ಗದ್ಯಪಾಠ-2 ವ್ಯಾಘ್ರಗೀತೆ
ಚಟುವಟಿಕೆಗಳು:
1] ಪುಣ್ಯಕೋಟಿಯಂತಹ ಮಾನವೀಯ ಮೌಲ್ಯಗಳನ್ನು ಬಿಂಬಿಸುವ
ಕಥೆಗಳನ್ನು ಸಂಗ್ರಹಿಸುವುದು.
2] ಲಲಿತ ಪ್ರಬಂಧಗಳಿಂದ ಆಯ್ದ ಪ್ರಬಂಧದಿಂದ ಪ್ರಸಂಗವೊಂದನ್ನು
ಓದುವುದು.
ಮಾನಕಗಳು
(ಪ್ರತಿ
ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳು)
1] ಎ.ಎನ್ ಮೂರ್ತಿರಾವ್
ಅವರ ಕೃತಿಗಳ ಪರಿಚಯ.
1) ವಿದ್ಯಾರ್ಥಿಗೆ
ಮಾನವೀಯ ಮೌಲ್ಯಗಳ ಪರಿಕಲ್ಪನೆ ಇದೆಯೇ?
2) ಗ್ರಂಥಾಲಯ-ಅಂತರ್ಜಾಲ
ಮುಂತಾದ ಮೂಲಗಳಿಂದ ಕಥೆಯನ್ನು ಸಂಗ್ರಹಿಸಲಾಗಿದೆಯೇ?
3) ಕಥೆಯ
ನಿರೂಪಣೆಯು ಕುತೂಹಲ ಕೆರಳಿಸುವಂತಿದೆಯೇ?
4) ಕಥೆಗೆ
ಪೂರಕವಾದ ನೀತಿ-ಬೋಧನೆಯ ವಾಕ್ಯಗಳಿವೆಯೇ?
5) ಬರವಣಿಗೆ
ಅಂದವಾಗಿದ್ದು ವ್ಯಾಕರಣಬದ್ಧವಾಗಿದೆಯೇ?
2] ಲಲಿತ ಪ್ರಬಂಧಗಳಿಂದ
ಆಯ್ದ ಪ್ರಸಂಗವೊಂದನ್ನು ಓದುವುದು.
1) ವಿದ್ಯಾರ್ಥಿಗೆ
ಲಲಿತ ಪ್ರಬಂಧದ ಪರಿಕ್ಪನೆ ಇದೆಯೇ?
2) ಉಚ್ಚಾರಣೆಯಲ್ಲಿ
ಸ್ಪಷ್ಟತೆ ಮತ್ತು ನಿರರ್ಗಳತೆ ಇದೆಯೇ?
3) ಲೇಖನ
ಚಿಹ್ನೆಗಳನ್ನು ಅನುಸರಿಸಿ ಓದುವ ಸಾಮರ್ಥ್ಯವಿದೆಯೇ?
4) ಸ್ವರಭಾರ
ಏರಿಳಿತದೊಂದಿಗೆ ಭಾವಪೂರ್ಣವಾಗಿ ಓದುವ ಸಾಮರ್ಥ್ಯವಿದೆಯೇ?
5) ಓದಿದ
ಭಾಗವನ್ನು ಆಧರಿಸಿ ಕೇಳಿದ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯವಿದೆಯೇ?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ