ಶಿವಕೋಟ್ಯಾಚಾರ್ಯರ ಕಾಲ ಕ್ರಿ. ಶ. ಸುಮಾರು ೧೦ ನೆಯ ಶತಮಾನ.
ಇವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ನಾಡಿನವರು.
ಇವರ ಕೃತಿ : `ವಡ್ಡಾರಾಧನೆ’
ಇವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ನಾಡಿನವರು.
ಇವರ ಕೃತಿ : `ವಡ್ಡಾರಾಧನೆ’
ಇದು ಕನ್ನಡದ ಪ್ರಥಮ ಗದ್ಯಕೃತಿ ಎಂದು ಪ್ರಸಿದ್ಧವಾಗಿದೆ. ಜೈನ ಧಾರ್ಮಿಕ ಕಥೆಗಳ ಸಂಗ್ರಹವಾದ ವಡ್ಡಾರಾಧನೆಯಲ್ಲಿ ೧೯ ಕಥೆಗಳಿವೆ. ಈ ಕಥೆಗಳ ನಾಯಕರೆಲ್ಲ ಧರ್ಮವೀರರು. ಕೆಲವರು ಮೋಕ್ಷವನ್ನು ಸಂಪಾದಿಸಿಕೊಳ್ಳುತ್ತಾರೆ. ಕೆಲವರು ಮೋಕ್ಷಕ್ಕೆ ನೆರೆಮನೆಯಾದ ಸರ್ವಾರ್ಥಸಿದ್ಧಿಯೆಂಬ ಸ್ವರ್ಗಕ್ಕೆ ಹೋಗುತ್ತಾರೆ. ಪುಣ್ಯ-ಪಾಪ ರೂಪವಾದ ಕರ್ಮಕ್ಷಯದಿಂದ ಸಿದ್ಧಿಗಳು ಉಂಟಾಗುತ್ತವೆ. ಕರ್ಮಕ್ಷಯವು ತಪಸ್ಸಿನಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನು ಈ ಕಥೆಗಳು ಸಾರುತ್ತವೆ.
ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ. ಈ ಕಾವ್ಯವು ೯ ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು. ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾರೆ. ನೀತಿ, ಚರಿತ್ರೆ, ಧರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು. ಇದು ಒಂದು ಅದ್ಭುತ ಗದ್ಯ ಕಾವ್ಯ.
‘ವಡ್ಡಾರಾಧನೆ’ಯಲ್ಲಿ ೧೯ ಕಥೆಗಳಿವೆ.
- ಸುಕುಮಾರಸ್ವಾಮಿಯ ಕಥೆ
- ಸುಕೌಶಳಸ್ವಾಮಿಯ ಕಥೆ
- ಗಜಕುಮಾರನ ಕಥೆ
- ಸನತ್ಕುಮಾರ ಚಕ್ರಚರ್ತಿಯ ಕಥೆ
- ಅಣ್ಣಿಕಾಪುತ್ರನ ಕಥೆ
- ಭದ್ರಬಾಹು ಭಟ್ಟಾರರ ಕಥೆ
- ಲಲಿತಘಟೆಯ ಕಥೆ
- ಧರ್ಮಘೋಷ ಭಟ್ಟಾರರ ಕಥೆ
- ಸಿರಿದಣ್ಣ ಭಟ್ಟಾರರ ಕಥೆ
- ವೃಷಭಸೇನ ಭಟ್ಟಾರರ ಕಥೆ
- ಕಾರ್ತಿಕ ಋಷಿಯ ಕಥೆ
- ಅಭಯಘೋಷ ಮುನಿಯ ಕಥೆ
- ವಿದ್ಯುಚ್ಚೋರನ ಕಥೆ
- ಗುರುದತ್ತ ಭಟ್ಟಾರರ ಕಥೆ
- ಚಿಲಾತಪುತ್ರನ ಕಥೆ
- ದಂಡಕನೆಂಬ ರಿಸಿಯ ಕಥೆ
- ಮಹೇಂದ್ರದತ್ತಾಚಾರ್ಯನ ಕಥೆ
- ಚಾಣಾಕ್ಯ ರಿಸಿಯ ಕಥೆ
- ವೃಷಭಸೇನ ರಿಸಿಯ ಕಥೆ
********
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ