

ಗರ್ಭಂಗಳಪ್ಪ ಮಂಗಳಜಳಂಗಳಂ ಮಿಂದು ಮೆಯ್ಯನಾಱಸಿ ದುಕೂಲಾಂಬರಮನುಟ್ಟು ಪೊಸವಾವುಗೆಯಂ ಮೆಟ್ಟಿ ಕನಕಸಂವ್ಯಾನಸೂತ್ರನಾಚಮಿಸಿ ಕನಕಕಮಳಂಗಳಿಂ ಕಮಳಾಕರಬಾಂಧವಂಗರ್ಘ್ಯಮೆತ್ತಿ ಪಾಲ್ಗಡಲ ತೆರೆಯ ನೊರೆಯ ದೊರೆಯ ದುಕೂಲಾಂಬರದೊಳಿಂಬಾಗಿ ಚಲ್ಲಣಮನುಟ್ಟು ಪುಡಿಗತ್ತುರಿಯಂ ತಲೆಯೊಳ್ ತೀವೆ ಪೊಯ್ದು ಪಸಿಯ ನೇತ್ರದಸಿಯ ಪಾಳೆಯೊಳ್ ತಲೆನವಿರಂ ಪಚ್ಚುಗಂಟಕ್ಕಿ ಮಣಿಮಯಮಕುಟಮಂ ಕವಿದು ತೋರ ನೆಲ್ಲಿಯ ಕಾಯಿಂ ಪಿರಿಯವಪ್ಪ ಮುತ್ತಿನ ಬ್ರಹ್ಮಸೂತ್ರಮನೆೞಲಿಕ್ಕಿ ಪಸದನಮನೆನಗಿಂದಿನಿತೆ ಎಂಬಂತೆ ನೆಯೆ ಕೆಯ್ಗೆಯ್ದು ಬಂದು ಮದ್ರರಾಜಂಗೆ ಪೊಡೆವಟ್ಟು ಸನ್ನಣಂಗಳನೆಲ್ಲಮನಾತಂಗೆ ನೆಯೆ ತುಡಿಸಿ-

ಕಂ|| ತಿದಿಯುಗಿದು ಕೊಟ್ಟೆನೊಡವು
ಟ್ಟಿದ ಕವಚಮನಮರಪತಿಗೆ ಮುನ್ನಿನ್ನೆನಗೊ|
ಪ್ಪದು ಮಯನಾಸೆವಡಲೆಂ
ದದಟನಣಂ ತುಡನೆ ಕವಚಮಂ ರಾಧೇಯಂ|| ೧೦೯

ವ|| ಆಗಳ್ ಮದಗಜ ಕಕ್ಷದ್ವಜ ವಿರಾಜಿತಮಪ್ಪ ತನ್ನ ಪೊನ್ನ ರಥಮಂ ಮದ್ರರಾಜನ ನೇಱಲ್ವೇೞ್ದು ಮೂಱು ಸೂೞ್ ಬಲವಂದು ಪೊಡೆವಟ್ಟು ತನ್ನ ಸಗ್ಗಮನೇಱುವುದನನು ಕರಿಸುವಂತೇಱ ನೆಲನಂಬರದೆಡೆಗೆ ಬರ್ಪಂತೆ ರಣರಂಗಭೂಮಿಗೆ ವಂದು ಕುರುರಾಜಧ್ವಜಿನಿಯಂ ಪದ್ಮವ್ಯೂಹಮನೊಡ್ಡಿದೆಡೆ-

ಕಂ|| ಕಂಸಾರಿಸಖಂ ಪರಿವಿ
ಧ್ವಂಸಿತ ರಿಪುನೃಪಸಮೂಹನೊಡ್ಡಿದನಾಗಳ್|
ಹಂಸವ್ಯೂಹಮನುತ್ತುಂ
ಗಾಂಸಂ ತಾಂ ವಿಬುಧವನಜವನಕಳಹಂಸಂ|| ೧೧೦

ವ|| ಅಂತೊಡ್ಡಿದೊಡ್ಡನೆರಡುಂ ಬಲದ ನಾಯಕರುಂ ತಮ್ಮ ಕೋಪಾಗ್ನಿಗಳನೆ ಬೀಸುವಂತೆ ಕೆಯ್ವೀಸಿದಾಗಳ್-

ಚಂ|| ಕರದಸಿಗಳ್ ಪಳಂಚೆ ಕಿಡಿವಿಟ್ಟೊಗೆದೊಳ್ಗಿಡಿ ತಾರಕಾಳಿಯಂ
ತಿರೆ ರಜಮೊಡ್ಡಿನಿಂದ ಮುಗಿಲಂತಿರೆ ಬಾಳುಡಿ ಪಾಱುವುಳ್ಕದಂ|
ತಿರೆ ತಡಮಾದುದಂಬರದೊಳಂಬರಮೆಂಬಿನೆಗಂ ಜಗತ್ರಯಂ
ಬರಮೆಸೆವಂತು ತಳ್ತಿಱದುವಂದೆರಡುಂ ಬಲಮುಗ್ರಕೋಪದಿಂ|| ೧೧೧

ದಾನಮಾಡಿ ತ್ಯಾಗವೀರದ ಧ್ವಜವನ್ನು ಎತ್ತಿಕಟ್ಟಿದನು. ಪಂಚರತ್ನಗಳಿಂದ ಕೂಡಿದ ಮಂಗಳತೀರ್ಥಗಳಲ್ಲಿ ಸ್ನಾನಮಾಡಿ ಶರೀರವನ್ನು ಒಣಗಿಸಿಕೊಂಡು ರೇಷ್ಮೆಯಂಥ ಬಟ್ಟೆಯನ್ನುಟ್ಟು ಹೊಸಪಾದುಕೆಗಳನ್ನು ಮೆಟ್ಟಿ ಚಿನ್ನದ ಉತ್ತರೀಯವನ್ನೂ ಕಟಿಸೂತ್ರವನ್ನೂ ಧರಿಸಿದನು. ಆಚಮನಮಾಡಿ ಚಿನ್ನದ ಕಮಲಗಳಿಂದ ಸೂರ್ಯನಿಗೆ ಅರ್ಘ್ಯವನ್ನೆತ್ತಿ ಕ್ಷೀರಸಮುದ್ರದ ಅಲೆಯ ನೊರೆಗೆ ಸಮಾನವಾದ ರೇಷ್ಮೆಯ ಬಟ್ಟೆಯಲ್ಲಿ ಮನೋಹರವಾಗಿ ಕಚ್ಚೆಯನ್ನುಟ್ಟನು. ಕಸ್ತುರಿಯ ಹುಡಿ ತಲೆಯ ಮೇಲೆ ತುಂಬ ಚೆಲ್ಲಿಕೊಂಡು ಹಸಿರು ಬಣ್ಣದ ನವುರಾದ ಪಟ್ಟಿಯಲ್ಲಿ ತಲೆಗೂದಲನ್ನು ಭಾಗಮಾಡಿ ಗಂಟಿಕ್ಕಿಕೊಂಡನು. ರತ್ನಮಯಕಿರೀಟವನ್ನು ತಲೆಗೆ ಧರಿಸಿಕೊಂಡನು. ದಪ್ಪವಾದ ನೆಲ್ಲಿಯ ಕಾಯಿಗಿಂತಲೂ ದಪ್ಪವಾದ ಮುತ್ತಿನ ಯಜ್ಞೋಪವೀತವನ್ನು ಜೋಲುಬಿಟ್ಟು ಈ ಅಲಂಕಾರ ಈ ದಿನಕ್ಕೆ ಮಾತ್ರ ಎನ್ನುವ ಹಾಗೆ ಸಂಪೂರ್ಣವಾಗಿ ಅಲಂಕಾರ ಮಾಡಿಕೊಂಡನು. ಶಲ್ಯನಿಗೆ ನಮಸ್ಕಾರಮಾಡಿ ಕವಚನಗಳನ್ನೆಲ್ಲ ಆತನಿಗೆ ಪೂರ್ಣವಾಗಿ ತೊಡಿಸಿದನು. ೧೦೯. ಜೊತೆಯಲ್ಲಿ ಹುಟ್ಟಿದ ಕವಚವನ್ನು ಚರ್ಮವನ್ನು ಸುಲಿಯುವ ಹಾಗೆ ಮೊದಲು ಇಂದ್ರನಿಗೆ ಸುಲಿದು ಕೊಟ್ಟೆನು. ಇನ್ನು ನನಗೆ ದೇಹಕ್ಕೆ ಮರೆಯಾದ ಕವಚಾದಿಗಳನ್ನು ಅಪೇಕ್ಷೆಪಡುವುದು ಒಪ್ಪುವುದಿಲ್ಲ ಎಂದು ಪರಾಕ್ರಮಶಾಲಿಯಾದ ಕರ್ಣನು ಕವಚವನ್ನು ತೊಡಲಿಲ್ಲವಲ್ಲ ! ವ|| ಆಗ ಮದ್ದಾನೆಯ ಪಾರ್ಶ್ವದಲ್ಲಿ ವಿರಾಜಮಾನವಾಗಿರುವ ತನ್ನ ಸುವರ್ಣರಥವನ್ನು ಶಲ್ಯನನ್ನು ಹತ್ತಲು ಹೇಳಿ ಮೂರು ಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ತಾನು ಸ್ವರ್ಗವನ್ನು ಹತ್ತುವುದನ್ನು ಅನುಕರಿಸುವಂತೆ ಹತ್ತಿದನು. ಭೂಮಿಯು ಆಕಾಶದೆಡೆಗೆ ಬರುವ ಹಾಗೆ ಯುದ್ಧಭೂಮಿಗೆ ಬಂದು ಕೌರವಸೈನ್ಯವನ್ನು ಪದ್ಮವ್ಯೂಹದಾಕಾರದಲ್ಲಿ ರಚಿಸಿ ಮುಂದಕ್ಕೆ ಚಾಚಿದನು. ೧೧೦. ಶತ್ರುರಾಜರ ಸಮೂಹವನ್ನು ಪೂರ್ಣವಾಗಿ ಧ್ವಂಸಮಾಡಿದವನೂ ಕೃಷ್ಣನ ಸ್ನೇಹಿತನೂ ಎತ್ತರವಾದ ಹೆಗಲನ್ನುಳ್ಳವನೂ ವಿದ್ವಾಂಸರೆಂಬ ಸರೋವರಕ್ಕೆ ರಾಜಹಂಸದಂತಿರುವವನೂ ಆದ ಅರ್ಜುನನು ಹಂಸವ್ಯೂಹವನ್ನು ಒಡ್ಡಿದನು. ವ|| ಹಾಗೆ ಒಡ್ಡಿರುವ ಸೈನ್ಯಗಳ ಎರಡು ಪಕ್ಷದ ನಾಯಕರೂ ತಮ್ಮ ತಮ್ಮ ಕೋಪಾಗ್ನಿಗಳನ್ನೇ ಬೀಸುವಂತೆ (ಯುದ್ಧ ಪ್ರಾರಂಭಸೂಚಕವಾಗಿ) ಕೈಗಳನ್ನು ಬೀಸಿದರು. ೧೧೧. ಕಯ್ಯಲ್ಲಿರುವ ಕತ್ತಿಗಳು ಒಂದಕ್ಕೊಂದು ತಗಲಲು ಕಿಡಿಗಳನ್ನು ಹಾರಿಸಿ ಹುಟ್ಟಿದ ಒಳ್ಳೆಯ ಕಿಡಿಗಳು ನಕ್ಷತ್ರಮಂಡಲದಂತೆ ಕಾಣಿಸಿದುವು. ಧೂಳು ಹರಡಿನಿಂತಿರುವ ಮೋಡದಂತಿದ್ದುವು. ಕತ್ತಿಯ ಚೂರುಗಳು ಹಾರುವ ಉಳ್ಕದ ಹಾಗಿತ್ತು. ಆಕಾಶವು ಆಕಾಶಕ್ಕೆ ತಗುಲಿತು ಎನ್ನುವ

ವ|| ಅನ್ನೆಗಂ ದುಯೋಧನಂಗಾಪ್ತರಪ್ಪ ಸಂಸಪ್ತಕರತಿರಥಮಥನನ ರಥಮಂ ತಮ್ಮತ್ತ ತೆಗೆಯಲೊಡಮವರ ರಥಕ್ಕೆ ಮದಾಂಧ ಗಂಧಸಿಂಧುರದಂತಮ್ಮನ ಗಂಧವಾರಣಂ ಪರಿದು-

ಚಂ|| ಪಱಪಡದಾಯ್ತು ಭಾರತಮಿವಂದಿರ ಕಾರಣದಿಂದಿವಂದಿರಂ
ಪಱಪಡೆ ಕೊಂದು ಕರ್ಣನೊಳೆ ಕಾದಲೆಮೇೞ್ಕುಮಮೋಘಮೆಂದು ಕೆಂ|
ಗಱಗಳ ಪಾರೆಯಂಬುಗಳೊಳೂಱ ಕಱುತ್ತಿಸೆ ಬಿೞ್ದರೆಯ್ದೆ ಪ
ರ್ದೆಱಗೆ ಸುರುಳ್ದು ಬೀೞ್ವ ಕಿಱುವಕ್ಕಿವೊಲುಗ್ರ ವಿರೋನಾಯಕರ್| ೧೧೨

ಕಂ|| ಕೞಕುೞಮಾದ ರಥಂಗಳಿ
ನೞದರಿಭಟರಿಂ ಸುರುಳ್ದ ಮದಗಜಘಟೆಯಿಂ|
ಸುೞಸುೞದೊಡವರಿದುದು ಕ
ಲ್ವೞಯೊಳ್ ಭೋರ್ಗರೆವ ತೊಯವೋಲ್ ಝರಜಳಂ|| ೧೧೩

ಪಿರಿದು ಪೊಗೞಸಿದ ಪಾಡಿಸಿ
ದರಿಯರನಾನಲ್ಕೆ ಪಿರಿಯರಂ ಪೂಣಿಗರಂ|
ಬಿರುದರನದಟಿನೊಳುಬ್ಬರ
ಮುರಿವರನಾಯ್ದಱಸಿ ಕೊಂಡುವರಿಗನ ಕಣೆಗಳ್|| ೧೧೪

ಕಣೆ ಕೊಳೆ ಪಱದರಿ ನರಪರ
ಕಣೆಕಾಲ್ಗಳ್ ಬೆರಲ ರತ್ನಮುದ್ರಿಕೆಗಳ ಸಂ|
ದಣಿಯ ಬೆಳಗುಗಳಿನೆಸೆದುವು
ರಣರಂಗದೊಳಯ್ದುಪೆಡೆಯ ನಾಗಂಗಳವೋಲ್|| ೧೧೫

ಆಗಳ್ ವಿಜಯನ ವೀರ
ಶ್ರೀಗೆ ಕರಂ ಕಿನಿಸಿ ಕಲಿ ಸುಶರ್ಮಂ ಮೆಯ್ಯೊಳ್|
ತಾಗೆ ಪಗೆ ನೀಗೆ ತಲೆಯಂ
ಪೋಗೆಚ್ಚನದೊಂದು ಪರಸು ದಾರುಣಶರದಿಂ|| ೧೧೬

ವ|| ಅಂತು ಸಂಸಪ್ತಕಬಲಕ್ಕಾಳ್ದನಾಗಿರ್ದ ಸುಶರ್ಮನಂ ರಾವಣನಂ ರಾಘವಂ ಕೊಲ್ವಂತೆ ವಿದ್ವಿಷ್ಟವಿದ್ರಾವಣಂ ಕೊಂದೊಡುೞದ ನಾಯಕರೆಲ್ಲರ್ ತಮ್ಮಾಳ್ದನ ಸಾವಂ ಕಂಡು ರಿಪುಕುರಂಗ

ಹಾಗೆ ಮೂರುಲೋಕದವರೆಗೆ ಪ್ರಕಾಶಮಾನವಾಗುವ ಹಾಗೆ ಎರಡು ಸೈನ್ಯಗಳು ಉಗ್ರವಾದ ಕೋಪದಿಂದ ತಾಗಿ ಯುದ್ಧಮಾಡಿದುವು. ವ|| ಅಷ್ಟರಲ್ಲಿ ದುರ್ಯೋಧನನಿಗಾಪ್ತರಾದ ಸಂಸಪ್ತಕರು ಅತಿರಥಮಥನನಾದ ಅರ್ಜುನನ ತೇರನ್ನು ತಮ್ಮಕಡೆ ತೆಗೆಯಿಸಿಕೊಂಡು ಹೋಗಲು ಅಮ್ಮನ ಗಂಧವಾರಣನಾದ ಅರ್ಜುನನು ಅವರ ರಥಕ್ಕೆ ಅಭಿಮುಖವಾಗಿ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಯಂತೆ ನುಗ್ಗಿದನು. ೧೧೨. ಈ ಸಂಸಪ್ತಕರಿಂದ ಈ ಭಾರತಯುದ್ದವು ನಿಷ್ಕರ್ಷಯಾಗದೆ (ಮುಗಿಯದೇ) ಇದೆ. ಇವರನ್ನು ಕತ್ತರಿಸಿ ಬೀಳುವಂತೆ ಕೊಂದು ಆಮೇಲೆ ಬೆಲೆಯೇ ಇಲ್ಲದ ರೀತಿಯಲ್ಲಿ (ಅದ್ಭುತವಾಗಿ) ಕರ್ಣನಲ್ಲಿ ಕಾದಲೇಬೇಕು ಎಂದು ಕೆಂಪಾದ ಗರಿಗಳನ್ನುಳ್ಳ ಹಾರೆಯಂತಿರುವ ಬಾಣಗಳನ್ನು ನಾಟಿ ಗುರಿಯಿಟ್ಟು ಹೊಡೆಯಲು ಶತ್ರುನಾಯಕರು ರಭಸದಿಂದ ಹದ್ದು ಮೇಲೆರಗಲು ಸಣ್ಣ ಹಕ್ಕಿಗಳು ಸುರುಳಿಕೊಂಡು ಬೀಳುವ ಹಾಗೆ ಬಿದ್ದರು. ೧೧೩. ಅಸ್ತವ್ಯಸ್ತವಾದ ತೇರುಗಳಿಂದಲೂ ಸತ್ತ ಶತ್ರುವೀರರಿಂದಲೂ ಸುರುಳಿಗೊಂಡು ಬಿದ್ದ ಮದ್ದಾನೆಗಳಿಂದಲೂ ರಕ್ತಪ್ರವಾಹವು ಭೋರೆಂದು ಶಬ್ದ ಮಾಡುತ್ತ ಕಲ್ಲುಗಳಿಂದ ಕೂಡಿರುವ ಪಾತ್ರದಲ್ಲಿ ಹರಿಯುವ ನದಿಯಂತೆ ಸುಳಿಸುಳಿಯಾಗಿ ಜೊತೆಯಲ್ಲಿಯೇ ಹರಿಯಿತು. ೧೧೪. ಹಿರಿದಾಗಿ ಹೊಗಳಿಸಿಕೊಂಡವರು ಹಾಡಿಸಿಕೊಂಡವರು ಎದುರಿಸಲು ಅಸಾಧ್ಯರಾದವರು ಪ್ರತಿಜ್ಞೆಮಾಡಿದವರು ಬಿರುದುಳ್ಳವರು ಪರಾಕ್ರಮದಿಂದ ವಿಶೇಷವಾಗಿ ಉರಿಯುತ್ತಿರುವವರು ಮೊದಲಾದವರನ್ನೆಲ್ಲ ಅರ್ಜುನನ ಬಾಣಗಳು ಹುಡುಕಿಕೊಂಡು ಬಂದು ನಾಟಿದುವು. ೧೧೫. ತಗಲಲು ಕತ್ತರಿಸಿಬಿದ್ದಿದ್ದ ಶತ್ರುರಾಜರ ಅಡಿಯ ಕಾಲುಗಳ ಬೆರಳಿನ ರತ್ನಗದುಂಗುರಗಳ ಬೆಳಗಿನ ಸಮೂಹದಿಂದ ಯುದ್ಧರಂಗದಲ್ಲಿ ಅಯ್ದು ಹೆಡೆಯ ಹಾವುಗಳ ಹಾಗೆ ಪ್ರಕಾಶಿಸಿದುವು.

೧೧೬. ಆಗ ಅರ್ಜುನನ ಶೌರ್ಯದ ಮಹತ್ವಕ್ಕೆ (ವಿಜಯಲಕ್ಷ್ಮಿಗೆ) ವಿಶೇಷವಾಗಿ ಕೋಪಿಸಿಕೊಂಡು ಶೂರನಾದ ಸುಶರ್ಮನು ಶರೀರವನ್ನು ತಾಗಲು (ಮೇಲೆ ಬೀಳಲು) (ಅರ್ಜುನನು) ದ್ವೇಷವು ತೀರುವಂತೆ ಒಂದು ಕೊಡಲಿಯಂತಿರುವ ಕ್ರೂರವಾದ ಬಾಣದಿಂದ ತಲೆಯು ಕತ್ತರಿಸಿ ಹೋಗುವ ಹಾಗೆ ಹೊಡೆದನು. ವ|| ಹಾಗೆ ಸಂಸಪ್ತಕರ ಸೈನ್ಯಕ್ಕೆ ಯಜಮಾನನಾಗಿದ್ದ (ಒಡೆಯನಾಗಿದ್ದ) ಸುಶರ್ಮನನ್ನು,

ಕಂಠಿರವನಂ ಮಾರ್ಕೊಂಡು ಕಾದುತ್ತಿರ್ದರನ್ನೆಗಮಿತ್ತ ಕರ್ಣನುಮುದೀರ್ಣವೀರ ರಸಾಸ್ವಾದನಲಂಪಟನಾಗಿ ನೀಮೆಲ್ಲಮಿಂದೆನ್ನ ಕಾಳೆಗಮಂ ಸುರಿಗೆಗಾಳೆಗಮಂ ನೋೞ್ಪಂತೆ ನೋೞ್ಪುದೆಂದು ಕೌರವಬಲದ ನಾಯಕರೆಲ್ಲರುಮನೊಡ್ಡಿ ಪಾಂಡವಬಲಕ್ಕೆ ಮಿೞ್ತು ಬರ್ಪಂತೆ ಬಂದು ತಾಗಿದಾಗಳ್ ತನಗಿದಿರೊಳದಿರದಾಂತ ಸೋಮಕ ಶ್ರೀಜಯ ಪ್ರಮುಖ ಕೋಸಲಾಶ ಸೈನ್ಯಂಗಳನಲ್ಲಕಲ್ಲೋಲಂ ಮಾಡಿ ಪೆಸರಱಕೆಯ ನಾಯಕರನಱುವತ್ತು ಸಾಸಿರ್ವರನೊರ್ವನಂ ಕೊಲ್ವಂತೆ ಕೊಂದು ನಿಟ್ಟಾಲಿಗೊಂಡು ಯುಷ್ಠಿರನಂ ಮುಟ್ಟೆವಂದಾಗಳ್-

ಚಂ|| ಯಮಸುತನಣ್ಮಿ ಸತ್ತೆಯೆನುತುಂ ನಿಶಿತಾಸ್ತ್ರಮನುರ್ಚಿಕೊಂಡು ವ
ಕ್ಷಮನಿರದೆಚ್ಚಡೆಚ್ಚ ಶರಮಂ ಕಲಿ ಚಕ್ಕನೆ ಕಿೞ್ತುರಪ್ರದೇ||
ಶಮನಿಸೆ ನೆತ್ತರೊಕ್ಕು ಪತಿ ಮುಚ್ಚೆಯೊಳಿಚ್ಚೆಯೆಗೆಟ್ಟು ಜೋಲ್ದೊಡಾ
ದಮೆ ನಸುನೊಂದು ನಂದಿಸದೆ ತನ್ನನೆ ನಿಂದಿಸಿದಂ ದಿನೇಶಜಂ|| ೧೧೭

ವ|| ಅಂತು ಕೊಂತಿಗೆ ನಾಲ್ವರೊಳಾರುಮಂ ಕೊಲ್ಲೆನೆಂದು ನುಡಿದ ತನ್ನ ತನ್ನಿಗೆ ಬನ್ನಂ ಬಂದಪುದೆಂದು ಕರ್ಣಂ ಚಿಂತಿಸುತ್ತಿರ್ದನಿತ್ತಲರಸನಂ ಪೆಱಗಿಕ್ಕಿ ನಕುಳಸಹದೇವರಿರ್ವರುಂ ಬಂದಾಂತೊಡಿವರನೇಗೆಯ್ವುದೆಂದು ಕರುಣಿಸಿ ಶಲ್ಯನ ಮನಮಂ ನೋಡಲೆಂದು ಬೆಸಗೊಂಡೊಡೆ ತನ್ನಳಿಯಂದಿರ ಸಾವಿಂಗಾಱದೆ ಶಲ್ಯನಿಂತೆಂದಂ-

ಚಂ|| ಎರೆದನ ಪೆಂಪುಮಾಂತಕನಪ್ಪನ ಪೆಂಪುಮನೀವ ಕಾವ ನಿ
ನ್ನೆರಡುಗುಣಂಗಳುಂ ಬಯಸುತಿರ್ಪುವು ನಿನ್ನೊಳಿರಂದಿರೇತಳೊ|
ದೊರೆ ದೊರೆವೆತ್ತ ಕಾಳೆಗದ ಗೆಲ್ಲದ ಸೋಲದ ಮಾತು ನಿನ್ನೊಳಂ
ನರನೊಳಮಿರ್ದುದುಯ್ಗೆ ಸಿಸುಗಳ್ ಸಿಬಿರಕ್ಕೆ ಬೞಲ್ದ ಭೂಪನಂ|| ೧೧೮

ವ|| ಅದಲ್ಲದೆಯುಮತ್ತ ದುರ್ಯೋಧನಂಗಂ ಭೀಮಂಗಮನುವರಂ ಪೊಣಗರ್ದಿರ್ದುದರಸನಂ ಬೇಗಂ ಪೋಗಿ ಕೊಯ್ಕೊಳ್ವಮೆಂದು ಬರೆವರೆ ಯುಷ್ಠಿರಮೞಯೆನೊಂದ ನೋವಂ ಕಂಡು ಪಾಂಡವಬಲದ ನಾಯಕರುತ್ತಾಯಕರಾಗಿ ತಂತಮ್ಮ ಚತುರ್ವಲಂಗಳನೊಂದು

ರಾವಣನನ್ನು ರಾಮನು ಕೊಂದಹಾಗೆ ವಿದ್ವಿಷ್ಟವಿದ್ರಾವಣನಾದ ಅರ್ಜುನನು ಕೊಲ್ಲಲು ಉಳಿದ ನಾಯಕರೆಲ್ಲ ತಮ್ಮ ಯಜಮಾನನ ಸಾವನ್ನು ನೋಡಿ ಶತ್ರುಗಳೆಂಬ ಜಿಂಕೆಗಳಿಗೆ ಸಿಂಹದ ಹಾಗಿರುವ ಅರ್ಜುನನನ್ನು ಎದುರಿಸಿ ಯುದ್ಧಮಾಡುತ್ತಿದ್ದರು. ಅಷ್ಟರಲ್ಲಿ ಈ ಕಡೆ ಕರ್ಣನು ಹೆಚ್ಚುತ್ತಿರುವ ವೀರರಸವನ್ನು ರುಚಿನೋಡುವುದರಲ್ಲಿ ಆಸಕ್ತನಾಗಿ ನೀವೆಲ್ಲರೂ ಈ ದಿವಸ ನನ್ನ ಯುದ್ಧವನ್ನು ಸಣ್ಣ ಕತ್ತಿಯ ದ್ವಂದ್ವಯುದ್ಧವನ್ನು ನೋಡುವ ಹಾಗೆ ನೋಡುವುದು ಎಂದು ಕೌರವಸೈನ್ಯದ ನಾಯಕರೆಲ್ಲರನ್ನೂ ಒಟ್ಟುಗೂಡಿಸಿ ಪಾಂಡವ ಸೈನ್ಯದ ಮೃತ್ಯು ಬರುವ ಹಾಗೆ ಬಂದು ತಾಗಿದನು. ತನ್ನ ಎದುರಿಗೆ ಭಯಪಡದೆ ಪ್ರತಿಭಟಿಸಿದ ಸೋಮಕ ಶ್ರೀಜಯರೇ ಮುಖ್ಯರಾದ ಕೋಸಲದೇಶದ ರಾಜರುಗಳ ಸೈನ್ಯವನ್ನೆಲ್ಲ ಕಲಕಿಹಾಕಿದನು. ಹೆಸರಿನಿಂದಲೇ ಪ್ರಸಿದ್ಧರಾದ ಅರವತ್ತುಸಾವಿರ ನಾಯಕರನ್ನು ಒಬ್ಬನನ್ನು ಕೊಲ್ಲುವ ಹಾಗೆ (ಅಶ್ರಮವಾಗಿ) ಕೊಂದು ದೀರ್ಘವಾಗಿ ದಿಟ್ಟಿಸಿನೋಡಿ ಧರ್ಮರಾಯನನ್ನು ಮುಟ್ಟುವಷ್ಟು ಸಮೀಪಕ್ಕೆ ಬಂದನು. ೧೧೭. ಧರ್ಮರಾಜನು (ಕರ್ಣನನ್ನು ಕುರಿತು) ನೀನು ಸತ್ತೆ ಎನ್ನುತ್ತ ಹರಿತವಾದ ಬಾಣವನ್ನು ಸೆಳೆದುಕೊಂಡು ತಡೆಯದೆ ಎದೆಗೆ ಹೊಡೆದನು. ಹೊಡೆದ ಆ ಬಾಣವನ್ನು ಶೂರನಾದ ಕರ್ಣನು ಚಕ್ಕನೆ ಕಿತ್ತುಹಾಕಿ ಧರ್ಮರಾಜನ ಹೃದಯ ಪ್ರವೇಶವನ್ನು ಹೊಡೆಯಲಾಗಿ ರಕ್ತವು ಸುರಿದು ಧರ್ಮರಾಜನು ಮೂರ್ಛೆಯಲ್ಲಿ ಮರೆತು ಜ್ಞಾನಶೂನ್ಯನಾಗಿ ಜೋತುಬೀಳಲು ಕರ್ಣನು ಸ್ವಲ್ಪ ವ್ಯಥೆಪಟ್ಟು ಪೂರ್ಣವಾಗಿ ಕೊಲ್ಲದೆ ತನ್ನನ್ನೇ ತಾನು ನಿಂದಿಸಿಕೊಂಡನು- ವ|| ಕುಂತೀದೇವಿಗೆ ನಾಲ್ಕು ಜನರಲ್ಲಿ ಯಾರನ್ನೂ ಕೊಲ್ಲುವುದಿಲ್ಲವೆಂದು ಮಾತು ಕೊಟ್ಟಿದ್ದ ತನ್ನ ಸತ್ಯವಾಕ್ಕಿಗೆ ಭಂಗವುಂಟಾಗುತ್ತೆಂದು ಕರ್ಣನು ಯೋಚಿಸುತ್ತಿದ್ದನು. ಈ ಕಡೆ ಧರ್ಮರಾಜನನ್ನು ಹಿಂದಕ್ಕೆ ಹಾಕಿ ನಕುಲಸಹದೇವರಿಬ್ಬರೂ ಬಂದು ಎದುರಿಸಲು ಇವರನ್ನು ಏನುಮಾಡುವುದು (ತನಗೆ ಮಾನರಲ್ಲದ ಇವರೊಡನೆ ಏನು ಯುದ್ಧಮಾಡುವುದು) ಎಂದು ದಯೆತೋರಿ ಶಲ್ಯನ ಮನಸ್ಸನ್ನು ಪರೀಕ್ಷಿಸೋಣವೆಂದು ಪ್ರಶ್ನೆಮಾಡಲು, ಶಲ್ಯನು ತನ್ನಳಿಯಂದಿರಾದ ನಕುಲಸಹದೇವರ ಸಾವಿಗೆ ಸೈರಿಸಲಾರದೆ ಹೀಗೆಂದನು- ೧೧೮. ನಿನ್ನ ದಾನಮಾಡುವ (ಔದಾರ್ಯ), ರಕ್ಷಿಸುವ (ಪರಾಕ್ರಮ) ಗುಣಗಳು ಬೇಡುವವನ ಆಕ್ಯವನ್ನೂ ಪ್ರತಿಭಟಿಸಿದ ಪರಾಕ್ರಮಿಯ ಆಕ್ಯವನ್ನೂ ಬಯಸುವುವು. ನಿನ್ನಲ್ಲಿ ಈ ನಕುಲಸಹದೇವರು ಯಾವಗುಣಗಳಲ್ಲಿ ಸಮಾನರು. ಯುದ್ಧದ ಜಯಾಪಜಯಗಳ ಮಾತು ನಿನಗೆ ಸಮಾನತೆಯನ್ನು ಪಡೆದಿರುವ ಅರ್ಜುನನಲ್ಲಿಯೂ ನಿನ್ನಲ್ಲಿಯೂ ಇದೆ. ಈ ಶಿಶುಗಳು ಬಳಲಿರುವ ಧರ್ಮರಾಯನನ್ನು ಬೀಡಿಗೆ ಕರೆದುಕೊಂಡು ಹೋಗಲಿ. ವ|| ಅದಲ್ಲದೆಯೂ ಆ ಕಡೆ ದುರ್ಯೋಧನನಿಗೂ ಭೀಮನಿಗೂ ಯುದ್ಧರು ಹೆಣೆದುಕೊಂಡಿದೆ. ಬೇಗಹೋಗಿ ರಾಜನನ್ನು ರಕ್ಷಿಸೋಣ ಎಂದು ತೇರನ್ನು ಬೇರೆಕಡೆಗೆ ತಿರುಗಿಸಿದನು. ಧರ್ಮರಾಜನು ಸಾಯುವಷ್ಟು ಬಲವಾಗಿ ನೊಂದನೋವನ್ನು ಪಾಂಡವಬಲದ ನಾಯಕರು ನೋಡಿ

ಮಾಡಿಕೊಂಡು ಕಾಲಾಗ್ನಿಯಂ ಕಿಡಿ ಸುತ್ತುವಂತೆ ಕರ್ಣನಂ ಸುತ್ತಿ ಮುತ್ತಿಕೊಂಡು ಕಣಯ ಕಂಪಣ ಮುಸಲ ಮುಸುಂಡಿ ಭಿಂಡಿವಾಳ ತೋಮರ ಮುದ್ಗರ ಮಹಾ ವಿವಿಧಾಯುಧಂ ಗಳೊಳಿಟ್ಟುಮೆಚ್ಚುಮಿಱದುಮಗುರ್ವುಮದ್ಭತಮುಮಾಗೆ ಕಾದುವಾಗಳ್-

ಚಂ|| ಎನಗಮರಾತಿ ಸಾಧನಮಿದಿರ್ಚುಗುಮಳ್ಕದಿದಿರ್ಚಿ ಬಾೞ್ಗುಮಿ
ನ್ನೆನೆ ಪೆಱತುಂಟೆ ದೋಷಮೆನಗಂತದೆ ದೋಷಮದಾಗಲಾಗದೆಂ|
ದಿನ ತನಯಂ ತಗುಳ್ದಿಸೆ ನಿಶಾತ ಶರಾಳಿಗಳೆಯ್ದೆ ಚಕ್ಕು ಚ
ಕ್ಕನೆ ಕೊಳೆ ಮೊಕ್ಕುಮೊಕ್ಕೆನೆ ಶಿರಂಗಳುರುಳ್ದುವು ವೈರಿಭೂಪರಾ| ೧೧೯

ವ|| ಆ ಪ್ರಸ್ತಾವದೊಳ್-

ಉ|| ಮಂತ್ರ ಪದಪ್ರವೀಣ ಬಹು ಸಾಧನ ಹೂಂಕರಣಾದಿ ಮಂತ್ರಮಾ
ಮಂತ್ರಿತ ಡಾಕಿನೀ ದಶನ ಘಟ್ಟನ ಜಾತ ವಿಭೀಷಣಂ ಮದೇ|
ಭಾಂತ್ರ ನಿಯಂತ್ರಿತಾಶ್ವ ಶವ ಮಾಂಸ ರಸಾಸವ ಮತ್ತಯೋಗಿನೀ
ತಂತ್ರಮಿದೇನಗುರ್ವನೊಳಕೊಂಡುದೊ ಕರ್ಣನ ಗೆಲ್ದ ಕೊಳ್ಗುಳಂ|| ೧೨೦

ವ|| ಅನ್ನೆಗಮಿತ್ತ ಸಂಸಪ್ತಕ ನಿಕುರುಂಬದೊಳಗೊರ್ವರುಮಂ ಕಿಱವೀೞಲೀಯದೆ ರಸಮಂ ಕೊಲ್ವಂತೆಂತಾನುಂ ಕೊಂದು ಕರ್ಣನೊಳ್ ಪೊಣರಲ್ ಬರ್ಪ ವಿಕ್ರಾಂತ ತುಂಗಂ ನಿಜ ಪತಾಕಿನಿಯ ನಡುವೆ ಮೆವ ಪತಾಕಾ ವಿರಾಜಮಾನುಮಪ್ಪ ತಮ್ಮಣ್ಣನ ರಥಮಂ ಕಾಣದ ಕೌರವಬಳಜಳನಿಯೊಳ್ ಬಳ್ವಳ ಬಳೊದೊಗೆದ ಕೇಸುರಿಯಂತೆ ತೞತೞಸಿ ಮಿಳಿರ್ವ ಪವನತನೂಜನ ಕೇಸರಿಕೇತನಮಪ್ಪ ಪೞಯಿಗೆಯಂ ಕಂಡು ಮುಟ್ಟೆ ವರ್ಪನ್ನೆಗಮರಸನಂ ಬೀಡಿಂಗೆ ಕಳಿಪಿ ಮಗುೞ್ದು ಬಂದ ನಕುಳ ಸಹದೇವರಿಂದರವಿಂದಬಾಂಧವತನೂಜನ ಮಹಾ ಪ್ರಹರಣಹತಿಯೊಳ್ ಯಮನಂದನನ ನೋವುಮನಾತ್ಮೀಯಬಲದ ನಾಯಕರ ಸಾವುಮನಱದು-

ಚಂ|| ಪವನಸುತಂಗೆ ಪಾಸಟಿಗಳೊರ್ವರುಮಿಲ್ಲದಱಂದಮಾಂತ ಕೌ
ರವಬಲದುರ್ಕನೊಂದಿನಿಸು ಮಾಣಿಸಿ ಪೋಪಮಿಳೇಶನಲ್ಲಿಗೆಂ|
ದವನತ ವೈರಿ ವೈರಿಬಲ ವಾರಿಯಂ ವಿಶಿಖೌರ್ವವಹ್ನಿಯಿಂ
ತವಿಸಿ ಮರುತ್ತನೂಭವನಲ್ಲಿಗೆ ಪೇೞರದೆಯ್ದಿ ಭೂಪನಂ|| ೧೨೧

ಪ್ರತಿಭಟಿಸಿದವರಾಗಿ ತಮ್ಮತಮ್ಮ ಚತುರಂಗ ಬಲವನ್ನು ಒಟ್ಟಾಗಿ ಸೇರಿಸಿಕೊಂಡು ಕಾಲಾಗ್ನಿಯನ್ನು ಬೆಂಕಿಯ ಕಿಡಿಗಳು ಬಳಸಿ ಕೊಳ್ಳುವ ಹಾಗೆ ಕರ್ಣನನ್ನು ಮುತ್ತಿ ಆವರಿಸಿಕೊಂಡರು. ಕಣಯ, ಕಂಪಣ, ಮುಸಲ, ಮುಸುಂಡಿ, ಭಿಂಡಿವಾಳ, ತೋಮರ, ಮುದ್ಗರ ಎಂಬ ದೊಡ್ಡದಾದ ಬೇರೆಬೇರೆಯ ನಾನಾವಿಧವಾದ ಆಯುಧ ವಿಶೇಷಗಳಿಂದ ಎಸೆದೂ ಹೊಡೆದೂ ಕತ್ತರಿಸಿಯೂ ಭಯಂಕರವೂ ಆಶ್ಚರ್ಯಕರವೂ ಆಗುವ ಹಾಗೆ ಯುದ್ಧಮಾಡಿದರು. ೧೧೯. ‘ನನ್ನನ್ನು ಶತ್ರುಸೈನ್ಯವು ಎದುರಿಸುತ್ತಿದೆ’ ಹೆದರದೆ ಪ್ರತಿಭಟಿಸಿ ಇನ್ನೂ ಬದುಕಿದೆ ಎಂದರೆ ನನಗೆ ಇದಕ್ಕಿಂತ ಬೇರೆ ಕಳಂಕವುಂಟೇ? ನನಗೆ ಆ ದೋಷವು ಆಗಬಾರದು’ ಎಂದು ಸೂರ್ಯಪುತ್ರನಾದ ಕರ್ಣನು ರಭಸದಿಂದ ಹೊಡೆಯಲು ಹರಿತವಾದ ಬಾಣಗಳು ಪೂರ್ಣವಾಗಿ ಚಕ್ ಚಕ್ ಎಂದು ಕತ್ತರಿಸಲು ಶತ್ರುರಾಜರ ತಲೆಗಳು ಮೊಕ್‌ಮೊಕ್ ಎಂದು ಉರುಳಿದುವು. ವ|| ಆ ಸಮಯದಲ್ಲಿ ೧೨೦. ರಣಮಂತ್ರ ಪಠನದಲ್ಲಿ ಪ್ರವೀಣರಾದ ಅನೇಕ ಸೈನಿಕರ ಹುಂಕಾರವೇ ಮೊದಲಾದ ಮಂತ್ರವನ್ನುಳ್ಳುದೂ ಆಹ್ವಾನಿತರಾದ ಪಿಶಾಚಿಗಳ ಹಲ್ಲುಕಡಿಯುವುದರಿಂದ ಹುಟ್ಟಿ ವಿಕಾರವೂ ಭಯಂಕರವೂ ಆದ ಶಬ್ದವನ್ನುಳ್ಳುದೂ ಮದ್ದಾನೆಯ ಕರುಳುಗಳಿಂದ ಕಟ್ಟಲ್ಪಟ್ಟ ಕುದುರೆಯ ಹೆಣದ ಮಾಂಸದಲ್ಲಿ ಆಸಕ್ತವಾದ ಮದಿಸಿರುವ ಮರುಳುಗಳ ಸಮೂಹವನ್ನುಳ್ಳದ್ದೂ ಆಗಿ ಕರ್ಣನು ಗೆದ್ದ ಯುದ್ಧರಂಗವು ವಿಶೇಷ ಭಯಂಕರವಾಗಿತ್ತು. ವ|| ಅಷ್ಟರಲ್ಲಿ ಈ ಕಡೆ ಸಂಸಪ್ತಕರ ಸಮೂಹದಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲು ಅವಕಾಶ ಕೊಡದಂತೆ ಪಾದರಸವನ್ನು ಮರ್ದಿಸುವ ಹಾಗೆ ಹೇಗೋ ಕೊಂದು ಕರ್ಣನಲ್ಲಿ ಯುದ್ಧಮಾಡಲು ಬರುತ್ತಿರುವ ಉತ್ತಮ ಪೌರುಷಶಾಲಿಯಾದ ಅರ್ಜುನನು ತನ್ನ ಸೈನ್ಯಮಧ್ಯದಲ್ಲಿ ಧ್ವಜದಿಂದ ವಿರಾಜಮಾನವಾಗಿ ಮೆರೆಯುವ ತಮ್ಮಣ್ಣನ ರಥವನ್ನು ಕಾಣದೆ ಕೌರವಸೇನಾಸಮುದ್ರದಲ್ಲಿ ವಿಶೇಷವಾಗಿ ಬೆಳೆದು ಹಚ್ಚಿದ ಕೆಂಪುಬಣ್ಣದ ಉರಿಯಂತೆ ತಳತಳಿಸಿ ಅಲುಗಾಡುವ ಸಿಂಹದ ಗುರುತಿನ ಬಾವುಟವನ್ನು ನೋಡಿ ಹತ್ತಿರಕ್ಕೆ ಬರುವಷ್ಟರಲ್ಲಿ ಧರ್ಮರಾಯನನ್ನು ಬೀಡಿಗೆ ಕಳುಹಿಸಿ ಹಿಂತಿರುಗಿ ಬಂದ ನಕುಳಸಹದೇವರಿಂದ ಕರ್ಣನ ಬಲವಾದ ಪೆಟ್ಟಿನಿಂದುಂಟಾದ ಧರ್ಮರಾಯನ ವ್ಯಥೆಯನ್ನು ತಮ್ಮ ಸೈನ್ಯದ ನಾಯಕರ ಸಾವನ್ನೂ ತಿಳಿದನು. ೧೨೧. ಭೀಮನಿಗೆ ಸರಿಸಮಾನರಾ ದ ಬಲಶಾಲಿಗಳಾರೂ ಇಲ್ಲ; ಆದುದರಿಂದ ಎದುರಿಸಿದ

ಕಂ|| ತಾನುಂ ಹರಿಯುಂ ಭೂಪತಿ
ಗಾನತರಾಗಲೊಡಮೊಸೆದು ಪತಿ ಪರಸಿ ಯಮ|
ಸ್ಥಾನಮನೆಂತೆಯ್ದಿಸಿದಿರೊ
ಕಾನೀನನ ದೊರೆಯ ಕಲಿಯನುಗ್ರಾಹವದೊಳ್|| ೧೨೨

ನರ ನಾರಾಯಣರೆಂಬಿ
ರ್ವರುಮೊಡಗೂಡಿದೊಡೆ ಗೆಲ್ವರಾರುರ್ವರೆಯೊಳ್|
ನಿರುತಮೆನೆ ನೆಗೞ್ದ ನಿಮ್ಮಿ
ರ್ವರ ದೊರೆಗಂ ಬಗೆವೊಡಗ್ಗಳಂ ನರರೊಳರೇ|| ೧೨೩

ಎಂತೆನೆ ಮುಯ್ಯೇೞ್ ಸೂೞೆಳೆ
ಯಂ ತಳದೊಳೆ ಪಿೞದನಾತನೆಂಬುದನಾಂ ಮು|
ನ್ನೆಂತುಂ ನಂಬೆನ ನಂಬಿದೆ
ನಿಂತಿಂದಿನ ಗಂಡವಾತಿನೊಳ್ ಸೂತಜನಂ|| ೧೨೪

ಪೆತ್ತಳ್ ಕೊಂತಿಯೆ ಮಕ್ಕ
ಳ್ವೆತ್ತರೊಳೆಂಬವರೆ ಕೊಂತಿ ಮಾದೇವಿಗಮೊಂ|
ದುತ್ತರಮಾದಳ್ ಕರ್ಣಂ
ಬೆತ್ತಕ್ಕನೆ ಎಂದು ಪೊಗೞ್ದುವೆರಡುಂ ಪಡೆಗಳ್|| ೧೨೫

ಕಂ|| ಇನ್ನುಂ ಕರ್ಣನ ರೂಪೆ ದ
ಲೆನ್ನೆರ್ದೆಯೊಳಮೆನ್ನ ಕಣ್ಣೊಳಂ ಸುೞದಪುದಾಂ|
ತೆನ್ನೆಚ್ಚ ಶರಮುಮಂ ಗೆ
ಲ್ದೆನ್ನುಮನಂಜಿಸಿದನೆಂದೊಡಿನ್ನೇನೆಂಬೆಂ|| ೧೨೬

ಅಂತಪ್ಪದಟನನಾಜಿಯೊ
ಳೆಂತೆಂತಿದಿರಾಂತು ಗೆಲ್ದಿರೆನೆ ನೃಪನಂ ಕಂ|
ಸಾಂತಕನೆಂದಂ ಕರ್ಣನು
ಮಾಂತಿರೆ ನೀಮಿಂದು ನೊಂದುದಂ ಕೇಳ್ದೀಗಳ್|| ೧೨೭

ಆರಯ್ಯಲೆಂದು ಬಂದೆವ
ಪಾರ ಗುಣಾಕೊಂದೆವಿಲ್ಲವಿನ್ನುಂ ಬಳವ|
ತ್ಕ್ರೂರಾರಾತಿಯನುಪಸಂ
ಹಾರಿಪೆವೇವಿರಿಯನಾದನೆಂಬುದುಮಾಗಳ್|| ೧೨೮

ಕೌರವಸೈನ್ಯದ ಅಹಂಕಾರವನ್ನು ಸ್ವಲ್ಪ ಕಡಿಮೆಮಾಡಿ ರಾಜನಲ್ಲಿಗೆ ಹೋಗೋಣ ಎಂದು ಶತ್ರುಸೈನ್ಯವನ್ನು ಬಗ್ಗಿಸಿದವನಾದ ಅರ್ಜುನನು ಶತ್ರುಸೈನ್ಯಸಾಗರವನ್ನು ಬಾಣಗಳೆಂಬ ಬಡಬಾನಲನಿಂದ ನಾಶಮಾಡಿ ಅಲ್ಲಿಯ ಯುದ್ಧಕ್ಕೆ ಭೀಮನನ್ನು ಇರಹೇಳಿ ಸಾವಕಾಶಮಾಡದೆ ಧರ್ಮರಾಜನನ್ನು ಸೇರಿದನು. ೧೨೨. ತಾನೂ ಕೃಷ್ಣನೂ ಧರ್ಮರಾಯನಿಗೆ ನಮಸ್ಕಾರಮಾಡಲು ಧರ್ಮರಾಯನು ಹರಸಿ ಈ ಭಯಂಕರವಾದ ಯುದ್ಧದಲ್ಲಿ ಕರ್ಣನಂತಹ ಸಾಮರ್ಥ್ಯವುಳ್ಳ ಶೂರನನ್ನು ಯಮಪಟ್ಟಣಕ್ಕೆ ಹೇಗೆ ಸೇರಿಸಿದಿರೋ?

೧೨೩. ನರನಾರಾಯಣರೆಂಬ ಇಬ್ಬರೂ ಒಟ್ಟುಗೂಡಿದರೆ ಈ ಭೂಮಿಯಲ್ಲಿ ನಿಮ್ಮನ್ನು ನಿಶ್ಚಯವಾಗಿ ಗೆಲ್ಲುವರಾರೂ ಇಲ್ಲ. ವಿಚಾರಮಾಡುವುದಾದರೆ ನಿಮ್ಮಿಬ್ಬರನ್ನು ಮೀರಿದ ಮನುಷ್ಯರು ಇಲ್ಲವೇ ಇಲ್ಲ. ೧೨೪. ಹಿಂದೆ ಕರ್ಣನು ಮೂರು ಏಳುಸಲ (ಇಪ್ಪತ್ತೊಂದು ಸಲ) ಭೂಮಿಯನ್ನು ಅಂಗೈಯಲ್ಲಿಯೇ ಹಿಂಡಿದವನು ಎಂಬುದನ್ನು ನಾನು ಮೊದಲು ಹೇಗೂ ನಂಬಿರಲಿಲ್ಲ.

೧೨೫. ಮಕ್ಕಳನ್ನು ಹೆತ್ತವರಲ್ಲಿ ಪಾಂಡವರನ್ನು ಹೆತ್ತ ಕುಂತೀದೇವಿಯೇ ಮಕ್ಕಳನ್ನು ಹೆತ್ತವಳು (ಉತ್ತಮಳಾದವಳು) ಎಂದು ಹೇಳುತ್ತಿದ್ದ ಎರಡು ಸೈನ್ಯಗಳೂ ಇಂದು ಕರ್ಣನನ್ನು ಹೆತ್ತವಳು ಕುಂತೀದೇವಿಗಿಂತ ಉತ್ತಮಳಾದವಳು ಎಂದು ಹೊಗಳಿದುವು. ೧೨೬. ಇನ್ನೂ ನನ್ನ ಎದೆಯಲ್ಲಿಯೂ ಕಣ್ಣಿನಲ್ಲಿಯೂ ಕರ್ಣನ ಆಕಾರವೇ ಸುಳಿದಾಡುತ್ತಿದೆಯಲ್ಲ; ಎದುರಿಸಿ ನಾನು ಪ್ರಯೋಗಿಸಿದ ಬಾಣಗಳನ್ನು ಗೆದ್ದು ನನ್ನನ್ನೂ ಭಯಪಡಿಸದನೆಂದಾಗ ಇನ್ನೇನನ್ನು ಹೇಳಲಿ. ೧೨೭. ‘ಅಂತಹ ಪರಾಕ್ರಮಶಾಲಿಯನ್ನು ಯುದ್ಧದಲ್ಲಿ ಹೇಗೆ ಎದುರಿಸಿ ಗೆದ್ದಿರಿ’ ಎನ್ನಲು ಧರ್ಮರಾಯನನ್ನು ಕುರಿತು ಕೃಷ್ಣನು ಹೇಳಿದನು. ನೀವು ಇಂದು ಕರ್ಣನನ್ನು ಎದುರಿಸಿ ನೋವುಪಟ್ಟುದನ್ನು ಕೇಳಿ ಈಗ ೧೨೮. ವಿಚಾರಿಸುವುದಕ್ಕೆ ಬಂದೆವು; ಎಲ್ಲೆಯಿಲ್ಲದ ಗುಣಶಾಲಿಯಾದ ಧರ್ಮರಾಯನೇ ಬಲಿಷ್ಠನೂ ಕ್ರೂರನೂ ಆದ ಶತ್ರುವನ್ನು

ನರಕಾಂತಕನಂ ನುಡಿದಂ
ನರೇಂದ್ರನಾನರಸುಗೆಯ್ವ ಪೞುವಗೆಯನದಂ|
ಪರಿಹರಿಸಿದೆನಾತನನೀ
ಕಿರೀಟ ಗೆಲ್ದೆನಗೆ ಪಟ್ಟವಂ ಮಾಡುವನೇ|| ೧೨೯

ಏಮ್ಮೊಗ್ಗೆ ಕರ್ಣನಿಂತೀ
ನಿಮ್ಮಂದಿಗರಿಱಯೆ ಸಾವನೇ ಸುಖಮಿರಿಮಿ|
ನ್ನಮ್ಮ ಸುಯೋಧನನೊಳ್ ಪಗೆ
ಯಮ್ಮದಾನುಂ ತಪೋನಿಯೋಗದೊಳಿರ್ಪೆಂ|| ೧೩೦

ವ|| ಎಂದು ತನ್ನ ನೋಯೆ ನುಡಿದ ನಿಜಾಗ್ರಜನ ನುಡಿಗೆ ಮನದೊಳೇವೈಸಿಯುಮೇವೈ ಸದೆ ವಿನಯಮನೆ ಮುಂದಿಟ್ಟು ವಿನಯವಿಭೂಷಣನಿಂತೆಂದಂ-

ಕಂ|| ಮುಳಿದಿಂತು ಬೆಸಸೆ ನಿಮ್ಮಡಿ
ಯೊಳೆ ಮಾರ್ಕೊಂಡೆಂತು ನುಡಿಮೆನುಸಿರೆಂ ನಿಮ್ಮಂ|
ಮುಳಿಯಿಸಿದ ಸುರಾಸುರುಮ
ನೊಳರೆನಿಸೆಂ ಕರ್ಣನೆಂಬನೆನಗೇವಿರಿಯಂ|| ೧೩೧

ನರಸಿಂಗಂಗಂ ಜಾಕ
ಬ್ಬರಸಿಗಮಳವೊದವೆ ಪುಟ್ಟ ಪುಟ್ಟಿಯುಮರಿಕೇ|
ಸರಿಯೆನೆ ನೆಗೞ್ದುಮರಾತಿಯ
ಸರಿದೊರೆಗಂ ಬಂದೆನಪ್ಪೊಡಾಗಳ್ ನಗಿರೇ|| ೧೩೨

ಪುಟ್ಟೆ ಮುಳಿಸೊಸಗೆಗಳೆ ಕಡು
ಗಟ್ಟಂ ಮುಳಿಸೊಸಗೆಯೆಂಬ ನೃಪತನಯನವಂ|
ಮುಟ್ಟುಗಿಡೆ ಪಾರದರದೊಳ್
ಪುಟ್ಟಿದನರಸಂಗಮರಸಿಗಂ ಪುಟ್ಟಿದನೇ|| ೧೩೩

ಎಂದರಸ ನೇಸಱಂದೊಳ
ಗಾಂ ದಿನಕರಸುತನನಿಕ್ಕಿ ಬಂದಲ್ಲದೆ ಕಾ|
ಣೆಂ ದಲ್ ಭವತ್ಪದಾಜ್ಜಮ
ನೆಂದೆೞ್ದನುದಶ್ರುಜಳಲವಾರ್ದ್ರಕಪೋಳಂ|| ೧೩೪

ನಾವು ಇನ್ನೂ ಕೊಂದಿಲ್ಲ; ನಾಶಪಡಿಸುತ್ತೇವೆ. ಅವನೇನು ಮಹಾದೊಡ್ಡವನು ಎನ್ನಲು ಆಗ ೧೨೯. ಕೃಷ್ಣನನ್ನು ಕುರಿತು ಧರ್ಮರಾಜನು ಹೇಳಿದನು- ಇನ್ನು ಮೇಲೆ ನಾನು ರಾಜ್ಯವಾಳುವ ವ್ಯರ್ಥವಾದ ಆಸೆಯನ್ನು ಬಿಟ್ಟಿದ್ದೇನೆ. ಅವನನ್ನು ಗೆದ್ದು ನಿಜವಾಗಿಯೂ ಅರ್ಜುನನು ನನಗೆ ಪಟ್ಟವನ್ನು ಕಟ್ಟುತ್ತಾನೆಯೇ? ೧೩೦. ಇಂತಹ ನಿಮ್ಮಂತಹವರು ಕರ್ಣನನ್ನು ಗೆಲ್ಲುವುದು ಸಾಧ್ಯವೇ? ಅಮ್ಮಗಳಿರಾ ಇನ್ನು ದುಯೋಧನನಲ್ಲಿ ಹಗೆತನವನ್ನು ಮರೆತು ಸುಖವಾಗಿರಿ. ನಾನೂ ತಪಸ್ಸಿನ ನಿಯಮದಲ್ಲಿ ಇರುತ್ತೇನೆ. ವ|| ಎಂದು ತನಗೆ ನೋವಾಗುವ ಹಾಗೆ ನುಡಿದ ತನ್ನ ಅಣ್ಣನ ಮಾತಿಗೆ ಮನಸ್ಸಿನಲ್ಲಿ ಕೋಪಬಂದರೂ (ಹೊರಗೆ) ಕೋಪಿಸಿಕೊಳ್ಳದೆ ನಮ್ರತೆಯನ್ನೇ ಪ್ರದರ್ಶಿಸಿ ವಿನಯಭೂಷಣನಾದ ಅರ್ಜುನನು ಹೀಗೆಂದನು. ೧೩೧. ಕೋಪಿಸಿಕೊಂಡು ಪ್ರದರ್ಶಿಸಿ ವಿನಯಭೂಷಣನಾದ ಅರ್ಜುನನು ಹೀಗೆಂದನು. ೧೩೧. ಕೋಪಿಸಿಕೊಂಡು ಹೀಗೆ ಹೇಳಿದ ನಿಮ್ಮಪಾದದಲ್ಲಿ ಪ್ರತಿಭಟಿಸಿ ಹೇಗೆ ನುಡಿಯಲಿ? ಮಾತಾನಾಡುವುದಿಲ್ಲ; ನಿಮಗೆ ಕೋಪವನ್ನುಂಟುಮಾಡಿದ ದೇವದಾನವರಿನ್ನೂ ಜೀವದಿಂದಿದ್ದಾರೆ ಎನ್ನಿಸುವುದಿಲ್ಲ (ಹಾಕಿರುವಾಗ) ಕರ್ಣನೆಂಬುವನು ನನಗೆಷ್ಟು ದೊಡ್ಡವನು? ೧೩೨. ನರಸಿಂಹನೆಂಬ ರಾಜನಿಗೂ ಜಾಕಬ್ಬೆಯೆಂಬ ರಾಣಿಗೂ ಪರಾಕ್ರಮವೇ ಹುಟ್ಟಿದೆಯೆಂಬ ರೀತಿಯಲ್ಲಿ ಹುಟ್ಟಿ ಹುಟ್ಟಿಯೂ ಕೂಡ ಅರಿಕೇಸರಿಯೆಂದು ಪ್ರಸಿದ್ಧನಾಗಿಯೂ ಶತ್ರುವಿನ ಸರಿಸಮಾನತೆಗೆ ಬಂದೆನಾದರೆ ನೀವೇ ತಿರಸ್ಕಾರದಿಂದ ಪರಿಹಾಸಮಾಡುವುದಿಲ್ಲವೇ? ೧೩೩. ಕೋಪಸಂತೋಷಗಳು ಹುಟ್ಟಲು ಅದು ನಿಜವಾಗಿಯೂ ಕಷ್ಟವೇ! ಆದರೆ ಆ ಕೋಪಪ್ರಸಾದಗಳನ್ನು ಪರಿಹರಿಸಲಾರದ ರಾಜಕುಮಾರನು ರಾಜ ರಾಣಿಯರಿಗೆ ಹುಟ್ಟಿದವನಲ್ಲ. ಹಾದರಕ್ಕೆ ಹುಟ್ಟಿದವನು. ೧೩೪. ಎಂಬುದಾಗಿ ಹೇಳಿ ರಾಜನೇ ಸೂರ್ಯಾಸ್ತಮಾನದೊಳಗೆ ನಾನು ಕರ್ಣನನ್ನು ಸಂಹರಿಸಿ ಬಂದಲ್ಲದೆ ನಿಮ್ಮ ಪಾದಕಮಲವನ್ನು ಕಾಣುವುದಿಲ್ಲವಲ್ಲ ಎಂದು

ವ|| ಅಂತು ಭೂನಾಥಂ ತನ್ನಳವನಱದುಮಱಯದೆ ಕೆಡೆನುಡಿದು ತಪೋವನದೊಳಲ್ಲದೆ ನೀಗೆನೆಂದೆೞ್ದು ನಿಂದಿರ್ದನನುಸುರಾಂತಕನುಂ ತಾನುಮೆಂತಾನುಂ ಪ್ರಾರ್ಥಿಸಿದೊಡೊಡಂಬಟ್ಟಜಾತ ಶತ್ರುಗೆ ಪೊಡೆವಟ್ಟು ರಥಮನೇಱ ಕೌರವದ್ವಜಿನಿಗೆ ಭಯಜ್ವರಂ ಬರ್ಪಂತೆ ಬಂದು ಪವನ ತನಯಂಗಂತಕತನಯನಸಮಾವಸ್ಥೆಯಂ ಪೇೞಂದಿನನುವರಮೆಲ್ಲಮಂ ನಿಮ್ಮೊರ್ವರ ಮೇಲಿಕ್ಕಿ ಪಿರಿದುಂ ಪೊೞ್ತು ತಡೆದಿರ್ಪೆವೆನೆ ಹಿಡಿಂಬಾಂತಕನಿಂತೆಂದಂ-

ಮ|| ನರ ಮಾತಂಗ ತುರಂಗ ಸೈನ್ಯಮಿದಿರಾಂತೀರೆಂಟು ಲಕ್ಕಂಬರಂ
ಕರಗಿತ್ತೆನ್ನ ನಿಶಾತ ಹೇತಿ ಹತಿಯಿಂ ಮತ್ತಂತುಮೀ ತೋಳ ತೀನ್|
ಕರಗಲ್ಕಾರ್ತಪುದಿಲ್ಲದಕ್ಕರಿಗ ಪೇೞ್ ನೀಂ ಬೇೞ್ಪುದೇ ಸಂಗರಾ
ಜಿರದೊಳ್ ಕೌರವರೆಂಬ ಕಾಕಕುಳಕೆನ್ನೀಯೊಂದೆ ಬಿಲ್ ಸಾಲದೇ|| ೧೩೫

ವ|| ಎಂದ ಭೀಮನನಕಲಂಕರಾಮಂ ನಿಮ್ಮ ಭುಜಬಲಕ್ಕದೇವಿರಿದೆಂದು ನೀಮೆನ್ನ ಕಾಳೆಗಮಂ ಸುರಿಗೆಗಾಳೆಗಮಂ ನೋೞ್ಪಂತೆ ತೊಡೆಯಂ ಪೊಯ್ದಾರ್ದು ನೋಡುತ್ತುಮಿರಿಮೆಂದು ಪವನಜನನೊಡಗೊಂಡು ಪವನಜವದಿಂ ಕರ್ಣನ ರಥಮೆಲ್ಲಿತ್ತೆತ್ತ ಪೋದುದೆನುತುಂ ಬರ್ಪತಿರಥ ಮಥನನ ರಥದ ಕಂಡು ಕೌರವಬಲಮೆಲ್ಲಮೊಲ್ಲನುಲಿದೋಡಿ ವೈಕರ್ತನನ ಮಯಂ ಪುಗುವುದುಂ ಮದೀಯ ಮನೋರಥಮಿಂದು ದೊರೆಕೊಂಡುದೆಂದು ದಿನಕರತನೂಜನೆರಡು ಮುಯ್ವುಮಂ ನೋಡಿ ಸಮರಾನಂದಂಬೆರಸು ಶಲ್ಯನಂ ರಥಮನೆಸಗಲ್ವೇೞ್ದು ದಿವ್ಯಾಸ್ತ್ರಂಗಳ ದೊಣೆಗಳನೆರಡುಂ ದೆಸೆಯೊಳಂ ಬಿಗಿದು ತಾಳವಟ್ಟದ ಬಿಲ್ಲಂ ಕೆಂದಳದೊಳಮರೆ ನೀವಿ ಜೇವೊಡೆದಾಗಳ್-

ಪೃಥ್ವಿ|| ಮಹಾ ಪ್ರಳಯ ಭೈರವ ಕ್ಷುಭಿತ ಪುಷ್ಕಳಾವರ್ತಮಾ
ಮಹೋಗ್ರ ರಿಪು ಭೂಭುಜ ಶ್ರವಣ ಭೈರವಾಡಂಬರಂ|
ಗುಹಾ ಗಹನ ಗಹ್ವರೋದರ ವಿಶೀರ್ಣಮಾದಂದದೇಂ
ಮುಹು ಪ್ರಕಟಮಾದುದಾ ರವಿತನೂಭವ ಜ್ಯಾರವಂ|| ೧೩೬

ಚಿಮ್ಮುತ್ತಿರುವ ಕಣ್ಣೀರಿನ ಕಣಗಳಿಂದ ಒದ್ದೆಯಾದ ಕೆನ್ನೆಯನ್ನುಳ್ಳ ಅರ್ಜುನನು ಎದ್ದನು ವ|| ಹೀಗೆ ರಾಜನಾದ ಧರ್ಮರಾಯನು ತನ್ನ ಪರಾಕ್ರಮವನ್ನು ಅರಿತೂ ಅರಿಯದೆ ಕೆಟ್ಟಮಾತುಗಳನ್ನಾಡಿ ತಪೋವನದಲ್ಲಲ್ಲದೆ (ತನ್ನ ಜೀವನವನ್ನು) ಬೇರೆ ಕಡೆಯಲ್ಲಿ ಕಳೆಯುವುದಿಲ್ಲವೆಂದು ಎದ್ದು ನಿಂತಿದ್ದವನನ್ನು ಕೃಷ್ಣನೂ ಅರ್ಜುನನೂ ಹೇಗೋ ಬೇಡಿಕೊಳ್ಳಲಾಗಿ ಒಪ್ಪಿಕೊಂಡ ಧರ್ಮರಾಜನಿಗೆ ನಮಸ್ಕಾರಮಾಡಿ ತೇರನ್ನು ಹತ್ತಿಕೊಂಡು ಕೌರವಸೈನ್ಯಕ್ಕೆ ಭಯಜ್ವರ ಬರುವ ಹಾಗೆ ಬಂದು ಭೀಮನಿಗೆ ಧರ್ಮರಾಯನ ಮನಸ್ಥಿತಿಯನ್ನು ಹೇಳಿ ಈ ದಿನದ ಯುದ್ಧಭಾರವೆಲ್ಲವನ್ನೂ ನಿಮ್ಮೊಬ್ಬರ ಮೇಲೆಯೇ ಹೇರಿ ಬಹಳ ಹೊತ್ತು ತಡೆದಿದ್ದೆವು ಎನ್ನಲು ಭೀಮನು ಹೀಗೆಂದನು- ೧೩೫. ನನ್ನನ್ನು ಎದುರಿಸಿದ ಸುಮಾರು ಹದಿನಾರುಲಕ್ಷದವರೆಗಿನ ಆನೆ ಕುದುರೆ ಪದಾತಿಗಳು ನನ್ನ ಹೊಡೆತಕ್ಕೆ ಸಿಕ್ಕಿ ಕರಗಿದುವು. ಅಷ್ಟಾದರೂ ಈ ನನ್ನ ತೋಳಿನ ನವೆಯು ಮಾತ್ರ ಕರಗುವುದಕ್ಕೆ ಸಮರ್ಥವಾಗಿಲ್ಲ. (ಆ ಸೈನ್ಯಕ್ಕೆ ನೀನು ಹೇಳಬೇಕೇ- ನಾನೊಬ್ಬನೇ ಸಾಕು) ಅರ್ಜುನ, ಅದಕ್ಕೆ ನೀನೂ ಬರಬೇಕೆ? ಯುದ್ಧದಲ್ಲಿ ಕೌರವರೆಂಬ ಕಾಗೆಯ ಗುಂಪಿಗೆ ನನ್ನ ಈ ಒಂದೇ ಬಿಲ್ಲು ಸಾಲದೇ? ವ|| ಎಂದು ಹೇಳಿದ ಭೀಮನನ್ನು ಕುರಿತು ಅರ್ಜುನನು ನಿಮ್ಮ ತೋಳಬಲಕ್ಕೆ ಅದೇನು ದೊಡ್ಡದು ಎಂದು ಹೇಳಿ ನೀವು ಕಾಳಗವನ್ನು ನೋಡುವಂತೆ ತೊಡೆಯನ್ನು ತಟ್ಟಿ ಆರ್ಭಟಮಾಡಿ ನೋಡುತ್ತಿರಿ ಎಂದನು. ಭೀಮನೊಡಗೂಡಿ ವಾಯುವೇಗದಿಂದ ಕರ್ಣನ ತೇರೆಲ್ಲಿದೆ ಯಾವಕಡೆ ಹೋಯಿತು ಎನ್ನುವ ಬರುತ್ತಿರುವ ಅತಿರಥಮಥನನಾದ ಅರ್ಜುನನ ಬರವನ್ನು ಕಂಡು ಕೌರವಸೈನ್ಯವೆಲ್ಲ ಮೆಲ್ಲಗೆ ಕೂಗಿಕೊಂಡು ಓಡಿಹೋಗಿ ಕರ್ಣನ ಮರೆಯನ್ನು ಪ್ರವೇಶಿಸಿದುವು. ನನ್ನ ಇಷ್ಟಾರ್ಥವು ಈ ದಿನ ಪೂರ್ಣವಾಯಿತು ಎಂದು ಕರ್ಣನು ತನ್ನ ಎರಡು ಭುಜಗಳನ್ನೂ ನೋಡಿ ಯುದ್ಧಾನಂದದಿಂದ ಕೂಡಿ ಶಲ್ಯನನ್ನು ತೇರನ್ನು ನಡೆಸುವಂತೆ ಹೇಳಿ ದಿವ್ಯಾಸ್ತ್ರಗಳ ಬತ್ತಳಿಕೆಯನ್ನು ಎರಡು ಪಕ್ಕದಲ್ಲಿಯೂ ಬಿಗಿದುಕೊಂಡು ತಾಳವಟ್ಟವೆಂಬ ಬಿಲ್ಲು ಕೆಂಪಗಿರುವ ತನ್ನ ಅಂಗೈಯನ್ನು ಸೇರಿಕೊಂಡಿರಲು ಬಿಲ್ಲಿನ ಹದೆಯನ್ನು ಎಳೆದು ಮೀಟಿ (ಜೇವೊಡೆ)ದನು. ೧೩೬. ಪ್ರಳಯಕಾಲದ ಕಾಲಭೈರವನಿಂದ ಕಲಕಲ್ಪಟ್ಟ ಪುಷ್ಟಲಾವರ್ತ ಮೋಡದಂತೆ ಆ ಅತಿಭಯಂಕರವಾದ ಶತ್ರುರಾಜರ ಕಿವಿಗೆ ಭೈರವಾಡಂಬರವಾಗಿ ಗುಹೆಗಳ ಆಳವಾದ ಕಣಿವೆಗಳ ಒಳಭಾಗವನ್ನು ಭೇದಿಸಿದ ಕರ್ಣನ

ವ|| ಅಂತು ಯುಗಾಂತ ವಾತಾಹತ ಕುಲಗಿರಿಯೆ ನೆಲೆಯಿಂ ತಳರ್ವಂತೆ ತಳರ್ದು ಧ್ವಾಂಕ್ಷಧ್ವಜಮಂಬರತಳದೊಳ್ ಮಿಳಿರೆ ತನಗಿದಿರಂ ಬರ್ಪ ಕರ್ಣನ ರಥಕ್ಕೆ ತನ್ನ ರಥಮನಾಸನ್ನಮಾಗೆ ಪರಿಯಿಸಿ ವಿಂಧ್ಯ ಮಳಯ ಮಹೀಧರಂಗಳೊಂದೊಂದಳ್ ತಾಗುವಂತೆ ತಾಗಿ ದೇವದತ್ತ ಶಂಖಮಂ ಪೂರೈಸಿ ಗಾಂಡೀವಮನೇಱಸಿ ನೀವಿ ಜೇವೊಡೆದಾಗಳ್-

ವ|| ಸ್ರ|| ಎನಿತಾ ಬ್ರಹ್ಮಾಂಡದಿಂದಿತ್ತುದ ಕುಲ ನಗ ದ್ವೀಪ ಸಂಘಾತಮಂತಂ
ತನಿತುಂ ಬತ್ತಿತ್ತು ತೂಳ್ದತ್ತುಡುಗಿದುದೆನೆ ದಿಕ್ಪಾಲರಾ ದೇವದತ್ತ|
ಧ್ವನಿ ಸಂಮಿಶ್ರಂ ಸಮುದ್ಯದ್ರಜತಗಿರಿತಟ ಸ್ಪಷ್ಟ ಸಂಶ್ಲಿಷ್ಟ ಮೌರ್ವೀ
ನಿನದಂ ಪರ್ವಿತ್ತಕಾಂಡ ಪ್ರಳಯ ಘನ ಘಟಾಟೋಪ ಗಂಭೀರನಾದಂ|| ೧೩೭

ವ|| ಆಗಳಾ ಧ್ವನಿಯಂ ಕೇಳ್ದು ದೇವೇಂದ್ರನಿಂದ್ರಲೋಕದೋಳ್ ಮಿಟ್ಟೆಂದುಮಿಡುಕಲಪ್ಪೊಡಂ ದೇವರಿಲ್ಲದಂತು ದೇವನಿಕಾಯಂಬೆರಸು ತನ್ನ ಮಗನ ಕಾಳೆಗಮಂ ನೋಡಲೆಂದು ಚಿತ್ರಪಟಮಂ ಕೆದಱ ಗಗನತಳಮನಳಂಕರಿಸಿದಂತೆ ಷೋಡಶ ರಾಜರ್ವೆರಸು ಬಂದಿರ್ದನಾಗಳ್-

ಕಂ|| ದೇವ ಬ್ರಹ್ಮ ಮುನೀಂದ್ರಾ
ಸೇವಿತನುತ್ತಪ್ತ ಕನಕವರ್ಣಂ ಹಂಸ|
ಗ್ರೀವ ನಿಹಿತೈಕಪಾದನಿ
ಳಾವಂದ್ಯನನಿಂದ್ಯನಬ್ಜಗರ್ಭಂ ಬಂದಂ|| ೧೩೮

ವ|| ಆಗಳ್-

ಕಂ|| ಏಱಯೆ ನಂದಿಯನಾ ಪೆಱ
ಗೇಱದ ಗಿರಿಸುತೆಯ ಮೊಲೆಗಳಳ್ಳೇಱಂ ನೀ|
ರೇಱಸುತಿರೆ ಕರ್ಣಾರ್ಜುನ
ರೇಱಂ ನೋಡಲ್ಕೆ ಭೂತನಾಥಂ ಬಂದಂ|| ೧೩೯

ಕಂ|| ಆರನುವರದೊಳಮೆನಗಣ
ಮಾರದ ಕಣ್ಮಲರ್ಗಳಾರ್ಗುಮರಿಗನಿನೆನುತುಂ|
ನೀರದಪಥದೊಳ್ ಮುತ್ತಿನ
ಹಾರದ ಬೆಳಗೆಸೆಯೆ ನಾರದಂ ಬಂದಿರ್ದಂ|| ೧೪೦

ಬಿಲ್ಲಿನ ಹೆದೆಯ ಶಬ್ದವು ಆ ದಿನ ಪುನ ಪುನ ಪ್ರಕಟವಾಯಿತು. ವ|| ಪ್ರಳಯಕಾಲದ ಗಾಳಿಯಿಂದ ಹೊಡೆಯಲ್ಪಟ್ಟ ಕುಲಪರ್ವತಗಳು (ತಾವಿರುವ) ನೆಲೆಯಿಂದ ಚಲಿಸುವಂತೆ ಕರ್ಣನು ಚಲಿಸಿದನು. ಕಾಗೆಯ ಬಾವುಟವು ಆಕಾಶಪ್ರದೇಶದಲ್ಲಿ ಅಲುಗಾಡುತ್ತಿರಲು ತನಗೆ ಎದುರಾಗಿ ಬರುತ್ತಿರುವ ಕರ್ಣನ ತೇರಿಗೆ ತನ್ನ ತೇರನ್ನು ಸಮೀಪವಾಗುವ ಹಾಗೆ ಹರಿಯಿಸಿ ವಿಂಧ್ಯ ಮಲಯಪರ್ವತಗಳು ಒಂದರೊಡನೊಂದು ತಾಗುವಂತೆ ತಾಗಿ ಅರ್ಜುನನು ದೇವದತ್ತಶಂಖವನ್ನು ಊದಿ ಗಾಂಡೀವಕ್ಕೆ ಹೆದೆಯನ್ನೇರಿಸಿ ಚೆನ್ನಾಗಿ ಸೆಳೆದು ಶಬ್ದಮಾಡಿದನು. ೧೩೭. ಬ್ರಹ್ಮಾಂಡದಿಂದೀಕಡೆ ಎಷ್ಟು ಸಮುದ್ರ, ಕುಲಪರ್ವತದ್ವೀಪ ಸಮೂಹವಿದ್ದಿತೋ ಅವಷ್ಟೂ ಕ್ರಮವಾಗಿ ಬತ್ತಿತು, ತಳ್ಳಲ್ಪಟ್ಟಿತು ಮತ್ತು ಸುಕ್ಕಿಹೋಯಿತು ಎಂದು ದಿಕ್ಪಾಲಕರು ಹೇಳುತ್ತಿರಲು ದೇವದತ್ತವೆಂಬ ಶಂಖಧ್ವನಿಯಿಂದ ಕೂಡಿಕೊಂಡಿರುವುದೂ ಪ್ರಳಯಕಾಲದ ಮೋಡಗಳ ಸಮೂಹದ ಆಡಂಬರವುಳ್ಳದೂ ಆದ ಆ ಹೆದೆಯ ಟಂಕಾರಶಬ್ದವು ಎತ್ತರವಾದ ಕೈಲಾಸಪರ್ವತದ ದಡದಲ್ಲಿಯೂ ಸ್ಪಷ್ಟವಾಗಿ ಸೇರಿಕೊಂಡು ಪ್ರಕಟವಾಯಿತು. ವ|| ಆಗ ಆ ಧ್ವನಿಯನ್ನು ಕೇಳಿ ದೇವೇಂದ್ರನು ಇಂದ್ರಲೋಕದಲ್ಲಿ ಮಿಟ್ಟೆಂದು ಅಲುಗಾಡುವುದಕ್ಕೂ ದೇವತೆಯಿಲ್ಲದ ಹಾಗೆ ಎಲ್ಲ ದೇವತೆಗಳ ಸಮೂಹದೊಡನೆ ಕೂಡಿ ತನ್ನ ಮಗನ ಕಾಳಗವನ್ನು ನೋಡಬೇಕೆಂದು ಚಿತ್ರಪಟವನ್ನು ಹರಡಿ ಆಕಾಶಪ್ರದೇಶವನ್ನು ಅಲಂಕರಿಸುವ ಹಾಗೆ ಹದಿನಾರುರಾಜರುಗಳೊಡನೆ ಬಂದಿದ್ದನು. ೧೩೮. ಆಗ ದೇವತೆಗಳು, ಬ್ರಾಹ್ಮಣರು ಮತ್ತು ಋಷಿಶ್ರೇಷ್ಠರುಗಳಿಂದ ಸೇವಿಸಲ್ಪಟ್ಟವನೂ ಚೆನ್ನಾಗಿ ಕಾಸಿದ ಚಿನ್ನದ ಬಣ್ಣವುಳ್ಳವನೂ ಹಂಸದ ಕತ್ತಿನ ಮೇಲೆ ಇಡಲ್ಪಟ್ಟ ಒಂದು ಪಾದವುಳ್ಳವನೂ ಲೋಕಪೂಜ್ಯನೂ ಯಾರಿಂದಲೂ ನಿಂದಿಸಲ್ಪಡದವನೂ ಆದ ಬ್ರಹ್ಮನು ಬಂದನು. ವ|| ಆಗ ೧೩೯. ನಂದಿಯನ್ನೇರಿಕೊಂಡು ಹಿಂದೆ ಹತ್ತಿಕುಳಿತಿರುವ ಪಾರ್ವತಿಯ ಮೊಲೆಗಳ ನಯವಾದ ತಿವಿತದಿಂದ ರಸವೇರುತ್ತಿರಲು ಕರ್ಣಾರ್ಜುನರ ಕಾಳಗವನ್ನು ನೋಡಲು ಈಶ್ವರನೂ ಬಂದನು. ೧೪೦. ಯಾರ ಯುದ್ಧದಲ್ಲಿಯೂ ಸ್ವಲ್ಪವೂ ತೃಪ್ತಿಯಾಗದ ನನ್ನ ನೇತ್ರಪುಷ್ಪಗಳು ಅರ್ಜುನನಿಂದ ತೃಪ್ತಿಹೊಂದುತ್ತವೆ ಎಂದು ಹೇಳುತ್ತಾ ಆಕಾಶಮಾರ್ಗದಲ್ಲಿ ಮುತ್ತಿನ

ರಸೆಯಿಂದಮೊಗೆದು ಪೆಡೆಗಳ
ಪೊಸ ಮಾಣಿಕದೆಳವಿಸಿಲ್ಗಳೊಳ್ ಪೊಸದಳಿರೊಳ್|
ಮುಸುಕಿದ ತೆಱದಿಂದೆಸೆದಿರೆ
ಪೊಸತೆನೆ ನಡೆ ನೋಡಲುರಗರಾಜಂ ಬಂದಂ|| ೧೪೧

ದಿನಕರನುಮಿಂದ್ರನುಂ ನಿಜ
ತನಯರ ದೆಸೆಗೆಱಗಿದೆಱಕದಿಂ ಗೆಲವಿನ ಮಾ|
ತನೆ ನುಡಿಯೆ ನುಡಿದ ಜಗಳಮ
ದಿನಿಸಾನುಂ ತ್ರಿಪುರಹರನ ಕಿವಿಗೆಯ್ದುವುದುಂ|| ೧೪೨

ವ|| ಆಗಳ್ ದೇವೇಂದ್ರಂಗಂ ದಿವಸೇಂದ್ರಂಗಂ ಬೞಯನಟ್ಟಿ ಬರಿಸಿ-

ಕಂ|| ಜಗಳಮಿದೇಂ ದಿನಕರ ಪೊಣ
ರ್ದು ಗೆಲ್ವನೇ ನಿಜತನೂಭವಂ ಹರಿಗನೊಳೇಂ|
ಬಗೆಗೆಟ್ಟೆಯೊ ಧುರದೊಳವಂ
ಮಿಗಿಲೆನಗೆನೆ ನಿನಗೆ ಪಗಲೊಳೇಂ ಕೞ್ತಲೆಯೇ|| ೧೪೩

ವ|| ಎಂದು ದಿನಕರನ ಪುರಂದರನ ಜಗಳಮಂ ಪತ್ತುವಿಡೆ ನುಡಿದು-

ಕಂ|| ಅಳವಿನೊಳೆನ್ನುಮನಿನಿಸ
ಗ್ಗಳಿಸಿದ ಹರಿಗನೊಳಿದಿರ್ಚಿ ಕರ್ಣಂ ಗೆಲಲು|
ಮ್ಮಳಿಪಂ ಗಡಮೆಂದೋಪಳ
ತಳಮಂ ಪೊಯ್ದೀಶ್ವರಂ ಮುಗುಳ್ನಗೆ ನಕ್ಕಂ|| ೧೪೪

ವ|| ಅಂತು ಮುಗಿಲೂಱದ ಮೂಱುಲೋಕಮುಂ ಕರ್ಣಾರ್ಜುನರ ಯುದ್ಧಮಂ ನೋಡಲ್ ನೆರೆದಲ್ಲಿ ನೆರವಿವಡೆದೆನ್ನ ಪ್ರತಿಜ್ಞೆಯಂ ನೆಱಪಲಿಂದವಸಂಬಡೆದೆನೆಂದು ಕೌರವ ಕುಲಹಿಮಕರಾನಿಪ್ರಚಯರ್ವವಾರಿದನಪ್ಪ ಪವನತನಯಂ ಬದ್ಧವಪುವಾಗಿ ದುರ್ಯೋಧನಾ ನುಜರಂ ಪೆಸರ್ವೆಸರೊಳೆ ಕರೆದು ಮೂದಲಿಸಿದೊಡೆ ಮುನ್ನೆ ತಮ್ಮೊಡವುಟ್ಟಿದರ್ ಸತ್ತೞಲೊಳ ನಿಬರುವೊಂದಾಗಿ ಬಂದು ತಾಗಿದಾಗಳ್-

ಮ|| ಮಸಕಂಗುಂದದೆ ಪಾಯ್ವರಾತಿ ಶರಸಂಘಾತಂಗಳಂ ಕೂಡೆ ಖಂ
ಡಿಸಿ ಬಿಲ್ಲಂ ಮುಱಯೆಚ್ಚೊಡಂತನಿಬರುಂ ಬಾಳ್ಗಿೞ್ತು ಮೇಲ್ವಾಯ್ದೊಡ|
ರ್ಬಿಸೆ ತಿಣ್ಣಂ ತೆಗೆದರ್ಧಚಂದ್ರಶರದಿಂ ಸೂೞ್ ಸೂೞೊಳೆಚ್ಚಾಗಳ
ರ್ಚಿಸಿದಂತಿರ್ದುದುರುಳ್ದ ಕೌರವಶಿರಪದ್ಮಂಗಳಿಂ ಕೊಳ್ಗುಳಂ|| ೧೪೫

ಹಾರದ ಕಾಂತಿಯು ಪ್ರಕಾಶಿಸುತ್ತಿರಲು ನಾರದನು ಬಂದಿದ್ದನು. ೧೪೧. ಪಾತಾಳಲೋಕದಿಂದ ಹುಟ್ಟಿ ಹೆಡೆಗಳ ಹೊಸಮಾಣಿಕ್ಯಗಳು ಎಳೆಬಿಸಿಲಿನಲ್ಲಿ ಹೊಸಚುರುಗಳಿಂದ ಮುಚ್ಚಿಕೊಂಡಿರುವ ರೀತಿಯಿಂದ ಪ್ರಕಾಶಿಸುತ್ತಿರಲು ಸರ್ಪರಾಜನಾದ ವಾಸುಕಿಯೂ ಬಂದನು. ೧೪೨. ಸೂರ್ಯನೂ ಇಂದ್ರನೂ ತಮ್ಮ ಮಕ್ಕಳ ಕಡೆಗೆ ಉಂಟಾದ ಪಕ್ಷಪಾತದಿಂದ ಜಯದ ಮಾತನ್ನೇ ಆಡುತ್ತಿರಲು ಆಡಿದ ಜಗಳವು ಒಂದಿಷ್ಟು ಈಶ್ವರನ ಕಿವಿಗಳಿಗೂ ಮುಟ್ಟಿತು. ವ|| ಆಗ ಇಂದ್ರನಿಗೂ ಸೂರ್ಯನಿಗೂ ದೂತರನ್ನು ಕಳುಹಿಸಿ ಬರಮಾಡಿ ೧೪೩. ಸೂರ್ಯನೇ ಇದೇನು ಜಗಳ, ನಿನ್ನ ಮಗನಾದ ಕರ್ಣನು ಹರಿಗನಲ್ಲಿ ಹೆಣಗಾಡಿ ಗೆಲ್ಲುತ್ತಾನೆಯೇ, ಬುದ್ಧಿಗೆಟ್ಟಿದ್ದೀಯೇನು? ಯುದ್ಧದಲ್ಲಿ ಅವನು ನನಗಿಂತಲೂ ಮೇಲಾದವನು ಎನ್ನುವಾಗ ನಿನಗೆ ಹಗಲಿನಲ್ಲಿಯೇ ಕತ್ತಲೆಯೇ? ವ|| ಸೂರ್ಯ ಮತ್ತು ಇಂದ್ರರ ಜಗಳವನ್ನು ಕೊನೆಗಾಣುವಂತೆ ತೀರ್ಮಾನಿಸಿ ೧೪೪. ಪರಾಕ್ರಮದಲ್ಲಿ ನನ್ನನ್ನೂ ಒಂದಿಷ್ಟು ಮೀರಿರುವ ಹರಿಗನನ್ನು ಎದುರಿಸಿ ಗೆಲ್ಲುವುದಕ್ಕೆ ಕರ್ಣನು ಕಾತರನಾಗಿದ್ದಾನೆಯಲ್ಲವೇ ಎಂದು ಈಶ್ವರನು ತನ್ನ ಪ್ರಿಯೆಯಾದ ಪಾರ್ವತಿಯ ಅಂಗೈಯನ್ನು ತಟ್ಟಿ ಹುಸಿನಗೆಯನ್ನು ನಕ್ಕನು. ವ|| ಹಾಗೆ ಆಕಾಶದಲ್ಲಿ ನೆರೆದಿರುವ ಮೂರುಲೋಕವೂ ಕರ್ಣಾರ್ಜುನರ ಯುದ್ಧವನ್ನು ನೋಡಲು ನೆರೆದಿರುವಾಗಲೇ ನಾನೂ ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡಲು ಅವಕಾಶಪಡೆದೆನೆಂದು ಕೌರವವಂಶವೆಂಬ ಚಂದ್ರನ ಕೊಳೆಯ ರಾಶಿಗೆ ಮಳೆಗಾಲದ ಮೋಡವಾಗಿರುವ ಭೀಮಸೇನನು ಉಬ್ಬಿ ಸಂತೋಷಪಟ್ಟನು. ದುರ್ಯೋಧನನ ತಮ್ಮಂದಿರೊಬ್ಬ ರೊಬ್ಬರನ್ನೂ ಅವರ ಹೆಸರನ್ನು ಹಿಡಿದು ಮೂದಲಿಸಿ ಕರೆದನು. ಈಗಾಗಲೇ ತಮ್ಮ ಸಹೋದರರು ಸತ್ತ ದುಖದಿಂದ ದುಖಿತರಾದ ಆ ಅಷ್ಟು ಜನವೂ ಒಂದಾಗಿ ಸೇರಿ ತಾಗಿದರು. ೧೪೫. ಕಡಿಮೆಯಾಗದ ವೇಗದಿಂದ ಹಾದುಬರುತ್ತಿರುವ ಬಾಣಸಮೂಹಗಳನ್ನು ತಕ್ಷಣವೇ ಕತ್ತರಿಸಿ ಬಿಲ್ಲನ್ನೂ ಮುರಿದುಹೋಗುವ ಹಾಗೆ ಹೊಡೆದನು. ಅಷ್ಟು ಜನವೂ ಕತ್ತಿಯನ್ನು ಒರೆಯಿಂದ ಹೊರತೆಗೆದು- ಸೆಳೆದು ಮೇಲೆ ನುಗ್ಗಿ ಬಂದರು.

ವ|| ಅಂತು ದುರ್ಯೋಧನ ದುಶ್ಶಾಸನರಿರ್ವರುಮುೞಯುೞದ ಕೌರವರೆಲ್ಲರುಮಂ ಜೀರಗೆಯೊಕ್ಕಲ್ಮಾಡಿ ಕೆಡೆದ ಪೆಣಂಗಳನೆಡಗಲಿಸಿ ನಿಂದು-

ಮ|| ಚಲದಿಂ ಕೃಷ್ಣೆಯ ಕೇಶಮಂ ಪಿಡಿದ ನಿನ್ನಿಂದಾದೞಲ್ ನಿನ್ನುರ
ಸ್ಥಲಮಂ ಪೋೞದೆ ಪೋಪುದಲ್ತೆನಗದೇಕಳ್ಕಿರ್ದಪೈ ಬಾೞ್ವ ಪಂ|
ಬಲದೇನಿಂ ನಿನಗುಂಟೆ ನಿನ್ನನುಜರಂ ಕಂಡೆಂತುಮೇನೆನ್ನ ತೋ
ಳ್ವಲೆಯೊಳ್ ಸಿಲ್ಕಿದೆಯೆಂದು ಮೂದಲಿಪುದುಂ ದುಶ್ಶಾಸನಂ ತಾಗಿದಂ|| ೧೪೬

ವ|| ಅಂತು ತಾಗಿದಾಗಳ್-

ಕಂ|| ಕಱುಪೆೞ್ದು ಪಗೆಯ ಬೇರ್ವರಿ
ದುಱುಮಿಕೆಯ ಪೊದೞ್ದ ಗಂಡಮಚ್ಚರದೊದವಿಂ|
ನೆಱನನೆ ಮೂದಲಿಸುತ್ತುಂ
ನೆಱನನೆ ತೆಗೆದೆಚ್ಚರೊರ್ವರೊರ್ವರನಾಗಳ್|| ೧೪೭

ಸುರಿಗಿಱವ ತೆಱದಿನೋರೊ
ರ್ವರನಿಸೆ ನಡೆ ನಟ್ಟ ಕೋಲ ಬೞವಿಡಿದೆತ್ತಂ|
ಸುರಿದುವವಂದಿರ ಮುಳಿಸಿನ
ತೆರಳ್ದ ದಳ್ಳುರಿಯನಿೞಸಿ ನವರುರಂಗಳ್|| ೧೪೮

ವ|| ಅಂತು ನಿಜನಿಶಿತಮಾರ್ಗಣಂಗಳಿಂದಮಂಬು ತಪ್ಪ ಜಟ್ಟಿಗ ಬಿಲ್ಲಾಳಂತೆಚ್ಚು ಪಾಯ್ವರಾತಿಯ ಮೆಯ್ಯ ನೆತ್ತರಂ ಕಂಡು ಸೂೞೇಸಿನೊಳಿವನ ನೆತ್ತರೊಕ್ಕೊಡಂ ತನಗೆ ಬಸಿಱi ಕುಡಿಯಲುಂ ದ್ರೌಪದಿಯ ಕೇಶಪಾಶಮಂ ತೊಯ್ದು ಮುಡಿಯಲುಂ ನೆಯದೆಂದು-

ಕಂ|| ಅವನಂ ಬಂಚಿಸಿ ಗದೆಗೊಂ
ಡವನ ವರೂಥಮನೆ ತಿಣ್ಣಮಿಟ್ಟೊಡೆ ಗದೆಗೊಂ|
ಡವನೆಯ್ಯರೆ ರಥದಿಂದಿೞ
ದವನಿಯೊಳವನುಮನುರುಳ್ಚಿದಂ ಪವನಸುತಂ|| ೧೪೯

ಭೀಮನು ರಭಸದಿಂದ ಅರ್ಧಚಂದ್ರಾಕಾರದ ಬಾಣವನ್ನು ತೆಗೆದು ಸಲಸಲಕ್ಕೂ ಹೊಡೆದಾಗ ಯುದ್ಧಭೂಮಿಯು ಉರುಳಿರುವ ಕೌರವರ ತಲೆಯೆಂಬ ಕಮಲಗಳಿಂದ ಪೂಜಿಸಲ್ಪಟ್ಟಂತೆ ಇದ್ದಿತು. ವ|| ಹಾಗೆ ದುರ್ಯೋಧನ ದುಶ್ಶಾಸನರಿಬ್ಬರನ್ನು ಬಿಟ್ಟು ಉಳಿದ ಕೌರವರೆಲ್ಲರನ್ನೂ ಜೀರಿಗೆಯನ್ನು ಒಕ್ಕುವಂತೆ ಒಕ್ಕಿ ಕೆಡೆದಿರುವ ಹೆಣಗಳನ್ನು ದಾಟಿ ನಿಂತನು. ೧೪೬. ‘ಛಲದಿಂದ ದ್ರೌಪದಿಯ ಕೂದಲನ್ನು ಹಿಡಿದೆಳೆದ ನಿನ್ನಿಂದಾಗಿರುವ ದುಖವು ನಿನ್ನ ಹೃದಯಪ್ರದೇಶವನ್ನು ಸೀಳದೇ ಹೋಗುವುದಿಲ್ಲ. ನನಗೆ ಏತಕ್ಕಾಗಿ ಹೆದರಿದ್ದೀಯೆ? ನಿನ್ನ ತಮ್ಮಂದಿರಾದುದನ್ನು ನೋಡಿಯೂ ಬದುಕಬೇಕೆಂಬ ಹಂಬಲ ನಿನಗೆ ಇನ್ನೂ ಇದೆಯೇ? ಹೇಗಾದರೇನು? ನನ್ನ ತೋಳಿನ ಬಲೆಯಲ್ಲಿ ಸಿಕ್ಕಿದ್ದೀಯೇ’ ಎಂದು ಮೂದಲಿಸಲು ದುಶ್ಶಾಸನನು ತಾಗಿದನು. ವ|| ಹಾಗೆ ತಾಗಿದಾಗ ೧೪೭. ಕೆರಳಿರುವ ಅಕವಾದ ದ್ವೇಷದಿಂದಲೂ ಬೇರುಬಿಟ್ಟಿರುವ ಗರ್ಜನೆಯಿಂದಲೂ, ವ್ಯಾಪ್ತವಾದ ಪೌರುಷ ಮತ್ತು ಮತ್ಸರದ ಸೇರುವಿಕೆಯಿಂದಲೂ ಮರ್ಮವನ್ನೇ ರಹಸ್ಯವಾದುದನ್ನೇ ಮೂದಲಿಸುತ್ತ ಒಬ್ಬೊಬ್ಬರೂ ಮರ್ಮಸ್ಥಳವನ್ನೇ ಗುರಿಮಾಡಿ ಹೊಡೆದರು. ೧೪೮. ಕೈಗತ್ತಿಯಿಂದ ಹೊಡೆದಾಡುವಂತೆ ಒಬ್ಬನು ಮತ್ತೊಬ್ಬನನ್ನು ಹೊಡೆಯಲು ಚೆನ್ನಾಗಿ ನಾಟಿಕೊಂಡ ಬಾಣದ ದಾರಿಯನ್ನೇ ಅನುಸರಿಸಿ ಹೊಸರಕ್ತವು ಅವರುಗಳ ಕೋಪದ ಒಟ್ಟುಗೂಡಿಸಿದ ದಳ್ಳುರಿಯನ್ನೂ ತಿರಸ್ಕರಿಸುತ್ತ ಎಲ್ಲಕಡೆಯಲ್ಲಿಯೂ ಸುರಿಯಿತು. ವ|| ಭೀಮನು ಹರಿತವಾದ ಬಾಣಗಳಿಂದ ಆ ಬಾಣಗಳು ಮುಗಿದು ಹೋಗುವವರೆಗೂ ಶೂರನಾದ ಬಿಲ್ಲಾಳಿನಂತೆ ಹೊಡೆದು ದುಶ್ಶಾಸನನ ಮೆಯ್ಯಿಂದ ಹರಿದುಬರುತ್ತಿರುವ ರಕ್ತವನ್ನು ನೋಡಿ ಈ ಸರದಿಯ ಪೆಟ್ಟಿನಿಂದಲೇ ಇವನ ರಕ್ತವು ಸುರಿದುಹೋದರೆ ಮುಂದೆ ಅದು ತನ್ನ ಹೊಟ್ಟೆಯು ತೃಪ್ತಿಯಾಗುವ ಹಾಗೆ ಕುಡಿಯುವುದಕ್ಕೂ ದ್ರೌಪದಿಯ ಕೂದಲಿನರಾಶಿಯನ್ನು ಒದ್ದೆಮಾಡಿ ಮುಡಿಸುವುದಕ್ಕೂ ಸಾಲದೇ ಹೋಗಬಹುದು ಎಂದು ೧೪೯. ಅವನನ್ನು ವಂಚಿಸಿ ಗದೆಯನ್ನು ತೆಗೆದುಕೊಂಡು ಅವನ ತೇರನ್ನು ತೀಕ್ಷ್ಣವಾಗಿ ಹೊಡೆದನು. ಅವನು ಗದೆಯನ್ನು ತೆಗೆದುಕೊಂಡು

ಮ|| ಬಳೆ ನರ್ಗುತ್ತಿರೆ ಮೆಟ್ಟಿ ಗಂಟಲನಿವಂ ದುಶ್ಶಾಸನಂ ಭೀಮನಿಂ
ಬಳ ಸಂಪನ್ನನವುಂಕಿ ಕೊಂದಪನಿದಂ ಮಾರ್ಕೊಳ್ವ ಬಲ್ಲಾಳ್ಗಸುಂ|
ಗೊಳೆ ಬಾಳೆತ್ತಿದೆನೇಕೆ ಕಣ್ಣ ಮಿಡುಕೈ ಪಿಂಗಾಕ್ಷ ನೀನೇಕೆ ಮಿ
ಳ್ಮಿಳ ನೋಡುತ್ತುಳನಿರ್ದೆಯೆಂದದಟರಂ ಭೀಮಂ ಪಳಂಚಲ್ವಿದಂ|| ೧೫೦

ವ|| ಅಂತು ಮುಳಿದ ಪವನಜನ ಕೋಪಾಟೋಪಮಂ ಕಂಡು ಕೌರವಬಲದ ನಾಯಕರೊಳೊರ್ವರಪ್ಪೊಡಂ ಮಿಟ್ಟೆಂದು ಮಿಡುಕಲಣ್ಮದಿರೆ ಪವನಾತ್ಮಜಂ ದ್ರುಪದಾತ್ಮಜೆಗೆ ಬೞಯನಟ್ಟುವುದುಮಾ ವನಿತೆ ಜಯವನಿತೆ ಬರ್ಪಂತೆ ಬಂದು-

ಮ|| ಉಸಿರೊತ್ತಿಂ ತಿದಿಯಂತಿರೊತ್ತಿದ ಬಸಿಱ್ ಪೋತಂದ ಕಣ್ ಬಿಟ್ಟ ಬಾಯ್
ಮಸಕಂಗುಂದಿದ ಮೆಯ್ ವಲಂ ಬಡಿವ ಕಾಲ್ ಭೂಭಾಗದೊಳ್ ತಂದು ತಾ|
ಟಿಸುತುಂ ಕೋಟಲೆಗೊಳ್ವ ರತ್ನಮಕುಟದ್ಯೋತೋತ್ತಮಾಂಗಂ ವಿರಾ
ಜಿಸುವನ್ನಂ ಪುಡಿಯೊಳ್ ಪೊರಳ್ವ ಪಗೆಯಂ ಕಣ್ಣಾರ್ವಿನಂ ನೋಡಿದಳ್ ||೧೫೧

ಕಂ|| ಆಸತ್ತು ತಿರಿದರಣ್ಯಾ
ವಾಸದ ಪರಿಭವದ ಕುದಿಪಮಂ ನೀಗಿ ಸುಖಾ|
ವಾಸಮನೆಯ್ದಿಸಿದುದು ದು
ಶ್ಶಾಸನನಿರ್ದಿರವು ಮನದೊಳಾ ದ್ರೌಪದಿಯಾ|| ೧೫೨

ವ|| ಆಗಳ್ ವೃಕೋದರಂ ತನ್ನ ತಳೋದರಿಯ ಮುಖಮಂ ನೋಡಿ ನಿನ್ನೆನ್ನ ಪ್ರತಿಜ್ಞೆಯಂ ನೆಱಪುವಂ ಬಾಯೆಂದು ಕೆಲದೊಳ್ ಕುಳ್ಳಿರಿಸಿ ದೃಢ ಕಠಿನಹೃದಯನಪ್ಪ ಹಿರಣ್ಯಾಕ್ಷನುರಮಂ ಪೋೞ್ವ ನಾರಸಿಂಗನಂತೆ-

ಕಂ|| ಡೊಕ್ಕನೆ ಸುರಿಗೆಯೊಳುರಮಂ
ಬಿಕ್ಕನೆ ಬಿರಿಯಿಱದು ಬರಿಯನಗಲೊತ್ತಿ ಮನಂ|
ಕೊಕ್ಕರಿಸದೆ ಬಗಸಿರೆಯಿನ
ಳುರ್ಕ್ಕೆಯೆ ಮೊಗೆಮೊಗೆದು ನೆತ್ತರಂ ಪವನಸುತಂ|| ೧೫೩

ಕಂ|| ನೆತ್ತಿಯೊಳೆದೆದಿನಿಸ
ಯೊತ್ತಿ ಬೞಕ್ಕಿೞಯೆ ಪೊಸೆದು ಜಡೆಗೊಂಡಿರ್ದು|
ದ್ವೃತ್ತ ಕುಚಯುಗೆಯ ಕೇಶಮ
ನೆತ್ತಂ ಪಸರಿಸಿದನೆಯ್ದೆ ಪಸರಿಸಿದದಟಿಂ|| ೧೫೪

ಬರಲು ಭೀಮನು ರಥದಿಂದಿಳಿದು ಅವನನ್ನು ಭೂಮಿಯಲ್ಲಿ ಉರುಳಿಸಿದನು. ೧೫೦. ಗಂಟಲಬಳೆಗಳು ಜಜ್ಜಿಹೋಗುವ ಹಾಗೆ ಕಾಲಿನಿಂದ ಮೆಟ್ಟಿ ತುಳಿದು ಇವನು ದುಶ್ಶಾಸನ, ಭೀಮನಿಗಿಂತ ಬಲಶಾಲಿಯಾದವನು, ಇವನನ್ನು ಅಮುಕಿ ಕೊಂದು ಹಾಕುತ್ತೇನೆ, ಇದನ್ನು ಪ್ರತಿಭಟಿಸುವ ಶೂರರ ಪ್ರಾಣಾಪಹಾರಮಾಡಲು ಕತ್ತಿಯನ್ನೆತ್ತಿದ್ದೇನೆ, ದುರ್ಯೋಧನ! ಯಾತಕ್ಕೋಸ್ಕರ ನೀನು ಕಣ್ಣನ್ನು ಮಿಟುಕಿಸುವುದಿಲ್ಲ? ಏತಕ್ಕೆ ಮಿಳಮಿಳನೆ ನೋಡುತ್ತ ಒಳಗೇ ಇದ್ದೀಯೆ ಎಂದು ಭೀಮನು ಶೂರರನ್ನು ಪ್ರತಿಭಟಿಸಿ ಆರ್ಭಟಿಸಿದನು. ವ|| ಹಾಗೆ ಕೋಪಿಸಿಕೊಂಡ ಭೀಮನ ಕೋಪಾಟೋಪವನ್ನು ಕಂಡು ಕೌರವಸೈನ್ಯದ ನಾಯಕರಲ್ಲಿ ಒಬ್ಬರಾದರೂ ಮಿಟ್ಟೆಂದು ಮಿಡುಕಲಾರದವರಾಗಿರಲು ಭೀಮನು ದ್ರೌಪದಿಗೆ ದೂತರ ಮೂಲಕ ಹೇಳಿಕಳುಹಿಸಲು ಆ ಸ್ತ್ರೀಯು ಜಯಲಕ್ಷ್ಮಿಯು ಬರುವಂತೆ ಬಂದು ೧೫೧. ಉಸಿರಿನ ಒತ್ತಡದಿಂದ ತಿದಿಯ ಹಾಗೆ ಅಮುಕಿದ ಹೊಟ್ಟೆ, ಹೊರಕ್ಕೆ ಹೊರಟಿರುವ ಕಣ್ಣು, ಬಿಟ್ಟಿರುವ ಬಾಯಿ, ಕುಂದಿದ ದೇಹ, ಚೆನ್ನಾಗಿ ಬಡಿಯುತ್ತಿರುವ ಕಾಲು, ನೆಲದಮೇಲೆ ಬಡಿಯುತ್ತ ಹಿಂಸೆ ಪಡುತ್ತಿರುವ, ರತ್ನಖಚಿತವಾದ ಕಿರೀಟದಿಂದ ಪ್ರಕಾಶಮಾನವಾಗಿರುವ ತಲೆ ಇವೆಲ್ಲವೂ ವಿರಾಜಿಸುತ್ತಿರಲು ಧೂಳಿನಲ್ಲಿ ಹೊರಳಾಡುತ್ತಿರುವ ಹಗೆಯನ್ನು ಕಣ್ಣುತೃಪ್ತಿ ಪಡುವವರೆಗೂ ದ್ರೌಪದಿಯು ನೋಡಿದಳು. ೧೫೨. ದುಶ್ಶಾಸನನಿದ್ದ ಸ್ಥಿತಿಯು ಅವಳು ಕಾಡಿನಲ್ಲಿ ಬಳಲಿ ಅಲೆದಾಡಿದ, ವನವಾಸದ ಅವಮಾನವನ್ನೂ ಸಂಕಟವನ್ನೂ ಹೋಗಲಾಡಿಸಿ ಅವಳಿಗೆ ಸುಖದ ನೆಲೆಯನ್ನುಂಟುಮಾಡಿತು. ವ|| ಆಗ ಭೀಮನು ತನ್ನ ಪತ್ನಿಯ (ತಳೋದರಿಯ) ಮುಖವನ್ನು ನೋಡಿ ನಿನ್ನ ಮತ್ತು ನನ್ನ ಪ್ರತಿಜ್ಞೆಯನ್ನು ಪೂರ್ಣ ಮಾಡೋಣ ಬಾ ಎಂದು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ದೃಢವೂ ಕಠಿಣವೂ ಆದ ಹಿರಣ್ಯಾಕ್ಷನ ಎದೆಯನ್ನು ಸೀಳುವ ನರಸಿಂಹನಂತೆ ೧೫೩. ಕೈಗತ್ತಿಯಿಂದ ಎದೆಯನ್ನು ಡೊಕ್ಕೆಂದು ಬಿರುಬಿರನೆ ಬಿರಿಯುವಂತೆ ತಿವಿದು ಪಕ್ಕವನ್ನು ಅಗಲವಾಗಿ ತಳ್ಳಿ ಮನಸ್ಸಿನಲ್ಲಿ ಅಹಸ್ಯಪಟ್ಟುಕೊಳ್ಳದೆ ಬೊಗೆಸೆಯಿಂದ ಭೀಮನು ರಕ್ತವನ್ನು ವಿಶೇಷವಾಗಿ ಮೊಗೆಮೊಗೆದು ೧೫೪. ದ್ರೌಪದಿಯ ತಲೆಯಮೇಲೆ ಸುರಿದನು. ಒಂದಿಷ್ಟು ತಲೆಗಿಳಿಯುವಂತೆ ತಟ್ಟಿದನು. ಬಳಿಕ ಕೆಳಕ್ಕೆ ಇಳಿಯಲು

ಪಸರಿಸಿ ಪಂದಲೆಯಂ ಮೆ
ಟ್ಟಿಸಿ ವೈರಿಯ ಪಲ್ಲ ಪಣಿಗೆಯಿಂ ಬಾರ್ಚಿ ಪೊದ|
ೞ್ದೊಸಗೆಯಿನವನ ಕರುಳ್ಗಳೆ
ಪೊಸವಾಸಿಗಮಾಗೆ ಕೃಷ್ಣೆಯಂ ಮುಡಿಯಿಸಿದಂ|| ೧೫೫

ವ|| ಅಂತು ತನ್ನಪಗೆಯುಂ ಬಗೆಯುಮೊಡನೊಡನೆ ಮುಡಿಯೆ ರಿಪು ವಿಪುಳರುರ ಜಲಂಗಳೊಳಂ ರುಚಿರ ತದೀಯಾಂತ್ರಮಾಲೆಯನೆ ಮಾಲೆಮಾಡಿ ಮುಡಿಯಿಸಿ ಕೃಷ್ಣೆಯ ಮೊಗಮಂ ನೋಡಿ ಮುಗುಳ್ನಗೆ ನಕ್ಕು ಕೌರವಕುಳವಿಳಯಕೇತುವಿಂತೆಂದಂ-

ವ|| ಸ್ರ|| ಇದಳೊ ಶ್ವೇತಾತಪತ್ರಸ್ಥಗಿತ ದಶ ದಿಶಾಮಂಡಲಂ ರಾಜಚಕ್ರಂ
ಪುದಿದೞiಡಿತ್ತಡಿಂಗಿತ್ತಿದಳೆ ಕುರುರಾಜಾನ್ವಯಂ ಮತ್ಪ್ರತಾಪ|
ಕ್ಕಿದಱಂದಂ ನೋಡಗುರ್ವುವಿದುದಿದುವೆ ಮಹಾಭಾರತಕ್ಕಾದಿಯಾಯ್ತ
ಬ್ಜದಳಾಕ್ಷೀ ಪೇೞ ಸಾಮಾನ್ಯಮೆ ಬಗೆಯೆ ಭವತ್ಕೇಶಪಾಶಪ್ರಪಂಚಂ|| ೧೫೬

ವ|| ಎಂದು ನುಡಿದು ನೀನುಂ ನಿನ್ನ ಪ್ರತಿಜ್ಞೆಯಂ ನೆಪಿದೆಯಾನುಮೆನ್ನ ಪ್ರತಿಜ್ಞೆಯಂ ನೆಱಪುವೆನೆಂದು ದ್ರೌಪದಿಯಂ ಪಿಜಿಯನೇಱಸಿ ಬೀಡಿಂಗೆ ಕಳಿಪಿ ರಾಕ್ಷಸಕ್ರೀಡೆಯನಾಡಲ್ ಬಗೆದು ಹಿಡಿಂಬೆಯಂ ನೆನೆದು ಬರಿಸಿ-

ಕಂ|| ಒಸರ್ವ ಬಿಸುನೆತ್ತರಂ ರ
ಕ್ಕಸನಂದದೆ ಕುಡಿದು ಕುಡಿದು ಕಂಡಂಗಳನ|
ರ್ವಿಸೆ ಮೇಲ್ದು ಮೆಲ್ದು ಕರ್ಬಿನ
ರಸಕ್ಕಮಿನಿಸಂಪುಗಾಣೆನೆಂದನಿಲಸುತಂ|| ೧೫೭

ಸವಿ ಸವಿದು ಬಿಕ್ಕ ಬಿಕ್ಕನೆ
ಸವಿನೋಡೆನ್ನಾಣೆಯೆಂದು ರಕ್ಕಸಿಗಮದಂ||
ಸವಿದೋಱ ನೆತ್ತರೆಲ್ಲಂ
ತವೆ ಮುಳಿಸಿಂದವನ ಕರುಳ ಪಿಣಿಲಂ ನೊಣೆದಂ|| ೧೫೮

ವ|| ಅಂತು ಕುಡಿದು ನಿಜವಿರೋ ರುರಾಸವದೊಳಳವಿಗಳಿಯೆ ಸೊಕ್ಕಿ ತಾನುಂ ಹಿಡಿಂಬೆಯುಮವನ ಬರಿಯ ನರವಿನಡುಗಿನಿಡುವಿನೆಡೆಯ ಕೆನ್ನೆತ್ತರೊಳೊರ್ವರೊರ್ವರಂ ತಳ್ಕಿಱದುಂ ಬೊಬ್ಬಿಱದುಂ ತ್ರಿಪುಂಡ್ರಮಿಟ್ಟುಂ ಕೂಕಿಱದುಂ ತೇಗಿಯುಂ ಪಸಿಗೆವರಿದುಂ ಬವಳಿವರಿದುಂ ಬಾಸಂಗುೞಗೆವಱದುಂ ಸೂೞ್ವರಿದುಮಾಡುವಾಗಳುಭಯಬಲಂಗಳ್ ಬೆಕ್ಕಸಂಬಟ್ಟು ನೋಡಿ-

ಹೊಸೆದು ಜಡೆಯಾಗಿದ್ದ- ನಿಗರಿನಿಂತಿದ್ದ ಎರಡು ಮೊಳಗನ್ನುಳ್ಳ ದ್ರೌಪದಿಯ ಕೂದಲನ್ನು ಭೀಮನು ರಕ್ತದಿಂದ ನೆನೆಸಿ ತನ್ನ ಪರಾಕ್ರಮದಿಂದ ಬಿಡಿಸಿದನು. ೧೫೫. ದುಶ್ಶಾಸನನ ರಕ್ತದಿಂದ ತೊಯ್ದಿದ್ದ ಅವಳ ತಲೆಯ ಸಿಕ್ಕನ್ನು ಬಿಡಿಸಿ ಅವಳ ಕಾಲಿನಿಂದ ಅವನನ್ನು ತುಳಿಯಿಸಿ ವೈರಿಯ ಹಲ್ಲೆಂಬ ಬಾಚಣಿಗೆಯಿಂದ ಬಾಚಿ ಹೆಚ್ಚಿನ ಸಂತೋಷದಿಂದ ಅವನ ಹೊಸಕರುಳುಗಳೇ ಹೊಸ ಹೂವಿನ ದಂಡೆಯಾಗಲು ದ್ರೌಪದಿಗೆ ತಾನೆ ಮುಡಿಸಿದನು. ವ|| ಹಾಗೆ ತನ್ನ ಶತ್ರುವೂ ಇಷ್ಟಾರ್ಥವೂ ಜೊತೆಯಾಗಿ (ಒಟ್ಟಿಗೆ) ತೀರಲು ವೈರಿಯ ವಿಶೇಷವಾದ ರಕ್ತದಿಂದಲೂ ಅವನ ಮನೋಹರವಾದ ಕರುಳ ದಂಡೆಯಿಂದಲೂ ದಂಡೇಯನ್ನೇ ಮಾಡಿ ದ್ರೌಪದಿಗೆ ಮುಡಿಯಿಸಿ ಅವಳ ಮುಖವನ್ನು ನೋಡಿ ಮುಗುಳ್ನಗೆ ನಕ್ಕು ಕೌರವಕುಲವಿಳಯಕೇತುವಾದ ಭೀಮನು ಹೀಗೆಂದನು. ೧೫೬. “ಈ ಮುಡಿಯಲ್ಲಿಯೇ ಹತ್ತು ದಿಕ್ಕುಗಳಲ್ಲಿಯೂ ಬೆಳುಗೊಡೆಗಳನ್ನೆತ್ತಿಸಿದ ರಾಜಸಮೂಹವು ಪ್ರವೇಶಮಾಡಿ ನಾಶವಾಯಿತು, ಕುರುರಾಜವಂಶವು ಇದರಲ್ಲಿ ಅಡಗಿಹೋಯಿತು, ನನ್ನ ಶೌರ್ಯಕ್ಕೆ ಇದರಿಂದ ಗೌರವವು (ಭಯವು) ಹೆಚ್ಚಾಯಿತು. ಇದೇ ಮಹಾಭಾರತಕ್ಕೆ ಆದಿಯಾಯ್ತು. ಕಮಲದಳದಂತೆ ವಿಸ್ತಾರವಾದ ಕಣ್ಣುಳ್ಳ ದ್ರೌಪದಿಯೇ ವಿಚಾರಮಾಡಿದರೆ ನಿನ್ನ ತಲೆಯ ಕುರುಳೋಳಿಯು ಸಾಮಾನ್ಯವಾದುದೇ ಹೇಳು.” ವ|| ಎಂದು ಹೇಳಿ ನೀನು ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡಿದೆ. ನಾನೂ ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡುತ್ತೇನೆ ಎಂದು ದ್ರೌಪದಿಯನ್ನು ಹೆಣ್ಣಾನೆಯ ಮೇಲೆ ಕುಳ್ಳಿರಿಸಿ ಮನೆಗೆ ಕಳುಹಿಸಿ ರಾಕ್ಷಸಕ್ರೀಡೆಯನ್ನು ಆಡಲು ಯೋಚಿಸಿ ಹಿಡಿಂಬೆಯನ್ನು ಜ್ಞಾಪಿಸಿಕೊಂಡು ಬರಮಾಡಿ ೧೫೭. ಸ್ರವಿಸುತ್ತಿರುವ ಬಿಸಿರಕ್ತವನ್ನು ರಾಕ್ಷಸನ ಹಾಗೆ ಕುಡಿದು ಮಾಂಸಖಂಡಗಳನ್ನು ವಿಶೇಷವಾಗಿ ಆಗಿದು ಅಗಿದು ಕಬ್ಬಿನ ರಸದಲ್ಲಿಯೂ ಇಷ್ಟು ರುಚಿಯನ್ನು ಕಾಣೆನೆ ಎಂದು ಭೀಮನು ೧೫೮. ರುಚಿ ನೋಡಿ ನೋಡಿ ಬಿಕ್ಕಬಿಕ್ಕನೆ ರುಚಿನೋಡು ಎನ್ನಾಣೆ ಎಂದು ರಾಕ್ಷಸಿಗೂ ಅದರ ರುಚಿಯನ್ನು ತೋರಿಸಿ ರಕ್ತವೆಲ್ಲವೂ ಮುಗಿದು ಹೋಗಲು ಅವನ ಕರುಳುಗಳ ಕುಚ್ಚನ್ನು ಕೋಪದಿಂದ ಚಪ್ಪರಿಸಿದನು. ವ|| ಹಾಗೆ ಕುಡಿದು ತನ್ನ ಶತ್ರುವಿನ ರಕ್ತವೆಂಬ ಹೆಂಡದಲ್ಲಿ ಅಳತೆಮೀರಿ ಸೊಕ್ಕಿ ಹೋಗಿ ತಾನೂ ಹಿಡಿಂಬೆಯೂ ಅವನ ಪಕ್ಕಗಳ ನರಗಳ ಮಾಂಸಗಳ ಸಂದಿಗಳಲ್ಲಿದ್ದ ಲ

ಕಂ|| ಆದ ಮುಳಿಸಿಂದಮೆಲ್ವಂ
ತೇದುಂ ಕುಡಿಯಲ್ಕೆ ತಕ್ಕ ಪಗೆವನ ರುರಾ|
ಚ್ಛೋದಮನೆ ಕುಡಿದು ಮಾಣ್ದ ವೃ
ಕೋದರನೇನಾವ ತೆಱದೊಳಂ ದೋಷಿಗನೇ|| ೧೫೯

ಮ|| ಮುನಿಸಂ ಮಾಡಿದರಾತಿನಾಥರಡಗಂ ಸುಪ್ಪಲ್ಗೆ ಕೆನ್ನೆತ್ತರಂ
ಕೆನೆಗೊಂಡಾಱದ ಪಾಲ್ಗೆ ದೊಂಡೆಗರುಳಂ ಲೆಕ್ಕಕ್ಕೆ ತಂ|
ದಿನಿಸುಂ ಮಾಣದೆ ಪೀರ್ದು ಪೀರ್ದು ನೊಣೆದಂತೀ ಮಾೞ್ಕೆಯಿಂ ಭೀಮಸೇ
ನನವೋಲ್ ಪೂಣ್ದುದನೆಯ್ದೆ ಪೂಣ್ದ ಪಗೆಯಂ ಕೊಂಡಾಡದಂ ಗಂಡನೇ|| ೧೬೦

ವ|| ಎಂದು ಜರಾಸಂಧಾರಿಯ ಗಂಡವಾತಂ ಕೊಂಡಾಡುತ್ತಿರೆ ಭೀಮಸೇನನಾ ನೆರೆದ ನೆರವಿಗಿಂತೆಂದಂ-

ಉ|| ಪೊಲ್ಲದು ಪೂಣ್ದು ಪುಚ್ಚೞಯದುರ್ಕಿದ ಕೌರವರಂ ಪೊರಳ್ಚಿ ಕೊಂ
ದಿಲ್ಲಿಯೆ ವೈರಿ ಶೋಣಿತಮನೀಂಟಿ ತದಂತ್ರದೆ ಕೃಷ್ಣೆಗಿಂದು ಧ|
ಮ್ಮಿಲ್ಲವನಿನಿಂಬಿನಿಂ ಮುಡಿಸಿ ಕೌರವ ನಾಯಕನೂರುಭಂಗಮೊಂ
ದಲ್ಲದುದೆಲ್ಲಮಂ ನೆಱಪಿದೆಂ ಗಡಮೋಳಿಯೆ ಕೇಳಿಮೆಲ್ಲರುಂ|| ೧೬೧

ವ|| ಎಂದು ನುಡಿದು ಗಜಱ ಗರ್ಜಿಸಿ ಕಾಲದಂಡಮಂ ಪೋಲ್ವ ತನ್ನ ಗದಾದಂಡಮಂ ಕೊಂಡು ತಿರಿಪಿ ಬೀಸುತ್ತುಂ ಬರ್ಪ ಭೀಮಸೇನನಂ ಕರ್ಣನ ಮಗಂ ವೃಷಸೇನಂ ಕಂಡು-

ಚಂ|| ದಡಿಗನ ಮಿೞ್ತ್ತುವಂ ಮಿದಿದೊಡಲ್ಲದೆ ಮಾಣೆನಮೋಘಮೆಂದು ಕೂ
ರ್ಪುಡುಗದೆ ಬಂದು ತಾಗೆ ಯಮಳರ್ ತಡೆಗೊಂಡೊಡೆ ತಾವುಮೆಮ್ಮೊಳಂ
ತೊಡರ್ದಪರೆಂದವಂದಿರ ರಥಂಗಳನಚ್ಚುಡಿಯೆಚ್ಚು ಭೀಮನಂ
ತಡೆಯದೆ ಮುಟ್ಟಿ ಪೆರ್ಚೆ ನುಡಿದಂ ಕಪಿಕೇತನನಂ ಮುರಾಂತಕಂ|| ೧೬೨

ಕಂ|| ಇವನ ಶರಕಲ್ಪಮಿವನದ
ಟಿವನಳವಿವನಣ್ಮು ನಿನಗಮಗ್ಗಳಮಿವನಂ|
ಪವನಸುತಂ ಗೆಲ್ಲಂ ನೀ
ನಿವನೊಳ್ ಪೊಣರೆಂದೊಡವನೊಳರಿಗಂ ಪೊಣರ್ದಂ|| ೧೬೩

ಕೆಂಪಾದ ರಕ್ತವನ್ನು ಮೈಗೆ ಬಳಿದುಕೊಂಡು ಹಣೆಯಲ್ಲಿ ಮೂರು ಎಳೆಗಳನ್ನು ಧರಿಸಿ ಘಟ್ಟಿಯಾಗಿ ತೇಗಿ ನೇರವಾಗಿ ಓಡಿ ಸುತ್ತಲೂ ತಿರುಗಿ ನಕ್ಷತ್ರಮಂಡಲಕ್ಕೆ ನೆಗೆದು ಸರದಿಯ ಮೇಲೆ ಆಡುವಾಗ ಎರಡು ಸೈನ್ಯಗಳೂ ಆಶ್ಚರ್ಯಪಟ್ಟು ನೋಡಿದವು. ೧೫೯. ವಿಶೇಷವಾಗಿ ಇವನಿಗೆ ಉಂಟಾದ ಕೋಪದಿಂದ ಎಲುಬನ್ನೂ ತೇದು ಕುಡಿಯಬಹುದಾಗಿತ್ತು. ಆದರೆ ಶತ್ರುವಿನ ರಕ್ತವೆಂಬ ತಿಳಿನೀರನ್ನೇ ಕುಡಿದು ತೃಪ್ತನಾಗಿದ್ದಾನೆ. ಭೀಮನು ಯಾವರೀತಿಯಿಂದಲೂ ದೋಷಿಯಲ್ಲ. ೧೬೦. ಕೋಪವನ್ನುಂಟುಮಾಡಿದ ಶತ್ರುರಾಜರ ಮಾಂಸವನ್ನು ಉಪ್ಪುಹಾಕಿದ ಭಕ್ಷ್ಯವಿಶೇಷಕ್ಕೂ ಕೆಂಪುರಕ್ತವನ್ನು ಕೆನೆಗಟ್ಟಿ ಆರಿದ ಹಾಲಿಗೂ ದೊಂಡೆಗರುಳನ್ನು ಕಬ್ಬಿನ ಗಣನೆಗೂ ಸಮನಾಗಿ ಭಾವಿಸಿ ಸ್ವಲ್ಪವನ್ನೂ ಬಿಡದೆ ಕುಡಿದು ಚಪ್ಪರಿಸಿದ ಈ ಭೀಮಸೇನನ ಹಾಗೆ ಪ್ರತಿಜ್ಞೆ ಮಾಡಿದುದನ್ನು ಪೂರ್ಣಮಾಡಿದ ಶತ್ರುವನ್ನು ಹಗಳದಿರುವವನು ಶೂರನೇ ವ|| ಎಂದು ಭೀಮನ ಪೌರುಷದ ಮಾತನ್ನು ಕೊಂಡಾಡುತ್ತಿರಲು ಭೀಮಸೇನನು ಅಲ್ಲಿ ನೆರೆದಿದ್ದ ಗುಂಪಿಗೆ ಹೀಗೆಂದನು-೧೬೧. ಕೆಟ್ಟ ಪ್ರತಿಜ್ಞೆಯನ್ನು ಮಾಡಿ ಅದು ವ್ಯರ್ಥವಾಗದಂತೆ ಗರ್ವಿಷ್ಠರಾದ ಕೌರವರನ್ನು ಹೊರಳಿಸಿ ಕೊಂದು ಇಲ್ಲಿಯ ವೈರಿಯ ರಕ್ತವನ್ನು ಕುಡಿದು ಅವನ ಕರುಳಿನಿಂದ ದ್ರೌಪದಿಗೆ ತುರುಬನ್ನು ಮನೋಹರವಾಗಿರುವಂತೆ ಮುಡಿಸಿ ಕೌರವನಾಯಕನಾದ ದುರ್ಯೋಧನನ ತೊಡೆಯನ್ನು ಮುರಿಯುವುದೊಂದನ್ನುಳಿದು ಮತ್ತೆಲ್ಲವನ್ನೂ ಕ್ರಮವಾಗಿ ಪೂರ್ಣಮಾಡಿದೆನಲ್ಲವೇ ಎಲ್ಲರೂ ಕೇಳಿ! ವ|| ಎಂದು ಹೇಳಿ ಆರ್ಭಟಮಾಡಿ ಯಮನ ದಂಡವನ್ನು ಹೋಲುವ ತನ್ನ ಗದಾದಂಡವನ್ನು ತೆಗೆದುಕೊಂಡು ತಿರುಗಿಸುತ್ತ ಬರುತ್ತಿರುವ ಭೀಮಸೇನನನ್ನು ಕರ್ಣನ ಮಗನಾದ ವೃಷಸೇನನು ನೋಡಿದನು. ೧೬೨. ‘ದಾಂಡಿಗನಾದ ಭೀಮನೆಂಬ ಈ ಮೃತ್ಯುವನ್ನು ತುಳಿದುದಲ್ಲದೆ ಬಿಡುವುದಿಲ್ಲ’ ಎಂದು ವೃಷಸೇನನು ತನ್ನ ಕ್ರೌರ್ಯವನ್ನು ಕಡಮೆಮಾಡದೆ ಬಂದು ತಾಗಿದನು. ನಕುಲಸಹದೇವರು ಬಂದು ಅವನನ್ನು ಅಡ್ಡಗಟ್ಟಿದರು. ಇವರೂ ನಮ್ಮಲ್ಲಿ ಯುದ್ಧಮಾಡುತ್ತಾರೆಯೇ ಎಂದು ಅವರ ತೇರುಗಳನ್ನು ಅಚ್ಚು ಮುರಿದುಹೋಗುವ ಹಾಗೆ ಹೊಡೆದು ತಡಮಾಡದೆ ಭೀಮನ ಹತ್ತಿರಕ್ಕೆ ಬಂದು ವಿಜೃಂಭಿಸಿದನು. ಆಗ ಕೃಷ್ಣನು ಅರ್ಜುನನಿಗೆ ಹೇಳಿದನು. ೧೬೩. ಇವನ ಬಾಣವಿದ್ಯೆ, ಇವನ ಪರಾಕ್ರಮ,

ಪೊಣರ್ದೊಡಮನುವರಮಿವನೊಳ್
ತೊಣೆವೆತ್ತಪುದೆನಗೆ ನರನೊಳೆಂದಱಕೆಯ ಕೂ|
ರ್ಗಣೆಗಳೊಳೆ ಪೂೞ್ದು ತನ್ನಳ
ವಣಿಯರಮೆನೆ ನಾಲ್ಕು ಶರದೆ ಪಾರ್ಥನನೆಚ್ಚಂ|| ೧೬೪

ಇಸೆ ಮುತ್ತಿ ಮುಸುಱ ಪರಿ ಬಂ
ಸಿದುವು ನರರಥತುರಂಗಮಂಗಳನಂತಾ|
ರ್ದೆಸಗಲ್ ಪೊಣರಲ್ ಮಿಡುಕಲ್
ಮಿಸುಕಲ್ಕಣಮೀಯದಾದುವವನ ಸರಲ್ಗಳ್|| ೧೬೫

ವ|| ಆಗಳದಂ ಕಂಡು ಪರಸೈನ್ಯಭೈರವಂ ಮುಕುಂದನನಿಂತೆಂದಂ-

ಕಂ|| ಸ್ಯಂದನಬಂಧನಮೆಂಬುದ
ನಿಂದೀ ವೃಷಸೇನನಿಂದಮಱದನಿದಂ ಮು|
ನ್ನೆಂದುಂ ಕಂಡಱಯೆನಿದ
ರ್ಕಾಂ ದಲ್ ಬೆಱಗಾದೆನೆನಗೆ ಬೆಸಸು ಮುಕುಂದಾ|| ೧೬೬

ಎನೆ ಪರಶುರಾಮನಿಂ ಕ
ರ್ಣನೆ ಬಲ್ಲಂ ಚಾಪವಿದ್ಯೆಯಂ ಕರ್ಣನಿನೀ|
ತನೆ ಬಲ್ಲನಿವನ ಸರಲೆನಿ
ತನಿತುಮನೆಡೆವಿಡದೆ ತಱದು ತಲೆಯಂ ತಱಯಾ|| ೧೬೭

ವ|| ಎಂಬುದುವಳವಿಗೞಯೆ ಬಳೆದು ಪುದುಂಗೊಳಿಸಿದ ಬಿದಿರ ಸಿಡುಂಬನೆಡೆಗೊಳೆ ಕಡಿವ ಪೊಡುಂಗಾಱನಂತೆ ಪರಶು ಚಕ್ರಾಸಿಧೇನುಗಳಿಂದಂ ತನ್ನ ತೋಡುಂ ಬೀಡಿಂಗಂ ರಥಮನೆಸಗುವ ಮುಂರಾಂತಕನ ಕೆಯ್ಗಮೆಡೆಮಾಡಿ-

ಚಂ|| ತನಗೆ ವಿನಾಯಕಂ ದಯೆಯಿನಿತ್ತ ಜಯಾಸ್ತ್ರಮನುರ್ಚಿಕೊಂಡು ಭೋಂ
ಕೆನೆ ದೊಣೆಯಿಂದ ಶರಾಸನದೊಳಂತದನಾಗಡೆ ಪೂಡಿ ಧಾತ್ರಿ ತಿ|
ಱ್ರನೆ ತಿರಿವನ್ನೆಗಂ ತೆಗೆದು ಕಂಧರಸಂಯನೆಯ್ದೆ ನೋಡಿ ತೊ
ಟ್ಟನೆ ನರನೆಚ್ಚೊಡುಚ್ಚಳಿಸಿ ಬಿೞ್ದುದು ವೈರಿಶಿರಸ್ಸರೋರುಹಂ|| ೧೬೮

ಇವನ ಪೌರುಷ, ಇವನ ಶಕ್ತಿ ಇವು ನಿನಗಿಂತಲೂ ಹೆಚ್ಚಿನವು. ಇವನನ್ನು ಭೀಮನು ಗೆಲ್ಲಲಾರ. ನೀನು ಇವನಲ್ಲಿ ಯುದ್ಧಮಾಡು ಎನ್ನಲು ಅರಿಗನು ಅವನಲ್ಲಿ ಕಾದಿದನು. ೧೬೪. ವೃಷಸೇನನು ಇವನೊಡನೆ ಕಾದಿದರೆ ನನಗೆ ಯುದ್ಧವು ಅನುರೂಪವಾಗುತ್ತದೆ (ಸರಿಸಮಾನವಾಗುತ್ತದೆ) ಎಂದು ಹೇಳಿ ಪ್ರಸಿದ್ಧವೂ ಹರಿತವೂ ಆದ ಬಾಣಗಳಿಂದಲೇ ಹೂಳಿ ತನ್ನ ಶಕ್ತಿಯು ಅತಿಶಯವಾದುದು ಎನ್ನುವ ಹಾಗೆ ನಾಲ್ಕುಬಾಣಗಳಿಂದ ಅರ್ಜುನನನ್ನು ಹೊಡೆದನು. ೧೬೫. ಆ ಬಾಣಗಳು ಅರ್ಜುನನ ತೇರು ಕುದುರೆಗಳನ್ನು ಮುತ್ತಿ ಆವರಿಸಿಕೊಂಡು ಕಟ್ಟಿ ಹಾಕಿದುವು. ಹಾಗೆಯೇ ಆ ಬಾಣಗಳು ಆರ್ಭಟಿಸಿ ಕಾರ್ಯಮಾಡುವುದಕ್ಕೂ ರಥವನ್ನು ನಡೆಸುವುದಕ್ಕೂ ಜಗಳವಾಡುವುದಕ್ಕೂ ಅಳ್ಳಾಡುವುದಕ್ಕೂ (ಚಲಿಸುವುದಕ್ಕೂ) ಸ್ವಲ್ಪವೂ ಅವಕಾಶ ಕೊಡದಂತಹುವಾದುವು. ವ|| ಅದನ್ನು ನೋಡಿ ಪರಸೈನ್ಯಭೈರವನಾದ ಆರ್ಜುನನು ಕೃಷ್ಣನಿಗೆ ಹೀಗೆ ಹೇಳಿದನು. ೧೬೬. ತೇರನ್ನು ಕಟ್ಟಿಹಾಕುವುದೆಂಬುದನ್ನು ಈ ದಿನ ವೃಷಸೇನನಿಂದ ತಿಳಿದೆನು. ಇದಕ್ಕೆ ಮೊದಲು ಎಂದೂ ತಿಳಿದಿರಲಿಲ್ಲ. ಇದಕ್ಕೆ ನಾನು ಬೆರಗಾಗಿದ್ದೇನೆ. ಮುಂದೇನು ಮಾಡಬೇಕೆಂಬುದನ್ನು ತಿಳಿಸು ಕೃಷ್ಣಾ. ೧೬೭. ಎನ್ನಲು ಬಿಲ್ವಿದ್ಯೆಯಲ್ಲಿ ಕರ್ಣನು ಪರಶುರಾಮನಿಗಿಂತ ಸಮರ್ಥನಾದವನು. ಇವನು ಕರ್ಣನಿಗಿಂತ ಸಮರ್ಥನು. ಇವನ ಬಾಣಗಳಷ್ಟನ್ನೂ ಒಂದೇಸಮನಾಗಿ ಕತ್ತರಿಸಿ ತಲೆಯನ್ನು ಕತ್ತರಿಸಯ್ಯ. ವ|| ಎನ್ನಲು ಅಳತೆಮೀರಿ ಸೊಂಪಾಗಿಯೂ ದಟ್ಟವಾಗಿಯೂ ಬೆಳೆದಿರುವ ಬಿದುರಿನ ಮೆಳೆಯನ್ನು ದಾರಿಮಾಡುವುದಕ್ಕಾಗಿ (ಬಿಡಿಸುವ) ಕತ್ತರಿಸುವ ಕಾಡನ್ನು ತರಿಯುವವನ ಹಾಗೆ ಕೊಡಲಿಕತ್ತಿಗಳಿಂದ ತನ್ನ ಬಾಣಸಂಧಾನ ಮತ್ತು ಮೋಚನಗಳಿಗೆ ಹೊಂದಿಕೊಳ್ಳುವುದಕ್ಕೂ ರಥವನ್ನು ನಡೆಸುವ ಕೃಷ್ಣನ ಕೈಗಳನ್ನಾಡಿಸುವುದಕ್ಕೂ ಅನುಮಾಡಿಕೊಂಡು ೧೬೮. ವಿನಾಯಕನು ತನಗೆ ಕೃಪೆಯಿಂದ ಕೊಟ್ಟ ಜಯಾಸ್ತ್ರವನ್ನು ರಭಸದಿಂದ ಬತ್ತಳಿಕೆಯಿಂದ ಸೆಳೆದುಕೊಂಡು ಅದನ್ನು ಆಗಲೇ ಬಿಲ್ಲಿನಲ್ಲಿ ಹೂಡಿ ಭೂಮಿಯು ತಿರ್ರೆಂದು ತಿರುಗುವ ಹಾಗೆ ಹೆದೆಯನ್ನು ಸೆಳೆದು ಕತ್ತಿನ ಸಂಭಾಗವನ್ನೇ ಚೆನ್ನಾಗಿ

ಕಂ|| ಅಂತತ್ತ ಪರಿದ ತಲೆಯನ
ದಂ ತಂದಟ್ಟೆಯೊಳಮರ್ಚಿ ಸುರ ಗಣಿಕೆಯರ|
ಭ್ರಾಂತರದೊಳೆ ತಮ್ಮ ವಿಮಾ
ನಾಂತರದೊಳಗಿಟ್ಟು ಕರ್ಣತನಯನನುಯ್ದರ್|| ೧೬೯

ವ|| ಅಂತು ನೋಡಿ ನೋಡಿ ತನ್ನ ಪಿರಿಯ ಮಗನಪ್ಪ ವೃಷಸೇನನನಂತಕನಣಲೊಳಡಸಿ ತನ್ನುಮನಣಲೊಳಡಸಲೆಂದಿರ್ದ ವಿಕ್ರಮಾರ್ಜುನನಂ ನೋಡಿ-

ಚಂ|| ಮಗನೞಲೊಂದು ಭೂಪತಿಯ ತಮ್ಮನೊಳಾದೞಲೊಂದು ನೊಂದು ಬಿ
ನ್ನಗೆ ಮೊಗದಿಂದೆ ಕುಂದಿ ಫಣೀಕೇತನನಿರ್ದೞಲೊಂದು ತನ್ನನಾ|
ವಗೆಯುರಿಯೞ್ವವೋಲಳುರೆ ತನ್ನ ನೆಗೞ್ತೆಗೆ ಮುಯ್ವನಾಂತು ಮುಂ
ಪೊಗೞಸಿ ಬೞ್ದುದಂ ನೆನೆದು ಕರ್ಣನಸುಂಗೊಳೆ ಬಂದು ತಾಗಿದಂ|| ೧೭೦

ವ|| ಅಂತು ಬಂದು ತಾಗಿದಾಗಳುಭಯಸೈನ್ಯಸಾಗರಂಗಳೊಳ್-

ಕಂ|| ಬರಿತ ಸಮಸ್ತದಿಕ್ತಟ
ಮಧರಿತ ಸರ್ವೇಭ್ಯಗರ್ವಿತಂ ಕ್ಷುಭಿತಾಂಭೋ|
ನಿ ಸಲಿಲಂ ಪರೆದುದು ಧುರ
ವಿಧಾನ ಪಟು ಪಟಹ ಕಹಳ ಭೇರೀ ರಭಸಂ|| ೧೭೧

ಆದಿತ್ಯನ ಸಾರಥಿ ಬೆಱ
ಗಾದಂ ಮಾತಾಳಿ ಮಾತುಗೆಟ್ಟಂ ಧುರದೊಳ್|
ಚೋದಿಸೆ ಹರಿಯುಂ ಶಲ್ಯನು
ಮಾದರದಿಂ ನರನ ದಿನಪತನಯನ ರಥಮಂ|| ೧೭೨

ವ|| ಅಂತಿರ್ವರುಮೊರ್ವರೊರ್ವರಂ ಮುಟ್ಟೆವಂದಲ್ಲಿ ವಿಕ್ರಾಂತತುಂಗನಂಗಾರಾಜನ ನಿಂತೆಂದಂ-

ಹರಿಣೀಪ್ಲುತಂ|| ಪಿರಿದು ನಿನ್ನಂ ದುರ್ಯೋಧನಂ ನಿನಗೆನ್ನೊಳಂ
ಪಿರಿದು ಕಲುಷಂ ಕರ್ಣಂಗೊಡ್ಡಿತ್ತು ಭಾರತವೇಂ ಬೆಸಂ|
ಪಿರಿದು ನಿನಗಂ ರಾಗಂ ಮಿಕ್ಕಿರ್ದಗುರ್ವಿನ ಸೂನು ನಿ
ರ್ನೆರಮೞಯೆಯುಂ ನೋಡುತ್ತಿಂತಿರ್ದೆಯಿರ್ಪುದು ಪಾೞಯೇ|| ೧೭೩

ನೋಡಿ ಗುರಿಯಿಟ್ಟು ಬೇಗನೆ ಅರ್ಜುನನು ಹೊಡೆಯಲಾಗಿ ವೈರಿಯಾದ ವೃಷಸೇನನ ತಲೆಯೆಂಬ ಕಮಲವು ಮೇಲಕ್ಕೆ ಹಾರಿ ಬಿದ್ದಿತು. ೧೬೯. ಆ ಕಡೆ ಹಾರಿದ ತಲೆಯನ್ನು ತಂದು ಶರೀರದೊಡನೆ ಕೂಡಿಸಿ ಅಪ್ಸರೆಯರು ಮೋಡಗಳ ಮಧ್ಯದಲ್ಲಿ ತಮ್ಮ ವಿಮಾನದೊಳಗಡೆ ಇಟ್ಟು ಕರ್ಣನ ಮಗನನ್ನು ತೆಗೆದುಕೊಂಡು ಹೋದರು. ವ|| ಹಾಗೆ ನೋಡಿ ನೋಡಿ ತನ್ನ ಹಿರಿಯಮಗನಾದ ವೃಷಸೇನನ್ನು ಯಮನ ಗಂಟಲಿನಲ್ಲಿ ತುರುಕಿ ತನ್ನನ್ನು ಗಂಟಲಿನಲ್ಲಿ ತುರುಕಬೇಕೆಂದಿದ್ದ ವಿಕ್ರಮಾರ್ಜುನನ್ನು ನೋಡಿ ೧೭೦. ಮಗನ ದುಖವೊಂದು,ರಾಜನ ತಮ್ಮನಾದ ದುಶ್ಶಾಸನನ ದುಖವೊಂದು, ಚಿಂತಾಸಕ್ತನಾಗಿ ದೀನಮುಖದಿಂದ ಕುಂದಿಹೋಗಿರುವ ದುರ್ಯೋಧನನಿರುವ ಸ್ಥಿತಿಯೊಂದು ಈ ಮೂರೂ ತನ್ನನ್ನು ಕುಂಬಾರರ ಆವಗೆಯ ಬೆಂಕಿಯ ಹಾಗೆ ಸುಡುತ್ತಿರಲು ಪೌರುಷಕ್ಕೆ ಆಶ್ರಯವಿತ್ತು ಮೊದಲು ಹೊಗಳಿಸಿಕೊಂಡು ತಾನು ಬಾಳಿದುದನ್ನು ಜ್ಞಾಪಿಸಿಕೊಂಡ ಕರ್ಣನು ಅರ್ಜುನನ ಪ್ರಾಣವನ್ನು ಸೆಳೆಯುವಂತೆ ಬಂದು ತಾಗಿದನು. ವ|| ಹಾಗೆ ಬಂದುತಾಗಿದಾಗ ಎರಡು ಸೇನಾಸಮುದ್ರದಲ್ಲಿಯೂ ೧೭೧. ಎಲ್ಲ ದಿಕ್ಪ್ರದೇಶಗಳೂ ಕಿವುಡಾಗುವಂತೆ ಆನೆಗಳ ಘ್ರೀಂಕಾರವನ್ನೂ ತಿರಸ್ಕರಿಸುವಂತೆ, ಕಲಕಿದ ಸಮುದ್ರದ ನೀರಿನಂತೆ, ಯುದ್ಧಕಾರ್ಯದಲ್ಲಿ ಸಮರ್ಥವಾದ ತಮಟೆ, ಕೊಂಬು ಮತ್ತು ನಗಾರಿಯ ಶಬ್ದಗಳ ರಭಸವು ಹರಡಿತು. ೧೭೨. ಯುದ್ಧದಲ್ಲಿ ಕೃಷ್ಣನೂ ಶಲ್ಯನೂ ಅರ್ಜುನ ಮತ್ತು ಕರ್ಣನ ತೇರುಗಳನ್ನು ಆದರದಿಂದ ನಡೆಸುತ್ತಿರಲು ಸೂರ್ಯನ ಸಾರಥಿಯಾದ ಅರುಣನು ಆಶ್ಚರ್ಯಚಕಿತನಾದನು. ಇಂದ್ರನ ಸಾರಥಿ ಮಾತಲಿಯೂ ಮೂಕನಾದನು. ವ|| ಹಾಗೆ ಇಬ್ಬರೂ ಒಬ್ಬೊಬ್ಬರನ್ನು ಮುಟ್ಟುವಷ್ಟು ಸಮೀಪಕ್ಕೆ ಬಂದಾಗ ವಿಕ್ರಾಂತತುಂಗನಾದ ಅರ್ಜುನನು ಕರ್ಣನಿಗೆ ಹೀಗೆ ಹೇಳಿದನು. ೧೭೩. ನಿನ್ನನ್ನು ದುರ್ಯೋಧನನು ವಿಶೇಷ ಗೌರವದಿಂದ ಸಾಕಿದನು. ನಿನಗೆ ನನ್ನಲ್ಲಿಯೂ ವಿಶೇಷವಾದ ದ್ವೇಷ, ಕರ್ಣನಿಗಾಗಿಯೇ ಭಾರತಯುದ್ಧವು ಪ್ರಾಪ್ತವಾದುದು. ಯುದ್ಧಕಾರ್ಯವು ನಿನಗೇನು ಮಹ್ತತಾದುದು? ನಿನಗೆ

ವಿಶೇಷ ಪ್ರೀತಿಪಾತ್ರನೂ ಪ್ರಚಂಡನೂ ಆದ ಮಗನು ನಿಷ್ಕಾರಣವಾಗಿ ಸತ್ತರೂ ನೋಡುತ್ತ ಹೀಗೆ ಇದ್ದೀಯೇ? ಇರುವುದು ಕ್ರಮವೇ

ಕಂ|| ಎನ್ನ ಪೆಸರ್ಗೇಳ್ದು ಸೈರಿಸ
ದನ್ನಯದಿಂತೀಗಳೆನ್ನ ರೂಪಂ ಕಂಡುಂ|
ನಿನ್ನರಸನಣುಗದಮ್ಮನ
ನಿನ್ನ ತನೂಭವನ ಸಾವುಗಂಡುಂ ಮಾಣ್ಬಾ|| ೧೭೪

ಮ|| ಭಯಮೇಕಕ್ಕುಮದೆಂತುಟಿಂದದಟುಮಂ ಪೆರ್ಮಾತುಮಂ ಭೂತ ಧಾ
ತ್ರಿಯೊಳೋರಂತೆ ನೆಗೞ ಮುನ್ನೆ ಬೞಯಂ ಕಾನೀನ ನೀನೀ ಮಹಾ|
ಜಿಯೊಳಿಂತೇನೆನಗಂಜಿ ಮಾಣ್ದೆ ಪೆಱತೇಂ ಪೋ ಮಾತು ಲೇಸಣ್ಣ ಸೆ
ಟ್ಟಿಯ ಬಳ್ಳಂ ಕಿಱದೆಂಬುದೊಂದು ನುಡಿಯಂ ನೀಂ ನಿಕ್ಕುವಂ ಮಾಡಿದೈ|| ೧೭೫

ಕಂ|| ಪೆಸರೆಸೆಯೆ ಬೀರಮಂ ಪಾ
ಡಿಸಿಯುಂ ಪೊಗೞಸಿಯುಮುರ್ಕಿ ಬಿೞiಹವದೊಳ್|
ಕುಸಿದು ಪೆಱಪಿಂಗಿ ಪೇೞ್ ಮಾ
ನಸರೇನಿನ್ನೂಱು ವರ್ಷಮಂ ಬೞ್ದಪರೇ|| ೧೭೬

ವ|| ಎಂದು ನೃಪ ಪರಮಾತ್ಮನ ಪಾೞಯ ಪಸುಗೆಯ ನುಡಿಗೆ ಪರಮಾರ್ತನಾಗಿ ತನ್ನನುದ್ಘಾಟಿಸಿ ನುಡಿದೊಡುಮ್ಮಚ್ಚದೊಳ್ ಮೆಚ್ಚದೆ ದರಹಸಿತವದನಾರವಿಂದನಾಗಿ ದಶಶತಕರ ತನೂಜನಿಂತೆಂದಂ-

ಕಂ|| ಎಳೆಯಂ ಕೋಳ್ಪಟ್ಟುಂ ಮುಂ
ಬಳೆದೊಟ್ಟುಂ ಮುಟ್ಟುಗೆಟ್ಟುಮಿರ್ದೀಗಳ್ ಬ|
ಳ್ವಳನೆ ನುಡಿದಪುದೆ ನುಡಿವಂ
ತಳವುಂ ಪೆರ್ಮಾತುಮಾಯಮುಂ ನಿನಗಾಯ್ತೇ|| ೧೭೭

ಕಂ|| ಏೞ್ಕಟ್ಟನೆೞೆದು ನಿಮ್ಮಂ
ನಾೞ್ಕಡಿಗಳಿದೊಡೆ ಮದೀಯ ನಾಥಂ ಬೇರಂ|
ಬಿೞ್ಕೆಯನೆ ತಿಂದ ದೆವಸದೊ
ಳೞiಡಿದ ಬೀರಮೀಗಳೇಂ ಪೊಸತಾಯ್ತೇ|| ೧೭೮

ಮತ್ತನಯನರಸನನುಜನ
ಸತ್ತೞಲಂ ನಿನ್ನೊಳಱಸಲೆಂದಿರ್ದೆಂ ಬೆ|
ಳ್ಕುತ್ತಿರ್ದೆನಪ್ಟೊಡೇತೊದ
ಳಿತ್ತಣ ದಿನನಾಥನಿತ್ತ ಮೂಡುಗುಮಲ್ತೇ|| ೧೭೯

೧೭೪. ನನ್ನ ಹೆಸರನ್ನೂ ಕೇಳಿ ಅನ್ಯಾಯವಾಗಿ ಸೈರಿಸದ ನೀನು ಈಗ ನನ್ನ ರೂಪವನ್ನು ಕಂಡೂ ನಿನ್ನ ರಾಜರ ಪ್ರೀತಿಯ ತಮ್ಮನ, ನಿನ್ನ ಮಗನ ಸಾವನ್ನು ನೋಡಿಯೂ ತಡಮಾಡುತ್ತೀಯಾ? ೧೭೫. ಭಯವೇಕಾಗುತ್ತದೆ, ಅದು ಎಂತಹುದು ಎಂದು ಪರಾಕ್ರಮವನ್ನೂ ದೊಡ್ಡ ಮಾತುಗಳನ್ನೂ ಮೊದಲು ಲೋಕದಲ್ಲೆಲ್ಲ ಆಡಿ ಜಂಭ ಕೊಚ್ಚಿದೆ ಕಾನೀನ, ಈಗ ಈ ಮಹದ್ಯುದ್ಧದಲ್ಲಿ ಹೀಗೆ ನನಗೆ ಹೆದರಿ ತಡಮಾಡುತ್ತಿದ್ದೀಯೆ. ಮತ್ತೇನು ಹೋಗಯ್ಯ ಮಾತನಾಡುವುದು ಸುಲಭ! ‘ಸೆಟ್ಟಿಯ ಬಳ್ಳ ಕಿರಿದು’ ಎಂಬ ಗಾದೆಯ ಮಾತನ್ನು ನೀನು ನಿಜವೆನಿಸಿಬಿಟ್ಟೆ. ೧೭೬. ಹೆಸರು ಪ್ರಖ್ಯಾತವಾಗುವಂತೆ ಶೌರ್ಯವನ್ನು ಹಾಡಿಸಿಯೂ ಹೊಗಳಿಸಿಯೂ ಉಬ್ಬಿ ಯುದ್ಧದಲ್ಲಿ ಸೋತು ಕುಸಿದು ಹಿಂಜರಿಯುವುದಕ್ಕೆ ಮನುಷ್ಯರು ಇನ್ನೂರು ವರ್ಷ ಬದುಕುತ್ತಾರೇನು? ವ|| ಎಂಬುದಾಗಿ ಹೇಳಿದ ನೃಪಪರಮಾತ್ಮನಾದ ಅರ್ಜುನನ ಕ್ರಮಬದ್ಧವೂ ವಿವೇಕಯುತವೂ ಆದ ಮಾತಿಗೆ ಬಹಳ ದುಖಪಟ್ಟು ತನ್ನನ್ನು ಮರ್ಮಭೇದಕವಾದ ರೀತಿಯಲ್ಲಿ ಮಾತನಾಡಿಸಿದರೂ ಕೋಪಿಸಿಕೊಳ್ಳದೆ ಮುಗುಳ್ನಗೆಯಿಂದ ಕೂಡಿದ ಮುಖಕಮಲವುಳ್ಳವನಾಗಿ ಕರ್ಣನು ಹೀಗೆಂದನು-

೧೭೭. ರಾಜ್ಯವನ್ನು ಮೊದಲು ಪರಾನಮಾಡಿಯೂ ಬಳೆದೊಟ್ಟೂ ಆಯುಧ ರಹಿತವಾಗಿದ್ದೂ ಈಗ ಬಡಬಡನೆ ಮಾತನಾಡುವುದೇ? ಹಾಗೆ ಮಾತನಾಡುವ ನಿನಗೆ ಶಕ್ತಿಯೂ ಪ್ರೌಢಿಮೆಯೂ ಪರಾಕ್ರಮವೂ ಉಂಟೇ? ೧೭೮. ನನ್ನ ಸ್ವಾಮಿಯಾದ ದುರ್ಯೋಧನನು ವರ್ಷಗಳ ಅವಯ ಕಟ್ಟುಪಾಡಿನಿಂದ ನಿಮ್ಮನ್ನು ನಾಡಗಡಿಯಿಂದ ಹೊರದೂಡಿದಾಗ ಬೇರನ್ನೂ ಬಿಕ್ಕೆಯನ್ನೂ ತಿಂದ ದಿವಸಗಳಲ್ಲಿ ನಾಶವಾದ ಪೌರುಷವು ಈಗ ಹೊಸದಾಯಿತೇನು? ೧೭೯. ನನ್ನ ಮಗನೂ ರಾಜನ ತಮ್ಮನಾದ ದುಶ್ಶಾಸನನೂ ಸತ್ತ ದುಖವನ್ನು ನಿನ್ನಲ್ಲಿ ಹುಡುಕಬೇಕೆಂದಿದ್ದೆ. ಹೆದರಿದ್ದೇನೆ ಎಂದರೆ ಅದೆಂತಹ ಸುಳ್ಳು ಮಾತು! ಆ ಕಡೆಯ ಸೂರ್ಯ ಈ ಕಡೆಯೇ ಹುಟ್ಟುತ್ತಾನಲ್ಲವೇ?

ಕಸವರದ ಸವಿಯುಮಂ ಭಯ
ರಸಕದ ಸವಿಯುಮನೆದೆಂತುಮಾನಱಯದುದಂ|
ವಸುಮತಿಯಱವುದು ನೀಂ ಪುರು
ಡಿಸಿ ನುಡಿದೊಡೆ ನಿನ್ನ ನುಡಿದ ಮಾತೇಱುಗುಮೇ|| ೧೮೦

ಒಡಲುಂ ಪ್ರಾಣಮುಮೆಂಬಿವು
ಕಿಡಲಾದುವು ಜಸಮದೊಂದೆ ಕಿಡದದನಾಂ ಬ|
ಲ್ವಿಡಿವಿಡಿದು ನೆಗೞ್ದೆನುೞದೞ
ವಡೆಮಾತಂ ಮಾಡಿ ನೀನೆ ಕೆಮ್ಮನೆ ನುಡಿವೈ|| ೧೮೧

ಚಂ|| ಬಿದಿ ವಸದಿಂದೆ ಪುಟ್ಟುವುದು ಪುಟ್ಟಿಸುವಂ ಬಿದಿ ಪುಟ್ಟಿದಂದಿವಂ
ಗಿದು ಬಿಯಮೊಳ್ಪಿವಂಗಿದು ವಿನೋದಮಿವಂಗಿದು ಸಾವ ಪಾಂಗಿವಂ|
ಗಿದು ಪಡೆಮಾತಿವಂಗಿದು ಪರಾಕ್ರಮಮೆಂಬುದನೆಲ್ಲ ಮಾೞ್ಕೆಯಿಂ
ಬಿದಿ ಸಮಕಟ್ಟಿ ಕೊಟ್ಟೊಡೆಡೆಯೊಳ್ ಕಿಡಿಸಲ್ ಕುಡಿಸಲ್ ಸಮರ್ಥರಾರ್|| ೧೮೨

ಕಂ|| ಎಂದೀ ಬಾಯ್ವಾತಿನೊಳೇ
ವಂದಪುದಮ್ಮಣ್ಮಿ ಕಾದುಕೊಳ್ಳೆನುತುಂ ಭೋಂ|
ರೆಂದಿಸೆ ಪೊಸ ಮಸೆಯಂಬಿನ
ತಂದಲ ಬೆಳ್ಸರಿಗಳಿರದೆ ಕವಿದುವು ನರನಂ|| ೧೮೩

ದೊಣೆಗಳಿನುರ್ಚುವ ತಿರುವಾ
ಯ್ವೊಣರ್ಚಿ ತೆಗೆನೆವ ಬೇಗಮಂ ಕಾಣದೆ ಕೂ|
ರ್ಗಣೆಗಳ ಪಂದರನೆ ನಭೋಂ
ಗಣದೊಳ್ ಕಂಡುತ್ತು ದೇವಗಣಮಿನಸುತನಾ|| ೧೮೪

ಪಾತಂ ಲಕ್ಷ್ಮಂ ಶೀಘ್ರಂ
ಘಾತಂ ಬಹುವೇಗಮೆಂಬಿವಯ್ದೇಸಿನೊಳಂ|
ತೀತನ ದೊರೆಯಿಲ್ಲೆನಿಸಿದು
ದಾತನ ಬಿಲ್ಬಲ್ಮೆ ಸುರರಿನಂಬರತಲದೊಳ್|| ೧೮೫

ವ|| ಆಗಳ್ ಪರಸೈನ್ಯಬೈರವಂ ಪ್ರಳಯಭೈರವಾಕಾರಮಂ ಕೆಯ್ಕೊಂಡು ಕಾದೆ-

೧೮೦. ಚಿನ್ನದ ರುಚಿಯನ್ನೂ ಭಯರಸದ ರುಚಿಯನ್ನೂ ನಾನು ಎಂದೂ ಅರಿಯದುದನ್ನು ಈ ಭೂಮಂಡಲವೇ ತಿಳಿದಿದೆ. ನೀನು ರ್ಸ್ಪಸಿ ನುಡಿದರೆ ನೀನು ಆಡಿದ ಮಾತು ಪುಷ್ಟಿಯಾಗುತ್ತದೆಯೇ? ೧೮೧. ಶರೀರ ಪ್ರಾಣ ಎಂಬವು ನಾಶವಾಗತಕ್ಕವು. ಯಶಸ್ಸೊಂದೆ ಕೆಡದೆ ಇರತಕ್ಕದ್ದು; ಅದನ್ನು ನಾನು ಬಿಗಿಯಾಗಿ ಆಶ್ರಯಿಸಿ ಪ್ರಸಿದ್ಧನಾಗಿದ್ದೇನೆ. ಉಳಿದ ಹೀನವಾದ ಮಾತನ್ನಾಡಿ ನೀನು ನಿಷ್ಟ್ರಯೋಜಕವಾಗಿ ನುಡಿಯುತ್ತಿದ್ದೀಯೆ. ೧೮೨. (ಮನುಷ್ಯನು) ಹುಟ್ಟುವುದು ವಿಯ ವಶದಿಂದ; ಹುಟ್ಟಿಸುವವನೂ ವಿಯೇ; ಹುಟ್ಟಿದಾಗ ಇವನಿಗಿದು ಸಂಪತ್ತು, ಇವನಿಗೆ ಒಳ್ಳೆಯದಿದು, ಇವನಿಗೆ ಇದು ವಿನೋದ, ಇವನಿಗೆ ಇದು ಸಾಯುವ ರೀತಿ, ಇವನಿಗಿದು ಪ್ರಸಿದ್ಧಿ, ಇವನಿಗಿದು ಪರಾಕ್ರಮ ಎಂಬುದನ್ನು ಎಲ್ಲ ರೀತಿಯಲ್ಲಿಯೂ ವಿ ನಿಷ್ಕರ್ಷಿಸಿಕೊಟ್ಟಿರುವಾಗ ಮಧ್ಯದಲ್ಲಿ ಅದನ್ನು ಕೆಡಿಸುವುದಕ್ಕಾಗಲಿ ಕೊಡಿಸುವುದಕ್ಕಾಗಲಿ ಯಾರು ಸಮರ್ಥರು? ೧೮೩. ಅಪ್ಪಾ ಈ ಬಾಯಿ ಮಾತಿನಲ್ಲಿ ಏನು ಪ್ರಯೋಜನವಾಗುತ್ತದೆ? ಪೌರುಷಪ್ರದರ್ಶನಮಾಡಿ ನಿನ್ನನ್ನು ನೀನು ರಕ್ಷಿಸಿಕೊ ಎನ್ನುತ್ತ ರಭಸದಿಂದ ಹೊಡೆದನು. ಹೊಸದಾಗಿ ಮಸೆದ ಬಾಣಗಳ ತುಂತುರು ಮಳೆಯೂ ಜಡಿಮಳೆಯೂ ಅರ್ಜುನನನ್ನು ಮುಚ್ಚಿದುವು. ೧೮೪. ಬತ್ತಳಿಕೆಯಿಂದ ಬಾಣಗಳನ್ನು ಸೆಳೆದುಕೊಳ್ಳುವ, ಬಿಲ್ಲಿನ ಬಾಯಿಗೆ ಸೇರಿಸಿ ಕಿವಿಯವರೆಗೂ ಸೆಳೆಯುವ ವೇಗವನ್ನು ಕಾಣದೆ ಕರ್ಣನ ಹರಿತವಾದ ಬಾಣಗಳ ಚಪ್ಪರವನ್ನೇ ಆಕಾಶಪ್ರದೇಶದಲ್ಲಿ ದೇವತೆಗಳ ಸಮೂಹವು ನೋಡಿತು. ೧೮೫. ಪಾತ (ಬೀಳಿಸುವುದು) ಲಕ್ಷ್ಯ (ಗುರಿಯಿಡುವುದು) ಶೀಘ್ರ (ವೇಗದಿಂದ ಹೊಡೆಯುವುದು) ಘಾತ (ಘಟ್ಟಿಸುವುದು) ಬಹುವೇಗ (ಅತ್ಯಂತವೇಗ) ಎಂಬ ಈ ಅಯ್ದು ರೀತಿಯ ಬಾಣಪ್ರಯೋಗಗಳಲ್ಲಿಯೂ ಈತನಿಗೆ ಸಮಾನರಿಲ್ಲ ಎನ್ನಿಸಿತು ಆತನ ಬಿಲ್ವಿದ್ಯೆಯ ಶ್ರೇಷ್ಠತೆ, ಆಕಾಶದಲ್ಲಿರುವ ದೇವತೆಗಳಿಂದ. ವ|| ಆಗ ಪರಸೈನ್ಯಭೈರವನಾದ ಅರ್ಜುನನು ಪ್ರಳಯಕಾಲದ

ಕಂ|| ಶರಸಂಧಾನಾಕರ್ಷಣ
ಹರಣಾದಿ ವಿಶೇಷ ವಿವಿಧ ಸಂಕಲ್ಪ ಕಳಾ|
ಪರಿಣತಿಯಂ ಮೆದುದು ತರ
ತರದೊಳೆ ಮುಳಿದರಿಗನಿಸುವ ಶರನಿಕರಂಗಳ್|| ೧೮೬

ಮುನಿದಿಸುವಿನಜನ ಸರಲಂ
ಮೊನೆಯಿಂ ಗಱವರೆಗಮೆಯ್ದೆ ಸೀಳ್ದುವು ಕಣೆಗಳ್|
ಘನ ಪಥಮನಳುರ್ದು ಸುಟ್ಟಪು
ವೆನೆ ನೆಗೆದುವು ಕೋಲ ಹೊಗೆಯುಮಂಬಿನ ಕಿಡಿಯುಂ|| ೧೮೭

ಕೂಡೆ ಕಡಿವಂಬನಂಬೆಡೆ
ಮಾಡದೆ ಬಿಡದೊರಸೆ ಪುಟ್ಟಿದುರಿಗಳಗುರ್ವಂ|
ಮಾಡೆ ಕವಿದಳುರ್ವ ಬೆಂಕೆಯೊ
ಳಾಡಿಸಿದರ್ ಮೊಗಮನಮರಸುಂದರಿಯರ್ಕಳ್|| ೧೮೮

ಮೊಂನೆಯಂಬಿನ ತಂದಲೊಳ
ರ್ಜುನನಂ ಕರ್ಣನುಮನಿನಿಸು ಕಾಣದಣಂ ಮೆ|
ಲ್ಲನೆ ಬಗಿದು ನೋಡಿ ಕುಡುಮಿಂ
ಚಿನಂತೆ ಮೇಗೊಗೆದು ನಾರದಂ ನರ್ತಿಸಿದಂ|| ೧೮೯

ಚಂ|| ಕವಿವ ಶರಾಳಿಯಂ ನಿಜ ಶರಾಳಿಗಳೞ ತೆರಳ್ದಿ ತೂಳ್ದಿ ಮಾ
ರ್ಕವಿದು ಪಳಂಚಿ ಪಾಯ್ದೊರಸೆ ಪುಟ್ಟಿದ ಕಿರ್ಚಳುರ್ದೆೞ್ದಜಾಂಡದಂ|
ತುವರಮಗುರ್ವು ಪರ್ವಿ ಕರಮರ್ವಿಸೆ ದಳ್ಳುರಿ ಪೆರ್ಚಿ ಕಂಡು ಖಾಂ
ಡವವನದಾಹಮಂ ನೆನೆಯಿಸಿತ್ತು ಗುಣಾರ್ಣವನಸ್ತ್ರಕೌಶಲಂ|| ೧೯೦

ವ|| ಆಗಳ್ ಮದ್ರರಾಜನಂಗಾರಾಜನನಿಂತೆಂದನೀಯಂಬುಗಳೊಳೇಂ ತೀರ್ದಪುದು ದಿವ್ಯಾಸ್ತ್ರಂಗಳಿಂದೆಚ್ಚು ಪಗೆಯಂ ಸಾಧ್ಯಂ ಮಾಡೆಂಬುದುಂ ಕೊಂತಿಗೆ ತನ್ನ ನುಡಿದ ನುಡಿವಳಿಯಂ ನೆನೆದು ಪುರಿಗಣೆಯ ದೊಣೆಗೆ ಕೆಯ್ಯಂ ನೀಡದೆ ರೌದ್ರಶರದ ದೊಣೆಗೆ ಕೆಯ್ಯಂ ನೀಡಿದಾಗಳ್-

ಕಂ|| ಮುಳಿಸಂ ನೆಱಪಲ್ಕರ್ಧಾ
ವಳೀಕ ಶರರೂಪದಿಂದಸುಂಗೊಳೆ ದೊಣೆಯಿಂ|
ಪೊಳೆದು ಬರೆ ಕೆಯ್ಗೆ ತಾಂ ವಿ
ಸುಳಿಂಗ ಪಿಂಗಳಿತ ಭುವನ ಭವನಾಭೋಗಂ|| ೧೯೧

ಭೈರವನ ಆಕಾರವನ್ನು ಅಂಗೀಕರಿಸಿ ಕಾದಿದನು. ೧೮೬. ಅರಿಗನು ಕೋಪದಿಂದ ಹೊಡೆಯುವ ಬಾಣಸಮೂಹಗಳು ಶರಸಂಧಾನ (ಬಾಣವನ್ನು ತೊಡುವುದು) ಆಕರ್ಷಣ (ಎಳೆಯುವುದು) ಹರಣ (ಸೆಳೆದುಕೊಳ್ಳುವುದು) ವೇ ಮೊದಲಾದ ನಾನಾ ರೀತಿಯ ಕಲಾಪ್ರೌಢಿಮೆಯನ್ನು ಕ್ರಮಕ್ರಮವಾಗಿ ಮೆರೆದುವು. ೧೮೭. ಕೋಪಿಸಿಕೊಂಡು ಕರ್ಣನು ಪ್ರಯೋಗಿಸುವ ಬಾಣವನ್ನು ಅರ್ಜುನನ ಬಾಣಗಳು ತುದಿಯಿಂದ ಗರಿಯವರೆಗೆ ಸೀಳಿದುವು. ಆಕಾಶಮಾರ್ಗವನ್ನೂ ವ್ಯಾಪಿಸಿ ಸುಡುತ್ತವೆ ಎನ್ನುವ ಹಾಗೆ ಬಾಣಗಳ ಹೊಗೆಯೂ ಕಿಡಿಯೂ ಮೇಲಕ್ಕೆ ನೆಗೆದುವು. ೧೮೮. ಕೂಡಲೆ ಕತ್ತರಿಸುವ ಬಾಣಗಳನ್ನು ಬಾಣಗಳು ಅವಕಾಶಕೊಡದೆ ತಪ್ಪದೆ ಉಜ್ಜಲು ಹುಟ್ಟಿದ ಉರಿಯ ಜ್ವಾಲೆಗಳು ಭಯವನ್ನುಂಟುಮಾಡಲು ಆವರಿಸಿ ಸುಡುವ ಉರಿಯಲ್ಲಿ ದೇವಸುಂದರಿಯರು ತಮ್ಮ ಮುಖವನ್ನು ಅತ್ತ ಇತ್ತ ಅಲುಗಾಡಿಸಿದರು. ೧೮೯. ಮೊನಚಾದ ಬಾಣದ ತುಂತುರುಮಳೆಯಲ್ಲಿ ಅರ್ಜುನನೂ ಕರ್ಣನೂ ಸ್ವಲ್ಪವೂ ಕಾಣದಿರಲು ನಾರದನು ಸ್ವಲ್ಪವೂ ಸದ್ದಿಲ್ಲದೆ (ನಿಧಾನವಾಗಿ) ಭಾಗಮಾಡಿ ನೋಡಿ ಕುಡುಮಿಂಚಿನಂತೆ ಮೇಲಕ್ಕೆ ಹಾರಿ ಕುಣಿದಾಡಿದನು. ೧೯೦. ಕವಿಯುತ್ತಿರುವ ಬಾಣ ಸಮೂಹವನ್ನು ತನ್ನ ಬಾಣಸಮೂಹಗಳು ಆಕ್ರಮಿಸಿ ಓಡಿಸಿ ತಳ್ಳಿ ಪ್ರತಿಯಾಗಿ ಮುಚ್ಚಿ ತಗುಲಿ ನುಗ್ಗಿ ಉಜ್ಜಲು ಅಲ್ಲಿ ಹುಟ್ಟಿದ ಬೆಂಕಿಯು ಎದ್ದು ಮೇಲಕ್ಕೆ ನೆಗೆದು ಬ್ರಹ್ಮಾಂಡದ ಕೊನೆಯವರೆಗೆ ಭಯವು ಹಬ್ಬುವ ಹಾಗೆ ವಿಶೇಷವಾಗಿ ವ್ಯಾಪಿಸಿ ಹೆಚ್ಚಾಗಿ ಸುಡಲು ಆ ದಳ್ಳುರಿಯನ್ನು ನೋಡಿ ಅರ್ಜುನನ ಅಸ್ತ್ರಕೌಶಲವು ಖಾಂಡವವನವನ್ನು ಸುಟ್ಟುದನ್ನು ಜ್ಞಾಪಕಮಾಡಿತು. ವ|| ಆಗ ಶಲ್ಯನು ಕರ್ಣನಿಗೆ ಹೀಗೆಂದನು- ಈ ಬಾಣಗಳಿಂದ ಏನು ತೀರುತ್ತದೆ? ದಿವ್ಯಾಸ್ತ್ರಗಳನ್ನು ಪ್ರಯೋಗಿಸಿ ಹಗೆಯನ್ನು ಅನಮಾಡು ಎನ್ನಲು ಕುಂತೀದೇವಿಗೆ ತಾನು ಕೊಟ್ಟ ವಾಗ್ದಾನವನ್ನು ನೆನೆದು ದಿವ್ಯಾಸ್ತ್ರಗಳ ಬತ್ತಳಿಕೆಗೆ ಕೈಯನ್ನು ಚಾಚದೆ ರೌದ್ರಬಾಣಗಳ ಬತ್ತಳಿಕೆಗೆ ಕೈಯನ್ನು ನೀಡಿದಾಗ ೧೯೧. ಹಿಂದಿನ ಕೋಪವನ್ನು ತೀರಿಸಿಕೊಳ್ಳುವುದಕ್ಕಾಗಿ ಕಿಡಿಗಳಿಂದಲೂ ಹಳದಿ ಕಪ್ಪು ಮತ್ತು ಕೆಂಪು ಮಿಶ್ರವಾದ

ತಿರಿಪಿದೊಡದನೆಳೆ ತಿಱ್ರನೆ
ತಿರಿದುದು ತಿರುವಾಯೊಳಿಡೆ ಸುರರ್ ಮೊಯಿಟ್ಟರ್|
ಭರದೆ ತೆಗೆನೆಯೆ ಮೆಯ್ದೆಗೆ
ದರವಿಂದೋದ್ಭವನಿನೊಗೆದುದಾ ಬ್ರಹ್ಮಾಂಡಂ|| ೧೯೨

ಕಂ|| ತುಡೆ ಕರ್ಣನದಂ ನಡನಡ
ನಡುಗಿ ಸುಯೋಧನನ ಸಕಲ ರಾಜ್ಯಶ್ರೀಯುಂ|
ಸಡಿಲಿಸಿದ ತೋಳನಾಗಳ್
ಸಡಿಲಿಸಲಣ್ಮಳೆ ದಲದಱಗುರ್ವೇಂ ಪಿರಿದೋ|| ೧೯೩

ಆಕರ್ಣಾಂತಂ ತೆಗೆನೆ
ದಾ ಕರ್ಣನಿಸಲ್ಕೆ ಬಗೆದೊಡುಡುಗುಡುಗಿಸಲೀ||
ಭೀಕರ ಬಾಣಮನಾದವಿ
ವೇಕದಿನುರದೆಡೆಗೆ ತುಡದೆ ತಲೆಗೆಯೆ ತುಡುವಾ|| ೧೯೪

ಉರದೆಡೆಗೆ ತುಡೆ ಜಯಶ್ರೀ
ಗಿರಲೆಡೆ ನಿನಗಪ್ಪುದಾ ಸುಯೋಧನನೊಳ್ ಶ್ರೀ
ಗಿರಲೆಡೆಯಪ್ಪುದು ಮೇಣ್ ದಿನ
ಕರಸುತ ತೊದಳುಂಟೆ ಬಗೆಯೆ ಸಂದೆಯಮುಂಟೇ|| ೧೯೫

ವ|| ಎಂಬುದುಂ ಶಲ್ಯನ ನುಡಿದ ನುಡಿಯನವಧಾರಿಸಿ ತನ್ನ ಮನದೊಳೆ ಕರ್ಣನಿಂತೆಂದಂ-

ಮ|| ಎನಿತುಂ ಶಲ್ಯನ ಪೇೞ್ದ ಪಾಂಗೆ ತೊದಳಿಲ್ಲಿಂತಾದೊಡಾ ಶಕ್ರಪು
ತ್ರನನಾಂ ಕೊಂದೊಡೆ ಧರ್ಮಪುತ್ರನೞಗುಂ ತಾಯೆಂದೆ ಮುಂ ಕೊಂತಿ ಬಂ|
ದಿನಿಸಂ ಪ್ರಾರ್ಥಿಸಿ ಪೋದಳೆನ್ನನದನಾಂ ಮಾಣ್ದಿರ್ದೆನಿರ್ದಾಗಳೊ
ಳ್ಪಿನ ಪೆರ್ಮಾತಿನ ನನ್ನಿ ಬನ್ನದೊಳೊಡಂಬಟ್ಟಿರ್ಪುದಂ ಮಾೞ್ಪೆನೇ|| ೧೯೬

ಚಂ|| ತನಗುಱುವಂತುಟಾಗೆ ಕಡು ನನ್ನಿಯ ಪೆಂಪುಮನಾಂತು ಭೂಭುಜರ್
ತನಗಿನಿತೂನಮಾಗೆ ಮೆದಾ ಭುಜವೀರ್ಯಮನಾಂತು ಮಾಣ್ಬುದೇಂ|
ತನಗುಱುವೊಂದು ನನ್ನಿಯನೆ ಪೂಣ್ದು ಕರಂ ಪಿರಿದುಂ ಬಲಸ್ಥನ
ಪ್ಪನನೆ ಕಱುತ್ತು ಕಾದಿ ನೆಗೞiತನೆ ನನ್ನಿಯ ಬೀರದಾಗರಂ|| ೧೯೭

ಕಾಂತಿಯಿಂದಲೂ ಕೂಡಿದ ಪ್ರಪಂಚವೆಂಬ ಮನೆಯಷ್ಟು ವಿಸ್ತಾರವಾದ ಅರ್ಧಾವಲೀಕವೆಂಬ ಅರ್ಧ ಉಳಿದಿದ್ದ ಸರ್ಪವು ಬಾಣದ ಆಕಾರದಲ್ಲಿ ಬತ್ತಳಿಕೆಯಿಂದ ಹೊಳೆಯುತ್ತ ಪ್ರಾಣಾಪಹಾರಮಾಡಲು ಕೈಗೆ ಬಂದಿತು. ೧೯೨. ಅದನ್ನು ತಿರುಗಿಸಲು ಭೂಮಿಯು ತಿರ್ರೆಂದು ತಿರುಗಿತು. ಬಿಲ್ಲಿನ ಹೆದೆಗೇರಿಸಲು ದೇವತೆಗಳು ಗಟ್ಟಿಯಾಗಿ ಕೂಗಿಕೊಂಡರು. ವೇಗದಿಂದ ಹೆದೆಯನ್ನು ಕಿವಿಯವರೆಗೆ ಸೆಳೆಯಲು ಮೈಯಿಳಿದ (ಗರ್ಭಾಸ್ರಾವವಾದ) ಬ್ರಹ್ಮನಿಂದ ಬ್ರಹ್ಮಾಂಡವು ಹುಟ್ಟಿತು. ೧೯೩. ಅದನ್ನು ಕರ್ಣನು ಪ್ರಯೋಗಮಾಡಲು ದುರ್ಯೋಧನನ ಸಮಸ್ತ ರಾಜ್ಯಶ್ರೀಯು ಗಡಗಡನೆ ನಡುಗಿ ಸಡಿಲಿಸಿದ್ದ ತನ್ನ ತೋಳನ್ನು ಸಡಿಲಿಸಲು ಆಗ ಶಕ್ತಳಾಗಲಿಲ್ಲವಲ್ಲವೇ? ಅದರ ಭಯಂಕರತೆ ಅತ್ಯದ್ಭುತವಾಗಿತ್ತು. ೧೯೪. ಕಿವಿಯವರೆಗೂ ಪೂರ್ಣವಾಗಿ ಸೆಳೆದು ಕರ್ಣನು ಹೊಡೆಯಲು ಮನಸ್ಸು ಮಾಡುತ್ತಿದ್ದ ಹಾಗೆಯೇ ಹಿಂದಕ್ಕೆ ತೆಗೆ, ಹಿಂದಕ್ಕೆ ತೆಗೆ; ಹೊಡೆಯಬೇಡ; ಈ ಭಯಂಕರವಾದ ಬಾಣವನ್ನು ವಿವೇಕದಿಂದ ಎದೆಯ ಪ್ರದೇಶಕ್ಕೆ ಗುರಿಯಿಡದೆ ತಲೆಗೆ ಗುರಿಯಿಡುತ್ತೀಯಾ? ೧೯೫. ಎದೆಯ ಪ್ರದೇಶಕ್ಕೆ ಗುರಿಯಿಟ್ಟು ತೊಟ್ಟರೆ ಜಯಲಕ್ಷ್ಮಿಯು ನಿನ್ನಲ್ಲಿರಲು ಅವಕಾಶವಾಗುತ್ತದೆ. ಆ ದುರ್ಯೋಧನನಲ್ಲಿ ಜಯಲಕ್ಷ್ಮಿಯಿರಲೂ ಅವಕಾಶವಾಗುತ್ತದೆ. ಕರ್ಣಾ ಈ ಮಾತು ಸುಳ್ಳಲ್ಲ ಸಂಶಯಪಡಬೇಡ ವ|| ಎನ್ನಲು, ಶಲ್ಯನು ನುಡಿದ ಮಾತನ್ನು ಕೇಳಿ ತನ್ನ ಮನಸ್ಸಿನಲ್ಲಿಯೇ ಕರ್ಣನು ಹೀಗೆಂದುಕೊಂಡನು. ೧೯೬. ಹೇಗೂ ಶಲ್ಯನು ಹೇಳಿದ ಹಾಗೆಯೇ (ಸರಿ) ಸುಳ್ಳಿಲ್ಲ. ಆದರೆ ಆ ಇಂದ್ರಪುತ್ರನಾದ ಅರ್ಜುನನನ್ನು ನಾನು ಕೊಂದರೆ ಧರ್ಮರಾಜನು ಸಾಯುತ್ತಾನೆ. ನನ್ನ ತಾಯಿಯೆಂದೇ ಕುಂತಿ ಬಂದು ನನ್ನಲ್ಲಿ ಇದನ್ನೇ ಬೇಡಿಹೋದಳು. ಅದನ್ನು ನಾನು ತಪ್ಪಿ ನಡೆಯುವುದಾದರೆ ಆ ಒಳ್ಳೆಯ ಸತ್ಯವಾಕ್ಕಿನ ಭಂಗವಾದುದನ್ನು ನಾನು ಮಾಡುವೆನೇ? (ಮಾಡಲೇ) ೧೯೭. ಸಾಮಾನ್ಯರಾಜರಾದವರು ತಮಗೆ ಸಾಧ್ಯವಾದಷ್ಟು

ಮ|| ಅಱಯರ್ ಪಾಂಡವರೆನ್ನನಿನ್ನುಮಱಪಲ್ ನೀಮೆಂದದಂ ಚಕ್ರಿಗಾ
ನಱಪಿರ್ದೆಂ ಪೃಥೆಯುಂ ಮದೀಯ ಸುತರೊಳ್ ವೈಕರ್ತನಂ ನನ್ನಿಯಂ|
ನಿಱಸಲ್ಕಾರ್ಕುಮಮೋಘಮೆಂದು ಮನದೊಳ್ ನಂಬಿರ್ದಳಿನ್ನಿಲ್ಲಿ ಪೆಂ
ಪೆಱಕಂಬೆತ್ತಿರೆ ಕಾವೆನೆನ್ನ ನುಡಿಯಂ ಕೆಯ್ಕೊಂಡ ಕಟ್ಟಾಯಮಂ|| ೧೯೮

ಕಂ|| ಎಂಬುದನೆ ಬಗೆದು ಪೆಱತನ
ಣಂ ಬಗೆಯದೆ ಮದ್ರಪತಿಯನೆಂದಂ ಮುಂ ತೊ|
ಟ್ಟಂಬನದನುಗಿದು ಕುಂದಿಸಿ
ದಂ ಭಯದಿಂ ಕರ್ಣನೆಂದು ಲೋಕಂ ನಗದೇ|| ೧೯೯

ಕಂ|| ಉಡುಗುಡುಗುಡುಗೆಂದಿಸೆ ಬಱ
ಸಿಡಿಲೆಱಪಂತೆಱಪ ಸರಲ ಬರವಂ ಕಂಡಾ|
ಗಡೆ ಚಕ್ರಿ ನೆಲನೊಳೆಣ್ಬೆರ
ಲಡಂಗೆ ನರರಥಮನೊತ್ತಿದಂ ನಿಪುಣತೆಯಿಂ|| ೨೦೦

ಒತ್ತುವುದುಂ ಶರಮಿರದೆ
ಯ್ದುತ್ತೆ ಕಿರೀಟಿಯ ಕಿರೀಟಮಂ ಕೊದೊಡೆ ಪ|
ರ್ವಿತ್ತು ಭಯಮಿಂದ್ರನಂ ಮು
ತ್ತಿತ್ತೞಲೀಶ್ವರನನಾಗಳಾ ಸಂಕಟದೊಳ್|| ೨೦೧

ಒಳಗಱಯದೆ ಕೌರವಬಳ
ಜಳನಿ ಬೊಬ್ಬಿಱದು ಮೇಲುದಂ ಬೀಸಿದೊಡು|
ಚ್ಚಳಿಸಿದ ಮಕುಟದ ಮಣಿಗಳ
ಪೊಳೆಪುಗಳಿಂದಳ್ಕಮೆೞ್ದುವೆಂಟುಂ ದೆಸೆಯೊಳ್|| ೨೦೨

ವ|| ಅಂತು ರುಂದ್ರನೀಳಾದ್ರೀಂದ್ರ ರತ್ನಕೂಟಾಗ್ರಮುದಗ್ರ ವಜ್ರಘಾತದಿಂದುರುಳ್ವಂತೆ ರತ್ನಮಕುಟಮರಾತಿಶಾತಶರದಿನುರುಳ್ವುದು ಮಳಿನೀಳೋಜ್ವಳ ಸಹಸ್ರಕುಂತಳಂಗಳ್ ಪರಕಲಿಸಿ ಬಂದು ಪೊಱಮುಯ್ವನಳ್ಳಿಱಯೆ ಪಚ್ಚುಗಂಟಿಕ್ಕಿ ಗಾಂಡೀವಧನ್ವಂ ಸನ್ನದ್ಧನಾಗಿರ್ಪನ್ನೆಗಂ-

ಸತ್ಯವನ್ನೂ ಪರಾಕ್ರಮವನ್ನೂ ತಾವು ಪ್ರದರ್ಶಿಸಬಹುದು. ಆದರೆ ಪೂರ್ಣವಾದ ಭುಜಶಕ್ತಿಯನ್ನು ಪಡೆದಿದ್ದೂ ಅದನ್ನು ತಪ್ಪುವುದೆಂದರೇನು? ತನಗೆ ಸಾಧ್ಯವಾದಷ್ಟು ಸತ್ಯಪ್ರತಿಜ್ಞೆಮಾಡಿ, ವಿಶೇಷ ಶೌರ್ಯಶಾಲಿಯಾದವನನ್ನೆ ಗುರಿಯಿಟ್ಟು ಕಾದಿ ಪ್ರಸಿದ್ಧಿಪಡೆದವನೇ ಸತ್ಯ ಮತ್ತು ಪರಾಕ್ರಮದ ಆವಾಸಸ್ಥಾನನಾಗುವನು. ೧೯೮. ಪಾಂಡವರು ನನ್ನನ್ನು ಇನ್ನೂ (ಯಾರೆಂದು) ತಿಳಿಯರು. ನೀವು ತಿಳಿಸಬೇಡಿ ಎಂದು ನಾನು ಕೃಷ್ಣನನ್ನು ಪ್ರಾರ್ಥಿಸಿದ್ದೆ. ಕುಂತಿಯೂ ನನ್ನ ಮಕ್ಕಳಲ್ಲಿ ಕರ್ಣನು ಸತ್ಯವನ್ನು ಸ್ಥಾಪಿಸುವುದಕ್ಕೆ ಪೂರ್ಣವಾಗಿ ಸಮರ್ಥನೆಂದು ಮನಸ್ಸಿನಲ್ಲಿ ನಂಬಿದ್ದಾಳೆ. ಇಂತಹ ವೈಭವವು ನನ್ನಲ್ಲಿ ಎರಕ ಹೊಯ್ದಿರಲು ನನ್ನ ಭಾಷೆಯನ್ನೂ ನಾನು ಅಂಗೀಕರಿಸಿರುವ ನನ್ನ ತೀವ್ರವಾದ ಶೌರ್ಯವನ್ನೂ ರಕ್ಷಿಸುತ್ತೇನೆ. ೧೯೯. ಎಂಬುದಾಗಿಯೇ ಯೋಚಿಸಿ ಬೇರೆ ಯಾವ ರೀತಿಯನ್ನೂ ಯಾವ ರೀತಿಯಲ್ಲಿಯೂ ಯೋಚಿಸದೆ ಶಲ್ಯನಿಗೆ ಹೇಳಿದನು. ‘ಕರ್ಣನು ಮೊದಲು ಪ್ರಯೋಗಿಸಿದ ಬಾಣವನ್ನು ಭಯದಿಂದ ಹಿಂದಕ್ಕೆ ಸೆಳೆದು ಕುಗ್ಗಿಸಿದನು’ ಎಂದು ಮುಂದೆ ಲೋಕವು ನಗುವುದಿಲ್ಲವೇ? ೨೦೦. ಎನ್ನುತ್ತ ಕುಗ್ಗಿಸು, ಕುಗ್ಗಿಸು, ಕುಗ್ಗಿಸು ಎಂದು ಹೊಡೆಯಲು ಬರಸಿಡಿಲೆರಗುವಂತೆ ಎರಗುವ ಬಾಣದ ಬರುವಿಕೆಯನ್ನು ಕಂಡು ಆಗಲೆ ಕೃಷ್ಣನು ಅರ್ಜುನನ ತೇರನ್ನು ಭೂಮಿಯಲ್ಲಿ ಎಂಟುಬೆರಳು ಆಳಕ್ಕೆ ಅಡಗುವ ಹಾಗೆ ಕೌಶಲದಿಂದ ಒತ್ತಿದನು. ೨೦೧. ಒತ್ತಟ್ಟಾಗಿ ಬಾಣವು ಸುಮ್ಮನಿರದೆ ಬರುತ್ತ ಅರ್ಜುನನ ಕಿರೀಟವನ್ನು ಕತ್ತರಿಸಲು ಆಗ ಇಂದ್ರನನ್ನು ಭಯವಾವರಿಸಿತು. ಆ ಸಂಕಟದಲ್ಲಿ ದುಖವು ಈಶ್ವರನನ್ನು ಆವರಿಸಿಕೊಂಡಿತು. ೨೦೨. ಇದರ ರಹಸ್ಯವನ್ನರಿಯದೆ ಕೌರವಸೇನಾಸಮುದ್ರವು ಆರ್ಭಟಮಾಡಿ (ಸಂತೋಷದಿಂದ) ಉತ್ತರೀಯವನ್ನು ಬೀಸಲು ಚಿಮ್ಮಿದ ಕಿರೀಟದ ರತ್ನಗಳ ಹೊಳಪಿನಿಂದ ಎಂಟುದಿಕ್ಕುಗಳಲ್ಲಿಯೂ ಉಲ್ಖಾಪಾತಗಳು ಎದ್ದುವು. ವ|| ಹಾಗೆ ವಿಸ್ತಾರವೂ ರತ್ನಮಯವೂ ಆದ ನೀಲಪರ್ವತದ ಶಿಖರಗಳ ತುದಿಯ ಭಾಗವು ಬಲವಾದ ವಜ್ರಾಯುಧದ ಪೆಟ್ಟಿನಿಂದ ಉರುಳುವ ಹಾಗೆ ರತ್ನಕಿರೀಟವು ಶತ್ರುವಿನ ಹರಿತವಾದ ಬಾಣದಿಂದ ಉರುಳಲು ದುಂಬಿಗಳ ಕಪ್ಪುಬಣ್ಣದಂತೆ ಪ್ರಕಾಶಮಾನವಾಗಿರುವ ಕೂದಲುಗಳು ಕೆದರಿ ಬಂದು ಹೆಗಲಿನ ಹೊರಭಾಗವನ್ನು ಮುಟ್ಟಲು

ಚಂ|| ಪುರಿಗಣೆಯಪ್ಪ ಕಾರಣದಿನಂತದು ತಪ್ಪಿದೆನೆಂದು ನೊಂದು ಪ
ಲ್ಮೊರೆದಹಿ ರೂಪದಿಂ ಮಗುೞ್ದು ಬಂದಿನನಂದನನಲ್ಲಿಗೆನ್ನನಂ|
ತರಿಸದೆ ತೊಟ್ಟು ಬೇಗಮಿಸು ವೈರಿಯನೀಗಳೆ ಕೊಂದಪೆಂ ರಸಾಂ
ಬರ ಧರಣೀವಿಭಾಗದೊಳಗಾವೆಡೆವೊಕ್ಕೊಡಮಂಗನಾಯಕಾ|| ೨೦೩

ವ|| ಎಂಬುದುಂ ನೀನಾರ್ಗೇನೆಂಬೆಯದಾವುದು ಕಾರಣದಿಂದಮೆನ್ನ ದೊಣೆಯಂ ಪೊಕ್ಕಿರ್ದೆಯೆಂದೊಡಾನಶ್ವಸೇನನೆಂಬ ಪನ್ನಗನೆನೆಂದು ತನ್ನ ವೈರ ಕಾರಣನಱಯೆ ಪೇೞ್ದೊ ಡೆದರಹಸಿತವದನಾರವಿಂದನಾಗಿ-

ಕಂ|| ಶರರೂಪದೊಳಿರೆ ನಿನ್ನಂ
ಶರಮೆಂದಾಂ ತೊಟ್ಟೆನಱದು ತುಡುವೆನೆ ನಿನ್ನಂ|
ನೆರದೊಳ್ ಕೊಲ್ವಂತೆನಗೇ
ನರಿಯನೆ ಗಾಂಡೀವಧನ್ವನೆಂಬುದುಮಾಗಳ್|| ೨೦೪

ನೀಂ ನಿನ್ನ ಪಗೆಯನಾರ್ಪೊಡ
ದಂ ನೆಱಪೆನೆ ನೆಗೆದು ಬರ್ಪ ವಿಪಪನ್ನಗನಂ|
ಪನ್ನತನೆಡೆಯೊಳರಿಗಂ
ತನ್ನಯ ಗರುಡಾಸ್ತ್ರದಿಂದೆ ಕುಱದಱದಱದಂ|| ೨೦೫

ವ|| ಆಗಳಂಗರಾಜಂಗೆ ಶಲ್ಯಂ ಕಿನಿಸಿ ಮುಳಿಸಿನೊಳೆ ಕಣ್ಗಾಣದಿಂತಪ್ಪೇಕಗ್ರಾಹಿಗ ಮೊರಂಟಂಗಂ ರಥಮನೆಸಗೆನೆಂದು ವರೂಥದಿಂದಿೞದು ಪೋಗೆ-

ಚಂ|| ಅರಿಗನ ಬಟ್ಟಿನಂಬುಗಳ ಬಲ್ಸರಿ ಸೋಂಕುಗುಮೇೞಮೆನ್ನ ತೋ
ಳ್ನೆರಮೆನಗೆನ್ನ ಬಿಲ್ಲೆ ನೆರಮೆಂದು ವರೂಥತುರಂಗಮಂಗಳಂ||
ತುರಿಪದೆ ತಾನೆ ಚೋದಿಸುತುಮಾರ್ದಿಸುತುಂ ಕಡಿಕೆಯ್ದು ಕಾದೆ ಭೀ
ಕರ ರಥಚಕ್ರಮಂ ಪಿಡಿದು ನುಂಗಿದಳೊರ್ಮೆಯೆ ಧಾತ್ರಿ ಕೋಪದಿಂ|| ೨೦೬

ವ|| ಅಂತು ತನ್ನಂ ಮುನ್ನೆ ಮುಯ್ಯೇೞ್ ಸೂೞ್ವರಮೊಲ್ಲಣಿಗೆಯಂ ಪಿೞವಂತೆ ಪಿಂಡಿ ಪಿೞದ ಪಗೆಗೆ ರಥಚಕ್ರಮಂ ನುಂಗುವುದುಂ ರಥದಿಂದಿೞದು ಗಾಲಿಯನೆತ್ತುವಾಗಳಿವನನೀ ಪದದೊಳ್ ಕಡಿದೊಟ್ಟದಾಗಳ್ ಗೆಲಲಾಯೆಂದು ನುಡಿದ ಮುಕುಂದನ ನುಡಿಗೆ ಕೊಕ್ಕರಿಸಿ ಜಗದೇಕಮಲ್ಲನಿಂತೆಂದಂ-

ಅದನ್ನು ಎರಡು ಭಾಗವಾಗಿ ಗಂಟಿಕ್ಕಿ ಅರ್ಜುನನು ಸಿದ್ಧವಾಗುವಷ್ಟರಲ್ಲಿ ೨೦೩. ದಿವ್ಯಾಸ್ತ್ರವಾದ (ಪುರಿಗಣೆಯಾದ) ಕಾರಣದಿಂದ ಹಾಗೆ ತಪ್ಪುಮಾಡಿದೆನೆಂದು ವ್ಯಥೆಪಟ್ಟು ಹಲ್ಲುಕಡಿದು ಶಬ್ದಮಾಡಿ ಹಾವಿನ ರೂಪದಿಂದ ಪುನ ಕರ್ಣನ ಹತ್ತಿರಕ್ಕೆ ಬಂದು ‘ಕರ್ಣಾ, ನನ್ನನ್ನು ಸಾವಕಾಶಮಾಡದೆ ಬಿಲ್ಲಿನಲ್ಲಿ ತೊಡಿಸಿ ಬೇಗ ಹೂಡು; ಸ್ವರ್ಗಮರ್ತ್ಯಪಾತಾಳವಿಭಾಗದಲ್ಲಿ ಯಾವಸ್ಥಳದಲ್ಲಿ ಪ್ರವೇಶಮಾಡಿದ್ದರೂ ಶತ್ರುವನ್ನು ಈಗಲೇ ಕೊಲ್ಲುತ್ತೇನೆ’ ಎಂದಿತು. ವ|| ‘ನೀನು ಯಾರು? ನಿನ್ನ ಹೆಸರೇನು’ ಯಾವ ಕಾರಣದಿಂದ ನನ್ನ ಬತ್ತಳಿಕೆಯನ್ನು ಪ್ರವೇಶಿಸಿದ್ದೆ’ ಎನ್ನಲು ‘ನಾವು ಅಶ್ವಸೇನನೆಂಬ ಹಾವು’ ಎಂದು ತಿಳಿಸಿ ತನ್ನ ವೈರಕಾರಣವನ್ನು ಸ್ಪಷ್ಟವಾಗಿ ತಿಳಿಸಲು ಮುಗುಳುನಗೆಯಿಂದ ಕೂಡಿದ ಮುಖವುಳ್ಳವನಾಗಿ ೨೦೪. ‘ಬಾಣಾಕಾರದಿಂದಿರಲು ನಿನ್ನನ್ನು ಬಾಣವೆಂದು ಬಿಲ್ಲಿಗೆ ತೊಡಿಸಿದೆ. (ನೀನು ಯಾರೆಂದು) ತಿಳಿದೂ ನಿನ್ನ ಸಹಾಯದಿಂದ ಕೊಲ್ಲುವಷ್ಟು ಅರ್ಜುನನು ನನಗೆ ಅಸಾಧ್ಯನೆ?’ ಎಂದನು- ೨೦೫. ಸರ್ಪವು ‘ಹಾಗಾದರೆ ಶತ್ರುತ್ವವನ್ನು ಸಮರ್ಥನಾದರೆ ನೀನು ಪೂರ್ಣಮಾಡು’ ಎಂದು ಹೇಳಿ ಅರ್ಜುನನ ಕಡೆಗೆ ಹಾರಿ ಬರುತ್ತಿದ್ದ ವಿಷಸರ್ಪವನ್ನೂ ಶೂರನಾದ ಅರಿಗನು ಮಧ್ಯಮಾರ್ಗದಲ್ಲಿಯೇ ಗರುಡಬಾಣದಿಂದ ಕುರಿಯನ್ನು ಕತ್ತರಿಸುವಂತೆ ಕತ್ತರಿಸಿದನು. ವ|| ಆಗ ಕರ್ಣನಿಗೆ ಶಲ್ಯನು ಕೋಪಿಸಿಕೊಂಡು ಕೋಪದಿಂದ ಕಣ್ಗಾಣದೆ, ಇಂತಹ ಹಟಮಾರಿಗೂ ಒರಟನಿಗೂ ನಾನು ತೇರನ್ನು ನಡೆಸುವುದಿಲ್ಲವೆಂದು ತೇರಿನಿಂದ ಇಳಿದು ಹೋದನು. ೨೦೬. ‘ಅರ್ಜುನನ ದುಂಡಾದ ಬಾಣಗಳ ದೊಡ್ಡ ಮಳೆಯು ತಗುಲುತ್ತಿದೆ ಏಳಿ, ನನ್ನ ತೋಳುಗಳು ನನಗೆ ಸಹಾಯ, ನನ್ನ ಬಿಲ್ಲೇ ಸಹಾಯ’ ಎಂದು ರಥದ ಕುದುರೆಗಳನ್ನು ವೇಗವಾಗಿ ತಾನೇ ನಡೆಸುತ್ತ ಆರ್ಭಟಮಾಡಿ ಬಹಳವೇಗದಿಂದ ಯುದ್ಧಮಾಡಲು ಭಯಂಕರವಾದ ತೇರಿನ ಚಕ್ರವನ್ನು ಭೂಮಿಯು ಹಿಡಿದು ಇದಕ್ಕಿದ್ದ ಹಾಗೆ ನುಂಗಿದಳು (ಕರ್ಣನ ತೇರಿನ ಗಾಲಿಗಳು ಇದಕ್ಕಿದ್ದ ಹಾಗೆ ಭೂಮಿಯಲ್ಲಿ ಹೂತುಹೋದುವು) ವ|| ಹಾಗೆ ತನ್ನನ್ನು ಮೊದಲು ಇಪ್ಪತ್ತೊಂದು ಸಲ ಒದ್ದೆಯ ಬಟ್ಟೆಯನ್ನು ಹಿಂಡುವಂತೆ ಹಿಂಡಿದ ದ್ವೇಷಕ್ಕೆ ರಥಚಕ್ರವನ್ನು ಭೂಮಿಯು ನುಂಗಲು ರಥದಿಂದಿಳಿದು ಕರ್ಣನು ಗಾಲಿಯನ್ನು ಎತ್ತುತ್ತಿದ್ದನು. ಇವನನ್ನು ಈ ಸ್ಥಿತಿಯಲ್ಲಿ

ಮ|| ಬಱುವಂ ಸಾರಥಿಯಿಲ್ಲ ಮೆಯ್ಗೆ ಮಯುಂ ತಾನಿಲ್ಲದೆಂತೀಗಳಾ
ನಿಱವೆಂ ನೋಡಿರೆ ಮತ್ತಮೊಂದನಿಸಲುಂ ಕೆಯ್ಯೇೞದೇಕೆಂದುಮಾ|
ನಱಯೆಂ ಕೂರ್ಮೆಯೆ ಮಿಕ್ಕು ಬಂದಪುದಿದರ್ಕೇಗೆಯ್ವೆನೇನೆಂಬೆನಾಂ|
ಮದೆಂ ಮುನ್ನಿನದೊಂದು ವೈರಮನಿದಿಂತೇಕಾರಣಂ ಭೂಧರಾ|| ೨೦೭

ವ|| ಎಂಬುದುಮೆನಿತಱಯದಿರ್ದೊಡಂ ಸೋದರಿಕೆಯೆ ಮಿಕ್ಕು ಬರ್ಕುಮಾಗದೆಯೆಂದು ತನ್ನಂತರ್ಗತದೊಳ್ ಬಗೆದಸುರಾಂತಕನಿಂತೆಂದಂ-

ಚಂ|| ನೆಗೞ್ದಭಿಮನ್ಯುವಂ ಚಲದಿನಂದಿಱದಿಂದು ನಿಜಾಗ್ರಜಾತನಂ
ಸುಗಿವಿನಮೆಚ್ಚು ಬೀರದೊಳೆ ಬೀಗುವ ಸೂತಸುತಂಗೆ ನೀನುಮಾ||
ಜಿಗೆ ಸೆಡೆದಿರ್ದೆಯಪ್ಪೊಡಿರು ಚಕ್ರನಿಘಾತದಿನಿಕ್ಕಿ ಬೀರಮು
ರ್ವಿಗೆ ಪಡಿಚಂದಮಾಗೆ ತಱದೊಟ್ಟಿ ಜಯಾಂಗನೆಗಾಣ್ಮನಾದಪೆಂ|| ೨೦೮

ವ|| ಎಂಬನ್ನೆಗಂ ಧರಾತಳಮಳ ರಥದ ಗಾಲಿಯಂ ಕಿೞ್ತು ಮತ್ತಂ ರಥಮನಪ್ರತಿರಥ ನೇಱ ನಿಟ್ಟಾಲಿಯಾಗೆ ಮುಟ್ಟೆವಂದು ಕಿಡಿಗುಟ್ಟೆ ಮರ್ಮೋದ್ಘಾಟನಂಗೆಯ್ದು ಕಾದುವಾಗಳ್ ಕಪಿಧ್ವಜಂ ವನದಂತಿಯಂತೆ ಧ್ವಾಂಕ್ಷದ್ವಜಮನುಡಿದು ಕೆಡೆವಿನಮೆಚ್ಚಾಗಳ್-

ಕಂ|| ಪೞಯಿಗೆ ಬಿೞ್ದೊಡೆ ಬೀರದ
ಪೞವಿಗೆಯಂ ನಿೞಸಲೆಂದೆ ಹರಿ ವಕ್ಷಮನ
ಲ್ಲೞವೋಗೆಯೆಚ್ಚು ಮುಳಿಸವ
ಗೞಯಿಸುತಿರೆ ನರನ ಬಿಲ್ಲ ಗೊಣೆಯುಮನೆಚ್ಚಂ|| ೨೦೯

ಬೆಳಗುವ ಸೊಡರ್ಗಳ ಬೆಳಗ
ಗ್ಗಳಿಸುವವೋಲ್ ಪೋಪ ಪೊೞ್ತಳ್ ತೇಜಂ ಪ|
ಜ್ಜಳಿಸೆ ತೞತೞಸೆ ತೊಳ ತೊಳ
ತೊಳಗಿದನಸ್ತಮಯ ಸಮಯದೊಳ್ ದಿನಪಸುತಂ|| ೨೧೦

ವ|| ಅಂತು ವಿಕರ್ಣಹತಿಯಿಂದಮಸುರಾಂತಕಂ ಕೞಯೆ ನೊಂದು-

(ಸನ್ನಿವೇಶದಲ್ಲಿ) ಕತ್ತರಿಸಿ ರಾಶಿಮಾಡದಿದ್ದರೆ ಗೆಲ್ಲಲಾರೆ ಎಂದು ಹೇಳಿದ ಕೃಷ್ಣನ ಮಾತಿಗೆ ಅಸಹ್ಯಪಟ್ಟು ಅರ್ಜುನನು ಹೀಗೆ ಹೇಳಿದನು- ೨೦೭. ಬರಿದಾದವನು (ನಿಸ್ಸಹಾಯಕನು), ಸಾರಥಿಯೂ ಇಲ್ಲ; ಶರೀರಕ್ಕೆ ಮರೆಯಾದ ಕವಚವೂ ಇಲ್ಲ; ಅದು ಹೇಗೆ ಈಗ ನಾನು ಹೊಡೆಯಲಿ; ಪುನ ಒಂದು ಬಾಣವನ್ನು ಹೊಡೆಯುವುದಕ್ಕೂ ಕೈಗಳು ಏಳುವುದಿಲ್ಲ. ಏತಕ್ಕೆಂದು ನಾನು ತಿಳಿಯಲಾರೆ; ಪ್ರೀತಿಯೆ ಮೀರಿ ಬರುತ್ತಿದೆ. ಇದಕ್ಕೆ ಏನು ಮಾಡಲಿ, ಏನೆಂದು ಹೇಳಲಿ; ನಾನು ಹಿಂದಿನ ದ್ವೇಷವನ್ನು ಮರೆತೆನು; ಕೃಷ್ಣಾ ಇದಕ್ಕೇನು ಕಾರಣ? ವ|| ಎನ್ನಲು ವಾಸ್ತವಾಂಶವು ತಿಳಿಯದಿದ್ದರೂ ಭ್ರಾತೃಭಾವವೇ ಮೀರಿ ಬರುತ್ತದೆಯಲ್ಲವೇ ಎಂದು ತನ್ನ ಮನಸ್ಸಿನಲ್ಲಿ ತಿಳಿದು ಕೃಷ್ಣನು ಹೀಗೆ ಹೇಳಿದನು- ೨೦೮. ಅಂದು ಪ್ರಸಿದ್ಧನಾದ ಅಭಿಮನ್ನುವನ್ನು ಹಟದಿಂದ ಕತ್ತರಿಸಿ ಇಂದು ನಿಮ್ಮಣ್ಣನಾದ ಧರ್ಮರಾಯನನು ಹೆದರುವಂತೆ ಹೊಡೆದು ವೀರ್ಯದಿಂದ ಅಹಂಕಾರಪಡುವ ಸೂತನ ಮಗನಿಗೆ ನೀನು ಯುದ್ಧದಲ್ಲಿ ಹೆದರುವುದಾದರೆ ಇರು ನಾನೇ ಚಕ್ರಾಯುಧದ ಪೆಟ್ಟಿನಿಂದ ಹೊಡೆದು ಪರಾಶ್ರಮವು ಲೋಕಕ್ಕೆ ಮಾದರಿಯಾಗುವ ಹಾಗೆ ಕತ್ತರಿಸಿ ರಾಶಿ ಮಾಡಿ ಜಯಲಕ್ಷ್ಮಿಗೆ ಒಡೆಯನಾಗುತ್ತೇನೆ. ವ|| ಎನ್ನುವಷ್ಟರಲ್ಲಿ ಭೂಮಿಯು ನಡುಗುವ ಹಾಗೆ ತೇರಿನ ಚಕ್ರವನ್ನು ಕಿತ್ತು ಪುನ ಪ್ರತಿರಥನಿಲ್ಲದ ಕರ್ಣನು ರಥವನ್ನು ಹತ್ತಿ ದೀರ್ಘದೃಷ್ಟಿಯಿಂದ ಸಮೀಪಕ್ಕೆ ಬಂದು ಕಿಡಿಗಳನ್ನು ಸುರಿಸಿ ಮರ್ಮಭೇದಕವಾದ ಮಾತುಗಳನ್ನಾಡಿ ಯುದ್ಧಮಾಡುವಾಗ ಕಪಿದ್ವಜನಾದ ಅರ್ಜುನನು ಕಾಡಾನೆಯಂತೆ ಕಾಗೆಯ ಬಾವುಟವನ್ನು ಕತ್ತರಿಸಿ ಕೆಡೆಯುವ ಹಾಗೆ ಹೊಡೆದನು. ೨೦೯. ಬಾವುಟವು ಬೀಳಲು ಶೌರ್ಯದ ಧ್ವಜವನ್ನು ನಿಲ್ಲಿಸಬೇಕೆಂದೇ ಕೃಷ್ಣನ ಎದೆಯನ್ನು ಸೀಳಿಹೋಗುವ ಹಾಗೆ ಹೊಡೆದು ಕೋಪವು ಅಕವಾಗುತ್ತಿರಲು ಅರ್ಜುನನ ಬಿಲ್ಲಿನ ಹೆದೆಯನ್ನು ಕತ್ತರಿಸಿದನು.

೨೧೦. ಪ್ರಕಾಶಮಾನವಾದ ದೀಪಗಳ ಕಾಂತಿಯು ಆರಿಹೋಗುವ ಕಾಲದಲ್ಲಿ ಹೆಚ್ಚಾಗಿ ಜ್ವಲಿಸುವ ಹಾಗೆ ಸೂರ್ಯಪುತ್ರನಾದ ಕರ್ಣನು ಮುಳುಗುವ (ಸಾಯುವ) ಕಾಲದಲ್ಲಿ ತೇಜಸ್ಸು ಪ್ರಜ್ವಲಿಸಲು ತಳತಳನೆ ಪ್ರಕಾಶಿಸಿದನು. ವ|| ಹಾಗೆ ಕರ್ಣನ ಹರಿತವಾದ

ಕಂ|| ಕಸೆಯಂ ಬಿಟ್ಟುಱದಭಿಮಂ
ತ್ರಿಸಿ ಚಕ್ರಮನಸುರವೈರಿಯಿಡುವಾಗಳ್ ಬಾ|
ರಿಸಿ ಪೆಱತು ಗೊಣೆಯದಿಂದೇ
ಱಸಿ ಬಿಲ್ಲಂ ತ್ರಿಭುವನಂಗಳಳ್ಳಾಡುವಿನಂ|| ೨೧೧

ವ|| ಮುನ್ನಮುಂದ್ರಕೀಲನಗೇಂದ್ರದೊಳ್ ಪಶುಪತಿಯನಾರಾಸಿ ಪಾಶುಪತಾಸ್ತ್ರಂ ಬಡೆದಂದು ತೆಲ್ಲಟಿಯೆಂದು-

ಚಂ|| ಗಿರಿಜೆಯ ಮೆಚ್ಚಿ ಕೊಟ್ಟ ನಿಶಿತಾಸ್ತ್ರಮನಂಜಲಿಕಾಸ್ತ್ರಮಂ ಭಯಂ
ಕರತರಮಾಗೆ ಕೊಂಡು ವಿಯಿಂಡಭಿಮಂತ್ರಿಸಿ ಪೂಜೆ ಬಿಲ್ಲೊಳು|
ರ್ವರೆ ನಡುಗಿತ್ತಜಾಂಡಮೊಡೆದತ್ತು ನೆಲಂ ಪಿಡುಗಿತ್ತು ಸಪ್ತಸಾ|
ಗರಮುಡುಗಿತ್ತು ಸಾಹಸಮದೇಂ ಪಿರಿದೋ ಕದನತ್ರಿಣೇತ್ರನಾ|| ೨೧೨

ವ|| ಆಗಳಖಿಳಭುವನಭವನಸಂಹಾರಕಮಪ್ಪಂಲಿಕಾಸ್ತ್ರಮನಮೋಘಾಸ್ತ್ರ ಧನಂಜಯನಾ ಕರ್ಣಾಂತಂಬರಂ ತೆಗೆದಾಕರ್ಣಾಂತಂ ಮಾಡಲ್ ಬಗೆದು ಕಂಧರಸಂಯಂ ನಿಟ್ಟಿಸಿ-

ಮ||ಸ್ರ|| ಮುಳಿದೆಚ್ಚಾಗಳ್ ಮಹೋಗ್ರಪ್ರಳಯಶಿಖಿ ಶಿಖಾನೀಕಮಂ ವಿಸುಲಿಂಗಂ
ಗಳುಮಂ ಬೀಱುತ್ತುಮೌರ್ವಜ್ವಳನುರುಚಿಯುಮಂ ತಾನೆ ತೋಱುತ್ತುಮಾಟಂ|
ದಳುರುತ್ತುಂ ಬಂದು ಕೊಂಡಾಗಳೆ ಗಗನತಳಂ ಪಾಯ್ದ ಕೆನ್ನತ್ತರಿಂದು
ಚ್ಚಳಿಸುತ್ತಿರ್ಪನ್ನೆಗಂ ಬಿೞ್ದುದು ಭರದೆ ಸಿಡಿಲ್ದತ್ತ ಕರ್ಣೋತ್ತಮಾಂಗಂ|| ೨೧೩

ವ|| ಅಂತು ತಲೆ ನೆಲೆದೊಳುರುಳ್ದೊಡೆ ಲೋಕಕ್ಕೆಲ್ಲಮಗುಂದಲೆಯಾದ ಬೀರಮೆಸೆಯೆ ಪ್ರಾಣಮೊಡಲಿಂದಂ ತೊಲಗೆಯುಂ ತೊಲಗದ ನನ್ನಿಯನುದಾಹರಿಸುವಂತೆ ಪತ್ತೆಂಟು ಕೋಲ ನೆಚ್ಚಟ್ಟೆಯುಂ ನೆಲದೊಳಾಚಂದ್ರಸ್ಥಾಯಿಯಾಗೆ ಚತುರ್ದಶಭುವನಂಗಳಂ ಪಸರಿಸಿ ನಿಂದೊಡೆಸೆ ದುದಾಹರಣಮೊಳ್ಪಿನುದಾಹರಣಮುಮಾಗೆ ಗುಣಾರ್ಣವನ ಶರಪರಿಣತಿಯಿಂದೆ ಕುಲಶೈಲಂ ಬೀೞ್ವಂತೆ ನೆಲನದಿರೆ ಬಿೞiಗಳ್-

ಕಂ|| ಚಾಗದ ನನ್ನಿಯ ಕಲಿತನ
ದಾಗರಮೆನೆ ನೆಗೞ್ದ ಕರ್ಣನೊಡಲಿಂದೆಂತುಂ|
ಪೋಗಲ್ಕಱಯದೆ ಸಿರಿ ಕರ
ಮಾಗಳ್ ಕರಿಕರ್ಣತಾಳ ಸಂಚಳೆಯಾದಳ್|| ೨೧೪

ಬಾಣದ ಪೆಟ್ಟಿನಿಂದ ಕೃಷ್ಣುನು ಸಾಯುವಷ್ಟು ನೊಂದು ೨೧೧. ಚಾವುಟಿಯನ್ನೆಸೆದು ಚಕ್ರಾಯುಧವನ್ನಭಿಮಂತ್ರಿಸಿ ಕೃಷ್ಣನು ಸಾಯುವಷ್ಟು ನೊಂದು ೨೧೧. ಚಾವುಟಿಯನ್ನೆಸೆದು ಚಕ್ರಾಯುಧವನ್ನಭಿಮಂತ್ರಿಸಿ ಕೃಷ್ಣನು ಎಸೆಯುವಾಗ ಅರ್ಜುನನು ಅದನ್ನು ತಡೆದು ಬೇರೊಂದು ಹೆದೆಯಿಂದ ಬಿಲ್ಲನ್ನು ಕಟ್ಟಿ ಮೂರುಲೋಕಗಳು ನಡುಗುವ ಹಾಗೆ ವ|| ಮೊದಲು ಇಂದ್ರಕೀಲಪರ್ವದಲ್ಲಿ ಈಶ್ವರನನ್ನು ಪೂಜಿಸಿ ಪಾಶುಪತಾಸ್ತ್ರವನ್ನು ಪಡೆದ ದಿನ ಬಳುವಳಿಯೆಂದು ೨೧೨. ಪಾರ್ವತಿಯು ಪ್ರೀತಿಯಿಂದ ಕೊಟ್ಟ ಹರಿತವಾದ ಅಂಜಿಲಿಕಾಸ್ತ್ರವನ್ನು ಭಯವುಂಟಾಗುವ ಹಾಗೆ ಕೈಗೆ ತೆಗೆದುಕೊಂಡು ಶಾಸ್ತ್ರರೀತಿಯಿಂದ ಅಭಿಮಂತ್ರಣ ಮಾಡಿ (ಮಂತ್ರಾ ದೇವತೆಯನ್ನು ಆಹ್ವಾನಿಸಿ) ಬಿಲ್ಲಿನಲ್ಲಿ ಹೂಡಲು ಭೂಮಿಯು ಕಂಪಿಸಿತು. ಬ್ರಹ್ಮಾಂಡವು ಒಡೆಯಿತು, ನೆಲವು ಸಂಕೋಚವಾಯಿತು, ಏಳು ಸಮುದ್ರಗಳು ಬತ್ತಿಹೋದುವು. ಕದನತ್ರಿಣೇತ್ರನಾದ ಅರ್ಜುನನ ಸಾಹಸವು ಅತಿಮಹತ್ತರವಾದುದು. ವ|| ಆಗ ಸಮಸ್ತಲೋಕವೆಂಬ ಮನೆಯನ್ನು ನಾಶಮಾಡುವ ಅಂಜಲಿಕಾಸ್ತ್ರವನ್ನು ಅಮೋಘಾಸ್ತ್ರ ಧನಂಜಯನಾದ ಅರ್ಜುನನು ಕರ್ಣನನ್ನು ಕೊಲ್ಲಲು ಯೋಚಿಸಿ ಕಿವಿಯವರೆಗೂ ಸೆಳೆದು ಕತ್ತಿನ ಸಂದಿಯನ್ನು ನಿರೀಕ್ಷಿಸಿ- ೨೧೩. ಕೋಪದಿಂದ ಹೊಡೆಯಲು ಮಹಾಭಯಂಕರವಾದ ಪ್ರಳಯಕಾಲದ ಅಗ್ನಿಯ ಜ್ವಾಲಾಸಮೂಹವನ್ನೂ ಕಿಡಿಗಳನ್ನೂ ಕೆದರುತ್ತ ಬಡಬಾಗ್ನಿಯು ಕಾಂತಿಯನ್ನು ತಾನೇ ಪ್ರದರ್ಶಿಸುತ್ತ ಮೇಲೆಬಿದ್ದು ಹರಡುತ್ತ ಬಂದು ತಗಲಿದಾಗ ಚಿಮ್ಮಿದ ಕೆಂಪುರಕ್ತವು ಆಕಾಶಪ್ರದೇಶವನ್ನೂ ದಾಟಿ ಮೇಲಕ್ಕೆ ಹಾರುತ್ತಿರಲು ಕರ್ಣನ ತಲೆಯು ರಭಸದಿಂದ ಸಿಡಿದು ಆ ಕಡೆ ಬಿದ್ದಿತು. ವ|| ಹಾಗೆ ತಲೆಯು ಭೂಮಿಯಲ್ಲಿ ಉರುಳಲು ಲೋಕಕ್ಕೆಲ್ಲ ವೀರ್ಯವು ಪ್ರಕಾಶಿಸಲು ಪ್ರಾಣವು ಶರೀರದಿಂದ ಹೋದರೂ ಸತ್ಯವು ಮಾತ್ರ ಹೋಗದಿರುವುದನ್ನು ಉದಾಹರಿಸುವಂತೆ ಅವನ ಕೀರ್ತಿಯು ಹದಿನಾಲ್ಕು ಲೋಕಗಳನ್ನೂ ಆವರಿಸಿ ಚಂದ್ರನಿರುವವರೆಗೂ ನಿಲ್ಲುವಂತೆ ಅವನ ಮುಂಡವು ಹತ್ತೆಂಟು ಬಾಣಗಳನ್ನು ಹೊಡೆದು ದೃಢವಾಗಿ ನಿಂತಿತು. ಪ್ರಕಾಶಮಾನವಾಗಿ ನಿಂತಿತು. ಪ್ರಕಾಶಮಾನವಾದ ಆ ತಲೆಯನ್ನು ಅಪಹರಣಮಾಡಿದುದು ಒಳ್ಳೆಯತನದ ಮಾರ್ಗದರ್ಶನವಾಗಲು ಅರ್ಜುನನ ಬಾಣಕೌಶಲ್ಯದಿಂದ ಮುಂಡವೂ ಕುಲಪರ್ವತವು ಬೀಳುವ ಹಾಗೆಭೂಮಿಯು ಕಂಪಿಸುವ ಹಾಗೆ ಬಿದ್ದಿತು. ೨೧೪. ತ್ಯಾಗ ಸತ್ಯ

ಕುಡುಮಿಂಚಿನ ಸಿಡಿಲುರುಳಿಯೊ
ಳೊಡಂಬಡಂ ಷಡೆಯೆ ಕರ್ಣನೊಡಲಿಂದಾಗಳ್|
ನಡೆ ನೋಡೆ ನೋಡೆ ದಿನಪನೊ
ಳೊಡಗೂಡಿದುದೊಂದು ಮೂರ್ತಿ ತೇಜೋರೂಪಂ|| ೨೧೫

ಪಿಡಿದನೆ ಪುರಿಗಣೆಯನೆರ
ೞ್ನುಡಿದನೆ ಬಳ್ಕಿದನೆ ತಾನೆ ತನ್ನನೆ ಚಲಮಂ|
ಪಿಡಿದೞದನೆಂದು ದೇವರ
ಪಡೆ ಗಡಣದೆ ಪೊಗೞ್ದುದಿನತನೂಜನ ಗಂಡಂ|| ೨೧೬

ಚಂ|| ನೆನೆಯದಿರಣ್ಣ ಭಾರತದೊಳಿಂ ಪೆಱರಾರುಮನೊಂದೆ ಚಿತ್ತದಿಂ
ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇಱು ಕ|
ರ್ಣನ ಕಡು ನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕ
ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ|| ೨೧೭

ವ|| ಅಂತು ರಿಪುಕುರಂಗಕಂಠೀರವನ ಕೆಯ್ಯೊಳ್ ವೈಕರ್ತನಂ ಸಾಯಲೊಡಂ ಮೇಲುದಂ ಬೀಸಿ ಬೊಬ್ಬಿಱದಾರ್ವ ಪಾಂಡವಪತಾಕಿನಿಯೊಳ್-

ಕಂ|| ಬದ್ದವಣದ ಪಗಳ್ ಕಿವಿ
ಸದ್ದಂಗಿಡೆ ಮೊೞಗೆ ದೇವದುಂದುಭಿರವದೊಂ|
ದುದ್ದಾನಿ ನೆಗೞೆ ಮುಗುಳಲ
ರೊದ್ದೆ ಕರಂ ಸಿದ್ಧಮಾದುದಂಬರತಲದೊಳ್ ೨೧೮

ಚಂ|| ಒದವಿದಲಂಪು ಕಣ್ಣೆವೆ ಕರುಳ್ ತನಗೆಂಬುದನುಂಟುಮಾಡೆ ನೋ
ಡಿದುದ ಕಣ್ಗಳೞ್ಕಮೆವಡುತ್ತಿರೆ ಪೋ ಪಸವೋಡಿತೆಂದು ನೀ
ರದಪಥದೊಳ್ ತಗುಳ್ದರಿಗನಂ ಪೊಗೞ್ದಾಡಿದನಂದು ದಂಡಕಾ
ಷ್ಠದ ತುದಿಯೊಳ್ ಪಳಂಚಲೆಯೆ ಕೋವಣವಂ ಗುಡಿಗಟ್ಟಿ ನಾರದಂ|| ೨೧೯

ಪರಾಕ್ರಮಗಳಿಗೆ ಆವಾಸಸ್ಥಾನವೆಂದು ಪ್ರಸಿದ್ಧವಾಗಿದ್ದ ಕರ್ಣನ ಶರೀರದಿಂದ ಹೇಗೂ ಬಿಟ್ಟು ಹೋಗುವುದಕ್ಕೆ ತಿಳಿಯದೆ ಲಕ್ಷ್ಮಿಯು ಆಗ ಆನೆಯ ಚಲಿಸುತ್ತಿರುವ ಕಿವಿಗಳಂತೆ ಚಂಚಲೆಯಾದಳು. ೨೧೫. ಕುಡಿಮಿಂಚಿನಿಂದ ಕೂಡಿದ ಸಿಡಿಲಿನ ಉಂಡೆಯ ತೇಜಸ್ಸಿನ ರೂಪವನ್ನು ಹೋಲುವ ಆಕಾರವೊಂದು ನೋಡುತ್ತಿರುವ ಹಾಗೆಯೇ ಕರ್ಣನ ಶರೀರದಿಂದ (ಹೊರಟು) ಸೂರ್ಯನಲ್ಲಿ ಐಕ್ಯವಾಯಿತು. ೨೧೬. ‘ದಿವ್ಯಾಸ್ತ್ರವನ್ನು ಹಿಡಿದನೆ?’ ಎರಡು ಮಾತನ್ನಾಡಿದನೇ? ಭಯಪಟ್ಟನೆ? ತಾನೆ ತನ್ನ ಹಟವನ್ನು ಬಿಗಿಯಾಗಿ ಹಿಡಿದು ಸತ್ತನು’ ಎಂದು ದೇವತೆಗಳ ಸಮೂಹವು ಕರ್ಣನ ಪೌರಷವನ್ನು ಹೊಗಳಿತು. ೨೧೭. ಅಣ್ಣಾ ಭಾರತದಲ್ಲಿ ಬೇರೆ ಯಾರನ್ನೂ ನೆನೆಯಬೇಡ; ಒಂದೇ ಮನಸ್ಸಿನಿಂದ ನೆನೆಯುವುದಾದರೆ ಕರ್ಣನನ್ನು ಜ್ಞಾಪಿಸಿಕೊಳ್ಳಪ್ಪ; ಕರ್ಣನಿಗೆ ಯಾರು ಸಮಾನ? ಕರ್ಣನ ಪರಾಕ್ರಮ, (ಯುದ್ಧ), ಕರ್ಣನ ವಿಶೇಷವಾದ ಸತ್ಯ, ಕರ್ಣನ ಪೌರುಷ, ಪ್ರಸಿದ್ಧವಾದ ಕರ್ಣನ ತ್ಯಾಗ ಎಂದು ಕರ್ಣನ ಮಾತಿನಿಂದಲೇ ತುಂಬಿ ಭಾರತವು ಕರ್ಣರಸಾಯನವಾಗಿದೆಯಲ್ಲವೇ? ವ|| ಹಾಗೆ ರಿಪುಕುರಂಗಕಂಠೀರವನಾದ ಅರ್ಜುನನ ಕಯ್ಯಲ್ಲಿ ಕರ್ಣನು ಸಾಯಲು ಉತ್ತರೀಯವನ್ನು ಬೀಸಿ (ಸಂತೋಷಸೂಚಕವಾಗಿ) ಆರ್ಭಟಮಾಡಿ ಪಾಂಡವಸೈನ್ಯವು ಜಯಶಬ್ದಮಾಡಿತು. ೨೧೮. ಮಂಗಳವಾದ್ಯಗಳು ಭೋರ್ಗರೆದುವು. ಕಿವಿಕಿವುಡಾಗುವಂತೆ ಜಯಭೇರಿಗಳು ಮೊಳಗಿದುವು. ದೇವದುಂದುಭಿಯೊಡನೆ ಪುಷ್ಪವೃಷ್ಟಿಗೆ ಹೂವಿನ ಮೊಗ್ಗುಗಳು ಸಿದ್ಧವಾದವು. ೨೧೯. ಕರ್ಣಾರ್ಜುನರ ಕಾಳಗವನ್ನು ನೋಡುವುದರಿಂದ ನನಗೆ ಕಣ್ಣೂ ಕರುಳೂ ಇದೆ ಎಂಬ ಭಾವವನ್ನುಂಟುಮಾಡಿ ಬಹಳ ಕಾಲದಿಂದ ನೋಡಬೇಕೆಂದಿದ್ದ ನನ್ನ ಕ್ಷಾಮವೂ ತೊಲಗಿತು, ಕರುಳಿಗೆ ಆನಂದವೂ ಉಂಟಾಯಿತು ಎಂದು ಆಕಾಶದಲ್ಲಿ ಅರ್ಜುನನನ್ನು ಹೊಗಳುತ್ತ ತನ್ನ ದಂಡದಂತಿರುವ ಕೋಲಿನ ತುದಿಗೆ ಕೋಪೀನವನ್ನು ಸೇರಿಸಿಕೊಂಡು ಬಾವುಟದಂತೆ ಅಲುಗಿಸುತ್ತ ನಾರದನು

ವ|| ಆಗಳ್-

ಕಂ|| ಪೞಯಿಗೆಯನುಡುಗಿ ರಥಮಂ
ಪೆೞವನನೆಸಗಲ್ಕೆಮೇೞ್ದು ಸುತಶೋಕದ ಪೊಂ|
ಪುೞಯೊಳ್ ಮೆಯ್ಯಱಯದೆ ನೀ
ರಿೞವಂತೆವೊಲಿೞದನಪರಜಳಗೆ ದಿನಪಂ|| ೨೨೦

ವ|| ಆಗಳ್ ಕರ್ಣನ ಬೞವೞಯನೆ ತನ್ನ ಪೋಪುದನಭಿನಯಿಸುವಂತೆ ಶೋಕೋದ್ರೇಕದೊಳ್ ಮೆಯ್ಯಱಯದೆ ಕನಕರಥದೊಳ್ ಮೆಯ್ಯನೀಡಾಡಿ ನಾಡಾಡಿಯಲ್ಲದೆ ಮೂರ್ಛೆವೋದ ದುರ್ಯೋಧನನನಶ್ವತ್ಥಾಮ ಕೃಪ ಕೃತವರ್ಮ ಶಕುನಿಯರ್ ನಿಜ ನಿವಾಸಕ್ಕೊಡಗೊಂಡು ಪೋದರಾಗಳ್-

ಚಂ|| ಸುರಿವಜರಪ್ರಸೂನರಜದಿಂ ಕವಿಲಾದ ಶಿರೋರುಹಂ ರಜಂ
ಬೊರೆದಳಿಮಾಲೆ ಮಾಲೆಯನೆ ಪೋಲೆ ಪಯೋಜಜ ಪಾರ್ವತೀಶರೊ|
ಳ್ವರಕೆಯನಾಂತು ಕರ್ಣಹತಿಯೊಳ್ ತನಗೞ್ಕಱನೀಯೆ ಬಂದನಂ
ದರಮನೆಗಚ್ಯುತಂಬೆರಸಳುರ್ಕೆಯಿನಮ್ಯನ ಗಂಧವಾರಣಂ|| ೨೨೧

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ
ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ
ಚತುರ ಕವಿತಾಗುಣಾರ್ಣವ ವಿರಚಿತಮಪ್ಪ
ವಿಕ್ರಮಾರ್ಜುನ ವಿಜಯದೊಳ್

ದ್ವಾದಶಾಶ್ವಾಸಂ

ಕುಣಿದಾಡಿದನು. ವ|| ಆಗ ೨೨೦. ಬಾವುಟವನ್ನು ಇಳಿಸಿ ಹೆಳವನಾದ ಅರುಣನನ್ನು ತೇರನ್ನು ನಡೆಸುವಂತೆ ಹೇಳಿ ಪುತ್ರಶೋಕದ ಆಕ್ಯದಲ್ಲಿ ಸೂರ್ಯನು ಜ್ಞಾನಶೂನ್ಯನಾಗಿ (ಸತ್ತವರಿಗೆ) ಸ್ನಾನಮಾಡುವ ಹಾಗೆ ಪಶ್ಚಿಮಸಮುದ್ರಕ್ಕೆ ಇಳಿದನು. (ಅಸ್ತಮಯವಾದನು) ವ|| ಆಗ ಕರ್ಣನ ದಾರಿಯಲ್ಲಿಯೇ ತಾನೂ ಹೋಗುವುದನ್ನು ಅಭಿನಯಿಸುವಂತೆ ದುಖದ ಆಕ್ಯದಿಂದ ಜ್ಞಾನಶೂನ್ಯನಾಗಿ ಚಿನ್ನದ ತೇರಿನಲ್ಲಿಯೇ ಶರೀರವನ್ನು ಚಾಚಿ ಅಸಾಧಾರಣ ರೀತಿಯಲ್ಲಿ ಮೂರ್ಛೆ ಹೋಗಿದ್ದ ದುರ್ಯೋಧನನನ್ನು ಅಶ್ವತ್ಥಾಮ, ಕೃಪ, ಕೃತವರ್ಮ, ಶಕುನಿಯರು ತಮ್ಮ ವಾಸಸ್ಥಳಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋದರು. ಆಗ ೨೨೧. ದೇವತೆಗಳು ಸುರಿಯುತ್ತಿರುವ ಹೂವುಗಳ ಪರಾಗದಿಂದ ಕಪಿಲಬಣ್ಣವಾದ ಕೂದಲು, ಪರಾಗದಿಂದ ಮುಚ್ಚಲ್ಪಟ್ಟ ದುಂಬಿಗಳ ಸಮೂಹದಿಂದ ಕೂಡಿದ ಹೂವಿನ ಮಾಲೆಯನ್ನೇ ಹೋಲುತ್ತಿರಲು, ಬ್ರಹ್ಮ ಮತ್ತು ರುದ್ರರ ಒಳ್ಳೆಯ ಆಶೀರ್ವಾದವನ್ನು ಪಡೆದು ಕರ್ಣನ ನಾಶವು ತನಗೆ ಆನಂದವನ್ನುಂಟುಮಾಡುತ್ತಿರಲು ಅಮ್ಮನ ಗಂಧವಾರಣನಾದ ಅರ್ಜುನನು ಕೃಷ್ಣನೊಡಗೂಡಿ ಆ ದಿನ ಅತಿಶಯದಿಂದ ಅರಮನೆಗೆ ಬಂದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಹನ್ನೆರಡನೆಯ ಆಶ್ವಾಸ.
***********