ಇರುಳಿರುಳು = ಇರುಳು + ಇರುಳು (ದ್ವಿರುಕ್ತಿ)
ಸುತ್ತಮುತ್ತಲು ಮೇಲಕೆ ಕೆಳಗೆ = ದಶ ದಿಕ್ಕುಗಳು
ಗಾವುದ = ನಾಲ್ಕು ಹರಿದಾರಿ, ೧೨ ಮೈಲುಗಳ ದೂರ. ಅಂದರೆ ಸರಿ ಸುಮಾರು ೧೯ ಕಿಲೋ ಮೀಟರ್ ಗಿಂತ ಹೆಚ್ಚು (ಸುಮಾರು 19.3 ಕಿ.ಮೀ.) ಹಿಂದಿನ ಕಾಲದಲ್ಲಿ ದೂರವನ್ನು ಅಳೆಯಲು ಬಳಸುತ್ತಿದ್ದ ಪ್ರಮಾಣ. (ಈಗ ಮೀಟರ್, ಕಿಲೋ ಮೀಟರ್ ಇತ್ಯಾದಿ ಬಳಸುವಂತೆ)
ಎವೆ = ಕಣ್ಣಿನ ರೆಪ್ಪೆ
ಎವೆತೆರೆದಿಕ್ಕು = ಕಣ್ಣುರೆಪ್ಪೆ ಮುಚ್ಚಿ ಬಿಡುವುದು
ಕರಿನರೆ = ಕರಿ ಎಂದರೆ ಕಪ್ಪು, ನರೆ ಎಂದರೆ ಬಿಳಿ ಬಣ್ಣ. ಆದರೆ ಇಲ್ಲಿ ಕವಿ ಸಾಂಕೇತಿಕವಾಗಿ ಕರಿ ಎಂದರೆ "ರಾತ್ರಿ" ಎಂದೂ ಬಿಳಿ ಎಂದರೆ "ಬೆಳಗು/ದಿನ" ಎಂದೂ ತಿಳಿಸಿದ್ಧಾರೆ.
ಪುಚ್ಚ = ಹಕ್ಕಿಯ ಹಿಂಭಾಗದಲ್ಲಿ ಬಾಲದಂತಿರುವ ಗರಿಗಳ ಗುಂಪು.
ಬಿಳಿ-ಹೊಳೆ = ಕವಿಯ ಸಾಂಕೇತಿಕ ಅರ್ಥದಲ್ಲಿ "ವರ್ತಮಾನ"
ಕೆನ್ನನ ಹೊನ್ನನ = ಕೆನ್ನ ಎಂದರೆ "ಸೂರ್ಯಾಸ್ತ" ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮ ದಿಕ್ಕು ಕೆಂಪೇರುತ್ತದೆ. ಹಾಗೆಯೇ ಹೊನ್ನ ಅಥವಾ ಹೊನ್ನು ಬಣ್ಣ ಎಂದರೆ ಸೂರ್ಯೋದಯ. (ಸೂರ್ಯೋದಯದ ಸಂದರ್ಭದಲ್ಲಿ ಪೂರ್ವ ಹೊನ್ನಿನ ಬಣ್ಣದಿಂದ ಕಂಗೊಳಿಸುವುದನ್ನು ಕಾಣಬಹುದು)
ನೀಲಮೇಘಮಂಡಲಸಮ ಬಣ್ಣ = ಆಕಾಶದ ಮೇಘ ಮಂಡಲದ ನೀಲಿ ಬಣ್ಣಕ್ಕೆ ಸಮಾನವಾದ ಬಣ್ಣ
ಚಿಕ್ಕೆಯ ಮಾಲೆ = ನಕ್ಷತ್ರಗಳ ಮಾಲೆ
ಒಕ್ಕು (ಒಕ್ಕಿ) = ತೆನೆಯಿಂದ ಕಾಳನ್ನು ಬೇರ್ಪಡಿಸುವಿಕೆ. ಇದನ್ನು ಒಕ್ಕಣೆ ಎಂದೂ ಕರೆಯಲಾಗುವುದು.
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ = ರಾಜ್ಯ-ಸಾಮ್ರಾಜ್ಯಗಳನ್ನು ಧಾನ್ಯಗಳನ್ನು ಬೇರ್ಪಡಿಸುವಾಗ ಗಾಳಿಗೆ ತೂರಿ ಗಟ್ಟಿಕಾಳು ಮತ್ತು ಜೊಳ್ಳನ್ನು ಬೇರ್ಪಡಿಸುವಂತೆ ರಾಜ್ಯಸಾಮ್ರಾಜ್ಯಗಳನ್ನು ಕಾಲವು ಒಕ್ಕಣೆ ಮಾಡುತ್ತದೆ. ಅಂದರೆ ಬಲಶಾಲಿಯಾದ ರಾಜ್ಯ ಉಳಿದು ದುರ್ಬಲವಾದ ರಾಜ್ಯ ಅಳಿದು ಹೋಗುತ್ತದೆ. ಈ ಬದಲಾವಣೆಯ ಕ್ರಿಯೆ ಇತಿಹಾಸದುದ್ದಕ್ಕೂ ನಿರಂತರವಾಗಿ ನಡೆತುತ್ತಾ ಬಂದಿರುವುದನನ್ನು ಕಾಣಬಹುದು.
ಗಡ = ಸಣ್ಣ ಕೋಟೆ, ಕೊತ್ತಲು
ಮನ್ವಂತರ = ಪರಿವರ್ತನೆಯ ಕಾಲ, (ಪುರಾಣದಲ್ಲಿ ಹದಿನಾಲ್ಕು ಮಂದಿ ಮನುಗಳನ್ನು ಉಲ್ಲೇಖಿಸಲಾಗಿದ್ದು ಪ್ರತಿಯೊಬ್ಬ ಮನುವಿನ ಅವಧಿಯನ್ನು ಒಂದು ಮನ್ವಂತರ ಎಂದು ಹೇಳಲಾಗುತ್ತದೆ.
ಹೊಸಗಾಲದ ಹಸುಮಕ್ಕಳ ಹರಸಿ = ಮುಂದಿನ ಹೊಸ ಪೀಳಿಗೆಯ ಜನರನ್ನು ಹರಸಿ ಅಂದರೆ ಹೊಸ ಪೀಳಿಗೆಯ ಜನರ ಅಭಿವೃದ್ಧಿಗೆ ಅವಕಾಶ ನೀಡಿ.
ಬೆಳ್ಳಿಯ ಹಳ್ಳಿಯ ಮೇರೆ = ಬೆಳ್ಳಿ ಎಂದರೆ "ಶುಕ್ರ ಗ್ರಹ", ಮಾನವನು ಚಂದ್ರ ಹಾಗೂ ಮಂಗಳ ಗ್ರಹದ ಬಗ್ಗೆ ಅನ್ವೇಷಿಸುತ್ತಿದ್ದಾನೆ ಮಾತ್ರವಲ್ಲ ಶುಕ್ರ ಗ್ರಹದ ಬಗ್ಗೆಯೂ ಅನ್ವೇಷಣೆ ಮಾಡುತ್ತಿದ್ದಾನೆ. ಅದರಾಚೆಗೂ ಮಾನವನ ಅನ್ವೇಷಣೆಯ ಪ್ರಯತ್ನ ನಡೆಯುತ್ತಿದೆ.
ತಿಂಗಳಿನೂರು = ತಿಂಗಳು ಎಂದರೆ ಅಚ್ಚಗನ್ನಡದಲ್ಲಿ "ಚಂದ್ರ" ಎಂದರ್ಥ. ಮೂವತ್ತು ದಿನಗಳ ಅವಧಿಯನ್ನು ಕೂಡ ಮಾಸ ಅಥವಾ ತಿಂಗಳು ಎಂದು ಕರೆಯಲಾಗುತ್ತದೆ.
ದಿಗ್ಮಂಡಲ = ದಶ ದಿಕ್ಕುಗಳಿಂದ ಆವರಿಸಿದ ಭಾಗ, ದಿಕ್ಕುಗಳ ನಡುವಿನ ಪ್ರದೇಶ ಎಂದೂ ಹೇಳಬಹುದು. [ಇಲ್ಲಿ ಪದದಲ್ಲಿ ಕಾಗುಣಿತ ದೋಷ ಇದೆ. ಈ ಪದದ ಸರಿಯಾದ ರೂಪ "ದಿಙ್ಮಂಡಲ", ದಿಕ್ + ಮಂಡಲ - ಅನುನಾಸಿಕ ಸಂಧಿ]
ಚುಂಚ = ಕೊಕ್ಕು (ಇಲ್ಲಿ ವ್ಯಾಪ್ತಿ ವಿಸ್ತಾರ ಎಂಬ ಅರ್ಥವಿದೆ)
ಬ್ರಹ್ಮಾಂಡ = ಬ್ರಹ್ಮ + ಅಂಡ (ಬ್ರಹ್ಮನು ಸೃಷ್ಟಿಸಿದ ಮೊಟ್ಟೆಯಾಕಾರದ ವಿಶ್ವ) ಬ್ರಹ್ಮಾಂಡದಲ್ಲಿ ಹಲವಾರು ಬಿಲಿಯನ್ ನಕ್ಷತ್ರಪುಂಜಗಳಿವೆ. ಅವುಗಳನ್ನು ಗ್ಯಾಲಾಕ್ಸಿ ಎಂದು ಕರೆಯಲಾಗುತ್ತದೆ. ಇದನ್ನು ಪ್ರಾಚೀನ ಭಾರತದ ಜೋತಿರ್‌ವಿಜ್ಞಾನಿಗಳು ಬರೆದಿಟ್ಟಿದ್ದಾರೆ. ಇದು ಬಹಳ ವಿಸ್ಮಯದ ಸಂಗತಿ. ಅವರ ಪ್ರಕಾರ ಇಡೀ ಬ್ರಹ್ಮಾಂಡದಲ್ಲಿ ಸುಮಾರು 41,011 ನಕ್ಷತ್ರಗಳಿವೆ. ಹಾಲುಪಥ ಅಥವಾ ಕ್ಷೀರಪಥ ನಾವು ವಾಸಿಸುವ ನಕ್ಷತ್ರ ಪುಂಜ (ಗ್ಯಾಲಾಕ್ಸಿ) ಆಗಿದೆ. ಅದರಲ್ಲಿರುವ ಸಾವಿರಾರು ನಕ್ಷತ್ರಗಳಲ್ಲಿ ಒಂದು ಸೂರ್ಯನ ವ್ಯಾಪ್ತಿಯಲ್ಲಿ ನಮ್ಮ ಸೌರಮಂಡಲವಿದೆ.)
ಗ್ರಾಂಡ್ ಮಾಸ್ಟರ್ನಿಂದ ಶುಭಾಶಯಗಳು! ನೀವು ದೊಡ್ಡ ಇಲುಮಿನಾಟಿಯ ಸದಸ್ಯರಾಗಿರುವುದರಿಂದ, ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ಲಾಭದಾಯಕ ಮತ್ತು ವಿಶೇಷವಾದ ಯಾವುದಾದರೂ ಒಂದು ಭಾಗವಾಗಿರಿ (ಇಲ್ಯುಮಿನಾಟಿಯ ಜಗತ್ತಿಗೆ ಸ್ವಾಗತ). ನೀವು ರಾಜಕೀಯ, ಎಂಜಿನಿಯರ್, ಡಾಕ್ಟರ್, ಎಂಟರ್ಟೈನರ್, ಮೋಡ್ ಇಎಲ್, ಪದವಿ / ವಿದ್ಯಾರ್ಥಿ, ಅಥವಾ ದೊಡ್ಡ ಮನಸ್ಸುಗಳಾಗಲು ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಮನಸ್ಸಿನಲ್ಲಿರುವಿರಾ? ಸದಸ್ಯರಾಗಲು, ಮತ್ತು, 000 100,000,000 ಮೊತ್ತವನ್ನು ಮಾಸಿಕ ಇಲ್ಯುಮಿನಾಟಿಯ ಸದಸ್ಯತ್ವ ವೇತನದಂತೆ ಗಳಿಸುವುದನ್ನೂ ತಿಳಿದುಕೊಳ್ಳುವುದು ಸಹ ಪ್ರಸ್ತುತವಾಗಿದೆ. "ಅವಕಾಶ" ಶ್ರೇಷ್ಠ ಇಲ್ಯುಮಿನಾಟಿಯ ಸಂಸ್ಥೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ ಮತ್ತು ವಿಶ್ವದ ಕೆಲವು ಪ್ರಸಿದ್ಧ ಗೋಲ್ಡೆನ್ಗಳು, ಅದು ನಿಮ್ಮನ್ನು ಹುಲ್ಲಿನ ಮೂಲದಿಂದ ಮೇಲಕ್ಕೆತ್ತುತ್ತದೆ ಮತ್ತು ನೀವು ಬಹುಕಾಲದಿಂದ ಆಶಿಸುತ್ತಿದ್ದರೆ ನಿಮ್ಮನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ಒಟ್ಟಿಗೆ ನಾವು ಜಗತ್ತನ್ನು ಆಳುತ್ತೇವೆ ಇಲ್ಯುಮಿನಾಟಿಯ ಮಹಾನ್ ಮತ್ತು ಪ್ರಬಲ ಶಕ್ತಿ, ಇಲ್ಲಿ ಶಾಶ್ವತ ಜೀವನ ಮತ್ತು ಸಂತೋಷದಿಂದ ಭೂಮಿಯ ಮೇಲೆ ದೀರ್ಘಾಯುಷ್ಯ ಮತ್ತು ಸಮೃದ್ಧಿ. ಅಧಿಕೃತ ಮೇಲ್ ಮೂಲಕ ನಮ್ಮನ್ನು ಸಂಪರ್ಕಿಸಿ: illuminatiworldwideorder@gmail.com. ಅಥವಾ WhatsApp +15184145254 ನಿಮ್ಮ ಹಣೆಬರಹಕ್ಕೆ ನಿಮ್ಮನ್ನು ಕರೆದೊಯ್ಯಲು ನಾವು ಕಾಯುತ್ತಿದ್ದೇವೆ
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿ